< Giô-sua 10 >
1 Khi A-đô-ni-Xê-đéc, vua Giê-ru-sa-lem, hay rằng Giô-suê đã chiếm lấy thành A-hi, và tận diệt nó đi, đãi thành A-hi và vua nó như người đã đãi Giê-ri-cô và vua nó, lại hay rằng dân Ga-ba-ôn đã lập hòa với dân Y-sơ-ra-ên và ở cùng họ,
೧ಯೆಹೋಶುವನು ಆಯಿ ನಗರವನ್ನು, ಅದರ ಅರಸನನ್ನು ಹಿಡಿದು ಯೆರಿಕೋವನ್ನೂ ಅದರ ಅರಸನನ್ನೂ ಹೇಗೆ ಸಂಹರಿಸಿದನೆಂದು ಯೆರೂಸಲೇಮಿನ ಅರಸ ಅದೋನೀಚೆದೆಕನು ತಿಳಿದುಕೊಂಡನು.
2 thì người lấy làm sợ hãi lắm; vì Ga-ba-ôn là một thành lớn, một đế đô thật; lại lớn hơn thành A-hi, và cả dân sự nó đều là người mạnh dạn.
೨ಆಯಿ ಎಂಬ ಊರಿಗಿಂತ ದೊಡ್ಡದೂ, ಒಂದು ರಾಜಧಾನಿಯಷ್ಟು ಶ್ರೇಷ್ಠವೂ ಆಗಿರುವ ಗಿಬ್ಯೋನ್ ಪಟ್ಟಣದಲ್ಲಿರುವ ಜನರೆಲ್ಲರೂ ಯುದ್ಧವೀರರಾಗಿದ್ದರೂ ಇಸ್ರಾಯೇಲ್ಯರ ಮಧ್ಯದಲ್ಲಿ ಜೀವದಿಂದ ಉಳಿಯುವುದಕ್ಕೋಸ್ಕರ ಅವರ ಸಂಗಡ ಸಂಧಾನ ಮಾಡಿಕೊಂಡಿದ್ದಾರೆ ಎಂಬುವುದನ್ನು ಕೇಳಿ ಯೆರೂಸಲೇಮಿನ ಅರಸನಾದ ಅದೋನೀಚೆದೆಕನು ಬಹಳವಾಗಿ ಭಯಪಟ್ಟನು.
3 Vậy, A-đô-ni-Xê-đéc, vua thành Giê-ru-sa-lem, sai người đi nói cùng Hô-ham, vua Hếp-rôn, cùng Phi-ram, vua Giạt-mút, cùng Gia-phia, vua La-ki, cùng Đê-bia, vua Eùc-lôn, mà rằng:
೩ಆದುದರಿಂದ ಹೆಬ್ರೋನಿನ ಅರಸನಾದ ಹೋಹಾಮ್, ಯರ್ಮೂತಿನ ಅರಸನಾದ ಪಿರಾಮ್, ಲಾಕೀಷಿನ ಅರಸನಾದ ಯಾಫೀಯ, ಎಗ್ಲೋನಿನ ಅರಸನಾದ ದೆಬೀರ್ ಇವರ ಬಳಿಗೆ ದೂತರನ್ನು ಕಳುಹಿಸಿದನು.
4 Hãy đi lên đến ta mà tiếp cứu ta, và đánh thành Ga-ba-ôn; vì nó đã lập hòa cùng Giô-suê và dân Y-sơ-ra-ên.
೪“ನೀವು ಬಂದು ನನಗೆ ಸಹಾಯಮಾಡಿರಿ, ನಾವು ಯೆಹೋಶುವನ ಸಂಗಡಲೂ ಇಸ್ರಾಯೇಲ್ಯರ ಸಂಗಡಲೂ ಒಡಂಬಡಿಕೆ ಮಾಡಿಕೊಂಡಿರುವ ಗಿಬ್ಯೋನ್ಯರನ್ನು ಸೋಲಿಸೋಣ” ಎಂದು ಹೇಳಿ ಕಳುಹಿಸಿದನು.
5 Vậy, năm vua A-mô-rít, tức là vua Giê-ru-sa-lem, vua Hếp-rôn, vua Giạt-mút, vua La-ki, và vua Eùc-lôn nhóm hiệp, kéo lên cùng hết thảy quân lính mình, đóng trại trước Ga-ba-ôn, và hãm đánh thành.
