< 1 Chronicles 18 >
1 Ní àkókò kan, Dafidi kọlu àwọn ará Filistini, ó sì ṣẹ́gun wọn. Ó sì mú Gati àti àwọn ìletò agbègbè rẹ̀ kúrò lábẹ́ ìdarí àwọn ará Filistini.
೧ದಾವೀದನು ಫಿಲಿಷ್ಟಿಯರನ್ನು ಮುತ್ತಿಗೆಹಾಕಿ, ಅವರನ್ನು ಸೋಲಿಸಿ, ಅವರಿಂದ ಗತ್ ಪಟ್ಟಣವನ್ನೂ ಮತ್ತು ಅದರ ಗ್ರಾಮಗಳನ್ನೂ ತೆಗೆದುಕೊಂಡನು.
2 Dafidi borí àwọn ará Moabu, wọ́n sì di ọmọ-ẹ̀yìn rẹ̀, wọ́n sì mú owó òde wá.
೨ಇದಲ್ಲದೆ ಅವನು ಮೋವಾಬ್ಯರನ್ನು ಸೋಲಿಸಿದನು. ಅವರು ದಾವೀದನಿಗೆ ದಾಸರಾಗಿ ಕಪ್ಪಕೊಡಬೇಕಾಯಿತು.
3 Síbẹ̀, Dafidi sì kọlu Hadadeseri ọba Soba ní Hamati, bí ó ti ń lọ láti fi ìdí ìjọba rẹ̀ múlẹ̀ létí odò Eufurate.
೩ದಾವೀದನು ಯೂಫ್ರೆಟಿಸ್ ನದಿಯ ಸುತ್ತಣ ಪ್ರದೇಶದಲ್ಲಿ ತನ್ನ ರಾಜ್ಯಾಧಿಕಾರವನ್ನು ಸ್ಥಾಪಿಸುವುದಕ್ಕೆ ಹೋಗುತ್ತಿದ್ದ ಚೋಬದ ಅರಸನಾದ ಹದರೆಜರನನ್ನು ಹಮಾತಿನ ಬಳಿಯಲ್ಲಿ ಸೋಲಿಸಿದನು.
4 Dafidi fi agbára gba ẹgbẹ̀rún kẹ̀kẹ́ rẹ̀, ẹ̀ẹ́dẹ́gbàárin agun-kẹ̀kẹ́ àti ogún ẹgbẹ̀rún ológun ilẹ̀. Ó sì já gbogbo ọgọ́rùn-ún iṣan ẹsẹ̀ àwọn kẹ̀kẹ́-ẹṣin náà.
೪ದಾವೀದನು ಅವನ ಸಾವಿರ ರಥಗಳನ್ನೂ, ಏಳುಸಾವಿರ ರಾಹುತರನ್ನೂ, ಇಪ್ಪತ್ತು ಸಾವಿರ ಕಾಲಾಳುಗಳನ್ನೂ ಸೆರೆಹಿಡಿದು, ನೂರು ಕುದುರೆಗಳನ್ನಿಟ್ಟುಕೊಂಡು, ಉಳಿದ ಕುದುರೆಗಳ ಹಿಂಗಾಲಿನ ನರಗಳನ್ನು ಕತ್ತರಿಸಿ ಬಿಟ್ಟನು.
5 Nígbà ti àwọn ará Siria ti Damasku wá láti ran Hadadeseri ọba Soba lọ́wọ́, Dafidi lu ẹgbẹ̀rún méjìlélógún wọn bọ lẹ̀.
೫ದಮಸ್ಕದ ಅರಾಮ್ಯರು ಚೋಬದ ಅರಸನಾದ ಹದದೆಜರನನ್ನು ರಕ್ಷಿಸಲು ಬಂದಾಗ ದಾವೀದನು ಅವರನ್ನೂ ಸೋಲಿಸಿ, ಅವರಲ್ಲಿ ಇಪ್ಪತ್ತೆರಡು ಸಾವಿರ ಜನರನ್ನು ಕೊಂದನು.
6 Ó sì fi àwọn ọ̀wọ́ ọmọ-ogun rẹ sínú ìjọba Siria ti Damasku, àwọn ará Siria sì ń sìn ní abẹ́ rẹ̀, wọ́n sì mú owó ìṣákọ́lẹ̀ wá. Olúwa sì ń fún Dafidi ní ìṣẹ́gun ní ibi gbogbo tí ó bá lọ.
