< I Các Vua 22 >

1 Trong ba năm Sy-ri và Y-sơ-ra-ên không có giặc.
ಮೂರು ವರ್ಷಗಳ ಕಾಲ ಇಸ್ರಾಯೇಲರಿಗೂ ಅರಾಮ್ಯರಿಗೂ ಯುದ್ಧ ನಡೆಯಲಿಲ್ಲ.
2 Năm thứ ba, Giô-sa-phát, vua Giu-đa, đi đến cùng vua Y-sơ-ra-ên.
ಮೂರನೆಯ ವರ್ಷದಲ್ಲಿ ಯೆಹೂದ್ಯರ ಅರಸನಾದ ಯೆಹೋಷಾಫಾಟನು ಇಸ್ರಾಯೇಲರ ಅರಸನ ಬಳಿಗೆ ಬಂದನು.
3 Vua Y-sơ-ra-ên nói với tôi tớ mình rằng: Các ngươi há chẳng biết rằng Ra-mốt trong Ga-la-át thuộc về chúng ta sao? Chúng ta lại làm thinh chẳng rứt nó khỏi tay vua Sy-ri sao!
ಆಗ ಇಸ್ರಾಯೇಲರ ಅರಸನು ತನ್ನ ಸೇವಕರಿಗೆ, “ಗಿಲ್ಯಾದಿನ ರಾಮೋತ್ ಪಟ್ಟಣವು ನಮ್ಮದೆಂದು ನಿಮಗೆ ಗೊತ್ತಿದೆಯಲ್ಲಾ. ಅದನ್ನು ಇಷ್ಟರವರೆಗೂ ಅರಾಮ್ಯರ ಅರಸನಿಂದ ಹಿಂತಿರುಗಿ ತೆಗೆದುಕೊಳ್ಳದೆ ಸುಮ್ಮನೆ ಕುಳಿತುಕೊಂಡಿರುತ್ತೇವೆ” ಎಂದು ಹೇಳಿದನು.
4 Ðoạn, người nói với Giô-sa-phát rằng: Vua muốn đến cùng ta đặng đánh lấy Ra-mốt trong Ga-la-át chăng? Giô-sa-phát đáp với vua Y-sơ-ra-ên rằng: Tôi như ông; dân sự tôi như dân sự ông; và ngựa tôi như ngựa của ông.
ಅವನು ಯೆಹೋಷಾಫಾಟನಿಗೆ, “ಯುದ್ಧಮಾಡುವುದಕ್ಕಾಗಿ ನೀನು ನಮ್ಮ ಜೊತೆಯಲ್ಲಿ ರಾಮೋತ್ ಗಿಲ್ಯಾದಿಗೆ ಬರುತ್ತೀಯೋ?” ಎಂದು ಕೇಳಲು ಅವನು, “ನಾನೂ ನೀನೂ, ನನ್ನ ಜನರೂ ನಿನ್ನ ಜನರೂ, ನನ್ನ ಕುದುರೆಗಳೂ ನಿನ್ನ ಕುದುರೆಗಳೂ ಒಂದೇ ಅಲ್ಲವೇ?” ಎಂದು ಉತ್ತರಕೊಟ್ಟನು.
5 Song Giô-sa-phát nói với vua Y-sơ-ra-ên rằng: Tôi xin ông phải cầu vấn Ðức Giê-hô-va trước đã.
ಯೆಹೋಷಾಫಾಟನು, “ಯೆಹೋವನ ಸನ್ನಿಧಿಯಲ್ಲಿ ಈಗ ವಿಚಾರಿಸು” ಎಂದು ಇಸ್ರಾಯೇಲರ ಅರಸನನ್ನು ಬೇಡಿಕೊಂಡನು.
6 Vậy, vua Y-sơ-ra-ên nhóm các tiên tri lại, số bốn trăm người, mà hỏi rằng: Ta có nên đi đánh Ra-mốt tại Ga-la-át, hay là chẳng nên đi? Chúng đáp rằng: Hãy đi lên; Chúa sẽ phó nó vào tay vua.
ಆಗ ಇಸ್ರಾಯೇಲರ ಅರಸನು ತನ್ನ ರಾಜ್ಯದಲ್ಲಿದ್ದ ಸುಮಾರು ನಾನೂರು ಪ್ರವಾದಿಗಳನ್ನು ಕೂಡಿಸಿ ಅವರನ್ನು, “ನಾನು ರಾಮೋತ್ ಗಿಲ್ಯಾದಿನ ಮೇಲೆ ಯುದ್ಧಕಾಗಿ ಹೋಗಬಹುದೋ ಹೋಗಬಾರದೋ?” ಎಂದು ಕೇಳಲು ಅವರು, “ಹೋಗಬಹುದು, ಕರ್ತನು ಅದನ್ನು ಅರಸನ ಕೈಗೆ ಒಪ್ಪಿಸುವನು” ಅಂದರು.
7 Nhưng Giô-sa-phát tiếp rằng: Ở đây còn có đấng tiên tri nào khác của Ðức Giê-hô-va để chúng ta cầu vấn người ấy chăng?
ಆದರೆ ಯೆಹೋಷಾಫಾಟನು ಇಸ್ರಾಯೇಲ್ಯರ ಅರಸನನ್ನು, “ಯೆಹೋವನ ಪ್ರವಾದಿಗಳಲ್ಲಿ ಇವರ ಹೊರತಾಗಿ ನಾವು ವಿಚಾರಿಸಬಹುದಾದ ಬೇರೆ ಪ್ರವಾದಿಗಳು ಇರುವುದಿಲ್ಲವೋ?” ಎಂದು ಕೇಳಿದನು.
