< I Cô-rinh-tô 14 >
1 Anh chị em hãy tìm cầu tình yêu và ao ước các ân tứ Chúa Thánh Linh, nhất là ân truyền giảng lời Chúa.
೧ಪ್ರತಿನಿತ್ಯ ಪ್ರೀತಿಯಿಂದ ಜೀವಿಸಲು ಆಶಿಸಿರಿ ಮತ್ತು ಪವಿತ್ರಾತ್ಮನಿಂದುಂಟಾಗುವ ವರಗಳನ್ನು, ಅದರೊಳಗೂ ವಿಶೇಷವಾಗಿ ಪ್ರವಾದನಾ ವರವನ್ನೇ ಆಸಕ್ತಿಯಿಂದ ಅಪೇಕ್ಷಿಸಿರಿ.
2 Người nói tiếng lạ không nói với con người nhưng với Đức Chúa Trời, không ai hiểu được vì người ấy nói về các huyền nhiệm do Chúa Thánh Linh cảm động.
೨ಅನ್ಯಭಾಷೆಗಳನ್ನಾಡುವವನು ದೇವರ ಸಂಗಡ ಮಾತನಾಡುತ್ತಾನೆಯೇ ಹೊರತು ಮನುಷ್ಯರ ಸಂಗಡ ಅಲ್ಲ. ಅವನು ಆತ್ಮ ಪ್ರೇರಿತನಾಗಿ ಗುಪ್ತ ವಿಷಯಗಳನ್ನಾಡುತ್ತಾನೆ. ಅವನು ಮಾತನಾಡುವ ಮಾತುಗಳನ್ನು ಯಾರೂ ಅರ್ಥಮಾಡಿಕೊಳ್ಳುವುದಿಲ್ಲ.
3 Còn truyền giảng là nói lời Chúa cho người khác nghe, nhằm mục đích gây dựng, khích lệ, và an ủi.
೩ಆದರೆ ಪ್ರವಾದಿಸುವವನಾದರೋ, ಅವನ ಮಾತುಗಳಿಂದ ಭಕ್ತಿವೃದ್ಧಿಯನ್ನೂ, ಪ್ರೋತ್ಸಾಹವನ್ನೂ ಸಂತೈಸುವಿಕೆಯನ್ನೂ ಉಂಟುಮಾಡುವವು.
4 Người nói tiếng lạ gây dựng cho mình, nhưng người giảng lời Chúa gây dựng Hội Thánh.
೪ಅನ್ಯಭಾಷೆಗಳನ್ನಾಡುವವನು ತನಗೆ ತಾನೇ ಆತ್ಮೀಕ ವೃದ್ಧಿಯನ್ನುಂಟುಮಾಡಿಕೊಳ್ಳುತ್ತಾನೆ, ಆದರೆ ಪ್ರವಾದಿಸುವವನು ಸಭೆಗೆ ಭಕ್ತಿವೃದ್ಧಿಯನ್ನುಂಟು ಮಾಡುತ್ತಾನೆ.
5 Tôi muốn mỗi anh chị em đều nói tiếng lạ, nhưng tôi càng mong anh chị em giảng lời Chúa, vì giảng lời Chúa quan trọng hơn nói tiếng lạ. Nói tiếng lạ chỉ gây dựng Hội Thánh khi có người thông dịch.
೫ನೀವೆಲ್ಲರೂ ಅನ್ಯಭಾಷೆಗಳನ್ನಾಡಬೇಕೆಂದು ನಾನು ಅಪೇಕ್ಷಿಸಿದರೂ, ಅದಕ್ಕಿಂತಲೂ ನೀವು ಪ್ರವಾದಿಸಬೇಕೆಂಬುದೆ ನನ್ನಿಷ್ಟವಾಗಿದೆ. ಅನ್ಯಭಾಷೆಗಳನ್ನಾಡುವವನು ಸಭೆಯು ಅಭಿವೃದ್ಧಿಯಾಗುವುದಕ್ಕಾಗಿ ಆ ಅನ್ಯಭಾಷೆಯ ಅರ್ಥವನ್ನು ವಿವೇಚಿಸಿ ಹೇಳದೆ ಹೋದರೆ ಅವನಿಗಿಂತ ಪ್ರವಾದಿಸುವವನು ಶ್ರೇಷ್ಠನು.
