Preface
Read
+
Publisher
Nainoia, Inc.
PO Box 462, Bellefonte, PA 16823
(814) 470-8028
Nainoia Inc, Publisher
LinkedIn/NAINOIA-INC
Third Party Publisher Resources
Request Custom Formatted Verses
Please contact us below
Submit your proposed corrections
I understand that the Aionian Bible republishes public domain and Creative Commons Bible texts and that volunteers may be needed to present the original text accurately. I also understand that apocryphal text is removed and most variant verse numbering is mapped to the English standard. I have entered my corrections under the verse(s) below. Proposed corrections to the Kanada Open Contemporary Bible, Joshua Chapter 22 https://www.AionianBible.org/Bibles/Kannada---Open-Contemporary/Joshua/22 1) ಯೆಹೋಶುವನು ರೂಬೇನ್ಯರನ್ನೂ ಗಾದ್ಯರನ್ನೂ ಮನಸ್ಸೆಯ ಅರ್ಧ ಗೋತ್ರದವರನ್ನೂ ಕರಿಸಿ ಅವರಿಗೆ, 2) “ಯೆಹೋವ ದೇವರ ಸೇವಕನಾದ ಮೋಶೆಯು ನಿಮಗೆ ಆಜ್ಞಾಪಿಸಿದ ಎಲ್ಲವನ್ನು ನೀವು ಕೈಗೊಂಡು, ನಾನು ನಿಮಗೆ ಆಜ್ಞಾಪಿಸಿದ ಎಲ್ಲಾದರಲ್ಲಿ ನನ್ನ ಮಾತಿಗೆ ವಿಧೇಯರಾಗಿದ್ದೀರಿ. 3) ನೀವು ಬಹಳ ದಿವಸಗಳಿಂದ ಇಂದಿನವರೆಗೂ ನಿಮ್ಮ ಸಹೋದರರನ್ನು ಕೈಬಿಡದೆ, ನಿಮ್ಮ ದೇವರಾದ ಯೆಹೋವ ದೇವರು ಆಜ್ಞಾಪಿಸಿದ ಅಪ್ಪಣೆಯನ್ನು ಪಾಲಿಸುತ್ತಾ ಬಂದಿದ್ದೀರಿ. 