< Phục Truyền Luật Lệ 26 >
1 “Khi đã vào sống trong đất nơi Chúa Hằng Hữu, Đức Chúa Trời của anh em ban cho rồi,
೧ನಿಮ್ಮ ದೇವರಾದ ಯೆಹೋವನು ನಿಮಗೆ ಸ್ವದೇಶವಾಗುವುದಕ್ಕೆ ಕೊಡುವ ದೇಶವನ್ನು ನೀವು ಸೇರಿ, ಸ್ವಾಧೀನಮಾಡಿಕೊಂಡು ಅದರಲ್ಲಿ ವಾಸಿಸುವಾಗ,
2 anh em sẽ chọn một số hoa quả đầu mùa, bỏ vào giỏ, đem lên nơi Chúa Hằng Hữu, Đức Chúa Trời anh em, sẽ chọn để đặt Danh Ngài,
೨ನಿಮ್ಮಲಿರುವ ಪ್ರತಿಯೊಬ್ಬನೂ ಆತನು ದಯಪಾಲಿಸಿದ ಹೊಲದ ಎಲ್ಲಾ ಬೆಳೆಗಳಲ್ಲಿ ಪ್ರಥಮಫಲಗಳನ್ನು ಪುಟ್ಟಿಯಲ್ಲಿಟ್ಟು, ನಿಮ್ಮ ದೇವರಾದ ಯೆಹೋವನು ತನ್ನ ಹೆಸರನ್ನು ಸ್ಥಾಪಿಸುವುದಕ್ಕೆ ಆದುಕೊಳ್ಳುವ ಸ್ಥಳಕ್ಕೆ ತರಬೇಕು.
3 trao cho thầy tế lễ đang thi hành nhiệm vụ tại đó, và nói: ‘Hôm nay tôi xin phép được thưa trình với Chúa Hằng Hữu là Đức Chúa Trời, Đấng đã đem tôi vào đất này như Ngài đã hứa với các tổ tiên.’
೩ನೀವು ಅದನ್ನು ತೆಗೆದುಕೊಂಡುಹೋಗಿ ಆ ಕಾಲದಲ್ಲಿ ಇರುವ ಮಹಾಯಾಜಕನಿಗೆ, “ಯೆಹೋವನು ನಮ್ಮ ಪೂರ್ವಿಕರಿಗೆ ಪ್ರಮಾಣಮಾಡಿಕೊಟ್ಟ ದೇಶದಲ್ಲಿ ನಾವು ಸೇರಿದ್ದಾಯಿತೆಂದು ನೀನು ಸೇವಿಸುವ ದೇವರಾದ ಯೆಹೋವನ ಸನ್ನಿಧಿಯಲ್ಲಿ ನಾವು ಈಗ ಒಪ್ಪಿಕೊಂಡಿದ್ದೇವೆ” ಎಂದು ಹೇಳಬೇಕು.
4 Thầy tế lễ sẽ lấy giỏ hoa quả để trước bàn thờ Chúa Hằng Hữu, Đức Chúa Trời của anh em.
೪ಯಾಜಕನು ಆ ಪುಟ್ಟಿಯನ್ನು ನಿಮ್ಮ ಕೈಯಿಂದ ತೆಗೆದುಕೊಂಡು ನಿಮ್ಮ ದೇವರಾದ ಯೆಹೋವನ ಯಜ್ಞವೇದಿಯ ಮುಂದೆ ಇಡುವನು.
5 Người đứng dâng lễ vật sẽ thưa với Chúa Hằng Hữu, Đức Chúa Trời của anh em: ‘Tổ tiên tôi là một người A-ram du mục. Người xuống Ai Cập với một gia đình vỏn vẹn có mấy người, nhưng về sau họ trở thành một dân tộc mạnh mẽ đông đúc.
೫ಆಗ ನೀವು ನಿಮ್ಮ ದೇವರಾದ ಯೆಹೋವನ ಸನ್ನಿಧಿಯಲ್ಲಿ, “ಅರಾಮ್ಯನಾದ ನಮ್ಮ ಮೂಲಪಿತೃವು ಗತಿಯಿಲ್ಲದವನಾಗಿ ಅಲೆದಾಡುತ್ತಾ ಸ್ವಲ್ಪ ಜನರೊಡನೆ ಐಗುಪ್ತದೇಶಕ್ಕೆ ಹೋಗಿ ಅಲ್ಲಿ ಇಳಿದುಕೊಂಡನು. ಅಲ್ಲಿ ಅವನ ಸಂತಾನದವರು ಹೆಚ್ಚಿ ಅವರು ಮಹಾಬಲಿಷ್ಠ ಜನಾಂಗವಾದರು.
