< 1 Chronicles 5 >

1 Ǹjẹ́ àwọn ọmọ Reubeni, àkọ́bí Israẹli. (Nítorí òun ni àkọ́bí; ṣùgbọ́n, bí ó ti ṣe pé ó ba ibùsùn baba rẹ̀ jẹ́, a fi ogún ìbí rẹ̀ fún àwọn ọmọ Josẹfu ọmọ Israẹli: a kì yóò sì ka ìtàn ìdílé náà gẹ́gẹ́ bí ipò ìbí.
ಇಸ್ರಾಯೇಲನ ಚೊಚ್ಚಲ ಮಗನಾದ ರೂಬೇನನ ವಂಶಾವಳಿ. ರೂಬೇನನು ಚೊಚ್ಚಲ ಮಗನಾಗಿದ್ದರೂ ಅವನು ತನ್ನ ತಂದೆಯ ಉಪಪತ್ನಿಯೊಂದಿಗೆ ಸಂಗಮಿಸಿ ಹಾಸಿಗೆಯನ್ನು ಹೊಲೆ ಮಾಡಿದ್ದರಿಂದ ಅವನ ಹಕ್ಕು ಇಸ್ರಾಯೇಲನ ಮಗನಾದ ಯೋಸೇಫನ ಕುಲಕ್ಕೆ ಕೊಡಲ್ಪಟ್ಟಿತು.
2 Nítorí Juda borí àwọn arákùnrin rẹ̀, àti lọ́dọ̀ rẹ̀ ni aláṣẹ ti ń jáde wá; ṣùgbọ́n ogún ìbí jẹ́ ti Josẹfu),
ಆದರೆ ಯೆಹೂದನು ಎಲ್ಲಾ ಸಹೋದರರಲ್ಲಿ ಬಲಿಷ್ಠನಾದುದರಿಂದಲೂ, ರಾಜಾಧಿಕಾರವು ಇವನ ಕುಲಕ್ಕೆ ಬಂದುದರಿಂದಲೂ ಯೋಸೇಫನು ವಂಶಾವಳಿಯ ಪಟ್ಟಿಗಳಲ್ಲಿ ಚೊಚ್ಚಲ ಮಗನೆಂದು ಲಿಖಿತವಾಗಲಿಲ್ಲ. ಆದರೂ ಚೊಚ್ಚಲ ಮಗನಿಗೆ ಸಿಕ್ಕತಕ್ಕ ಪಾಲು ಅವನಿಗೆ ಸಿಕ್ಕಿತು.
3 àwọn ọmọ Reubeni àkọ́bí Israẹli ni: Hanoku àti Pallu, Hesroni àti Karmi.
ಇಸ್ರಾಯೇಲನ ಚೊಚ್ಚಲ ಮಗನಾದ ರೂಬೇನನ ಮಕ್ಕಳು: ಹನೋಕ್, ಫಲ್ಲೂ, ಹೆಚ್ರೋನ್ ಮತ್ತು ಕರ್ಮೀ.
4 Àwọn ọmọ Joẹli: Ṣemaiah ọmọ rẹ̀, Gogu ọmọ rẹ̀, Ṣimei ọmọ rẹ̀.
ಯೋವೇಲನ ವಂಶಾವಳಿ: ಇವನ ಮಗ ಶೆಮಾಯ; ಶೆಮಾಯನ ಮಗ ಗೋಗ್.
5 Mika ọmọ rẹ̀, Reaiah ọmọ rẹ̀, Baali ọmọ rẹ̀.
ಗೋಗನ ಮಗ ಶಿಮ್ಮೀ; ಇವನ ಮಗ ಮೀಕ. ಮೀಕನ ಮಗ ರೆವಾಯ, ಇವನ ಮಗ ಬಾಳ್.
6 Beera ọmọ rẹ̀, tí Tiglat-Pileseri ọba Asiria kó ní ìgbèkùn lọ. Ìjòyè àwọn ọmọ Reubeni ni Beera jẹ́.
ಬಾಳನ ಮಗ ಬೇರ. ರೂಬೇನ್ಯರ ಪ್ರಭುಗಳಲ್ಲೊಬ್ಬನಾಗಿದ್ದ ಇವನನ್ನು ಅಶ್ಶೂರದ ಅರಸನಾದ ತಿಗ್ಲತ್ ಫಿಲ್ನೇಸರನು ಸೆರೆಯೊಯ್ದನು.