4) ಈಗ ನಿಮ್ಮ ದೇವರಾದ ಯೆಹೋವ ದೇವರು ಅವರಿಗೆ ವಾಗ್ದಾನ ಮಾಡಿದ ಪ್ರಕಾರ, ನಿಮ್ಮ ಸಹೋದರರಿಗೆ ವಿಶ್ರಾಂತಿ ಕೊಟ್ಟಿದ್ದಾರೆ. ಯೆಹೋವ ದೇವರ ಸೇವಕನಾದ ಮೋಶೆಯು ಯೊರ್ದನ್ ನದಿ ಆಚೆ ಕಡೆ ನಿಮಗೆ ಕೊಟ್ಟ ಸೊತ್ತಿನ ದೇಶದಲ್ಲಿರುವ ನಿಮ್ಮ ನಿವಾಸಗಳಿಗೆ ನೀವು ಹೊರಡಿರಿ. 5) ಆದರೆ ಯೆಹೋವ ದೇವರ ಸೇವಕನಾದ ಮೋಶೆಯು ನಿಮಗೆ ಆಜ್ಞಾಪಿಸಿದ ಆಜ್ಞೆಯನ್ನೂ ನಿಯಮವನ್ನೂ ಜಾಗ್ರತೆಯಾಗಿ ಕೈಗೊಂಡು ನಡೆದು, ನಿಮ್ಮ ದೇವರಾದ ಯೆಹೋವ ದೇವರನ್ನು ಪ್ರೀತಿಸಿ, ಅವರ ಎಲ್ಲಾ ಮಾರ್ಗಗಳಲ್ಲಿ ನಡೆದು, ಅವರ ಆಜ್ಞೆಗಳನ್ನು ಕೈಗೊಂಡು ಅವರನ್ನು ಅಂಟಿಕೊಂಡು, ಅವರನ್ನು ನಿಮ್ಮ ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಸೇವೆಮಾಡಿರಿ,” ಎಂದು ಹೇಳಿದನು. 6) ಯೆಹೋಶುವನು ಅವರನ್ನು ಆಶೀರ್ವದಿಸಿ ಕಳುಹಿಸಿಬಿಟ್ಟಾಗ ಅವರು ತಮ್ಮ ಗುಡಾರಗಳಿಗೆ ಹೋದರು. 7) ಮನಸ್ಸೆಯ ಅರ್ಧ ಗೋತ್ರಕ್ಕೆ ಮೋಶೆಯು ಬಾಷಾನಿನಲ್ಲಿ ಸೊತ್ತನ್ನು ಕೊಟ್ಟಿದ್ದನು. ಇದಲ್ಲದೆ ಅವರ ಅರ್ಧ ಗೋತ್ರಕ್ಕೆ ಯೆಹೋಶುವನು ಸಹ ಯೊರ್ದನ್ ನದಿ ಪಶ್ಚಿಮಕ್ಕೆ ಅವರ ಸಹೋದರರ ನಡುವೆ ಸೊತ್ತನ್ನು ಕೊಟ್ಟಿದ್ದನು. ಇದಲ್ಲದೆ ಯೆಹೋಶುವನು ಅವರನ್ನು ಅವರ ಗುಡಾರಗಳಿಗೆ ಕಳುಹಿಸುವಾಗ ಅವರನ್ನು ಆಶೀರ್ವದಿಸಿ ಅವರಿಗೆ, 8) “ನೀವು ಬಹು ಆಸ್ತಿಯುಳ್ಳವರಾಗಿ ಪಶುಗಳು, ಬೆಳ್ಳಿ, ಬಂಗಾರ, ಕಂಚು, ಕಬ್ಬಿಣ, ಬಹು ಹೆಚ್ಚಾದ ವಸ್ತ್ರಗಳೊಂದಿಗೆ ಹಿಂದಿರುಗಿ, ನಿಮ್ಮ ಗುಡಾರಗಳಿಗೆ ಹೋಗಿರಿ. ನಿಮ್ಮ ಶತ್ರುಗಳ ಕೊಳ್ಳೆಯನ್ನು ನಿಮ್ಮ ಸಹೋದರರ ಸಂಗಡ ಹಂಚಿಕೊಳ್ಳಿರಿ,” ಎಂದನು. 9) ರೂಬೇನನ ಗೋತ್ರದವರು, ಗಾದ್ಯ ಗೋತ್ರದವರು, ಮನಸ್ಸೆಯ ಅರ್ಧ ಗೋತ್ರದವರು ಕಾನಾನ್ ದೇಶದ ಶೀಲೋವಿನಲ್ಲಿದ್ದ ಇಸ್ರಾಯೇಲರನ್ನು ಬಿಟ್ಟು, ಯೆಹೋವ ದೇವರು ಮೋಶೆಗೆ ಕೊಟ್ಟ ಮಾತಿನ ಪ್ರಕಾರ ತಾವು ವಶಮಾಡಿಕೊಂಡ ತಮ್ಮ ಗಿಲ್ಯಾದ್ ನಾಡಿಗೆ ಹೋದರು. 