< Zechariah 11 >
1 Ṣí àwọn ìlẹ̀kùn rẹ sílẹ̀, ìwọ Lebanoni, kí iná bá lè jẹ igi kedari rẹ run.
೧ಲೆಬನೋನೇ, ನಿನ್ನ ಬಾಗಿಲುಗಳನ್ನು ತೆರೆ, ಬೆಂಕಿಯು ನಿನ್ನ ದೇವದಾರುಗಳನ್ನು ನುಂಗಲಿ!
2 Hu, igi junifa; nítorí igi kedari ṣubú, nítorí tí a ba àwọn igi tí o lógo jẹ́: hu, ẹ̀yin igi óákù tí Baṣani, nítorí gé igbó àjàrà lulẹ̀.
೨ತುರಾಯಿ ಮರವೇ, ಗೋಳಾಡು! ದೇವದಾರು ಬಿದ್ದಿದೆ, ಶ್ರೇಷ್ಠವೃಕ್ಷಗಳು ನಾಶವಾಗಿವೆ. ಬಾಷಾನಿನ ಅಲ್ಲೋನ್ ಮರಗಳೇ ಕಿರಿಚಿರಿ! ನುಗ್ಗಲಾಗದ ದಟ್ಟವಾದ ವನವು ಉರುಳಿದೆ.
3 Gbọ́ ohun igbe àwọn olùṣọ́-àgùntàn; ògo wọn bàjẹ́; gbọ́ ohùn bíbú àwọn ọmọ kìnnìún nítorí ògo Jordani bàjẹ́.
೩ಆಹಾ, ಕುರುಬರು ಗೋಳಾಡುತ್ತಾರೆ! ಅವರ ಅತಿಶಯದ ಕಾವಲು ಹಾಳಾಗಿದೆ. ಇಗೋ, ಪ್ರಾಯದ ಸಿಂಹಗಳು ಗರ್ಜಿಸುತ್ತವೆ! ಯೊರ್ದನಿನ ದಟ್ಟ ಅಡವಿಯು ಹಾಳಾಗಿದೆ.
4 Báyìí ni Olúwa Ọlọ́run mi wí: “Bọ́ ọ̀wọ́ ẹran àbọ́pa.
೪ನನ್ನ ದೇವರಾದ ಯೆಹೋವನು ಹೀಗೆ ಅಪ್ಪಣೆಕೊಟ್ಟನು, “ಕೊಯ್ಗುರಿಗಳ ಮಂದೆಯನ್ನು ಕಾಯಿ;
5 Tí àwọn olúwa wọn ń pa wọ́n, tí wọn kò sì ka ara wọn sí pé wọn jẹ̀bi: àti àwọn tí ń tà wọ́n wí pé, ‘Ìbùkún ni fún Olúwa, nítorí tí mo dí ọlọ́rọ̀!’ Àwọn olùṣọ́-àgùntàn wọn kò sì ṣàánú wọn.
೫ಕೊಂಡುಕೊಳ್ಳುವವರು ಅವುಗಳನ್ನು ಕೊಯ್ದರೂ ದೋಷಿಗಳೆಂದು ಎಣಿಸುವುದಿಲ್ಲ; ಮಾರುವವರು ಯೆಹೋವನಿಗೆ ಸ್ತೋತ್ರವಾಗಲಿ, ಧನವಂತರಾದೆವು ಅಂದುಕೊಳ್ಳುವರು. ಆ ಮಂದೆಯ ಕುರುಬರಾದರೂ ಅವುಗಳನ್ನು ಕರುಣಿಸುವುದಿಲ್ಲ.”
6 Nítorí èmi kì yóò ṣàánú fún àwọn ara ilẹ̀ náà mọ́,” ni Olúwa wí, “Ṣí kíyèsi í, èmi yóò fi olúkúlùkù ènìyàn lé aládùúgbò rẹ̀ lọ́wọ́, àti lé ọwọ́ ọba rẹ̀, wọn yóò sì fọ́ ilẹ̀ náà, èmi kì yóò sì gbà wọ́n lọ́wọ́ wọn.”
೬ಯೆಹೋವನು ಇಂತೆನ್ನುತ್ತಾನೆ, “ನಾನು ಲೋಕನಿವಾಸಿಗಳನ್ನು ಇನ್ನು ಕರುಣಿಸೆನು; ಇಗೋ, ಪ್ರತಿಯೊಬ್ಬನನ್ನು ಅವನವನ ನೆರೆಯವನ ಕೈಗೂ, ಅರಸನ ಕೈಗೂ ಒಪ್ಪಿಸುವೆನು; ಆ ಬಲಿಷ್ಠರು ಲೋಕವನ್ನು ಪುಡಿಪುಡಿಮಾಡುವರು; ಅವರ ಕೈಗೆ ಸಿಕ್ಕಿದವರನ್ನು ಉದ್ಧರಿಸೆನು.”
7 Èmi yóò sì bọ́ ẹran àbọ́pa, àní ẹ̀yin òtòṣì nínú ọ̀wọ́ ẹran. Mo sì mu ọ̀pá méjì sọ́dọ̀; mo pè ọ̀kan ni Oore-ọ̀fẹ́, mo pè èkejì ni Àmùrè; mo sì bọ́ ọ̀wọ́ ẹran náà.
