Preface
Read
+
Publisher
Nainoia, Inc.
PO Box 462, Bellefonte, PA 16823
(814) 470-8028
Nainoia Inc, Publisher
LinkedIn/NAINOIA-INC
Third Party Publisher Resources
Request Custom Formatted Verses
Please contact us below
Submit your proposed corrections
I understand that the Aionian Bible republishes public domain and Creative Commons Bible texts and that volunteers may be needed to present the original text accurately. I also understand that apocryphal text is removed and most variant verse numbering is mapped to the English standard. I have entered my corrections under the verse(s) below. Proposed corrections to the Kanada Open Contemporary Bible, Deuteronomy Chapter 16 https://www.AionianBible.org/Bibles/Kannada---Open-Contemporary/Deuteronomy/16 1) ನೀವು ಅಬೀಬ ತಿಂಗಳಿನಲ್ಲಿ ನಿಮ್ಮ ದೇವರಾದ ಯೆಹೋವ ದೇವರಿಗೆ ಪಸ್ಕವನ್ನು ಆಚರಿಸಬೇಕು. ಏಕೆಂದರೆ ಅಬೀಬ ತಿಂಗಳಿನಲ್ಲಿ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ರಾತ್ರಿಯಲ್ಲಿ ಈಜಿಪ್ಟಿನೊಳಗಿಂದ ಹೊರಗೆ ಬರಮಾಡಿದರು. 2) ಹೀಗಿರುವುದರಿಂದ ಯೆಹೋವ ದೇವರು ತಮ್ಮ ಹೆಸರನ್ನು ಸ್ಥಾಪಿಸುವುದಕ್ಕೆ ಆಯ್ದುಕೊಳ್ಳುವ ಸ್ಥಳದಲ್ಲಿ ನಿಮ್ಮ ದೇವರಾದ ಯೆಹೋವ ದೇವರಿಗೆ ಆಡುಕುರಿಗಳಲ್ಲಾಗಲಿ, ದನಗಳಲ್ಲಿ ಆಗಲಿ ಪಸ್ಕದ ಪಶುವನ್ನಾಗಿ ಅರ್ಪಿಸಬೇಕು. 3) ಅದರೊಂದಿಗೆ ಹುಳಿರೊಟ್ಟಿಯನ್ನು ತಿನ್ನಬಾರದು. ಏಳು ದಿವಸ ಹುಳಿಯಿಲ್ಲದ ಶ್ರಮೆಯ ರೊಟ್ಟಿಗಳನ್ನು ತಿನ್ನಬೇಕು. ಏಕೆಂದರೆ ತ್ವರೆಯಾಗಿ ಈಜಿಪ್ಟ್ ದೇಶದೊಳಗಿಂದ ನೀವು ಹೊರಗೆ ಬಂದದ್ದರಿಂದ ನೀವು ಜೀವಿಸುವ ದಿವಸಗಳಲ್ಲೆಲ್ಲಾ ಇದನ್ನು ಜ್ಞಾಪಕಮಾಡಿಕೊಳ್ಳಬೇಕು. 