6 Thưa anh chị em, nếu tôi đến thăm anh chị em và nói thứ tiếng anh chị em không hiểu, thì ích lợi gì cho anh chị em? Anh chị em chỉ được gây dựng khi tôi nói cho anh chị em hiểu chân lý Chúa mặc khải, hoặc tri thức tâm linh, hoặc khi tôi công bố, giảng dạy lời Chúa.
೬ಆದರೆ ಸಹೋದರರೇ, ನಾನು ನಿಮ್ಮ ಬಳಿಗೆ ಬಂದು ದೇವರು ತಿಳಿಸಿದ್ದನ್ನು ಪ್ರಕಟಿಸದೆ, ಜ್ಞಾನವಾಕ್ಯಗಳನ್ನಾಡದೆ, ಪ್ರವಾದನೆಯನ್ನು ಹೇಳದೆ, ಉಪದೇಶಮಾಡದೆ, ಅನ್ಯಭಾಷೆಗಳನ್ನು ಮಾತ್ರ ಮಾತನಾಡುವವನಾಗಿದ್ದರೆ ನನ್ನಿಂದ ನಿಮಗೇನು ಪ್ರಯೋಜನವಾದೀತು?
7 Cũng như các nhạc khí, ống tiêu, hay đàn hạc, nếu phát ra âm thanh hỗn loạn, làm sao biết đang tấu bản nhạc gì?
೭ಕೊಳಲು, ವೀಣೆ ಮೊದಲಾದ ನಿರ್ಜೀವವಾದ್ಯಗಳು ನಾದಗಳಲ್ಲಿ ಯಾವ ವ್ಯತ್ಯಾಸವನ್ನೂ ತೋರಿಸದಿದ್ದರೆ; ನುಡಿಸಿದ ವಾದ್ಯ ಇಂಥದ್ದೇ ಎಂದು ಹೇಗೆ ತಿಳಿಯುವುದು?
8 Nếu kèn trận thổi những tiếng lạc lõng, rời rạc, ai hiểu được mà xông pha chiến trận?
೮ತುತ್ತೂರಿಯು ಅಸ್ಪಷ್ಟ ಶಬ್ದವನ್ನು ಮೊಳಗಿಸಿದರೆ ಯಾರು ಯುದ್ಧಕ್ಕೆ ಸಿದ್ಧಮಾಡಿಕೊಳ್ಳುವರು?
9 Anh chị em cũng thế, nếu miệng lưỡi phát âm không rõ ràng, ai biết anh chị em muốn nói gì? Đó chỉ là lời nói vô nghĩa.
೯ಹಾಗೆಯೇ ನೀವೂ ಸಹ ಸ್ಪಷ್ಟವಾದ ಭಾಷೆಯನ್ನು ನಿಮ್ಮ ಬಾಯಿಂದ ಮಾತನಾಡದೆ ಹೋದರೆ, ನಿಮ್ಮ ಮಾತಿನ ಅರ್ಥವನ್ನು ಹೇಗೆ ತಿಳಿದುಕೊಳ್ಳಲು ಸಾಧ್ಯ? ನೀವು ಗಾಳಿಯ ಸಂಗಡ ಮಾತನಾಡಿದ ಹಾಗಿರುವುದಷ್ಟೆ.
10 Thế giới có nhiều ngôn ngữ, mỗi ngôn ngữ đều có ý nghĩa.
೧೦ಲೋಕದಲ್ಲಿ ಅನೇಕ ಭಾಷೆಗಳಿವೆ, ಅವುಗಳಲ್ಲಿ ಒಂದಾದರೂ ಅರ್ಥರಹಿತವಾದವುಗಳಿಲ್ಲ.
