< Romans 4 >
1 Ǹjẹ́ kín ni àwa ó ha wí nípa Abrahamu, baba wa ti o ṣàwárí èyí? Májẹ̀mú láéláé jẹ́rìí sí i wí pé, a gba Abrahamu là nípa ìgbàgbọ́.
೧ಹಾಗಾದರೆ ವಂಶಾನುಕ್ರಮವಾಗಿ ನಮಗೆ ಮೂಲಪಿತೃವಾಗಿರುವ ಅಬ್ರಹಾಮನು ಈ ವಿಷಯದಲ್ಲಿ ಏನು ಪಡೆದುಕೊಂಡನೆಂದು ಹೇಳಬೇಕು?
2 Nítorí bí a bá dá Abrahamu láre nípa iṣẹ́, ó ní ohun ìṣògo; ṣùgbọ́n kì í ṣe níwájú Ọlọ́run.
೨ಅಬ್ರಹಾಮನು ಪುಣ್ಯಕ್ರಿಯೆಯಿಂದಲೇ ನೀತಿವಂತನಾದ ಪಕ್ಷದಲ್ಲಿ ಹೊಗಳಿಕೊಳ್ಳುವುದಕ್ಕೆ ಅವನಿಗೆ ಆಸ್ಪದವಿರುವುದು; ಆದರೆ ದೇವರ ಮುಂದೆ ಹೊಗಳಿಕೊಳ್ಳುವುದಕ್ಕೆ ಆಸ್ಪದವಿರುವುದಿಲ್ಲ.
3 Ìwé Mímọ́ ha ti wí? “Abrahamu gba Ọlọ́run gbọ́, a sì kà á sí òdodo fún un.”
೩ಇದರ ವಿಷಯದಲ್ಲಿ ಧರ್ಮಶಾಸ್ತ್ರವು ಹೇಳುವುದನ್ನು ಆಲೋಚಿಸಿರಿ, “ಅಬ್ರಹಾಮನು ದೇವರನ್ನು ನಂಬಿದನು; ಆ ನಂಬಿಕೆಯು ಅವನ ಲೆಕ್ಕಕ್ಕೆ ನೀತಿ ಎಂದು ಎಣಿಸಲ್ಪಟ್ಟಿತು” ಎಂದು ಹೇಳುತ್ತದೆ.
4 Ǹjẹ́ fún ẹni tí ó ṣiṣẹ́, a kò ka èrè náà sí oore-ọ̀fẹ́ bí kò ṣe sí ẹ̀tọ́ rẹ̀.
೪ಕೆಲಸ ಮಾಡಿದವನಿಗೆ ಬರುವ ಕೂಲಿಯು ಕೃಪೆಯಿಂದ ದೊರಕುವಂಥದೆಂದು ಎಣಿಕೆಯಾಗುವುದಿಲ್ಲ; ಅದು ಅವನಿಗೆ ಸಲ್ಲತಕ್ಕದ್ದೇ ಎಂದು ಎಣಿಕೆಯಾಗುವುದು.
5 Ṣùgbọ́n fún ẹni tí kò ṣiṣẹ́, tí ó sì ń gba ẹni tí ó ń dá ènìyàn búburú láre gbọ́, a ka ìgbàgbọ́ rẹ̀ sí òdodo.
೫ಆದರೆ ಯಾವನು ಪುಣ್ಯಕ್ರಿಯೆಗಳನ್ನು ಮಾಡಿದವನಾಗಿರದೆ ಪಾಪಾತ್ಮರನ್ನು ನೀತಿವಂತರೆಂದು ನಿರ್ಣಯಿಸುವಾತನಲ್ಲಿ ನಂಬಿಕೆಯಿಡುತ್ತಾನೋ ಅವನ ನಂಬಿಕೆಯೇ ನೀತಿ ಎಂದು ಎಣಿಸಲ್ಪಡುವುದು.
