< До римлян 16 >

1 Я представляю вам нашу сестру Фіву, служницю церкви в Кенхреях.
ನಾನು ನಿಮ್ಮ ಬಳಿಗೆ ಕಳುಹಿಸುವ ನಮ್ಮ ಸಹೋದರಿಯಾದ ಪೊಯಿಬೆಯನ್ನು ಪ್ರೀತಿಯಿಂದ ಅಂಗೀಕರಿಸಿರಿ. ಆಕೆಯು ಕೆಂಖ್ರೆಯ ಪಟ್ಟಣದಲ್ಲಿರುವ ಸಭೆಯ ಸೇವಕಿಯಾಗಿದ್ದಾಳೆ;
2 Прийміть її в Господі, як личить святим, і допомагайте їй у всьому, у чому вона матиме потребу, бо вона була помічницею багатьом і мені також.
ನೀವು ಆಕೆಯನ್ನು ದೇವಜನರಿಗೆ ತಕ್ಕ ಹಾಗೆ ಕರ್ತನ ಶಿಷ್ಯಳೆಂದು ಸೇರಿಸಿಕೊಂಡು, ಆಕೆಗೆ ಯಾವ ವಿಷಯದಲ್ಲಿ ಅಗತ್ಯವಿದೆಯೋ ಅದರಲ್ಲಿ ಸಹಾಯವನ್ನು ಮಾಡಿರಿ. ಆಕೆಯು ನನಗೂ ಮತ್ತು ಅನೇಕರಿಗೂ ಸಹಾಯಮಾಡಿದವಳು.
3 Привітайте Прискіллу та Акилу, моїх співпрацівників у Христі Ісусі.
ಕ್ರಿಸ್ತ ಯೇಸುವಿನ ಸೇವೆಯಲ್ಲಿ ನನ್ನ ಜೊತೆಕೆಲಸದವರಾದ ಪ್ರಿಸ್ಕಿಲ್ಲಳಿಗೂ ಮತ್ತು ಅಕ್ವಿಲನಿಗೂ ನನ್ನ ವಂದನೆಗಳನ್ನು ತಿಳಿಸಿರಿ.
4 Вони готові були покласти свої голови заради мене. Не тільки я їм дякую, але й усі церкви язичників.
ಅವರು ನನ್ನ ಪ್ರಾಣದ ಸಂರಕ್ಷಣೆಗಾಗಿ ತಮ್ಮ ಪ್ರಾಣಗಳನ್ನು ಅಪಾಯಕ್ಕೆ ಗುರಿಮಾಡಿಕೊಂಡಿದ್ದರು. ನಾನು ಮಾತ್ರವೇ ಅಲ್ಲ, ಅನ್ಯಜನರ ಸಭೆಗಳವರೆಲ್ಲರೂ ಅವರ ಉಪಕಾರವನ್ನು ಸ್ಮರಿಸುತ್ತಾರೆ.
5 Привітайте також церкву, яка збирається в їхньому домі. Привітайте мого улюбленого [друга] Епенета, який першим навернувся до Христа в Азії.
ಅವರ ಮನೆಯಲ್ಲಿ ಸೇರಿಬರುವ ಸಭೆಗೆ ಸಹ ನನ್ನ ವಂದನೆಯನ್ನು ತಿಳಿಸಿರಿ. ಆಸ್ಯ ಸೀಮೆಯಲ್ಲಿ ಕ್ರಿಸ್ತನಿಗೆ ಪ್ರಥಮಫಲವಾಗಿರುವ ನನ್ನ ಪ್ರಿಯನಾದ ಎಫೈನೆತನಿಗೆ ವಂದನೆ.
6 Привітайте Марію, яка багато працювала для вас.
ನಿಮಗೋಸ್ಕರ ಬಹು ಶ್ರಮೆಪಟ್ಟ ಮರಿಯಳಿಗೆ ವಂದನೆ.
7 Привітайте Андроніка та Юнію, моїх родичів, які були зі мною у в’язниці. Їх поважають серед апостолів, і вони раніше за мене увірували в Христа.
