Preface
Read
+
Publisher
Nainoia, Inc.
PO Box 462, Bellefonte, PA 16823
(814) 470-8028
Nainoia Inc, Publisher
LinkedIn/NAINOIA-INC
Third Party Publisher Resources
Request Custom Formatted Verses
Please contact us below
Submit your proposed corrections
I understand that the Aionian Bible republishes public domain and Creative Commons Bible texts and that volunteers may be needed to present the original text accurately. I also understand that apocryphal text is removed and most variant verse numbering is mapped to the English standard. I have entered my corrections under the verse(s) below. Proposed corrections to the Kannada Bible, Ezekiel Chapter 33 https://www.AionianBible.org/Bibles/Kannada---Kannada-Bible/Ezekiel/33 1 ೧) ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು, 2 ೨) “ನರಪುತ್ರನೇ, ನಿನ್ನ ಜನರನ್ನು ಸಂಬೋಧಿಸಿ, ಅವರಿಗೆ ಹೀಗೆ ನುಡಿ, ‘ನಾನು ದೇಶದ ಮೇಲೆ ಖಡ್ಗವನ್ನು ಬೀಳಮಾಡುವಾಗ, ಆ ದೇಶದವರು ತಮ್ಮಲ್ಲಿ ಒಬ್ಬ ಮನುಷ್ಯನನ್ನು ಆರಿಸಿ, ತಮಗೆ ಕಾವಲುಗಾರನನ್ನಾಗಿ ನೇಮಿಸಿಕೊಳ್ಳಲಿ. 3 ೩) ಅವರು ದೇಶದ ಮೇಲೆ ಬೀಳುವ ಖಡ್ಗವನ್ನು ನೋಡಿದ ಕೂಡಲೆ, ಕೊಂಬನ್ನು ಊದಿ ಸ್ವಜನರನ್ನು ಎಚ್ಚರಿಸಲಿ. 4 ೪) ಕೊಂಬಿನ ಧ್ವನಿಯನ್ನು ಕೇಳಿದ ಯಾರೇ ಆಗಲಿ ಎಚ್ಚರಗೊಳ್ಳದೆ, ಖಡ್ಗಕ್ಕೆ ಸಿಕ್ಕಿ ನಾಶವಾದರೆ, ತನ್ನ ಮರಣಕ್ಕೆ ತಾನೇ ಹೊಣೆಯಾಗುವನು. 