6 Người Ai Cập ngược đãi chúng tôi, bắt chúng tôi làm nô lệ khổ nhục.
೬ಐಗುಪ್ತ್ಯರು ನಮ್ಮನ್ನು ಉಪದ್ರವಪಡಿಸಿ, ಬಾಧಿಸಿ, ನಮ್ಮಿಂದ ಕಠಿಣವಾಗಿ ದುಡಿಸಿಕೊಂಡರು.
7 Chúng tôi kêu thấu Chúa Hằng Hữu, Đức Chúa Trời của tổ tiên, và Ngài nghe tiếng kêu than, nhìn thấy cảnh khổ đau, cực nhọc, áp bức chúng tôi phải chịu.
೭ಆಗ ನಾವು ನಮ್ಮ ಪೂರ್ವಿಕರ ದೇವರಾದ ಯೆಹೋವನಿಗೆ ಮೊರೆಯಿಡಲಾಗಿ ಆತನು ನಮ್ಮ ಸ್ವರವನ್ನು ಕೇಳಿ, ನಮ್ಮ ದುರವಸ್ಥೆಯನ್ನೂ, ಕಷ್ಟವನ್ನೂ ಮತ್ತು ಉಪದ್ರವವನ್ನೂ ನೋಡಿದನು.
8 Với cánh tay đầy quyền năng, với nhiều phép lạ, Ngài đem chúng tôi ra khỏi Ai Cập.
೮ಆತನು ತನ್ನ ಭುಜಬಲವನ್ನೂ, ಶಿಕ್ಷಾಹಸ್ತವನ್ನೂ, ಮಹಾಭೀತಿಗಳನ್ನೂ, ಮಹತ್ಕಾರ್ಯಗಳನ್ನೂ ಮತ್ತು ಸೂಚಕಕಾರ್ಯಗಳನ್ನು ಪ್ರಯೋಗಿಸಿ ನಮ್ಮನ್ನು ಬಿಡಿಸಿದನು.
9 Ngài dắt chúng tôi vào đây, cho chúng tôi đất phì nhiêu này!
೯ಅವನು ನಮ್ಮನ್ನು ಐಗುಪ್ತದೇಶದಿಂದ ಕರೆತಂದು ಹಾಲೂ ಮತ್ತು ಜೇನೂ ಹರಿಯುವ ಈ ದೇಶವನ್ನು ನಮಗೆ ಕೊಟ್ಟಿದ್ದಾನೆ.
10 Chúa ôi, giờ đây tôi kính dâng lên Ngài các hoa quả đầu tiên của đất đai Ngài cho tôi.’ Xong, người này đặt hoa quả trước mặt Chúa Hằng Hữu, Đức Chúa Trời của anh em, và thờ lạy Ngài.
೧೦ಆದುದರಿಂದ ಯೆಹೋವನೇ, ನೀನು ಅನುಗ್ರಹಿಸಿರುವ ಭೂಮಿಯ ಬೆಳೆಯಲ್ಲಿ ಪ್ರಥಮಫಲಗಳನ್ನು ನಾವು ಕಾಣಿಕೆಯಾಗಿ ತಂದಿದ್ದೇವೆ, ಅದನ್ನು ಸ್ವೀಕರಿಸಬೇಕು” ಎಂದು ಹೇಳಿ ಆ ಪ್ರಥಮಫಲಗಳನ್ನು ನಿಮ್ಮ ದೇವರಾದ ಯೆಹೋವನ ಸನ್ನಿಧಿಯಲ್ಲಿಟ್ಟು ಆತನನ್ನು ಆರಾಧಿಸಬೇಕು.
11 Sau đó, gia đình người này sẽ cùng với người Lê-vi và ngoại kiều trong thành ăn mừng, vì Chúa đã ban phước lành cho mình.
೧೧ಆತನು ನಿಮಗೂ ಮತ್ತು ನಿಮ್ಮ ಮನೆಯವರಿಗೂ ಉಂಟುಮಾಡಿದ ಎಲ್ಲಾ ಸುಖಸಂತೋಷಗಳಿಗಾಗಿ ನೀವೂ, ಲೇವಿಯರೂ ಮತ್ತು ನಿಮ್ಮ ಮಧ್ಯದಲ್ಲಿರುವ ಪರದೇಶಿಗಳೂ ಸಂಭ್ರಮದಿಂದಿರಬೇಕು.