11 Khi tôi không hiểu ngôn ngữ nào, người nói ngôn ngữ đó xem tôi là người ngoại quốc, và tôi cũng xem họ là người ngoại quốc.
೧೧ಭಾಷೆಯ ಅರ್ಥವು ನನಗೆ ತಿಳಿಯದಿದ್ದರೆ ಮಾತನಾಡುವವನಿಗೆ ನಾನು ಪರದೇಶದವನಂತಿರುವೆನು; ಮಾತನಾಡುವವನು ನನಗೆ ಪರದೇಶಿಯವನಂತಿರುತ್ತಾನೆ.
12 Anh chị em đã ao ước nhận lãnh ân tứ Chúa Thánh Linh, hãy cầu xin ân tứ tốt nhất để gây dựng Hội Thánh.
೧೨ಹಾಗೆಯೇ ನೀವು ಆತ್ಮೀಕವಾದ ವರಗಳಿಗಾಗಿ ಅತ್ಯಾಸಕ್ತಿಯುಳ್ಳವರಾಗಿರುವುದರಿಂದ ಸಭೆಗೆ ಹೆಚ್ಚಿನ ಅಭಿವೃದ್ಧಿ ಉಂಟಾಗುವ ಹಾಗೆ ತವಕಪಡಿರಿ.
13 Người nào nói tiếng lạ cũng cầu xin Chúa cho mình có khả năng thông dịch.
೧೩ಆದ್ದರಿಂದ ಅನ್ಯಭಾಷೆಯನ್ನಾಡುವವನು ತನಗೆ ಅದರ ಅರ್ಥವನ್ನು ವಿವೇಚಿಸಿ ಹೇಳುವ ವರಕ್ಕಾಗಿ ದೇವರನ್ನು ಪ್ರಾರ್ಥಿಸಲಿ.
14 Nếu tôi cầu nguyện bằng tiếng lạ, tâm linh tôi cầu nguyện, nhưng trí óc tôi không hiểu.
೧೪ಯಾಕೆಂದರೆ ನಾನು ಅನ್ಯಭಾಷೆಯಲ್ಲಿ ದೇವರನ್ನು ಪ್ರಾರ್ಥಿಸಿದರೆ ನನ್ನಾತ್ಮವು ಪ್ರಾರ್ಥಿಸುತ್ತಿರುತ್ತದೆ. ಆದರೆ ನನ್ನ ಬುದ್ಧಿಯು ನಿಷ್ಫಲವಾಗಿರುವುದು.
15 Vậy tôi phải làm gì? Tôi cầu nguyện bằng cả tâm linh lẫn trí óc, ca ngợi Chúa bằng cả tâm linh lẫn trí óc.
೧೫ಆದ್ದರಿಂದ ನಾನಾದರೋ ಆತ್ಮನಿಂದಲೂ ಪ್ರಾರ್ಥಿಸುವೆನು, ಬುದ್ಧಿಯಿಂದಲೂ ಪ್ರಾರ್ಥಿಸುವೆನು; ಆತ್ಮನಿಂದ ಹಾಡುವೆನು, ಬುದ್ಧಿಯಿಂದಲೂ ಹಾಡುವೆನು.
16 Nếu anh chị em tạ ơn Chúa bằng tâm linh, người khác không thể hiểu, làm sao họ đồng lòng hiệp ý với anh chị em?
೧೬ನೀನು ಆತ್ಮನಿಂದ ಮಾತ್ರ ದೇವರ ಸ್ತೋತ್ರ ಮಾಡಿದರೆ ನೀನು ಹೇಳಿದ್ದು ತಿಳಿಯದೆ ಇರುವ ಇನ್ನೊಬ್ಬನು ನೀನು ಮಾಡುವ ಕೃತಜ್ಞತಾಸ್ತುತಿಗೆ ಅವನು “ಆಮೆನ್” ಎಂದು ಹೇಗೆ ಹೇಳಬಲ್ಲನು? ನೀನು ಮಾತನಾಡಿದು ಅವನಿಗೆ ತಿಳಿಯುವುದಿಲ್ಲವಲ್ಲಾ?
