< Isaiah 14 >

1 Olúwa yóò fi àánú hàn fún Jakọbu, yóò tún Israẹli yàn lẹ́ẹ̀kan sí i yóò sì fi ìdí wọn kalẹ̀ ní ilẹ̀ àwọn tìkára wọn. Àwọn àjèjì yóò darapọ̀ mọ́ wọn, wọn yóò sì fọwọ́sowọ́pọ̀ pẹ̀lú ilé e Jakọbu.
ಯೆಹೋವನು ಯಾಕೋಬ್ಯನನ್ನು ಕನಿಕರಿಸಿ, ಪುನಃ ಇಸ್ರಾಯೇಲರನ್ನು ಆರಿಸಿಕೊಂಡು, ಅವರನ್ನು ಅವರ ಸ್ವದೇಶಕ್ಕೆ ಸೇರಿಸುವನು; ಪರದೇಶಿಗಳು ಅವರೊಂದಿಗೆ ಕೂಡಿ ಬಂದು, ಯಾಕೋಬನ ಮನೆತನಕ್ಕೆ ಸೇರಿಕೊಳ್ಳುವರು.
2 Àwọn orílẹ̀-èdè yóò gbà wọ́n wọn yóò sì mú wọn wá sí ààyè e wọn. Ilé Israẹli yóò gba àwọn orílẹ̀-èdè gẹ́gẹ́ bí àwọn ẹrúkùnrin àti ẹrúbìnrin ní ilẹ̀ Olúwa. Wọn yóò kó àwọn akónilẹ́rú wọn ní ìgbèkùn wọn yóò sì jẹ ọba lórí àwọn amúnisìn wọn.
ಜನಾಂಗದವರು ಅವರನ್ನು ಕರೆದು ತಂದು ಸ್ವಸ್ಥಳಕ್ಕೆ ಸೇರಿಸುವರು; ಆಗ ಇಸ್ರಾಯೇಲಿನ ಮನೆತನದವರು ಯೆಹೋವನ ದೇಶದಲ್ಲಿ ಆ ಜನಾಂಗದವರನ್ನು ಗಂಡು ಹೆಣ್ಣಾಳುಗಳನ್ನಾಗಿ, ದಾಸದಾಸಿಯರನ್ನಾಗಿ ಇಟ್ಟುಕೊಳ್ಳುವರು; ಯಾರಿಗೆ ಸೆರೆಯಾಗಿದ್ದರೋ ಅವರನ್ನು ಸೆರೆಹಿಡಿಯುವರು; ತಮ್ಮನ್ನು ಹಿಂಸಿಸಿದವರ ಮೇಲೆ ಅಧಿಕಾರ ನಡೆಸುವರು.
3 Ní ọjọ́ tí Olúwa yóò fi ìtura fún un yín kúrò nínú ìpọ́njú àti ìyà àti ìdè ìkà,
ಯೆಹೋವನು ನಿಮ್ಮನ್ನು ಸಂಕಟದಿಂದಲೂ, ಕಳವಳದಿಂದಲೂ, ಕಠಿಣವಾದ ಬಿಟ್ಟಿ ಸೇವೆಯಿಂದಲೂ ನಿಮ್ಮನ್ನು ವಿಶ್ರಾಂತಿಗೊಳಿಸುವ ದಿನದಲ್ಲಿ,
4 ẹ ó sì fi ọ̀rọ̀ àbùkù yìí kan ọba Babeli pé, báwo ni amúnisìn ṣe wá sí òpin! Báwo ni ìbínú rẹ̀ ṣe parí!
ಬಾಬೆಲಿನ ರಾಜನಿಗೆ ವಿರುದ್ಧವಾದ ಈ ಪದ್ಯವನ್ನು ನೀವು ಹೀಗೆ ಸ್ವರವೆತ್ತಿ ಹಾಡಬೇಕು: “ಆಹಾ, ಹಿಂಸಕನು ಕೊನೆಗೊಂಡನು, ಕೋಪವು ನಿಂತು ಹೋಯಿತು!