10) ರೂಬೇನ್ಯರೂ ಗಾದ್ಯರೂ ಮನಸ್ಸೆಯ ಅರ್ಧ ಗೋತ್ರದವರು ಕಾನಾನ್ ದೇಶದಲ್ಲಿರುವ ಯೊರ್ದನ್ ನದಿ ಪ್ರಾಂತಕ್ಕೆ ಬಂದಾಗ, ಅಲ್ಲಿ ದೊಡ್ಡ ಬಲಿಪೀಠವನ್ನು ಕಟ್ಟಿದರು. 11) ರೂಬೇನ್ಯರೂ ಗಾದ್ಯರೂ ಮನಸ್ಸೆಯ ಅರ್ಧ ಗೋತ್ರದವರೂ ಕಾನಾನ್ ದೇಶಕ್ಕೆ ಎದುರಾಗಿ ಇಸ್ರಾಯೇಲರು ದಾಟಿಬಂದ ಯೊರ್ದನ್ ನದಿ ಪ್ರಾಂತದಲ್ಲಿ ಬಲಿಪೀಠವನ್ನು ಕಟ್ಟಿದರೆಂಬ ಸುದ್ದಿ ಇಸ್ರಾಯೇಲರಿಗೆ ಮುಟ್ಟಿತು. 12) ಇಸ್ರಾಯೇಲರು ಅದನ್ನು ಕೇಳಿದಾಗ, ಅವರಿಗೆ ವಿರೋಧವಾಗಿ ಯುದ್ಧಮಾಡುವುದಕ್ಕೆ ಶೀಲೋವಿನಲ್ಲಿ ಕೂಡಿದರು. 13) ಅವರು ಗಿಲ್ಯಾದ್ ನಾಡಿನಲ್ಲಿರುವ ರೂಬೇನ್ಯರ, ಗಾದ್ಯರ ಹಾಗು ಮನಸ್ಸೆಯ ಅರ್ಧ ಗೋತ್ರದವರ ಬಳಿಗೆ ಯಾಜಕ ಎಲಿಯಾಜರನ ಮಗ ಫೀನೆಹಾಸನನ್ನೂ 14) ಅವನ ಸಂಗಡ ಇಸ್ರಾಯೇಲಿನ ಗೋತ್ರದ ಪ್ರತಿಯೊಂದು ಗೋತ್ರದಿಂದ ಒಬ್ಬೊಬ್ಬನನ್ನು ಅಂದರೆ ಮುಖ್ಯಸ್ಥನ ಪ್ರಕಾರ ಹತ್ತು ಮಂದಿ ಪ್ರಧಾನರನ್ನೂ ಕಳುಹಿಸಿದರು. 15) ಇವರು ಗಿಲ್ಯಾದ್ ನಾಡಿನಲ್ಲಿ ರೂಬೇನ್ಯರ, ಗಾದ್ಯರ ಹಾಗು ಮನಸ್ಸೆಯ ಅರ್ಧ ಗೋತ್ರದವರ ಬಳಿಗೆ ಬಂದು, 16) “ಯೆಹೋವ ದೇವರ ಸರ್ವ ಸಮೂಹವು ಹೇಳುವುದೇನೆಂದರೆ: ‘ನೀವು ಈ ಹೊತ್ತು ಯೆಹೋವ ದೇವರ ಕಡೆಗೆ ತಿರುಗದೆ, ಅವರಿಗೆ ವಿರೋಧವಾಗಿ ತಿರುಗಿಬೀಳುವ ಹಾಗೆ ನಿಮಗೆ ಒಂದು ಬಲಿಪೀಠವನ್ನು ಕಟ್ಟಿಕೊಂಡು, ಇಸ್ರಾಯೇಲ್ ದೇವರಿಗೆ ಮಾಡಿದ ಈ ಅಪರಾಧವೇನು? 