೫ಆಗ ಯೆರೂಸಲೇಮ್, ಹೆಬ್ರೋನ್, ಯರ್ಮೂತ್, ಲಾಕೀಷ್, ಎಗ್ಲೋನ್ ಎಂಬ ಪಟ್ಟಣಗಳ ಐದು ಮಂದಿ ಅಮೋರಿಯ ರಾಜರು ಒಟ್ಟಾಗಿ ಸೇರಿ ದಂಡೆತ್ತಿ ಬಂದರು. ಅವರು ಗಿಬ್ಯೋನಿಗೆ ಮುತ್ತಿಗೆಹಾಕಿ ಯುದ್ಧಮಾಡಿದರು.
6 Người Ga-ba-ôn sai kẻ đến nói cùng Giô-suê tại trại quân Ghinh-ganh, mà rằng: Xin chớ bỏ tôi tớ ông; hãy mau lên đến cùng chúng tôi, giải thoát và tiếp cứu chúng tôi vì hết thảy vua A-mô-rít trong núi đã hiệp lại nghịch chúng tôi.
೬ಗಿಬ್ಯೋನ್ಯರು ಗಿಲ್ಗಾಲಿನಲ್ಲಿದ್ದ ಯೆಹೋಶುವನ ಪಾಳೆಯಕ್ಕೆ ದೂತರನ್ನು ಕಳುಹಿಸಿದರು. “ನಿಮ್ಮ ಸೇವಕರಾದ ನಮ್ಮನ್ನು ಕೈಬಿಡದೆ, ಬೇಗನೆ ಬಂದು ಸಹಾಯಮಾಡಿ ನಮಗೆ ವಿರೋಧವಾಗಿ ಸೇರಿ ಬಂದಿರುವ ಈ ಬೆಟ್ಟದ ಸೀಮೆಯ ಎಲ್ಲಾ ಅಮೋರಿಯ ರಾಜರಿಂದ ನಮ್ಮನ್ನು ತಪ್ಪಿಸಿರಿ” ಎಂದು ಬೇಡಿಕೊಂಡರು.
7 Vậy, Giô-suê ở Ghinh-ganh đi lên với hết thảy quân lính và những người mạnh dạn.
೭ಆಗ ಯೆಹೋಶುವನು ಎಲ್ಲಾ ಭಟರ ಮತ್ತು ಯುದ್ಧವೀರರ ಸಹಿತವಾಗಿ ಗಿಲ್ಗಾಲಿನಿಂದ ಹೊರಟನು.
8 Đức Giê-hô-va phán cùng Giô-suê rằng: Chớ sợ, vì ta đã phó chúng nó vào tay ngươi, chẳng còn một ai đứng nổi trước mặt ngươi được.
೮ಯೆಹೋವನು ಯೆಹೋಶುವನಿಗೆ, ಅವರಿಗೆ “ಹೆದರಬೇಡ, ಅವರನ್ನು ನಿನ್ನ ಕೈಗೆ ಒಪ್ಪಿಸಿದ್ದೇನೆ. ಅವರಲ್ಲಿ ಒಬ್ಬನೂ ನಿನ್ನ ಮುಂದೆ ನಿಲ್ಲುವುದಿಲ್ಲ” ಎಂದನು
9 Vậy, Giô-suê ở Ghinh-ganh đi trọn đêm, rồi chợt đến áp chúng nó.
೯ಯೆಹೋಶುವನು ಗಿಲ್ಗಾಲ್ ಬಿಟ್ಟು ರಾತ್ರಿಯೆಲ್ಲಾ ಪ್ರಯಾಣಮಾಡಿ ತಟ್ಟನೆ ಅವರ ಮೇಲೆ ಬಿದ್ದನು.
10 Đức Giê-hô-va làm cho chúng nó vỡ chạy trước mặt Y-sơ-ra-ên, khiến cho bị đại bại gần Ga-ba-ôn; Y-sơ-ra-ên rượt đuổi chúng nó theo đường dốc Bết-Hô-rôn, và đánh họ cho đến A-xê-ca và Ma-kê-đa.
೧೦ಆ ಅಮೋರಿಯರಲ್ಲಿ ಯೆಹೋವನು ಇಸ್ರಾಯೇಲರ ಕುರಿತಾಗಿ ಅವರನ್ನು ಕಳವಳಗೊಳಿಸಿದ್ದರಿಂದ ಯೆಹೋಶುವನು ಅವರನ್ನು ಗಿಬ್ಯೋನಿನ ಹತ್ತಿರ ಸಂಪೂರ್ಣವಾಗಿ ಸೋಲಿಸಿ ಬೇತ್‌ಹೋರೋನ್ ಎಂಬ ಬೆಟ್ಟದ ದಾರಿಯಲ್ಲಿ ಅಜೇಕ, ಮಕ್ಕೇದ ಎಂಬ ಊರುಗಳವರೆಗೂ ಅವರನ್ನು ಹಿಂದಟ್ಟಿ ಸಂಹರಿಸಿದನು.
