< Тарих-тәзкирә 1 29 >
1 Давут пүткүл җамаәткә сөз қилип мундақ деди: — Худа Өзи таллиған оғлум Сулайман техи яш, бир юмран көчәт, халас, бу қурулуш болса толиму чоң; чүнки бу муқәддәс орда инсан үчүн әмәс, бәлки Пәрвәрдигар Худа үчүн ясилиду.
೧ತರುವಾಯ ಅರಸನಾದ ದಾವೀದನು, “ದೇವರು ನನ್ನ ಮಗನಾದ ಸೊಲೊಮೋನನನ್ನೇ ದೇವಾಲಯ ಕಟ್ಟಲು ಆರಿಸಿಕೊಂಡಿದ್ದಾನೆ. ಆದರೆ ಅವನು ಇನ್ನೂ ಎಳೇ ಪ್ರಾಯದವನು. ಮಾಡತಕ್ಕ ಕೆಲಸವೋ ವಿಶೇಷವಾದದ್ದು. ಕಟ್ಟತಕ್ಕ ಮಂದಿರವು ದೇವರಾದ ಯೆಹೋವನಿಗಾಗಿಯೇ ಹೊರತು ಮನುಷ್ಯನಿಗಾಗಿಯಲ್ಲ.
2 Мән Худайимниң өйи үчүн пүтүн күчүмни чиқирип, алтун билән ясилидиғанлириға алтун, күмүч билән ясилидиғанлириға күмүч, мис билән ясилидиғанлириға мис, төмүр билән ясилидиғанлириға төмүр, яғач билән ясилидиғанлириға яғач тәйярлап қойдум; йәнә ақ һеқиқ, көзлүк яқут, рәңлик таш вә һәр хил есил ташларни, йәнә наһайити көп мәрмәрни жиғип қойдум.
೨ನಾನು ನನ್ನಿಂದಾಗುವಷ್ಟು ಪ್ರಯಾಸಪಟ್ಟು ಬಂಗಾರದ ಕೆಲಸಕ್ಕಾಗಿ ಬೇಕಾಗುವ ಬಂಗಾರ, ಬೆಳ್ಳಿಯ ಕೆಲಸಕ್ಕಾಗಿ ಬೇಕಾಗುವ ಬೆಳ್ಳಿ, ತಾಮ್ರದ ಕೆಲಸಕ್ಕಾಗಿ ಬೇಕಾಗುವ ತಾಮ್ರ, ಕಬ್ಬಿಣದ ಕೆಲಸಕ್ಕಾಗಿ ಬೇಕಾಗುವ ಕಬ್ಬಿಣ, ಮರದ ಕೆಲಸಕ್ಕಾಗಿ ಬೇಕಾಗುವ ಮರ ಇವುಗಳನ್ನೂ, ಗೋಮೇಧಿಕ ರತ್ನ, ಕೆತ್ತುವುದಕ್ಕೆ ಬೇಕಾಗುವ ರತ್ನ, ಕೆಂಪು ಹರಳು, ವಿಚಿತ್ರ ವರ್ಣದ ಕಲ್ಲು, ಎಲ್ಲಾ ತರದ ಮಣಿ, ಚಂದ್ರಕಾಂತಶಿಲೆ ಇವುಗಳನ್ನೂ ನನ್ನ ದೇವರ ಮಂದಿರಕ್ಕೋಸ್ಕರ ರಾಶಿ ರಾಶಿಯಾಗಿ ಸಂಗ್ರಹಿಸಿದ್ದೇನೆ.
