< Revelation 1 >
1 Ìfihàn ti Jesu Kristi, tí Ọlọ́run fi fún un, láti fihàn fún àwọn ìránṣẹ́ rẹ̀, ohun tí kò le ṣàìṣẹ ní lọ́ọ́lọ́ọ́; ó sì ránṣẹ́, ó sì fi í hàn láti ọwọ́ angẹli rẹ̀ wá fún Johanu, ìránṣẹ́ rẹ̀,
೧ಯೇಸು ಕ್ರಿಸ್ತನ ಪ್ರಕಟನೆಯು, ಆತನು ಬೇಗನೆ ಸಂಭವಿಸಬೇಕಾಗಿರುವ ಸಂಗತಿಗಳನ್ನು ತನ್ನ ದಾಸರಿಗೆ ತೋರಿಸುವುದಕ್ಕಾಗಿ ದೇವರಿಂದ ಈ ಪ್ರಕಟಣೆಯನ್ನು ಹೊಂದಿದನು. ಇದಲ್ಲದೆ ಆತನು ತನ್ನ ದೂತನನ್ನು ಕಳುಹಿಸಿ ಅವನ ಮೂಲಕ ಆ ಸಂಗತಿಗಳನ್ನು ತನ್ನ ದಾಸನಾದ ಯೋಹಾನನಿಗೆ ತಿಳಿಸಿದನು.
2 ẹni tí ó jẹ́rìí ohun gbogbo tí ó rí, èyí ì ni ọ̀rọ̀ Ọlọ́run, àti ẹ̀rí ti Jesu Kristi.
೨ಯೋಹಾನನು ದೇವರ ವಾಕ್ಯದ ಕುರಿತಾಗಿಯೂ ಯೇಸು ಕ್ರಿಸ್ತನು ಹೇಳಿದ ಸಾಕ್ಷಿಯ ವಿಷಯವಾಗಿಯೂ ತಾನು ಕಂಡದ್ದನ್ನೆಲ್ಲಾ ತಿಳಿಸುವವನಾಗಿ ಸಾಕ್ಷಿಕೊಟ್ಟನು.
3 Ẹni ìbùkún ni ẹni tí ń kà, àti àwọn tí ó ń gbọ́ ọ̀rọ̀ ìsọtẹ́lẹ̀ yìí, tí ó sì ń pa nǹkan wọ̀n-ọn-nì tí a kọ sínú rẹ̀ mọ́, nítorí ìgbà kù sí dẹ̀dẹ̀.
೩ಈ ಪ್ರವಾದನಾ ವಾಕ್ಯಗಳನ್ನು ಓದುವವನೂ, ಕೇಳುವವರೂ ಮತ್ತು ಇದರಲ್ಲಿ ಬರೆದಿರುವುದನ್ನು ಕೈಕೊಂಡು ನಡೆಯುವವರೂ ಧನ್ಯರು. ಏಕೆಂದರೆ ಅವು ನೆರವೇರುವ ಕಾಲವು ಸಮೀಪವಾಗಿದೆ.
4 Johanu, Sí àwọn ìjọ méje tí ń bẹ ní Asia: Oore-ọ̀fẹ́ fún yín, àti àlàáfíà, láti ọ̀dọ̀ ẹni tí ó ń bẹ, tí ó sì ti wà, tí ó sì ń bọ̀ wá; àti láti ọ̀dọ̀ àwọn ẹ̀mí méje tí ń bẹ níwájú ìtẹ́ rẹ̀;
೪ಆಸ್ಯಸೀಮೆಯಲ್ಲಿರುವ ಏಳು ಸಭೆಗಳಿಗೆ ಯೋಹಾನನು ಬರೆಯುವುದೇನಂದರೆ; ಇರುವಾತನೂ, ಇದ್ದಾತನೂ, ಬರುವಾತನೂ ಆಗಿರುವಾತನಿಂದ ಮತ್ತು ಆತನ ಸಿಂಹಾಸನದ ಮುಂದಿರುವ ಏಳು ಆತ್ಮಗಳಿಂದ
5 àti láti ọ̀dọ̀ Jesu Kristi, ẹlẹ́rìí olóòtítọ́, àkọ́bí nínú àwọn òkú, àti aláṣẹ àwọn ọba ayé. Ẹni tí ó fẹ́ wa, ẹni tí ó gbà wá kúrò lọ́wọ́ ẹ̀ṣẹ̀ wa nípa ẹ̀jẹ̀ rẹ̀,
