< Psalms 93 >
1 Olúwa ń jẹ ọba, ọláńlá ni ó wọ̀ ní aṣọ; ọláńlá ni Olúwa wọ̀ ní aṣọ àti ìhámọ́ra rẹ̀ pẹ̀lú agbára. Ó fi ìdí ayé múlẹ̀; kò sì le è yí.
೧ಯೆಹೋವನು ರಾಜ್ಯಾಧಿಕಾರವನ್ನು ವಹಿಸಿದ್ದಾನೆ; ಆತನು ಮಹಿಮಾ ವಸ್ತ್ರವನ್ನು ಧರಿಸಿದ್ದಾನೆ, ಶೌರ್ಯವನ್ನು ನಡುಕಟ್ಟನ್ನಾಗಿ ಬಿಗಿದಿದ್ದಾನೆ; ಹೌದು, ಭೂಲೋಕವು ಸ್ಥಿರವಾಗಿರುವುದು ಅದು ಕದಲುವುದಿಲ್ಲ.
2 Ìjọba rẹ̀ wà láti ọjọ́ pípẹ́; ìwọ wà títí ayérayé.
೨ಅನಾದಿಯಿಂದ ನಿನ್ನ ಸಿಂಹಾಸನವು ಸ್ಥಿರವಾಗಿದೆ; ಯುಗಯುಗಾಂತರದಿಂದಲೂ ನೀನು ಇರುವಿ.
3 A ti gbé òkun sókè, Olúwa, òkun ti gbé ohùn wọn sókè; òkun ti gbé rírú omi wọn sókè.
೩ಯೆಹೋವನೇ, ನದಿಗಳು ಮೊರೆದವು, ನದಿಗಳು ಭೋರ್ಗರೆದವು; ನದಿಗಳು ಘೋಷಿಸುತ್ತವೆ.
4 Ó ni ògo ju àrá omi ńlá lọ, ó ni ògo ju òkun rírú lọ Olúwa ga ní ògo.
೪ಜಲರಾಶಿಗಳ ಘೋಷಕ್ಕಿಂತಲೂ, ಮಹಾತರಂಗಗಳ ಗರ್ಜನೆಗಿಂತಲೂ, ಉನ್ನತದಲ್ಲಿರುವ ಯೆಹೋವನ ಮಹಿಮೆಯು ಗಾಂಭೀರ್ಯವುಳ್ಳದ್ದು.
5 Ẹ̀rí rẹ̀ dúró ṣinṣin; ìwà mímọ́ ni ó fi ṣe ilé rẹ̀ lọ́ṣọ̀ọ́ fún ọjọ́ àìlópin, Olúwa.
೫ಯೆಹೋವನೇ, ನಿನ್ನ ಕಟ್ಟಳೆಗಳು ಬಹುಖಂಡಿತವಾಗಿವೆ; ಸದಾ ನಿನ್ನ ಮನೆಗೆ ಯೋಗ್ಯವಾದದ್ದು ಪರಿಶುದ್ಧತ್ವವೇ.