8 Vua Y-sơ-ra-ên đáp với Giô-sa-phát rằng: Còn có một người, tên là Mi-chê, con trai của Giêm-la; nhờ người ấy ta có thể cầu vấn Ðức Giê-hô-va; nhưng tôi ghét người, vì người chẳng nói tiên tri lành về tôi, bèn là dữ đó thôi. Giô-sa-phát nói rằng: Xin vua chớ nói như vậy.
ಅದಕ್ಕೆ ಅವನು “ನಮಗೋಸ್ಕರ ಯೆಹೋವನ ಸನ್ನಿಧಿಯಲ್ಲಿ ವಿಚಾರಿಸಬಲ್ಲವನಾದ ಇನ್ನೊಬ್ಬ ಪ್ರವಾದಿಯಿರುತ್ತಾನೆ, ಅವನು ಇಮ್ಲನ ಮಗನಾದ ಮೀಕಾಯೆಹು ಎಂಬುವನು. ಆದರೆ ನಾನು ಅವನನ್ನು ಹಗೆಮಾಡುತ್ತೇನೆ, ಅವನು ನನ್ನ ಕುರಿತು ಯಾವಾಗಲೂ ಶುಭವನ್ನಲ್ಲ ಅಶುಭವನ್ನೇ ಮುಂತಿಳಿಸುತ್ತಾನೆ” ಎಂದು ಉತ್ತರಕೊಟ್ಟನು. ಅದಕ್ಕೆ ಯೆಹೋಷಾಫಾಟನು “ಅರಸನು ಹಾಗನ್ನದಿರಲಿ” ಅಂದನು.
9 Vua Y-sơ-ra-ên bèn đòi một hoạn quan mà bảo rằng: Hãy lập tức mời Mi-chê, con trai của Giêm-la, đến.
ಆಗ ಇಸ್ರಾಯೇಲ್ಯರ ಅರಸನು ಒಬ್ಬ ಕಂಚುಕಿಯನ್ನು ಕರೆದು ಅವನಿಗೆ, “ಹೋಗಿ ಇಮ್ಲನ ಮಗನಾದ ಮೀಕಾಯೆಹುವನ್ನು ಬೇಗನೆ ಕರೆದುಕೊಂಡು ಬಾ” ಎಂದು ಆಜ್ಞಾಪಿಸಿದನು.
10 Vả, vua Y-sơ-ra-ên và Giô-sa-phát, vua Giu-đa, mỗi người đều mặc đồ triều phục, đương ngồi trên một cái ngai tại trong sân đạp lúa, nơi cửa thành Sa-ma-ri; và hết thảy tiên tri nói tiên tri trước mặt hai vua.
೧೦ಇಸ್ರಾಯೇಲರ ಅರಸನೂ ಯೆಹೂದ್ಯರ ಅರಸನಾದ ಯೆಹೋಷಾಫಾಟನೂ ರಾಜವಸ್ತ್ರಗಳನ್ನು ಧರಿಸಿಕೊಂಡು ಸಮಾರ್ಯ ಪಟ್ಟಣದ ಹೆಬ್ಬಾಗಿಲಿನ ಹತ್ತಿರವಿರುವ ಬಯಲಿನಲ್ಲಿ ತಮ್ಮ ತಮ್ಮ ಆಸನಗಳ ಮೇಲೆ ಕುಳಿತುಕೊಂಡಿರಲು ಎಲ್ಲಾ ಪ್ರವಾದಿಗಳು ಅವರ ಮುಂದೆ ಪರವಶರಾಗಿ ಮಾತನಾಡುತ್ತಾ ಇದ್ದರು.
11 Sê-đê-kia, con trai Kê-na-na, làm lấy những sừng bằng sắt, và nói rằng: Ðức giê-hô-va phán như vầy: Với các sừng này, ngươi sẽ báng dân Sy-ri cho đến khi diệt hết chúng nó.
೧೧ಅವರಲ್ಲಿ ಕೆನಾನನ ಮಗನಾದ ಚಿದ್ಕೀಯ ಎಂಬುವನು ಕಬ್ಬಿಣದ ಕೊಂಬುಗಳನ್ನು ಮಾಡಿಸಿ, ತಲೆಗೆ ಕಟ್ಟಿಕೊಂಡು ಬಂದು, “ಯೆಹೋವನು ಹೀಗೆನ್ನುತ್ತಾನೆ, ಅರಾಮ್ಯರು ನಿರ್ಮೂಲರಾಗುವವರೆಗೂ ಇವುಗಳಿಂದ ನೀನು ಅವರನ್ನು ಇರಿದು ಕೊಂದುಹಾಕುವಿ” ಎಂದನು.
12 Và hết thảy tiên tri đều nói một cách, mà rằng: Hãy đi lên Ra-mốt trong Ga-la-át; vua sẽ được thắng, vì Ðức Giê-hô-va sẽ phó thành ấy vào tay vua.
