< Matthew 2 >
1 Lẹ́yìn ìgbà tí a bí Jesu ní Bẹtilẹhẹmu ti Judea, ni àkókò ọba Herodu, àwọn amòye ti ìlà-oòrùn wá sí Jerusalẹmu.
೧ಅರಸನಾದ ಹೆರೋದನ ಕಾಲದಲ್ಲಿ; ಯೂದಾಯ ಸೀಮೆಯ ಬೇತ್ಲೆಹೇಮ್ ಎಂಬ ಊರಿನಲ್ಲಿ ಯೇಸು ಹುಟ್ಟಿದಾಗ ಪೂರ್ವದೇಶದ ಜ್ಞಾನಿಗಳು ಯೆರೂಸಲೇಮಿಗೆ ಬಂದು,
2 Wọ́n si béèrè pé, “Níbo ni ẹni náà tí a bí tí í ṣe ọba àwọn Júù wà? Àwa ti rí ìràwọ̀ rẹ̀ ní ìlà-oòrùn, a sì wá láti foríbalẹ̀ fún un.”
೨“ಯೆಹೂದ್ಯರ ಅರಸನಾಗಿ ಹುಟ್ಟಿದಾತನು ಎಲ್ಲಿದ್ದಾನೆ? ಆತನನ್ನು ಸೂಚಿಸುವ ನಕ್ಷತ್ರವನ್ನು ನಾವು ಪೂರ್ವದಿಕ್ಕಿನಲ್ಲಿ ಕಂಡು ಆತನಿಗೆ ಅಡ್ಡಬಿದ್ದು ನಮಸ್ಕರಿಸುವುದಕ್ಕಾಗಿ ಬಂದೆವು” ಎಂದರು.
3 Nígbà tí ọba Herodu sì gbọ́ èyí, ìdààmú bá a àti gbogbo àwọn ara Jerusalẹmu pẹ̀lú rẹ̀.
೩ಇದನ್ನು ಕೇಳಿ ಅರಸನಾದ ಹೆರೋದನು ತಳಮಳಪಟ್ಟನು ಮತ್ತು ಅವನೊಂದಿಗೆ ಯೆರೂಸಲೇಮಿನವರೆಲ್ಲರೂ ಕಳವಳಪಟ್ಟರು.
4 Nígbà tí ó sì pe àwọn olórí àlùfáà àti àwọn olùkọ́ òfin jọ, ó bi wọ́n léèrè níbi ti a ó gbé bí Kristi?
೪ಅವನು ಯೆಹೂದ್ಯರ ಎಲ್ಲಾ ಮುಖ್ಯಯಾಜಕರನ್ನೂ ಶಾಸ್ತ್ರಿಗಳನ್ನೂ ಕೂಡಿಸಿ, “ಕ್ರಿಸ್ತನು ಹುಟ್ಟಬೇಕಾದದ್ದು ಎಲ್ಲಿ” ಎಂದು ಅವರನ್ನು ಕೇಳಿದನು.
5 Wọ́n sì wí pé, “Ní Bẹtilẹhẹmu ti Judea, èyí ni ohun tí wòlíì ti kọ ìwé rẹ̀ pé,
೫ಅವರು ಅವನಿಗೆ, “ಯೂದಾಯದ ಬೇತ್ಲೆಹೇಮಿನಲ್ಲಿಯೇ; ಏಕೆಂದರೆ,
6 “‘Ṣùgbọ́n ìwọ Bẹtilẹhẹmu, ní ilẹ̀ Judea, ìwọ kò kéré jù láàrín àwọn ọmọ-aládé Juda; nítorí láti inú rẹ ni Baálẹ̀ kan yóò ti jáde, ẹni ti yóò ṣe ìtọ́jú Israẹli, àwọn ènìyàn mi.’”
