< До євреїв 7 >
1 Це той Мельхіседек, цар Салема й священник Бога Всевишнього, який зустрів Авраама, що повертався після розгрому царів, і благословив його,
೧ಈ ಮೆಲ್ಕಿಜೆದೇಕನು ಸಾಲೇಮಿನ ಅರಸನೂ ಮಹೋನ್ನತನಾದ ದೇವರ ಯಾಜಕನೂ ಆಗಿದ್ದನು. ಈತನು ರಾಜರನ್ನು ಸಂಹಾರ ಮಾಡಿ ಹಿಂದಿರುಗಿ ಬರುತ್ತಿದ್ದ ಅಬ್ರಹಾಮನನ್ನು ಎದುರುಗೊಂಡು ಅವನನ್ನು ಆಶೀರ್ವದಿಸಿದನು.
2 і якому Авраам дав десяту частину з усього. По-перше, Мельхіседек [у перекладі] означає «цар праведності», а цар Салема означає «цар миру».
೨ಅವನಿಗೆ ಅಬ್ರಹಾಮನು ತಾನು ಜಯಿಸಿಕೊಂಡು ಬಂದಿದ್ದ ಎಲ್ಲಾ ವಸ್ತುಗಳಲ್ಲಿ ಹತ್ತನೆಯ ಒಂದು ಭಾಗವನ್ನು ಕೊಟ್ಟನು. “ಮೆಲ್ಕಿಜೆದೇಕ್”, ಎಂಬ ಹೆಸರಿಗೆ ಮೊದಲು “ನೀತಿಯ ರಾಜ” ಎಂದೂ, ಅನಂತರ “ಸಾಲೇಮಿನ ರಾಜ” ಎಂದರೆ “ಸಮಾಧಾನದ ರಾಜ” ಎಂದೂ ಅರ್ಥ.
3 Без батька й без матері, без роду, без початку днів, без кінця життя, подібний до Сина Божого, Він залишається священником назавжди.
೩ಅವನಿಗೆ ತಂದೆಯಿಲ್ಲ, ತಾಯಿಯಿಲ್ಲ, ವಂಶಾವಳಿಯೂ ಇಲ್ಲ. ಹುಟ್ಟು, ಸಾವು ಇಲ್ಲ. ಆತನು ದೇವರ ಕುಮಾರನಿಗೆ ಹೋಲಿಕೆಯಾಗಿದು, ನಿರಂತರವಾಗಿ ಯಾಜಕನಾಗಿರುವನು.
4 Подумайте, наскільки він великий, якщо навіть патріарх Авраам дав йому десятину з найкращої здобичі!
೪ಈತನು ಎಷ್ಟು ಮಹಾನ್ ಆಗಿದ್ದನೆಂದು ಯೋಚಿಸಿರಿ. ನಮ್ಮ ಮೂಲಪಿತೃವಾದ ಅಬ್ರಹಾಮನು ತಾನು ಯುದ್ಧದಲ್ಲಿ ಗೆದ್ದು ತಂದ ಶ್ರೇಷ್ಠ ವಸ್ತುಗಳಲ್ಲಿ ಹತ್ತರಲ್ಲಿ ಒಂದು ಭಾಗವನ್ನು ಅವನಿಗೆ ಕೊಟ್ಟನಲ್ಲಾ.
5 Тепер сини Левія, які стали священниками, мають заповідь за Законом збирати десятину з народу, тобто зі своїх братів, хоча вони також походять від Авраама.
೫ನಿಜವಾಗಿಯೂ ಲೇವಿಯ ಕುಲದವರಲ್ಲಿ ಯಾಜಕೋದ್ಯೋಗವನ್ನು ಹೊಂದುವವರು, ಜನರಿಂದ ಅಂದರೆ ಅಬ್ರಹಾಮನ ವಂಶಸ್ಥರಾಗಿರುವ ಸಹೋದರರಿಂದಲೇ ದಶಮ ಭಾಗಗಳನ್ನು ತೆಗೆದುಕೊಳ್ಳುವುದಕ್ಕೆ ಧರ್ಮಶಾಸ್ತ್ರದಲ್ಲಿ ಅಪ್ಪಣೆಯಿದೆ.