4) ಏಳು ದಿವಸ ಹುಳಿ ಕಲಸಿದ ರೊಟ್ಟಿ ನಿಮ್ಮ ಮೇರೆಗಳಲ್ಲಿ ಎಲ್ಲಿಯೂ ಕಾಣಬಾರದು. ಮೊದಲನೆಯ ದಿವಸದ ಸಾಯಂಕಾಲದಲ್ಲಿ ನೀವು ಯಜ್ಞವಾಗಿ ಸಮರ್ಪಿಸಿದ ಮಾಂಸದಲ್ಲಿ ಏನೂ ಮರುದಿವಸದವರೆಗೆ ಉಳಿಯಬಾರದು. 5) ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಕೊಡುವ ಯಾವ ಊರಲ್ಲಾದರೂ ಪಸ್ಕವನ್ನು ಅರ್ಪಿಸಬಾರದು. 6) ನಿಮ್ಮ ದೇವರಾದ ಯೆಹೋವ ದೇವರು ತಮ್ಮ ಹೆಸರನ್ನು ಸ್ಥಾಪಿಸುವುದಕ್ಕೆ ಆಯ್ದುಕೊಳ್ಳುವ ಸ್ಥಳದಲ್ಲೇ ಸೂರ್ಯನು ಅಸ್ತಮಿಸುವಾಗ ನೀವು ಈಜಿಪ್ಟನ್ನು ಬಿಟ್ಟುಹೋದ ಸಮಯದಲ್ಲಿ ಅರ್ಪಿಸಬೇಕು. 7) ನಿಮ್ಮ ದೇವರಾದ ಯೆಹೋವ ದೇವರು ಆಯ್ದುಕೊಳ್ಳುವ ಸ್ಥಳದಲ್ಲಿ ಅದನ್ನು ಬೇಯಿಸಿ ತಿನ್ನಬೇಕು. ಮರುದಿವಸದಲ್ಲಿ ಹಿಂದಿರುಗಿ ನಿಮ್ಮ ಗುಡಾರಗಳಿಗೆ ಹೋಗಬಹುದು. 8) ಆರು ದಿವಸ ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು. ಏಳನೆಯ ದಿವಸದಲ್ಲಿ ನಿಮ್ಮ ದೇವರಾದ ಯೆಹೋವ ದೇವರಿಗೆ ಸಭೆಯಾಗಿ ಕೂಡಿಬರಬೇಕು. ಆ ದಿನದಲ್ಲಿ ಕೆಲಸಮಾಡಬಾರದು. 9) ಏಳು ವಾರಗಳನ್ನು ನನಗಾಗಿ ಎಣಿಸಿಕೊಳ್ಳಬೇಕು. ಪೈರಿನಲ್ಲಿ ಕುಡುಗೋಲು ಮೊದಲು ಹಾಕಿದಂದಿನಿಂದ ಏಳು ವಾರಗಳನ್ನು ಎಣಿಸಿಕೊಳ್ಳುವುದಕ್ಕೆ ಪ್ರಾರಂಭಿಸಬೇಕು. 10) ಆಗ ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಅನುಗ್ರಹಿಸಿದ ಬೆಳೆಗೆ ತಕ್ಕಷ್ಟು ಕಾಣಿಕೆಯನ್ನು ಅರ್ಪಿಸಿ, ನಿಮ್ಮ ದೇವರಾದ ಯೆಹೋವ ದೇವರಿಗೆ ವಾರಗಳ ಹಬ್ಬವನ್ನು ಆಚರಿಸಬೇಕು 11) ಮತ್ತು ಅವರು ತಮ್ಮ ನಾಮಸ್ಥಾಪನೆಗಾಗಿ ಆರಿಸಿಕೊಳ್ಳುವ ಸ್ಥಳದಲ್ಲಿ ನೀವು, ನಿಮ್ಮ ಗಂಡು ಹೆಣ್ಣುಮಕ್ಕಳು, ದಾಸದಾಸಿಯರು, ನಿಮ್ಮ ಊರಲ್ಲಿರುವ ಲೇವಿಯರು, ಪರದೇಶದವರು, ತಂದೆತಾಯಿ ಇಲ್ಲದವರು ಹಾಗೂ ವಿಧವೆಯರು ನಿಮ್ಮ ದೇವರಾದ ಯೆಹೋವ ದೇವರ ಸನ್ನಿಧಿಯಲ್ಲಿ ಸಂಭ್ರಮದಿಂದಿರಬೇಕು. 12) ಈಜಿಪ್ಟ್ ದೇಶದಲ್ಲಿ ಗುಲಾಮರಾಗಿದ್ದೆವೆಂಬುದನ್ನು ನೀವು ನೆನಪಿಗೆ ತಂದುಕೊಂಡು ಈ ವಿಧಿಗಳನ್ನು ಆಚರಿಸಬೇಕು. 13) ನೀವು ಕಣದ ಕೆಲಸವನ್ನೂ ದ್ರಾಕ್ಷಿ ಆಲೆಯ ಕೆಲಸವನ್ನೂ ಪೂರೈಸಿ, ಬೆಳೆಯನ್ನು ಮನೆಗೆ ತಂದಾಗ, ಏಳು ದಿನಗಳವರೆಗೂ ಗುಡಾರಗಳ ಹಬ್ಬವನ್ನು ಆಚರಿಸಬೇಕು. 