< Jeremiah 35 >
1 Ọ̀rọ̀ tí ó tọ Jeremiah wá láti ọ̀dọ̀ Olúwa ní ọjọ́ Jehoiakimu ọmọ Josiah ọba Juda wí pé:
೧ಯೋಷೀಯನ ಮಗನೂ, ಯೆಹೂದದ ಅರಸನೂ ಆದ ಯೆಹೋಯಾಕೀಮನ ಕಾಲದಲ್ಲಿ ಯೆಹೋವನು ಯೆರೆಮೀಯನಿಗೆ ದಯಪಾಲಿಸಿದ ವಾಕ್ಯ,
2 “Lọ sí ilé àwọn ọmọ Rekabu, kí o sì bá wọn sọ̀rọ̀, kí o sì mú wọn wá sí ilé Olúwa, sí ọ̀kan nínú iyàrá wọ̀n-ọn-nì, kí o sì fún wọn ní ọtí wáìnì mu.”
೨“ನೀನು ರೇಕಾಬನ ಮನೆತನದವರ ಬಳಿಗೆ ಹೋಗಿ ಅವರ ಸಂಗಡ ಮಾತನಾಡಿ ಅವರನ್ನು ಯೆಹೋವನ ಆಲಯದ ಒಂದು ಕೋಣೆಯೊಳಕ್ಕೆ ಕರೆದು ದ್ರಾಕ್ಷಾರಸವನ್ನು ಕುಡಿಯುವುದಕ್ಕೆ ಕೊಡು” ಎಂಬುದೇ.
3 Nígbà náà ni mo mu Jaaṣaniah ọmọ Jeremiah, ọmọ Habasiniah àti àwọn arákùnrin rẹ̀; àti gbogbo àwọn ọmọ rẹ̀, àti gbogbo ilé àwọn ọmọ Rekabu.
೩ಆಗ ಪ್ರವಾದಿಯು ಯೆರೆಮೀಯನ ಮಗನೂ ಹಬಚ್ಚಿನ್ಯನ ಮೊಮ್ಮಗನೂ ಆದ ಯಾಜನ್ಯನನ್ನು, ಅವನ ಅಣ್ಣತಮ್ಮಂದಿರನ್ನು, ಅವನ ಎಲ್ಲಾ ಮಕ್ಕಳನ್ನು, ಅಂತು ರೇಕಾಬನ ಮನೆತನದವರೆಲ್ಲರನ್ನೂ
4 Mo sì mú wọn wá sí ilé Olúwa sínú iyàrá Hanani ọmọ Igdaliah, ènìyàn Ọlọ́run, tí ó wà lẹ́bàá yàrá àwọn ìjòyè, tí ó wà ní òkè yàrá Maaseiah, ọmọ Ṣallumu olùtọ́jú ẹnu-ọ̀nà.
೪ಯೆಹೋವನ ಆಲಯಕ್ಕೆ ಕರೆದು ಇಗ್ದಲ್ಯನ ಮಗನೂ, ದೇವರ ಮನುಷ್ಯನೂ ಆದ ಹಾನಾನನ ಮಕ್ಕಳ ಕೋಣೆಯೊಳಕ್ಕೆ, ಅಂದರೆ ಸರದಾರರ ಕೋಣೆಯ ಪಕ್ಕದಲ್ಲಿ, ಶಲ್ಲೂಮನ ಮಗನೂ ದ್ವಾರಪಾಲಕನೂ ಆದ ಮಾಸೇಯನ ಕೋಣೆಯ ಮೇಲ್ಗಡೆ ಇರುವ ಕೋಣೆಯೊಳಕ್ಕೆ ಬರಮಾಡಿದನು.
