< Psalms 30 >
1 Saamu. Orin. Fún ìyàsímímọ́ Tẹmpili. Ti Dafidi. Èmi yóò kókìkí i rẹ, Olúwa, nítorí ìwọ ni ó gbé mi lékè tí ìwọ kò sì jẹ́ kí àwọn ọ̀tá mi kí ó yọ̀ mí.
೧ದಾವೀದನ ಕೀರ್ತನೆ, ದೇವಾಲಯದ ಪ್ರತಿಷ್ಠೆಯಲ್ಲಿ ಹಾಡತಕ್ಕದ್ದು. ಯೆಹೋವನೇ, ನನ್ನ ಶತ್ರುಗಳು ಸಂತೋಷಿಸುವುದಕ್ಕೆ ಅವಕಾಶಕೊಡದೆ, ನನ್ನನ್ನು ಉದ್ಧರಿಸಿದ್ದರಿಂದ ನಿನ್ನನ್ನು ಕೊಂಡಾಡುವೆನು.
2 Olúwa Ọlọ́run mi, èmi ké pè ọ́ fún ìrànlọ́wọ́, ìwọ sì ti wò mí sàn.
೨ಯೆಹೋವನೇ, ನನ್ನ ದೇವರೇ, ನಿನಗೆ ಮೊರೆಯಿಡಲು ನನ್ನನ್ನು ಸ್ವಸ್ಥಮಾಡಿದಿ.
3 Olúwa, ìwọ ti yọ ọkàn mi jáde kúrò nínú isà òkú, mú mi padà bọ̀ sípò alààyè kí èmi má ba à lọ sínú ihò. (Sheol )
೩ಯೆಹೋವನೇ, ನನ್ನ ಪ್ರಾಣವನ್ನು ಪಾತಾಳದಿಂದಲೂ ಎತ್ತಿದಿಯಲ್ಲಾ; ನನ್ನನ್ನು ಸಮಾಧಿಯಲ್ಲಿ ಸೇರಿಸದೆ ಬದುಕಿಸಿದಿಯಲ್ಲಾ. (Sheol )
4 Kọ orin ìyìn sí Olúwa, ẹ̀yin olódodo; kí ẹ sì fi ọpẹ́ fún orúkọ rẹ̀ mímọ́.
೪ಯೆಹೋವನ ಭಕ್ತರೇ, ಆತನನ್ನು ಕೀರ್ತಿಸಿರಿ; ಆತನ ಪರಿಶುದ್ಧನಾಮವನ್ನು ಕೊಂಡಾಡಿರಿ.
5 Nítorí pé ìbínú rẹ̀ wà fún ìgbà díẹ̀, ojúrere rẹ̀ wà títí ayérayé; ẹkún lè pẹ́ títí di alẹ́, ṣùgbọ́n ayọ̀ yóò wá ní òwúrọ̀.
೫ಆತನ ಕೋಪವು ಕ್ಷಣಮಾತ್ರವೇ; ಆತನ ಅನುಗ್ರಹವೋ ಜೀವಮಾನವೆಲ್ಲಾ ಇರುವುದು; ಸಂಜೆಗೆ ದುಃಖವೆಂಬುದು ಬಂದು ನಮ್ಮ ಬಳಿಯಲ್ಲಿ ಇಳಿದುಕೊಂಡರೂ, ಮುಂಜಾನೆ ಹರ್ಷಧ್ವನಿಯು ಕೇಳಿಸುವುದು.
6 Ní ìgbà ayé mi, mo wí pé, “a kì yóò ṣí mi ní ipò padà.”
೬ನಾನಂತೂ ಸುಖದಿಂದಿದ್ದಾಗ, “ನಾನು ಎಂದಿಗೂ ಕದಲುವುದಿಲ್ಲ” ಎಂದು ಹೇಳಿಕೊಂಡಿದ್ದೆನು.