5 Olúwa ti dá ọ̀pá ìkà náà, ọ̀pá àwọn aláṣẹ,
ಯೆಹೋವನು ಆಳುತ್ತಿದ್ದ ದುಷ್ಟರ ಕೋಲನ್ನೂ, ಅರಸರ ದಂಡವನ್ನೂ ಮುರಿದುಬಿಟ್ಟನು.
6 èyí tí ó ti lu àwọn ènìyàn bolẹ̀ pẹ̀lú ti kò dáwọ́ dúró, nínú ìrunú ni ó ṣẹ́gun àwọn orílẹ̀-èdè pẹ̀lú ìgbónára tí kò lópin.
ಜನಗಳನ್ನು ಕೋಪೋದ್ರೇಕದಿಂದ ಎಡೆಬಿಡದೆ ಹೊಡೆದು, ಜನಾಂಗಗಳನ್ನು ಸಿಟ್ಟಿನಿಂದ ತಡೆಯಿಲ್ಲದೆ ಹಿಂಸಿಸಿ, ಅಧೀನಮಾಡಿಕೊಂಡರು.
7 Gbogbo ilẹ̀ ni ó wà ní ìsinmi àti àlàáfíà, wọ́n bú sí orin.
ಭೂಲೋಕವೆಲ್ಲಾ ಶಾಂತವಾಗಿ ವಿಶ್ರಾಂತಿಗೊಂಡಿದೆ, ಅವರು ಹರ್ಷಧ್ವನಿಗೈಯುತ್ತಾರೆ.
8 Pẹ̀lúpẹ̀lú àwọn igi junifa àti àwọn igi kedari ti Lebanoni ń yọ̀ lórí rẹ wí pé, “Níwọ́n bí a ti rẹ̀ ọ́ sílẹ̀ báyìí, kò sí agégi tí yóò wá láti gé wa lulẹ̀.”
ಹೌದು, ತುರಾಯಿ ಮರಗಳೂ, ಲೆಬನೋನಿನ ದೇವದಾರು ವೃಕ್ಷಗಳೂ, ‘ನೀನು ಸುಮ್ಮನಿರುವುದರಿಂದ ನಮ್ಮನ್ನು ಕಡಿಯಲು ಯಾರೂ ಬರುವುದಿಲ್ಲ’ ಎಂದು ನಿನ್ನ ವಿಷಯವಾಗಿ ಉಲ್ಲಾಸಗೊಳ್ಳುತ್ತವೆ.
9 Ibojì tí ó wà ní ìsàlẹ̀ ni a ru sókè láti pàdé rẹ ní ìpadàbọ̀ rẹ̀ ó ru ẹ̀mí àwọn tí ó ti lọ sókè láti wá kí ọ gbogbo àwọn tí ó jẹ́ olórí ní ayé ó mú kí wọn dìde lórí ìtẹ́ wọn gbogbo àwọn tí ó jẹ ọba lórí àwọn orílẹ̀-èdè. (Sheol h7585)
ಬರುತ್ತಿರುವ ನಿನ್ನನ್ನು ಎದುರುಗೊಳ್ಳುವುದಕ್ಕೆ ಪಾತಾಳವು ತಳಮಳಪಡುತ್ತದೆ. ನಿನಗೋಸ್ಕರ ಸತ್ತವರನ್ನು, ಅಂದರೆ ಭೂಲೋಕದಲ್ಲಿ ಮುಖಂಡರಾಗಿದ್ದವರೆಲ್ಲರನ್ನು ಎಚ್ಚರಗೊಳಿಸಿ, ಜನಾಂಗಗಳ ಸಕಲ ಅರಸರನ್ನು ಅವರವರ ಆಸನಗಳಿಂದ ಎಬ್ಬಿಸುತ್ತದೆ. (Sheol h7585)