೧೨ಉಳಿದ ಪ್ರವಾದಿಗಳೂ ಇದೇ ತರದ ಮಾತುಗಳನ್ನು ಹೇಳಿ, “ರಾಮೋತ್ ಗಿಲ್ಯಾದಿಗೆ ಹೋಗು ನೀನು ಸಫಲನಾಗಿ ಬರುವಿ. ಯೆಹೋವನು ಅದನ್ನು ಅರಸನ ಕೈಗೆ ಒಪ್ಪಿಸುವನು” ಅಂದರು.
13 Vả, sứ giả đi mời Mi-chê, nói cùng người rằng: Những tiên tri đều đồng lòng báo cáo sự lành cho vua; tôi xin ông cũng hãy lấy lời như lời của họ mà báo cáo điều lành.
೧೩ಮೀಕಾಯೆಹುವನ್ನು ಕರೆಯುವುದಕ್ಕೆ ಹೋದ ದೂತನು ಅವನಿಗೆ, “ಎಲ್ಲಾ ಪ್ರವಾದಿಗಳೂ ಏಕ ಮನಸ್ಸಿನಿಂದ ಅರಸನಿಗೆ ಶುಭವನ್ನೇ ಮುಂತಿಳಿಸುತ್ತಾರೆ, ದಯವಿಟ್ಟು ನೀನೂ ಅವರಂತೆ ಶುಭವನ್ನೇ ಮುಂತಿಳಿಸು” ಎಂದು ಹೇಳಿದನು.
14 Nhưng Mi-chê đáp rằng: Ta chỉ Ðức Giê-hô-va hằng sống mà thề, ta sẽ báo cáo điều gì Ðức Giê-hô-va dặn ta.
೧೪ಅದಕ್ಕೆ ಮೀಕಾಯೆಹುವು, “ಯೆಹೋವನಾಣೆ, ಯೆಹೋವನು ಹೇಳುವುದನ್ನೇ ನುಡಿಯುತ್ತೇನೆ” ಎಂದು ಉತ್ತರಕೊಟ್ಟನು.
15 Khi người đã đến cùng vua, vua bèn hỏi rằng: Hỡi Mi-chê, chúng ta có nên đi hãm đánh Ra-mốt trong Ga-la-át, hay là chẳng nên đi? Mi-chê đáp: Hãy đi, vua sẽ được thắng: Ðức Giê-hô-va sẽ phó thành ấy vào tay vua.
೧೫ಅವನು ಅರಸನ ಬಳಿಗೆ ಬಂದಾಗ ಅರಸನು, “ನಾವು ರಾಮೋತ್ ಗಿಲ್ಯಾದಿನ ಮೇಲೆ ಯುದ್ಧಕ್ಕಾಗಿ ಹೋಗಬಹುದೋ, ಹೋಗಬಾರದೋ?” ಎಂದು ಕೇಳಲು ಅವನು, “ಹೋಗಬಹುದು, ಸಫಲನಾಗುವಿ, ಯೆಹೋವನು ಪಟ್ಟಣವನ್ನು ಅರಸನ ಕೈಗೆ ಒಪ್ಪಿಸುವನು” ಎಂದು ಹೇಳಿದನು.
16 Nhưng vua nói với người rằng: Biết bao lần ta đã lấy lời thề buộc ngươi chỉ khá nói chơn thật với ta nhơn danh Ðức Giê-hô-va.
೧೬ಆಗ ಅರಸನು, “ಅವನಿಗೆ ಸತ್ಯವನ್ನೇ ತಿಳಿಸಬೇಕೆಂದು ಯೆಹೋವನ ಹೆಸರಿನಲ್ಲಿ ನಿನ್ನಿಂದ ಎಷ್ಟು ಸಾರಿ ಪ್ರಮಾಣ ಮಾಡಿಸಬೇಕು?” ಎಂದನು.
17 Bấy giờ Mi-chê đáp rằng: Tôi thấy cả Y-sơ-ra-ên bị tản lạc trên các núi, như bầy chiên không có người chăn; và Ðức Giê-hô-va phán rằng: Những kẻ ấy không có chủ; ai nấy khá trở về nhà mình bình yên.
೧೭ಆಗ ಮೀಕಾಯೆಹುವು, “ಇಸ್ರಾಯೇಲರೆಲ್ಲರು ಕುರುಬನಿಲ್ಲದ ಕುರಿಗಳಂತೆ ಬೆಟ್ಟಗಳಲ್ಲಿ ಚದುರಿಹೋದದ್ದನ್ನು ಕಂಡೆನು. ಆಗ ಯೆಹೋವನು, ‘ಇವರು ಒಡೆಯನಿಲ್ಲದವರಾಗಿರುತ್ತಾರೆ, ಸಮಾಧಾನದಿಂದ ತಮ್ಮ ತಮ್ಮ ಮನೆಗಳಿಗೆ ಹೋಗಲಿ’ ಎಂದನು” ಎಂಬುದಾಗಿ ಉತ್ತರಕೊಟ್ಟನು.
18 Vua Y-sơ-ra-ên nói cùng Giô-sa-phát rằng: Tôi há chẳng có nói với vua người chẳng nói tiên tri lành về việc tôi, bèn là nói tiên tri dữ sao?
೧೮ಆಗ ಇಸ್ರಾಯೇಲರ ಅರಸನು ಯೆಹೋಷಾಫಾಟನಿಗೆ, “ಇವನು ನನಗೆ ಯಾವಾಗಲೂ ಶುಭವನ್ನಲ್ಲ, ಅಶುಭವನ್ನೇ ಮುಂತಿಳಿಸುತ್ತಾನೆಂದು ನಾನು ನಿನಗೆ ಹೇಳಲಿಲ್ಲವೋ?” ಎಂದನು.
