Preface
Read
+
Publisher
Nainoia, Inc.
PO Box 462, Bellefonte, PA 16823
(814) 470-8028
Nainoia Inc, Publisher
LinkedIn/NAINOIA-INC
Third Party Publisher Resources
Request Custom Formatted Verses
Please contact us below
Submit your proposed corrections
I understand that the Aionian Bible republishes public domain and Creative Commons Bible texts and that volunteers may be needed to present the original text accurately. I also understand that apocryphal text is removed and most variant verse numbering is mapped to the English standard. I have entered my corrections under the verse(s) below. Proposed corrections to the Kanada Open Contemporary Bible, Exodus Chapter 39 https://www.AionianBible.org/Bibles/Kannada---Open-Contemporary/Exodus/39 1) ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಮೇರೆಗೆ ನೀಲಿ, ಧೂಮ್ರ, ರಕ್ತವರ್ಣದ ದಾರಿನಿಂದ ಪವಿತ್ರ ಆಲಯದ ಸೇವೆ ಮಾಡುವುದಕ್ಕೆ ಕಲಾತ್ಮಕವಾಗಿ ನೇಯ್ದ ಸೇವಾ ವಸ್ತ್ರಗಳನ್ನು ಮತ್ತು ಆರೋನನಿಗೆ ಪರಿಶುದ್ಧ ವಸ್ತ್ರಗಳನ್ನು ಮಾಡಿದರು. 2) ಬೆಚಲೇಲನು ಏಫೋದನ್ನು ಬಂಗಾರ, ನೀಲಿ, ಧೂಮ್ರ, ರಕ್ತವರ್ಣದ ದಾರದಿಂದ ಮತ್ತು ನಯವಾದ ನಾರುಬಟ್ಟೆಯನ್ನು ಹೊಸೆದು ಉಪಯೋಗಿಸಿದ್ದರು. 3) ಅವರು ಬಂಗಾರವನ್ನು ಹೊಡೆದು, ತೆಳುವಾದ ತಗಡುಗಳನ್ನಾಗಿ ಮಾಡಿ, ಅದನ್ನು ಕತ್ತರಿಸಿ ಎಳೆಗಳನ್ನಾಗಿ ಮಾಡಿ, ಆ ಎಳೆಗಳನ್ನು ನೀಲಿ, ಧೂಮ್ರ, ರಕ್ತವರ್ಣದ ದಾರದಿಂದ ಮತ್ತು ನಯವಾದ ನಾರಿನಿಂದ ಹೊಸೆದು ಕಸೂತಿ ಕೆಲಸ ಮಾಡುವುದಕ್ಕೆ ಉಪಯೋಗಿಸಿದ್ದರು. 