3 Мән Худайимниң өйидин сөйүнидиғанлиғим үчүн Худайимниң өйини селишқа тәйярлиған барлиқ нәрсиләрдин башқа, өзүмниң тәәллуқатидин алтун-күмүчләрни Худайимниң өйигә атидим;
೩ನಾನು ಪವಿತ್ರಾಲಯಕ್ಕೆ ಇವುಗಳನ್ನೆಲ್ಲಾ ಸಂಗ್ರಹಿಸಿದ್ದಲ್ಲದೆ ನನ್ನ ದೇವರ ಆಲಯದ ಮೇಲಣ ಅನುರಾಗದಿಂದ ಅದಕ್ಕೊಸ್ಕರ ನನ್ನ ಸ್ವಂತ ಸೊತ್ತಿನಿಂದ
4 йәни өйниң тамлирини қаплаш үчүн Офир алтунидин үч миң талант, сап күмүчтин йәттә миң талант тәқдим қилдим;
೪ಮೂರು ಸಾವಿರ ತಲಾಂತು ಓಫೀರ್ ದೇಶದ ಬಂಗಾರವನ್ನೂ, ಏಳು ಸಾವಿರ ತಲಾಂತು ಚೊಕ್ಕ ಬೆಳ್ಳಿಯನ್ನೂ ಕೊಡುತ್ತೇನೆ. ಈ ಬೆಳ್ಳಿ ಬಂಗಾರದಿಂದ ಆಲಯದ ಗೋಡೆಗಳನ್ನು ಹೊದಿಸಬೇಕು.
5 алтундин ясилидиғанлириға алтун, күмүчтин ясилидиғанлириға күмүч вә һүнәрвәнләрниң қоли билән һәр хил ясилидиғанлириға керәк болғинини тәқдим қилдим. Бүгүн йәнә кимләрниң Пәрвәрдигарға бир немә атиғуси бар?».
೫ಅಕ್ಕಸಾಲಿಗರು ಮಾಡಬಹುದಾದ ಎಲ್ಲಾ ತರದ ಬೆಳ್ಳಿ ಬಂಗಾರದ ಸಾಮಾನುಗಳನ್ನು ಮಾಡಿಸಬೇಕು. ಈ ಹೊತ್ತು ಉದಾರಹಸ್ತದಿಂದ ಯೆಹೋವನಿಗೋಸ್ಕರ ಕಾಣಿಕೆಯನ್ನರ್ಪಿಸುವುದಕ್ಕೆ ಯಾರಿಗೆ ಮನಸ್ಸಿದೆಯೋ ಅವರು ಮುಂದೆ ಬರಲಿ” ಎಂದು ನೆರೆದ ಸಭೆಗೆ ಹೇಳಿದನು.
6 Шуниң билән Исраил қәбилилиридики һәр қайси җәмәт башлири, қәбилә башлиқлири, миң беши, йүз беши вә падишаниң ишлириға мәсъул болған ғоҗидарларму беғишлашқа киришти.
೬ಆಗ ಇಸ್ರಾಯೇಲ್ ಗೋತ್ರಕುಟುಂಬಗಳ ಪ್ರಧಾನರೂ, ಸಹಸ್ರಾಧಿಪತಿಗಳೂ, ಅರಸನ ಕೆಲಸದವರ ಮುಖ್ಯಸ್ಥರೂ, ದೇವಾಲಯದ ಕೆಲಸಕ್ಕೋಸ್ಕರ ಸ್ವ ಇಚ್ಛೆಯಿಂದ
7 Улар Худаниң өйидики ибадәт хизмәтлири үчүн бәш миң талант алтун вә он миң дарик алтун, он миң талант күмүч, он сәккиз миң талант мис вә бир йүз миң талант төмүр тәқдим қилди.
೭ಐದು ಸಾವಿರ ತಲಾಂತು, ಹತ್ತು ಸಾವಿರ ಪವನು ಬಂಗಾರವನ್ನೂ, ಹತ್ತು ಸಾವಿರ ತಲಾಂತು ಬೆಳ್ಳಿಯನ್ನೂ, ಹದಿನೆಂಟು ಸಾವಿರ ತಲಾಂತು ತಾಮ್ರವನ್ನೂ, ಒಂದು ಲಕ್ಷ ತಲಾಂತು ಕಬ್ಬಿಣವನ್ನೂ ಕೊಟ್ಟರು.
8 Яқути барлар яқутни Пәрвәрдигарниң өйиниң ғәзнисигә, йәни Гәршоний Йәһийәлниң қолиға тапшурди.
೮ರತ್ನಗಳನ್ನು ಹೊಂದಿದ್ದವರು ಅವುಗಳನ್ನು ಯೆಹೋವನ ಆಲಯದ ಭಂಡಾರಕ್ಕೋಸ್ಕರ ಗೇರ್ಷೋನ್ಯನಾದ ಯೆಹೀಯೇಲನ ವಶಕ್ಕೆ ಕೊಟ್ಟರು.