17 Lời cảm tạ của anh chị em vẫn tốt, nhưng người khác không được gây dựng.
೧೭ನೀನು ಎಷ್ಟು ಚೆನ್ನಾಗಿ ಕೃತಜ್ಞತಾಸ್ತುತಿ ಮಾಡಿದರೂ, ಆದರಿಂದ ಬೇರೊಬ್ಬನು ಭಕ್ತಿವೃದ್ಧಿಹೊಂದುವುದಿಲ್ಲ.
18 Tôi cảm tạ Đức Chúa Trời vì tôi nói được nhiều tiếng lạ hơn anh chị em.
೧೮ನಾನು ನಿಮ್ಮೆಲ್ಲರಿಗಿಂತಲೂ ಹೆಚ್ಚಾಗಿ ಅನ್ಯಭಾಷೆಗಳನ್ನಾಡುತ್ತೇನೆಂದು ದೇವರನ್ನು ಕೊಂಡಾಡುತ್ತೇನೆ.
19 Nhưng giữa Hội Thánh, thà tôi nói năm ba lời cho người khác hiểu để hướng dẫn họ còn hơn nói hàng vạn lời bằng ngôn ngữ không ai hiểu.
೧೯ಆದರೂ ಸಭೆಯಲ್ಲಿ ಅನ್ಯಭಾಷೆಯಿಂದ ಹತ್ತು ಸಾವಿರ ಮಾತುಗಳನ್ನಾಡುವುದಕ್ಕಿಂತ, ನನ್ನ ಬುದ್ಧಿಯಿಂದ ಐದೇ ಮಾತುಗಳನ್ನಾಡಿ ಇತರರಿಗೆ ಉಪದೇಶಮಾಡುವುದು ನನಗೆ ಉತ್ತಮವೆನಿಸುತ್ತದೆ.
20 Thưa anh chị em, đừng hiểu biết hời hợt như trẻ con. Về việc xảo trá, nên ngây thơ như trẻ con, nhưng về việc hiểu biết, nên chín chắn như người lớn.
೨೦ಸಹೋದರರೇ, ಬಾಲಕರಂತೆ ಆಲೋಚಿಸಬೇಡಿರಿ; ಕೆಟ್ಟತನದ ವಿಷಯದಲ್ಲಿ ಶಿಶುಗಳಂತಿರಿ; ಬುದ್ಧಿಯ ವಿಷಯದಲ್ಲಿ ಪ್ರಾಯಸ್ಥರಾಗಿರಿ.
21 Thánh Kinh chép: “Chúa Hằng Hữu phán: Ta sẽ dùng người nước ngoài và qua môi miệng của họ nói tiếng lạ với dân này. Nhưng họ không lắng nghe Ta.”
೨೧“ಅನ್ಯಭಾಷೆಯವರ ಮೂಲಕವಾಗಿಯೂ ಅನ್ಯದೇಶಸ್ಥರ ಬಾಯಿಂದಲೂ ನಾನು ಈ ಜನರ ಸಂಗಡ ಮಾತನಾಡುವೆನು; ಆದರೂ ಅವರು ನನ್ನ ಮಾತಿಗೆ ಕಿವಿಗೊಡುವುದಿಲ್ಲವೆಂದು ಕರ್ತನು ಹೇಳುತ್ತಾನೆಂಬುದಾಗಿ” ಧರ್ಮಶಾಸ್ತ್ರದಲ್ಲಿ ಬರೆದಿದೆ.
22 Như thế, ngoại ngữ là dấu hiệu cho người vô tín biết quyền năng của Chúa, không phải cho tín hữu. Còn công bố lời Chúa là để giúp ích tín hữu, không phải cho người vô tín.
