< Giô-sua 12 >
1 Đây là danh sách các vua phía đông Sông Giô-đan bị người Ít-ra-ên đánh bại và lãnh thổ của họ đã bị Ít-ra-ên chiếm hữu. Đất của họ chạy dài từ thung lũng Sông Ạt-nôn đến Núi Hẹt-môn, gồm cả các đồng bằng miền đông.
೧ಇಸ್ರಾಯೇಲ್ಯರು ಯೊರ್ದನ್ ನದಿಯ ಪೂರ್ವ ದಿಕ್ಕಿನಲ್ಲಿ ಅರ್ನೋನ್ ಕಣಿವೆ ಮೊದಲುಗೊಂಡು ಹೆರ್ಮೋನ್ ಪರ್ವತದವರೆಗಿದ್ದ ಪ್ರದೇಶವನ್ನೂ ಕಣಿವೆ ಪ್ರದೇಶದ ಪೂರ್ವಭಾಗವನ್ನೂ ಸ್ವಾಧೀನ ಮಾಡಿಕೊಂಡು ಅವುಗಳಲ್ಲಿದ್ದ ಅರಸರನ್ನು ಸಂಹರಿಸಿದರು.
2 Si-hôn, vua người A-mô-rít, đóng đô ở Hết-bôn, cai trị một vùng từ thành A-rô-e bên bờ Sông Ạt-nôn, và từ giữa thung lũng này cho đến Sông Gia-bốc (biên giới của đất Am-môn), gồm phân nửa đất Ga-la-át.
೨ಅವರಲ್ಲಿ ಮೊದಲನೆಯವನು ಹೆಷ್ಬೋನಿನಲ್ಲಿದ್ದ ಅಮೋರಿಯರ ಅರಸನಾಗಿದ್ದವನು ಸೀಹೋನ್. ಇವನು ಅರ್ನೋನ್ ಕಣಿವೆಯ ಅಂಚಿನಲ್ಲಿರುವ ಅರೋಯೇರ್ ಪಟ್ಟಣವು ಮತ್ತು ಕಣಿವೆಯಲ್ಲಿಯೇ ಇದ್ದ ಪಟ್ಟಣಗಳು ಇವುಗಳು ಮೊದಲುಗೊಂಡು ಅಮ್ಮೋನಿಯರ ಮೇರೆಯಾಗಿರುವ ಯಬ್ಬೋಕ್ ಹೊಳೆಯವರೆಗಿರುವ ಗಿಲ್ಯಾದಿನ ಅರ್ಧಪ್ರಾಂತ್ಯವು
3 Đất vua này còn gồm các đồng bằng miền đông, từ bờ phía đông biển Ki-nê-rốt chạy cho đến Biển Chết (đường đi về Bết-giê-si-mốt) và triền núi Phích-ga về phía nam.
೩ಹಾಗೂ ಯೊರ್ದನ್ ನದಿಯ ಪೂರ್ವದಲ್ಲಿ ಕಿನ್ನೆರೋತ್ ಸಮುದ್ರದಿಂದ ಲವಣಸಮುದ್ರವೆನಿಸಿಕೊಳ್ಳುವ ಅರಾಬ್ ಸಮುದ್ರದ ಹತ್ತಿರವಿರುವ ಬೇತಯೆಷಿಮೋತಿನವರೆಗೂ ದಕ್ಷಿಣದಲ್ಲಿರುವ ಪಿಸ್ಗಾ ಬೆಟ್ಟದ ಬುಡದವರೆಗೂ ಇರುವ ಕಣಿವೆ ಪ್ರದೇಶವು ಇವೇ ಅವನ ರಾಜ್ಯ:
4 Óc, vua Ba-san, người khổng lồ còn sót lại của người Rê-pha-im, đóng đô ở Ách-ta-rốt Ết-rê-i,
೪ಅಷ್ಟರೋತ್ ಹಾಗೂ ಎದ್ರೈ ಎಂಬ ಊರುಗಳಲ್ಲಿ ವಾಸವಾಗಿದ್ದ ರೆಫಾಯರ ವಂಶಸ್ಥರು ಬಾಷಾನಿನ ಅರಸನೂ ಆದ ಓಗನು ಸಂಹರಿಸಲ್ಪಟ್ಟವರಲ್ಲಿ ಎರಡನೆಯವನು.