9 Халайиқ кишиләрниң мундақ өз ихтиярлиғи билән тәқдим қилғанлиқлиридин хошал болуп кетишти; чүнки улар чин қәлбидин Пәрвәрдигарға тәқдим қилишқан еди. Давутму аламәт хуш болди.
೯ಅವರು ಪೂರ್ಣಮನಸ್ಸಿನಿಂದಲೂ, ಸ್ವ ಇಚ್ಛೆಯಿಂದಲೂ ಯೆಹೋವನಿಗೆ ಕಾಣಿಕೆ ನೀಡಿದ್ದನ್ನು ನೋಡಿ ಜನರೆಲ್ಲರೂ ಸಂತೋಷಪಟ್ಟರು. ಅರಸನಾದ ದಾವೀದನಿಗೂ ಬಹಳ ಸಂತೋಷವಾಯಿತು.
10 Шуңа Давут пүткүл җамаәт алдида Пәрвәрдигарға тәшәккүр-мәдһийә ейтип мундақ деди: — «Аһ Пәрвәрдигар, бовимиз Исраилниң Худаси, Сән әбәдил-әбәткичә һәмдусанаға лайиқсән.
೧೦ಅನಂತರ ದಾವೀದನು ನೆರೆದ ಸಭೆಯ ಮುಂದೆ ಯೆಹೋವನನ್ನು ಸ್ತುತಿಸಿ ಹೇಳಿದ್ದೇನೆಂದರೆ, “ನಮ್ಮ ಪಿತೃವಾದ ಇಸ್ರಾಯೇಲಿನ ದೇವರೇ. ಯೆಹೋವನೇ, ಯುಗಯುಗಾಂತರಗಳಲ್ಲಿ ನಿನಗೆ ಕೊಂಡಾಟವಾಗಲಿ.
11 И Пәрвәрдигар, улуқлуқ, күч-қудрәт, шан-шәрәп, шану-шәвкәт вә һәйвәт Саңа мәнсуптур; асмандики вә йәрдики бар-йоқи Сениңкидур; и Пәрвәрдигар, падишалиқ Сениңкидур, һәммидин үстүн болған идарә қилғучисән.
೧೧ಯೆಹೋವನೇ, ಎಲ್ಲಾ ಮಹಿಮೆ, ವೈಭವ, ಪರಾಕ್ರಮ, ಪ್ರಭಾವ, ಪ್ರತಾಪ, ಪ್ರತಿಭೆ ಎಲ್ಲವೂ ನಿನ್ನವೆ. ಭೂಮ್ಯಾಕಾಶಗಳಲ್ಲಿ ಇರುವದೆಲ್ಲಾ ನಿನ್ನದೇ. ಯೆಹೋವನೇ ರಾಜ್ಯವು ನಿನ್ನದು. ನೀನು ಮಹೋನ್ನತನಾಗಿ ಸರ್ವವನ್ನು ಆಳುವವನಾಗಿರುತ್ತೀ.
12 Дөләт билән иззәт Сениңдинла келиду, Сән һәммигә һөкүмдарсән. Күч билән қудрәт Сениң қолуңда; һәр кимни улуқ вә қудрәтлик қилиш пәқәт қолуңдиндур.
೧೨ಪ್ರಭಾವ ಐಶ್ವರ್ಯಗಳು ನಿನ್ನ ಸನ್ನಿಧಿಯಿಂದ ಬರುತ್ತವೆ. ನೀನು ಸರ್ವಾಧಿಕಾರಿಯು. ಬಲಪರಾಕ್ರಮಗಳು ನಿನ್ನ ಹಸ್ತದಲ್ಲಿರುತ್ತವೆ. ಎಲ್ಲಾ ಮಹಿಮೆಗೂ, ಶಕ್ತಿಗೂ ನೀನೇ ಮೂಲನು.
13 Әнди, аһ Худайимиз, биз Саңа тәшәккүр оқуймиз, шан-шәрәплик намиңға мәдһийә оқуймиз!