೭ಆಗ ನಾನು ದೀನಾವಸ್ಥೆಯಲ್ಲಿದ್ದ ಆ ಕೊಯ್ಗುರಿಗಳ ಮಂದೆಯನ್ನು ಮೇಯಿಸಿದೆನು. ಎರಡು ಕೋಲುಗಳನ್ನು ತೆಗೆದುಕೊಂಡು ಒಂದಕ್ಕೆ “ಕೃಪೆ” ಎಂತಲೂ ಇನ್ನೊಂದಕ್ಕೆ, “ಒಗ್ಗಟ್ಟು” ಎಂತಲೂ ಹೆಸರಿಟ್ಟು ಅವುಗಳಿಂದ ಮಂದೆಯನ್ನು ಮೇಯಿಸಿದೆನು.
8 Olùṣọ́-àgùntàn mẹ́ta ni mo sì gé kúrò ní oṣù kan. Ọkàn mi sì kórìíra wọn, ọkàn wọn pẹ̀lú sì kórìíra mi.
೮ಒಂದೇ ತಿಂಗಳೊಳಗೆ ಮೂವರು ಕುರುಬರನ್ನು ಅಡಗಿಸಿಬಿಟ್ಟೆನು; ಅನಂತರ ನನಗೆ ಕುರಿಗಳ ವಿಷಯವಾಗಿ ತಾಳ್ಮೆ ತಪ್ಪಿತು; ಅವುಗಳಿಂದ ನನಗೆ ಬೇಸರವಾಯಿತು.
9 Mo sì wí pé, “Èmi kì yóò bọ́ yin: èyí ti ń ku lọ, jẹ́ kí òkú o kú; èyí tí a o ba sì gé kúrò, jẹ́ kí a gé e kúrò; ki olúkúlùkù nínú àwọn ìyókù jẹ́ ẹran-ara ẹnìkejì rẹ̀.”
೯ಆಗ, “ನಾನು ನಿಮ್ಮನ್ನು ಮೇಯಿಸೆನು; ಸಾಯುವುದು ಸಾಯಲಿ, ಹಾಳಾಗುವುದು ಹಾಳಾಗಲಿ, ಉಳಿದವುಗಳು ಒಂದರ ಮಾಂಸವೊಂದನ್ನು ತಿನ್ನಲಿ ಅಂದುಕೊಂಡೆನು.”
10 Mo sì mu ọ̀pá mi, ti a ń pè ní Oore-ọ̀fẹ́, mo ṣẹ́ si méjì, ki èmi bá lè da májẹ̀mú mi tí mo tí bá gbogbo àwọn ènìyàn náà dá.
೧೦ಆಗ ನಾನು ಎಲ್ಲಾ ಜನಾಂಗಗಳೊಂದಿಗೆ ಮಾಡಿಕೊಂಡಿದ್ದ ಒಡಂಬಡಿಕೆಯನ್ನು ಭಂಗಪಡಿಸಬೇಕೆಂದು “ಕೃಪೆ” ಎಂಬ ನನ್ನ ಕೋಲನ್ನು ತೆಗೆದು ಕತ್ತರಿಸಿಬಿಟ್ಟೆನು. ಆಗಲೇ ಮುರಿದುಹೋಯಿತು;
11 Ó sì dá ni ọjọ́ náà, bẹ́ẹ̀ ni àwọn òtòṣì nínú ọ̀wọ́ ẹran náà tí ó dúró tì mí mọ̀ pé, ọ̀rọ̀ Olúwa ni.
೧೧ಇದರಿಂದ ಆ ದೀನವಾದ ಮಂದೆಯಲ್ಲಿ ನನ್ನನ್ನು ಲಕ್ಷಿಸುತ್ತಿದ್ದ ಕುರಿಗಳು, ಇದು ಯೆಹೋವನ ನುಡಿ ಎಂದು ತಿಳಿದುಕೊಂಡವು.
12 Mo sì wí fún wọn pé, “Bí ó bá dára ní ojú yin, ẹ fún mi ni owó ọ̀yà mi; bí bẹ́ẹ̀ kọ́, ẹ mú un lọ́wọ́.” Bẹ́ẹ̀ ni wọ́n wọn ọgbọ̀n owó fàdákà fún iye owó ọ̀yà mi.
೧೨ಅನಂತರ ನಾನು ನಿಮಗೆ, “ಸರಿಯಾಗಿ ತೋರಿದರೆ ನನಗೆ ಸಂಬಳವನ್ನು ಕೊಡಿರಿ ಇಲ್ಲವಾದರೆ ಬಿಡಿರಿ” ಅನ್ನಲು ಅವರು ಮೂವತ್ತು ತೊಲೆ ಬೆಳ್ಳಿಯನ್ನು ತೂಗಿ ನನ್ನ ಸಂಬಳಕ್ಕಾಗಿ ಕೊಟ್ಟರು.