5 cai trị vùng Núi Hẹt-môn, vùng Sanh-ca, toàn đất Ba-san, giáp giới với đất của người Ghê-sua và người Ma-ca và phân nửa đất Ga-la-át, giáp giới với đất của Si-hôn, vua Hết-bôn.
೫ಇವನ ರಾಜ್ಯ ಹೆರ್ಮೋನ್ ಬೆಟ್ಟದ ಮೇಲಿನ ಸೀಮೆ, ಸಲ್ಕಾ ಪಟ್ಟಣವು, ಗೆಷೂರ್ಯರ ಮತ್ತು ಮಾಕತೀಯರ ಮೇರೆವರೆಗೆ ಇದ್ದ ಬಾಷಾನಿನ ಸೀಮೆ, ಹೆಷ್ಬೋನಿನ ಅರಸನಾದ ಸೀಹೋನನ ಮೇರೆಯವರೆಗೆ ಇದ್ದ ಗಿಲ್ಯಾದಿನ ಅರ್ಧ ಪ್ರಾಂತ್ಯದ ವರೆಗಿದ್ದಿತ್ತು.
6 Môi-se, đầy tớ của Chúa, và người Ít-ra-ên đã tiêu diệt toàn dân của Vua Si-hôn và Vua Óc. Môi-se lấy phần đất này chia cho đại tộc Ru-bên, đại tộc Gát, và phân nửa đại tộc Ma-na-se.
೬ಯೆಹೋವನ ಸೇವಕನಾದ ಮೋಶೆಯೂ, ಇಸ್ರಾಯೇಲ್ಯರ ಸಹಿತವಾಗಿ ಆ ಇಬ್ಬರನ್ನು ಸೋಲಿಸಿ ಅವರ ರಾಜ್ಯಗಳನ್ನು ರೂಬೇನ್ಯರಿಗೂ, ಗಾದ್ಯರಿಗೂ, ಮನಸ್ಸೆಯ ಅರ್ಧ ಗೋತ್ರದವರಿಗೂ ಸ್ವತ್ತಾಗಿ ಕೊಟ್ಟನು.
7 Và đây là danh sách các vua phía tây Giô-đan bị Giô-suê và người Ít-ra-ên đánh bại: Đất của họ chạy dài từ Ba-anh Gát trong thung lũng Li-ban cho đến Núi Ha-lác ngang Sê-i-rơ. (Đất này được Giô-suê đem chia cho các đại tộc còn lại,
೭ಯೆಹೋಶುವನು ಇಸ್ರಾಯೇಲರ ಸಹಿತವಾಗಿ ಯೊರ್ದನ್ ನದಿಯ ಪಶ್ಚಿಮದಲ್ಲಿ ಲೆಬನೋನ್ ಕಣಿವೆಯಲ್ಲಿದ್ದ ಬಾಲ್ಗಾದಿನಿಂದ ಸೇಯೀರಿನ ದಾರಿಯಲ್ಲಿದ್ದ ಹಾಲಾಕ್ ಪರ್ವತದವರೆಗೂ ವಿಸ್ತರಿಸಿಕೊಂಡಿದ್ದ ಬೆಟ್ಟದ ಮೇಲಿನ ಪ್ರದೇಶಗಳು,
8 gồm cả vùng cao nguyên, thung lũng, đồng bằng, triền núi, hoang mạc, và vùng Nê-ghép. Đó là đất của người Hê-tít, A-mô-rít, Ca-na-an, Phê-rết, Hê-vi và Giê-bu).
೮ಇಳುಕಲ್ಲಿನ ಪ್ರದೇಶಗಳು, ಕಣಿವೆ ಪ್ರದೇಶಗಳು, ಬೆಟ್ಟಗಳ ಬುಡದಲ್ಲಿರುವ ಸೀಮೆಗಳು, ಅರಣ್ಯದ ದಕ್ಷಿಣ ಪ್ರಾಂತ್ಯ ಇವುಗಳನ್ನು ಆಳುತ್ತಿದ್ದ ಹಿತ್ತಿಯ, ಅಮೋರಿಯ, ಕಾನಾನ, ಪೆರಿಜ್ಜೀಯ, ಹಿವ್ವಿಯ, ಯೆಬೂಸಿಯ ಅರಸರನ್ನೂ ಸೋಲಿಸಿ, ಅವರ ದೇಶಗಳನ್ನು ಇಸ್ರಾಯೇಲರ ಕುಲದವರಿಗೆ ಶಾಶ್ವತ ಆಸ್ತಿಯಾಗಿ ಕೊಟ್ಟನು. ಆ ಅರಸರ ಪಟ್ಟಿಯು ಹೇಗೆಂದರೆ,