10 Gbogbo wọn yóò dáhùn, wọn yóò wí fún ọ wí pé, “Ìwọ pẹ̀lú ti di aláìlera, gẹ́gẹ́ bí àwa pẹ̀lú ìwọ náà ti dàbí wa.”
೧೦ಅವರೆಲ್ಲರು ನಿನ್ನನ್ನು ಕುರಿತು, ‘ನೀನು ಸಹ ನಮ್ಮ ಹಾಗೆ ಬಲಹೀನನಾಗಿದ್ದೀ? ನಮಗೆ ಸರಿಸಮಾನನಾಗಿದ್ದೀ?’ ಎಂದು ಮಾತನಾಡಿಕೊಳ್ಳುವರು.
11 Gbogbo rẹ̀ ni ó di ìrẹ̀sílẹ̀ lọ sí ibojì, pẹ̀lú ariwo àwọn dùùrù rẹ, àwọn ìdin ni wọ́n fọ́nkálẹ̀ lábẹ́ rẹ àwọn ekòló sì ti bò ọ́ mọ́lẹ̀. (Sheol h7585)
೧೧ನಿನ್ನ ವೈಭವವೂ ವೀಣಾನಾದದೊಂದಿಗೆ ಪಾತಾಳಕ್ಕೆ ತಳ್ಳಲ್ಪಟ್ಟಿವೆ. ನಿನಗೆ ಹುಳಗಳೇ ಹಾಸಿಗೆ, ಕ್ರಿಮಿಗಳೇ ನಿನ್ನ ಹೊದಿಕೆಯು. (Sheol h7585)
12 Báwo ni ìwọ ṣe ṣubú lulẹ̀ láti ọ̀run wá, ìwọ ìràwọ̀ òwúrọ̀, ọmọ òwúrọ̀ náà! A ti sọ ọ́ sílẹ̀ sínú ayé, ìwọ tí o ti tẹ orí àwọn orílẹ̀-èdè ba rí!
೧೨ಆಹಾ, ಉದಯನಕ್ಷತ್ರವೇ, ಉದಯಪುತ್ರನೇ, ಆಕಾಶದಿಂದ ನೀನು ಹೇಗೆ ಬಿದ್ದೆ! ಜನಾಂಗಗಳನ್ನು ಸ್ವಾಧೀನಪಡಿಸಿಕೊಂಡ ನೀನು ಭೂಮಿಗೆ ಹೇಗೆ ತಳಲ್ಪಟ್ಟಿದ್ದೀ!
13 Ìwọ sọ nínú ọkàn rẹ pé, “Èmi yóò gòkè lọ sí ọ̀run; èmi yóò gbé ìtẹ́ mi sókè ga ju àwọn ìràwọ̀ Ọlọ́run, Èmi yóò gúnwà ní orí òkè àpéjọ ní ṣóńṣó orí òkè mímọ́.
೧೩ನೀನು ನಿನ್ನ ಮನಸ್ಸಿನಲ್ಲಿ, ‘ನಾನು ಆಕಾಶಕ್ಕೆ ಏರಿ, ನನ್ನ ಸಿಂಹಾಸನವನ್ನು ದೇವರ ನಕ್ಷತ್ರಗಳಿಗಿಂತ ಘನತೆಗೇರಿಸಿ, ಉತ್ತರದಿಕ್ಕಿನ ಕಟ್ಟಕಡೆಯಿರುವ ಸಮೂಹ ಪರ್ವತದ ಮೇಲೆ ಆಸೀನನಾಗುವೆನು.
14 Èmi yóò gòkè lọ rékọjá àwọn àwọsánmọ̀; èmi yóò ṣe ara mi gẹ́gẹ́ bí Ọ̀gá-ògo.”