5 ೫) ಏಕೆಂದರೆ ಅವನು ಕೊಂಬಿನ ಧ್ವನಿಯನ್ನು ಕೇಳಿಯೂ ಎಚ್ಚರಗೊಳ್ಳಲಿಲ್ಲ; ತನ್ನ ಮರಣಕ್ಕೆ ತಾನೇ ಕಾರಣನಾಗುವನು; ಎಚ್ಚರಗೊಂಡಿದ್ದರೆ ತನ್ನ ಪ್ರಾಣವನ್ನು ಉಳಿಸಿಕೊಳ್ಳುತ್ತಿದ್ದನು. 6 ೬) ಆದರೆ ಕಾವಲುಗಾರನು ಬೀಳುವ ಖಡ್ಗವನ್ನು ನೋಡಿಯೂ, ಕೊಂಬನ್ನೂದದೆ, ಸ್ವಜನರನ್ನು ಎಚ್ಚರಿಸದೆ ಇದ್ದರೆ, ಖಡ್ಗವು ಬಿದ್ದು ಆ ಜನರೊಳಗೆ ಯಾರನ್ನೇ ಆಗಲಿ ನಾಶಮಾಡಿದರೆ, ತನ್ನ ಅಧರ್ಮದಲ್ಲೇ ನಾಶಗೊಂಡ ಆ ಮನುಷ್ಯನ ಮರಣಕ್ಕೆ ಕಾವಲುಗಾರನನ್ನೇ ಹೊಣೆಮಾಡುವೆನು.’ 7 ೭) “ಆದುದರಿಂದ ನರಪುತ್ರನೇ, ನಾನು ನಿನ್ನನ್ನು ಇಸ್ರಾಯೇಲ್ ವಂಶದವರಿಗೆ ಕಾವಲುಗಾರನನ್ನಾಗಿ ನೇಮಿಸಿದ್ದೇನೆ; ನೀನು ನನ್ನ ಬಾಯಿಂದ ಹೊರಡುವ ಮಾತನ್ನು ಕೇಳಿ, ನನ್ನ ದೂತನಾಗಿ ಅವರನ್ನು ಎಚ್ಚರಿಸು. 8 ೮) ನಾನು ದುಷ್ಟನಿಗೆ ದುಷ್ಟನೇ, ‘ನೀನು ಖಂಡಿತವಾಗಿ ಸಾಯುವೆ’ ಎಂದು ಹೇಳುವಾಗ, ನೀನು ಆ ದುಷ್ಟನನ್ನು ತನ್ನ ದುರ್ಮಾರ್ಗದಿಂದ ತಪ್ಪಿಸಿ, ಅವನನ್ನು ಎಚ್ಚರಗೊಳಿಸದೆ ಹೋದರೆ, ಅವನು ತನ್ನ ಅಪರಾಧದಿಂದಲೇ ಸಾಯಬೇಕಾಗುವುದು; ಅವನ ಮರಣಕ್ಕೆ ಹೊಣೆಯಾದ ನಿನಗೆ ನಾನು ಮುಯ್ಯಿತೀರಿಸುವೆನು. 9 ೯) ಆದರೆ ನೀನು ದುಷ್ಟನನ್ನು ದುರ್ಮಾರ್ಗದಿಂದ ತಪ್ಪಿಸಲು, ಅವನನ್ನು ಎಚ್ಚರಿಸಿದರೂ ಅವನು ಅದನ್ನು ಬಿಡದೆ ಹೋದರೆ ತನ್ನ ಅಪರಾಧದಲ್ಲೇ ಸಾಯುವನು; ನೀನೋ ನಿನ್ನ ಪ್ರಾಣವನ್ನು ಉಳಿಸಿಕೊಳ್ಳುವಿ. 10 ೧೦) “ನರಪುತ್ರನೇ, ಇಸ್ರಾಯೇಲ್ ವಂಶದವರಿಗೆ ಹೀಗೆ ನುಡಿ, ‘ಅಯ್ಯೋ, ನಮ್ಮ ದ್ರೋಹಗಳ ಮತ್ತು ಪಾಪಗಳ ಭಾರವು ನಮ್ಮ ಮೇಲೆ ಬಿದ್ದಿದೆ; ಅವುಗಳಿಂದ ಕ್ಷೀಣವಾಗಿ ಹೋಗುತ್ತಿದ್ದೇವೆ; ನಾವು ಹೇಗೆ ಬದುಕುವೆವು? ಅಂದುಕೊಳ್ಳುತ್ತೀರಲ್ಲಾ. 11 ೧೧) ನನ್ನ ಜೀವದಾಣೆ, ದುಷ್ಟನ ಸಾವಿನಲ್ಲಿ ನನಗೆ ಸ್ವಲ್ಪವೂ ಸಂತೋಷವಿಲ್ಲ; ಅವನು ತನ್ನ ದುರ್ಮಾರ್ಗವನ್ನು ಬಿಟ್ಟುಬಿಡಲಿ; ಇಸ್ರಾಯೇಲಿನ ಮನೆತನದವರೇ ನೀವು ಏಕೆ ಸಾಯಬೇಕು?’” ಇದು ಕರ್ತನಾದ ಯೆಹೋವನ ನುಡಿ. 