೬ಇದಲ್ಲದೆ ಅವನು ದಮಸ್ಕದ ಅರಾಮ್ಯ ದೇಶದಲ್ಲಿ ಕಾವಲುದಂಡನ್ನು ಇರಿಸಿದನು. ಹೀಗೆ ಅರಾಮ್ಯರು ಅವನ ಸೇವಕರಾಗಿ ಅವನಿಗೆ ಕಪ್ಪ ಕೊಡುವವರಾದರು. ಯೆಹೋವನ ಅನುಗ್ರಹದಿಂದ ದಾವೀದನಿಗೆ ಎಲ್ಲಿ ಹೋದರೂ ವಿಜಯ ದೊರಕಿತು.
7 Dafidi mú àpáta wúrà tí àwọn ìjòyè Hadadeseri gbé, ó sì gbé wọn wá sí Jerusalẹmu.
೭ದಾವೀದನು ಹದರೆಜರನ ಸೇವಕರಿಗಿದ್ದ ಬಂಗಾರದ ಗುರಾಣಿಗಳನ್ನು ಕಿತ್ತುಕೊಂಡು ಯೆರೂಸಲೇಮಿಗೆ ತೆಗೆದುಕೊಂಡು ಹೋದನು.
8 Láti Tibhati àti Kuni, àwọn ìlú Hadadeseri, Dafidi kó ọ̀pọ̀lọpọ̀ idẹ tí Solomoni lò láti fi ṣe okùn idẹ, àwọn òpó àti oríṣìí ohun èlò idẹ.
೮ಇದಲ್ಲದೆ ದಾವೀದನು ಹದರೆಜರನ ಟಿಭತ್ ಮತ್ತು ಕೂನ್ ಎಂಬ ಪಟ್ಟಣಗಳಿಂದ ಬಹಳ ತಾಮ್ರವನ್ನು ತೆಗೆದುಕೊಂಡು ಹೋದನು. ಸೊಲೊಮೋನನು ಆ ತಾಮ್ರದಿಂದ ಕಂಚಿನ ಕಡಲೆಂಬ ಪಾತ್ರೆಯನ್ನೂ, ಕಂಬಗಳನ್ನೂ ಮತ್ತು ಬೇರೆ ಸಾಮಾನುಗಳನ್ನು ಇದೇ ತಾಮ್ರದಿಂದ ಮಾಡಿಸಿದನು.
9 Nígbà tí Tou ọba Hamati gbọ́ pé Dafidi ti borí gbogbo ọmọ-ogun Hadadeseri ọba Soba.
೯ದಾವೀದನು ಚೋಬದ ಅರಸನಾದ ಹದದೆಜರನ ಸೈನ್ಯವನ್ನೆಲ್ಲಾ ಸೋಲಿಸಿದನೆಂಬ ವರ್ತಮಾನವು ಹಮಾತಿನ ಅರಸನಾದ ತೋವಿಗೆ ಮುಟ್ಟಿತು.
10 Ó rán ọmọ rẹ̀ Hadoramu sí ọba Dafidi láti kí i àti láti lọ bá a yọ̀ lórí ìṣẹ́gun rẹ̀ nínú ogun lórí Hadadeseri, tí ó wà lójú ogun pẹ̀lú Tou. Hadoramu mú oríṣìíríṣìí ohun èlò ti wúrà àti fàdákà àti idẹ wá.
೧೦ತೋವಿಗೂ ಹದರೆಜನಿಗೂ ವಿರೋಧವಿತ್ತು. ದಾವೀದನು ಹದದೆಜರನ ವಿರುದ್ಧ ಹೋರಾಡಿ ಅವನನ್ನು ಸೋಲಿಸಿದ್ದರಿಂದ, ತೋವು ದಾವೀದನನ್ನು ವಂದಿಸುವುದಕ್ಕೂ, ಹಾರೈಸುವುದಕ್ಕೂ ತನ್ನ ಮಗನಾದ ಹದೋರಾಮನನ್ನು ಕಳುಹಿಸಿದನು. ಇವನು ಬರುವಾಗ ದಾವೀದನಿಗೋಸ್ಕರ ವಿಧವಿಧವಾದ ತಾಮ್ರ, ಬೆಳ್ಳಿ, ಬಂಗಾರಗಳ ಪಾತ್ರೆಗಳನ್ನು ತಂದನು.
11 Ọba Dafidi ya ohun èlò wọ́n yí sí mímọ́ fún Olúwa, gẹ́gẹ́ bí ó ti ṣe pẹ̀lú fàdákà àti wúrà tí ó ti mú láti gbogbo àwọn orílẹ̀-èdè wọ̀nyí: Edomu àti Moabu, ará Ammoni àti àwọn ará Filistini àti Amaleki.