12 Cuối mỗi năm thứ ba, anh em sẽ lấy một phần mười của mùa màng thu hoạch được trong năm ấy (gọi là năm dâng hiến một phần mười) đem phân phối cho người Lê-vi, ngoại kiều, cô nhi, và quả phụ trong thành, cho họ có đủ thực phẩm.
೧೨ದಶಮಾಂಶವನ್ನು ಕೊಡಬೇಕಾದ ಮೂರನೆಯ ವರ್ಷದಲ್ಲಿ ನಿಮಗುಂಟಾದ ಆದಾಯದ ದಶಮ ಭಾಗವನ್ನು ನೀವು ಪ್ರತ್ಯೇಕಿಸಿದಾಗ, ನಿಮ್ಮ ನಿಮ್ಮ ಊರುಗಳಲ್ಲಿರುವ ಲೇವಿಯರೂ, ಪರದೇಶಿಗಳೂ, ಅನಾಥರು ಮತ್ತು ವಿಧವೆಯರೂ ಊಟಮಾಡಿ ಸಂತೋಷವಾಗಿರುವಂತೆ ಅದನ್ನು ಅವರಿಗೆ ಕೊಡಬೇಕಲ್ಲಾ.
13 Và, anh em sẽ trình với Chúa Hằng Hữu, Đức Chúa Trời của anh em: ‘Tôi đã đem phần mười cho người Lê-vi, ngoại kiều, cô nhi, và quả phụ đúng như lệnh Chúa truyền. Tôi không dám vi phạm hay lãng quên lệnh Chúa.
೧೩ಆಗ ನೀವು ನಿಮ್ಮ ದೇವರಾದ ಯೆಹೋವನ ಸನ್ನಿಧಿಯಲ್ಲಿ, “ನಾವು ಪ್ರತ್ಯೇಕಿಸಿದ ವಸ್ತುಗಳನ್ನು ಮನೆಯಿಂದ ತೆಗೆದುಕೊಂಡು ಬಂದಿದ್ದೇವೆ. ನೀನು ಆಜ್ಞಾಪಿಸಿದ ಮೇರೆಗೆ ಅವುಗಳನ್ನು ಲೇವಿಯರು, ಪರದೇಶಿಗಳು, ಅನಾಥರು, ವಿಧವೆಯರು ಇಂಥವರಿಗೆ ಕೊಟ್ಟಿದ್ದೇವೆ ನಿನ್ನ ಆಜ್ಞೆಗಳಲ್ಲಿ ಒಂದನ್ನೂ ಮೀರಲಿಲ್ಲ ಮತ್ತು ಮರೆಯಲೂ ಇಲ್ಲ.
14 Tôi không hề động đến phần mười khi tôi ở trong tình trạng ô uế, không ăn của này lúc tang chế, cũng không dùng để lo cho người chết. Tôi vâng theo lời Chúa Hằng Hữu, Đức Chúa Trời của anh em dạy, làm mọi điều Ngài truyền bảo tôi.
೧೪ನಾವು ಸತ್ತವರಿಗೋಸ್ಕರ ದುಃಖಿಸುವ ಕಾಲದಲ್ಲೆಲ್ಲಾ ಅದರಲ್ಲಿ ಏನೂ ತಿನ್ನಲಿಲ್ಲ; ಅಶುದ್ಧರಾಗಿ ಅದನ್ನು ತೆಗೆದುಹಾಕಲಿಲ್ಲ; ಸತ್ತವರಿಗೋಸ್ಕರ ಅದರಲ್ಲಿ ಏನೂ ಕೊಡಲಿಲ್ಲ; ನಮ್ಮ ದೇವರಾದ ಯೆಹೋವನ ಮಾತಿನಲ್ಲಿ ಲಕ್ಷ್ಯವಿಟ್ಟು ನೀನು ನೇಮಿಸಿದ್ದನ್ನೆಲ್ಲಾ ಅನುಸರಿಸಿದ್ದೇವೆ.
15 Xin Chúa từ trời nhìn xuống, ban phước cho dân tộc Ít-ra-ên của Ngài, chúc phước trên đất Ngài cho họ, cho đất này phì nhiêu như Ngài đã hứa với các tổ tiên.’”