12 ೧೨) ನರಪುತ್ರನೇ, ನಿನ್ನ ಜನರಿಗೆ ಹೀಗೆ ಹೇಳು, “ನೀತಿವಂತನು ದ್ರೋಹಮಾಡಿದ್ದಲ್ಲಿ ಅವನ ನೀತಿಯು ಅವನನ್ನು ಉದ್ಧರಿಸುವುದಿಲ್ಲ; ದುಷ್ಟನು ತನ್ನ ದುಷ್ಟತನವನ್ನು ಬಿಟ್ಟಲ್ಲಿ, ಅವನ ಪಾಪವು ಅವನನ್ನು ಬೀಳಿಸುವುದಿಲ್ಲ; ನೀತಿವಂತನು ಪಾಪಮಾಡಿದಲ್ಲಿ ಅವನ ನೀತಿಯು ಅವನನ್ನು ಬದುಕಿಸುವುದಿಲ್ಲ. 13 ೧೩) ನಾನು ನೀತಿವಂತನಿಗೆ, ‘ನೀನು ಖಂಡಿತವಾಗಿ ಬದುಕುವಿ’ ಎಂದು ಹೇಳುವಾಗ, ಅವನು ತನ್ನ ನೀತಿಯ ಮೇಲೆ ಭರವಸವಿಟ್ಟು ಪಾಪ ಮಾಡಿದರೆ, ಅವನು ಮಾಡಿದ ಯಾವ ಸುಕೃತ್ಯವೂ ಅವನ ಲೆಕ್ಕಕ್ಕೆ ಸೇರಿಸಲ್ಪಡುವುದಿಲ್ಲ; ಅವನು ಮಾಡುವ ಪಾಪದಿಂದಲೇ ಅವನು ಸಾಯುವನು. 14 ೧೪) ನಾನು ದುಷ್ಟನಿಗೆ, ‘ನೀನು ಖಂಡಿತವಾಗಿ ಸಾಯುವಿ’ ಎಂದು ಹೇಳಲು ಅವನು ತನ್ನ ಪಾಪವನ್ನು ಬಿಟ್ಟು ನೀತಿನ್ಯಾಯಗಳನ್ನು ನಡೆಸಿದರೆ, 15 ೧೫) ಆ ದುಷ್ಟನು ತನ್ನ ಒತ್ತೆಯನ್ನು ಬಿಗಿಹಿಡಿಯದೆ, ದೋಚಿಕೊಂಡದ್ದನ್ನು ಹಿಂದಕ್ಕೆ ಕೊಟ್ಟು, ಅನ್ಯಾಯವನ್ನು ಮಾಡದೆ, ಜೀವಾಧಾರವಾದ ವಿಧಿಗಳನ್ನು ಅನುಸರಿಸಿ, ಸಕಲ ದುಷ್ಕರ್ಮಗಳಿಗೂ ದೂರನಾದರೆ ಸಾಯುವುದಿಲ್ಲ. ಖಂಡಿತವಾಗಿ ಬದುಕುವನು. 16 ೧೬) ಅವನು ಮಾಡಿದ ಯಾವ ಪಾಪವೂ ಅವನ ಲೆಕ್ಕಕ್ಕೆ ಸೇರಿಸಲ್ಪಡುವುದಿಲ್ಲ; ನೀತಿನ್ಯಾಯಗಳನ್ನು ನಡೆಸುತ್ತಿದ್ದುದರಿಂದ ನಿಶ್ಚಯವಾಗಿ ಬದುಕುವನು. 17 ೧೭) ಆದರೆ ನಿನ್ನ ಜನರು ಕರ್ತನ ಮಾರ್ಗವು ಸಮವಲ್ಲವೆಂದು ಹೇಳುತ್ತಿದ್ದಾರೆ, ಆದರೆ ಅವರ ಮಾರ್ಗವೇ ಸಮವಿಲ್ಲ. 18 ೧೮) ನೀತಿವಂತನು ತನ್ನ ನೀತಿಯನ್ನು ಬಿಟ್ಟು ಅಧರ್ಮಮಾಡಿದರೆ ಆ ಅಧರ್ಮದಿಂದಲೇ ಸಾಯುವನು. 19 ೧೯) ದುಷ್ಟನು ತನ್ನ ದುಷ್ಟತನವನ್ನು ಬಿಟ್ಟು, ನೀತಿನ್ಯಾಯಗಳನ್ನು ನಡೆಸಿದರೆ ಅವುಗಳಿಂದ ಬದುಕುವನು. 20 ೨೦) ಆದರೆ ನೀವು, ‘ಯೆಹೋವನ ಮಾರ್ಗವು ಸಮವಲ್ಲ’ ಎಂದು ಹೇಳುತ್ತಿದ್ದೀರಿ; ಇಸ್ರಾಯೇಲ್ ವಂಶದವರೇ, ನಿಮ್ಮ ನಿಮ್ಮ ನಡತೆಗೆ ತಕ್ಕ ಹಾಗೆ ನಾನು ನಿಮಗೆ ತೀರ್ಪುಮಾಡುವೆನು.” 