< Phục Truyền Luật Lệ 25 >

1 “Tại tòa án, phán quan sẽ phân xử những vụ tranh chấp, tuyên bố người vô tội được trắng án và xử phạt người có tội.
ಇಬ್ಬರು ವ್ಯಾಜ್ಯವಾಡುತ್ತಾ ನ್ಯಾಯಾಧಿಪತಿಗಳ ಬಳಿಗೆ ಬಂದರೆ, ನ್ಯಾಯಾಧಿಪತಿಗಳು ತಪ್ಪಿಲ್ಲದವನನ್ನು ನಿರಪರಾಧಿ ಎಂದೂ ತಪ್ಪುಳ್ಳವನನ್ನು ಅಪರಾಧಿ ಎಂದೂ ತೀರ್ಮಾನಿಸಬೇಕು.
2 Nếu xét thấy một người có tội đáng phạt đòn, thì phán quan sẽ truyền cho người ấy nằm xuống, sai đánh đòn ngay trước mặt mình. Số đòn nhiều hay ít tùy theo tội nặng hay nhẹ.
ಅಪರಾಧಿಗೆ ಪೆಟ್ಟಿನ ಶಿಕ್ಷೆ ತೀರ್ಮಾನವಾದರೆ ನ್ಯಾಯಾಧಿಪತಿಯು ಅವನನ್ನು ಮಲಗಿಸಿ, ಅವನ ಅಪರಾಧಕ್ಕೆ ಅನುಸಾರವಾಗಿ ಪೆಟ್ಟುಗಳನ್ನು ತನ್ನ ಮುಂದೆಯೇ ಹೊಡಿಸಿ ಲೆಕ್ಕಿಸಬೇಕು.
3 Nhưng bốn mươi roi là tối đa, đừng đánh quá, đừng làm nhục nhân phẩm một người anh em mình.
ಪೆಟ್ಟುಗಳ ಶಿಕ್ಷೆಯು ನಲ್ವತ್ತಕ್ಕಿಂತ ಹೆಚ್ಚಿರಬಾರದು. ಅದಕ್ಕಿಂತ ಹೆಚ್ಚು ಪೆಟ್ಟುಗಳನ್ನು ನೀವು ಹೊಡಿಸಿದರೆ ನಿಮ್ಮ ಸ್ವದೇಶದವನನ್ನು ನೀವು ಕೇವಲ ನೀಚನನ್ನಾಗಿ ಕಂಡಂತೆ ಆಗುವುದು.
4 Con đừng khớp miệng con bò đang đạp lúa.
ಕಣತುಳಿಯುವ ಎತ್ತಿನ ಬಾಯಿಯನ್ನು ಕಟ್ಟಬಾರದು.
5 Nếu hai anh em sống chung với nhau trong gia đình, một người chết đi không có con trai, thì người còn lại sẽ lấy vợ góa của anh em mình làm vợ, đừng để người đàn bà này đi lấy chồng ngoài gia đình.
ಅಣ್ಣತಮ್ಮಂದಿರು ಒಂದೇ ಕುಟುಂಬದಲ್ಲಿರುವಾಗ ಅಣ್ಣನು ಮಗನಿಲ್ಲದೆ ಸತ್ತರೆ, ಅವನ ಹೆಂಡತಿ ಬೇರೆ ಪುರುಷನನ್ನು ಮದುವೆಯಾಗಬಾರದು. ಅವಳ ಮೈದುನನು ಅವಳನ್ನು ಹೆಂಡತಿಯನ್ನಾಗಿ ತೆಗೆದುಕೊಂಡು ಮೈದುನಧರ್ಮವನ್ನು ನೆರವೇರಿಸಬೇಕು.
6 Đứa con trai đầu tiên họ sinh được sẽ nối dõi cho người anh em đã mất, và tên tuổi của người này sẽ được tồn tại.
ಅವಳಲ್ಲಿ ಹುಟ್ಟುವ ಚೊಚ್ಚಲಮಗನು ಸತ್ತವನ ಮಗನೆಂದು ಎಣಿಸಲ್ಪಡಬೇಕು. ಹೀಗೆ ಮಾಡುವುದರಿಂದ ಸತ್ತವನ ಹೆಸರು ಇಸ್ರಾಯೇಲರೊಳಗಿಂದ ಅಳಿಸಿ ಹೋಗುವುದಿಲ್ಲ.