೫ಮತ್ತು ನಂಬಿಗಸ್ತ ಸಾಕ್ಷಿಯೂ, ಸತ್ತವರೊಳಗಿಂದ ಮೊದಲು ಎದ್ದುಬಂದಾತನೂ ಮತ್ತು ಭೂರಾಜರ ಅಧಿಪತಿಯೂ ಆಗಿರುವ ಯೇಸು ಕ್ರಿಸ್ತನಿಂದ ನಿಮಗೆ ಕೃಪೆಯೂ ಶಾಂತಿಯೂ ಆಗಲಿ. ನಮ್ಮನ್ನು ಪ್ರೀತಿಸುವಾತನೂ ತನ್ನ ಪವಿತ್ರವಾದ ರಕ್ತದ ಮೂಲಕ ನಮ್ಮನ್ನು ಪಾಪಗಳಿಂದ ಬಿಡಿಸಿದಾತನೂ,
6 tí ó sì ti fi wá jẹ ọba àti àlùfáà láti sin Ọlọ́run àti Baba rẹ; tirẹ̀ ni ògo àti ìjọba láé àti láéláé. Àmín. (aiōn )
೬ನಮ್ಮನ್ನು ದೇವರ ರಾಜ್ಯವನ್ನಾಗಿಯೂ ತನ್ನ ತಂದೆಯಾದ ದೇವರಿಗೆ ಯಾಜಕರನ್ನಾಗಿಯೂ ಮಾಡಿದಾತನಿಗೆ ಯುಗಯುಗಾಂತರಗಳಲ್ಲಿಯೂ ಮಹಿಮೆಯು ಬಲವು ಉಂಟಾಗಲಿ. ಆಮೆನ್. (aiōn )
7 “Kíyèsi i, o ń bọ̀ nínú àwọsánmọ̀, gbogbo ojú ni yóò sì rí i, àti àwọn tí ó gún un ní ọ̀kọ̀ pẹ̀lú”; àti gbogbo orílẹ̀-èdè ayé ni “yóò sì máa pohùnréré ẹkún nítorí rẹ̀.”
೭ನೋಡಿರಿ, ಆತನು ಮೇಘಗಳೊಂದಿಗೆ ಬರುತ್ತಾನೆ, ಎಲ್ಲರ ಕಣ್ಣುಗಳು ಆತನನ್ನು ನೋಡುವವು, ಆತನನ್ನು ಇರಿದವರು ಸಹ ಅದನ್ನು ಕಾಣುವರು, ಭೂಮಿಯಲ್ಲಿರುವ ಎಲ್ಲಾ ಕುಲದವರು ಆತನ ನಿಮಿತ್ತ ದುಃಖಿಸುವರು. ಹೌದು, ಹಾಗೆಯೇ ಆಗುವುದು. ಆಮೆನ್.
8 “Èmi ni Alfa àti Omega,” ni Olúwa Ọlọ́run wí, “ẹni tí ó ń bẹ, tí ó ti wà, tí ó sì ń bọ̀ wá, alágbára.”
೮“ನಾನೇ ಆದಿಯೂ ಅಂತ್ಯವೂ, ಇರುವಾತನೂ, ಇದ್ದಾತನೂ, ಬರುವಾತನೂ, ಸರ್ವಶಕ್ತನೂ” ಎಂದು ದೇವರಾದ ಕರ್ತನು ಹೇಳುತ್ತಾನೆ.
9 Èmi, Johanu, arákùnrin yín àti alábápín pẹ̀lú yín nínú wàhálà àti ìjọba àti sùúrù tí ń bẹ nínú Jesu, wà ní erékúṣù tí a ń pè ní Patmo, nítorí ọ̀rọ̀ Ọlọ́run, àti nítorí ẹ̀rí Jesu Kristi.
೯ನಿಮ್ಮ ಸಹೋದರನೂ ಯೇಸುವಿನ ನಿಮಿತ್ತ ಹಿಂಸೆಯಲ್ಲಿ, ರಾಜ್ಯದಲ್ಲಿ, ತಾಳ್ಮೆಯಲ್ಲಿ, ನಿಮ್ಮೊಂದಿಗೆ ಪಾಲುಗಾರನೂ ಆಗಿರುವ ಯೋಹಾನನೆಂಬ ನಾನು ದೇವರ ವಾಕ್ಯಕ್ಕೋಸ್ಕರ ಯೇಸುವಿನ ವಿಷಯವಾಗಿ ಸಾಕ್ಷಿ ನೀಡಲು ಪತ್ಮೊಸ್ ಎಂಬ ದ್ವೀಪದಲ್ಲಿದ್ದೆನು.