19 Mi-chê lại tiếp: Vậy, hãy nghe lời của Ðức Giê-hô-va: Tôi thấy Ðức Giê-hô-va ngự trên ngôi Ngài và cả cơ binh trên trời đứng chầu Ngài bên hữu và bên tả.
೧೯ಅದಕ್ಕೆ ಮೀಕಾಯೆಹುವು “ಅದಿರಲಿ, ಈಗ ಯೆಹೋವನ ವಾಕ್ಯವನ್ನು ಕೇಳು, ಯೆಹೋವನು ತನ್ನ ಸಿಂಹಾಸನದ ಮೇಲೆ ಕುಳಿತುಕೊಂಡದ್ದನ್ನೂ ಪರಲೋಕಸೈನ್ಯಗಳು ಆತನ ಎಡಬಲಗಳಲ್ಲಿ ನಿಂತಿದ್ದನ್ನೂ ಕಂಡೆನು.
20 Ðức Giê-hô-va phán hỏi: Ai sẽ đi dụ A-háp, để người đi lên Ra-mốt trong Ga-la-át, và ngã chết tại đó? Người trả lời cách này, kẻ trả lời cách khác.
೨೦ಯೆಹೋವನು ತನ್ನ ಹತ್ತಿರ ನಿಂತವರನ್ನು, ‘ಅಹಾಬನು ಹತನಾಗಿ ಬೀಳುವಂತೆ ಅವನನ್ನು ರಾಮೋತ್ ಗಿಲ್ಯಾದಿನ ಯುದ್ಧಕ್ಕೆ ಹೋಗಲು ಯಾರು ಪ್ರೇರೇಪಿಸುವಿರಿ’ ಎಂದು ಕೇಳಿದಾಗ ಒಬ್ಬನು ಒಂದು ರೀತಿಯಾಗಿ, ಇನ್ನೊಬ್ಬನು ಇನ್ನೊಂದು ರೀತಿಯಾಗಿ ಉತ್ತರಕೊಟ್ಟರು.
21 Bấy giờ, có một thần ra đứng trước mặt Ðức Giê-hô-va mà thưa rằng: Tôi sẽ đi dụ người. Ðức Giê-hô-va phán hỏi thần rằng: Dụ cách nào?
೨೧ಕೊನೆಯಲ್ಲಿ ಒಂದು ಆತ್ಮವು ಯೆಹೋವನ ಮುಂದೆ ಬಂದು ನಿಂತು ಅವನಿಗೆ, ‘ನಾನು ಹೋಗಿ ಅವರನ್ನು ಪ್ರೇರೇಪಿಸುವೆನು’ ಅಂದಿತು.
22 Thần thưa lại rằng: Tôi sẽ đi và làm một thần nói dối trong miệng những tiên tri của người. Ðức Giê-hô-va phán rằng: Phải, ngươi sẽ dụ người được. Hãy đi và làm như ngươi đã nói.
೨೨‘ಹೇಗೆ ಪ್ರೇರೇಪಿಸುವಿ?’ ಎಂದು ಯೆಹೋವನು ಕೇಳಲು ಅದು, ‘ನಾನು ಅಸತ್ಯವನ್ನಾಡುವ ಆತ್ಮವಾಗಿ ಅವನ ಎಲ್ಲಾ ಪ್ರವಾದಿಗಳಲ್ಲಿ ಸೇರುವೆನು’ ಎಂದು ಉತ್ತರಕೊಟ್ಟಿತು. ಆಗ ಆತನು ಅದಕ್ಕೆ, ‘ಹೋಗಿ ಅದರಂತೆ ಮಾಡು ಅವನನ್ನು ಪ್ರೇರೇಪಿಸಿ ಸಫಲವಾಗುವಿ’ ಅಂದನು.
23 Vậy bây giờ, kìa, Ðức Giê-hô-va đã đặt một thần nói dối trong miệng các tiên tri vua, và Ðức Giê-hô-va đã phán sự dữ cho vua.
೨೩ನೋಡು ಯೆಹೋವನು ನಿನ್ನ ವಿಷಯದಲ್ಲಿ ಕೇಡು ನುಡಿದು ನಿನ್ನ ಎಲ್ಲಾ ಪ್ರವಾದಿಗಳಲ್ಲಿ ಅಸತ್ಯವನ್ನಾಡುವ ಆತ್ಮವನ್ನು ಕಳುಹಿಸಿದ್ದಾನೆ” ಎಂದು ಹೇಳಿದನು.
24 Bấy giờ, Sê-đê-kia, con trai của Kê-na-na, đến gần Mi-chê, vả vào má người, mà rằng: Thần của Ðức Giê-hô-va có do đường nào lìa khỏi ta đặng đến nói với ngươi?