೧೪ಉನ್ನತವಾದ ಮೇಘಮಂಡಲದ ಮೇಲೆ ಏರಿ ಮಹೋನ್ನತನಿಗೆ ಸಮಾನನಾಗುವೆನು’ ಎಂದುಕೊಂಡೆಯಲ್ಲಾ!
15 Ṣùgbọ́n a ti rẹ̀ ọ́ sílẹ̀ wọ inú ibojì lọ lọ sí ìsàlẹ̀ ọ̀gbun. (Sheol h7585)
೧೫ಆದರೆ ನೀನು ಪಾತಾಳಕ್ಕೆ, ಅಧೋಲೋಕದ ಅಗಾಧ ಸ್ಥಳಗಳಿಗೆ ತಳ್ಳಲ್ಪಡುವೆ. (Sheol h7585)
16 Àwọn tí ó rí ọ yóò tẹjúmọ́ ọ, wọ́n ronú nípa àtubọ̀tán rẹ: “Ǹjẹ́ èyí ni ẹni tí ó mi ayé tìtì tí ó sì jẹ́ kí àwọn ilẹ̀ ọba wárìrì.
೧೬ನಿನ್ನನ್ನು ನೋಡುವವರು ನಿನ್ನನ್ನು ದಿಟ್ಟಿಸಿ ನೋಡಿ, ಯೋಚಿಸುತ್ತಾ, ‘ಭೂಮಿಯನ್ನು ನಡುಗಿಸಿ, ರಾಜ್ಯಗಳನ್ನು ಕದಲಿಸಿ ಪಟ್ಟಣಗಳನ್ನು ನಾಶಮಾಡಿ,
17 Ẹni tí ó sọ ayé di aginjù, tí ó sì pa ìlú ńlá ńlá rẹ̀ run tí kò dá àwọn òǹdè rẹ̀ sílẹ̀ láti padà sílé?”
೧೭ಲೋಕವನ್ನು ಕಾಡನ್ನಾಗಿ ಮಾಡಿ, ಸೆರೆಹಿಡಿದವರನ್ನು ಮನೆಗೆ ಬಿಡದೆ ಇದ್ದವನು ಈ ಮನುಷ್ಯನೋ?’ ಎಂದುಕೊಳ್ಳುವರು.
18 Gbogbo àwọn ọba orílẹ̀-èdè ni a tẹ́ sílẹ̀ ọ̀kọ̀ọ̀kan nínú ibojì tirẹ̀.
೧೮ಜನಾಂಗಗಳ ಎಲ್ಲಾ ಅರಸರೂ, ಹೌದು, ಸಕಲ ಅರಸರೂ ತಮ್ಮ ತಮ್ಮ ವೈಭವದೊಡನೆ ಸಮಾಧಿಗಳಲ್ಲಿ ದೀರ್ಘ ನಿದ್ರೆ ಮಾಡುತ್ತಾರೆ.
19 Ṣùgbọ́n a jù ọ́ síta kúrò nínú ibojì gẹ́gẹ́ bí ẹ̀ka igi tí a kọ̀sílẹ̀, àwọn tí a pa ni ó bò ọ́ mọ́lẹ̀, àwọn tí idà ti gún, àwọn tí ó sọ̀kalẹ̀ lọ sínú òkúta inú ọ̀gbun. Gẹ́gẹ́ bí òkú ó di ìtẹ̀mọ́lẹ̀ ní abẹ́ àtẹ́lẹsẹ̀,
೧೯ಆದರೆ ನೀನಾದರೋ ನಿನ್ನ ಸಮಾಧಿಗೆ ದೂರವಾಗಿ ಕೆಟ್ಟ ಕೊಂಬೆಯಂತೆ ಬಿಸಾಡಲ್ಪಟ್ಟಿದ್ದೀ; ಕತ್ತಿಯಿಂದ ತಿವಿದು ಗುಂಡಿಯ ಕಲ್ಲುಗಳ ಪಾಲಾಗಿ ಹತರಾದವರ ಹೊದಿಕೆಯಂತೆಯೂ,
20 a kò ní sin ọ́ pẹ̀lú wọn, nítorí pé o ti ba ilẹ̀ rẹ jẹ́ o sì ti pa àwọn ènìyàn rẹ. Ìran àwọn ìkà ni a kì yóò dárúkọ wọn mọ́.
