< 1 Самуїлова 8 >
1 І сталося, як Самуїл поста́рівся, то поставив синів своїх за су́ддів для Ізраїля.
೧ಸಮುವೇಲನು ಮುದುಕನಾದ ಮೇಲೆ ತನ್ನ ಮಕ್ಕಳನ್ನು ಇಸ್ರಾಯೇಲರಿಗೆ ನ್ಯಾಯಸ್ಥಾಪಕರನ್ನಾಗಿ ಮಾಡಿದನು.
2 І було ім'я́ перворі́дного сина його Йоїл, а ім'я́ другого його — Авійя, судді в Беер-Шеві.
೨ಅವನ ಮೊದಲನೆಯ ಮಗನ ಹೆಸರು ಯೋವೇಲ್, ಎರಡನೆಯ ಮಗನ ಹೆಸರು ಅಬೀಯ. ಇವರು ಬೇರ್ಷೆಬದಲ್ಲಿ ನ್ಯಾಯಸ್ಥಾಪಕರಾಗಿದ್ದರು.
3 А сини його не йшли його дорогою, — і вхиля́лись до зи́ску, і брали пі́дкупа, і ламали Зако́на.
೩ಇವರು ತಂದೆಯ ಮಾರ್ಗದಲ್ಲಿ ನಡೆಯದೆ ದ್ರವ್ಯಾಶೆಯಿಂದ ಲಂಚತೆಗೆದುಕೊಂಡು, ನ್ಯಾಯವಿರುದ್ಧವಾದ ತೀರ್ಪು ಕೊಡುತ್ತಿದ್ದರು.
4 І зібралися всі Ізраїлеві старші́, і прийшли до Самуїла до Рами́,
೪ಆದ್ದರಿಂದ ಇಸ್ರಾಯೇಲರ ಹಿರಿಯರೆಲ್ಲರೂ ಸೇರಿಕೊಂಡು ರಾಮದಲ್ಲಿದ್ದ ಸಮುವೇಲನ ಬಳಿಗೆ ಬಂದು
5 та й сказали до нього: „Ось ти поста́рівся, а сини твої не йдуть доро́гами твоїми. Тепер настанови́ нам царя́, щоб судив нас, як у всіх наро́дів“.
೫ಅವನಿಗೆ, “ನೀನಂತೂ ಮುದುಕನಾದಿ; ನಿನ್ನ ಮಕ್ಕಳು ನಿನ್ನ ಮಾರ್ಗದಲ್ಲಿ ನಡೆಯುತ್ತಿಲ್ಲ. ಆದ್ದರಿಂದ ಬೇರೆ ಎಲ್ಲಾ ಜನಾಂಗಗಳಿಗೆ ಇರುವಂತೆ ನಮಗೂ ಒಬ್ಬ ಅರಸನನ್ನು ನೇಮಿಸಿಕೊಡು. ಅವನೇ ನಮ್ಮ ನ್ಯಾಯಸ್ಥಾಪಕನಾಗಿರಲಿ” ಅಂದರು.
6 І була та річ зла в Самуїлових оча́х, як вони сказали: „Настанови́ нам царя́, щоб судив нас“. І молився Самуїл до Господа.
೬ನ್ಯಾಯಸ್ಥಾಪನೆಗೋಸ್ಕರ ನಮಗೊಬ್ಬ ಅರಸನನ್ನು ನೇಮಿಸಿಕೊಡು ಎಂಬ ಅವರ ಮಾತಿಗೆ ಸಮುವೇಲನು ದುಃಖಪಟ್ಟು ಯೆಹೋವನನ್ನು ಪ್ರಾರ್ಥಿಸಿದನು.
7 І сказав Господь до Самуїла: „Послухай голосу того наро́ду щодо всього, про що́ він сказав тобі, бо не тобою вони пого́рдували, але Мною пого́рдували, щоб Я не царюва́в над ними.
೭ಆಗ ಯೆಹೋವನು ಸಮುವೇಲನಿಗೆ, “ಜನರು ಹೇಳಿದಂತೆಯೇ ಮಾಡು; ಅವರು ನಿನ್ನನ್ನಲ್ಲ, ನನ್ನನ್ನು ತಿರಸ್ಕರಿಸಿದ್ದಾರೆ. ನನ್ನ ಆಳ್ವಿಕೆಯನ್ನು ಬೇಡವೆನ್ನುತ್ತಿದ್ದಾರೆ.
8 Як усі ті діла́, що вони чинили від дня, коли Я вивів їх з Єгипту, і́ аж до цього дня, і як вони ки́дали Мене й служили іншим бога́м, так вони чинять і тобі.