೨೨ಆದ್ದರಿಂದ ಅನ್ಯಭಾಷೆಗಳನ್ನಾಡುವುದು ಯೇಸುವನ್ನು ನಂಬದವರಿಗೆ ಸೂಚನೆಯಾಗಿದೆಯೇ ಹೊರತು ಯೇಸುವನ್ನು ನಂಬುವವರಿಗೆ ಸೂಚನೆಯಲ್ಲವೆಂದು ನಾವು ತಿಳಿದುಕೊಳ್ಳಬೇಕು. ಆದರೆ ಪ್ರವಾದನೆಯು ಯೇಸುವನ್ನು ನಂಬದವರಿಗಾಗಿಯಲ್ಲ ನಂಬುವವರಿಗಾಗಿಯೇ ಇದೆ.
23 Nếu Hội Thánh nhóm họp, tất cả đều nói ngoại ngữ, và nếu có người không hiểu hoặc người vô tín bước vào, họ sẽ tưởng anh chị em điên loạn.
೨೩ಹೀಗಿರುವಲ್ಲಿ ಸಭೆಯೆಲ್ಲಾ ಒಂದೇ ಸ್ಥಳದಲ್ಲಿ ಸೇರಿಬಂದಾಗ ಎಲ್ಲರೂ ಅನ್ಯಭಾಷೆಗಳನ್ನಾಡಿದರೆ ಈ ಭಾಷೆಯನ್ನು ತಿಳಿಯದ ಬೇರೆಯವರು ಅಥವಾ ಕ್ರಿಸ್ತ ನಂಬಿಕೆಯಿಲ್ಲದವರು ಒಳಗೆ ಬಂದು ನೋಡಿ, ನಿಮಗೆ ಹುಚ್ಚು ಹಿಡಿದಿದೆ ಎಂದು ಹೇಳುವುದಿಲ್ಲವೋ?
24 Nhưng nếu tất cả đều truyền giảng lời Chúa, gặp lúc người vô tín hay người chưa hiểu Phúc Âm bước vào, những lời ấy sẽ thuyết phục, cáo trách họ,
೨೪ಆದರೆ ನೀವೆಲ್ಲರು ಪ್ರವಾದಿಸುತ್ತಿರಲು ಕ್ರಿಸ್ತ ನಂಬಿಕೆಯಿಲ್ಲದವನಾಗಲಿ, ಅಪರಿಚಿತನಾಗಲಿ ಒಳಗೆ ಬಂದರೆ ಅವನು ಎಲ್ಲರ ಮಾತನ್ನು ಕೇಳಿ ತಾನು ಪಾಪಿಯೆಂಬ ಅರುಹನ್ನು ಹೊಂದುವನು, ಎಲ್ಲರ ಮಾತಿನಿಂದ ಪರಿಶೋಧಿತನಾಗುವನು,
25 và những điều bí ẩn trong lòng bị phơi bày. Họ sẽ cúi đầu xuống thờ phượng Đức Chúa Trời và nhìn nhận Đức Chúa Trời thật đang sống giữa anh chị em.
೨೫ಅವನ ಹೃದಯದ ರಹಸ್ಯಗಳು ಬಯಲಾಗುವವು; ಅವನು ಅಡ್ಡಬಿದ್ದು ದೇವರನ್ನು ಆರಾಧಿಸಿ, ದೇವರು ನಿಜವಾಗಿ ನಿಮ್ಮಲ್ಲಿದ್ದಾನೆಂಬುದನ್ನು ಘೋಷಿಸುವನು.
26 Vì thế, khi anh chị em nhóm họp, người hát thánh ca, người giảng dạy, người tỏ bày mặc khải, người nói ngoại ngữ, người thông dịch. Nhưng tất cả đều nhằm mục đích gây dựng Hội Thánh.
೨೬ಹಾಗಾದರೇನು, ಸಹೋದರರೇ? ನೀವು ಸಭೆಯಲ್ಲಿ ಸೇರಿಬರುವಾಗ ಒಬ್ಬನು ಹಾಡುವುದೂ, ಒಬ್ಬನು ಉಪದೇಶಮಾಡುವುದೂ, ಒಬ್ಬನು ತನಗೆ ಪ್ರಕಟವಾದದ್ದನ್ನು ತಿಳಿಸುವುದೂ, ಇನ್ನೂ ಒಬ್ಬನು ಅನ್ಯಭಾಷೆಯನ್ನಾಡುವುದೂ, ಒಬ್ಬನು ಅದರ ಅರ್ಥವನ್ನು ಹೇಳುವುದುಂಟು. ನೀವು ಏನು ಮಾಡಿದರೂ ಸಭೆಯ ಭಕ್ತಿವೃದ್ಧಿಗಾಗಿಯೇ ಮಾಡಿರಿ.