11 Khi chúng nó chạy trốn trước mặt Y-sơ-ra-ên và xuống dốc Bết-Hô-rôn, thì Đức Giê-hô-va khiến đá lớn từ trời rớt xuống cả đường cho đến A-xê-ca, và chúng nó đều bị chết. Số những người bị chết về mưa đá nhiều hơn số những người bị dân Y-sơ-ra-ên giết bằng gươm.
೧೧ಅವರು ಇಸ್ರಾಯೇಲ್ಯರಿಗೆ ಬೆಂಗೊಟ್ಟು ಬೇತ್‍ಹೋರೋನಿನ ಇಳಿಜಾರಿನಲ್ಲಿ ಓಡುತ್ತಾ ಅಜೇಕವನ್ನು ತಲುಪುವವರೆಗೂ ಯೆಹೋವನು ಅವರ ಮೇಲೆ ಆಕಾಶದಿಂದ ದೊಡ್ಡ ಆಲಿಕಲ್ಲಿನ ಮಳೆಯನ್ನು ಸುರಿಸಿದನು. ಈ ಕಾರಣದಿಂದ ಅನೇಕರು ಸತ್ತರು ಇಸ್ರಾಯೇಲ್ಯರ ಕತ್ತಿಯಿಂದ ಸಂಹಾರವಾದವರಿಗಿಂತ ಆಲಿಕಲ್ಲಿನ ಮಳೆಯಿಂದ ನಾಶವಾದವರೇ ಹೆಚ್ಚು ಮಂದಿಯಾಗಿದ್ದರು.
12 Ngày mà Đức Giê-hô-va phó dân A-mô-rít cho dân Y-sơ-ra-ên, thì Giô-suê thưa cùng Đức Giê-hô-va tại trước mặt Y-sơ-ra-ên, mà rằng: Hỡi mặt trời, hãy dừng lại trên Ga-ba-ôn; Hỡi mặt trăng, hãy ngừng lại trên trũng A-gia-lôn!
೧೨ಯೆಹೋವನು ಅಮೋರಿಯರನ್ನು ಇಸ್ರಾಯೇಲ್ಯರಿಗೆ ಒಪ್ಪಿಸಿದ ದಿನದಲ್ಲಿ ಯೆಹೋಶುವನು ಯೆಹೋವನಲ್ಲಿ ಒಂದು ವಿಜ್ಞಾಪನೆ ಮಾಡಿಕೊಂಡನು. “ಸೂರ್ಯನೇ, ನೀನು ಗಿಬ್ಯೋನಿನಲ್ಲೇ ನಿಲ್ಲು; ಚಂದ್ರನೇ, ನೀನು ಅಯ್ಯಾಲೋನ್ ಕಣಿವೆಯಲ್ಲೇ ನಿಲ್ಲು” ಎಂದು ಇಸ್ರಾಯೇಲ್ಯರ ಸಮಕ್ಷಮದಲ್ಲಿ ಆಜ್ಞಾಪಿಸಿದನು.
13 Mặt trời bèn dừng, mặt trăng liền ngừng, Cho đến chừng dân sự đã báo thù quân nghịch mình. Điều đó há không có chép trong sách Gia-sa sao? Mặt trời dừng lại giữa trời, và không vội lặn ước một ngày trọn.
೧೩ಇಸ್ರಾಯೇಲ್ಯರು ತಮ್ಮ ಶತ್ರುಗಳಿಗೆ ಮುಯ್ಯಿತೀರಿಸುವ ತನಕ ಸೂರ್ಯಚಂದ್ರರು ಹಾಗೆಯೇ ನಿಂತರು. ಈ ಮಾತು ಯಾಷಾರ್ ಗ್ರಂಥದಲ್ಲಿ ಬರೆದಿದೆಯಲ್ಲವೆ? ಹೀಗೆ ಸೂರ್ಯನು ಮುಳುಗಲು ಆತುರ ಪಡದೆ ಹೆಚ್ಚು ಕಡಿಮೆ ಒಂದು ದಿನ ಪೂರ್ತಿ ಆಕಾಶದ ಮಧ್ಯದಲ್ಲಿಯೇ ನಿಂತನು.
14 Từ trước và về sau, chẳng hề có ngày nào như ngày đó, là ngày Đức Giê-hô-va có nhậm lời của một loài người; vì Đức Giê-hô-va chiến cự cho dân Y-sơ-ra-ên.