5 Mo sì gbé ìkòkò tí ó kún fún ọtí wáìnì pẹ̀lú ago ka iwájú àwọn ọmọ Rekabu. Mo sì wí fún wọn pé, “Mu ọtí wáìnì.”
೫ಆ ರೇಕಾಬನ ಮನೆತನದವರ ಮುಂದೆ ದ್ರಾಕ್ಷಾರಸ ತುಂಬಿದ ಬಟ್ಟಲುಗಳನ್ನೂ, ಪಂಚಪಾತ್ರೆಗಳನ್ನೂ ಇಟ್ಟು, “ದ್ರಾಕ್ಷಾರಸವನ್ನು ಕುಡಿಯಿರಿ” ಅಂದನು.
6 Ṣùgbọ́n wọ́n wí pé, “Àwa kì yóò mu ọtí wáìnì nítorí Jonadabu ọmọ Rekabu, baba wa pàṣẹ fún wa pé: ‘Ẹ̀yin kò gbọdọ̀ mu ọtí wáìnì ẹ̀yin àti àwọn ọmọ yín láéláé.
೬ಅದಕ್ಕೆ ಅವರು, “ನಾವು ದ್ರಾಕ್ಷಾರಸವನ್ನು ಕುಡಿಯುವುದೇ ಇಲ್ಲ, ನಮ್ಮ ಪಿತೃವಾದ ರೇಕಾಬನ ಮಗನಾದ ಯೋನಾದಾಬನು ನಮಗೆ, ‘ನೀವಾಗಲಿ ನಿಮ್ಮ ಸಂತಾನದವರಾಗಲಿ ಯುಗಯುಗಾಂತರಕ್ಕೂ ದ್ರಾಕ್ಷಾರಸ ಕುಡಿಯಬಾರದು,
7 Bẹ́ẹ̀ ni, ẹ̀yin kò gbọdọ̀ kọ́ ilé tàbí kí ẹ fúnrúgbìn, tàbí kí ẹ gbin ọgbà àjàrà. Bẹ́ẹ̀ ni ẹ̀yin kò gbọdọ̀ ní ọ̀kankan nínú àwọn ohun wọ̀nyí, ṣùgbọ́n ní gbogbo ọjọ́ yín ni ẹ̀yin ó máa gbé inú àgọ́; kí ẹ̀yin kí ó lè wá ní ọjọ́ púpọ̀ ní ilẹ̀ náà; níbi tí ẹ̀yin ti ń ṣe àtìpó.’
೭ಮನೆಕಟ್ಟಬಾರದು, ಬೀಜ ಬಿತ್ತಬಾರದು, ದ್ರಾಕ್ಷಿತೋಟ ಮಾಡಬಾರದು, ಅನುಭವಿಸಲೂ ಬಾರದು, ನಿಮ್ಮ ಜೀವಮಾನವೆಲ್ಲಾ ಗುಡಾರಗಳಲ್ಲೇ ವಾಸಿಸಬೇಕು, ಇದರಿಂದ ನೀವು ತಂಗುವ ದೇಶದಲ್ಲಿ ನಿಮಗೆ ದೀರ್ಘಾಯುಷ್ಯವಾಗವುದು’” ಎಂದು ಅಪ್ಪಣೆಕೊಟ್ಟಿದ್ದಾನೆ.
8 Báyìí ni àwa gba ohùn Jehonadabu ọmọ Rekabu baba wa gbọ́ nínú gbogbo èyí tí ó pàṣẹ fún wa, kí a má mu ọtí wáìnì ní gbogbo ọjọ́ ayé wa; àwa, àwọn aya wa, àwọn ọmọkùnrin wa, àti àwọn ọmọbìnrin wa.
೮ನಮ್ಮ ಪಿತೃವಾದ ರೇಕಾಬನ ಮಗನಾಗಿರುವ ಯೋನಾದಾಬನು ನಮಗೆ ಕೊಟ್ಟ ಈ ಅಪ್ಪಣೆಯನ್ನು, ಎಲ್ಲಾ ವಿಷಯದಲ್ಲಿಯೂ ಕೈಗೊಳ್ಳುತ್ತಿದ್ದೇವೆ; ನಾವಾಗಲಿ, ನಮ್ಮ ಹೆಂಡತಿಯರಾಗಲಿ, ಗಂಡು ಹೆಣ್ಣುಮಕ್ಕಳಾಗಲಿ ಜೀವಮಾನದಲ್ಲೆಲ್ಲಾ ದ್ರಾಕ್ಷಾರಸವನ್ನು ಕುಡಿಯುವುದಿಲ್ಲ.