17) ಪೆಯೋರದವರ ದುಷ್ಟತನವು ನಮಗೆ ಅಲ್ಪವೋ? ಯೆಹೋವ ದೇವರ ಜನರ ಮೇಲೆ ವ್ಯಾಧಿ ಬಂದಿದ್ದರೂ ಈ ದಿನದವರೆಗೂ ಆ ಪಾಪದಿಂದ ನಾವು ಶುದ್ಧವಾಗಲಿಲ್ಲ. 18) ನೀವು ಈಗ ಯೆಹೋವ ದೇವರ ಕಡೆಯಿಂದ ತಿರುಗಿ ಹೋಗುತ್ತೀರಲ್ಲಾ? “‘ಈ ಹೊತ್ತು ಯೆಹೋವ ದೇವರಿಗೆ ವಿರೋಧವಾಗಿ ತಿರುಗಿಬಿದ್ದರೆ, ನಾಳೆ ಅವರು ಇಸ್ರಾಯೇಲ್ ಜನಾಂಗದ ಮೇಲೆ ರೌದ್ರವುಳ್ಳವರಾಗುವರು. 19) ನೀವು ಸ್ವಾಧೀನಪಡಿಸುವ ನಾಡು ಅಶುದ್ಧವಾಗಿದ್ದರೆ, ಯೆಹೋವ ದೇವರ ಗುಡಾರವಿರುವ ಯೆಹೋವ ದೇವರ ನಾಡಿಗೆ ನೀವು ಬಂದು, ನಮ್ಮ ಮಧ್ಯದಲ್ಲಿ ಸೊತ್ತನ್ನು ತೆಗೆದುಕೊಳ್ಳಿರಿ. ಯೆಹೋವ ದೇವರ ಬಲಿಪೀಠದ ಹೊರತಾಗಿ ನಿಮಗೋಸ್ಕರ ಒಂದು ಬಲಿಪೀಠವನ್ನು ಕಟ್ಟಿಕೊಳ್ಳುವುದರಿಂದ ನೀವು ಯೆಹೋವ ದೇವರಿಗೆ ವಿರೋಧವಾಗಿ ತಿರುಗಿ ಬೀಳಬೇಡಿರಿ. ನಮಗೆ ವಿರೋಧವಾಗಿಯೂ ತಿರುಗಿ ಬೀಳಬೇಡಿರಿ. 20) ಜೆರಹನ ಮಗ ಆಕಾನನು ಅರ್ಪಿತವಾದ ವಸ್ತುಗಳನ್ನು ಕದ್ದು ಅಪರಾಧವೆಸಗಿದಾಗ ಯೆಹೋವ ದೇವರ ಕೋಪವು ಸಮಸ್ತ ಇಸ್ರಾಯೇಲ್ ಜನರ ಮೇಲೆ ಬಂದಿತು. ಅವನ ಪಾಪದ ದೆಸೆಯಿಂದ ಅವನೊಡನೆ ಇತರರೂ ಸಾಯಬೇಕಾಯಿತು,’” ಎಂದು ಹೇಳಿದರು. 21) ರೂಬೇನ್ಯರೂ ಗಾದ್ಯರೂ ಮನಸ್ಸೆಯ ಅರ್ಧ ಗೋತ್ರದವರೂ ಇಸ್ರಾಯೇಲ್ ಗೋತ್ರಗಳ ಮುಖ್ಯಸ್ಥರಿಗೆ ಉತ್ತರವಾಗಿ, 22) “ದೇವಾದಿದೇವರಾದ ಯೆಹೋವ ದೇವರು ಇದಕ್ಕೆ ಸಾಕ್ಷಿ, ನಾವು ದೇವಾದಿದೇವರಾದ ಯೆಹೋವ ದೇವರಿಗೆ ವಿರುದ್ಧ ಪಾಪಮಾಡಿದವರಾಗಿದ್ದರೆ ಅಥವಾ ಅವಿಧೇಯರಾಗಿದ್ದರೆ, ಆ ದೇವರು ನಮ್ಮನ್ನು ಇಂದೇ ಜೀವದಿಂದುಳಿಸದಿರಲಿ. 23) ನಾವು ಯೆಹೋವ ದೇವರ ಕಡೆಗೆ ತಿರುಗಿಕೊಂಡು ದಹನಬಲಿಗಳನ್ನಾದರೂ, ಧಾನ್ಯ ಸಮರ್ಪಣೆಯನ್ನಾದರೂ, ಸಮಾಧಾನದ ಸಮರ್ಪಣೆಗಳನ್ನಾದರೂ, ಅದರ ಮೇಲೆ ಅರ್ಪಿಸುವುದಕ್ಕೋಸ್ಕರ ಬಲಿಪೀಠವನ್ನು ನಮಗಾಗಿ ಕಟ್ಟಿದ್ದರೆ, ಯೆಹೋವ ದೇವರು ಅದನ್ನು ವಿಚಾರಿಸಲಿ. 