6 Gẹ́gẹ́ bí Dafidi pẹ̀lú ti pe olúwa rẹ̀ náà ní ẹni ìbùkún, ẹni tí Ọlọ́run ka òdodo fún láìsí ti iṣẹ́.
೬ದೇವರು ಯಾವನನ್ನು ಪುಣ್ಯಕ್ರಿಯೆಗಳಿಲ್ಲದೆ ನೀತಿವಂತನೆಂದು ಎಣಿಸುತ್ತಾನೋ ಅವನು ಧನ್ಯನೆಂದು ದಾವೀದನು ಸಹ ಹೇಳುತ್ತಾನೆ. ಹೇಗೆಂದರೆ,
7 Wí pé, “Ìbùkún ni fún àwọn ẹni tí a dárí ìrékọjá wọn jì, tí a sì bo ẹ̀ṣẹ̀ wọn mọ́lẹ̀.
೭“ಯಾರ ಅಪರಾಧಗಳು ಪರಿಹಾರವಾಗಿದೆಯೋ, ಯಾರ ಪಾಪಗಳು ಕ್ಷಮಿಸಲ್ಪಟ್ಟಿವೆಯೋ ಅವರೇ ಧನ್ಯರು.
8 Ìbùkún ni fún ọkùnrin náà ẹni tí Olúwa kò ka ẹ̀ṣẹ̀ sí lọ́rùn.”
೮ಕರ್ತನು ಯಾವನ ಪಾಪವನ್ನು ಲೆಕ್ಕಕ್ಕೆ ತರುವುದಿಲ್ಲವೋ ಆ ಮನುಷ್ಯನೇ ಧನ್ಯನು.”
9 Ìbùkún yìí ha jẹ́ ti àwọn akọlà nìkan, tàbí ti àwọn aláìkọlà pẹ̀lú? Nítorí tí a wí pé, Abrahamu gba Ọlọ́run gbọ́, a sì kà á sí òdodo fún un.
೯ಈ ಶುಭವು ಸುನ್ನತಿಯಾದವರಿಗೆ ಮಾತ್ರವೋ? ಅಥವಾ ಸುನ್ನತಿಯಿಲ್ಲದವರಿಗೆ ಸಹ ಉಂಟೋ? “ಅಬ್ರಹಾಮನ ಲೆಕ್ಕಕ್ಕೆ ಅವನ ನಂಬಿಕೆಯೇ ನೀತಿಯೆಂದು ಎಣಿಸಲ್ಪಟ್ಟಿತು” ಎಂಬುದಾಗಿ ನಾವು ಹೇಳುತ್ತೇವೆ.
10 Báwo ni a ṣe kà á sí i? Nígbà tí ó wà ní ìkọlà tàbí ní àìkọlà? Kì í ṣe ni ìkọlà, ṣùgbọ́n ní àìkọlà ni.
೧೦ಅದು ಯಾವಾಗ ಎಣಿಸಲ್ಪಟ್ಟಿತು? ಅವನಿಗೆ ಸುನ್ನತಿಯಾದ ಮೇಲೆಯೋ? ಸುನ್ನತಿಯಾಗುವುದಕ್ಕೆ ಮೊದಲೋ? ಸುನ್ನತಿಯಾದ ಮೇಲೆ ಅಲ್ಲ, ಸುನ್ನತಿಯಾಗುವುದಕ್ಕೆ ಮೊದಲೇ ಎಣಿಸಲ್ಪಟ್ಟಿತು.
11 Ó sì gbé àmì ìkọlà àti èdìdì òdodo ìgbàgbọ́ tí ó ní nígbà tí ó wà ní àìkọlà kí ó lè ṣe baba gbogbo àwọn tí ó gbàgbọ́, bí a kò tilẹ̀ kọ wọ́n ní ilà kí a lè ka òdodo sí wọn pẹ̀lú.
೧೧ಅನಂತರ ಸುನ್ನತಿಯನ್ನು, ಮೊದಲೇ ಅವನಿಗಿದ್ದ ನಂಬಿಕೆಯ ಗುರುತಾಗಿಯೂ, ಮುದ್ರೆಯಾಗಿಯೂ ಹೊಂದಿದನು. ಹೀಗಿರುವುದರಿಂದ ಅವನು ನಂಬುವವರೆಲ್ಲರಿಗೂ, ಅವರು ಸುನ್ನತಿಯಿಲ್ಲದವರಾಗಿದಾಗ್ಯೂ ಮೂಲಪಿತೃವಾದನು; ಇದರಿಂದ ಅವರು ನೀತಿವಂತರೆಂದು ಎಣಿಸಲ್ಪಟ್ಟರು.
