< 2 Chronicles 28 >

1 Ahasi sì jẹ́ ẹni ogún ọdún nígbà tí ó bẹ̀rẹ̀ ìjọba, ó sì jẹ ọba ní Jerusalẹmu fún ọdún mẹ́rìndínlógún. Gẹ́gẹ́ bí i Dafidi baba rẹ̀ kò sì ṣe ohun rere ní ojú Olúwa.
ಆಹಾಜನು ಪಟ್ಟಕ್ಕೆ ಬಂದಾಗ ಅವನು ಇಪ್ಪತ್ತು ವರ್ಷದವನಾಗಿದ್ದನು. ಅವನು ಯೆರೂಸಲೇಮಿನಲ್ಲಿ ಹದಿನಾರು ವರ್ಷ ಆಳಿದನು. ಅವನು ಯೆಹೋವನ ಚಿತ್ತಾನುಸಾರವಾಗಿ ನಡೆಯಲಿಲ್ಲ. ತನ್ನ ಪೂರ್ವಿಕನಾದ ದಾವೀದನ ಮಾರ್ಗವನ್ನು ಬಿಟ್ಟುಬಿಟ್ಟನು.
2 Ó sì rìn ní ọ̀nà àwọn ọba Israẹli ó sì ṣe ère dídá fún ìsìn Baali
ಅವನು ಇಸ್ರಾಯೇಲ್ ರಾಜರ ಮಾರ್ಗದಲ್ಲಿ ನಡೆದು, ಬಾಳ್ ದೇವರುಗಳ ಎರಕದ ವಿಗ್ರಹಗಳನ್ನು ಮಾಡಿಸಿದ್ದಲ್ಲದೆ
3 Ó sì sun ẹbọ ní àfonífojì Hinnomu, ó sì sun àwọn ọmọ rẹ̀ nínú iná, gẹ́gẹ́ bí ohun ìríra àwọn orílẹ̀-èdè tí Olúwa lé jáde níwájú àwọn ọmọ Israẹli
ಅವನು ಬೆನ್ ಹಿನ್ನೋಮ್ ಎಂಬ ತಗ್ಗಿನಲ್ಲಿ ಧೂಪ ಹಾಕಿಸಿದ್ದಲ್ಲದೆ, ಯೆಹೋವನು ಇಸ್ರಾಯೇಲರ ಎದುರಿನಿಂದ ಓಡಿಸಿಬಿಟ್ಟ ಅನ್ಯಜನಾಂಗಗಳ ಅಸಹ್ಯ ಕಾರ್ಯಗಳನ್ನು ಅನುಸರಿಸಿ ತನ್ನ ಮಕ್ಕಳನ್ನು ಅಗ್ನಿಪ್ರವೇಶ ಮಾಡಿಸಿದನು.
4 Ó sì rú ẹbọ, ó sì sun tùràrí ní ibi gíga wọ́n nì lórí òkè kékeré àti lábẹ́ gbogbo igi tútù.
ಪೂಜಾಸ್ಥಳಗಳಲ್ಲೂ, ಗುಡ್ಡಗಳ ಮೇಲೆ ಹಾಗೂ ಎಲ್ಲಾ ಹಸಿರು ಮರಗಳ ಕೆಳಗೂ ಯಜ್ಞಗಳನ್ನೂ, ಧೂಪಗಳನ್ನೂ ಸಮರ್ಪಿಸಿದನು.
5 Nítorí náà, Olúwa Ọlọ́run rẹ̀ fi lé ọba Siria lọ́wọ́. Àwọn ará Siria sì pa á run, wọ́n sì kó púpọ̀ nínú àwọn ènìyàn rẹ̀ gẹ́gẹ́ bí ẹlẹ́wọ̀n, wọ́n sì kó wọn wá sí Damasku. Ó sì tún fi lé ọwọ́ ọba Israẹli pẹ̀lú, ẹni tí ó kó wọn ní ìgbèkùn púpọ̀ tí ó sì pa wọ́n ní ìpakúpa.