೧೪ಯೆಹೋವನು ಈ ಪ್ರಕಾರ ಒಬ್ಬ ಮನುಷ್ಯನ ಮಾತಿಗೆ ಕಿವಿಗೊಟ್ಟ ದಿನವು ಅದಕ್ಕಿಂತ ಹಿಂದೆಯೂ ಮುಂದೆಯೂ ಇಲ್ಲವೇ ಇಲ್ಲ. ಯೆಹೋವನು ತಾನೇ ಇಸ್ರಾಯೇಲ್ಯರಿಗೋಸ್ಕರ ಯುದ್ಧಮಾಡುತ್ತಾ ಇದ್ದನು.
15 Rồi Giô-suê và cả Y-sơ-ra-ên trở về trại quân Ghinh-ganh.
೧೫ಯೆಹೋಶುವನು ಇಸ್ರಾಯೇಲ್ಯರ ಸಹಿತವಾಗಿ ಗಿಲ್ಗಾಲಿನ ಪಾಳೆಯಕ್ಕೆ ಹಿಂದಿರುಗಿದನು.
16 Vả, năm vua kia đã chạy trốn, và ẩn trong một hang đá tại Ma-kê-đa.
೧೬ಆ ಐದು ಮಂದಿ ಅರಸರು ಓಡಿಹೋಗಿ ಮಕ್ಕೇದದ ಗುಹೆಯಲ್ಲಿ ಅಡಗಿಕೊಂಡರು.
17 Có người thuật cho Giô-suê hay điều đó, mà rằng: Người ta có gặp năm vua núp trong một hang đá tại Ma-kê-đa.
೧೭ಜನರು ಯೆಹೋಶುವನಿಗೆ “ಆ ಐದು ಮಂದಿ ನಮಗೆ ಸಿಕ್ಕಿದ್ದಾರೆ. ಅವರು ಮಕ್ಕೇದದ ಗವಿಯಲ್ಲಿ ಅಡಗಿಕೊಂಡಿದ್ದಾರೆ” ಎಂದು ತಿಳಿಸಿದರು.
18 Giô-suê bèn dạy rằng: Hãy lăn đá lớn lấp miệng hang lại, và cắt người canh giữ.
೧೮ಆಗ ಯೆಹೋಶುವನು ಅವರಿಗೆ “ಆ ಗವಿಯ ಬಾಯಿಗೆ ದೊಡ್ಡ ಕಲ್ಲುಗಳನ್ನು ಹೊರಳಿಸಿ ಕಾಯುವುದಕ್ಕೆ ಕಾವಲುಗಾರರನ್ನು ಇಡಿರಿ. ನೀವಾದರೂ ಅಲ್ಲೇ ನಿಂತುಕೊಳ್ಳಬೇಡಿ. ಬೇಗನೆ ಹಿಂದಟ್ಟಿ ಹಿಂದೆ ಬರುವ ಶತ್ರುಗಳನ್ನು ಹತಮಾಡುತ್ತಾ ಹೋಗಿರಿ.
19 Còn các ngươi chớ dừng lại, phải rượt theo quân nghịch, xông đánh phía sau; đừng để chúng nó vào thành chúng nó; vì Giê-hô-va Đức Chúa Trời các ngươi đã phó chúng nó vào tay các ngươi.
೧೯ಅವರನ್ನು ಅವರ ಪಟ್ಟಣಗಳಲ್ಲಿ ಸೇರುವುದಕ್ಕೆ ಬಿಡಬೇಡಿರಿ. ನಿಮ್ಮ ದೇವರಾದ ಯೆಹೋವನು ಅವರನ್ನು ನಿಮ್ಮ ಕೈಗೆ ಒಪ್ಪಿಸಿದ್ದಾನಲ್ಲಾ?” ಎಂದನು.
20 Khi Giô-suê và dân Y-sơ-ra-ên đã đánh chúng nó bị bại rất lớn, cho đến nỗi tuyệt diệt đi, và khi những người trong chúng nó đã được thoát khỏi, rút ở lại trong thành kiên cố,
೨೦ಈ ರೀತಿಯಾಗಿ ಯೆಹೋಶುವನೂ ಹಾಗೂ ಇಸ್ರಾಯೇಲ್ಯರೂ ಅವರನ್ನು ಸಂಪೂರ್ಣವಾಗಿ ಸೋಲಿಸಿ ಸಂಹರಿಸಿಬಿಟ್ಟರು. ಸ್ವಲ್ಪ ಜನರು ಮಾತ್ರ ತಪ್ಪಿಸಿಕೊಂಡು ಕೋಟೆ ಕೊತ್ತಲುಗಳಿದ್ದ ಪಟ್ಟಣಗಳನ್ನು ಸೇರಿಕೊಂಡರು.
21 thì cả dân sự trở về với Giô-suê bình yên nơi trại quân tại Ma-kê-đa, chẳng một ai dám khua môi nghịch cùng dân Y-sơ-ra-ên.
