< 2 Chronicles 11 >
1 Nígbà tí Rehoboamu dé Jerusalẹmu, ó kó ilé Juda àti Benjamini jọ, ọ̀kẹ́ mẹ́sàn-án ènìyàn tí a yàn, tí wọ́n jẹ́ ológun, láti bá Israẹli jà kí ó lè mú ìjọba náà padà bọ̀ sọ́dọ̀ rẹ̀.
೧ರೆಹಬ್ಬಾಮನು ಯೆರೂಸಲೇಮನ್ನು ತಲುಪಿದ ನಂತರ ಇಸ್ರಾಯೇಲ್ಯರಿಗೆ ವಿರುದ್ಧವಾಗಿ ಯುದ್ಧಮಾಡುವುದಕ್ಕೂ, ರಾಜ್ಯವನ್ನು ತಿರುಗಿ ತನ್ನ ವಶಪಡಿಸಿಕೊಳ್ಳುವುದಕ್ಕೂ ಯೆಹೂದ ಬೆನ್ಯಾಮೀನ್ ಕುಲಗಳಿಂದ ಲಕ್ಷದ ಎಂಭತ್ತು ಸಾವಿರ ಮಂದಿ ಶ್ರೇಷ್ಠ ಸೈನಿಕರನ್ನು ಕೂಡಿಸಿದನು.
2 Ṣùgbọ́n ọ̀rọ̀ Olúwa tọ Ṣemaiah ènìyàn Ọlọ́run wá wí pé,
೨ಆಗ ದೇವರ ಮನುಷ್ಯನಾದ ಶೆಮಾಯನಿಗೆ, ಯೆಹೋವನ ವಾಕ್ಯವು ಉಂಟಾಗಿ ಹೇಳಿದ್ದೇನಂದರೆ,
3 “Wí fún Rehoboamu ọmọ Solomoni ọba Juda, sí gbogbo àwọn ọmọ Israẹli ní Juda àti Benjamini,
೩“ನೀನು ಹೋಗಿ ಸೊಲೊಮೋನನ ಮಗನೂ, ಯೆಹೂದದ ಅರಸನಾದ ರೆಹಬ್ಬಾಮನಿಗೂ ಯೆಹೂದದ ಬೆನ್ಯಾಮೀನ್ ಕುಲಗಳ ಇಸ್ರಾಯೇಲರೆಲ್ಲರಿಗೂ,
4 ‘Èyí ní ohun tí Olúwa wí. Ẹ má ṣe gòkè lọ láti lọ jà pẹ̀lú arákùnrin yín, ẹ lọ sílé, gbogbo yín, nítorí ti ìṣe mi nìyí.’” Bẹ́ẹ̀ ni wọ́n tẹ̀lé ọ̀rọ̀ Ọlọ́run, wọ́n sì padà sẹ́yìn láti yan lọ dojúkọ Jeroboamu.
೪ಯೆಹೋವನು ಇಂತೆನ್ನುತ್ತಾನೆ, ‘ನೀವು ನಿಮ್ಮ ಸಹೋದರರೊಡನೆ ಯುದ್ಧಮಾಡುವುದಕ್ಕೆ ಹೋಗಬಾರದು. ಎಲ್ಲರೂ ಹಿಂತಿರುಗಿ ಹೋಗಿರಿ; ಈ ಕಾರ್ಯವು ಯೆಹೋವನಿಂದಾಗಿದೆ ಎಂದು ಹೇಳಬೇಕು’” ಎಂಬ ಯೆಹೋವನ ವಾಕ್ಯವುಂಟಾಗಲು ಅವರು ಯೆಹೋವನ ಮಾತನ್ನು ಕೇಳಿ ಯಾರೊಬ್ಬಾಮನಿಗೆ ವಿರುದ್ಧವಾಗಿ ಯುದ್ಧಕ್ಕೆ ಹೊರಡದೆ ಹಿಂತಿರುಗಿ ಹೋದರು.
5 Rehoboamu ń gbe ní Jerusalẹmu ó sì kọ́ àwọn ìlú fún olódi ní Juda.
೫ರೆಹಬ್ಬಾಮನು ಯೆರೂಸಲೇಮಿನಲ್ಲಿ ವಾಸವಾಗಿದ್ದು ಯೆಹೂದ ಸಂರಕ್ಷಣೆಗಾಗಿ ಪಟ್ಟಣಗಳನ್ನು ಕಟ್ಟಿಸಿದನು.