೮ನಾನು ಅವರನ್ನು ಐಗುಪ್ತದಿಂದ ಬಿಡಿಸಿದಂದಿನಿಂದ ಇಂದಿನ ವರೆಗೂ ಅವರು ನನ್ನನ್ನು ಬಿಟ್ಟು ಅನ್ಯದೇವತೆಗಳನ್ನು ಸೇವಿಸಿದರು. ನನಗೆ ಹೇಗೆ ಮಾಡಿದರೋ, ಹಾಗೆಯೇ ನಿನಗೂ ಮಾಡುತ್ತಾರೆ.
9 А тепер послухай їхнього голосу, тільки конче остереже́ш їх, і розповіси їм пра́во того царя, що буде царюва́ти над ними“.
೯ನೀನು ಈಗ ಅವರು ಕೇಳಿಕೊಂಡಂತೆ ಮಾಡು; ಆದರೆ ಅವರ ಮೇಲೆ ರಾಜರಿಗಿರುವ ಅಧಿಕಾರ ಎಷ್ಟೆಂಬುದನ್ನು ಅವರಿಗೆ ತಿಳಿಸಿ, ಎಚ್ಚರಿಸು” ಎಂದು ಹೇಳಿದನು.
10 І переказав Самуїл всі Господні слова́ до наро́ду, що жадав від нього царя,
೧೦ಸಮುವೇಲನು ಅರಸನನ್ನು ನೇಮಿಸಿಕೊಡು ಎಂದು ಬೇಡಿಕೊಂಡ ಜನರಿಗೆ ಯೆಹೋವನ ಮಾತುಗಳನ್ನೆಲ್ಲಾ ತಿಳಿಸಿ ಅವರಿಗೆ,
11 і сказав: „Оце буде пра́во царя, що царюва́тиме над вами: він ві́зьме синів ваших і поставить собі в колесни́ці свої та серед їздців своїх, і вони бу́дуть бігати перед колесни́цею його́;
೧೧“ಅರಸನಿಗಿರುವ ಅಧಿಕಾರವೆಷ್ಟೆಂದು ಕೇಳಿರಿ, ಅವನು ನಿಮ್ಮ ಮಕ್ಕಳನ್ನು ತೆಗೆದುಕೊಂಡು ತನ್ನ ಸಾರಥಿಗಳನ್ನಾಗಿಯೂ ರಾಹುತರನ್ನಾಗಿಯೂ ಮಾಡಿಕೊಳ್ಳುವನು. ಅವರು ಅವನ ರಥಗಳ ಮುಂದೆ ಓಡುವವರಾಗಬೇಕು.
12 і щоб поставити собі тисячників та п'ятдесятників, і щоб орати о́рку його, і щоб жати жни́во його, і щоб робити збро́ю військо́ву його та колесни́чні прила́ддя його.
೧೨ಕೆಲವರನ್ನು ಸಹಸ್ರಾಧಿಪತಿಗಳನ್ನಾಗಿಯೂ, ಕೆಲವರನ್ನು ಪಂಚಶತಾಧಿಪತಿಗಳನ್ನಾಗಿಯೂ ನೇಮಿಸುವನು. ಇನ್ನು ಕೆಲವರು ಅವನ ಭೂಮಿಯನ್ನು ಉಳುವವರೂ, ಪೈರನ್ನು ಕೊಯ್ಯುವವರೂ, ಯುದ್ಧಕ್ಕೆ ಬೇಕಾದ ಆಯುಧ, ರಥಸಾಮಾಗ್ರಿಗಳನ್ನು ಮಾಡುವವರೂ ಆಗಬೇಕು.
13 А дочо́к ваших забере за мирова́рниць, і за куха́рок, і за пе́карок.
೧೩ಇದಲ್ಲದೆ ಅವನು ನಿಮ್ಮ ಹೆಣ್ಣುಮಕ್ಕಳನ್ನು ಸುಗಂಧದ್ರವ್ಯ ಮಾಡುವುದಕ್ಕೂ, ಅಡಿಗೆಮಾಡುವುದಕ್ಕೂ, ರೊಟ್ಟಿಸುಡುವುದಕ್ಕೂ ನೇಮಿಸಿಕೊಳ್ಳುವನು.
14 І він позабирає поля ваші, і виноградники ваші, та кращі ваші оли́вки, — і пороздає своїм слу́гам.
೧೪ನಿಮ್ಮ ಉತ್ತಮವಾದ ಹೊಲಗಳನ್ನೂ, ದ್ರಾಕ್ಷಿತೋಟಗಳನ್ನೂ ಎಣ್ಣೇ ಮರದ ತೋಪುಗಳನ್ನೂ ಕಿತ್ತುಕೊಂಡು ತನ್ನ ಸೇವಕರಿಗೆ ಕೊಡುವನು.