6 Однак [той, хто] не походив з їхнього роду, отримав десятину від Авраама й благословив того, кому було дано обітницю.
೬ಆದರೆ ಮೆಲ್ಕಿಜೆದೇಕನು ಲೇವಿಯ ವಂಶಾವಳಿಗೆ ಸೇರಿದವನಲ್ಲ, ಆದರೂ ಅಬ್ರಹಾಮನಿಂದ ದಶಮ ಭಾಗಗಳನ್ನು ತೆಗೆದುಕೊಂಡದ್ದಲ್ಲದೆ ದೇವರಿಂದ ವಾಗ್ದಾನಗಳನ್ನು ಹೊಂದಿದವನನ್ನು ಆಶೀರ್ವದಿಸಿದನು.
7 Немає сумніву, що більший благословляє меншого.
೭ಆಶೀರ್ವಾದ ಹೊಂದುವವನಿಗಿಂತ ಆಶೀರ್ವದಿಸುವವನೇ ಹೆಚ್ಚಿನವನು ಎಂಬುದನ್ನು ನಿರಾಕರಿಸುವಂತಿಲ್ಲ.
8 В одному випадку десятину отримують смертні люди, а в іншому – той, кого оголошено живим.
೮ದಶಮ ಭಾಗವನ್ನು ತೆಗೆದುಕೊಳ್ಳುವ ಯಾಜಕರು ಒಂದಲ್ಲಾ ಒಂದು ದಿನ ಸಾಯುತ್ತಾರೆ. ಆದರೆ ಅಬ್ರಹಾಮನಿಂದ ದಶಮ ಭಾಗವನ್ನು ತೆಗೆದುಕೊಂಡಾತನು ಚಿರಂಜೀವಿಯಾಗಿರುವನು.
9 Можна навіть сказати, що Левій, який збирає десятину, заплатив її через Авраама,
೯ಮತ್ತು ದಶಮ ಭಾಗಗಳನ್ನು ತೆಗೆದುಕೊಳ್ಳುವ ಲೇವಿಯು ಕೂಡ ಅಬ್ರಹಾಮನ ಮೂಲಕ ದಶಮ ಭಾಗಗಳನ್ನು ಕೊಟ್ಟ ಹಾಗಾಯಿತು.
10 бо коли Мельхіседек зустрів Авраама, Левій ще [не народився] і був у сімені свого праотця.
೧೦ಹೇಗೆಂದರೆ, ಮೆಲ್ಕಿಜೆದೇಕನು ಲೇವಿಯ ಮೂಲಪುರುಷನಾದ ಅಬ್ರಹಾಮನನ್ನು ಸಂಧಿಸಿದಾಗ ಲೇವಿಯು ತತ್ವರೂಪವಾಗಿ ಅಬ್ರಹಾಮನ ದೇಹದಲ್ಲಿದ್ದನು.
11 Якби досконалості можна було досягти через священство Левія (адже воно було частиною Закону, який був даний народу), то чому мав з’явитися інший Священник, за чином Мельхіседека, а не за чином Аарона?
೧೧ಇಸ್ರಾಯೇಲರಿಗೆ ಕೊಡಲಾದ ಧರ್ಮಶಾಸ್ತ್ರ ಲೇವಿಯರ ಯಾಜಕತ್ವದ ಮೇಲೆ ಆಧಾರಗೊಂಡಿದೆ. ಲೇವಿಯರ ಈ ಯಾಜಕತ್ವದಿಂದಲೇ ಸಂಪೂರ್ಣ ಸಿದ್ಧಿ ಪ್ರಾಪ್ತವಾಗುತ್ತಿದ್ದಾದರೆ, ಆರೋನನ ಪರಂಪರೆಗೆ ಸೇರದ, ಮೆಲ್ಕಿಜೆದೇಕನ ಪರಂಪರೆಗೆ ಸೇರಿದ ಬೇರೊಬ್ಬ ಯಾಜಕನು ಬರುವುದರ ಅಗತ್ಯವೇನಿತ್ತು?