9 Vua Giê-ri-cô. Vua A-hi gần Bê-tên.
೯ಯೆರಿಕೋವಿನ ಅರಸನು - 1 ಬೇತೇಲ್ ಬಳಿಯಲ್ಲಿರುವ ಆಯಿ ಎಂಬ ಊರಿನ ಅರಸನು - 1
10 Vua Giê-ru-sa-lem. Vua Hếp-rôn.
೧೦ಯೆರೂಸಲೇಮಿನ ಅರಸನು - 1 ಹೆಬ್ರೋನಿನ ಅರಸನು - 1
11 Vua Giạt-mút. Vua La-ki.
೧೧ಯರ್ಮೂತಿನ ಅರಸನು - 1 ಲಾಕೀಷಿನ ಅರಸನು - 1
12 Vua Éc-lôn. Vua Ghê-xe.
೧೨ಎಗ್ಲೋನಿನ ಅರಸನು - 1 ಗೆಜೆರಿನ ಅರಸನು - 1
13 Vua Đê-bia. Vua Ghê-đe.
೧೩ದೆಬೀರಿನ ಅರಸನು - 1 ಗೆದೆರಿನ ಅರಸನು - 1
14 Vua Họt-ma. Vua A-rát.
೧೪ಹೊರ್ಮದ ಅರಸನು - 1 ಅರಾದಿನ ಅರಸನು - 1
15 Vua Líp-na. Vua A-đu-lam.
೧೫ಲಿಬ್ನದ ಅರಸನು - 1 ಅದುಲ್ಲಾಮಿನ ಅರಸನು - 1
16 Vua Ma-kê-đa. Vua Bê-tên.
೧೬ಮಕ್ಕೇದದ ಅರಸನು - 1 ಬೇತೇಲಿನ ಅರಸನು - 1
17 Vua Tháp-bu-a. Vua Hê-phe.
೧೭ತಪ್ಪೂಹದ ಅರಸನು - 1 ಹೇಫೆರಿನ ಅರಸನು - 1
18 Vua A-phéc. Vua La-sa-rôn,
೧೮ಅಫೇಕದ ಅರಸನು - 1 ಲಷ್ಷಾರೋನಿನ ಅರಸನು - 1
19 Vua Ma-đôn. Vua Hát-so.
೧೯ಮಾದೋನಿನ ಅರಸನು - 1 ಹಾಚೋರಿನ ಅರಸನು - 1
20 Vua Sim-rôn-Mê-rôn. Vua Ạc-sáp.
೨೦ಶಿಮ್ರೋನ್ಮೆರೋನಿನ ಅರಸನು - 1 ಅಕ್ಷಾಫಿನ ಅರಸನು - 1
21 Vua Tha-a-nác. Vua Mê-ghi-đô.
೨೧ತಾನಕದ ಅರಸನು - 1 ಮೆಗಿದ್ದೋವಿನ ಅರಸನು - 1
22 Vua Kê-đe. Vua Giốc-nê-am ở Cát-mên.
೨೨ಕೆದೆಷಿನ ಅರಸನು - 1 ಕರ್ಮೆಲ್ ಬೆಟ್ಟದ ಯೊಕ್ನೆಯಾಮದ ಅರಸನು - 1
23 Vua Đô-rơ ở Na-phát-đo. Vua Gô-im ở Ghinh-ganh.
೨೩ದೋರ್ ಪ್ರಾಂತ್ಯದ ದೋರಿನ ಅರಸನು - 1 ಗಿಲ್ಗಾಲಿನ ಅರಸನು - 1
24 Vua Tia-xa. Tổng cộng ba mươi mốt vua bị bại trận.
೨೪ತಿರ್ಚದ ಅರಸನು - 1 ಒಟ್ಟು 31 ಮಂದಿ ಅರಸರು.