9 Àti kí a má kọ́ ilé láti gbé; bẹ́ẹ̀ ni àwa kò ní ọgbà àjàrà tàbí oko, tàbí ohun ọ̀gbìn.
೯ನಮ್ಮ ವಾಸಕ್ಕೆ ಮನೆಯನ್ನು ಕಟ್ಟುವುದಿಲ್ಲ; ನಮಗೆ ದ್ರಾಕ್ಷಿತೋಟ, ಹೊಲ ಮತ್ತು ಬೀಜಗಳೂ ಇಲ್ಲ.
10 Ṣùgbọ́n àwa ń gbé inú àgọ́, a sì gbọ́rọ̀, a sì ṣe gẹ́gẹ́ bí gbogbo èyí tí Jonadabu baba wa pàṣẹ fún wa.
೧೦ನಾವು ಗುಡಾರಗಳಲ್ಲಿ ವಾಸಿಸುತ್ತಾ ನಮ್ಮ ಪಿತೃವಾದ ಯೋನಾದಾಬನು ನಮಗೆ ವಿಧಿಸಿದ್ದನ್ನೆಲ್ಲಾ ಶಿರಸಾವಹಿಸಿ ನಡೆಸುತ್ತಿದ್ದೇವೆ.
11 Ó sì ṣe, nígbà tí Nebukadnessari ọba Babeli gòkè wá sí ilẹ̀ náà; àwa wí pé, ‘Ẹ wá, ẹ jẹ́ kí a lọ sí Jerusalẹmu, nítorí ìbẹ̀rù ogun àwọn ara Siria.’ Bẹ́ẹ̀ ni àwa sì ń gbé Jerusalẹmu.”
೧೧ಆದರೆ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ದೇಶದೊಳಗೆ ನುಗ್ಗಿದಾಗ, “ಕಸ್ದೀಯರ ಮತ್ತು ಅರಾಮ್ಯರ ಸೈನ್ಯಗಳ ಮುಂದೆ ನಿಲ್ಲದೆ ಯೆರೂಸಲೇಮಿಗೆ ಹೋಗೋಣ ಬನ್ನಿ ಎಂದುಕೊಂಡು ಯೆರೂಸಲೇಮಿನಲ್ಲಿ ವಾಸಿಸುತ್ತಿದ್ದೇವೆ” ಎಂದು ಹೇಳಿದರು.
12 Nígbà yìí ni ọ̀rọ̀ Olúwa tọ Jeremiah wá wí pé:
೧೨ಆಗ ಯೆಹೋವನು ಯೆರೆಮೀಯನಿಗೆ ಈ ಮಾತನ್ನು ದಯಪಾಲಿಸಿದನು,
13 “Báyìí ní Olúwa àwọn ọmọ-ogun Ọlọ́run Israẹli wí pé, lọ, kí o sì sọ fún àwọn ọkùnrin Juda, àti àwọn olùgbé Jerusalẹmu pé, ‘Ẹ̀yin kì yóò ha gba ẹ̀kọ́ láti fetí sí ọ̀rọ̀ mi,’ ni Olúwa wí.
೧೩“ಇಸ್ರಾಯೇಲರ ದೇವರೂ, ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ, ನೀನು ಹೋಗಿ ಯೆಹೂದ್ಯರಿಗೂ, ಯೆರೂಸಲೇಮಿನ ನಿವಾಸಿಗಳಿಗೂ ಹೀಗೆ ಹೇಳು, ‘ಇದರಿಂದ ನೀವು ಬುದ್ಧಿತಂದುಕೊಂಡು ನನ್ನ ಮಾತುಗಳನ್ನು ಕೇಳುವುದಿಲ್ಲವೋ?’ ಎಂದು ಯೆಹೋವನು ಅನ್ನುತ್ತಾನೆ.
