< Рут 4 >

1 А Бо́аз прийшов до брами, та й сів там. Аж ось проходить родич, про якого говорив був Боаз. І він сказав йому́: „Зайди сюди, послухай, і сядь отут!“І той зайшов і сів.
ಬೋವಜನು ಊರಬಾಗಿಲಿನ ಬಳಿಗೆ ಹೋಗಿ ಅಲ್ಲಿ ಕುಳಿತುಕೊಂಡನು. ತಾನು ಹೇಳಿದ್ದ ಸಮೀಪಬಂಧುವು ಆ ಮಾರ್ಗವಾಗಿ ಹೋಗುತ್ತಿದ್ದುದನ್ನು ಕಂಡು, ಬೋವಜನು ಅವನಿಗೆ “ಬಾರಪ್ಪಾ, ಇಲ್ಲಿ ಬಂದು ಕುಳಿತುಕೋ” ಎಂದು ಕರೆಯಲು ಅವನು ಬಂದು ಕುಳಿತುಕೊಂಡನು.
2 А Боаз узяв десять мужа зо старши́х того міста та й сказав: „Сідайте тут!“І вони посідали.
ಇದಲ್ಲದೆ ಅವನು ಊರಿನ ಹಿರಿಯರಲ್ಲಿ ಹತ್ತು ಮಂದಿಯನ್ನು ಕರೆದಾಗ ಅವರೂ ಬಂದು ಕುಳಿತುಕೊಂಡರು.
3 І сказав він до родича: „Діля́нку поля, що нашого брата Елімеле́ха, продала́ Ноомі́, яка вернулася з моавського поля.
ಆಗ ಅವನು ಆ ಸಮೀಪಬಂಧುವಿಗೆ, “ಮೋವಾಬ್ ದೇಶದಿಂದ ಹಿಂದಿರುಗಿ ಬಂದಿರುವ ನವೊಮಿಯು ನಮ್ಮ ಸಹೋದರನಾದ ಎಲೀಮೆಲೆಕನ ಪಾಲಿಗೆ ಬಂದ ಹೊಲವನ್ನು ಮಾರಬೇಕೆಂದಿದ್ದಾಳೆ.
4 А я постановив: Подам тобі до ушей твоїх, говорячи: Купи при тих, що сидять тут, та при старши́х мого народу. Якщо викупиш — викупи, а якщо не викупиш — скажи мені, і нехай я знаю, бо окрім тебе нема кому викупити, а я за тобою“. А той сказав: „Я викуплю“.
ನಾನು ನಿನಗೆ ಹೇಳಬೇಕೆಂದಿರುವುದೇನಂದರೆ ‘ನಿನಗೆ ಅದನ್ನು ಕೊಂಡುಕೊಳ್ಳುವ ಮನಸ್ಸಿದ್ದರೆ ಇಲ್ಲಿ ಕುಳಿತಿರುವ ಊರಿನ ಹಿರಿಯರ ಮುಂದೆಯೇ ಕೊಂಡುಕೋ.’ ಇಲ್ಲದಿದ್ದರೆ ನನಗೆ ತಿಳಿಸು; ಇದು ನನಗೆ ಗೊತ್ತಾಗಬೇಕು. ನೀನೂ, ನಿನ್ನ ತರುವಾಯ ನಾನೂ ಅಲ್ಲದೆ ಅದನ್ನು ಕೊಂಡುಕೊಳ್ಳತಕ್ಕ ಬಾಧ್ಯರು ಬೇರೆ ಯಾರೂ ಇಲ್ಲ” ಎಂದು ಹೇಳಲು ಅವನು “ನಾನೇ ಕೊಂಡುಕೊಳ್ಳುತ್ತೇನೆ” ಅಂದನು.
5 І сказав Бо́аз: „Того дня, коли набу́деш поле з руки Ноомі, то набудеш також моавитянку Рут, жінку померлого, — щоб поставити ім'я́ померлому на наді́лі його“.