ಈ ಕಾರಣ ಅವನ ದೇವರಾದ ಯೆಹೋವನು, ಅವನನ್ನು ಅರಾಮ್ಯರ ಅರಸನ ಕೈಗೆ ಒಪ್ಪಿಸಿದನು. ಅರಾಮ್ಯರು ಅವನನ್ನು ಸೋಲಿಸಿ, ಅವನ ಜನರಲ್ಲಿ ಬಹಳಷ್ಟುಮಂದಿಯನ್ನು ಸೆರೆಹಿಡಿದು ದಮಸ್ಕಕ್ಕೆ ಒಯ್ದರು. ಇದಲ್ಲದೆ ಅವನು ಇಸ್ರಾಯೇಲ್ ರಾಜನ ಕೈಗೂ ಒಪ್ಪಿಸಲ್ಪಟ್ಟು, ಅವನಿಂದಲೂ ಪೂರ್ಣವಾಗಿ ಅಪಜಯ ಹೊಂದಿದನು.
6 Ní ọjọ́ kan Peka, ọmọ Remaliah, pa ọ̀kẹ́ mẹ́fà àwọn ọmọ-ogun ní Juda nítorí Juda ti kọ Olúwa Ọlọ́run baba wọn sílẹ̀.
ರೆಮಲ್ಯನ ಮಗನು ಇಸ್ರಾಯೇಲ್ಯರ ಅರಸನು ಆದ ಪೆಕಹ ಎಂಬವನು ಒಂದೇ ದಿನ ಯೆಹೂದ್ಯರಲ್ಲಿ ಲಕ್ಷದ ಇಪ್ಪತ್ತು ಸಾವಿರ ಮಂದಿಯನ್ನು ಕೊಲ್ಲಿಸಿದನು. ಇವರೆಲ್ಲರೂ ಯುದ್ಧವೀರರು. ಯೆಹೂದ್ಯರು ತಮ್ಮ ಪೂರ್ವಿಕರ ದೇವರಾದ ಯೆಹೋವನನ್ನು ತೊರೆದು ಬಿಟ್ಟಿದ್ದೇ ಇದಕ್ಕೆ ಕಾರಣವಾಗಿತ್ತು.
7 Sikri àti Efraimu alágbára sì pa Maaseiah ọmọ ọba, Aṣrikamu ìjòyè tí ó wà ní ìkáwọ́ ilé ọba, àti Elkana igbákejì ọba.
ರಾಜಪುತ್ರನಾದ ಮಾಸೇಯ, ರಾಜಗೃಹಾಧಿಪತಿಯಾದ ಅಜ್ರೀಕಾಮ್, ರಾಜಪ್ರತಿನಿಧಿಯಾದ ಎಲ್ಕಾನ ಎಂಬುವವರನ್ನು ಎಫ್ರಾಯೀಮ್ ದೇಶದ ಜಿಕ್ರಿಯೆಂಬ ಶೂರನು ಕೊಂದನು.
8 Àwọn ọmọ Israẹli sì kó ní ìgbèkùn lára àwọn arákùnrin wọn ọ̀kẹ́ mẹ́wàá àwọn aya wọn, àwọn ọmọkùnrin àti obìnrin wọn sì tún kó ọ̀pọ̀ ìkógun, èyí tí wọn kó padà lọ sí Samaria.
ಇದಲ್ಲದೆ, ಇಸ್ರಾಯೇಲರು ತಮ್ಮ ಬಂಧುಗಳಾದ ಯೆಹೂದ್ಯರಲ್ಲಿ ಎರಡು ಲಕ್ಷ ಹೆಂಗಸರನ್ನೂ, ಗಂಡು, ಹೆಣ್ಣು ಮಕ್ಕಳನ್ನೂ ಸೆರೆಹಿಡಿದು, ದೊಡ್ಡ ಕೊಳ್ಳೆಯನ್ನೂ ಸೂರೆಮಾಡಿಕೊಂಡು ಸಮಾರ್ಯಕ್ಕೆ ಒಯ್ದರು.