7 Nípa ojúrere rẹ, Olúwa, ìwọ ti gbé mi kalẹ̀ bí òkè tí ó ní agbára; ìwọ pa ojú rẹ mọ́, àyà sì fò mí.
೭ಯೆಹೋವನೇ, ಕೃಪೆಮಾಡಿ ನಾನಿರುವ ಬೆಟ್ಟಕ್ಕೆ ಸ್ಥಿರವಾದ ಬಲವನ್ನು ಅನುಗ್ರಹಿಸಿದಿಯಲ್ಲಾ. ಆದರೂ ನೀನು ನಿನ್ನ ಮುಖವನ್ನು ಮರೆಮಾಡಿಕೊಂಡಾಗ ನಾನು ಕಳವಳಗೊಂಡೆನು.
8 Sí ọ Olúwa, ni mo ké pè é; àti sí Olúwa ni mo sọkún fún àánú:
೮ಯೆಹೋವನೇ, ನಿನಗೆ ಮೊರೆಯಿಟ್ಟೆನು; ನನ್ನ ಒಡೆಯನಿಗೆ ಬಿನ್ನವಿಸಿ,
9 “Èrè kí ni ó wà nínú ikú ìparun mi, nínú lílọ sí ihò mi? Eruku yóò a yìn ọ́ bí? Ǹjẹ́ yóò sọ nípa òdodo rẹ?
೯“ನನ್ನನ್ನು ಕೊಂದುಹಾಕಿ ಸಮಾಧಿಗೆ ಸೇರಿಸಿದರೆ ನಿನಗೆ ಲಾಭವೇನು? ಮಣ್ಣು ನಿನ್ನನ್ನು ಸ್ತುತಿಸುವುದೋ? ಅದು ನಿನ್ನ ನಂಬಿಕೆಯನ್ನು ಹೊಗಳುವುದೇನು?
10 Gbọ́, Olúwa, kí o sì ṣàánú fún mi; ìwọ Olúwa, jẹ́ olùrànlọ́wọ́ mi.”
೧೦ಯೆಹೋವನೇ, ನನ್ನ ಪ್ರಾರ್ಥನೆಯನ್ನು ಕೇಳಿ ಕರುಣಿಸು; ಯೆಹೋವನೇ, ನನ್ನ ಸಹಾಯಕ್ಕೆ ಬಾ” ಎಂದು ಹೇಳಿದೆನು.
11 Ìwọ ti yí ìkáàánú mi di ijó fún mi; ìwọ sì ti bọ́ aṣọ ọ̀fọ̀ mi, o sì fi aṣọ ayọ̀ wọ̀ mí,
೧೧ಆಗ ನೀನು ನನ್ನ ಗೋಳಾಟವನ್ನು ತಪ್ಪಿಸಿ, ಸಂತೋಷದಿಂದ ಕುಣಿದಾಡುವಂತೆ ಮಾಡಿದಿ; ನಾನು ಕಟ್ಟಿಕೊಂಡಿದ್ದ ಗೋಣಿತಟ್ಟನ್ನು ತೆಗೆದುಬಿಟ್ಟು, ಹರ್ಷವಸ್ತ್ರವನ್ನು ನನಗೆ ಧಾರಣೆಮಾಡಿಸಿದಿ.
12 nítorí ìdí èyí ni kí ọkàn mi máa yìn ọ́, kí o má sì ṣe dákẹ́. Ìwọ Olúwa Ọlọ́run mi, èmi yóò máa fi ọpẹ́ fún ọ títí láé.
೧೨ಇದರಿಂದ ಯೆಹೋವನೇ, ನನ್ನ ಮನಸ್ಸು ಎಡೆಬಿಡದೆ ನಿನ್ನನ್ನು ಕೀರ್ತಿಸುತ್ತಿರುವುದು; ನನ್ನ ದೇವರೇ, ನಿನ್ನನ್ನು ಸದಾಕಾಲವೂ ಸ್ತುತಿಸುವೆನು.