13 Olúwa sì wí fún mi pé, “Sọ ọ sí amọ̀kòkò.” Iye dáradára náà, tí wọn yọ owó mi sí. Mo sì mu ọgbọ̀n owó fàdákà náà, mo sì sọ wọ́n sí àpótí ìṣúra ní ilé Olúwa.
೧೩ಅವರು ಇವನ ಯೋಗ್ಯತೆ ಇಷ್ಟೇ ಎಂದುಕೊಂಡು ನನಗೆ ಕೊಟ್ಟ ಆ ಭಾರೀ ಸಂಬಳವನ್ನು ಯೆಹೋವನು ನೋಡಿ, “ಅದನ್ನು ಡಬ್ಬಿಗೆ ಹಾಕು” ಎಂದು ಅಪ್ಪಣೆ ಮಾಡಿದಾಗ ನಾನು ಆ ಮೂವತ್ತು ಶೆಕೆಲ್ ಬೆಳ್ಳಿ ನಾಣ್ಯವನ್ನು ತೆಗೆದು ಯೆಹೋವನ ಆಲಯದ ಡಬ್ಬಿಗೆ ಹಾಕಿದೆನು.
14 Mo sì ṣẹ́ ọ̀pá mi kejì, àní Àmùrè, sí méjì, kí èmi lè ya ìbátan tí ó wà láàrín Juda àti láàrín Israẹli.
೧೪ಕೂಡಲೆ ಯೆಹೂದಕ್ಕೂ, ಇಸ್ರಾಯೇಲಿಗೂ ಇದ್ದ ಸಹೋದರಭಾವವನ್ನು ಭಂಗಪಡಿಸಬೇಕೆಂದು “ಒಗ್ಗಟ್ಟು” ಎಂಬ ನನ್ನ ಎರಡನೆಯ ಕೋಲನ್ನು ಮುರಿದುಬಿಟ್ಟೆನು.
15 Olúwa sì wí fún mi pé, “Tún mú ohun èlò aṣiwèrè olùṣọ́-àgùntàn kan sọ́dọ̀ rẹ̀.
೧೫ಆ ಮೇಲೆ ಯೆಹೋವನು ನನಗೆ ಹೀಗೆ ಅಪ್ಪಣೆ ಮಾಡಿದನು, “ನೀನು ಮತ್ತೊಮ್ಮೆ ತಕ್ಕ ಸಲಕರಣೆಗಳನ್ನು ತೆಗೆದುಕೊಂಡು ಮೂರ್ಖ ಕುರುಬನಂತೆ ನಟಿಸು.
16 Nítorí Èmi o gbé Olùṣọ́-àgùntàn kan dìde ni ilẹ̀ náà, tí kí yóò bẹ àwọn tí ó ṣègbé wò, ti kì yóò sì wá èyí tí ó yapa; tí kì yóò ṣe ìtọ́jú èyí tí a pa lára tàbí kí ó bọ́ àwọn tí ara wọn dá pépé: Ṣùgbọ́n òun yóò jẹ ẹran èyí tí ó ni ọ̀rá, àwọn èyí tiwọn fi èékánná wọn ya ara wọn pẹ́rẹpẹ̀rẹ.
೧೬ಇಗೋ, ದೇಶದಲ್ಲಿ ನಾನು ಒಬ್ಬ ಕುರುಬನನ್ನು ನೇಮಿಸುವೆನು; ಅವನು ಹಾಳಾಗುತ್ತಿರುವ ಕುರಿಗಳನ್ನು ನೋಡಿಕೊಳ್ಳನು, ಚದುರಿದವುಗಳನ್ನು ಹುಡುಕನು, ಊನವಾದವುಗಳನ್ನು ಗುಣಪಡಿಸನು, ನೆಟ್ಟಗಿರುವವುಗಳನ್ನು ಸಾಕನು; ಕೊಬ್ಬಿದವುಗಳ ಮಾಂಸವನ್ನು ತಿನ್ನುವನು, ಕುರಿಗಳ ಗೊರಸುಗಳನ್ನು ಚೂರುಚೂರು ಮಾಡುವನು.
17 “Ègbé ni fún olùṣọ́-àgùntàn asán náà, tí ó fi ọ̀wọ́ ẹran sílẹ̀! Idà yóò gé apá rẹ̀ àti ojú ọ̀tún rẹ̀: apá rẹ̀ yóò gbẹ pátápátá, ojú ọ̀tún rẹ̀ yóò sì fọ́ pátápátá!”
೧೭ಮಂದೆಯನ್ನು ಕಾಯದೆ ಬಿಟ್ಟು ಬಿಟ್ಟ ಕುರುಬನ ಗತಿಯನ್ನು ಏನು ಹೇಳಲಿ? ಖಡ್ಗವು ಅವನ ತೋಳಿಗೂ, ಬಲಗಣ್ಣಿಗೂ ತಾಗುವುದು; ಅವನ ತೋಳು ತೀರಾ ಒಣಗಿಹೋಗುವುದು. ಅವನ ಬಲಗಣ್ಣು ಪೂರಾ ಮೊಬ್ಬಾಗುವುದು.”