೧೩ಆದುದರಿಂದ ನಮ್ಮ ದೇವರೇ ನಾವು ನಿನಗೆ ಕೃತಜ್ಞತಾಸ್ತುತಿಮಾಡುತ್ತಾ, ನಿನ್ನ ಪ್ರಭಾವವುಳ್ಳ ನಾಮವನ್ನು ಕೀರ್ತಿಸುತ್ತೇವೆ.
14 Мана мошундақ өзлүгүмиздин тәқдим қилалайдиған болған мән ким едим, хәлқим немә еди? Чүнки барлиқ нәрсә Сәндин келиду, биз пәқәт Өз қолуңдин кәлгинидин Өзүңгә қайтурдуқ, халас!
೧೪ನಾವು ಸ್ವ ಇಚ್ಛೆಯಿಂದ ನಿನಗೆ ಕಾಣಿಕೆಗಳನ್ನು ಸಮರ್ಪಿಸಲು ನಾನಾಗಲಿ, ನನ್ನ ಪ್ರಜೆಗಳಾಗಲಿ ಸಮರ್ಥರಲ್ಲ. ಸಮಸ್ತವೂ ನಿನ್ನಿಂದಲೇ ಸಾಧ್ಯವಾಯಿತು, ನೀನು ಕೊಟ್ಟದ್ದನ್ನೇ ನಿನಗೆ ಕೊಟ್ಟೆವು.
15 Биз Сениң алдиңда яқа жутлуқлар, барлиқ ата-бовилиримизға охшаш мусапирмиз, халас; йәр йүзидики күнлиримиз гоя бир сайә, үмүтсиз өткүзүлиду.
೧೫ನಾವು ನಿನ್ನ ದೃಷ್ಟಿಯಲ್ಲಿ ಪರದೇಶಿಗಳೂ, ನಮ್ಮ ಪೂರ್ವಿಕರೆಲ್ಲರಂತೆ ಪ್ರವಾಸಿಗಳೂ ಆಗಿದ್ದೇವೆ. ನಮ್ಮ ಆಯುಷ್ಕಾಲವು ನೆರಳಿನಂತಿದೆ. ನಮಗೆ ಯಾವ ನಿರೀಕ್ಷೆಯೂ ಇಲ್ಲ.
16 И Худайимиз Пәрвәрдигар, биз Сениң намиңға атап өй селишқа тәйярлап жиққан бу байлиқ-дунияниң һәммиси Сениң қолуңдин кәлгән, әсли Сениңкидур.
೧೬ನಮ್ಮ ದೇವರಾದ ಯೆಹೋವನೇ, ನಿನ್ನ ಪರಿಶುದ್ಧ ನಾಮಕ್ಕೋಸ್ಕರ ಆಲಯ ಕಟ್ಟಿಸಬೇಕೆಂದು ಸಂಗ್ರಹಿಸಿಟ್ಟಿರುವ ಈ ಎಲ್ಲಾ ವಸ್ತುಗಳು ನಿನ್ನಿಂದಲೇ ನಮಗೆ ದೊರಕಿದವು. ಇವೆಲ್ಲಾ ನಿನ್ನವೇ.
17 И Худайим, шуни билимәнки, Сән инсанниң қәлбини синап, дуруслуқтин хурсән болисән; мән болсам дурус қәлбимдин буларни ихтиярән тәқдим қилдим; вә бу йәрдә һазир турған хәлқиңниңму Саңа тәқдим қилғинини хошал-хурамлиқ билән көрдүм.
೧೭ನನ್ನ ದೇವರೇ, ನೀನು ಹೃದಯವನ್ನು ಶೋಧಿಸುವವನೂ, ಯಥಾರ್ಥಚಿತ್ತರನ್ನು ಮೆಚ್ಚುವವನೂ ಆಗಿದ್ದಿ ಎಂಬುದನ್ನು ಬಲ್ಲೆನು. ನಾನಂತೂ ಯಥಾರ್ಥಮನಸ್ಸಿನಿಂದಲೂ, ಸ್ವ ಇಚ್ಛೆಯಿಂದಲೂ ಇದನ್ನೆಲ್ಲಾ ಕೊಟ್ಟಿದ್ದೇನೆ. ಇಲ್ಲಿ ಕೂಡಿರುವ ನಿನ್ನ ಪ್ರಜೆಗಳೂ ಸ್ವ ಇಚ್ಛೆಯಿಂದಲೇ ಕಾಣಿಕೆಯನ್ನು ಅರ್ಪಿಸಿದ್ದಾರೆ ಎಂದು ನೋಡಿ ಸಂತೋಷಿಸುತ್ತೇನೆ.