7 Nhưng nếu người anh em còn sống không chịu lấy người đàn bà ấy làm vợ, bà này sẽ đến trình với các trưởng lão trong thành: ‘Người anh em chồng tôi từ khước việc lấy tôi làm vợ để có con trai nối dõi cho người đã khuất.’
ತಮ್ಮನು ಅಣ್ಣನ ಹೆಂಡತಿಯನ್ನು ಪರಿಗ್ರಹಿಸದೆ ಹೋದರೆ ಅವಳು ಊರ ಬಾಗಿಲಿಗೆ ಹೋಗಿ ಅಲ್ಲಿಯ ಹಿರಿಯರಿಗೆ, “ನನ್ನ ಗಂಡನ ತಮ್ಮನು ತನ್ನ ಅಣ್ಣನ ಹೆಸರನ್ನು ಉಳಿಸುವುದಕ್ಕೆ ಸಿದ್ಧನಿಲ್ಲ. ಅವನು ಮೈದುನಧರ್ಮವನ್ನು ನಡೆಸುವುದಿಲ್ಲ ಅನ್ನುತ್ತಾನೆ” ಎಂದು ತಿಳಿಸಬೇಕು.
8 Các trưởng lão sẽ gọi người ấy đến khuyên bảo. Nếu người ấy vẫn khăng khăng từ chối,
ಆಗ ಆ ಊರಿನ ಹಿರಿಯರು ಅವನನ್ನು ಕರೆಯಿಸಿ ವಿಚಾರಿಸಿದಲ್ಲಿ ಅವನು ಅವರ ಮುಂದೆ ನಿಂತು, “ಈಕೆಯನ್ನು ಪರಿಗ್ರಹಿಸುವುದಕ್ಕೆ ನನಗೆ ಇಷ್ಟವಿಲ್ಲ” ಎಂದು ಹೇಳುವ ಪಕ್ಷಕ್ಕೆ,
9 người đàn bà sẽ đến lột giày người ấy, nhổ vào mặt người ấy trước sự hiện diện của các trưởng lão, và nói: ‘Đây là điều mà người từ khước xây dựng nhà anh em mình phải chịu!’
ಅವನ ಅತ್ತಿಗೆ ಹಿರಿಯರ ಎದುರಿನಲ್ಲಿ ಅವನ ಕೆರವನ್ನು ಅವನ ಕಾಲಿನಿಂದ ತೆಗೆದುಬಿಟ್ಟು, ಅವನ ಮುಖದ ಮೇಲೆ ಉಗುಳಿ, “ಅಣ್ಣನಿಗೋಸ್ಕರ ಸಂತಾನವನ್ನು ವೃದ್ಧಿಗೊಳಿಸುವುದಕ್ಕೆ ಮನಸ್ಸಿಲ್ಲದವರೆಲ್ಲರಿಗೆ ಇಂಥ ಅವಮಾನವಾಗಲಿ” ಎಂದು ಹೇಳಬೇಕು.
10 Và từ đó, người ta sẽ gọi nhà người ấy là ‘nhà của ông bị lột giày!’
೧೦ಇಸ್ರಾಯೇಲರಲ್ಲಿ ಆ ಮನುಷ್ಯನ ಮನೆಯವರಿಗೆ, “ಕೆರವನ್ನು ಬಿಚ್ಚಿಸಿಕೊಂಡವನ ಮನೆಯವರು” ಎಂದು ಹೆಸರುಂಟಾಗುವುದು.
11 Khi hai người đàn ông đánh nhau, nếu vợ của một người xông vào tiếp cứu chồng và nắm vào chỗ kín của người kia,
೧೧ಇಬ್ಬರು ಜಗಳವಾಡುತ್ತಿರಲಾಗಿ ಅವರಲ್ಲಿ ಒಬ್ಬನ ಹೆಂಡತಿ ಬಂದು ತನ್ನ ಗಂಡನನ್ನು ಬಿಡಿಸಬೇಕೆಂದು ಆ ಪರಪುರುಷನ ಜನನೇಂದ್ರಿಯವನ್ನು ಹಿಡಿದುಕೊಂಡರೆ,
12 bà này phải bị chặt tay, đừng thương xót.
೧೨ಅವನು ಅವಳನ್ನು ಕನಿಕರಿಸದೆ ಅವಳ ಕೈಯನ್ನು ಕಡಿದುಹಾಕಬೇಕು.