14 ‘Ọ̀rọ̀ Jehonadabu ọmọ Rekabu tí ó pàṣẹ fún àwọn ọmọ rẹ̀ pé wọn kò gbọdọ̀ mu ọtí wáìnì, ni a mú ṣẹ, wọn kò sì mu ọtí wáìnì títí di òní yìí, nítorí tí wọ́n gba òfin baba wọn. Èmi sì ti ń sọ̀rọ̀ fún un yín, ṣùgbọ́n ẹ̀yin kò fetí sí mi.
೧೪ರೇಕಾಬನ ಮಗನಾದ ಯೋನಾದಾಬನು ತನ್ನ ಸಂತಾನದವರಿಗೆ ದ್ರಾಕ್ಷಾರಸವನ್ನು ಕುಡಿಯಬಾರದೆಂದು ಕೊಟ್ಟ ಅಪ್ಪಣೆ ನೆರವೇರಿದೆ; ಅವರು ಇಂದಿನ ವರೆಗೂ ಕುಡಿಯಲಿಲ್ಲ, ತಮ್ಮ ಪಿತೃವಿನ ಆಜ್ಞೆಯನ್ನು ಕೈಕೊಂಡಿದ್ದಾರೆ; ನೀವೋ, ನಾನು ನಿಮಗೆ ಎಡೆಬಿಡದೆ ಹೇಳುತ್ತಾ ಬಂದರೂ ನನ್ನ ಮಾತಿಗೆ ಕಿವಿಗೊಡಲಿಲ್ಲ.
15 Èmi rán gbogbo àwọn ìránṣẹ́ àti àwọn wòlíì mí sí yín pẹ̀lú wí pé, “Ẹ yípadà nísinsin yìí kúrò ní ọ̀nà búburú yín, kí ẹ sì tún ìṣe yín ṣe sí rere. Kí ẹ ma sì ṣe bọ òrìṣà tàbí sìn wọ́n; ẹ̀yin ó sì máa gbé ní ilẹ̀ náà tí mo fi fún un yín àti fún àwọn baba ńlá yín.” Ṣùgbọ́n ẹ̀yin kò fetí sí mi.
೧೫ಇದಲ್ಲದೆ ನಾನು ನನ್ನ ಸೇವಕರಾದ ಪ್ರವಾದಿಗಳನ್ನೆಲ್ಲಾ ನಿಮ್ಮ ಬಳಿಗೆ ನಿತ್ಯವೂ ಕಳುಹಿಸುತ್ತಾ, ನೀವೆಲ್ಲರೂ ನಿಮ್ಮ ನಿಮ್ಮ ದುರ್ಮಾರ್ಗಗಳಿಂದ ಹಿಂದಿರುಗಿ ನಿಮ್ಮ ನಡತೆಗಳನ್ನು ಸರಿಪಡಿಸಿಕೊಳ್ಳಿರಿ, ಅನ್ಯದೇವತೆಗಳನ್ನು ಹಿಂಬಾಲಿಸಿ ಸೇವಿಸದಿರಿ; ಹೀಗೆ ಮಾಡಿದರೆ ನಾನು ನಿಮಗೂ, ನಿಮ್ಮ ಪೂರ್ವಿಕರಿಗೂ ದಯಪಾಲಿಸಿದ ದೇಶದಲ್ಲಿ ನೀವು ಸುಖವಾಸಿಗಳಾಗಿರುವಿರಿ ಎಂದು ಹೇಳಿಸಿದರೂ ನೀವು ನನ್ನ ಮಾತನ್ನು ಕೇಳಲಿಲ್ಲ, ಕಿವಿಗೊಡಲೂ ಇಲ್ಲ.
16 Nítòótọ́, àwọn ọmọ Jehonadabu ọmọ Rekabu pa òfin baba wọn mọ́ tí ó pàṣẹ fún wọn, ṣùgbọ́n àwọn ènìyàn wọ̀nyí kò pa òfin mi mọ́.’