14) ಅದರಲ್ಲಿ ನೀವೂ, ನಿಮ್ಮ ಗಂಡು ಹೆಣ್ಣು ಮಕ್ಕಳೂ ದಾಸದಾಸಿಯರೂ ನಿಮ್ಮ ಊರಲ್ಲಿರುವ ಲೇವಿಯರೂ ಪರದೇಶದವರೂ ತಂದೆತಾಯಿ ಇಲ್ಲದವರೂ ಹಾಗೂ ವಿಧವೆಯರೂ ಸಂಭ್ರಮದಿಂದಿರಬೇಕು. 15) ನಿಮ್ಮ ದೇವರಾದ ಯೆಹೋವ ದೇವರಿಗೆ ಏಳು ದಿವಸ ಯೆಹೋವ ದೇವರು ಆಯ್ದುಕೊಳ್ಳುವ ಸ್ಥಳದಲ್ಲಿ ಹಬ್ಬ ಮಾಡಬೇಕು. ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ಎಲ್ಲಾ ಆದಾಯದಲ್ಲಿಯೂ, ನಿಮ್ಮ ಎಲ್ಲಾ ಕೆಲಸದಲ್ಲಿಯೂ ಆಶೀರ್ವದಿಸುವುದರಿಂದ ನೀವು ಪರಿಪೂರ್ಣ ಸಂತೋಷದಿಂದ ಇರಬೇಕು. 16) ಹುಳಿಯಿಲ್ಲದ ರೊಟ್ಟಿಗಳ ಹಬ್ಬದಲ್ಲಿಯೂ ವಾರಗಳ ಹಬ್ಬದಲ್ಲಿಯೂ ಮತ್ತು ಗುಡಾರಗಳ ಹಬ್ಬದಲ್ಲಿಯೂ ವರ್ಷಕ್ಕೆ ಮೂರು ಸಾರಿ ನಿಮ್ಮ ಎಲ್ಲಾ ಪುರುಷರು, ನಿಮ್ಮ ಯೆಹೋವ ದೇವರ ಮುಂದೆ ಅವರು ಆಯ್ದುಕೊಳ್ಳುವ ಸ್ಥಳದಲ್ಲಿ ಕಾಣಿಸಿಕೊಳ್ಳಬೇಕು. ಒಬ್ಬರೂ ಯೆಹೋವ ದೇವರ ಸಮ್ಮುಖಕ್ಕೆ ಬರೀ ಕೈಯಿಂದ ಬರಬಾರದು. 17) ನಿಮ್ಮ ಯೆಹೋವ ದೇವರು ನಿಮಗೆ ಕೊಡುವ ಆಶೀರ್ವಾದದ ಪ್ರಕಾರ ಒಬ್ಬೊಬ್ಬನೂ ಕೊಡಬೇಕು. 18) ಯೆಹೋವ ದೇವರು ನಿಮ್ಮ ಗೋತ್ರಗಳ ಪ್ರಕಾರ ಕೊಡುವ ನಿಮ್ಮ ಎಲ್ಲಾ ಊರುಗಳಲ್ಲಿ ನಿಮಗೆ ನ್ಯಾಯಾಧಿಪತಿಗಳನ್ನೂ, ಅಧಿಕಾರಿಗಳನ್ನೂ ಇಟ್ಟುಕೊಳ್ಳಬೇಕು. ಅವರು ಜನಕ್ಕೆ ನೀತಿಯಿಂದ ನ್ಯಾಯತೀರಿಸಬೇಕು. 19) ನೀವು ನ್ಯಾಯವನ್ನು ಕೆಡಿಸಬಾರದು. ನೀವು ಮುಖದಾಕ್ಷಿಣ್ಯ ನೋಡಬಾರದು, ಇಲ್ಲವೆ ಲಂಚವನ್ನು ತೆಗೆದುಕೊಳ್ಳಬಾರದು, ಲಂಚವು ಜ್ಞಾನಿಗಳ ಕಣ್ಣುಗಳನ್ನು ಕುರುಡುಮಾಡಿ, ನಿರಪರಾಧಿಗೆ ದೊರಕಬೇಕಾದ ನ್ಯಾಯವನ್ನು ತಪ್ಪಿಸುತ್ತದೆ. 20) ನೀವು ಬದುಕಿ ನಿಮ್ಮ ಯೆಹೋವ ದೇವರು ನಿಮಗೆ ಕೊಡುವ ದೇಶವನ್ನು ಸ್ವಾಧೀನಪಡಿಸಿಕೊಳ್ಳುವ ಹಾಗೆ ನ್ಯಾಯವನ್ನು ಅಂದರೆ ಕೇವಲ ನ್ಯಾಯವನ್ನೇ ಅನುಸರಿಸಬೇಕು. 21) ನಿಮ್ಮ ಯೆಹೋವ ದೇವರಿಗಾಗಿ ಕಟ್ಟುವ ಬಲಿಪೀಠದ ಸಮೀಪದಲ್ಲಿ ಮರದಿಂದ ಮಾಡಿದ ಯಾವುದೇ ಅಶೇರ ಸ್ತಂಭವನ್ನು ನಿಲ್ಲಿಸಬಾರದು. 22) ಯಾವ ವಿಗ್ರಹವನ್ನೂ ನಿಲ್ಲಿಸಬಾರದು. ಇದನ್ನು ನಿನ್ನ ಯೆಹೋವ ದೇವರು ದ್ವೇಷಿಸುತ್ತಾರೆ. Additional comments?
Refresh Captcha
The world's first Holy Bible un-translation!