೨೦ಕಾಲ ಕೆಳಗೆ ತುಳಿಯಲ್ಪಟ್ಟ ಹೆಣದಂತೆಯೂ, ನೀನು ಆ ಅರಸರೊಡನೆ ಸಮಾಧಿಗೆ ಸೇರುವುದಿಲ್ಲ, ಏಕೆಂದರೆ ನೀನು ದೇಶವನ್ನು ಹಾಳುಮಾಡಿ, ನಿನ್ನ ಪ್ರಜೆಯನ್ನು ಕೊಂದುಹಾಕಿದಿ. ದುಷ್ಟರ ಸಂತಾನವು ಎಂದೆಂದಿಗೂ ಜ್ಞಾಪಕಕ್ಕೆ ಬರುವುದಿಲ್ಲ.”
21 Tọ́jú ibìkan tí a ó ti pa àwọn ọmọkùnrin rẹ nítorí ẹ̀ṣẹ̀ àwọn baba ńlá wọn, wọn kò gbọdọ̀ dìde láti jogún ilẹ̀ kí wọ́n sì bo orí ilẹ̀ pẹ̀lú àwọn ìlú u wọn.
೨೧ಪೂರ್ವಿಕರ ಅಧರ್ಮದ ನಿಮಿತ್ತ ಅವನ ಮಕ್ಕಳಿಗೂ, ವಧ್ಯಸ್ಥಾನವನ್ನು ಸಿದ್ಧಮಾಡಿರಿ, ಅವರು ತಲೆಯೆತ್ತಿ, ಲೋಕವನ್ನು ವಶಪಡಿಸಿಕೊಂಡು ಭೂಮಂಡಲದ ಮೇಲೆಲ್ಲಾ ಪಟ್ಟಣಗಳನ್ನು ಕಟ್ಟಿಕೊಳ್ಳದಿರಲಿ.
22 “Èmi yóò dìde sókè sí wọn,” ni Olúwa àwọn ọmọ-ogun wí. “Èmi yóò ké orúkọ rẹ̀ kúrò ní Babeli àti àwọn tí ó sálà, àwọn ọmọ àti ìran rẹ̀,” ni Olúwa wí.
೨೨“ನಾನು ಅವರ ವಿರುದ್ಧವಾಗಿ ಏಳುತ್ತೇನೆ” ಇದು ಸೇನಾಧೀಶ್ವರನಾದ ಯೆಹೋವನ ನುಡಿ. “ನಾನು ಬಾಬೆಲಿನಿಂದ ಹೆಸರನ್ನೂ, ಉಳಿದ ಜನರನ್ನೂ, ಆಕೆಯ ಸಂತತಿಯನ್ನೂ ನಿರ್ಮೂಲ ಮಾಡುವೆನು” ಇದು ಸೇನಾಧೀಶ್ವರನಾದ ಯೆಹೋವನ ನುಡಿ.
23 Èmi yóò yí i padà sí ibùgbé àwọn òwìwí àti sí irà; Èmi yóò fi ọwọ́ ìparun gbá a, ni Olúwa àwọn ọmọ-ogun wí.
೨೩“ನಾನು ಆ ಪ್ರದೇಶವನ್ನು ಜವುಗು ನೆಲವನ್ನಾಗಿಯೂ, ಗೂಬೆಗಳ ಸೊತ್ತನ್ನಾಗಿಯೂ ಮಾಡುವೆನು. ನಾಶವೆಂಬ ಬರಲಿನಿಂದ ಗುಡಿಸಿಬಿಡುವೆನು” ಎಂದು ಸೇನಾಧೀಶ್ವರನಾದ ಯೆಹೋವನು ಹೇಳುತ್ತಾನೆ.