೨೪ಆಗ ಕೆನಾನನ ಮಗನಾದ ಚಿದ್ಕೀಯನು ಮೀಕಾಯೆಹುವಿನ ಬಳಿಗೆ ಹೋಗಿ ಅವನ ಕೆನ್ನೆಗೆ ಒಂದು ಏಟು ಹಾಕಿ, “ಯೆಹೋವನ ಆತ್ಮವು ನನ್ನನ್ನು ಬಿಟ್ಟು ನಿನ್ನೊಂದಿಗೆ ಮಾತನಾಡುವುದಕ್ಕೋಸ್ಕರ ಯಾವ ಮಾರ್ಗವಾಗಿ ಬಂದಿತು?” ಎನ್ನಲು
25 Mi-chê đáp: Trong ngày ngươi chạy từ phòng này đến phòng kia đặng ẩn lánh, thì sẽ biết điều đó.
೨೫ಮೀಕಾಯೆಹುವು, “ನೀನು ಅಡಗಿಕೊಳ್ಳುವುದಕ್ಕೆ ಒಳಗಿನ ಕೋಣೆಗೆ ಹೋಗುವ ದಿನದಲ್ಲಿ ಅದು ನಿನಗೆ ಗೊತ್ತಾಗುವುದು” ಎಂದು ಉತ್ತರಕೊಟ್ಟನು.
26 Vua Y-sơ-ra-ên truyền lịnh rằng: Hãy bắt Mi-chê dẫn đến cho A-môn, quan cai thành, và cho Giô-ách, con trai của vua,
೨೬ಆಗ ಇಸ್ರಾಯೇಲಿನ ಅರಸನು ಸೇವಕರಿಗೆ, “ಮೀಕಾಯೆಹುವನ್ನು ಹಿಡಿದುಕೊಂಡು ಹೋಗಿ ಪುರಾಧಿಕಾರಿಯಾದ ಆಮೋನನಿಗೂ, ರಾಜಪುತ್ರನಾದ ಯೋವಾಷನಿಗೂ ಒಪ್ಪಿಸಿ ಅವರಿಗೆ,
27 rồi hãy nói rằng: Vua bảo như vầy: Hãy bỏ tù người này, lấy bánh và nước khổ nạn mà nuôi nó cho đến khi ta trở về bình an.
೨೭‘ನಾನು ಸುರಕ್ಷಿತನಾಗಿ ಹಿಂದಿರುಗುವವರೆಗೂ ಇವನನ್ನು ಸೆರೆಯಲ್ಲಿಟ್ಟು ಸೆರೆಮನೆಯ ಅನ್ನಪಾನಗಳನ್ನೇ ಕೊಟ್ಟು ಕುಗ್ಗಿಸಬೇಕೆಂದು ಅರಸನು ಅನ್ನುತ್ತಾನೆ’ ಎಂದು ಹೇಳಿರಿ” ಎಂಬುದಾಗಿ ಆಜ್ಞಾಪಿಸಿದನು.
28 Mi-chê tiếp rằng: Nếu vua trở về bình an, thì Ðức Giê-hô-va không cậy tôi phán. Người lại nói: Hỡi chúng dân! các ngươi khá nghe ta.
೨೮ಮೀಕಾಯೆಹುವು ಅರಸನಿಗೆ, “ನೀನು ಸುರಕ್ಷಿತವಾಗಿ ಬರುವುದಾದರೆ ನಾನು ನುಡಿದದ್ದು ಯೆಹೋವನ ಮಾತಲ್ಲವೆಂದು ತಿಳಿದುಕೋ” ಎಂದು ಹೇಳಿ “ಎಲ್ಲಾ ಜನರೇ, ಇದನ್ನು ಕೇಳಿರಿ” ಎಂದು ಕೂಗಿದನು.
29 Vậy, vua Y-sơ-ra-ên đi lên Ra-mốt trong Ga-la-át với Giô-sa-phát, vua Giu-đa.
೨೯ಇಸ್ರಾಯೇಲರ ಅರಸನೂ ಯೆಹೂದ್ಯರ ಅರಸನಾದ ಯೆಹೋಷಾಫಾಟನೂ ರಾಮೋತ್ ಗಿಲ್ಯಾದಿಗೆ ವಿರುದ್ಧವಾಗಿ ಯುದ್ಧಕ್ಕೆ ಹೊರಟರು.
30 Vua Y-sơ-ra-ên nói cùng Giô-sa-phát rằng: Tôi sẽ giả dạng ăn mặc, rồi ra trận; còn vua hãy mặc áo của vua. Như vậy, vua Y-sơ-ra-ên ăn mặc giả dạng mà ra trận.
೩೦ಇಸ್ರಾಯೇಲರ ಅರಸನೂ ಯೆಹೋಷಾಫಾಟನಿಗೆ, “ನಾನು ವೇಷಹಾಕಿಕೊಂಡು ರಣರಂಗಕ್ಕೆ ಬರುವೆನು. ನೀನಾದರೂ ನಿನ್ನ ರಾಜವಸ್ತ್ರಗಳನ್ನೇ ಧರಿಸಿಕೊಂಡು ಬಾ” ಎಂದು ಹೇಳಿ ವೇಷಹಾಕಿಕೊಂಡು ರಣರಂಗಕ್ಕೆ ಹೋದನು.
31 Vả, vua Sỵ-ri đã truyền lịnh cho ba mươi hai quan coi xe mình rằng: Các ngươi chớ áp đánh ai bất kỳ lớn hay nhỏ, nhưng chỉ một mình vua Y-sơ-ra-ên mà thôi.