ಆಗ ಬೋವಜನು “ನೀನು ನವೊಮಿಯಿಂದ ಆ ಹೊಲವನ್ನು ತೆಗೆದುಕೊಳ್ಳುವ ದಿನದಲ್ಲಿ, ಹೊಲದ ಖಾತೆಯೂ ಆಕೆಯ ಸತ್ತುಹೋದ ಮಗನ ಹೆಸರಿನಲ್ಲೇ ಉಳಿಯುದಿರುವಂತೆ, ಅವನ ಹೆಂಡತಿ ಮೋವಾಬ್ಯಳಾದ ರೂತಳನ್ನೂ ತೆಗೆದುಕೊಳ್ಳಬೇಕು” ಎಂದು ತಿಳಿಸಿದನು.
6 А родич сказав: „Не можу я викупити собі, щоб не понищити свого наді́лу. Викупи собі мого викупа, бо я не можу викупити“.
ಅದಕ್ಕೆ ಆ ಸಮೀಪಬಂಧುವು “ಹಾಗಾದರೆ ಅದನ್ನು ಕೊಂಡುಕೊಂಡು ನನ್ನ ಆಸ್ತಿಯನ್ನು ನಷ್ಟಪಡಿಸಿಕೊಳ್ಳಲಾರೆನು; ಆ ಬಾಧ್ಯತೆಯನ್ನು ನೀನೇ ವಹಿಸಿಕೋ; ನನ್ನಿಂದಾಗದು” ಅಂದನು.
7 А оце було колись серед Ізраїля на викуп, і на заміну, і на ствердження кожної справи: чоловік здіймав санда́лю свою, і давав своєму ближньому, і це було свідо́цтвом серед Ізраїля.
ಯಾವುದಾದರೊಂದು ವಸ್ತುವನ್ನು ಬಿಡಿಸಿಕೊಳ್ಳುವಾಗಲೂ, ತೆಗೆದುಕೊಳ್ಳುವಾಗಲೂ, ಕೊಡುವಾಗಲೂ ಮಾತನ್ನು ದೃಢಪಡಿಸುವುದಕ್ಕೋಸ್ಕರ ಇಸ್ರಾಯೇಲರಲ್ಲಿ ಪೂರ್ವಕಾಲದಿಂದ ಇದ್ದ ಪದ್ಧತಿ ಯಾವುದಂದರೆ, ಕೊಡುವವನು ತೆಗೆದುಕೊಳ್ಳುವವನಿಗೆ ತನ್ನ ಪಾದರಕ್ಷೆಯನ್ನು ಬಿಚ್ಚಿ ಕೊಡಬೇಕು; ಇದರಿಂದ ಮಾತು ದೃಢವಾಯಿತೆಂದು ಇಸ್ರಾಯೇಲ್ಯರು ತಿಳಿದುಕೊಳ್ಳುವರು.
8 І сказав родич до Боаза: „Купи собі!“І зняв свою́ санда́лю.
ಹಾಗೆಯೇ ಆ ಸಮೀಪಬಂಧುವು ಬೋವಜನಿಗೆ “ನೀನೇ ತೆಗೆದುಕೋ” ಎಂದು ಹೇಳಿ ತನ್ನ ಪಾದರಕ್ಷೆಯನ್ನು ತೆಗೆದುಕೊಟ್ಟನು.
9 І сказав Боаз до старши́х та до всього народу: „Ви свідки сьогодні, що я набув усе, що Елімеле́хове, і все, що Кілйонове та Махлонове з руки Ноомі́.