24 Olúwa àwọn ọmọ-ogun ti búra, “Gẹ́gẹ́ bí mo ti ṣètò, bẹ́ẹ̀ ni yóò rí, àti bí mo ti pinnu, bẹ́ẹ̀ ni yóò sì dúró.
೨೪ಸೇನಾಧೀಶ್ವರನಾದ ಯೆಹೋವನು ಆಣೆಯಿಟ್ಟು ಹೇಳುವುದೇನೆಂದರೆ, “ನಾನು ಸಂಕಲ್ಪಿಸಿದ್ದೇ ನೆರವೇರುವುದು, ಉದ್ದೇಶಿಸಿದ್ದೇ ಖಂಡಿತವಾಗಿ ನಿಲ್ಲುವುದು.
25 Èmi yóò run Asiria ní ilẹ̀ mi, ní àwọn orí òkè mi ni èmi yóò ti rún un mọ́lẹ̀. Àjàgà rẹ̀ ni a ó mú kúrò lọ́rùn àwọn ènìyàn mi, ẹrù u rẹ̀ ni ó mú kúrò ní èjìká wọn.”
೨೫ಅಶ್ಶೂರ್ಯರನ್ನು ನನ್ನ ದೇಶದಲ್ಲಿ ಮುರಿದು, ನನ್ನ ಬೆಟ್ಟಗಳ ಮೇಲೆ ತುಳಿದುಬಿಡುವೆನು. ಆಗ ಅವರು ಹೂಡಿದ ನೊಗವು ನನ್ನ ಜನರಿಂದ ತೊಲಗಿ, ಹೊರಿಸಿದ ಹೊರೆಯು ನನ್ನ ಜನರ ಹೆಗಲ ಮೇಲಿನಿಂದ ದೂರವಾಗುವುದು.
26 Èyí ni ètò tí a pinnu rẹ̀ fún gbogbo ayé, èyí ni ọwọ́ tí a nà jáde káàkiri gbogbo orílẹ̀-èdè.
೨೬ಇದೇ ಲೋಕದಲ್ಲೆಲ್ಲಾ ನೆರವೇರಬೇಕಾದ ನನ್ನ ಉದ್ದೇಶ, ಇದೇ ಜನಾಂಗಗಳ ಮೇಲೆಲ್ಲಾ ಚಾಚಿದ ನನ್ನ ಕೈ.
27 Nítorí Olúwa àwọn ọmọ-ogun ti pète, ta ni yóò sì ká a lọ́wọ́ kò? Ọwọ́ọ rẹ ti nà jáde, ta ni ó sì le è fà á padà?
೨೭ಏಕೆಂದರೆ ಸೇನಾಧೀಶ್ವರನಾದ ಯೆಹೋವನು ಉದ್ದೇಶಿಸಿದ್ದಾನೆ, ಅದನ್ನು ಯಾರು ವ್ಯರ್ಥಪಡಿಸುವರು? ಆತನ ಕೈ ಚಾಚಿದೆ, ಹಿಂದಕ್ಕೆ ತಳ್ಳುವವರು ಯಾರು?” ಎಂಬುದೇ.
28 Ọ̀rọ̀-ìmọ̀ yí wá ní ọdún tí ọba Ahasi kú.
೨೮ಅರಸನಾದ ಆಹಾಜನು ಮರಣ ಹೊಂದಿದ ವರ್ಷದಲ್ಲಿ ಈ ದೈವೋಕ್ತಿಯು ಬಂದಿತು:
29 Má ṣe yọ̀, gbogbo ẹ̀yin Filistia, pé ọ̀pá tí ó lù ọ́ ti dá; láti ibi gbòǹgbò ejò náà ni paramọ́lẹ̀ yóò ti hù jáde, èso rẹ̀ yóò sì jẹ́ oró ejò tí í jóni.