೧೧ಅರಸನಾದ ದಾವೀದನು ಇವುಗಳನ್ನೂ ಎದೋಮ್ಯರು, ಮೋವಾಬ್ಯರು, ಅಮ್ಮೋನಿಯರು, ಫಿಲಿಷ್ಟಿಯರು ಮತ್ತು ಅಮಾಲೇಕ್ಯರು ಎಂಬೀ ಸುತ್ತಲಿನ ಜನಾಂಗಗಳಿಂದ ವಶಪಡಿಸಿಕೊಂಡ ಬೆಳ್ಳಿ ಬಂಗಾರವನ್ನು ಯೆಹೋವನಿಗೋಸ್ಕರ ಪ್ರತಿಷ್ಠಿಸಿದನು.
12 Abiṣai ọmọ Seruiah lu ẹgbàá mẹ́sàn ará Edomu bolẹ̀ ní àfonífojì Iyọ̀.
೧೨ಇದಲ್ಲದೆ ಚೆರೂಯಳ ಮಗನಾದ ಅಬ್ಷೈಯು ಉಪ್ಪಿನ ತಗ್ಗಿನಲ್ಲಿ ಎದೋಮ್ಯರ ಹದಿನೆಂಟು ಸಾವಿರ ಸೈನಿಕರನ್ನು ಸೋಲಿಸಿದನು.
13 Ó fi ẹgbẹ́ ogun sí Edomu, gbogbo àwọn ará Edomu sì ń sìn ní abẹ́ Dafidi. Olúwa fún Dafidi ní ìṣẹ́gun ní gbogbo ibí tí ó bá lọ.
೧೩ದಾವೀದನು ಎದೋಮಿನಲ್ಲಿ ಕಾವಲುದಂಡುಗಳನ್ನಿರಿಸಿದನು. ಎದೋಮ್ಯರೆಲ್ಲರೂ ದಾವೀದನ ದಾಸರಾದರು. ಯೆಹೋವನ ಅನುಗ್ರಹದಿಂದ ದಾವೀದನಿಗೆ ಎಲ್ಲಿ ಹೋದರೂ ಜಯದೊರಕಿತು.
14 Dafidi jẹ ọba lórí gbogbo Israẹli, ó sì ṣe òdodo àti ohun tí ó yẹ fún gbogbo àwọn ènìyàn rẹ̀.
೧೪ದಾವೀದನು ಇಸ್ರಾಯೇಲರೆಲ್ಲರ ಅರಸನಾಗಿ ಎಲ್ಲಾ ಪ್ರಜೆಗಳಿಗೂ ಧರ್ಮತಪ್ಪದೆ ನೀತಿ ಮತ್ತು ನ್ಯಾಯದಿಂದ ಕಾರ್ಯ ನಿರ್ವಹಿಸುತ್ತಿದ್ದನು.
15 Joabu ọmọ Seruiah jẹ́ olórí ẹgbẹ́ ọmọ-ogun; Jehoṣafati ọmọ Ahiludi jẹ́ akọ̀wé ìrántí;
೧೫ಚೆರೂಯಳ ಮಗನಾದ ಯೋವಾಬನು ಅವನ ಸೇನಾಧಿಪತಿಯೂ, ಅಹೀಲೂದನ ಮಗನಾದ ಯೆಹೋಷಾಫಾಟನು ಮಂತ್ರಿಯೂ ಆಗಿದ್ದರು.
16 Sadoku ọmọ Ahitubu àti Abimeleki ọmọ Abiatari jẹ́ àwọn àlùfáà; Ṣafṣa jẹ́ akọ̀wé;
೧೬ಅಹೀಟೂಬನ ಮಗನಾದ ಚಾದೋಕನೂ ಮತ್ತು ಅಬೀಮೆಲೆಕನ ಮಗನಾದ ಎಬ್ಯಾತಾರನೂ ಅವನ ಯಾಜಕರಾಗಿದ್ದರು. ಶವ್ಷನು ಲೇಖಕನು.
17 Benaiah ọmọ Jehoiada jẹ́ olórí àwọn Kereti àti Peleti; àwọn ọmọ Dafidi sì ni àwọn olóyè oníṣẹ́ ní ọ̀dọ̀ ọba.
೧೭ಯೆಹೋಯಾದನ ಮಗನಾದ ಬೆನಾಯನು, ಕೆರೇತ್ಯ ಮತ್ತು ಪೆಲೇತ್ಯ ಎಂಬ ಕಾವಲುದಂಡುಗಳ ಮುಖ್ಯಸ್ಥನಾದನು. ದಾವೀದನ ಮಕ್ಕಳು ಅರಸನ ಒಡ್ಡೋಲಗದಲ್ಲಿ ಪ್ರಧಾನರಾಗಿದ್ದರು.