9 Ṣùgbọ́n wòlíì Olúwa tí orúkọ rẹ̀ ń jẹ́ Odedi wà níbẹ̀, ó sì jáde lọ láti lọ pàdé ogun nígbà tí ó padà sí Samaria. Ó sì wí fún wọn pé, “Nítorí Olúwa, Ọlọ́run baba yín bínú sí Juda ó sì fi wọ́n lé yín lọ́wọ́. Ṣùgbọ́n ẹ̀yin pa wọ́n ní ìpa oró tí ó de òkè ọ̀run.
ಅಲ್ಲಿ ಯೆಹೋವನ ಒಬ್ಬ ಪ್ರವಾದಿಯಿದ್ದನು; ಅ ವನ ಹೆಸರು ಓದೇದ್. ಅವನು ಸಮಾರ್ಯಕ್ಕೆ ಬರುತ್ತಿದ್ದ ಸೈನ್ಯದವರನ್ನು ಎದುರುಗೊಂಡು ಅವರಿಗೆ, “ನಿಮ್ಮ ಪೂರ್ವಿಕರ ದೇವರಾದ ಯೆಹೋವನು ಯೆಹೂದ್ಯರ ಮೇಲೆ ಕೋಪಗೊಂಡು ಅವರನ್ನು ನಿಮ್ಮ ಕೈಗೆ ಒಪ್ಪಿಸಿಕೊಟ್ಟನಷ್ಟೆ. ಅವರನ್ನು ಸಂಹರಿಸುವುದರಲ್ಲಿ ನಿಮ್ಮ ರೌದ್ರವು ಆಕಾಶವನ್ನು ಮುಟ್ಟಿತು.
10 Nísinsin yìí, ẹ̀yin ń pète láti mú ọkùnrin àti obìnrin Juda àti Jerusalẹmu ṣe gẹ́gẹ́ bí ẹrú yín, ẹ̀yin kò ha jẹ̀bi Olúwa Ọlọ́run yín, àní ẹ̀yin?
೧೦ಇದು ಸಾಲದೆಂದು ನೀವು ಯೆಹೂದ್ಯರನ್ನು, ಯೆರೂಸಲೇಮಿನವರನ್ನೂ ಬಲಾತ್ಕರಿಸಿ ದಾಸರನ್ನಾಗಿಯೂ, ದಾಸಿಯರನ್ನಾಗಿಯೂ ಮಾಡಿಕೊಳ್ಳಬೇಕೆಂದಿದ್ದೀರಿ. ದೇವರಾದ ಯೆಹೋವನಿಗೆ ವಿರುದ್ಧವಾದ ಅಪರಾಧಗಳು ನಿಮ್ಮಲ್ಲಿಯೂ ಇಲ್ಲವೇ?
11 Nísinsin yìí ẹ gbọ́ tèmi! Ẹ rán àwọn ìgbèkùn tí ẹ̀yin ti mú gẹ́gẹ́ bí àwọn ẹlẹ́wọ̀n padà nítorí ìbínú kíkan Olúwa ń bẹ lórí yín.”
೧೧ಈಗ ನೀವು ನನ್ನ ಮಾತಿಗೆ ಕಿವಿಗೊಟ್ಟು ನಿಮ್ಮ ಸಹೋದರರಿಂದ ಸೆರೆಯಾಗಿ ತಂದವರನ್ನು ಹಿಂದಕ್ಕೆ ಕಳುಹಿಸಿರಿ; ಇಲ್ಲವಾದರೆ ಯೆಹೋವನ ಕೋಪಾಗ್ನಿಯೂ ನಿಮ್ಮ ಮೇಲೆ ಉರಿಯುತ್ತದೆಯಷ್ಟೇ” ಎಂದನು.
12 Lẹ́yìn náà, díẹ̀ nínú àwọn olórí ní Efraimu, Asariah ọmọ Jehohanani, Berekiah ọmọ Meṣilemoti, Jehiskiah ọmọ Ṣallumu, àti Amasa ọmọ Hadlai, dìde sí àwọn tí o ti ogun náà bọ̀.