7 Àti àwọn arákùnrin rẹ̀ nípa ìdílé wọn, nígbà tí a ń ka ìtàn ìdílé ìran wọn: Jeieli àti Sekariah ni olórí,
ವಂಶಾವಳಿಯ ಪಟ್ಟಿಯಲ್ಲಿ ಇವನ ಗೋತ್ರ ಸಂಬಂಧಿಗಳಾಗಿ ಲಿಖಿತರಾದವರು ನಾಯಕನಾದ ಯೆಗೀಯೇಲ್, ಜೆಕರ್ಯ, ಬೆಳ ಇವರೇ. ಬೆಳನು ಅಜಾಜನ ಮಗ.
8 àti Bela ọmọ Asasi ọmọ Ṣema, ọmọ Joẹli. Wọ́n tí ń gbé Aroeri àní títí dé Nebo àti Baali-Meoni.
ಬೆಳನು ಅಜಾಜನ ಮಗ. ಅಜಾಜನು ಶೆಮಯನ ಮಗ. ಶೆಮಯನು ಯೋವೇಲನ ಮಗ. ಯೋವೇಲ್ಯರು ಅರೋಯೇರಿನಿಂದ ನೆಬೋ ಮತ್ತು ಬಾಳ್ಮೆಯೋನ್ ಎಂಬ ಸ್ಥಳಗಳವರೆಗೂ ವಾಸಿಸುತ್ತಿದ್ದರು.
9 Àti níhà àríwá, o tẹ̀dó lọ títí dé àtiwọ aginjù láti odò Eufurate; nítorí tí ẹran ọ̀sìn wọn pọ̀ sí i ní ilẹ̀ Gileadi.
ಪೂರ್ವ ದಿಕ್ಕಿನಲ್ಲಿ ಯೂಫ್ರೆಟಿಸ್ ನದಿಯ ಈಚೆಯಲ್ಲಿರುವ ಅರಣ್ಯವು ಇವರ ಮೇರೆ. ಇವರಿಗೆ ಗಿಲ್ಯಾದ್ ದೇಶದಲ್ಲಿ ಅನೇಕ ದನ ಕುರಿಹಿಂಡುಗಳಿದ್ದವು.
10 Àti ní ọjọ́ Saulu, wọ́n bá àwọn ọmọ Hagari jagun, ẹni tí ó ṣubú nípa ọwọ́ wọn; wọ́n sì ń gbé inú àgọ́ wọn ní gbogbo ilẹ̀ àríwá Gileadi.
೧೦ಇವರು ಸೌಲನ ಕಾಲದಲ್ಲಿ ಹಗ್ರೀಯರೊಡನೆ ಯುದ್ಧಮಾಡಿ, ಅವರನ್ನು ಸಂಹರಿಸಿ, ಗಿಲ್ಯಾದಿನ ಪೂರ್ವದಿಕ್ಕಿನ ಪ್ರಾಂತ್ಯಗಳಲ್ಲಿದ್ದ ಅವರ ಡೇರೆಗಳಲ್ಲಿ ವಾಸಮಾಡ ತೊಡಗಿದನು.
11 Àti àwọn ọmọ Gadi ń gbé lékè wọn, ní ilẹ̀ Baṣani títí dé Saleka:
೧೧ರೂಬೇನ್ಯರ ಎದುರಿನಲ್ಲಿ ಬಾಷಾನ್ ಸೀಮೆಯ ಸಲ್ಕದವರೆಗೂ ವಾಸಿಸುತ್ತಿದ್ದವರು ಗಾದ್ ಕುಲದವರು:
12 Joẹli jẹ́ olórí, Ṣafamu ìran ọmọ Janai, àti Ṣafati ni Baṣani.
೧೨ಪ್ರಧಾನನಾದ ಯೋವೇಲ್, ಎರಡನೆಯವನಾದ ಶಾಫಾಮ್, ಯನ್ನೈ, ಬಾಷಾನಿನಲ್ಲಿರುವ ಶಾಫಾಟ್ ಇವರೂ ನಾಯಕರಾಗಿದ್ದರು.