ನನ್ನ ಸ್ವಜನರೂ ಹಾಗೂ ಜೊತೆ ಸೆರೆಯವರೂ ಆಗಿರುವ ಅಂದ್ರೋನಿಕನಿಗೂ, ಯೂನ್ಯನಿಗೂ ವಂದನೆ; ಅವರು ಅಪೊಸ್ತಲರಲ್ಲಿ ಪ್ರಸಿದ್ಧರಾಗಿದ್ದಾರಲ್ಲದೆ, ನನಗಿಂತ ಮೊದಲೇ ಕ್ರಿಸ್ತನನ್ನು ನಂಬಿದವರೂ ಆಗಿದ್ದರು.
8 Привітайте Амплія, мого улюбленого [друга] в Господі.
ಕರ್ತನಲ್ಲಿ ನನ್ನ ಪ್ರಿಯನಾದ ಅಂಪ್ಲಿಯಾತನಿಗೆ ವಂದನೆ.
9 Вітайте Урбана, який працював разом зі мною в Христі, [а також] і мого улюбленого [друга] Стахія.
ಕ್ರಿಸ್ತನ ಸೇವೆಯಲ್ಲಿ ನಮ್ಮ ಜೊತೆ ಕೆಲಸದವನಾದ ಉರ್ಬಾನನಿಗೂ, ನನ್ನ ಪ್ರಿಯನಾದ ಸ್ತಾಖುನಿಗೂ ವಂದನೆಗಳು.
10 Привітайте Апеллеса, чия вірність у Христі витримала випробування. Привітайте тих, хто належить до дому Аристовула.
೧೦ಕ್ರಿಸ್ತನ ಸೇವೆಯಲ್ಲಿ ಮೆಚ್ಚಿಕೆಗೆಪಾತ್ರನಾದ ಅಪೆಲ್ಲನಿಗೆ ವಂದನೆ. ಅರಿಸ್ತೊಬೂಲನ ಮನೆಯವರಿಗೆ ವಂದನೆಗಳು.
11 Привітайте Іродіона, мого родича. Привітайте тих із дому Наркіса, хто в Господі.
೧೧ನನ್ನ ಸಂಬಂಧಿಕನಾದ ಹೆರೂಡಿಯೋನನಿಗೆ ವಂದನೆ. ನಾರ್ಕಿಸ್ಸನ ಮನೆಯವರೊಳಗೆ ಕ್ರಿಸ್ತನನ್ನು ನಂಬಿದವರಿಗೆ ವಂದನೆಗಳು.
12 Привітайте Трифену та Трифосу, які наполегливо працюють у Господі. Привітайте мою улюблену Персиду, яка багато працювала в Господі.
೧೨ಕರ್ತನ ಸೇವೆಯಲ್ಲಿ ಪ್ರಯಾಸಪಟ್ಟವರಾದ ತ್ರುಫೈನಳಿಗೂ, ತ್ರುಫೋಸಳಗೂ ವಂದನೆಗಳು. ಕರ್ತನ ಸೇವೆಯಲ್ಲಿ ಬಹಳವಾಗಿ ಪ್ರಯಾಸಪಟ್ಟಿರುವ ಪ್ರಿಯ ಪೆರ್ಸೀಸಳಿಗೆ ವಂದನೆ.
13 Привітайте Руфа, обраного в Господі, і його матір, яка й мені була матір’ю.
೧೩ಕರ್ತನಲ್ಲಿ ಆರಿಸಿಕೊಳ್ಳಲ್ಪಟ್ಟವನಾದ ರೂಫನಿಗೂ, ನನಗೆ ತಾಯಿಯಂತಿರುವ ಅವನ ತಾಯಿಗೂ ವಂದನೆಗಳು.
14 Привітайте Асинкрита, Флегона, Гермеса, Патрова, Гермаса та інших братів, які знаходяться з ними.
೧೪ಅಸುಂಕ್ರಿತನಿಗೂ, ಪ್ಲೆಗೋನನಿಗೂ, ಹೆರ್ಮೇಯನಿಗೂ, ಪತ್ರೋಬನಿಗೂ, ಹೆರ್ಮಾನನಿಗೂ, ಅವರೊಂದಿಗಿರುವ ಸಹೋದರರಿಗೂ ವಂದನೆಗಳು.
15 Привітайте Філолога, Юлію, Нірея та його сестру, Олімпа та всіх святих, які з ними.
೧೫ಫಿಲೊಲೊಗನಿಗೂ, ಯೂಲ್ಯಳಿಗೂ, ನೇರ್ಯನಿಗೂ, ಅವನ ತಂಗಿಗೂ, ಒಲುಂಪನಿಗೂ, ಇವರೊಂದಿಗಿರುವ ದೇವಜನರೆಲ್ಲರಿಗೂ ವಂದನೆಗಳು.