೩೧ಅರಾಮ್ಯರ ಅರಸನು ತನ್ನ ರಥಬಲದ ಮೂವತ್ತೆರಡು ಅಧಿಪತಿಗಳಿಗೆ, “ನೀವು ಶತ್ರುಗಳ ಸಾಧಾರಣ ಸೈನಿಕರನ್ನೂ ಅಧಿಪತಿಗಳನ್ನು ಬಿಟ್ಟು ಇಸ್ರಾಯೇಲರ ಅರಸನಿಗೇ ಗುರಿಯಿಡಿರಿ” ಎಂದು ಆಜ್ಞಾಪಿಸಿದನು.
32 Vậy, khi các quan coi xe thấy Giô-sa-phát thì nói rằng: Ấy quả thật là vua Y-sơ-ra-ên. Chúng bèn đến gần người đặng áp đánh; nhưng Giô-sa-phát kêu la lên.
೩೨ಅವರು ಯೆಹೋಷಾಫಾಟನನ್ನು ಕಂಡಾಗ ಅವನೇ ಇಸ್ರಾಯೇಲರ ಅರಸನೆಂದು ತಿಳಿದು ಅವನ ವಿರುದ್ಧ ಯುದ್ಧಮಾಡಿದರು.
33 Khi các quan coi xe thấy chẳng phải vua Y-sơ-ra-ên, thì thối lại, không đuổi theo nữa.
೩೩ಆಗ ಅವನು ಇಸ್ರಾಯೇಲ್ಯರ ಅರಸನಲ್ಲವೆಂಬುದು ರಥಬಲದ ಅಧಿಪತಿಗಳಿಗೆ ಗೊತ್ತಾದಾಗ ಅವರು ಅವನನ್ನು ಬಿಟ್ಟು ಹಿಂದಿರುಗಿದರು.
34 Bấy giờ, có một người tình cờ giương cung bắn vua Y-sơ-ra-ên, trúng nhằm người nơi giáp đâu lại. Vua nói cùng kẻ đánh xe mình rằng: Hãy quay cương lại, dẫn ta ra ngoài hàng quân, vì ta bị thương nặng.
೩೪ಅರಾಮ್ಯರ ಒಬ್ಬ ಸೈನಿಕನು ಯಾರಿಗೂ ಗುರಿಯಿಡದೆ ಬಾಣವನ್ನೆಸೆಯಲು ಆ ಬಾಣವು ಇಸ್ರಾಯೇಲ್ಯರ ಅರಸನಿಗೆ ಅವನ ಕವಚದ ಸಂದಿಯಲ್ಲಿ ತಾಗಿತು. ಆಗ ಅವನು ತನ್ನ ಸಾರಥಿಗೆ, “ರಥವನ್ನು ಹಿಂತಿರುಗಿಸಿ ನನ್ನನ್ನು ರಣರಂಗದಿಂದ ಆಚೆಗೆ ಕರೆದುಕೊಂಡು ಹೋಗು, ನನಗೆ ದೊಡ್ಡ ಗಾಯವಾಗಿದೆ” ಎಂದು ಹೇಳಿದನು.
35 Nhưng trong ngày đó thế trận thêm dữ dội; có người nâng đỡ vua đứng trong xe mình đối địch dân Sy-ri. Ðến chiều tối vua chết; huyết của vít thương người chảy xuống trong lòng xe.
೩೫ಆದರೂ ಆ ದಿನ ಯುದ್ಧವು ಬಹು ಘೋರವಾಗಿದ್ದುದರಿಂದ ಅರಸನು ಅರಾಮ್ಯರ ಎದುರಾಗಿ ತನ್ನ ರಥದಲ್ಲಿಯೇ ಆತುಕೊಂಡು ನಿಂತಿದ್ದು ಸಾಯಂಕಾಲವಾದಾಗ ಸತ್ತನು. ಗಾಯದಿಂದ ರಕ್ತವು ಸುರಿದು ಸುರಿದು ರಥದ ಅಡಿಯಲ್ಲಿ ನಿಂತಿತು.
36 Lối chiều, trong hàng quân có rao truyền rằng: Ai nấy hãy trở về thành mình, xứ mình.
೩೬ಸೂರ್ಯಸ್ತಮಾನವಾದ ಕೂಡಲೆ “ಪ್ರತಿಯೊಬ್ಬನೂ ತನ್ನ ಪ್ರಾಂತ್ಯಕ್ಕೂ ಪಟ್ಟಣಕ್ಕೂ ಹೋಗಲಿ” ಎಂಬ ಕೂಗು ಇಸ್ರಾಯೇಲ್ ಸೈನ್ಯದಲ್ಲಿ ಹಬ್ಬಿಕೊಂಡಿತು
37 Vua băng hà là như vậy; người ta đem thây vua về Sa-ma-ri, và chôn tại đó.
೩೭ಅರಸನು ಸಾಯಲು ಅವನನ್ನು ಸಮಾರ್ಯಕ್ಕೆ ತಂದು ಅಲ್ಲಿ ಸಮಾಧಿ ಮಾಡಿದರು.
38 Người ta rửa xe người tại trong ao Sa-ma-ri, là nơi những bợm buôn hương tắm, và có những chó liếm máu người, y như lời Ðức Giê-hô-va phán.