13 Àti àwọn arákùnrin wọn ti ilẹ̀ àwọn baba wọn ní: Mikaeli, Meṣullamu Ṣeba, Jorai, Jaka, Sia àti Eberi méje.
೧೩ಮೀಕಾಯೇಲ್, ಮೆಷುಲ್ಲಾಮ್, ಶೆಬ, ಯೋರೈ, ಯಕ್ಕಾನ್, ಜೀಯ ಮತ್ತು ಏಬೆರ್ ಎಂಬ ಏಳು ಕುಟುಂಬಗಳೂ ಇವರ ಕುಲಸಂಬಂಧಿಗಳು.
14 Wọ̀nyí ni àwọn ọmọ Abihaili, ọmọ Huri, ọmọ Jeroa, ọmọ Gileadi, ọmọ Mikaeli, ọmọ Jeṣiṣai, ọmọ Jado, ọmọ Busi.
೧೪ಇವರು ಅಬೀಹೈಲನ ಮಕ್ಕಳು: ಅಬೀಹೈಲನು ಹೂರೀಯ ಮಗ, ಇವನು ಯಾರೋಹನ ಮಗ. ಯಾರೋಹನು ಗಿಲ್ಯಾದನ ಮಗ, ಇವನು ಮೀಕಾಯೇಲನ ಮಗ. ಮೀಕಾಯೇಲನು ಯೆಷೀಷೈಯನ ಮಗ, ಇವನು ಯಹ್ದೋವಿನ ಮಗ, ಇವನು ಅಹೀಬೂಜನ ಮಗ.
15 Ahi, ọmọ Adbeeli, ọmọ Guni, olórí ilé àwọn baba wọn.
೧೫ಅಹೀಬೂಜನು ಅಬ್ದೀಯೇಲನ ಮಗ. ಅಬ್ದೀಯೇಲನು ಗೂನೀಯನ ಮಗ. ಇವನು ಇವರ ಗೋತ್ರದ ಮೂಲಪುರುಷನು.
16 Wọ́n sì ń gbé Gileadi ní Baṣani àti nínú àwọn ìlú rẹ̀, àti nínú gbogbo ìgbèríko Ṣaroni, ní agbègbè wọn.
೧೬ಗಾದ್ಯರು ಗಿಲ್ಯಾದಿನಲ್ಲಿಯೂ ಬಾಷಾನಿನಲ್ಲಿಯೂ, ಅದರ ಗ್ರಾಮಗಳಲ್ಲಿಯೂ, ಶಾರೋನಿನ ಎಲ್ಲಾ ಹುಲ್ಲುಗಾವಲುಗಳಲ್ಲಿಯೂ ಅವುಗಳ ಮೇರೆಗಳಲ್ಲಿಯೂ ವಾಸಿಸುತ್ತಿದ್ದರು.
17 Gbogbo wọ̀nyí ni a kà nípa ìtàn ìdílé, ní ọjọ́ Jotamu ọba Juda, àti ní ọjọ́ Jeroboamu ọba Israẹli.
೧೭ಅವರೆಲ್ಲರೂ ಯೆಹೂದ್ಯರ ಅರಸನಾದ ಯೋತಾಮನ ಕಾಲದಲ್ಲಿಯೂ, ಇಸ್ರಾಯೇಲರ ಅರಸನಾದ ಯಾರೊಬ್ಬಾಮನ ಕಾಲದಲ್ಲಿಯೂ ವಂಶಾವಳಿಯ ಪಟ್ಟಿಯಲ್ಲಿ ದಾಖಲಿಸಲ್ಪಟ್ಟರು.
18 Àwọn ọmọ Reubeni, àti àwọn ọmọ Gadi, àti ààbọ̀ ẹ̀yà Manase, nínú àwọn ọkùnrin alágbára tí wọ́n ń gbé asà àti idà, tí wọ́n sì ń fi ọrun tafà, tí wọ́n sì mòye ogun, jẹ́ ọ̀kẹ́ méjì ó lé ẹgbẹ̀rìnlélógún dín ogójì ènìyàn, tí ó jáde lọ sí ogún náà.