೧೨ಆಗ ಎಫ್ರಾಯೀಮ್ಯರಲ್ಲಿ ಮುಖಂಡರಾಗಿದ್ದ ಯೆಹೋಹಾನಾನನ ಮಗನಾದ ಅಜರ್ಯ, ಮೆಷಿಲ್ಲೇಮೋತನ ಮಗನಾದ ಬೆರಕ್ಯ, ಶಲ್ಲೂಮನ ಮಗನಾದ ಹಿಜ್ಕೀಯ, ಹದ್ಲೈಯನ ಮಗನಾದ ಅಮಾಸ ಎಂಬುವವರು ಯುದ್ಧದಿಂದ ಬರುವವರ ಮುಂದೆ ನಿಂತು,
13 Wọn si wí pé, “Ìwọ kò gbọdọ̀ mú àwọn ẹlẹ́wọ̀n wá síbí,” “tàbí àwa ti jẹ̀bi níwájú Olúwa, ṣe ẹ̀yin ń gbèrò láti fi kún ẹ̀ṣẹ̀ àti ẹ̀bi wa ni: nítorí tí ẹ̀bi wa ti tóbi púpọ̀, ìbínú rẹ̀ kíkan sì wà lórí Israẹli.”
೧೩ಅವರಿಗೆ, “ನೀವು ಸೆರೆಹಿಡಿದವರನ್ನು ಇಲ್ಲಿಗೆ ತರಬೇಡಿರಿ; ನೀವು ನಮ್ಮ ಪಾಪ ಅಪರಾಧಗಳ ಜೊತೆಯಲ್ಲಿ ಯೆಹೋವನಿಗೆ ವಿರುದ್ಧವಾದ ಮತ್ತೊಂದು ಅಪರಾಧವನ್ನು ಸೇರಿಸಬೇಕೆಂದಿರುವಿರಾ? ನಮ್ಮ ಅಪರಾಧವು ದೊಡ್ಡದು; ಇಸ್ರಾಯೇಲರ ಮೇಲಿರುವ ದೈವಕೋಪವು ಉಗ್ರವಾಗಿದೆ” ಎಂದು ಹೇಳಿದರು.
14 Bẹ́ẹ̀ ni àwọn ológun tú àwọn ẹlẹ́wọ̀n àti ìkógun sílẹ̀ níwájú àwọn ìjòyè àti gbogbo ìjọ ènìyàn.
೧೪ಭಟರು ಇದನ್ನು ಕೇಳಿ ಸೆರೆಯವರನ್ನೂ, ಕೊಳ್ಳೆಯನ್ನು ಅಧಿಪತಿಗಳ ಮತ್ತು ಸಮೂಹದವರ ಮುಂದೆಯೇ ಬಿಟ್ಟುಬಿಟ್ಚರು.
15 Àwọn ọkùnrin tí a pè pẹ̀lú orúkọ náà sì dìde, wọn sì mú àwọn ìgbèkùn náà, wọ́n sì fi ìkógun náà wọ̀ gbogbo àwọn tí ó wà ní ìhòhò nínú wọn, wọ́n sì wọ̀ wọ́n ní aṣọ, wọ́n sì bọ̀ wọ́n ní bàtà, wọ́n sì fún wọn ní oúnjẹ àti ohun mímu, wọ́n sì fi òróró kùn wọ́n ní ara, wọ́n sì kó gbogbo àwọn tí ó jẹ́ aláìlera nínú wọ́n sórí kẹ́tẹ́kẹ́tẹ́. Bẹ́ẹ̀ ni wọ́n sì kó wọn padà sí ọ̀dọ̀ àwọn arákùnrin wọn ní Jeriko, ìlú ọ̀pẹ, wọ́n sì padà sí Samaria.