4) ಆ ಕವಚಕ್ಕೆ ಅದರ ಎರಡೂ ಕೊನೆಗಳನ್ನು ಜೋಡಿಸುವುದಕ್ಕೆ ಎರಡು ಹೆಗಲು ಪಟ್ಟಿಗಳನ್ನು ತಯಾರಿಸಿದ್ದರು. 5) ಅದರ ಮೇಲಿರುವ ಅದರ ಮೇಲಿರುವ ಕಸೂತಿ ಕೆಲಸದ ಏಫೋದಿನ ನಡುಕಟ್ಟನ್ನು ಒಂದೇ ರೀತಿಯ ವಸ್ತುಗಳಿಂದ ತಯಾರಿಸಬೇಕು ಅಂದರೆ ಬಂಗಾರ, ನೀಲಿ, ಧೂಮ್ರ, ರಕ್ತವರ್ಣದ ದಾರಿನಿಂದ ಮತ್ತು ನಯವಾದ ನಾರಿನಿಂದ ಹೊಸೆದು ಮಾಡಲಾಗಿತ್ತು, ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದಂತೆಯೇ ಇತ್ತು. 6) ಮುದ್ರೆ ಕೆತ್ತುವ ಪ್ರಕಾರ, ಗೋಮೇಧಿಕ ರತ್ನಗಳಲ್ಲಿ ಹನ್ನೆರಡು ಇಸ್ರಾಯೇಲರ ಮಕ್ಕಳ ಹೆಸರುಗಳನ್ನು ಕೆತ್ತಿ ಬಂಗಾರದ ಕುಂದಣದಲ್ಲಿ ಇಟ್ಟರು. 7) ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಹಾಗೆಯೇ ಅವರು ಆ ಎರಡು ರತ್ನಗಳನ್ನು ಏಫೋದಿನ ಹೆಗಲಿನ ಭಾಗದ ಮೇಲೆ ಇಸ್ರಾಯೇಲರ ಜ್ಞಾಪಕಾರ್ಥವಾದ ರತ್ನಗಳಾಗುವಂತೆ ಇಟ್ಟರು. 8) ಎದೆಪದಕವನ್ನು ಕೌಶಲ್ಯ ಕೆಲಸದಿಂದ ಎಂದರೆ ಏಫೋದಿನ ಕೆಲಸದ ಹಾಗೆಯೇ ಬಂಗಾರ, ನೀಲಿ, ಧೂಮ್ರ, ರಕ್ತವರ್ಣದ ದಾರಿನಿಂದ ಮತ್ತು ನಯವಾದ ನಾರಿನಿಂದ ಹೊಸೆದು ಮಾಡಿದರು. 9) ಅದು ಚಚ್ಚೌಕವಾಗಿತ್ತು, ಅದು ಗೇಣು ಉದ್ದ, ಒಂದು ಗೇಣು ಅಗಲ ಮತ್ತು ಇದು ಎರಡು ಪದರುಳ್ಳದ್ದಾಗಿತ್ತು. 10) ನಂತರ ಅದರಲ್ಲಿ ನಾಲ್ಕು ಸಾಲುಗಳಾಗಿ ರತ್ನಗಳನ್ನು ಜೋಡಿಸಿದರು. ಮೊದಲನೆಯ ಸಾಲಿನಲ್ಲಿ ಮಾಣಿಕ್ಯ, ಪುಷ್ಯರಾಗ ಮತ್ತು ಸ್ಪಟಿಕಗಳಿದ್ದವು. 11) ಎರಡನೆಯ ಸಾಲಿನಲ್ಲಿ ಕೆಂಪರಲು, ನೀಲ ಮತ್ತು ಪಚ್ಚೆಗಳಿದ್ದವು. 12) ಮೂರನೆಯ ಸಾಲಿನಲ್ಲಿ ಸುವರ್ಣರತ್ನ, ಗೋಮೇಧಿಕ ಮತ್ತು ಧೂಮ್ರಮಣಿಗಳಿದ್ದವು. 13) ನಾಲ್ಕನೆಯ ಸಾಲಿನಲ್ಲಿ ಪೀತರತ್ನ, ಗೋಮೇಧಿಕ, ಸೂರ್ಯಕಾಂತ ಶಿಲೆ ಇವುಗಳನ್ನು ಬಂಗಾರದ ಜವೆಯ ಕಲ್ಲುಗಳಲ್ಲಿ ಸೇರಿಸಲಾಗಿದ್ದವು. 