12 Àti baba àwọn tí ìkọlà tí kì í ṣe pé a kàn kọlà fún nìkan, ṣùgbọ́n tiwọn ń tẹ̀lé àpẹẹrẹ ìgbàgbọ́ tí baba wa Abrahamu ní, kí a tó kọ ọ́ nílà.
೧೨ಇದಲ್ಲದೆ ಸುನ್ನತಿಯವರಲ್ಲಿ ಸುನ್ನತಿಹೊಂದಿದ್ದವರಿಗೆ ಮಾತ್ರವಲ್ಲದೆ, ನಮ್ಮ ಪಿತೃವಾಗಿರುವ ಅಬ್ರಹಾಮನಿಗೆ ಸುನ್ನತಿಯಾಗುವುದಕ್ಕೂ ಮೊದಲೇ ಇದ್ದ ನಂಬಿಕೆಯ ಕ್ರಮವನ್ನು ಅನುಸರಿಸಿ ನಡೆಯುತ್ತಾರೋ ಅವರಿಗೆ ಸಹ ಮೂಲ ತಂದೆಯಾಗಿದ್ದಾನೆ.
13 Ìlérí fún Abrahamu àti fún irú-ọmọ rẹ̀, ni pé, wọn ó jogún ayé, kì í ṣe nípa òfin bí kò ṣe nípa òdodo ti ìgbàgbọ́.
೧೩ನೀನು ಲೋಕಕ್ಕೆ ಬಾಧ್ಯನಾಗುವಿ ಎಂಬ ವಾಗ್ದಾನವು ಅಬ್ರಹಾಮನಿಗಾಗಲಿ ಅವನ ಸಂತತಿಯವರಿಗಾಗಲಿ ಧರ್ಮಶಾಸ್ತ್ರದಿಂದ ಆದದ್ದಲ್ಲ; ನಂಬಿಕೆಯಿಂದ ಬರುವ ನೀತಿಯಾಗಿದೆ.
14 Nítorí bí àwọn tí ń ṣe ti òfin bá jẹ ajogún, ìgbàgbọ́ di asán, ìlérí sì di aláìlágbára.
೧೪ಧರ್ಮಶಾಸ್ತ್ರವನ್ನು ಅನುಸರಿಸುವವರು ಲೋಕಕ್ಕೆ ಬಾಧ್ಯರಾಗಿದ್ದರೆ ನಂಬಿಕೆಯು ವ್ಯರ್ಥವಾಯಿತು, ವಾಗ್ದಾನವು ನಿರರ್ಥಕವಾಯಿತು.
15 Nítorí òfin ń ṣiṣẹ́ ìbínú, ṣùgbọ́n ní ibi tí òfin kò bá sí, ìrúfin kò sí níbẹ̀.
೧೫ಯಾಕೆಂದರೆ ಧರ್ಮಶಾಸ್ತ್ರವು ಜನರನ್ನು ದೇವರ ಕೋಪಕ್ಕೆ ಗುರಿಮಾಡುವಂಥದ್ದು, ಆದರೆ ಧರ್ಮಶಾಸ್ತ್ರವಿಲ್ಲದ ಪಕ್ಷದಲ್ಲಿ ಅದರ ಉಲ್ಲಂಘನೆಯೂ ಇಲ್ಲ.