ಆಗ ಬೋವಜನು ಹಿರಿಯರಿಗೂ, ಎಲ್ಲಾ ಜನರಿಗೂ “ನಾನು ಎಲೀಮೆಲೆಕ್, ಕಿಲ್ಯೋನ್, ಮಹ್ಲೋನ್ ಎಂಬುವರಿಗಿದ್ದದ್ದನ್ನೆಲ್ಲಾ ನವೊಮಿಯಿಂದ ತೆಗೆದುಕೊಂಡಿದ್ದೇನೆ;
10 А також моавітянку Рут, Махлонову жінку, набув я собі за жінку, щоб поставити ім'я́ померлому на спа́дкові його, — і не буде знищене ім'я померлого між братами його та з брами його місця. Ви сьогодні свідки на це! “
೧೦ಇದಲ್ಲದೆ ಹೊಲದ ಖಾತೆಯು ಸತ್ತುಹೋದ ಮಹ್ಲೋನನ ಹೆಸರಿನಲ್ಲೇ ಉಳಿದು, ಅವನ ಬಂಧುಗಳಲ್ಲಿಯೂ ಊರಲ್ಲಿಯೂ ಅವನ ಸಂತಾನವು ಉಳಿಯುವಂತೆ ಅವನ ಹೆಂಡತಿಯಾಗಿದ್ದ ಮೋವಾಬ್ಯಳಾದ ರೂತಳನ್ನು ನನ್ನ ಹೆಂಡತಿಯನ್ನಾಗಿ ತೆಗೆದುಕೊಂಡಿದ್ದೇನೆ ಇದಕ್ಕೆ ನೀವೇ ಸಾಕ್ಷಿಗಳು” ಎಂದು ಹೇಳಿದನು.
11 І сказав увесь народ, що були в брамі, та старші, свідки: „Нехай дасть Господь цю жінку, що входить до дому твого, як Рахи́ль та як Лі́ю, що вони оби́дві збудували Ізраїлів дім. І розбагатій в Ефраті, і здобуть собі славне ім'я́ в Віфлеємі.
೧೧ಅದಕ್ಕೆ ಊರ ಬಾಗಿಲಲ್ಲಿ ಕೂಡಿ ಬಂದಿದ್ದ ಹಿರಿಯರೂ, ಎಲ್ಲಾ ಜನರೂ “ಹೌದು, ನಾವೇ ಸಾಕ್ಷಿಗಳು; ಯೆಹೋವನು ಇಸ್ರಾಯೇಲನ ಮನೆಯನ್ನು ಕಟ್ಟಿದ. ರಾಹೇಲ್, ಲೇಯಾ ಎಂಬ ಸ್ತ್ರೀಯರನ್ನು ಹೇಗೋ ಹಾಗೆಯೇ ನಿನ್ನ ಮನೆಗೆ ಬರುವ ಈ ಸ್ತ್ರೀಯನ್ನೂ ಅಭಿವೃದ್ಧಿಪಡಿಸಲಿ. ಎಫ್ರಾತದಲ್ಲಿ ಅಭಿವೃದ್ಧಿ ಹೊಂದು, ಬೇತ್ಲೆಹೇಮಿನಲ್ಲಿ ಪ್ರಸಿದ್ಧನಾಗು.
12 А з насіння, що Господь дасть тобі від цієї молодої жінки, нехай стане дім твій, як дім Переца, що Тамар породила була Юді“.
೧೨ಯೆಹೋವನು ಈ ಸ್ತ್ರೀಯ ಮೂಲಕ ನಿನಗೆ ಅನುಗ್ರಹಿಸುವ ಸಂತಾನದಿಂದ ನಿನ್ನ ಮನೆಯು ಯೆಹೂದನಿಗೆ ತಾಮಾರಳಿಂದ ಹುಟ್ಟಿದ ಪೆರೆಚನ ಮನೆಗೆ ಸಮಾನವಾಗಲಿ” ಅಂದರು.
13 І взяв Бо́аз Рут, і вона стала йому за жінку. І він увійшов до неї, а Господь дав їй вагітність, — і вона породила сина.
೧೩ಬೋವಜನು ರೂತಳನ್ನು ಹೆಂಡತಿಯನ್ನಾಗಿ ಪರಿಗ್ರಹಿಸಿದ್ದರಿಂದ ಆಕೆಯು ಯೆಹೋವನ ಅನುಗ್ರಹದಿಂದ ಗರ್ಭಿಣಿಯಾಗಿ ಮಗನನ್ನು ಹೆತ್ತಳು.
14 І сказали жінки́ до Ноомі́: „Благословенний Господь, що не позбавив тебе сьогодні родича! І буде славним ім'я́ його серед Ізраїля.