14) ಆ ರತ್ನಗಳು ಇಸ್ರಾಯೇಲರ ಗೋತ್ರದ ಹೆಸರುಗಳ ಪ್ರಕಾರ ಅವು ಹನ್ನೆರಡಾಗಿದ್ದವು. ಒಂದೊಂದರ ಮೇಲೆ ಒಂದೊಂದು ಹೆಸರಿದ್ದು ಹನ್ನೆರಡು ಗೋತ್ರಗಳ ಪ್ರಕಾರ ಮುದ್ರೆಗಳ ಹಾಗೆ ಕೆತ್ತಿದವುಗಳಾಗಿದ್ದವು. 15) ಎದೆಪದಕದ ಮೇಲಿರುವ ಕೊನೆಗಳಲ್ಲಿ ಶುದ್ಧ ಬಂಗಾರದಿಂದ ಹೆಣೆದ ಕೆಲಸವಾಗಿರುವ ಹುರಿಗಳಂತಿರುವ ಸರಪಣಿಯನ್ನು ಮಾಡಿದರು. 16) ಬಂಗಾರದ ಆ ಎರಡು ಜವೆಗಳನ್ನು ಮಾಡಿ, ಆ ಎರಡು ಬಳೆಗಳನ್ನು ಎದೆಪದಕದ ಎರಡು ಕೊನೆಗಳಲ್ಲಿ ಸೇರಿಸಿದರು. 17) ಬಂಗಾರದಿಂದ ಹೆಣೆದ ಆ ಎರಡು ಸರಪಣಿಗಳನ್ನು ಎದೆಪದಕದ ಕೊನೆಗಳಲ್ಲಿರುವ ಎರಡು ಬಳೆಗಳಲ್ಲಿ ಸೇರಿಸಿದರು. 18) ಆ ಎರಡು ಹೆಣೆದ ಸರಪಣಿಗಳ ಎರಡು ಕೊನೆಗಳನ್ನು ಆ ಎರಡು ಜವೆಗಳಲ್ಲಿ ಸೇರಿಸಿ, ಏಫೋದಿನ ಹೆಗಲು ಭಾಗಗಳ ಮುಂದುಗಡೆ ಇರಿಸಿದರು. 19) ಬಂಗಾರದ ಎರಡು ಉಂಗುರಗಳನ್ನು ಮಾಡಿ, ಎದೆಪದಕದ ಎರಡು ಕೊನೆಗಳಲ್ಲಿ ಸೇರಿಸಿ ಏಫೋದಿನ ಬದಿಗೆ ಒಳಗಡೆಯಲ್ಲಿ ಹಾಕಿದರು. 20) ಚಿನ್ನದ ಬೇರೆ ಎರಡು ಉಂಗುರಗಳನ್ನು ಮಾಡಿ, ಏಫೋದಿನ ಮುಂಬದಿಯ ಕೆಳಗಿನ ಎರಡು ಹೆಗಲಿನ ಪಟ್ಟಿಗಳಲ್ಲಿ, ಏಫೋದಿನ ವಿಚಿತ್ರವಾದ ನಡುಕಟ್ಟಿನ ಮೇಲೆ ಅದನ್ನು ಜೋಡಿಸುವ ಸ್ಥಳಕ್ಕೆ ಎದುರಾಗಿ ಇರಿಸಿದರು. 21) ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಹಾಗೆಯೇ ಆ ಎದೆಪದಕವನ್ನು ಏಫೋದಿನ ವಿಚಿತ್ರವಾದ ನಡುಕಟ್ಟಿನ ಮೇಲೆ ಇರುವಂತೆಯೂ ಎದೆಪದಕವು ಏಫೋದನ್ನು ಬಿಟ್ಟು ಅಲ್ಲಾಡದಂತೆಯೂ ಅದರ ಉಂಗುರಗಳ ಮೂಲಕವಾಗಿ ಏಫೋದಿನ ಉಂಗುರಗಳಿಗೆ ನೀಲಿ ದಾರದಿಂದ ಕಟ್ಟಿದರು. 22) ಏಫೋದಿನ ನಿಲುವಂಗಿಯನ್ನೆಲ್ಲಾ ನೀಲಿ ಬಣ್ಣದ ಬಟ್ಟೆಯಿಂದ ಮಾಡಿದರು. ಅದು ನೇಕಾರನ ಕೆಲಸವಾಗಿತ್ತು. 23) ನಿಲುವಂಗಿಯ ರಂದ್ರ, ಕವಚದ ರಂದ್ರದ ಹಾಗೆ ಅದರ ಮಧ್ಯದಲ್ಲಿ ಇತ್ತು. ಅದು ಹರಿಯದ ಹಾಗೆ ಯುದ್ಧದ ಕವಚದೋಪಾದಿಯಲ್ಲಿ ಆ ರಂದ್ರದ ಸುತ್ತಲೂ ನೇಯ್ಗೆ ಪಟ್ಟಿ ಇತ್ತು. 