16 Nítorí náà ni ó ṣe gbé e ka orí ìgbàgbọ́, kí ìlérí náà bá a lè sinmi lé oore-ọ̀fẹ́, kí a sì lè mú un dá gbogbo irú-ọmọ lójú, kì í ṣe fún àwọn tí ń pa òfin mọ́ nìkan, ṣùgbọ́n bí kò ṣe pẹ̀lú fún àwọn ti ó pín nínú ìgbàgbọ́ Abrahamu, ẹni tí í ṣe baba gbogbo wa pátápátá,
೧೬ಆದಕಾರಣ ಆ ಬಾಧ್ಯತೆಯು ಕೃಪೆಯಿಂದಲೇ ದೊರೆಯುವಂಥದ್ದಾಗಿದೆ, ಅದು ನಂಬಿಕೆಯ ಮೂಲಕವೇ ಸಿಕ್ಕುತ್ತದೆ, ಹೀಗೆ ಆ ವಾಗ್ದಾನವು ನಮ್ಮೆಲ್ಲರ ತಂದೆಯಾದಅಬ್ರಹಾಮನ ಸಂತತಿಯವರೆಲ್ಲರಿಗೂ, ಅಂದರೆ ಧರ್ಮಶಾಸ್ತ್ರವನ್ನು ಆಧಾರ ಮಾಡಿಕೊಂಡವರಿಗೆ ಮಾತ್ರವಲ್ಲದೆ, ಅಬ್ರಹಾಮನಂಥ ನಂಬಿಕೆ ಇರುವವರೆಲ್ಲರಿಗೂ ಸಹ ಸ್ಥಿರವಾಗಿದೆ.
17 Gẹ́gẹ́ bí a ti kọ ọ́ pé, “Mo ti fi ọ́ ṣe baba orílẹ̀-èdè púpọ̀.” Níwájú Ọlọ́run ẹni tí òun gbàgbọ́, ẹni tí ó sọ òkú di ààyè, tí ó sì pè àwọn ohun tí kò sí bí ẹni pé wọ́n wà.
೧೭“ನಾನು ನಿನ್ನನ್ನು ಅನೇಕ ಜನಾಂಗಗಳಿಗೆ ಪಿತನಾಗಿ ನೇಮಿಸಿದ್ದೇನೆಂದು” ಶಾಸ್ತ್ರದಲ್ಲಿ ಬರೆದಿದೆಯಲ್ಲ. ದೇವರು ಸತ್ತವರನ್ನು ಬದುಕಿಸುವವನಾಗಿಯೂ ಮತ್ತು ಅಸ್ತಿತ್ವದಲ್ಲಿ ಇಲ್ಲದ್ದನ್ನು ಅಸ್ತಿತ್ವಕ್ಕೆ ತರುವಂಥವನೂ ಆದ ದೇವರಲ್ಲಿ ಅಬ್ರಹಾಮನು ನಂಬಿಕೆಯಿಟ್ಟನು.
18 Nígbà tí ìrètí kò sí mọ́, Abrahamu gbàgbọ́ nínú ìrètí bẹ́ẹ̀ ni ó sì di baba orílẹ̀-èdè púpọ̀, gẹ́gẹ́ bí èyí tí a wí fún un pé, “Báyìí ni irú-ọmọ rẹ̀ yóò rí.”
೧೮“ನಿನ್ನ ಸಂತಾನವು ನಕ್ಷತ್ರಗಳಷ್ಟಾಗುವುದು” ಎಂಬುದಾಗಿ ತನಗೆ ಹೇಳಲ್ಪಟ್ಟ ಆ ನಿರೀಕ್ಷೆಗೆ ಆಸ್ಪದವಿಲ್ಲದಿರುವಾಗಲೂ ಅಬ್ರಹಾಮನು ತಾನು ಬಹು ಜನಾಂಗಗಳಿಗೆ ಪಿತನಾಗುವೆನೆಂದು ನಿರೀಕ್ಷೆಗೆ ವಿರುದ್ಧವಾಗಿ ನಿರೀಕ್ಷಿಸಿ ನಂಬಿದನು.
19 Ẹni tí kò rẹ̀wẹ̀sì nínú ìgbàgbọ́, nígbà tí ó mọ pe ara òun tìkára rẹ̀ tí ó ti kú tan, nítorí ó tó bí ẹni ìwọ̀n ọgọ́rùn-ún ọdún, àti nígbà tí ó ro ti yíyàgàn inú Sara.