21 ೨೧) ನಾವು ಸೆರೆಯಾದ ಹನ್ನೆರಡನೆಯ ವರ್ಷದ, ಹತ್ತನೆಯ ತಿಂಗಳಿನ ಐದನೆಯ ದಿನದಲ್ಲಿ, ಯೆರೂಸಲೇಮಿನಿಂದ ತಪ್ಪಿಸಿಕೊಂಡವನೊಬ್ಬನು ನನ್ನ ಬಳಿಗೆ ಬಂದು, “ಪಟ್ಟಣವು ಶತ್ರುವಶವಾಯಿತು” ಎಂದು ಹೇಳಿದನು. 22 ೨೨) ಅವನು ಬರುವುದಕ್ಕಿಂತ ಮೊದಲೇ, ಸಾಯಂಕಾಲದಲ್ಲಿ ನಾನು ಯೆಹೋವನ ಹಸ್ತಸ್ಪರ್ಶದಿಂದ ಪರವಶನಾಗಿರಲು, ಯೆಹೋವನು ತಪ್ಪಿಸಿಕೊಂಡವನು ಬೆಳಿಗ್ಗೆ ನನ್ನ ಬಳಿಗೆ ಬರುವ ತನಕ ನನ್ನ ಬಾಯಿ ತೆರೆಯಲ್ಪಟ್ಟಿತ್ತು; ಹೌದು, ನನ್ನ ಬಾಯಿ ತೆರೆದಿತ್ತು, ನಾನು ಮೂಕನಾಗಿರಲಿಲ್ಲ. 23 ೨೩) ಆಗ ಯೆಹೋವನು ನನಗೆ ಈ ವಾಕ್ಯವನ್ನು ದಯಪಾಲಿಸಿದನು, 24 ೨೪) “ನರಪುತ್ರನೇ, ಇಸ್ರಾಯೇಲ್ ಸೀಮೆಯ ಹಾಳು ಪ್ರದೇಶಗಳಲ್ಲಿ ವಾಸಿಸುವವರು ‘ಅಬ್ರಹಾಮನು ಒಂಟಿಗನಾಗಿದ್ದರೂ ಈ ದೇಶವು ಅವನಿಗೆ ಸ್ವತ್ತಾಗಿ ಸಿಕ್ಕಿತಲ್ಲಾ; ಅದು ಬಹು ಜನರಾದ ನಮಗೆ ಸ್ವತ್ತಾಗಿ ಸಿಕ್ಕಿದ್ದು ಬಹು ದೊಡ್ಡದು?’” ಎಂದು ಅಂದುಕೊಳ್ಳುತ್ತಿದ್ದಾರೆ. 25 ೨೫) ಆದುದರಿಂದ ನೀನು ಅವರಿಗೆ ಹೀಗೆ ನುಡಿ, ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ರಕ್ತದಿಂದ ಕೂಡಿದ ಮಾಂಸವನ್ನು ತಿನ್ನುತ್ತೀರಲ್ಲವೇ? ವಿಗ್ರಹಗಳ ಕಡೆಗೆ ನಿಮ್ಮ ಕಣ್ಣೆತ್ತಿ ನೋಡುತ್ತೀರಿ ಜನರ ರಕ್ತವನ್ನು ಚೆಲ್ಲುತ್ತೀರಿ; ನಿಮ್ಮಂಥವರು ದೇಶವನ್ನು ಸ್ವಾಧೀನಪಡಿಸಿಕೊಳ್ಳಬಹುದೋ? 26 ೨೬) ನೀವು ನಿಮ್ಮ ಕತ್ತಿಯ ಮೇಲೆ ನಿಂತು ಅಸಹ್ಯವಾದ ಕೆಲಸಗಳಲ್ಲಿ ನಿರತರಾಗಿದ್ದೀರಿ, ದುರಾಚಾರ ನಡೆಸುತ್ತೀರಿ, ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ನೆರೆಯವನ ಹೆಂಡತಿಯನ್ನು ಮಾನಭಂಗ ಪಡಿಸುತ್ತಾನೆ; ನಿಮ್ಮಂಥವರು ದೇಶವನ್ನು ಸ್ವಾಧೀನಪಡಿಸಿಕೊಳ್ಳಬಹುದೋ?” 