24) ನಿಲುವಂಗಿಯ ಅಂಚಿನ ಮೇಲೆ ನೀಲಿ, ಧೂಮ್ರ, ರಕ್ತವರ್ಣದ ದಾರದಿಂದ ಮತ್ತು ನಯವಾದ ನಾರಿನಿಂದ ಹೊಸೆದು ದಾಳಿಂಬೆ ಹಣ್ಣಿನಂತೆ ಮಾಡಿದರು. 25) ಶುದ್ಧ ಬಂಗಾರದ ಗಂಟೆಗಳನ್ನು ಮಾಡಿ, ಆ ಗಂಟೆಗಳನ್ನು ದಾಳಿಂಬೆಗಳ ನಡುವೆಯೇ ಇರಿಸಿದರು. 26) ಒಂದು ಗೆಜ್ಜೆ, ಒಂದು ದಾಳಿಂಬೆಯಂತಿರುವ ಚೆಂಡನ್ನು ಒಂದಾದ ಮೇಲೆ ಒಂದು ಸೇವೆಗೋಸ್ಕರ ಮಾಡಿದ ಮೇಲಂಗಿಯ ಅಂಚಿನ ಸುತ್ತಲೂ ಇದ್ದವು. ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಹಾಗೆಯೇ ಅದು ಇತ್ತು. 27) ಆರೋನನಿಗೆ ಹಾಗೂ ಅವನ ಮಕ್ಕಳಿಗೆ ನಯವಾದ ನಾರಿನಿಂದ ಹೊಸೆದ ಕೆಲಸದಿಂದ ಮಾಡಿದ ಮೇಲಂಗಿಗಳನ್ನೂ 28) ನಯವಾದ ನಾರಿನಿಂದ ಮಾಡಿದ ಮುಂಡಾಸವನ್ನೂ ಸೌಂದರ್ಯವುಳ್ಳ ನಾರಿನ ಕುಲಾವಿಗಳನ್ನೂ ಹೊಸೆದ ನಯವಾದ ನಾರುಗಳಿಂದ ಮಾಡಿದ ಒಳಉಡುಪುಗಳನ್ನೂ 29) ನಯವಾದ ನಾರಿನಿಂದ ಹೊಸೆದ ನೀಲಿ, ಧೂಮ್ರ, ರಕ್ತವರ್ಣದ ದಾರದಿಂದ ಹೆಣಿಗೆಯ ಕೆಲಸದಿಂದ ನಡುಕಟ್ಟನ್ನೂ ಮಾಡಿದರು. ಇವುಗಳನ್ನು ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದಂತೆಯೇ ಮಾಡಿದರು. 30) ಶುದ್ಧ ಬಂಗಾರದಿಂದ ಪರಿಶುದ್ಧ ಕಿರೀಟದ ತಗಡನ್ನು ಮಾಡಿ, ಮುದ್ರೆ ಕೆತ್ತುವ ಪ್ರಕಾರ ಅದರಲ್ಲಿ, “ಯೆಹೋವ ದೇವರಿಗೆ ಪರಿಶುದ್ಧ,” ಎಂದು ಕೆತ್ತಿಸಿದರು, 31) ಅದು ಮುಂಡಾಸದ ಮುಂಭಾಗದಲ್ಲಿರುವಂತೆ ಅದನ್ನು ನೀಲಿ ದಾರಿನಿಂದ ಕಟ್ಟಿಸಿದರು. ಇದನ್ನು ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಹಾಗೆಯೇ ಮಾಡಿದರು. 32) ಈ ಪ್ರಕಾರ ದೇವದರ್ಶನದ ಗುಡಾರದ ಕೆಲಸವೆಲ್ಲಾ ಮುಗಿಯಿತು. ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ್ದನ್ನೆಲ್ಲಾ ಇಸ್ರಾಯೇಲರು ಅದರಂತೆಯೇ ಮಾಡಿದರು. 