೧೫ಆಗ ಹೆಸರು ಕೂಗಿದ ಪುರುಷರು ಎದ್ದು ಬಂದು ಸೆರೆಯವರಲ್ಲಿ ಬೆತ್ತಲೆಯಾದವರೆಲ್ಲರಿಗೆ ಕೊಳ್ಳೆಯಿಂದ ಉಡುವುದಕ್ಕೆ ಬಟ್ಟೆಗಳನ್ನೂ, ಕಾಲಿಗೆ ಚಪ್ಪಲಿಗಳನ್ನು ಕೊಟ್ಟರು. ಎಲ್ಲರಿಗೂ ಅನ್ನಪಾನಗಳನ್ನಿಟ್ಟು ತೈಲಹಚ್ಚಿದರು. ಬಳಲಿ ಹೋದವರನ್ನು ಕತ್ತೆಗಳ ಮೇಲೆ ಕುಳ್ಳಿರಿಸಿ, ಎಲ್ಲರನ್ನೂ ಯೆರಿಕೋವೆಂಬ ಖರ್ಜೂರ ನಗರಕ್ಕೆ ಕರೆದುಕೊಂಡು ಹೋಗಿ, ಅವರ ಬಂಧುಗಳ ಹತ್ತಿರ ಬಿಟ್ಟು, ಸಮಾರ್ಯಕ್ಕೆ ಹಿಂತಿರುಗಿ ಬಂದರು.
16 Ní àkókò ìgbà náà, ọba Ahasi ránṣẹ́ sí ọba Asiria fún ìrànlọ́wọ́.
೧೬ಆ ಕಾಲದಲ್ಲಿ ಅರಸನಾದ ಆಹಾಜನು ತನಗೆ ಸಹಾಯ ಮಾಡಬೇಕೆಂದು ಅಶ್ಶೂರದ ರಾಜರನ್ನು ದೂತರ ಮುಖಾಂತರ ಬೇಡಿಕೊಂಡನು.
17 Àwọn ará Edomu sì tún padà wá láti kọlu Juda kí wọn sì kó àwọn ẹlẹ́wọ̀n lọ.
೧೭ಏಕೆಂದರೆ ಎದೋಮ್ಯರು ಯೆಹೂದ್ಯರ ಮೇಲೆ ತಿರುಗಿ ಯುದ್ಧಕ್ಕೆ ಬಂದು ಅವರನ್ನು ಸೋಲಿಸಿ ಅನೇಕ ಜನರನ್ನು ಸೆರೆಯಾಗಿ ಒಯ್ದಿದ್ದರು.
18 Nígbà tí àwọn ará Filistini sì ti jagun ní ìlú pẹ̀tẹ́lẹ̀ wọ́n nì àti síhà gúúsù Juda. Wọ́n ṣẹ́gun wọ́n sì gba Beti-Ṣemeṣi, Aijaloni àti Gederoti, àti Soko, Timna, a ri Gimiso, pẹ̀lú ìletò wọn.
೧೮ಫಿಲಿಷ್ಟಿಯರು ಯೆಹೂದದ ತಗ್ಗಾದ ಪ್ರದೇಶದ ಮತ್ತು ದಕ್ಷಿಣಪ್ರಾಂತ್ಯದ ಪಟ್ಟಣಗಳ ಮೇಲೆ ಬಿದ್ದು ಬೇತ್‌ಷೆಮೆಷ್‌, ಅಯ್ಯಾಲೋನ್, ಗೆದೇರೋತ್ ಇವುಗಳನ್ನೂ ಸೋಕೋ, ತಿಮ್ನಾ, ಗಿಮ್ಜೋ ಇವುಗಳನ್ನೂ ಇವುಗಳಿಗೆ ಸೇರಿದ ಗ್ರಾಮಗಳನ್ನೂ ಸ್ವಾಧೀನಮಾಡಿಕೊಂಡು ಅವುಗಳಲ್ಲಿ ವಾಸವಾಗಿದ್ದರು.
19 Olúwa sì rẹ Juda sílẹ̀ nítorí Ahasi ọba Israẹli, nítorí ó sọ Juda di aláìní ìrànlọ́wọ́, ó sì ṣe ìrékọjá gidigidi sí Olúwa.