18 И Пәрвәрдигар, ата-бовилиримиз болған Ибраһим, Исһақ вә Исраилниң Худаси, Өз хәлқиңниң көңлидики бундақ ой-нийәтни мәңгү мустәһкәм қилғайсән, көңлини Өзүңгә тартқузғайсән!
೧೮ನಮ್ಮ ಪೂರ್ವಿಕರಾದ ಅಬ್ರಹಾಮ್, ಇಸಾಕ್ ಮತ್ತು ಇಸ್ರಾಯೇಲರ ದೇವರೇ, ಯೆಹೋವನೇ, ನಿನ್ನ ಪ್ರಜೆಗಳಲ್ಲಿ ಇಂಥಾ ಮನಸ್ಸು ಯಾವಾಗಲೂ ಇರುವಂತೆ ಮಾಡು. ನಿನ್ನಲ್ಲಿ ಭಯಭಕ್ತಿ ಉಳ್ಳವರಾಗಿರುವುದಕ್ಕೆ ಅವರಿಗೆ ಸ್ಥಿರಚಿತ್ತವನ್ನು ಅನುಗ್ರಹಿಸು.
19 Оғлум Сулайманға Сениң әмирлириң, агаһ-гувалиқлириң вә бәлгүлимилириңни тутуп, һәммини ада қилип, мән һазирлап қойғанлиримни ишлитип ордини ясашқа дурус бир қәлб бәргәйсән».
೧೯ನನ್ನ ಮಗನಾದ ಸೊಲೊಮೋನನು ನಿನ್ನ ಆಜ್ಞಾವಿಧಿಗಳನ್ನು ಕೈಕೊಳ್ಳುತ್ತಿರುವಂತೆಯೂ, ನಾನು ಯಾವ ಮಂದಿರಕ್ಕೋಸ್ಕರ ಇಷ್ಟನ್ನೆಲ್ಲಾ ಸಿದ್ಧಪಡಿಸಿರುತ್ತೇನೋ ಆ ನಿನ್ನ ಮಂದಿರವನ್ನು ಅವನು ಯಥಾರ್ಥಮನಸ್ಸಿನಿಂದ ಕಟ್ಟಿಸಿ ತೀರಿಸುವಂತೆಯೂ ದಯಪಾಲಿಸು” ಎಂದು ಪ್ರಾರ್ಥಿಸಿದನು.
20 Давут пүтүн җамаәткә: «Силәр Худайиңлар болған Пәрвәрдигарға тәшәккүр-һәмдусана оқуп мәдһийиләңлар!» девиди, пүтүн җамаәт ата-бовилириниң Худаси болған Пәрвәрдигарға тәшәккүр-мәдһийә оқуп сәҗдә қилди; улар Пәрвәрдигар һәм падиша алдида баш урди.
೨೦ತರುವಾಯ ದಾವೀದನು ನೆರೆದ ಸಭೆಯವರಿಗೆಲ್ಲಾ, “ನಿಮ್ಮ ದೇವರಾದ ಯೆಹೋವನನ್ನು ಸ್ತುತಿಸಿರಿ” ಎಂದು ಹೇಳಲು ಸಮೂಹದವರೆಲ್ಲರೂ ತಮ್ಮ ಪೂರ್ವಿಕರ ದೇವರಾದ ಯೆಹೋವನನ್ನು ಸ್ತುತಿಸುತ್ತಾ ತಲೆಬಾಗಿ ದೇವರಿಗೂ ಮತ್ತು ಅರಸನಿಗೂ ನಮಸ್ಕರಿಸಿದರು.