6 Bẹtilẹhẹmu, Etamu, Tekoa,
೬ಆ ಪಟ್ಟಣಗಳು ಯಾವುವೆಂದರೆ: ಬೇತ್ಲೆಹೇಮ್, ಏತಾಮ್, ತೆಕೋವ,
7 Beti-Suri, Soko, Adullamu,
೭ಬೇತ್ಚೂರ್, ಸೋಕೋ, ಅದುಲ್ಲಾಮ್,
9 Adoraimu, Lakiṣi, Aseka
೯ಅದೋರೈಮ್, ಲಾಕೀಷ್, ಅಜೇಕ,
10 Sora, Aijaloni, àti Hebroni. Wọ̀nyí ni àwọn ìlú ìdáàbòbò ní Juda àti Benjamini.
೧೦ಚೊರ್ಗ, ಅಯ್ಯಾಲೋನ್, ಹೆಬ್ರೋನ್. ಕೋಟೆಕೊತ್ತಲುಗಳುಳ್ಳ ಈ ಪಟ್ಟಣಗಳು ಯೆಹೂದ ಬೆನ್ಯಾಮೀನ್ ಪ್ರಾಂತ್ಯಗಳಾಗಿದ್ದವು.
11 Ó sì mú àwọn ìlú olódi lágbára, ó sì fi àwọn balógun sínú wọn àti àkójọ oúnjẹ, àti òróró àti ọtí wáìnì.
೧೧ಅವನು ಈ ಕೋಟೆಗಳನ್ನು ಬಲಪಡಿಸಿ, ನಾಯಕರ ವಶಕ್ಕೆ ಕೊಟ್ಟು, ಪ್ರತಿ ಒಂದರಲ್ಲಿ ಆಹಾರಪದಾರ್ಥ, ಎಣ್ಣೆ, ದ್ರಾಕ್ಷಾರಸವನ್ನು ಸಂಗ್ರಹಿಸಿಟ್ಟನು. ಗುರಾಣಿ ಬರ್ಜಿಗಳನ್ನೂ ಸಂಗ್ರಹಿಸಿಟ್ಟನು.
12 Àti ní olúkúlùkù ìlú ni ó fi asà àti ọ̀kọ̀ sí, ó sì mú wọn lágbára gidigidi, ó sì ní Juda àti Benjamini lábẹ́ rẹ̀.
೧೨ಪ್ರತಿಯೊಂದು ಪಟ್ಟಣದಲ್ಲಿ ಗುರಾಣಿ ಬರ್ಜಿಗಳನ್ನೂ ಸಂಗ್ರಹಿಸಿ, ಅವುಗಳನ್ನು ಮತ್ತಷ್ಟು ಭದ್ರಪಡಿಸಿದನು. ಯೆಹೂದ ಬೆನ್ಯಾಮೀನ್ ಕುಲಗಳು ಅವನ ಸ್ವಾಧೀನದಲ್ಲಿದ್ದವು.
13 Àwọn àlùfáà àti àwọn ará Lefi, láti gbogbo ẹ̀yà wọn jákèjádò Israẹli wà ní ẹ̀bá rẹ̀.
೧೩ಎಲ್ಲಾ ಇಸ್ರಾಯೇಲ್ ಪ್ರಾಂತ್ಯಗಳಲ್ಲಿದ್ದ ಯಾಜಕರೂ ಮತ್ತು ಲೇವಿಯರೂ ಅವನೊಡನೆ ಬಂದು ಸೇರಿಕೊಂಡರು.
14 Àwọn ará Lefi fi ìgbèríko sílẹ̀, wọ́n sì wá sí Juda àti Jerusalẹmu nítorí Jeroboamu àti àwọn ọmọ rẹ̀, ti kọ̀ wọ́n sílẹ̀ gẹ́gẹ́ bí àwọn àlùfáà Olúwa.
೧೪ಲೇವಿಯರು ಯೆಹೋವನಿಗೆ ಯಾಜಕ ಸೇವೆ ಮಾಡದಂತೆ ಯಾರೊಬ್ಬಾಮನೂ ಮತ್ತು ಅವನ ಮಕ್ಕಳೂ ಅವರನ್ನು ಬಹಿಷ್ಕರಿಸಿದ್ದರಿಂದ ಲೇವಿಯರು ತಮ್ಮ ಹುಲ್ಲುಗಾವಲುಗಳಿದ್ದ ತಮ್ಮ ಆಸ್ತಿಗಳನ್ನು ಬಿಟ್ಟು ಯೆಹೂದಕ್ಕೂ ಯೆರೂಸಲೇಮಿಗೂ ಬಂದರು.