೨೧ಇಸ್ರಾಯೇಲ್ಯರಾದರೋ ಮಕ್ಕೇದದಲ್ಲಿ ಇಳುಕೊಂಡಿದ್ದ ಯೆಹೋಶುವನ ಬಳಿಗೆ ಸುರಕ್ಷಿತರಾಗಿ ಬಂದರು. ಇಸ್ರಾಯೇಲ್ಯರಿಗೆ ವಿರೋಧವಾಗಿ ಒಬ್ಬನೂ ಮಾತನಾಡಲಿಲ್ಲ.
22 Bấy giờ, Giô-suê nói rằng: Hãy mở miệng hang, đem năm vua đó ra, rồi dẫn đến cho ta.
೨೨ಅನಂತರ ಯೆಹೋಶುವನು ಜನರಿಗೆ “ಗವಿಯ ಬಾಯನ್ನು ತೆರೆದು ಆ ಐದು ಮಂದಿ ಅರಸರನ್ನು ನನ್ನ ಬಳಿಗೆ ತನ್ನಿರಿ” ಎಂದನು.
23 Họ làm như vậy, đưa năm vua ra khỏi hang đá, và dẫn đến cho người, tức là vua Giê-ru-sa-lem, vua Hếp-rôn, vua Giạt-mút, vua La-ki, và vua Eùc-lôn.
೨೩ಅವರು ಹೋಗಿ ಯೆರೂಸಲೇಮ್, ಹೆಬ್ರೋನ್, ಯರ್ಮೂತ್, ಲಾಕೀಷ್, ಎಗ್ಲೋನ್ ಎಂಬ ಪಟ್ಟಣಗಳ ಐದು ಮಂದಿ ಅರಸರನ್ನು ಗವಿಯಿಂದ ಎಳೆದು ಕೊಂಡು ಅವನ ಬಳಿಗೆ ತಂದರು.
24 Khi họ đã dẫn năm vua này đến cùng Giô-suê, thì Giô-suê gọi hết thảy người nam của Y-sơ-ra-ên, và nói cùng các binh tướng đã đi với mình, mà rằng: Hãy lại gần, đạp chân lên cổ của các vua này. Họ bèn đến gần, đạp chân trên cổ các vua ấy.
೨೪ಅವರನ್ನು ತನ್ನ ಬಳಿಗೆ ತಂದನಂತರ ಯೆಹೋಶುವನು ಎಲ್ಲಾ ಇಸ್ರಾಯೇಲ್ಯರನ್ನು ಕರೆಸಿ ತನ್ನ ಜೊತೆಯಲ್ಲಿ ಬಂದಿದ್ದ ಸೈನ್ಯಾಧಿಪತಿಗಳಿಗೆ “ಹತ್ತಿರ ಬಂದು ಈ ಅರಸರ ಕೊರಳಿನ ಮೇಲೆ ಪಾದಗಳನ್ನಿಡಿರಿ” ಎಂದು ಹೇಳಿದನು. ಅವರು ಹತ್ತಿರ ಬಂದು ಅವರ ಕುತ್ತಿಗೆಯ ಮೇಲೆ ಕಾಲಿಟ್ಟರು.
25 Đoạn, Giô-suê nói cùng họ rằng: Chớ ngại, và chớ kinh khủng; khá vững lòng bền chí, vì Đức Giê-hô-va sẽ làm như vậy cho hết thảy thù nghịch các ngươi, mà các ngươi sẽ chiến cự.
೨೫ಆಗ ಅವನು ಅವರಿಗೆ “ಅಂಜಬೇಡಿರಿ, ಕಳವಳಗೊಳ್ಳಬೇಡಿರಿ; ಸ್ಥಿರಚಿತ್ತರಾಗಿ, ಧೈರ್ಯದಿಂದಿರಿ. ನಿಮ್ಮೊಡನೆ ಯುದ್ಧಕ್ಕೆ ಬರುವ ಎಲ್ಲಾ ವೈರಿಗಳಿಗೂ ಯೆಹೋವನು ಹೀಗೆಯೇ ಮಾಡುವನು” ಎಂದು ಹೇಳಿದನು.
26 Sau rồi, Giô-suê đánh giết các vua ấy, biểu đem treo trên năm cây; năm vua ấy bị treo trên cây cho đến chiều tối.
೨೬ಅನಂತರ ಆ ಅರಸರನ್ನು ಕೊಲ್ಲಿಸಿ ಐದು ಮರಗಳಿಗೆ ನೇತುಹಾಕಿಸಿದನು. ಅವರ ಶವಗಳು ಸಾಯಂಕಾಲದವರೆಗೂ ಅಲ್ಲೇ ತೂಗಾಡುತ್ತಿದ್ದವು.