೩೮ದೇವದಾಸಿಯರು ಸ್ನಾನಮಾಡುವ ಸಮಾರ್ಯದ ಕೆರೆಯಲ್ಲಿ ಅವನ ರಥವನ್ನು ತೊಳೆಯುತ್ತಿದ್ದಾಗ ನಾಯಿಗಳು ಬಂದು ಅದರಲ್ಲಿದ್ದ ರಕ್ತವನ್ನು ನೆಕ್ಕಿದವು. ಹೀಗೆ ಯೆಹೋವನು ಹೇಳಿದ ಮಾತು ನೆರವೇರಿತು.
39 Các chuyện khác của A-háp, những công việc người làm, cái đền bằng ngà người cất, và các thành người xây, đều chép trong sử ký về các vua Y-sơ-ra-ên.
೩೯ಅಹಾಬನ ಉಳಿದ ಚರಿತ್ರೆಯೂ ಅವನು ಕಟ್ಟಿಸಿದ ದಂತ ಮಂದಿರ ಪಟ್ಟಣಗಳು, ಇವುಗಳ ವಿವರವೂ ಮತ್ತು ಅವನ ಬೇರೆ ಎಲ್ಲಾ ಕೃತ್ಯಗಳೂ ಇಸ್ರಾಯೇಲ್ ರಾಜಕಾಲವೃತ್ತಾಂತ ಎಂಬ ಗ್ರಂಥದಲ್ಲಿ ಲಿಖಿತವಾಗಿದೆ.
40 Vậy A-háp an giấc cùng tổ phụ mình, và A-cha-xia, con trai người, kế vị người.
೪೦ಅಹಾಬನು ಪೂರ್ವಿಕರ ಬಳಿಗೆ ಸೇರಲು ಅವನಿಗೆ ಬದಲಾಗಿ ಅವನ ಮಗನಾದ ಅಹಜ್ಯ ಎಂಬುವನು ಅರಸನಾದನು.
41 Năm thứ tư đời A-háp, vua Y-sơ-ra-ên, thì Giô-sa-phát con trai A-sa, lên ngôi làm vua Giu-đa.
೪೧ಇಸ್ರಾಯೇಲ್ಯರ ಅರಸನಾದ ಅಹಾಬನ ಆಳ್ವಿಕೆಯ ನಾಲ್ಕನೆಯ ವರ್ಷದಲ್ಲಿ ಆಸನ ಮಗನಾದ ಯೆಹೋಷಾಫಾಟನು ಯೆಹೂದ್ಯರ ಅರಸನಾದನು.
42 Giô-sa-phát lên ngôi, tuổi được ba mươi lăm; người cai trị hai mươi lăm năm tại Giê-ru-sa-lem. Tên của mẹ người là A-xu-ba, con gái của Si-chi.
೪೨ಅವನು ಅರಸನಾದಾಗ ಮೂವತ್ತೈದು ವರ್ಷದವನಾಗಿದ್ದು ಯೆರೂಸಲೇಮಿನಲ್ಲಿ ಇಪ್ಪತ್ತೈದು ವರ್ಷ ಆಳಿದನು. ಶಿಲ್ಹಿಯ ಮಗಳಾದ ಅಜೂಬಳೆಂಬಾಕೆಯು ಅವನ ತಾಯಿ
43 Người đi theo đường của A-sa, cha người chẳng xây bỏ đi, song làm điều thiện trước mặt Ðức Giê-hô-va. Nhưng người không trừ bỏ các nơi cao; dân sự còn tế lễ và đốt hương tại trên các nơi cao.
೪೩ಅವನು ತಪ್ಪದೆ ತನ್ನ ತಂದೆಯಾದ ಆಸನ ಮಾರ್ಗದಲ್ಲಿ ನಡೆಯುತ್ತಾ ಯೆಹೋವನ ದೃಷ್ಟಿಯಲ್ಲಿ ಒಳ್ಳೆಯವನಾಗಿದ್ದರೂ, ಪೂಜಾಸ್ಥಳಗಳನ್ನು ಹಾಳುಮಾಡಲಿಲ್ಲ. ಜನರು ಆ ಸ್ಥಳಗಳಲ್ಲಿ ಯಜ್ಞಮಾಡುತ್ತಾ ಧೂಪಹಾಕುತ್ತಾ ಇದ್ದರು.
44 Giô-sa-phát và vua Y-sơ-ra-ên ở hòa hảo với nhau.
೪೪ಅವನು ಇಸ್ರಾಯೇಲ್ಯರ ಅರಸರೊಡನೆ ಸಮಾಧಾನದಿಂದಿದ್ದನು.
45 Các chuyện khác của Giô-sa-phát, dõng lực người, những giặc giã người, đều đã chép trong sử ký về các vua Giu-đa.
೪೫ಅವನ ಉಳಿದ ಚರಿತ್ರೆಯೂ ಅವನು ಯುದ್ಧಗಳಲ್ಲಿ ನಡಿಸಿದ ಶೂರಕೃತ್ಯಗಳ ವಿವರವೂ ಯೆಹೂದ್ಯರ ರಾಜಕಾಲವೃತ್ತಾಂತ ಎಂಬ ಗ್ರಂಥದಲ್ಲಿ ಲಿಖಿತವಾಗಿದೆ.
46 Người trừ diệt những bợm vĩ-gian còn lại trong xứ từ đời A-sa, cha mình.
೪೬ಅವನು ತನ್ನ ತಂದೆಯಾದ ಅಸನ ಕಾಲದಲ್ಲಿ ತಪ್ಪಿಸಕೊಂಡ ದೇವದಾಸದಾಸಿಯರನ್ನು ದೇಶದಿಂದ ತೆಗೆದುಹಾಕಿದನು.