33) ಆಗ ಅವರು ದೇವದರ್ಶನದ ಗುಡಾರವನ್ನು ಮೋಶೆಯ ಬಳಿಗೆ ತಂದರು. ಅದರ ಮೇಲ್ಹೊದಿಕೆಯನ್ನು, ಅದರ ಎಲ್ಲಾ ಸಲಕರಣೆಗಳನ್ನು ಅದರ ಕೊಂಡಿಗಳನ್ನು, ಅದರ ಚೌಕಟ್ಟುಗಳನ್ನು, ಅದರ ಅಗುಳಿಗಳನ್ನು, ಅದರ ಸ್ತಂಭಗಳನ್ನು, ಅದರ ಕುಣಿಕೆಗಳನ್ನು, 34) ಕೆಂಪು ಬಣ್ಣದಲ್ಲಿ ಅದ್ದಿದ ಟಗರುಗಳ ಹೊದಿಕೆಯನ್ನು, ಕಡಲುಹಂದಿಗಳ ಚರ್ಮಗಳ ಹೊದಿಕೆಗಳನ್ನು, ಮರೆಮಾಡುವ ಪರದೆಯನ್ನು, 35) ಒಡಂಬಡಿಕೆಯ ಮಂಜೂಷನ್ನು, ಅದರ ಕೋಲುಗಳನ್ನು, ಕರುಣಾಸನವನ್ನು, 36) ಮೇಜನ್ನು, ಅದರ ಎಲ್ಲಾ ಉಪಕರಣಗಳನ್ನು, ನೈವೇದ್ಯದ ರೊಟ್ಟಿಯನ್ನು, 37) ಶುದ್ಧವಾದ ದೀಪಸ್ತಂಭವನ್ನು, ಅದರ ದೀಪಗಳನ್ನು, ಕ್ರಮವಾಗಿಡುವ ದೀಪಗಳನ್ನು, ಅದರ ಉಪಕರಣಗಳನ್ನು, ದೀಪಸ್ತಂಭಕ್ಕಾಗಿ ಎಣ್ಣೆಯನ್ನು, 38) ಚಿನ್ನದ ಬಲಿಪೀಠವನ್ನು, ಅಭಿಷೇಕಿಸುವ ತೈಲವನ್ನು, ಪರಿಮಳ ಧೂಪವನ್ನು, ಗುಡಾರದ ಬಾಗಿಲಿನ ಪರದೆಯನ್ನು, 39) ಬಲಿಪೀಠವನ್ನು, ಅದರೊಂದಿಗೆ ಕಂಚಿನ ಜಾಳಿಗೆಯನ್ನು, ಅದರ ಕೋಲುಗಳನ್ನು, ಅದರ ಎಲ್ಲಾ ಉಪಕರಣಗಳನ್ನು, ಕಂಚಿನ ಗಂಗಾಳವನ್ನು, ಅದರ ಕಾಲನ್ನು, 40) ದೇವದರ್ಶನದ ಗುಡಾರ ಅಂಗಳದ ಪರದೆಗಳನ್ನು, ಅದರ ಸ್ತಂಭಗಳನ್ನು, ಅದರ ಗದ್ದಿಗೇ ಕಲ್ಲುಗಳನ್ನು, ಅಂಗಳದ ಬಾಗಿಲಿನ ಪರದೆಗಳನ್ನು, ಅದರ ಹಗ್ಗಗಳನ್ನು, ಗುಡಾರದ ಗೂಟಗಳನ್ನು, ಸಭೆಯ ದೇವದರ್ಶನದ ಗುಡಾರಕ್ಕೆ ಬೇಕಾದ ಎಲ್ಲಾ ವಸ್ತುಗಳನ್ನು, 41) ಪರಿಶುದ್ಧಸ್ಥಳದ ಸೇವೆಗೋಸ್ಕರ ನೇಯ್ದ ಪರಿಶುದ್ಧ ವಸ್ತ್ರಗಳನ್ನು ಅಂದರೆ ಸೇವೆಮಾಡುವದಕ್ಕೆ ಯಾಜಕನಾದ ಆರೋನನಿಗೆ ಮತ್ತು ಅವನ ಪುತ್ರರಿಗೆ ಯಾಜಕವಸ್ತ್ರಗಳನ್ನು ತಂದರು. 42) ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಹಾಗೆಯೇ, ಇಸ್ರಾಯೇಲರು ಈ ಕೆಲಸಗಳನ್ನೆಲ್ಲಾ ಮಾಡಿದರು. 43) ಮೋಶೆಯು ಆ ಕೆಲಸವನ್ನೆಲ್ಲಾ ನೋಡಿದಾಗ, ಯೆಹೋವ ದೇವರು ಆಜ್ಞಾಪಿಸಿದ ಪ್ರಕಾರವೇ ಅವರು ಅದನ್ನು ಮಾಡಿದ್ದರು. ಆದ್ದರಿಂದ ಮೋಶೆಯು ಅವರನ್ನು ಆಶೀರ್ವದಿಸಿದನು. Additional comments?
Refresh Captcha
The world's first Holy Bible un-translation!