೧೪ಆಗ ಹೆಂಗಸರು ನವೊಮಿಗೆ “ಈ ಹೊತ್ತು ನಿನಗೆ ಬಾಧ್ಯಸ್ಥನನ್ನು ದಯಪಾಲಿಸಿದ ಯೆಹೋವನಿಗೆ ಸ್ತೋತ್ರವಾಗಲಿ. ಈ ಮಗನು ಇಸ್ರಾಯೇಲ್ಯರಲ್ಲಿ ಪ್ರಖಾತ್ಯನಾಗಲಿ.
15 І він буде тобі потішителем душі та на вижи́влення твоєї сивини́, бо породила його твоя невістка, що любить тебе, що ліпша тобі за сімо́х синів“.
೧೫ಇವನು ನಿನಗೆ ನವಚೈತನ್ಯ ನೀಡಿ ಪುನರ್ಜನ್ಮ ಹೊಂದುವಂತೆ ಮಾಡುವನು, ವೃದ್ಧಾಪ್ಯದಲ್ಲಿ ನಿನಗೆ ಸಂರಕ್ಷಕನಾಗಿರುವನು. ನಿನ್ನನ್ನು ಬಹಳವಾಗಿ ಪ್ರೀತಿಸುತ್ತಾ ಏಳು ಮಂದಿ ಮಕ್ಕಳಿಗಿಂತ ಹೆಚ್ಚಾಗಿ ನಿನ್ನನ್ನು ಪ್ರೀತಿಸಿ ಗೌರವಿಸುವ ನಿನ್ನ ಸೊಸೆಯು ಇವನನ್ನು ಹೆತ್ತಳಲ್ಲಾ” ಎಂದು ಹೇಳಿದರು.
16 І взяла́ Ноомі ту дитину, і поклала її на коліна свої, і була їй за няньку.
೧೬ನವೊಮಿಯೇ ಆ ಮಗುವನ್ನು ಮಡಿಲಲ್ಲಿಟ್ಟುಕೊಂಡು ಸಾಕುತ್ತಿದ್ದಳು.
17 А сусідки назвали ім'я́ йому, говорячи: „Народився син для Ноомі́!“І назвали ім'я йому: Ове́д. А він — батько Єссе́я, Дави́дового батька.
೧೭ನೆರೆಹೊರೆಯ ಹೆಂಗಸರು ನವೊಮಿಗೆ “ಒಬ್ಬ ಮಗನು ಹುಟ್ಟಿದ್ದಾನೆಂದು” ಹೇಳಿ ಅವನಿಗೆ ಓಬೇದನೆಂದು ಹೆಸರಿಟ್ಟರು. ಇವನೇ ಇಷಯನಿಗೆ ತಂದೆಯೂ, ದಾವೀದನಿಗೆ ಅಜ್ಜನೂ ಆದನು.
18 А оце Перецові нащадки: Перец породив Гецрона,
೧೮ಪೆರೆಚನ ವಂಶಾವಳಿ: ಪೆರೆಚನು ಹೆಚ್ರೋನನನ್ನು ಪಡೆದನು;
19 а Гецрон породив Рама, а Рам породив Аммінадава,
೧೯ಹೆಚ್ರೋನನು ರಾಮನನ್ನು ಪಡೆದನು; ರಾಮನು ಅಮ್ಮೀನಾದಾಬನನ್ನು ಪಡೆದನು;
20 а Аммінадав породив Нахшона, а Нахшон породив Салмона;
೨೦ಅಮ್ಮೀನಾದಾಬನು ನಹಶೋನನನ್ನು ಪಡೆದನು; ನಹಶೋನನು ಸಲ್ಮೋನನನ್ನು ಪಡೆದನು;
21 а Салмон породив Бо́аза, а Бо́аз породив Ове́да;
೨೧ಸಲ್ಮೋನನು ಬೋವಜನನ್ನು ಪಡೆದನು; ಬೋವಜನು ಓಬೇದನನ್ನು ಪಡೆದನು;
22 а Ове́д породив Єссе́я, а Єссе́й породив Дави́да.
೨೨ಓಬೇದನು ಇಷಯನನ್ನು ಪಡೆದನು; ಇಷಯನು ದಾವೀದನನ್ನು ಪಡೆದನು.

< Рут 4 >