೧೯ಯೆಹೂದ್ಯರನ್ನು ಅಧರ್ಮಕ್ಕೆ ಪ್ರೇರೇಪಿಸಿ ಯೆಹೋವನಿಗೆ ದ್ರೋಹಮಾಡಿದ ಇಸ್ರಾಯೇಲ್ ರಾಜನಾದ ಆಹಾಜನ ನಿಮಿತ್ತವಾಗಿ ಯೆಹೋವನು ಯೆಹೂದ್ಯರನ್ನು ಈ ಪ್ರಕಾರವಾಗಿ ತಗ್ಗಿಸಿದನು.
20 Tiglat-Pileseri ọba Asiria wá sí ọ̀dọ̀ rẹ̀, ṣùgbọ́n ó fún ní ìpọ́njú dípò ìrànlọ́wọ́.
೨೦ಅಶ್ಶೂರದ ಅರಸನಾದ ತಿಗ್ಲತ್ಪಿಲೆಸರನು ಬಂದು ಅವನಿಗೆ ನೆರವಾಗುವುದಕ್ಕೆ ಬದಲಾಗಿ ಅವನನ್ನು ಕುಗ್ಗಿಸಿದನು.
21 Ahasi mú díẹ̀ nínú ìní ilé Olúwa àti láti ilé ọba àti láti ọ̀dọ̀ ọba ó sì fi wọ́n fún ọba Asiria: ṣùgbọ́n èyí kò ràn wọ́n lọ́wọ́.
೨೧ಆಹಾಜನು ಯೆಹೋವನ ಆಲಯದ ಅರಮನೆಯ ಪ್ರಭುಗಳ ಆಸ್ತಿಯನ್ನು ಸೂರೆಮಾಡಿಕೊಂಡು ಹೋಗಿ ಅಶ್ಶೂರದ ಅರಸನಿಗೆ ಕಾಣಿಕೆಯನ್ನಾಗಿ ಕೊಟ್ಟರೂ ಅವನಿಂದ ಏನೂ ಸಹಾಯವಾಗಲಿಲ್ಲ.
22 Ní àkókò ìpọ́njú rẹ̀ ọba Ahasi sì di aláìṣòótọ́ sí Olúwa.
೨೨ಕಷ್ಟ ಬಂದಾಗ ಅರಸನಾದ ಆಹಾಜನು ಯೆಹೋವನಿಗೆ ಮತ್ತಷ್ಟು ದ್ರೋಹಿಯಾದನು.
23 Ó sì rú ẹbọ sí òrìṣà àwọn Damasku, ẹni tí ó ṣẹ́gun wọn, nítorí ó rò wí pé, “Nítorí àwọn òrìṣà àwọn ọba Siria ti ràn wọ́n lọ́wọ́ kí wọn kí ó bà lè ràn mí lọ́wọ́.” Ṣùgbọ́n àwọn ni ìparun rẹ̀ àti ti gbogbo Israẹli.
೨೩ಹೇಗೆಂದರೆ “ಅರಾಮ್ ರಾಜರ ದೇವತೆಗಳು ಅವರಿಗೆ ಜಯವನ್ನು ಅನುಗ್ರಹಿಸುವೆ ಎಂದು ತಿಳಿದು; ನಾನೂ ಅವುಗಳಿಗೆ ಯಜ್ಞಸಮರ್ಪಿಸುವೆನು, ಆಗ ನನಗೂ ಜಯವಾಗುವುದು” ಎಂದುಕೊಂಡು ಅವನು ತನ್ನ ಅಪಜಯಕ್ಕೆ ಕಾರಣವಾಗಿದ್ದ ದಮಸ್ಕದ ದೇವತೆಗಳಿಗೆ ಯಜ್ಞಸಮರ್ಪಿಸಿದನು. ಆದರೆ ಆ ದೇವತೆಗಳ ದೆಸೆಯಿಂದ ಅವನಿಗೂ ಮತ್ತು ಎಲ್ಲಾ ಇಸ್ರಾಯೇಲರಿಗೂ ಕೇಡು ಉಂಟಾಯಿತು.