೧೮ರೂಬೇನ್ಯರು, ಗಾದ್ಯರು, ಮನಸ್ಸೆ ಕುಲದ ಅರ್ಧ ಜನರು ಇವರಲ್ಲಿ ರಣವೀರರೂ ಗುರಾಣಿ ಖಡ್ಗಗಳನ್ನು ಹಿಡಿಯುವವರೂ, ಬಿಲ್ಲನ್ನು ಬೊಗ್ಗಿಸುವವರೂ, ಯುದ್ಧ ನಿಪುಣರೂ ಆಗಿರುವ ನಲ್ವತ್ತನಾಲ್ಕು ಸಾವಿರದ ಏಳು ನೂರ ಅರವತ್ತು ಸೈನಿಕರಿದ್ದರು.
19 Wọ́n sì bá àwọn ọmọ Hagari jagun, pẹ̀lú Jeturi, àti Nafiṣi àti Nadabu.
೧೯ಅವರು ಹೋಗಿ ಹಗ್ರೀಯ, ಯೆಟೂರ್, ನಾಫೀಷ್ ಮತ್ತು ನೋದಾಬ್ ಇವರೊಡನೆಯೂ ಯುದ್ಧಮಾಡಿದರು.
20 Nígbà tí wọ́n sì rí ìrànlọ́wọ́ gbà si, a sì fi àwọn ọmọ Hagari lé wọn lọ́wọ́, àti gbogbo àwọn tí ó wà pẹ̀lú wọn; nítorí tiwọn ké pe Ọlọ́run ní ogun náà, òun sì gbọ́ ẹ̀bẹ̀ wọn; nítorí tí wọ́n gbẹ́kẹ̀ wọn lé e.
೨೦ಅವರು ದೇವರ ಮೇಲೆ ಭರವಸೆ ಇಟ್ಟಿದ್ದರಿಂದ ಮೊರೆಯಿಟ್ಟ ಅವರ ಪ್ರಾರ್ಥನೆಗೆ ಕಿವಿಗೊಟ್ಟು ಯುದ್ಧದಲ್ಲಿ ಜಯವನ್ನು ಅನುಗ್ರಹಿಸಿದನು. ಹಗ್ರೀಯರೂ ಇವರ ಜೊತೆಯಲ್ಲಿದ್ದವರೂ ಅವರ ಕೈಯಲ್ಲಿ ಕೊಡಲ್ಪಟ್ಟರು.
21 Wọ́n sì kó ẹran ọ̀sìn wọn lọ; ìbákasẹ ẹgbàá mẹ́ẹ̀ẹ́dọ́gbọ̀n àti àgùntàn ọ̀kẹ́ méjìlá ó lé ẹgbàárùn-ún, àti kẹ́tẹ́kẹ́tẹ́ ẹgbẹ̀rún méjì, àti ènìyàn ọ̀kẹ́ márùn-ún.
೨೧ಈ ಯುದ್ಧದಲ್ಲಿ ಅವರ ಹಿಂಡುಗಳನ್ನು ಅಂದರೆ, ಐವತ್ತು ಸಾವಿರ ಒಂಟೆಗಳು, ಎರಡು ಲಕ್ಷದ ಐವತ್ತು ಸಾವಿರ ಕುರಿಗಳೂ, ಎರಡು ಸಾವಿರ ಕತ್ತೆಗಳು ಮತ್ತು ಒಂದು ಲಕ್ಷ ಜನರನ್ನೂ ಕೊಳ್ಳೆಹಿಡಿದರು.
22 Nítorí ọ̀pọ̀lọpọ̀ ni ó ṣubú tí a pa, nítorí láti ọ̀dọ̀ Ọlọ́run ni ogun náà, wọ́n sì jókòó ní ipò wọn títí di ìgbà ìkólọ sí ìgbèkùn.
೨೨ಏಕೆಂದರೆ ದೇವರು ಅವರ ಪರವಾಗಿ ಯುದ್ಧಮಾಡಿದ್ದರಿಂದ ಅವರು ವೈರಿಗಳಲ್ಲಿ ಅನೇಕರನ್ನು ತಿವಿದು ಕೊಂದದ್ದಲ್ಲದೆ, ತಾವು ಸೆರೆಯಾಗಿ ಹೋಗುವವರೆಗೂ ಅವರ ಊರುಗಳಲ್ಲಿ ವಾಸಿಸಿದರು.