27 Khi mặt trời chen lặn, Giô-suê biểu người ta hạ thây xuống khỏi cây; họ liệng những thây trong hang đá, là chỗ các vua ấy đã núp, rồi lấy những đá lớn lấp miệng hang lại, hãy còn cho đến ngày nay.
೨೭ಸೂರ್ಯಾಸ್ತಮಾನದ ಹೊತ್ತಿಗೆ ಜನರು ಯೆಹೋಶುವನ ಅಪ್ಪಣೆಯಂತೆ ಅವುಗಳನ್ನು ಮರಗಳಿಂದ ಕೆಳಗಿಳಿಸಿ ಅವರು ಅಡಗಿಕೊಂಡಿದ್ದ ಗವಿಯಲ್ಲಿಯೇ ಹಾಕಿ ಅದರ ಬಾಯಿಗೆ ದೊಡ್ಡ ಕಲ್ಲುಗಳನ್ನು ಹೊರಳಿಸಿದರು. ಆ ಕಲ್ಲುಗಳು ಇಂದಿನವರೆಗೂ ಅಲ್ಲೇ ಇರುತ್ತವೆ.
28 Trong ngày đó, Giô-suê cũng chiếm lấy Ma-kê-đa, và dùng lưỡi gươm giết cả thành cùng vua nó. Người tận diệt thành, luôn hết thảy kẻ ở trong, không để thoát một ai. Người đãi vua Ma-kê-đa như đã đãi vua Giê-ri-cô.
೨೮ಅದೇ ದಿನ ಯೆಹೋಶುವನು ಮಕ್ಕೇದವನ್ನು ಸ್ವಾಧೀನಪಡಿಸಿ ಕೊಂಡನು. ಅ ಊರಿನ ರಾಜ ಪ್ರಜೆಗಳೆಲ್ಲರನ್ನೂ ಕತ್ತಿಯಿಂದ ಸಂಹರಿಸಿದನು. ಒಬ್ಬನನ್ನೂ ಉಳಿಸಲಿಲ್ಲ. ಯೆರಿಕೋವಿನ ಅರಸನಿಗೆ ಮಾಡಿದಂತೆ ಈ ಅರಸನಿಗೂ ಮಾಡಿದನು.
29 Đoạn, Giô-suê cùng cả Y-sơ-ra-ên ở Ma-kê-đa đi qua Líp-na, và hãm đánh Líp-na.
೨೯ಯೆಹೋಶುವನು ಜನರೆಲ್ಲರ ಸಹಿತವಾಗಿ ಮಕ್ಕೇದದಿಂದ ಲಿಬ್ನಕ್ಕೆ ಹೋಗಿ ಅಲ್ಲಿಯವರೊಡನೆ ಯುದ್ಧಮಾಡಿದನು.
30 Đức Giê-hô-va cũng phó Líp-na cùng vua nó vào tay Y-sơ-ra-ên; họ dùng lưỡi gươm diệt thành, luôn hết thảy kẻ ở trong đó, chẳng để thoát một ai. Người đãi vua thành này y như đã đãi vua Giê-ri-cô vậy.
೩೦ಯೆಹೋವನು ಅದನ್ನೂ ಅದರ ಅರಸನನ್ನೂ ಇಸ್ರಾಯೇಲ್ಯರ ಕೈವಶಮಾಡಿದನು. ಅವರು ಅದರಲ್ಲಿದ್ದ ಜನರಲ್ಲಿ ಒಬ್ಬನನ್ನೂ ಉಳಿಸದೆ ಎಲ್ಲರನ್ನೂ ಕತ್ತಿಯಿಂದ ಸಂಹರಿಸಿದರು. ಯೆರಿಕೋವಿನ ಅರಸನಿಗಾದ ಗತಿಯೇ ಇವರ ಅರಸನಿಗೂ ಆಯಿತು.
31 Kế ấy, Giô-suê cùng cả Y-sơ-ra-ên ở Líp-na đi qua La-ki, đóng trại đối cùng thành, và hãm đánh nó.
೩೧ಅಲ್ಲಿಂದ ಯೆಹೋಶುವನು ಇಸ್ರಾಯೇಲ್ಯರ ಸಹಿತವಾಗಿ ಲಾಕೀಷಿಗೆ ಹೋಗಿ ಮುತ್ತಿಗೆಹಾಕಿ ಯುದ್ಧಮಾಡಿದನು.
32 Đức Giê-hô-va phó La-ki vào tay Y-sơ-ra-ên; ngày thứ hai họ chiếm lấy thành, dùng lưỡi gươm diệt thành với những người ở trong, cũng y như đã làm cho Líp-na vậy.