೧೬ರೇಕಾಬನ ಮಗನಾದ ಯೋನಾದಾಬನ ಸಂತಾನದವರು ತಮ್ಮ ಪಿತೃವು ತಮಗೆ ವಿಧಿಸಿದ್ದನ್ನು ಕೇಳಿ ಅನುಸರಿಸುತ್ತಿರುವಲ್ಲಿ ಈ ಜನರು ನನ್ನ ಮಾತನ್ನು ಕೇಳದೆ ಹೋದುದರಿಂದ,
17 “Nítorí náà, báyìí ni, Olúwa Ọlọ́run àwọn ọmọ-ogun Ọlọ́run Israẹli wí, ‘Fetísílẹ̀! Èmi ó mú gbogbo ohun búburú tí èmi ti sọ wá sórí Juda, àti sórí gbogbo olùgbé Jerusalẹmu nítorí èmi ti bá wọn sọ̀rọ̀: Ṣùgbọ́n wọn kò sì dáhùn.’”
೧೭ಇಗೋ, ನಾನು ಯೆಹೂದ್ಯರಿಗೂ, ಯೆರೂಸಲೇಮಿನವರೆಲ್ಲರಿಗೂ ಕೊಟ್ಟ ಶಾಪದ ಕೇಡನ್ನೆಲ್ಲಾ ಅವರ ಮೇಲೆ ಬರಮಾಡುವೆನು; ನಾನು ಹೇಳಿದರೂ ಅವರು ಕೇಳಲಿಲ್ಲ, ಕೂಗಿದರೂ ಉತ್ತರಕೊಡಲಿಲ್ಲ ಎಂದು ಸೇನಾಧೀಶ್ವರ ಸ್ವಾಮಿಯೂ, ಇಸ್ರಾಯೇಲರ ದೇವರೂ ಆದ ಯೆಹೋವನು ಅನ್ನುತ್ತಾನೆ” ಎಂಬುದೇ.
18 Nígbà náà ni Jeremiah wí fún ìdílé Rekabu pé, “Báyìí ni Olúwa Ọlọ́run àwọn ọmọ-ogun Ọlọ́run Israẹli wí pé: ‘Nítorí tí ẹ̀yin gba òfin Jehonadabu baba yín, tí ẹ sì pa gbogbo rẹ̀ mọ́, tí ẹ sì ṣe gẹ́gẹ́ bí èyí tí ó pàṣẹ fún un yín.’
೧೮ಮತ್ತು ಯೆರೆಮೀಯನು ರೇಕಾಬ್ಯರಿಗೆ, “ಇಸ್ರಾಯೇಲರ ದೇವರೂ, ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ, ‘ನೀವು ನಿಮ್ಮ ಪಿತೃವಾದ ಯೋನಾದಾಬನ ಅಪ್ಪಣೆಯನ್ನು ಕೇಳಿ ಅವನ ಸಕಲ ವಿಧಿಗಳನ್ನು ಅನುಸರಿಸಿ ಅವನು ಆಜ್ಞಾಪಿಸಿದ್ದನ್ನೆಲ್ಲಾ ನೆರವೇರಿಸಿದ ಕಾರಣ,
19 Nítorí náà, báyìí ni Olúwa àwọn ọmọ-ogun, Ọlọ́run Israẹli wí, pé: ‘Jonadabu ọmọ Rekabu kì yóò fẹ́ ọkùnrin kan kù láti sìn mí.’”
೧೯ರೇಕಾಬನ ಮಗನಾದ ಯೋನಾದಾಬನ ಸಂತಾನದವರೊಳಗೆ ನನ್ನ ಸಮ್ಮುಖದಲ್ಲಿ ಸೇವೆಮಾಡತಕ್ಕವರು ತಲತಲಾಂತರಕ್ಕೂ ಇದ್ದೇ ಇರುವರು. ಇಸ್ರಾಯೇಲರ ದೇವರೂ, ಸೇನಾಧೀಶ್ವರನೂ ಆದ ಯೆಹೋವನು ಇದನ್ನು ನುಡಿದಿದ್ದಾನೆ’” ಎಂಬುದೇ.