24) “ಒಂದು ವಿಶೇಷವಾದ ಉದ್ದೇಶದಿಂದ ಈ ಕೆಲಸವನ್ನು ಮಾಡಿದೆವು. ಮುಂದೆ ನಿಮ್ಮ ಮಕ್ಕಳು ನಮ್ಮ ಮಕ್ಕಳಿಗೆ, ‘ಇಸ್ರಾಯೇಲ್ ದೇವರಾದ ಯೆಹೋವ ದೇವರಲ್ಲಿ ನಿಮಗೇನು ಪಾಲಿದೆ? 25) ರೂಬೇನ್ಯರೇ, ಗಾದ್ಯರೇ ಯೆಹೋವ ದೇವರು ನಿಮಗೂ ನಮಗೂ ನಡುವೆ ಯೊರ್ದನ್ ನದಿಯನ್ನು ಮೇರೆಯಾಗಿ ಇಟ್ಟಿದ್ದರಿಂದ ಯೆಹೋವ ದೇವರ ಕಾರ್ಯಗಳಲ್ಲಿ ನಿಮಗೆ ಭಾಗವು ಇಲ್ಲ,’ ಎಂದು ಹೇಳಿ, ನಮ್ಮ ಮಕ್ಕಳನ್ನು ಯೆಹೋವ ದೇವರಿಗೆ ಭಯಪಡದ ಹಾಗೆ ಮಾಡುವರೆಂದು ಅಂಜಿಕೊಂಡು ಇದನ್ನು ಮಾಡಿದೆವು. 26) “ಆದ್ದರಿಂದ, ‘ನಾವು ಸಿದ್ಧರಾಗಿ ಬಲಿಪೀಠವನ್ನು ಕಟ್ಟೋಣ ಎಂದು ಹೇಳಿದ ಕಾರಣ, ದಹನಬಲಿ ಅಥವಾ ಬೇರೆ ಬಲಿಗಳನ್ನು ಸಮರ್ಪಿಸುವುದಕ್ಕೆ ಅಲ್ಲ.’ 27) ನಮಗೂ ನಿಮಗೂ ನಮ್ಮ ತರುವಾಯ ನಮ್ಮ ಸಂತತಿಯವರಿಗೂ ಮಧ್ಯದಲ್ಲಿ ಒಂದು ಸಾಕ್ಷಿ ಉಂಟಾಗಿರುವಂತೆಯೂ ನಾವು ಯೆಹೋವ ದೇವರ ಸನ್ನಿಧಿಯಲ್ಲಿ ದಹನಬಲಿ, ಸಮಾಧಾನದ ಬಲಿ ಮುಂತಾದವುಗಳನ್ನು ಅರ್ಪಿಸಿ ಆರಾಧಿಸುವುದಕ್ಕೆ ನಿಮಗೆ ಗುರುತಾಗಿರುವಂತೆಯೂ, ಮುಂದಿನ ಕಾಲದಲ್ಲಿ ನಿಮ್ಮ ಮಕ್ಕಳು ನಮ್ಮ ಮಕ್ಕಳಿಗೆ, ‘ಯೆಹೋವ ದೇವರಲ್ಲಿ ನಿಮಗೆ ಭಾಗವಿಲ್ಲ,’ ಎಂದು ಹೇಳದೆ ಇರುವಂತೆಯೂ ಸಾಕ್ಷಿಗಾಗಿ ಕಟ್ಟಿದ್ದೇವೆ ಅಷ್ಟೇ. 28) “ಇದಲ್ಲದೆ ನಾವು, ‘ಒಂದು ವೇಳೆ ಅವರು ಮುಂದೆ ನಮಗಾಗಲಿ, ನಮ್ಮ ಸಂತತಿಯವರಿಗಾಗಲಿ ಈ ಪ್ರಕಾರ ಹೇಳಿದ್ದೇ ಆದರೆ ನಾವು ಅವರಿಗೆ: ಯೆಹೋವ ದೇವರ ಬಲಿಪೀಠವನ್ನು ಹೋಲುವ ಈ ವೇದಿಕೆಯನ್ನು ನೋಡಿರಿ, ನಮ್ಮ ಪೂರ್ವಜರು ಇದನ್ನು ದಹನಬಲಿ, ಸಮರ್ಪಣ ಬಲಿಗಳನ್ನು ಅರ್ಪಿಸುವುದಕ್ಕಾಗಿ ಕಟ್ಟಲಿಲ್ಲ. ಇದು ನಮಗೂ ನಿಮಗೂ ಮಧ್ಯೆ ಸಾಕ್ಷಿಯಾಗಿದೆಯಷ್ಟೆ,’ ಎಂದು ಹೇಳುವೆವು. 