15 А з вашого по́сіву та з ваших виноградників братиме десятину, і даватиме своїм е́внухам та своїм слу́гам.
೧೫ನಿಮ್ಮ ಧಾನ್ಯ, ದ್ರಾಕ್ಷಿಗಳಲ್ಲಿ ಹತ್ತರಷ್ಟನ್ನು ತೆಗೆದುಕೊಂಡು ತನ್ನ ಪ್ರಧಾನರಿಗೂ, ಪರಿವಾರದವರಿಗೂ ಕೊಡುವನು.
16 І він забере рабів ваших, і ваших невільниць, і найліпших ваших юнакі́в, і ваших ослів, — і буде вживати їх на роботу свою.
೧೬ನಿಮ್ಮ ದಾಸದಾಸಿಯರನ್ನೂ, ಉತ್ತಮವಾದ ಎತ್ತು ಕತ್ತೆಗಳನ್ನೂ ತನ್ನ ಕೆಲಸ ಮಾಡುವುದಕ್ಕಾಗಿ ತೆಗೆದುಕೊಳ್ಳುವನು.
17 Він братиме десятину з вашої ота́ри, а ви станете йому за рабів.
೧೭ಕುರಿಹಿಂಡುಗಳಲ್ಲಿ ಹತ್ತರಲ್ಲೊಂದು ಭಾಗವನ್ನು ತೆಗೆದುಕೊಳ್ಳುವನು. ನೀವು ಅವನಿಗೆ ದಾಸರಾಗಿರಬೇಕು.
18 І ви будете кли́кати того дня проти вашого царя́, якого собі ви́брали, — та не відпові́сть вам Господь того дня!“
೧೮ಆಗ ನೀವು ಆರಿಸಿಕೊಂಡ ಅರಸನ ದೆಸೆಯಿಂದ ಆ ದಿನದಲ್ಲಿ ಬೇಸತ್ತು ಯೆಹೋವನಿಗೆ ಮೊರೆಯಿಡುವಿರಿ. ಆಗ ಆತನು ನಿಮ್ಮನ್ನು ಲಕ್ಷಿಸುವುದಿಲ್ಲ” ಅಂದನು.
19 Та наро́д відмо́вився слухати Самуїлового голосу, та й сказав: „Ні, — нехай тільки цар буде над нами!
೧೯ಸಮುವೇಲನು ಎಷ್ಟು ಹೇಳಿದರೂ ಜನರು ಅವನ ಮಾತುಗಳನ್ನು ಕೇಳಲೊಲ್ಲದೆ, “ಇಲ್ಲ; ನಮಗೆ ಅರಸನನ್ನು ನೇಮಿಸಿಕೊಡು;
20 І бу́демо ми, як усі люди, і буде нас судити наш цар. І він ходи́тиме перед нами, і прова́дитиме наші ві́йни“.
೨೦ನಾವು ಇತರ ಜನಾಂಗಗಳಂತೆ ಆಗಬೇಕು. ನಮ್ಮ ನ್ಯಾಯಗಳನ್ನು ತೀರಿಸಿ ನಮಗೆ ಮುಂದಾಗಿ ಹೊರಟು ನಮಗೋಸ್ಕರ ಯುದ್ಧಮಾಡುವ ಒಬ್ಬ ಅರಸನು ಬೇಕು” ಎಂದು ಹೇಳಿದರು.
21 І вислухав Самуїл усі слова́ наро́ду, і переказав їх го́лосно Господе́ві.
೨೧ಸಮುವೇಲನು ಜನರ ಈ ಎಲ್ಲಾ ಮಾತುಗಳನ್ನು ಯೆಹೋವನಿಗೆ ತಿಳಿಸಲಾಗಿ
22 А Господь сказав до Самуїла: „Послу́хайся їхнього голосу, і постав їм царя́!“І сказав Самуїл до Ізраїлевих людей: „Ідіть кожен до міста свого!“
೨೨ಆತನು ಅವನಿಗೆ, “ಅವರ ಇಷ್ಟದಂತೆ ಅವರಿಗೊಬ್ಬ ಅರಸನನ್ನು ನೇಮಿಸು” ಎಂದನು. ಆಗ ಸಮುವೇಲನು ಇಸ್ರಾಯೇಲರಿಗೆ, “ನಿಮ್ಮ ನಿಮ್ಮ ಊರುಗಳಿಗೆ ಹೋಗಿರಿ” ಎಂದು ಅಪ್ಪಣೆಕೊಟ್ಟನು.