24 Ahasi sì kó gbogbo ohun èlò láti ilé Olúwa jọ ó sì kó wọn lọ. Ó sì ti ìlẹ̀kùn ilé Olúwa ó sì tẹ́ pẹpẹ fún ara rẹ̀ ní gbogbo igun Jerusalẹmu.
೨೪ಇದಲ್ಲದೆ, ಆಹಾಜನು ದೇವಾಲಯದ ಸಾಮಾನುಗಳನ್ನು ಒಟ್ಟುಗೂಡಿಸಿ ಅವುಗಳನ್ನು ಒಡೆದುಹಾಕಿದನು; ಯೆಹೋವನ ಆಲಯದ ಬಾಗಿಲುಗಳನ್ನು ಮುಚ್ಚಿ ಯೆರೂಸಲೇಮಿನ ಪ್ರತಿಯೊಂದು ಮೂಲೆಯಲ್ಲಿಯೂ ಯಜ್ಞವೇದಿಗಳನ್ನು ಕಟ್ಟಿಸಿದನು.
25 Ní gbogbo ìlú Juda ó sì kọ́ ibi gíga láti sun ẹbọ fún àwọn ọlọ́run mìíràn. Kí ó sì mú Olúwa, Ọlọ́run àwọn baba wọn bínú.
೨೫ಅನ್ಯದೇವತೆಗಳಿಗೆ ಧೂಪಹಾಕುವುದಕ್ಕಾಗಿ ಯೆಹೂದದ ಎಲ್ಲಾ ಪಟ್ಟಣಗಳಲ್ಲಿಯೂ ಪೂಜಾಸ್ಥಳಗಳನ್ನು ಏರ್ಪಡಿಸಿದನು. ಹೀಗೆ ತನ್ನ ಪೂರ್ವಿಕರ ದೇವರಾದ ಯೆಹೋವನನ್ನು ರೇಗಿಸಿದನು.
26 Ìyókù iṣẹ́ ìjọba rẹ̀ àti gbogbo ọ̀nà rẹ̀, láti ìbẹ̀rẹ̀ títí dé òpin, ni a kọ sínú ìwé àwọn ọba Juda àti ti Israẹli.
೨೬ಆಹಾಜನ ಉಳಿದ ಪೂರ್ವೋತ್ತರ ಚರಿತ್ರೆಯೂ ಮತ್ತು ಮಾಡಿದ ಅವನ ಎಲ್ಲಾ ಕೃತ್ಯಗಳೂ ಯೆಹೂದ್ಯರ ಮತ್ತು ಇಸ್ರಾಯೇಲರ ರಾಜ ಗ್ರಂಥದಲ್ಲಿ ಬರೆಯಲ್ಪಟ್ಟಿದೆ.
27 Ahasi sì sùn pẹ̀lú àwọn baba rẹ̀ a sì sin ín ní ìlú Jerusalẹmu ṣùgbọ́n wọn kò mú un wá sínú àwọn isà òkú àwọn ọba Israẹli. Hesekiah ọmọ rẹ sì jẹ ọba ní ipò rẹ̀.
೨೭ಆಹಾಜನು ತನ್ನ ಪೂರ್ವಿಕರ ಬಳಿಗೆ ಸೇರಲು ಅವನನ್ನು ಇಸ್ರಾಯೇಲ್ ರಾಜಸ್ಮಶಾನದಲ್ಲಿ ಹೂಣಿಡದೆ ಯೆರೂಸಲೇಮ್ ಪಟ್ಟಣದೊಳಗಣ ಒಂದು ಸ್ಥಳದಲ್ಲಿ ಹೂಣಿಟ್ಟರು, ಅವನ ನಂತರ ಅವನ ಮಗನಾದ ಹಿಜ್ಕೀಯನು ಅರಸನಾದನು.

< 2 Chronicles 28 >