47 Bấy giờ, dân Ê-đôm không có vua, có một quan trấn thủ cai trị.
೪೭ಆ ಕಾಲದಲ್ಲಿ ಎದೋಮ್ ದೇಶದಲ್ಲಿ ಅರಸನಿರಲಿಲ್ಲ. ಅವನ ಪ್ರತಿನಿಧಿಯೇ ಅದನ್ನು ಆಳುತ್ತಿದ್ದನು.
48 Giô-sa-phát đóng một đoàn tàu Ta-rê-si đặng đi Ô-phia chở vàng, nhưng không đi đến đó được, bởi vì tàu vỡ ra tại Ê-xi-ôn-Ghê-be.
೪೮ಇದಲ್ಲದೆ ಯೆಹೋಷಾಫಾಟನು ಓಫೀರಿನಿಂದ ಬಂಗಾರ ತರುವುದಕ್ಕಾಗಿ ತಾರ್ಷಿಷ್ ಹಡಗುಗಳನ್ನು ಮಾಡಿಸಿದನು.
49 A-cha-xia, con trai của A-háp, nói với Giô-sa-phát rằng: Hãy cho phép các đầy tớ ta đi tàu với các đầy tớ ông. Nhưng Giô-sa-phát không chịu.
೪೯ಆಗ ಅಹಾಬನ ಮಗನಾದ ಅಹಜ್ಯನು ಅವನನ್ನು, “ನಿನ್ನ ಜನರ ಜೊತೆಯಲ್ಲಿ ನನ್ನ ಜನರೂ ಸಮುದ್ರ ಪ್ರಯಾಣ ಮಾಡುವುದಕ್ಕೆ ಅಪ್ಪಣೆಯಾಗಲಿ” ಎಂದು ಬೇಡಿಕೊಂಡನು. ಅವನು ಅದಕ್ಕೆ ಒಪ್ಪಲಿಲ್ಲ. ಆದರೆ ಆ ಹಡಗುಗಳು ಎಚ್ಯೋನ್ಗೆಬೆರಿನಲ್ಲಿ ಒಡೆದುಹೋದುದರಿಂದ ಓಫೀರನ್ನು ಮುಟ್ಟಲಿಲ್ಲ.
50 Giô-sa-phát an giấc với tổ phụ mình, được chôn với họ trong thành Ða-vít, cha người, và Giô-ram, con trai người, kế vị người.
೫೦ಯೆಹೋಷಾಫಾಟನು ತನ್ನ ಪೂರ್ವಿಕರ ಬಳಿಗೆ ಸೇರಲು ಅವನ ಶವವನ್ನು ಅವನ ಪೂರ್ವಿಕನಾದ ದಾವೀದನ ಪಟ್ಟಣದೊಳಗೆ ಕುಟುಂಬ ಸ್ಮಶಾನಭೂಮಿಯಲ್ಲಿ ಸಮಾಧಿಮಾಡಿದರು. ಅವನ ನಂತರ ಅವನ ಮಗನಾದ ಯೆಹೋರಾಮನು ಅರಸನಾದನು.
51 Năm thứ bảy đời Giô-sa-phát, vua Giu-đa, thì A-cha-xia, con trai A-háp, lên ngôi làm vua Y-sơ-ra-ên tại Sa-ma-ri, và cai trị hai năm.
೫೧ಯೆಹೂದ್ಯರ ಅರಸನಾದ ಯೆಹೋಷಾಫಾಟನ ಆಳ್ವಿಕೆಯ ಹದಿನೇಳನೆಯ ವರ್ಷದಲ್ಲಿ ಅಹಾಬನ ಮಗನಾದ ಅಹಜ್ಯ ಎಂಬುವನು ಇಸ್ರಾಯೇಲರ ಅರಸನಾಗಿ ಸಮಾರ್ಯದಲ್ಲಿ ಎರಡು ವರ್ಷ ಆಳ್ವಿಕೆ ಮಾಡಿದನು.
52 Người làm điều ác trước mặt Ðức Giê-hô-va, đi theo con đường của cha và mẹ mình, cùng theo đường của Giê-rô-bô-am, con trai của Nê-bát, là người xui cho Y-sơ-ra-ên phạm tội.
೫೨ಅವನು ಇಸ್ರಾಯೇಲರನ್ನು ಪಾಪಕ್ಕೆ ಪ್ರೇರೇಪಿಸಿ ನೆಬಾಟನ ಮಗನಾದ ಯಾರೊಬ್ಬಾಮನ ಮತ್ತು ತನ್ನ ತಂದೆತಾಯಿಗಳ ಮಾರ್ಗದಲ್ಲಿ ನಡೆದು ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾದನು.
53 Người hầu việc Ba-anh và thờ lạy nó, chọc giận Giê-hô-va Ðức Chúa Trời của Y-sơ-ra-ên, cứ theo mọi sự cha người đã làm.
೫೩ತನ್ನ ತಂದೆಯಂತೆ ಬಾಳ್ ದೇವರನ್ನು ಪೂಜಿಸಿ ಇಸ್ರಾಯೇಲ್ ದೇವರಾದ ಯೆಹೋವನಿಗೆ ಕೋಪ ಉಂಟುಮಾಡಿನು.

< I Các Vua 22 >