29) “ಆದರೆ ನಮ್ಮ ದೇವರಾದ ಯೆಹೋವ ದೇವರ ಗುಡಾರದ ಮುಂದೆ ಇರುವ ಅವರ ಯಜ್ಞವೇದಿಯನ್ನು ಅಲ್ಲದೆ ನಾವು ದಹನಬಲಿ, ಧಾನ್ಯ ನೈವೇದ್ಯ ಮತ್ತು ಇತರ ಬಲಿಗೋಸ್ಕರವಾಗಿಯೂ ಮತ್ತೊಂದು ಬಲಿಪೀಠವನ್ನು ಕಟ್ಟಿ, ಯೆಹೋವ ದೇವರಿಗೆ ವಿರೋಧವಾಗಿ ವಿಮುಖರಾಗಿ ತಿರುಗಿಬೀಳುವುದು ನಮಗೆ ದೂರವಾಗಿರಲಿ,” ಎಂದರು. 30) ಯಾಜಕನಾದ ಫೀನೆಹಾಸನೂ ಅವನ ಸಂಗಡ ಇದ್ದ ಸಭೆಯ ಪ್ರಧಾನರೂ ಇಸ್ರಾಯೇಲ್ ಗೋತ್ರಗಳ ಮುಖ್ಯಸ್ಥರೂ ರೂಬೇನ್, ಗಾದ್ ಹಾಗೂ ಮನಸ್ಸೆಯ ಗೋತ್ರದವರು ಹೇಳಿದ ಮಾತುಗಳನ್ನು ಕೇಳಿದಾಗ ಅವರಿಗೆ ಮೆಚ್ಚಿಕೆಯಾಯಿತು. 31) ಯಾಜಕನಾಗಿರುವ ಎಲಿಯಾಜರನ ಪುತ್ರ ಫೀನೆಹಾಸನು ರೂಬೇನ್, ಗಾದ್ ಹಾಗೂ ಮನಸ್ಸೆಯ ಗೋತ್ರದವರಿಗೆ, “ನೀವು ಯೆಹೋವ ದೇವರಿಗೆ ವಿರುದ್ಧವಾಗಿ ಅಂಥ ದ್ರೋಹವನ್ನು ಮಾಡಲಿಲ್ಲವಾದ್ದರಿಂದ ಅವರು ನಮ್ಮ ಮಧ್ಯದಲ್ಲಿರುತ್ತಾರೆಂಬುದು ಈಗ ನಮಗೆ ತಿಳಿಯಿತು. ಹೀಗಿರಲಾಗಿ ನೀವು ಇಸ್ರಾಯೇಲರನ್ನು ಯೆಹೋವ ದೇವರ ಶಿಕ್ಷಾಹಸ್ತದಿಂದ ತಪ್ಪಿಸಿದ್ದೀರಿ,” ಎಂದನು. 32) ಯಾಜಕನಾದ ಎಲಿಯಾಜರನ ಮಗ ಫೀನೆಹಾಸನೂ ಪ್ರಧಾನರೂ ಗಿಲ್ಯಾದ್ ದೇಶದಲ್ಲಿರುವ ರೂಬೇನ್ಯರನ್ನೂ ಗಾದ್ಯರನ್ನೂ ಬಿಟ್ಟು ಕಾನಾನ್ ದೇಶದಲ್ಲಿರುವ ಇಸ್ರಾಯೇಲರ ಬಳಿಗೆ ತಿರುಗಿಬಂದು, ಅವರಿಗೆ ವರ್ತಮಾನವನ್ನು ತಿಳಿಸಿದರು. 33) ಆ ಮಾತನ್ನು ಇಸ್ರಾಯೇಲರು ಕೇಳಿ ಸಂತೋಷಪಟ್ಟು ದೇವರನ್ನು ಕೊಂಡಾಡಿದರು. ಆದ್ದರಿಂದ ಅವರು ರೂಬೇನ್ಯರೂ ಗಾದ್ಯರೂ ನಿವಾಸವಾಗಿದ್ದ ನಾಡಿನ ಮೇಲೆ ಯುದ್ಧಮಾಡಿ ಅವರನ್ನು ನಾಶಮಾಡಬೇಕೆಂಬ ಆಲೋಚನೆಯನ್ನು ಬಿಟ್ಟುಬಿಟ್ಟರು. 34) ರೂಬೇನ್ಯರೂ ಗಾದ್ಯರೂ ಆ ಬಲಿಪೀಠಕ್ಕೆ, “ನಮ್ಮ ನಡುವೆ ಯೆಹೋವ ದೇವರೇ ದೇವರಾಗಿದ್ದಾರೆ ಎಂಬುದಕ್ಕೆ ಸಾಕ್ಷಿ,” ಎಂದು ಹೆಸರಿಟ್ಟರು. Additional comments?
Refresh Captcha
The world's first Holy Bible un-translation!