16 Вітайте одне одного святим поцілунком. Усі Христові церкви вітають вас.
೧೬ಪವಿತ್ರವಾದ ಮುದ್ದಿಟ್ಟು ಒಬ್ಬರನ್ನೊಬ್ಬರು ವಂದಿಸಿರಿ. ಕ್ರಿಸ್ತನ ಸಭೆಗಳಲ್ಲಿರುವವರೆಲ್ಲರೂ ನಿಮ್ಮನ್ನು ವಂದಿಸುತ್ತಿದ್ದಾರೆ.
17 Я закликаю вас, брати, остерігайтеся тих, хто спричиняє розбіжності й ставить на вашому шляху перешкоди, що суперечать вченню, яке ви прийняли. Уникайте їх.
೧೭ಪ್ರಿಯರೇ, ನೀವು ಹೊಂದಿದ ಉಪದೇಶಕ್ಕೆ ವಿರುದ್ಧವಾಗಿ ಭೇದಗಳನ್ನೂ, ವಿಘ್ನಗಳನ್ನೂ ನಿಮ್ಮಲ್ಲಿ ಉಂಟುಮಾಡುವವರನ್ನು ಗುರುತಿಸಿ ಅವರನ್ನು ಬಿಟ್ಟು ದೂರ ಹೋಗಿರಿ ಎಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ.
18 Бо такі люди служать не нашому Господу Христу, а власному череву, і через своє красномовство й лестощі вони обманюють серця невинних.
೧೮ಅಂಥವರು ನಮ್ಮ ಕರ್ತನಾದ ಕ್ರಿಸ್ತನ ಸೇವೆಯನ್ನು ಮಾಡದೆ ತಮ್ಮ ಹೊಟ್ಟೆಯ ಸೇವೆಯನ್ನೇ ಮಾಡುವವರಾಗಿ ನಯದ ನುಡಿಗಳಿಂದಲೂ ಮತ್ತು ಹೊಗಳಿಕೆಯ ಮಾತುಗಳಿಂದಲೂ ನಿಷ್ಕಪಟಿಗಳ ಹೃದಯಗಳನ್ನು ಮೋಸಗೊಳಿಸುತ್ತಾರೆ.
19 Усі чули про ваш послух, тому я радію за вас, але хочу, щоб ви були мудрими в тому, що добре, і невинними в тому, що зле.
೧೯ನಿಮ್ಮ ವಿಧೇಯತ್ವವು ಎಲ್ಲರಿಗೂ ಪ್ರಸಿದ್ಧವಾದದ್ದರಿಂದ ನಿಮ್ಮ ವಿಷಯದಲ್ಲಿ ಆನಂದಪಡುತ್ತೇನೆ. ನೀವು ಒಳ್ಳೆಯದನ್ನು ಮಾಡುವುದರಲ್ಲಿ ಜಾಣರೂ ಮತ್ತು ಕೆಟ್ಟತನದ ವಿಷಯದಲ್ಲಿ ಮೂರ್ಖರೂ ಆಗಿರಬೇಕೆಂದು ಅಪೇಕ್ಷಿಸುತ್ತೇನೆ.
20 Бог миру незабаром розчавить сатану під вашими ногами. Благодать Господа нашого Ісуса нехай буде з вами.
೨೦ಶಾಂತಿದಾಯಕನಾದ ದೇವರು ಶೀಘ್ರವಾಗಿ ಸೈತಾನನನ್ನು ನಿಮ್ಮ ಕಾಲುಗಳ ಕೆಳಗೆ ಹಾಕಿ ತುಳಿದು ಜಜ್ಜಿಬಿಡುವನು. ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮೊಂದಿಗಿರಲಿ.
21 Тимофій, з яким працюємо разом, надсилає вам привітання, як і Луцій, Ясон та Сосипатр, мої родичі.
೨೧ನನ್ನ ಜೊತೆಕೆಲಸದವನಾದ ತಿಮೊಥೆಯನೂ, ನನ್ನ ಸಂಬಂಧಿಕರಾದ ಲೂಕ್ಯನೂ, ಯಾಸೋನನೂ ಮತ್ತು ಸೋಸಿಪತ್ರನೂ ನಿಮಗೆ ವಂದನೆಗಳನ್ನು ಹೇಳುತ್ತಾರೆ
22 Я, Терцій, що записав цього листа, теж вітаю вас у Господі.