೬“‘ಯೆಹೂದ ಸೀಮೆಯ ಬೇತ್ಲೆಹೇಮೇ, ಯೆಹೂದದ ಮುಖ್ಯಪಟ್ಟಣಗಳಲ್ಲಿ ನೀನು ಎಷ್ಟು ಮಾತ್ರಕ್ಕೂ ಸಣ್ಣದಲ್ಲ. ಏಕೆಂದರೆ ನನ್ನ ಪ್ರಜೆಯಾದ ಇಸ್ರಾಯೇಲನ್ನು ಆಳತಕ್ಕ ಒಬ್ಬ ಅಧಿಪತಿಯು ನಿನ್ನೊಳಗಿಂದಲೇ ಉದಯಿಸುವನು.’ ಎಂಬುದಾಗಿ ಪ್ರವಾದಿಯ ಮುಖಾಂತರ ಬರೆಯಲ್ಪಟಿದೆ” ಎಂದು ಹೇಳಿದರು.
7 Nígbà náà ni Herodu ọba pe àwọn amòye náà sí ìkọ̀kọ̀, ó sì wádìí ni ọwọ́ wọn, àkókò náà gan an tí wọ́n kọ́kọ́ rí ìràwọ̀.
೭ಆಗ ಹೆರೋದನು ಯಾರಿಗೂ ತಿಳಿಯದಂತೆ ಆ ಜ್ಞಾನಿಗಳನ್ನು ಕರೆಯಿಸಿ ಆ ನಕ್ಷತ್ರವು ಕಾಣಿಸಿದ ಗಳಿಗೆಯನ್ನು ಅವರಿಂದ ನಿಖರವಾಗಿ ತಿಳಿದುಕೊಂಡು,
8 Ó sì rán wọn lọ sí Bẹtilẹhẹmu, ó sì wí pé, “Ẹ lọ ṣe ìwádìí fínní fínní ní ti ọmọ náà tí a bí. Lẹ́yìn tí ẹ bá sì rí i, ẹ padà wá sọ fún mi, kí èmi náà le lọ foríbalẹ̀ fún un.”
೮“ನೀವು ಹೋಗಿ ಆ ಕೂಸಿನ ವಿಷಯದಲ್ಲಿ ಚೆನ್ನಾಗಿ ವಿಚಾರಣೆ ಮಾಡಿರಿ; ಅದು ಸಿಕ್ಕಿದ ಮೇಲೆ ನನಗೆ ತಿಳಿಸಿರಿ; ನಾನು ಸಹ ಬಂದು ಆ ಕೂಸಿಗೆ ಅಡ್ಡಬಿದ್ದು ನಮಸ್ಕರಿಸುವೆನು” ಎಂದು ಹೇಳಿ ಜ್ಞಾನಿಗಳನ್ನು ಬೇತ್ಲೆಹೇಮಿಗೆ ಕಳುಹಿಸಿಕೊಟ್ಟನು.
9 Nígbà tí wọ́n sì gbọ́ ọ̀rọ̀ ọba, wọ́n mú ọ̀nà wọn pọ̀n, sì wò ó, ìràwọ̀ tí wọ́n ti rí láti ìhà ìlà-oòrùn wá, ó ṣáájú wọn, títí tí ó fi dúró lókè ibi tí ọmọ náà gbé wà.
೯ಅವರು ಅರಸನ ಮಾತನ್ನು ಕೇಳಿ ಹೊರಟಾಗ ಪೂರ್ವದಿಕ್ಕಿನಲ್ಲಿ ಕಂಡ ನಕ್ಷತ್ರವು ಪುನಃ ಕಾಣಿಸಿಕೊಂಡು ಆ ಕೂಸು ಇದ್ದ ಸ್ಥಳದ ಮೇಲೆ ಬಂದು ನಿಲ್ಲುವ ತನಕ ಅವರ ಮುಂದಾಗಿ ಹೋಗುತಿತ್ತು.
10 Nígbà tí wọ́n sì rí ìràwọ̀ náà, ayọ̀ kún ọkàn wọn.
೧೦ಅವರು ನಕ್ಷತ್ರವನ್ನು ಕಂಡು ಪರಮಾನಂದದಿಂದ ಸಂತೋಷಿಸಿದರು.