15 Ó sì yan àwọn àlùfáà tirẹ̀ fún àwọn ibi gíga wọ̀n-ọn-nì, àti fún àwọn ère òbúkọ, àti fún ẹgbọrọ màlúù tí ó ṣe.
೧೫ಯಾರೊಬ್ಬಾಮನು ತಾನು ಏರ್ಪಡಿಸಿದ ಪೂಜಾ ಸ್ಥಳಗಳಿಗಾಗಿ ಹಾಗೂ ಹೋರಿಕುರಿಗಳ ಮೂರ್ತಿ ಪೂಜೆಗಳಿಗಾಗಿ ಬೇರೆ ಪೂಜಾರಿಗಳನ್ನು ನೇಮಿಸಿದನು.
16 Àwọn tó wá láti gbogbo ẹ̀yà Israẹli tí wọ́n fi ọkàn wọn fún wíwá Olúwa, Ọlọ́run Israẹli, tẹ̀lé àwọn ará Lefi lọ sí Jerusalẹmu láti lọ rú ẹbọ sí Olúwa Ọlọ́run baba a wọn.
೧೬ಇಸ್ರಾಯೇಲರ ಎಲ್ಲಾ ಕುಲಗಳಲ್ಲಿ ಇಸ್ರಾಯೇಲ್ ದೇವರಾದ ಯೆಹೋವನ ದರ್ಶನವನ್ನು ಬಯಸುತ್ತಿದ್ದವರು ತಮ್ಮ ಪೂರ್ವಿಕರ ದೇವರಾದ ಯೆಹೋವನಿಗೆ ಯಜ್ಞವನ್ನರ್ಪಿಸುವುದಕ್ಕಾಗಿ ಆ ಲೇವಿಯರನ್ನು ಹಿಂಬಾಲಿಸಿ ಯೆರೂಸಲೇಮಿಗೆ ಬಂದರು.
17 Ó fún ìjọba Juda ní agbára, ó sì ti Rehoboamu ọmọ Solomoni lẹ́yìn fún ọdún mẹ́ta nítorí ọdún mẹ́ta ni wọ́n fi rìn ní ọ̀nà ti Dafidi àti Solomoni ní àkókò yí.
೧೭ಇವರೆಲ್ಲರೂ ಮೊದಲನೆಯ ಮೂರು ವರ್ಷಗಳಲ್ಲಿ ದಾವೀದ ಹಾಗು ಸೊಲೊಮೋನರ ಮಾರ್ಗದಲ್ಲೇ ನಡೆಯುತ್ತಿದ್ದರು. ಅಂತೆಯೇ ಯೆಹೂದ ರಾಜ್ಯವು ಆ ವರ್ಷಗಳಲ್ಲಿ ಅಭಿವೃದ್ಧಿಯಾಗಿ, ಸೊಲೊಮೋನನ ಮಗನಾದ ರೆಹಬ್ಬಾಮನು ಬಲಗೊಂಡನು.
18 Rehoboamu fẹ́ Mahalati tí ó jẹ́ ọmọbìnrin ti ọmọkùnrin Dafidi Jerimoti bi àti ti Abihaili, ọmọbìnrin ti ọmọkùnrin Jese Eliabu bí.
೧೮ರೆಹಬ್ಬಾಮನು ದಾವೀದನ ಮಗನಾದ ಯೆರೀಮೋತನ ಮಗಳಾದ ಮಹ್ಲತ್ತಳನ್ನು, ಇಷಯನ ಮೊಮ್ಮಗಳೂ ಎಲೀಯಾಬನ ಮಗಳೂ ಆದ ಅಬೀಹೈಲಳನ್ನೂ ಹೆಂಡತಿಯನ್ನಾಗಿ ಮಾಡಿಕೊಂಡನು.
19 Ó bí àwọn ọmọ fún un: Jeuṣi, Ṣemariah àti Sahamu.
೧೯ಆಕೆಯು ಅವನಿಂದ ಯೆಗೂಷ್, ಶೆಮರ್ಯ, ಜಾಹಮ್ ಎಂಬ ಗಂಡು ಮಕ್ಕಳನ್ನು ಹೆತ್ತಳು.