೧೫ನೀನು ನಿನ್ನ ಪರಿಶುದ್ಧ ವಾಸಸ್ಥಾನವಾಗಿರುವ ಪರಲೋಕದಿಂದ ಕೆಳಗಿರುವ ನಮ್ಮನ್ನು ಕಟಾಕ್ಷಿಸಿ, ನಿನ್ನ ಜನರಾದ ಇಸ್ರಾಯೇಲರನ್ನೂ ಹಾಲೂ ಮತ್ತು ಜೇನೂ ಹರಿಯುವ ದೇಶದಲ್ಲಿ ನೀನು ನಮ್ಮ ಪೂರ್ವಿಕರಿಗೆ ವಾಗ್ದಾನಮಾಡಿದಂತೆ ನಮ್ಮನ್ನು ನೆಲೆಸುವಂತೆ ಮಾಡಿ, ನಮ್ಮನ್ನು ಈ ಭೂಮಿಯನ್ನೂ ಆಶೀರ್ವದಿಸು ದೇವರೇ” ಎಂದು ಹೇಳಬೇಕು.
16 “Ngày nay anh em phải hết lòng vâng giữ tất cả các giới luật Chúa Hằng Hữu, Đức Chúa Trời của anh em, truyền cho.
೧೬ಈ ಆಜ್ಞಾವಿಧಿಗಳನ್ನು ನೀವು ಅನುಸರಿಸಬೇಕೆಂದು ನಿಮ್ಮ ದೇವರಾದ ಯೆಹೋವನು ನಿಮಗೆ ಈಗ ಆಜ್ಞಾಪಿಸಿದ್ದಾನೆ. ಆದುದರಿಂದ ನೀವು ಸಂಪೂರ್ಣವಾದ ಹೃದಯದಿಂದಲೂ, ಮನಸ್ಸಿನಿಂದಲೂ ಇವುಗಳನ್ನು ಕೈಕೊಂಡು ನಡೆಯಬೇಕು.
17 Hôm nay anh em đã công khai xác nhận Chúa Hằng Hữu là Đức Chúa Trời của anh em, đi theo đường lối Ngài, giữ các giới luật Ngài, vâng theo lời Ngài.
೧೭ನಮಗೆ ಯೆಹೋವನೇ ದೇವರಾಗಿರುವನೆಂದೂ, ಆತನು ಹೇಳಿದ ಮಾರ್ಗದಲ್ಲೇ ನಡೆದು ಆತನ ಆಜ್ಞಾವಿಧಿನಿಯಮಗಳನ್ನು ಕೈಕೊಂಡು, ಆತನ ಮಾತಿಗೆ ಲಕ್ಷ್ಯವಿಡುವೆವು ಎಂದು ನೀವು ಈಗ ಒಡಂಬಟ್ಟಿದ್ದೀರಿ.
18 Và hôm nay Chúa Hằng Hữu cũng công nhận anh em là dân Ngài như Ngài đã hứa, nếu anh em vâng giữ mọi giới luật Chúa truyền.
೧೮ಯೆಹೋವನೋ ನಿಮ್ಮ ವಿಷಯದಲ್ಲಿ, “ಇವರು ನನ್ನ ಆಜ್ಞೆಗಳನ್ನೆಲ್ಲಾ ಅನುಸರಿಸುವ ಪಕ್ಷಕ್ಕೆ ನನ್ನ ವಾಗ್ದಾನಕ್ಕೆ ಅನುಸಾರವಾಗಿ ನನಗೆ
19 Ngài sẽ làm cho Ít-ra-ên được vinh dự, danh tiếng, và được ca ngợi hơn mọi dân tộc khác. Vì anh em là một dân thánh của Chúa—sống đúng như lời Ngài phán dặn.”
೧೯ಸ್ವಕೀಯಜನರಾಗಿ ಇರುವರೆಂದೂ, ನಾನು ನಿರ್ಮಿಸಿದ ಬೇರೆ ಎಲ್ಲಾ ಜನಾಂಗಗಳಿಗಿಂತಲೂ ಇವರಿಗೆ ಹೆಚ್ಚಾದ ಕೀರ್ತಿ ಮತ್ತು ಘನಮಾನಗಳನ್ನು ಉಂಟುಮಾಡುವೆನೆಂದೂ ಇವರು ನನ್ನ ಮಾತಿನ ಮೇರೆಗೆ ತಮ್ಮ ದೇವರಾದ ಯೆಹೋವನಿಗೋಸ್ಕರ ಮೀಸಲಾದ ಜನರಾಗುವರು” ಎಂದು ಒಪ್ಪಿಕೊಂಡಿದ್ದಾನೆ.