11 Bí wọ́n tí wọ inú ilé náà, wọn rí ọmọ ọwọ́ náà pẹ̀lú Maria ìyá rẹ̀, wọ́n wólẹ̀, wọ́n foríbalẹ̀ fún un. Nígbà náà ni wọ́n tú ìṣúra wọn, wọ́n sì ta Jesu lọ́rẹ: wúrà, tùràrí àti òjìá.
೧೧ಅವರು ಆ ಮನೆಯೊಳಕ್ಕೆ ಹೋಗಿ ಆ ಕೂಸನ್ನು ಅದರ ತಾಯಿಯಾದ ಮರಿಯಳ ಬಳಿಯಲ್ಲಿ ಕಂಡು ಅದಕ್ಕೆ ಸಾಷ್ಟಾಂಗನಮಸ್ಕಾರ ಮಾಡಿ ತಮ್ಮ ನಿಕ್ಷೇಪದ ಗಂಟುಗಳನ್ನು ಬಿಚ್ಚಿ ಅದಕ್ಕೆ ಚಿನ್ನ, ಪರಿಮಳದ್ರವ್ಯ ಮತ್ತು ರಕ್ತಬೋಳಗಳನ್ನು ಮಗುವಿಗೆ ಕಾಣಿಕೆಯಾಗಿ ಅರ್ಪಿಸಿದರು.
12 Nítorí pé Ọlọ́run ti kìlọ̀ fún wọn ní ojú àlá pé kí wọ́n má ṣe padà tọ Herodu lọ mọ́, wọ́n gba ọ̀nà mìíràn lọ sí ìlú wọn.
೧೨ದೇವರು ಕನಸಿನಲ್ಲಿ ಅವರಿಗೆ, ನೀವು ಹೆರೋದನ ಬಳಿಗೆ ಹಿಂದಿರುಗಿ ಹೋಗಬಾರದೆಂದು ಆಜ್ಞೆ ನೀಡಿದ್ದರಿಂದ ಅವರು ಮತ್ತೊಂದು ದಾರಿಯಿಂದ ತಮ್ಮ ದೇಶಕ್ಕೆ ಹೊರಟುಹೋದರು.
13 Nígbà tí wọn ti lọ, angẹli Olúwa fi ara hàn Josẹfu ní ojú àlá pé, “Dìde, gbé ọmọ ọwọ́ náà àti ìyá rẹ̀, kí ó sì sálọ sí Ejibiti. Dúró níbẹ̀ títí tí èmi yóò fi sọ fún ọ, nítorí Herodu yóò wá ọ̀nà láti pa ọmọ ọwọ́ náà.”
೧೩ಜ್ಞಾನಿಗಳು ಹೋದ ಮೇಲೆ ದೇವದೂತನು ಯೋಸೇಫನಿಗೆ ಕನಸಿನಲ್ಲಿ ಕಾಣಿಸಿಕೊಂಡು, “ನೀನು ಎದ್ದು ಕೂಸನ್ನೂ, ತಾಯಿಯನ್ನೂ ಕರೆದುಕೊಂಡು ಐಗುಪ್ತ ದೇಶಕ್ಕೆ ಓಡಿಹೋಗು, ನಾನು ನಿನಗೆ ಹೇಳುವ ತನಕ ಅಲ್ಲೇ ಇರು; ಹೆರೋದನು ಈ ಕೂಸನ್ನು ಕೊಲ್ಲಬೇಕೆಂದು ಅದನ್ನು ಹುಡುಕುತ್ತಿರುವನು” ಎಂದನು.
14 Nígbà náà ni ó sì dìde, ó mú ọmọ ọwọ́ náà àti ìyá rẹ̀ ní òru, ó sì lọ sí Ejibiti,
೧೪ಅದೇ ರಾತ್ರಿ ಯೋಸೇಫನು ಎದ್ದು ಕೂಸನ್ನೂ ಅದರ ತಾಯಿಯನ್ನೂ ಕರೆದುಕೊಂಡು ಐಗುಪ್ತ ದೇಶಕ್ಕೆ ಹೊರಟುಹೋದನು. ಹೆರೋದನು ತೀರಿಹೋಗುವ ತನಕ ಅವರು ಅಲ್ಲೇ ಇದ್ದರು.