27 Về việc nói ngoại ngữ, mỗi lần họp chỉ cho hai hoặc ba người nói: phải nói lần lượt và có người thông dịch.
೨೭ಅನ್ಯಭಾಷೆಗಳನ್ನಾಡುವುದಾದರೆ ಇಬ್ಬರು ಅಥವಾ ಅವಶ್ಯವಿದ್ದರೆ ಮೂವರಿಗಿಂತ ಹೆಚ್ಚಿಲ್ಲದೆ ಒಬ್ಬೊಬ್ಬರಾಗಿ ಮಾತನಾಡಬೇಕು;
28 Nếu không ai thông dịch, người được ơn nói ngoại ngữ phải ngồi yên lặng trong Hội Thánh, nói thầm với mình và với Đức Chúa Trời.
೨೮ಮತ್ತು ಒಬ್ಬನು ಅದರ ಅರ್ಥವನ್ನು ಹೇಳಬೇಕು. ಅರ್ಥವನ್ನು ಹೇಳುವವನಿಲ್ಲದಿದ್ದರೆ ಅನ್ಯಭಾಷೆಗಳನ್ನಾಡುವವನು ಸಭೆಯಲ್ಲಿ ಸುಮ್ಮನಿರಲಿ; ತನ್ನೊಂದಿಗೂ ಮತ್ತು ದೇವರೊಂದಿಗೂ ಮಾತನಾಡಿಕೊಳ್ಳಲಿ.
29 Cũng nên để hai hoặc ba người nói tiên tri, còn các tín hữu khác ngồi nghe.
೨೯ಇಬ್ಬರು ಮೂವರು ಪ್ರವಾದಿಗಳು ಮಾತನಾಡಲಿ, ಮಿಕ್ಕಾದವರು ವಿವೇಚನೆಯಿಂದ ಕೇಳಲಿ.
30 Trong số người nghe, nếu ai được mặc khải, người giảng giải nên nhường lời.
೩೦ಕುಳಿತಿರುವ ಮತ್ತೊಬ್ಬನಿಗೆ ಪ್ರಕಟನೆ ಉಂಟಾದರೆ ಮೊದಲಿನವನು ಸುಮ್ಮನಾಗಲಿ
31 Vì tất cả anh chị em có thể lần lượt giảng giải lời Chúa để ai nấy đều học hỏi và được khích lệ.
೩೧ನೀವೆಲ್ಲರೂ ಒಬ್ಬೊಬ್ಬರಾಗಿ ಪ್ರವಾದಿಸಿದರೆ ಎಲ್ಲರೂ ಕಲಿತುಕೊಳ್ಳುವರು, ಎಲ್ಲರೂ ಪ್ರೋತ್ಸಾಹ ಹೊಂದುವರು.
32 Người nói tiên tri phải làm chủ tâm linh của mình và thay phiên nhau.
೩೨ಪ್ರವಾದಿಗಳ ಆತ್ಮಗಳು ಪ್ರವಾದಿಗಳ ಸ್ವಾಧೀನದಲ್ಲಿರುತ್ತವೆ.
33 Vì Đức Chúa Trời là Chúa bình an, Ngài không ưa cảnh hỗn loạn. Hội Thánh khắp nơi đều giữ trật tự khi hội họp,
೩೩ದೇವರು ಸಮಾಧಾನಕ್ಕೆ ಕಾರಣನೇ ಹೊರತು ಗಲಿಬಿಲಿಗೆ ಕಾರಣನಲ್ಲ.
34 phụ nữ phải yên lặng, không được lên tiếng thảo luận, phải thuận phục như luật pháp đòi hỏi.