೨೨ಈ ಪತ್ರಿಕೆಯನ್ನು ಬರೆದ ತೆರ್ತ್ಯನೆಂಬ ನಾನು ನಿಮ್ಮನ್ನು ಕರ್ತನಲ್ಲಿ ವಂದಿಸುತ್ತೇನೆ.
23 Гай, який гостинно приймає мене та всю церкву, надсилає вам привітання. Ераст, міський скарбник, і наш брат Квартус також надсилають вам привітання.
೨೩ನನಗೂ ಮತ್ತು ಸಮಸ್ತ ಸಭೆಗೂ ಅತಿಥಿಸತ್ಕಾರವನ್ನು ಮಾಡುತ್ತಿರುವ ಗಾಯನು ನಿಮ್ಮನ್ನು ವಂದಿಸುತ್ತಾನೆ. ಈ ಪಟ್ಟಣದ ಖಜಾನೆಯ ಮೇಲ್ವಿಚಾರಕನಾಗಿರುವ ಎರಸ್ತನೂ, ಸಹೋದರನಾದ ಕ್ವರ್ತನೂ ನಿಮಗೆ ವಂದನೆಗಳನ್ನು ಹೇಳುತ್ತಾರೆ.
24 Благодать нашого Господа Ісуса Христа нехай буде з усіма вами! Амінь.
೨೪ನಮ್ಮ ಕರ್ತನಾದ ಯೇಸುಕ್ರಿಸ್ತನ ಕೃಪೆಯ ನಿಮ್ಮೊಂದಿಗಿರಲಿ. ಆಮೆನ್.
25 Тому, Хто здатний зміцнити вас відповідно до моєї Доброї Звістки та проповіді Ісуса Христа, згідно з відкриттям таємниці, прихованої споконвіку, (aiōnios g166)
೨೫ಅನಾದಿಯಿಂದ ಗುಪ್ತವಾಗಿದ್ದ ಮರ್ಮವು ಈಗ ಪ್ರಕಾಶಕ್ಕೆ ಬಂದು ನಿತ್ಯನಾದ ದೇವರ ಅಪ್ಪಣೆಯ ಪ್ರಕಾರ ಪ್ರವಾದಿಗಳ ಶಾಸ್ತ್ರಗಳ ಮೂಲಕ ಅನ್ಯಜನರೆಲ್ಲರಿಗೂ ನಂಬಿಕೆಯೆಂಬ ವಿಧೇಯತ್ವವನ್ನು ಉಂಟುಮಾಡುವುದಕ್ಕೋಸ್ಕರ ತಿಳಿಸಲ್ಪಟ್ಟಿದೆ. ಪೂರ್ವಕಾಲಗಳಲ್ಲಿ ಮರೆಯಾಗಿದ್ದು ಈಗ ಬೆಳಕಿಗೆ ಬಂದಿರುವಂತಹದ್ದೂ, ಈ ಮರ್ಮಕ್ಕೆ ಅನುಸಾರ ಎಂದರೆ ಯೇಸು ಕ್ರಿಸ್ತನ ವಿಷಯವಾದಂಥ ಹಾಗೂ ನಾನು ಸಾರುವಂಥ ಸುವಾರ್ತೆಗನುಸಾರವಾಗಿ ನಿಮ್ಮನ್ನು ಸ್ಥಿರಪಡಿಸುವುದಕ್ಕೆ ಶಕ್ತನಾಗಿರುವ, (aiōnios g166)
26 але тепер за наказом вічного Бога відкритої усім народам через Писання пророків, на послух вірі; (aiōnios g166)
೨೬
27 єдиному мудрому Богові через Ісуса Христа слава навіки! Амінь. (aiōn g165)
೨೭ಜ್ಞಾನನಿಧಿಯಾದ ಒಬ್ಬನೇ ದೇವರಿಗೆ ಯೇಸು ಕ್ರಿಸ್ತನ ಮೂಲಕ ಯುಗಯುಗಾಂತರಗಳಲ್ಲಿಯೂ ಸ್ತೋತ್ರವಾಗಲಿ. ಆಮೆನ್. (aiōn g165)

< До римлян 16 >