15 ó sì wà níbẹ̀ títí tí Herodu fi kú. Èyí jẹ́ ìmúṣẹ àsọtẹ́lẹ̀ ohun tí Olúwa sọ láti ẹnu wòlíì pé, “Mo pe ọmọ mi jáde láti Ejibiti wá.”
೧೫ಹೀಗೆ, “ನನ್ನ ಮಗನನ್ನು ಐಗುಪ್ತದೇಶದೊಳಗಿಂದ ಕರೆದೆನೆಂದು” ಕರ್ತನು ಪ್ರವಾದಿಯ ಮುಖಾಂತರ ಹೇಳಿದ ಮಾತು ನೆರವೇರಿತು.
16 Nígbà tí Herodu rí í pé àwọn amòye náà ti tan òun jẹ, ó bínú gidigidi, ó sì pàṣẹ kí a pa gbogbo àwọn ọmọkùnrin tí ó wà ní Bẹtilẹhẹmu àti ní ẹkùn rẹ̀ láti àwọn ọmọ ọdún méjì sílẹ̀ gẹ́gẹ́ bi àkókò tí ó ti fi ẹ̀sọ̀ ẹ̀sọ̀ béèrè lọ́wọ́ àwọn amòye náà.
೧೬ಆಗ ಹೆರೋದನು ತಾನು ಜ್ಞಾನಿಗಳಿಂದ ವಂಚಿತನಾದೆ ಎಂದು ತಿಳಿದು ಬಹಳ ಕೋಪಗೊಂಡು ತನ್ನ ಆಳುಗಳನ್ನು ಕಳುಹಿಸಿ ತಾನು ಜ್ಞಾನಿಗಳಿಂದ ಕೂಸು ಹುಟ್ಟಿದ್ದ ಗಳಿಗೆಯನ್ನು ತಿಳಿದುಕೊಂಡಿದ್ದ ಕಾಲಕ್ಕೆ ಸರಿಯಾಗಿ, ಬೇತ್ಲೆಹೇಮಿನಲ್ಲಿಯೂ ಅದರ ಎಲ್ಲಾ ನೆರೆಹೊರೆ ಹಳ್ಳಿಗಳಲ್ಲಿಯೂ ಹುಟ್ಟಿದ ಎರಡು ವರ್ಷದೊಳಗಿನ ಗಂಡು ಕೂಸುಗಳನ್ನೆಲ್ಲಾ ಕೊಲ್ಲಿಸಿದನು.
17 Nígbà náà ni èyí tí a ti sọtẹ́lẹ̀ láti ẹnu wòlíì Jeremiah wá ṣẹ pé:
೧೭ಯೆರೆಮೀಯನೆಂಬ ಪ್ರವಾದಿಯು ಹೇಳಿದ ಮಾತು ಹೀಗೆ ನೆರವೇರಿತು; ಅದೇನೆಂದರೆ,
18 “A gbọ́ ohùn kan ní Rama, ohùn réré ẹkún àti ọ̀fọ̀ ńlá, Rakeli ń sọkún àwọn ọmọ rẹ̀. Ó kọ̀ láti gbìpẹ̀ nítorí àwọn ọmọ rẹ̀ kò sí mọ́.”
೧೮“ರಾಮದಲ್ಲಿ ಬೊಬ್ಬೆಯು ಕೇಳಿಸಿತು; ಆಕ್ರಂದನವೂ ಬಹು ಗೋಳಾಟವೂ ಉಂಟಾದವು; ರಾಹೇಲಳು ತನ್ನ ಮಕ್ಕಳಿಗೋಸ್ಕರ ಗೋಳಾಡಿ ಅವರು ಇಲ್ಲದೆ ಹೋದದ್ದಕ್ಕಾಗಿ ಸಮಾಧಾನ ಹೊಂದಲಾರದೆ ಇದ್ದಳು” ಎಂಬುದೇ.