೩೨ಯೆಹೋವನು ಅದನ್ನು ಇಸ್ರಾಯೇಲ್ಯರ ಕೈಗೆ ಒಪ್ಪಿಸಿದ್ದರಿಂದ, ಅವರು ಅದನ್ನು ಎರಡನೆಯ ದಿನದಲ್ಲಿ ಸ್ವಾಧೀನಮಾಡಿಕೊಂಡು ಅದನ್ನೂ ಅದರ ಜನರನ್ನೂ ಸಂಹರಿಸಿಬಿಟ್ಟರು. ಲಿಬ್ನದವರಿಗಾದ ಗತಿಯೇ ಇವರಿಗೂ ಆಯಿತು.
33 Bấy giờ, Hô-ram, vua Ghê-xe, đi lên tiếp cứu La-ki; Giô-suê đánh bại người và dân sự người, đến đỗi không còn để ai thoát khỏi.
೩೩ಇದಲ್ಲದೆ ಯೆಹೋಶುವನು ಲಾಕೀಷಿನವರ ಸಹಾಯಕ್ಕೆ ಬಂದ ಗೆಜೆರಿನ ಅರಸನಾದ ಹೋರಾಮನನ್ನೂ ಅವನ ಪ್ರಜೆಗಳೆಲ್ಲರನ್ನೂ ಸದೆಬಡಿದನು. ಒಬ್ಬನೂ ಉಳಿಯಲಿಲ್ಲ.
34 Đoạn, Giô-suê cùng Y-sơ-ra-ên ở La-ki đi qua Eùc-lôn, đóng trại đối ngang thành, và hãm đánh nó.
೩೪ತರುವಾಯ ಯೆಹೋಶುವನು ಲಾಕೀಷನ್ನು ಬಿಟ್ಟು ಇಸ್ರಾಯೇಲ್ಯರೆಲ್ಲರ ಸಹಿತವಾಗಿ ಎಗ್ಲೋನಿಗೆ ಬಂದು ಮುತ್ತಿಗೆಹಾಕಿ ಯುದ್ಧಮಾಡಿದನು.
35 Chính ngày đó, họ chiếm lấy thành, dùng lưỡi gươm diệt nó đi. Trong ngày đó, Giô-suê tận diệt thành với hết thảy người ở trong đó, y như người đã làm cho La-ki vậy.
೩೫ಅವರು ಅದೇ ದಿನದಲ್ಲಿ ಅದನ್ನು ಹಿಡಿದು ಲಾಕೀಷಿನವರಿಗೆ ಮಾಡಿದಂತೆಯೇ ಅದನ್ನೂ ಅದರ ಜನರೆಲ್ಲರನ್ನೂ ಕತ್ತಿಯಿಂದ ಸಂಹರಿಸಿಬಿಟ್ಟರು.
36 Kế đó, Giô-suê cùng cả Y-sơ-ra-ên từ Eùc-lôn đi lên Hếp-rôn, và hãm đánh nó.
೩೬ಅನಂತರ ಯೆಹೋಶುವನೂ, ಇಸ್ರಾಯೇಲರೂ ಎಗ್ಲೋನನ್ನು ಬಿಟ್ಟು ಹೆಬ್ರೋನಿಗೆ ಹೋಗಿ ಅದಕ್ಕೆ ವಿರೋಧವಾಗಿ ಯುದ್ಧಮಾಡಿ
37 Họ chiếm lấy thành, dùng lưỡi gươm diệt thành, vua, các hương thôn nó, và mọi người ở trong đó, không để thoát khỏi một ai, cũng y như người đã làm cho Eùc-lôn vậy; người tận diệt thành và các người ở trong.
೩೭ಅದಕ್ಕೆ ಸೇರಿದ ಊರುಗಳನ್ನೂ ಅದರ ರಾಜಪ್ರಜೆಗಳೆಲ್ಲರನ್ನೂ ಕತ್ತಿಯಿಂದ ಸಂಹರಿಸಿದರು. ಎಗ್ಲೋನಿನಲ್ಲಿ ಹೇಗೋ ಹಾಗೆಯೇ ಇಲ್ಲಿಯೂ ಒಬ್ಬನನ್ನೂ ಉಳಿಸಲಿಲ್ಲ; ಪಟ್ಟಣವನ್ನೂ ಜನರನ್ನೂ ನಾಶಮಾಡಿದರು.
38 Đoạn, Giô-suê cùng cả Y-sơ-ra-ên đi đến Đê-bia, và hãm đánh nó.
೩೮ಅಲ್ಲಿಂದ ಯೆಹೋಶುವನೂ ಎಲ್ಲಾ ಇಸ್ರಾಯೇಲರೂ ದೆಬೀರಿಗೆ ಬಂದು ಅಲ್ಲಿಯವರೊಡನೆ ಯುದ್ಧಮಾಡಿದರು.