10 Mo wà nínú Ẹ̀mí ní ọjọ́ Olúwa, mo sì gbọ́ ohùn ńlá kan lẹ́yìn mi, bí ìró ìpè,
೧೦ನಾನು ಕರ್ತನ ದಿನದಲ್ಲಿ ದೇವರಾತ್ಮವಶನಾಗಿರಲು, ನನ್ನ ಬೆನ್ನ ಹಿಂದೆ ಮಹಾಶಬ್ದವೊಂದು ಕೇಳಿಸಿತು. ಅದು ತುತ್ತೂರಿಯ ನಾದದಂತಿತ್ತು.
11 Ó ń wí pé, “Kọ́ ìwé rẹ̀, ohun tí ìwọ rí, kí ó sí fi ránṣẹ́ sí àwọn ìjọ méje; sí Efesu, àti sí Smirna, àti sí Pargamu, àti sí Tiatira, àti sí Sardi, àti sí Filadelfia, àti sí Laodikea.”
೧೧ಅದು, “ನೀನು ನೋಡುವುದನ್ನು ಒಂದು ಪುಸ್ತಕದಲ್ಲಿ ಬರೆದು ಎಫೆಸ, ಸ್ಮುರ್ನ, ಪೆರ್ಗಮ, ಥುವತೈರ, ಸಾರ್ದಿಸ್, ಫಿಲದೆಲ್ಫಿಯ, ಲವೊದಿಕೀಯ, ಎಂಬೀ ಏಳು ಸಭೆಗಳಿಗೆ ಕಳುಹಿಸಬೇಕು” ಎಂದು ನುಡಿಯಿತು.
12 Mo sì yí padà láti wo ohùn tí ń bá mi sọ̀rọ̀. Nígbà tí mo yípadà, mo rí ọ̀pá fìtílà wúrà méje,
೧೨ನನ್ನ ಸಂಗಡ ಮಾತನಾಡುತ್ತಿದ್ದ ಶಬ್ದವು ಯಾರದೆಂದು ನೋಡುವುದಕ್ಕೆ ನಾನು ಹಿಂದಕ್ಕೆ ತಿರುಗಿದೆನು. ತಿರುಗಿದಾಗ ಏಳು ಚಿನ್ನದ ದೀಪಸ್ತಂಭಗಳನ್ನೂ
13 àti láàrín àwọn ọ̀pá fìtílà náà, ẹnìkan tí ó dàbí “ọmọ ènìyàn,” tí a wọ̀ ní aṣọ tí ó kanlẹ̀ dé ẹsẹ̀, tí a sì fi àmùrè wúrà dì ní ẹ̀gbẹ́.
೧೩ಆ ದೀಪಸ್ತಂಭಗಳ ಮಧ್ಯದಲ್ಲಿ ಮನುಷ್ಯಕುಮಾರನಂತೆ ಇರುವವನನ್ನೂ ಕಂಡೆನು. ಆತನು ನಿಲುವಂಗಿಯನ್ನು ಧರಿಸಿ ಚಿನ್ನದ ಪಟ್ಟಿಯನ್ನು ಎದೆಗೆ ಕಟ್ಟಿಕೊಂಡಿದ್ದನು.
14 Orí rẹ̀ àti irun rẹ̀ funfun bí ẹ̀gbọ̀n òwú, ó funfun bí yìnyín; ojú rẹ̀ sì dàbí, ọwọ́ iná.
೧೪ಆತನ ತಲೆಯ ಕೂದಲು ಬಿಳೀ ಉಣ್ಣೆಯಂತೆಯೂ ಹಿಮದಂತೆಯೂ ಬೆಳ್ಳಗಿತ್ತು. ಆತನ ಕಣ್ಣುಗಳು ಬೆಂಕಿಯ ಜ್ವಾಲೆಯಂತೆಯೂ,
15 Ẹsẹ̀ rẹ̀ sì dàbí idẹ dáradára, bí ẹni pé a dà á nínú ìléru; ohùn rẹ̀ sì dàbí ìró omi púpọ̀.
೧೫ಆತನ ಪಾದಗಳು ಕುಲುಮೆಯಲ್ಲಿ ಕಾಯಿಸಿದ ತಾಮ್ರದಂತೆಯೂ, ಆತನ ಧ್ವನಿಯು ಜಲಪ್ರವಾಹದ ಘೋಷದಂತೆಯೂ ಇದ್ದವು.