19 Lẹ́yìn ikú Herodu, angẹli Olúwa fi ara hàn Josẹfu lójú àlá ní Ejibiti
೧೯ಹೆರೋದನು ತೀರಿಹೋದ ಮೇಲೆ ಐಗುಪ್ತದೇಶದಲ್ಲಿ ಕರ್ತನ ದೂತನು ಯೋಸೇಫನಿಗೆ ಕನಸಿನಲ್ಲಿ ಕಾಣಿಸಿಕೊಂಡು,
20 Ó sì wí fún un pé, “Dìde gbé ọmọ ọwọ́ náà àti ìyá rẹ̀ padà sí ilẹ̀ Israẹli, nítorí àwọn tí ń wá ẹ̀mí ọmọ ọwọ́ náà láti pa ti kú.”
೨೦“ನೀನು ಎದ್ದು ಕೂಸನ್ನೂ ಅದರ ತಾಯಿಯನ್ನೂ ಕರೆದುಕೊಂಡು ಇಸ್ರಾಯೇಲ್ ದೇಶಕ್ಕೆ ಹೋಗು; ಕೂಸಿನ ಪ್ರಾಣವನ್ನು ತೆಗೆಯಬೇಕೆಂದಿದ್ದವರು ಸತ್ತು ಹೋದರು” ಎಂದು ಹೇಳಿದನು.
21 Nítorí náà, o sì dìde, ó gbé ọmọ ọwọ́ náà àti ìyá rẹ̀ ó sì wá sí ilẹ̀ Israẹli.
೨೧ಆಗ ಯೋಸೇಫನು ಎದ್ದು ಕೂಸನ್ನೂ ಅದರ ತಾಯಿಯನ್ನೂ ಕರೆದುಕೊಂಡು ಇಸ್ರಾಯೇಲ್ ದೇಶಕ್ಕೆ ಬಂದನು.
22 Ṣùgbọ́n nígbà tí ó gbọ́ pé Akelausi ni ó ń jẹ ọba ní Judea ní ipò Herodu baba rẹ̀, ó bẹ̀rù láti lọ sí ì bẹ̀. Nítorí tí Ọlọ́run ti kìlọ̀ fún un ní ojú àlá, ó yí padà, ó sì gba ẹkùn Galili lọ,
೨೨ಆದರೆ ಅರ್ಖೆಲಾಯನು ತನ್ನ ತಂದೆಯಾದ ಹೆರೋದನಿಗೆ ಬದಲಾಗಿ ಯೂದಾಯವನ್ನು ಆಳುತ್ತಿದ್ದಾನೆ ಎಂದು ಕೇಳಿ ಅಲ್ಲಿಗೆ ಹೋಗುವುದಕ್ಕೆ ಅಂಜಿದನು. ಆಗ ಅವನು ಕನಸಿನಲ್ಲಿ ದೇವರ ಅಪ್ಪಣೆಯನ್ನು ಹೊಂದಿ ಗಲಿಲಾಯ ಸೀಮೆಗೆ ಹೋದನು.
23 ó sì lọ í gbé ní ìlú tí a pè ní Nasareti. Nígbà náà ni èyí tí a sọtẹ́lẹ̀ láti ẹnu àwọn wòlíì wá sí ìmúṣẹ: “A ó pè é ní ará Nasareti.”
೨೩ಅಲ್ಲಿರುವ ನಜರೇತೆಂಬ ಊರನ್ನು ಸೇರಿ ವಾಸಮಾಡಿದನು. ಹೀಗೆ, “ಆತನು ನಜರೇತಿನವನೆಂದು ಕರೆಯಲ್ಪಡುವನು” ಎಂಬುದಾಗಿ ಪ್ರವಾದಿಗಳು ಹೇಳಿರುವ ಮಾತು ನೆರವೇರಿತು.