೧೯ಅವನು ಹೆಚ್ಚು ಕಡಿಮೆ ನೂರು ವರ್ಷದವನಾಗಿದ್ದು ತನ್ನ ದೇಹವು ಆಗಲೇ ಮೃತಪ್ರಾಯವಾಯಿತೆಂದೂ ಸಾರಳಿಗೆ ಗರ್ಭಕಾಲ ಕಳೆದು ಹೋಯಿತೆಂದು ಪರಿಗಣಿಸಿದ್ದಾಗ್ಯೂ ಅವನ ನಂಬಿಕೆಯು ಕುಂದಲಿಲ್ಲ.
20 Kò fi àìgbàgbọ́ ṣiyèméjì nípa ìlérí Ọlọ́run; ṣùgbọ́n ó lágbára sí i nínú ìgbàgbọ́ bí ó ti fi ògo fún Ọlọ́run,
೨೦ದೇವರು ಮಾಡಿದ ವಾಗ್ದಾನದ ವಿಷಯದಲ್ಲಿ ಅವನು ಅಪನಂಬಿಕೆಯಿಂದ ಚಂಚಲಚಿತ್ತನಾಗಲಿಲ್ಲ.
21 pẹ̀lú ìdánilójú kíkún pé, Ọlọ́run lè ṣe ohun tí ó ti ṣe ìlérí rẹ̀.
೨೧ದೇವರನ್ನು ಘನಪಡಿಸುವವನಾಗಿ ಆತನು ತನ್ನ ವಾಗ್ದಾನವನ್ನು ನೆರವೇರಿಸುವುದಕ್ಕೆ ಸಮರ್ಥನೆಂದು ಪೂರ್ಣದೃಢತೆಯುಳ್ಳವನಾದನು.
22 Nítorí náà ni a sì ṣe kà á sí òdodo fún un.
೨೨ಆದ್ದರಿಂದ ಆ ನಂಬಿಕೆಯು ಅವನ ಲೆಕ್ಕಕ್ಕೆ ನೀತಿಯೆಂದು ಎಣಿಸಲ್ಪಟ್ಟಿತು.
23 Ṣùgbọ́n ọ̀rọ̀ náà, “A kà á sí òdodo fún un,” ni a kọ kì í ṣe nítorí tirẹ̀ nìkan.
೨೩ಆದರೆ ಅದು ಅವನ ಲೆಕ್ಕಕ್ಕೆ ನೀತಿಯೆಂದು ಎಣಿಸಲ್ಪಟ್ಟಿತೆಂಬುದು ಅವನಿಗೋಸ್ಕರ ಮಾತ್ರವಲ್ಲದೆ ನಮಗೋಸ್ಕರವೂ ಬರೆದಿರುವುದು.
24 Ṣùgbọ́n nítorí tiwa pẹ̀lú. A ó sì kà á sí fún wa, bí àwa bá gba ẹni tí ó gbé Jesu Olúwa wa dìde kúrò nínú òkú gbọ́.
೨೪ನಮ್ಮ ಕರ್ತನಾದ ಯೇಸುವನ್ನು ಸತ್ತವರೊಳಗಿಂದ ಎಬ್ಬಿಸಿದ ದೇವರನ್ನು ನಂಬುವ ನಮಗೂ ಆ ನಂಬಿಕೆಯು ನೀತಿಯೆಂದು ಎಣಿಸಲ್ಪಡುವುದು.
25 Ẹni tí a pa fún ẹ̀ṣẹ̀ wa, tí a sì jí dìde nítorí ìdáláre wa.
೨೫ದೇವರು ಯೇಸುವನ್ನು ನಮ್ಮ ಅಪರಾಧಗಳ ನಿಮಿತ್ತ ಮರಣಕ್ಕೆ ಒಪ್ಪಿಸಿಕೊಟ್ಟು ನಮಗೆ ನೀತಿವಂತರೆಂಬ ನಿರ್ಣಯವು ಉಂಟಾಗುವುದಕ್ಕಾಗಿಯೇ ಜೀವದಿಂದ ಎಬ್ಬಿಸಲ್ಪಟ್ಟನು.