21 Әтиси улар Пәрвәрдигарға атап қурбанлиқлар вә көйдүрмә қурбанлиқларни кәлтүрди; шу күни улар миң буқа, миң қочқар, миң қозини шарап һәдийәлири билән қошуп тәқдим қилди, шундақла йәнә пүтүн Исраил үчүн нурғун қурбанлиқларни тәқдим қилди.
೨೧ಮರುದಿನ ಅವರು ಯೆಹೋವನಿಗೆ ಯಜ್ಞಗಳನ್ನೂ, ಸರ್ವಾಂಗಹೋಮಗಳನ್ನೂ ಸಮರ್ಪಿಸಿದರು. ಅವರು ಆ ದಿನದ ಯಜ್ಞಕ್ಕಾಗಿ ಸಾವಿರ ಹೋರಿಗಳನ್ನೂ, ಸಾವಿರ ಟಗರುಗಳನ್ನೂ, ಸಾವಿರ ಕುರಿಮರಿಗಳನ್ನೂ ವಧಿಸಿದರು. ಇವುಗಳೊಡನೆ ಅರ್ಪಿಸತಕ್ಕ ಪಾನದ್ರವ್ಯಗಳನ್ನೂ ಇಸ್ರಾಯೇಲರೆಲ್ಲರಿಗೆ ಸಾಕಾಗುವಷ್ಟು ಸಮಾಧಾನಯಜ್ಞಗಳನ್ನೂ ಸಮರ್ಪಿಸಿ, ಯೆಹೋವನ ಸನ್ನಿಧಿಯಲ್ಲಿ ಮಹಾ ಸಂತೋಷದಿಂದ ಅನ್ನಪಾನಗಳನ್ನು ತೆಗೆದುಕೊಂಡರು.
22 Улар шу күни Пәрвәрдигарниң алдида аламәт хошал болуп ғизаланди. Улар Давутниң оғли Сулайманни иккинчи қетим падиша тикләш мурасими өткүзди; уни Пәрвәрдигарниң алдида шаһ болушқа, Задокни каһин болушқа мәсиһ қилди.
೨೨ಜನರು ದಾವೀದನ ಮಗನಾದ ಸೊಲೊಮೋನನನ್ನು ಪುನಃ ಅರಸನನ್ನಾಗಿ ಆರಿಸಿಕೊಂಡು ಅವನನ್ನು ರಾಜನನ್ನಾಗಿಸಿವುದಕ್ಕೂ, ಚಾದೋಕನನ್ನು ಯಾಜಕನಾಗುವುದಕ್ಕೂ ಅಭಿಷೇಕಿಸಿ ಯೆಹೋವನಿಗೋಸ್ಕರ ಪ್ರತಿಷ್ಠಿಸಿದರು.
23 Шуниңдин кейин Сулайман Пәрвәрдигарға тәвә тәхткә олтирип, атиси Давутниң орниға падиша болди вә интайин раваҗ тапти; пүткүл Исраил хәлқи униңға итаәт қилди.
೨೩ಅಂದಿನಿಂದ ಸೊಲೊಮೋನನು ತನ್ನ ತಂದೆಯಾದ ದಾವೀದನಿಗೆ ಬದಲು ಅರಸನಾಗಿ ಯೆಹೋವನ ಸಿಂಹಾಸನದಲ್ಲಿ ಕುಳಿತುಕೊಂಡು ವೃದ್ಧಿಯಾಗುತ್ತಾ ಬಂದನು. ಅರಸನಾದ ಸೊಲೊಮೋನನಿಗೆ ಇಸ್ರಾಯೇಲರೆಲ್ಲರೂ ವಿಧೇಯರಾಗಿ ನಡೆಯುವವರಾದರು.
24 Барлиқ әмәлдарлар, палванлар вә шундақла падиша Давутниң оғуллириниң һәммиси Сулайманға беқинип бойсунди.
೨೪ಎಲ್ಲಾ ಅಧಿಪತಿಗಳೂ ದಂಡಿನವರೂ ಅರಸನಾದ ದಾವೀದನ ಎಲ್ಲಾ ಮಕ್ಕಳೂ ಅವನಿಗೆ ಅಧೀನರಾದರು.