16 Ó sì ní ìràwọ̀ méje ní ọwọ́ ọ̀tún rẹ̀; àti láti ẹnu rẹ̀ wá ni idà olójú méjì mímú ti jáde. Ojú rẹ̀ sì dàbí oòrùn tí ó ń fi agbára rẹ̀ hàn.
೧೬ಆತನ ಬಲಗೈಯಲ್ಲಿ ಏಳು ನಕ್ಷತ್ರಗಳಿದ್ದವು, ಆತನ ಬಾಯೊಳಗಿಂದ ಹದವಾದ ಇಬ್ಬಾಯಿ ಕತ್ತಿಯು ಹೊರಡುತ್ತಿತ್ತು. ಆತನ ಮುಖವು ಪ್ರಬಲವಾಗಿ ಪ್ರಕಾಶಿಸುವ ಸೂರ್ಯನಂತಿತ್ತು.
17 Nígbà tí mo rí i, mo wólẹ̀ ní ẹsẹ̀ rẹ̀ bí ẹni tí ó kú. Ó sì fi ọwọ́ ọ̀tún rẹ̀ lé mi, ó ń wí fún mi pé, “Má ṣe bẹ̀rù. Èmi ni ẹni ìṣáájú àti ẹni ìkẹyìn.
೧೭ನಾನು ಆತನನ್ನು ಕಂಡಾಗ ಸತ್ತವನ ಹಾಗೆ ಆತನ ಪಾದಗಳ ಮುಂದೆ ಬಿದ್ದೆನು. ಆತನು ತನ್ನ ಬಲಗೈಯನ್ನು ನನ್ನ ಮೇಲಿಟ್ಟು, “ಹೆದರಬೇಡ, ನಾನು ಮೊದಲನೆಯವನೂ, ಕಡೆಯವನೂ,
18 Èmi ni ẹni tí ó ń bẹ láààyè, tí ó sì ti kú; sì kíyèsi i, èmi sì ń bẹ láààyè sí i títí láé! Mo sì ní kọ́kọ́rọ́ ikú àti ti ipò òkú lọ́wọ́. (aiōn , Hadēs )
೧೮ಸದಾ ಜೀವಿಸುವವನೂ ಆಗಿದ್ದೇನೆ. ಸತ್ತವನಾಗಿದ್ದೆನು, ಆದರೆ ಇಗೋ ಯುಗಯುಗಾಂತರಕ್ಕೂ ಜೀವಿಸುವವನಾಗಿದ್ದೇನೆ. ಮೃತ್ಯುವಿನ ಮತ್ತು ಪಾತಾಳದ ಬೀಗದ ಕೈಗಳು ನನ್ನಲ್ಲಿ ಇವೆ. (aiōn , Hadēs )
19 “Kọ̀wé nítorí náà ohun tí ìwọ ti rí, àti ti ohun tí ń bẹ, àti ti ohun tí yóò hù lẹ́yìn èyí;
೧೯ಆದ್ದರಿಂದನೀನು ಕಂಡವುಗಳನ್ನೂ ಈಗ ನಡೆಯುತ್ತಿರುವವುಗಳನ್ನೂ ಮುಂದೆ ಆಗಬೇಕಾದವುಗಳನ್ನೂ ಬರೆ.
20 ohun ìjìnlẹ̀ tí ìràwọ̀ méje náà tí ìwọ rí ní ọwọ́ ọ̀tún mi, àti ọ̀pá wúrà fìtílà méje náà. Ìràwọ̀ méje ni àwọn angẹli ìjọ méje náà: àti ọ̀pá fìtílà méje náà ní àwọn ìjọ méje.
೨೦ನನ್ನ ಬಲಗೈಯಲ್ಲಿ ನೀನು ಕಂಡ ಏಳು ನಕ್ಷತ್ರಗಳ ಮತ್ತು ಏಳು ಚಿನ್ನದ ದೀಪಸ್ತಂಭಗಳ ಗೂಢಾರ್ಥವನ್ನು ವಿವರಿಸುತ್ತೇನೆ. ಆ ಏಳು ನಕ್ಷತ್ರಗಳು ಅಂದರೆ ಏಳು ಸಭೆಗಳದೂತರು, ಆ ಏಳು ದೀಪಸ್ತಂಭಗಳು ಅಂದರೆಆ ಏಳು ಸಭೆಗಳು.”