೩೪ದೇವಜನರ ಎಲ್ಲಾ ಸಭೆಗಳಲ್ಲಿರುವ ಪ್ರಕಾರ ಸ್ತ್ರೀಯರು ಸಭೆಯ ಕೂಟಗಳಲ್ಲಿ ಮೌನವಾಗಿರಬೇಕು; ಮಾತನಾಡಲು ಅವರಿಗೆ ಅವಕಾಶವಿಲ್ಲ; ಅವರು ಅಧೀನರಾಗಿರಬೇಕು; ಧರ್ಮಶಾಸ್ತ್ರದಲ್ಲಿಯೂ ಹೀಗೆ ಹೇಳಿದೆಯಲ್ಲಾ.
35 Nếu phụ nữ muốn tìm hiểu điều gì, hãy hỏi chồng lúc ở nhà, không được phát biểu ý kiến giữa Hội Thánh.
೩೫ಅವರು ಏನಾದರೂ ತಿಳಿದು ಕೊಳ್ಳುವುದಕ್ಕೆ ಅಪೇಕ್ಷಿಸಿದರೆ ಮನೆಯಲ್ಲಿ ತಮ್ಮ ಗಂಡಂದಿರನ್ನು ಕೇಳಿಕೊಳ್ಳಲಿ. ಸ್ತ್ರೀಯರು ಸಭೆಯಲ್ಲಿ ಮಾತನಾಡುವುದು ಅಪಮಾನಕರವಾದದ್ದು.
36 Anh chị em tưởng Đạo Chúa phát xuất từ Cô-rinh-tô, và chỉ truyền bá tại Cô-rinh-tô thôi sao?
೩೬ದೇವರ ವಾಕ್ಯವು ನಿಮ್ಮಿಂದಲೇ ಹೊರಟಿತೋ? ನಿಮಗೆ ಮಾತ್ರವೇ ಬಂದಿತೋ?
37 Người nào cho mình được ơn nói tiên tri hoặc ân tứ khác của Chúa Thánh Linh, hẳn biết những điều tôi viết cho anh chị em là mệnh lệnh của Chúa.
೩೭ಯಾವನಾದರೂ ತನ್ನನ್ನು ಪ್ರವಾದಿಯೆಂದಾಗಲಿ ಆತ್ಮೀಕನೆಂದಾಗಲಿ ಭಾವಿಸಿಕೊಂಡರೆ ನಾನು ನಿಮಗೆ ಬರೆದಿರುವುದೆಲ್ಲಾ ಕರ್ತನ ಆಜ್ಞೆ ಎಂದು ಚೆನ್ನಾಗಿ ತಿಳಿದುಕೊಳ್ಳಲಿ.
38 Ai không nhìn nhận như thế, anh chị em đừng nhìn nhận họ.
೩೮ಯಾವನಾದರೂ ತನಗೆ ಇದು ಗೊತ್ತಿಲ್ಲವೆಂದರೆ ಅವನು ಗುರುತಿಲ್ಲದವನಂತೆ ಇರಲಿ.
39 Vậy, anh chị em hãy ước ao được ơn nói tiên tri, truyền giảng lời Chúa và đừng ngăn cản việc nói tiếng lạ.
೩೯ಆದಕಾರಣ ನನ್ನ ಸಹೋದರರೇ, ಪ್ರವಾದನಾವರವನ್ನು ಆಸಕ್ತಿಯಿಂದ ಅಪೇಕ್ಷಿಸಿರಿ, ಮತ್ತು ಅನ್ಯಭಾಷೆಗಳನ್ನಾಡುವವರಿಗೆ ಅಡ್ಡಿಮಾಡಬೇಡಿರಿ.
40 Mọi việc phải thực hiện cách thích hợp và trong vòng trật tự.
೪೦ಆದರೆ ಎಲ್ಲವೂ ಯೋಗ್ಯವಾಗಿಯೂ ಹಾಗೂ ಕ್ರಮದಿಂದಲೂ ನಡೆಯಲಿ.