25 Пәрвәрдигар Сулайманни Исраил хәлқи алдида наһайити улуқ қилди; У униңға ата қилған шаһанә һәйвәт шундақ жуқурики, униңдин илгири өткән һәр қандақ Исраил падишалирида һеч болуп баққан әмәс.
೨೫ಯೆಹೋವನು ಇಸ್ರಾಯೇಲರೆಲ್ಲರಿಗೆ ಗೊತ್ತಾಗುವಂತೆ ಸೊಲೊಮೋನನನ್ನು ಅಭಿವೃದ್ಧಿಪಡಿಸಿ ಅವನಿಗಿಂತ ಮೊದಲು ಇಸ್ರಾಯೇಲರನ್ನು ಆಳಿದ ಎಲ್ಲಾ ಅರಸರ ವೈಭವಕ್ಕಿಂತಲೂ ಹೆಚ್ಚಿನ ವೈಭವವನ್ನು ಅವನಿಗೆ ಅನುಗ್ರಹಿಸಿದನು.
26 Йәссәниң оғли Давут пүтүн Исраилға шундақ падиша болған еди.
೨೬ಹೀಗೆ ಇಷಯನ ಮಗನಾದ ದಾವೀದನು ಇಸ್ರಾಯೇಲರೆಲ್ಲರ ಅರಸನಾಗಿ ಆಳ್ವಿಕೆ ಮಾಡಿದನು.
27 Униң Исраилға һөкүмранлиқ қилған вақти җәмий қириқ жил болди; у Һебронда йәттә жил, Йерусалимда оттуз үч жил сәлтәнәт қилди.
೨೭ಅವನು ಹೆಬ್ರೋನಿನಲ್ಲಿ ಏಳು ವರ್ಷವೂ, ಯೆರೂಸಲೇಮಿನಲ್ಲಿ ಮೂವತ್ತಮೂರು ವರ್ಷವೂ ಒಟ್ಟಿಗೆ ನಲ್ವತ್ತು ವರ್ಷ ಆಳಿದನು.
28 У узун өмүр, дөләт-байлиқ вә иззәт-һөрмәт көрүп, хелә көп яшап, аләмдин өтти; орниға униң оғли Сулайман падиша болди.
೨೮ಅವನು ಐಶ್ವರ್ಯ, ಮಾನ, ದೀರ್ಘಾಯುಷ್ಯ ಇವುಗಳನ್ನು ಅನುಭವಿಸಿದ ನಂತರ ತುಂಬಾ ವೃದ್ಧನಾಗಿ ಮರಣ ಹೊಂದಿದನು. ಅವನಿಗೆ ಬದಲಾಗಿ ಅವನ ಮಗನಾದ ಸೊಲೊಮೋನನು ಅರಸನಾದನು.
29 Падиша Давутниң барлиқ ишлири, баштин ахириғичә мана алдин көргүчи Самуилниң хатирилири, Натан пәйғәмбәрниң хатирилири вә алдин көргүчи Гадниң хатирилиридә пүтүлгәндур.
೨೯ದಾವೀದನ ಪೂರ್ವೋತ್ತರಚರಿತ್ರೆ ಅವನ ಆಳ್ವಿಕೆ, ಪರಾಕ್ರಮ ಅವನಿಗೂ ಇಸ್ರಾಯೇಲರಿಗೂ, ಸುತ್ತಣ ರಾಜ್ಯಗಳಿಗೂ ಸಂಭವಿಸಿದ ಸುಖದುಃಖ ಇವುಗಳ ವೃತ್ತಾಂತ.
30 Униң сәлтәнити, көрсәткән күч-қуввити, шундақла униң, Исраил вә һәр қайси дөләт-мәмликәтләрниң бешидин өткән вақиәләрму шу хатириләрдә пүтүлгәндур.
೩೦ದೇವದರ್ಶಿಯಾದ ಸಮುವೇಲ, ಪ್ರವಾದಿಯಾದ ನಾತಾನ, ದೇವದರ್ಶಿಯಾದ ಗಾದ ಇವರ ಚರಿತ್ರೆಗಳಲ್ಲಿಯೂ ಬರೆದಿರುತ್ತದೆ.