13 Trong việc cân lường, phải ngay thật. Không ai được dùng hai thứ trái cân (một trái già, một trái non),
೧೩ಹೆಚ್ಚು ಕಡಿಮೆಯಾಗಿರುವ ಎರಡು ವಿಧವಾದ ತೂಕದ ಕಲ್ಲುಗಳನ್ನು ನಿಮ್ಮ ಚೀಲದಲ್ಲಿ ಇಟ್ಟುಕೊಳ್ಳಬಾರದು.
14 hoặc hai đơn vị đo lường (một già, một non).
೧೪ಹೆಚ್ಚುಕಡಿಮೆಯಾದ ಎರಡು ವಿಧವಾದ ಸೇರುಗಳು ಹಾಗೂ ಮೋಸ ಮಾಡುವ ತೂಕದ ಕಲ್ಲುಗಳು ನಿಮ್ಮ ಮನೆಯಲ್ಲಿ ಇರಬಾರದು.
15 Phải dùng trái cân và đơn vị đo lường chính xác. Như vậy anh em mới được sống lâu trong đất Chúa Hằng Hữu, Đức Chúa Trời của anh em, ban cho anh em.
೧೫ನಿಮ್ಮ ತೂಕದ ಕಲ್ಲೂ ಮತ್ತು ನಿಮ್ಮ ಅಳತೆಯ ಸೇರೂ ನ್ಯಾಯವಾಗಿಯೇ ಇರಬೇಕು. ನೀವು ಹೀಗೆ ನಡೆದುಕೊಂಡರೆ ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶದಲ್ಲಿ ಬಹುಕಾಲ ಬಾಳುವಿರಿ.
16 Ai gian lận, sẽ bị Chúa Hằng Hữu, Đức Chúa Trời của anh em ghê tởm.
೧೬ನ್ಯಾಯವಿರುದ್ಧವಾದ ಅಳತೆತೂಕಗಳನ್ನು ಮಾಡುವವರೆಲ್ಲರೂ ನಿಮ್ಮ ದೇವರಾದ ಯೆಹೋವನಿಗೆ ಅಸಹ್ಯರಾಗಿದ್ದಾರೆ.
17 Anh em còn nhớ việc người A-ma-léc tấn công khi anh em ra khỏi Ai Cập?
೧೭ನೀವು ಐಗುಪ್ತದೇಶದಿಂದ ಬರುವಾಗ ದಾರಿಯಲ್ಲಿ ಅಮಾಲೇಕ್ಯರು ನಿಮ್ಮನ್ನು ಎದುರಿಸಿದ್ದನ್ನು ಜ್ಞಾಪಿಸಿಕೊಳ್ಳಿರಿ.
18 Lúc ấy họ đánh cắt ngang đoàn người của anh em đang đi trên đường, tấn công những người mỏi mòn, mệt lả đi phía sau. Họ chẳng kiêng nể Đức Chúa Trời gì cả.
೧೮ಅವರು ದೇವರಲ್ಲಿ ಸ್ವಲ್ಪವೂ ಭಯಭಕ್ತಿಯಿಲ್ಲದವರಾಗಿ, ನೀವು ದಣಿದು ಮತ್ತು ಬಳಲಿದಾಗ ನಿಮ್ಮವರಲ್ಲಿ ಹಿಂದೆಬಿದ್ದ ಬಲಹೀನರನ್ನು ಸಂಹಾರ ಮಾಡಿದರು.
19 Vì thế, khi Chúa Hằng Hữu, Đức Chúa Trời của anh em, cho anh em được rảnh tay, không còn phải lo đối địch kẻ thù trong đất hứa nữa, anh em phải nhớ xóa tên A-ma-léc khỏi lịch sử nhân loại. Anh em không được quên!”
೧೯ಆದಕಾರಣ ನಿಮ್ಮ ದೇವರಾದ ಯೆಹೋವನು ನಿಮಗೆ ಸ್ವದೇಶವಾಗುವುದಕ್ಕೆ ಕೊಡುವ ದೇಶದಲ್ಲಿ ನಿಮ್ಮನ್ನು ಸೇರಿಸಿ ಸುತ್ತಲು ಯಾವ ಶತ್ರುಗಳೂ ಇಲ್ಲದಂತೆ ಮಾಡಿದಾಗ ಭೂಮಿಯ ಮೇಲೆ ಅಮಾಲೇಕ್ಯರ ಹೆಸರೇ ಉಳಿಯದಂತೆ ನೀವು ಮಾಡಬೇಕು; ಇದನ್ನು ಮರೆಯಬಾರದು.

< Phục Truyền Luật Lệ 25 >