23 Àwọn ọmọkùnrin ààbọ̀ ẹ̀yà Manase ń gbé ní ilẹ̀ náà: wọ́n bí sí i láti Baṣani títí dé Baali-Hermoni, àti Seniri àti títí dé òkè Hermoni.
೨೩ಮನಸ್ಸೆ ಕುಲದ ಅರ್ಧಜನರು ಬಾಷಾನಿನಿಂದ ಬಾಳ್ ಹೆರ್ಮೋನ್, ಸೆನೀರ್, ಹೆರ್ಮೋನ್ ಗಿರಿ ಇವುಗಳ ವರೆಗೂ ವಿಸ್ತರಿಸಿಕೊಂಡಿರುವ ಪ್ರಾಂತ್ಯಗಳಲ್ಲಿ ವಾಸಿಸಿದರು.
24 Wọ̀nyí sì ni àwọn olórí ilé àwọn baba wọn. Eferi, Iṣi, Elieli, Asrieli, Jeremiah, Hodafiah àti Jahdieli àwọn alágbára akọni ọkùnrin, ọkùnrin olókìkí, àti olórí ilé àwọn baba wọn.
೨೪ಇವರ ಗೋತ್ರಗಳ ಪ್ರಧಾನ ಪುರುಷರು ಏಫೆರ್, ಇಷ್ಷೀ, ಎಲೀಯೇಲ್, ಅಜ್ರೀಯೇಲ್, ಯೆರೆಮೀಯ, ಹೋದವ್ಯ ಮತ್ತು ಯೆಹ್ತೀಯೇಲ್. ಇವರು ರಣವೀರರೂ ಪ್ರಖ್ಯಾತಿ ಹೊಂದಿದವರು ಗೋತ್ರಪ್ರಧಾನರೂ ಆಗಿದ್ದರು.
25 Wọ́n sì ṣẹ̀ sí Ọlọ́run àwọn baba wọn, wọ́n sì ṣe àgbèrè tọ àwọn ọlọ́run ènìyàn ilẹ̀ náà lẹ́yìn, tí Ọlọ́run ti parun ní iwájú wọn.
೨೫ಅವರು ತಮ್ಮ ಪೂರ್ವಿಕರ ದೇವರಿಗೆ ದ್ರೋಹಿಗಳಾಗಿದರು. ಯೆಹೋವನು ತಮ್ಮ ಮುಂದೆಯೇ ಸಂಹರಿಸಿದ ಆ ದೇಶದ ನಿವಾಸಿಗಳ ದೇವರುಗಳನ್ನು ಆರಾಧಿಸತೊಡಗಿದರು.
26 Nítorí náà Ọlọ́run Israẹli ru ẹ̀mí Pulu ọba Asiria sókè (èyí ni Tiglat-Pileseri ọba Asiria), ó si kó wọn lọ, àní àwọn ọmọ Reubeni àti àwọn ọmọ Gadi, àti ààbọ̀ ẹ̀yà Manase lọ sí ìgbèkùn. Ó sì kó wọn wá sí Hala, àti Habori, àti Harani, àti sí etí odò Gosani; títí dí òní yìí.
೨೬ಆದುದರಿಂದ ಅಶ್ಶೂರದ ಅರಸನಾದ ಪೂಲ್, ತಿಗ್ಲತ್ಪಿಲೆಸರ್ ಎಂಬವರು ಇಸ್ರಾಯೇಲ್ ದೇವರ ಪ್ರೇರಣೆಯಿಂದ ಬಂದು ರೂಬೇನ್ಯರು, ಗಾದ್ಯರು, ಮನಸ್ಸೆ ಕುಲದ ಅರ್ಧ ಜನರು ಇವರನ್ನು ಹಲಹ, ಹಾಬೋರ್, ಹಾರ ಎಂಬ ಪ್ರಾಂತ್ಯಗಳಿಗೂ, ಗೋಜಾನ್ ನದಿಯ ಪ್ರದೇಶಗಳಿಗೂ ಸೆರೆ ಹಿಡಿದು ಕರೆದೊಯ್ದರು. ಅವರು ಇಂದಿನವರೆಗೂ ಅಲ್ಲಿಯೇ ನೆಲೆಸುವಂತೆ ದೇವರು ಮಾಡಿದ್ದಾನೆ.

< 1 Chronicles 5 >