20 Nígbà náà, ó fẹ́ Maaka ọmọbìnrin Absalomu, tí ó bí Abijah fún Attai, Sisa àti Ṣelomiti.
೨೦ಅನಂತರ ಅವನು ಅಬ್ಷಾಲೋಮನ ಮಗಳಾದ ಮಾಕ ಎಂಬಾಕೆಯನ್ನು ಮದುವೆಮಾಡಿಕೊಂಡನು; ಆಕೆಯು ಅವನಿಂದ ಅಬೀಯ, ಅತ್ತೈ, ಜೀಜ, ಶೆಲೋಮೀತ್ ಎಂಬುವರನ್ನು ಹೆತ್ತಳು.
21 Rehoboamu fẹ́ràn Maaka ọmọbìnrin Absalomu ju èyíkéyìí nínú àwọn ìyàwó rẹ̀ àti àwọn àlè rẹ̀ lọ. Ní gbogbo rẹ̀, ó ní ìyàwó méjìdínlógún àti ọgọ́ta àlè ọmọkùnrin méjìdínlọ́gbọ̀n àti ọgọ́ta ọmọbìnrin.
೨೧ರೆಹಬ್ಬಾಮನು ತನ್ನ ಎಲ್ಲಾ ಪತ್ನಿಯರಲ್ಲಿಯೂ, ಉಪಪತ್ನಿಯರಲ್ಲಿಯೂ ಅಬ್ಷಾಲೋಮನ ಮಗಳಾದ ಮಾಕಳನ್ನು ಹೆಚ್ಚಾಗಿ ಪ್ರೀತಿಸುತ್ತಿದ್ದನು. ಅವನಿಗೆ ಹದಿನೆಂಟು ಮಂದಿ ಪತ್ನಿಯರೂ, ಅರುವತ್ತು ಮಂದಿ ಉಪಪತ್ನಿಯರೂ ಇದ್ದರು. ಇವರಲ್ಲಿ ಅವನಿಗೆ ಇಪ್ಪತ್ತೆಂಟು ಮಂದಿ ಗಂಡುಮಕ್ಕಳೂ ಅರುವತ್ತು ಮಂದಿ ಹೆಣ್ಣುಮಕ್ಕಳೂ ಹುಟ್ಟಿದರು.
22 Rehoboamu yan Abijah ọmọ Maaka láti jẹ́ olóyè ọmọ-aládé láàrín àwọn arákùnrin rẹ̀, kí ó ba à lè ṣe é ní ọba.
೨೨ರೆಹಬ್ಬಾಮನು ಮಾಕಳ ಮಗನಾದ ಅಬೀಯನನ್ನು ಅರಸನನ್ನಾಗಿ ಮಾಡಬೇಕೆಂದು ಅವನನ್ನು ಅವನ ಅಣ್ಣ ತಮ್ಮಂದಿರಲ್ಲಿ ಪ್ರಧಾನನ್ನಾಗಿಯೂ ಪ್ರಭುವನ್ನಾಗಿಯೂ ನೇಮಿಸಿದನು.
23 Ó hùwà ọlọ́gbọ́n, nípa fí fọ́n díẹ̀ nínú àwọn ọmọ rẹ̀ jákèjádò ká àwọn agbègbè Juda àti Benjamini àti sí gbogbo àwọn ìlú ńlá olódi. Ó fún wọn ní ọ̀pọ̀ ohun tí wọ́n fẹ́, ó sì fẹ́ ọ̀pọ̀ ìyàwó fún wọn.
೨೩ತನ್ನ ಉಳಿದ ಎಲ್ಲಾ ಮಕ್ಕಳನ್ನು ಜಾಣತನದಿಂದ ವಿಂಗಡಿಸಿ, ಯೆಹೂದ ಬೆನ್ಯಾಮೀನ್ ಪ್ರದೇಶಗಳಲ್ಲಿದ್ದ ಕೋಟೆಕೊತ್ತಲುಗಳುಳ್ಳ ಆಯಾ ಪಟ್ಟಣಗಳಲ್ಲಿರಿಸಿ, ಅವರಿಗೆ ಬೇಕಾದಷ್ಟು ಆಹಾರವನ್ನು ಏರ್ಪಡಿಸಿ, ಅನೇಕ ಮಂದಿ ಹೆಂಡತಿಯರನ್ನೂ ಗೊತ್ತು ಮಾಡಿಕೊಟ್ಟನು.