39 Người chiếm lấy thành và hương thôn nó, cùng bắt vua, dùng lưỡi gươm diệt thành, và tận diệt hết thảy những người ở trong, không để thoát khỏi một ai. Người đãi Đê-bia và vua nó, y như đã đãi Hếp-rôn, đãi Líp-na và vua nó.
೩೯ಅದನ್ನೂ ಅದಕ್ಕೆ ಸೇರಿದ ಊರುಗಳನ್ನೂ ಹಿಡಿದುಕೊಂಡು ಅದರ ರಾಜಪ್ರಜೆಗಳೆಲ್ಲರನ್ನೂ ಕತ್ತಿಯಿಂದ ಸಂಹರಿಸಿದರು. ಒಬ್ಬನನ್ನೂ ಉಳಿಸಲಿಲ್ಲ. ಹೆಬ್ರೋನಿಗೂ ಅದರ ಅರಸನಿಗೂ ಲಿಬ್ನಕ್ಕೂ ಅದರ ಅರಸನಿಗೂ ಆದ ಗತಿಯೇ ದೆಬೀರಿಗೂ ಅದರ ಅರಸನಿಗೂ ಆಯಿತು.
40 Vậy, Giô-suê đánh toàn xứ, nào miền núi, nào miền nam, nào đồng bằng, nào những gò nỗng, và các vua mấy miền đó. Người không để thoát khỏi một ai hết; phàm vật có hơi thở thì người diệt hết đi, y như Giê-hô-va Đức Chúa Trời của Y-sơ-ra-ên đã truyền dặn.
೪೦ಹೀಗೆ ಯೆಹೋಶುವನು ಬೆಟ್ಟದ ಮೇಲಣ ಪ್ರದೇಶ, ದಕ್ಷಿಣಪ್ರಾಂತ್ಯ, ಇಳುಕಲ್ಲಿನ ಪ್ರದೇಶ, ಬೆಟ್ಟಗಳ ತಗ್ಗು ಪ್ರದೇಶ ಇವುಗಳನ್ನು ಸ್ವಾಧೀನಪಡಿಸಿಕೊಂಡು ಇವುಗಳ ರಾಜಪ್ರಜೆಗಳನ್ನು ಸಂಹರಿಸಿಬಿಟ್ಟನು. ಒಬ್ಬನನ್ನೂ ಉಳಿಸಲಿಲ್ಲ. ಇಸ್ರಾಯೇಲ್ ದೇವರಾದ ಯೆಹೋವನ ಆಜ್ಞೆಯಂತೆ ಜೀವವಿರುವುದೆಲ್ಲವನ್ನು ಸಂಹರಿಸಿದನು.
41 Aáy vậy, Giô-suê đánh các vua đó từ Ca-đe-Ba-nê-a cho đến Ga-xa, và toàn xứ Gô-sen cho đến Ga-ba-ôn.
೪೧ಕಾದೇಶ್ ಬರ್ನೇಯದಿಂದ ಗಾಜಾ ಊರಿನ ವರೆಗೂ ಗೋಷೆನ್ ಪ್ರಾಂತ್ಯದಿಂದ ಗಿಬ್ಯೋನಿನವರೆಗೂ ಎಲ್ಲರನ್ನೂ ಸೋಲಿಸಿದನು.
42 Qua một lượt thì Giô-suê bắt các vua này và chiếm lấy xứ họ, bởi vì Giê-hô-va Đức Chúa Trời của Y-sơ-ra-ên chinh chiến cho Y-sơ-ra-ên.
೪೨ಇಸ್ರಾಯೇಲರ ದೇವರಾದ ಯೆಹೋವನು ಅವರ ಪರವಾಗಿ ಯುದ್ಧ ಮಾಡಿದ್ದರಿಂದ ಯೆಹೋಶುವನು ಈ ಎಲ್ಲಾ ರಾಜರನ್ನೂ ರಾಜ್ಯಗಳನ್ನೂ ಏಕಕಾಲದಲ್ಲಿ ವಶಮಾಡಿಕೊಂಡನು.
43 Đoạn, Giô-suê và cả Y-sơ-ra-ên trở về trại quân ở Ghinh-ganh.
೪೩ತರುವಾಯ ಯೆಹೋಶುವನು ಎಲ್ಲಾ ಇಸ್ರಾಯೇಲ್ಯರೊಡನೆ ಗಿಲ್ಗಾಲಿನಲ್ಲಿದ್ದ ತನ್ನ ಪಾಳೆಯಕ್ಕೆ ಹಿಂದಿರುಗಿದನು.