27 ೨೭) ಅವರಿಗೆ ಹೀಗೆ ನುಡಿ, ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನನ್ನ ಜೀವದಾಣೆ, ಹಾಳು ಪ್ರದೇಶಗಳಲ್ಲಿರುವವರನ್ನು ಖಡ್ಗವು ಹತಿಸುವುದು; ಬಯಲಿನಲ್ಲಿರುವವರನ್ನು ನಾನು ಮೃಗಗಳಿಗೆ ತುತ್ತುಮಾಡುವೆನು; ಗುಹೆ ದುರ್ಗಗಳಲ್ಲಿರುವವರನ್ನು ವ್ಯಾಧಿಯು ಸಾಯಿಸುವುದು. 28 ೨೮) ನಾನು ದೇಶವನ್ನು ಹಾಳುಮಾಡುವೆನು, ಅದರ ಶಕ್ತಿಯ ಅಹಂಕಾರವು ಇಳಿದು ಹೋಗುವುದು; ಇಸ್ರಾಯೇಲಿನ ಪರ್ವತಗಳು ಹಾಳಾಗಿರುವುದರಿಂದ ಯಾರೂ ಅಲ್ಲಿ ಹಾದು ಹೋಗುವುದಿಲ್ಲ. 29 ೨೯) ಅವರು ನಡೆಸಿದ ಬಹು ದುರಾಚಾರಗಳ ನಿಮಿತ್ತ ನಾನು ದೇಶವನ್ನು ಹಾಳುಮಾಡಿದಾಗ ನಾನೇ ಯೆಹೋವನು” ಎಂದು ಅವರಿಗೆ ದೃಢವಾಗುವುದು. 30 ೩೦) ನರಪುತ್ರನೇ, “ನಿನ್ನ ಜನರು ಗೋಡೆಗಳ ನೆರಳಿನಲ್ಲಿಯೂ, ಮನೆಯ ಬಾಗಿಲುಗಳಲ್ಲಿಯೂ ನಿನ್ನ ಪ್ರಸ್ತಾಪವನ್ನೆತ್ತಿ ಪರಸ್ಪರವಾಗಿ ಒಬ್ಬರಿಗೊಬ್ಬರು, ‘ಯೆಹೋವನ ಬಾಯಿಂದ ಹೊರಟ ಮಾತೇನು ಕೇಳೋಣ ಬನ್ನಿರಿ’ ಎಂದು ಹೇಳಿಕೊಳ್ಳುತ್ತಿದ್ದಾರೆ. 31 ೩೧) ಶ್ರದ್ಧೆ ಇರುವ ನನ್ನ ಭಕ್ತರಂತೆ ಅವರು ನಿನ್ನ ಬಳಿಗೆ ಬಂದು, ನಿನ್ನ ಮುಂದೆ ಕುಳಿತುಕೊಂಡು ನಿನ್ನ ಮಾತುಗಳನ್ನು ಕೇಳುತ್ತಾರೆ, ಆದರೆ ಕೈಗೊಳ್ಳುವುದಿಲ್ಲ; ಬಾಯಿಂದ ಬಹುಪ್ರೀತಿಯನ್ನು ತೋರಿಸುತ್ತಾರೆ. ಅವರ ಮನಸ್ಸೋ ತಾವು ದೋಚಿಕೊಂಡದರ ಮೇಲೆ ಇರುತ್ತದೆ. 32 ೩೨) ಇಗೋ, ನಿನ್ನ ಮಾತು ಅವರ ಎಣಿಕೆಯಲ್ಲಿ ಒಬ್ಬ ಸಂಗೀತಗಾರನು ವಾದ್ಯವನ್ನು ಜಾಣತನದಿಂದ ಬಾರಿಸಿ, ಮಧುರ ಸ್ವರದಿಂದ ಹಾಡುವ ಪ್ರೇಮಗೀತೆಗೆ ಸಮಾನವಾಗಿದೆ; ನಿನ್ನ ಮಾತುಗಳನ್ನು ಕೇಳುತ್ತಾರೆ, ಆದರೆ ಕೈಗೊಳ್ಳುವುದಿಲ್ಲ. 33 ೩೩) ನೀನು ಮುಂತಿಳಿಸಿದ್ದು ಸಂಭವಿಸುವಾಗ, ತಮ್ಮ ಮಧ್ಯದಲ್ಲಿ ಪ್ರವಾದಿಯು ಇದ್ದಾನೆ ಎಂದು ಅವರಿಗೆ ತಿಳಿಯುವುದು.” Additional comments?
Refresh Captcha
The world's first Holy Bible un-translation!