೨೯ಎಲೈ, ಎಲ್ಲಾ ಫಿಲಿಷ್ಟಿಯರೇ, ನಿಮ್ಮನ್ನು ಹೊಡೆದ ಕೋಲು ಮುರಿದುಹೋಯಿತೆಂದು ಉಲ್ಲಾಸಗೊಳ್ಳದಿರಿ; ಏಕೆಂದರೆ ನಾಗರ ಹಾವಿನ ಸಂತಾನದಿಂದ ವಿಷಸರ್ಪವು ಉಂಟಾಗುವುದು. ಅದರ ಸಂತತಿಯು ಹಾರುವ ಸರ್ಪವೇ.
30 Ẹni tí ó kúṣẹ̀ẹ́ jù yóò ní pápá oko, àwọn aláìní yóò sì dùbúlẹ̀ láìléwu. Ṣùgbọ́n gbòǹgbò o rẹ̀ ni èmi ó fi ìyàn parun, yóò sì ké àwọn ẹni rẹ tí ó sálà kúrò.
೩೦ಬಡವರಲ್ಲಿ ಹಿರಿಯ ಮಕ್ಕಳು ಆಹಾರವನ್ನು ಕಂಡುಕೊಳ್ಳುವರು. ದಿಕ್ಕಿಲ್ಲದವರೂ ನಿರ್ಭಯವಾಗಿ ಮಲಗಿಕೊಳ್ಳುವರು. ಆದರೆ ನಿಮ್ಮ ಸಂತಾನವನ್ನೋ ಕ್ಷಾಮದಿಂದ ಸಾಯಿಸುವೆನು, ನಿಮ್ಮಲ್ಲಿ ಉಳಿದವರನ್ನು (ಆ ಸರ್ಪವೇ) ಕ್ಷಾಮವು ಕೊಲ್ಲುವುದು.
31 Hu, ìwọ ẹnu-ọ̀nà! Kígbe, ìwọ ìlú! Yọ́ kúrò, gbogbo ẹ̀yin Filistia! Èéfín kurukuru kan ti àríwá wá, kò sì ṣí amóríbọ́ kan nínú ẹgbẹ́ wọn.
೩೧ಪುರದ್ವಾರವೇ, ಗೋಳಾಡು! ಪಟ್ಟಣವೇ, ಕೂಗು! ಎಲ್ಲಾ ಫಿಲಿಷ್ಟಿಯರೇ, ಕರಗಿ ಹೋಗುವಿರಿ! ಉತ್ತರದಿಂದ ಹೊಗೆಯು ಬರುತ್ತದೆ. ಆ ವ್ಯೂಹದಲ್ಲಿ ಹಿಂದೆ ಬೀಳುವವರು ಯಾರೂ ಇಲ್ಲ.
32 Kí ni ìdáhùn tí a ó fún agbẹnusọ orílẹ̀-èdè náà? “Olúwa ti fi ìdí Sioni kalẹ̀, àti nínú rẹ̀ ni àwọn ènìyàn rẹ̀ tí a ti pọ́n ọn lójú yóò ti rí ààbò o wọn.”
೩೨ಹೀಗಿರಲು ಜನಾಂಗಗಳ ರಾಯಭಾರಿಗಳಿಗೆ ಏನು ಉತ್ತರ ಕೊಡಬೇಕೆಂದರೆ ಯೆಹೋವನು ಚೀಯೋನನ್ನು ಸ್ಥಾಪಿಸಿದ್ದಾನೆ, ಬಾಧೆಪಟ್ಟ ಆತನ ಜನರು ಅದನ್ನು ಆಶ್ರಯಿಸಿಕೊಳ್ಳುವರು ಎಂಬುದೇ.

< Isaiah 14 >