12 Адже зі зміною священства має відбутися й зміна Закону.
೧೨ಯಾಜಕತ್ವವು ಬದಲಾಗುವುದಾದರೆ ಧರ್ಮಶಾಸ್ತ್ರವೂ ಸಹ ಬದಲಾಗುವುದು ಅಗತ್ಯವಾಗಿದೆ.
13 А Той, про Кого це говориться, належав до іншого племені, з якого ніхто не служив біля жертовника.
೧೩ಆದರೆ ಇವು ಯಾರ ಕುರಿತಾಗಿ ಹೇಳಲ್ಪಟ್ಟಿವೆಯೋ ಆತನು ಬೇರೊಂದು ಗೋತ್ರಕ್ಕೆ ಸೇರಿದವನು. ಆ ಗೋತ್ರದಿಂದ ಒಬ್ಬನೂ ಯಜ್ಞವೇದಿಯ ಬಳಿ ಸೇವೆಮಾಡಿದ್ದಿಲ್ಲ.
14 Адже відомо, що наш Господь походив від [племені] Юди, а Мойсей нічого не казав про те, що священники походитимуть із цього племені.
೧೪ನಮ್ಮ ಕರ್ತನು ಯೆಹೂದ ಗೋತ್ರದಲ್ಲಿ ಜನಿಸಿಬಂದವನೆಂಬುದು ಸ್ಪಷ್ಟವಾಗಿದೆ. ಈ ಗೋತ್ರಕ್ಕೆ ಸಂಬಂಧಿಸಿದಂತೆ ಮೋಶೆಯು ಯಾಜಕರ ಕುರಿತಾಗಿ ಏನನ್ನೂ ಹೇಳಲಿಲ್ಲ.
15 І це стає ще більш зрозумілим, коли постає інший Священник, подібний до Мельхіседека,
೧೫ಈ ಯಾಜಕನು ಶರೀರದ ಸಂಬಂಧಪಟ್ಟಿರುವ ನಿಯಮದ ಪ್ರಕಾರವಾಗಿರದೆ, ಲಯವಾಗದ ಜೀವಶಕ್ತಿಯ ಮೇರೆಗೆ, ಮೆಲ್ಕಿಜೆದೇಕನಂತೆ ಇನ್ನೊಬ್ಬ ಯಾಜಕನು ಎಳುತ್ತಾನೆಂಬುದಾದರೆ ಅದು ಇನ್ನೂ ಹೆಚ್ಚು ಸ್ಪಷ್ಟವಾಗಿ ವ್ಯಕ್ತವಾಗುತ್ತದಲ್ಲಾ.
16 Який став [Священником] не за Законом, на підставі тілесної заповіді, а на [основі] сили життя, що не спливає.
೧೬
17 Бо засвідчено: «Ти – Священник навіки за чином Мельхіседека». (aiōn )
೧೭ಆತನ ವಿಷಯದಲ್ಲಿ “ನೀನು ಸದಾಕಾಲಕ್ಕೂ ಮೆಲ್ಕಿಜೆದೇಕನ ತರಹದ ಯಾಜಕನೇ” ಎಂಬುದಾಗಿ ಧರ್ಮಶಾಸ್ತ್ರವು ಸಾಕ್ಷಿಕರಿಸುತ್ತದೆ. (aiōn )
18 Отже, попередня заповідь скасована, оскільки вона була слабкою і марною, –
೧೮ಯಾಕೆಂದರೆ ಮೊದಲಿದ್ದ ಆಜ್ಞೆಯು ದುರ್ಬಲವೂ, ನಿಷ್ಪ್ರಯೋಜಕವೂ ಆಗಿರುವ ಕಾರಣದಿಂದ ಅದು ರದ್ದಾಯಿತು.
19 бо Закон нічого не зробив досконалим, – тому вводиться краща надія, через яку ми наближаємося до Бога.
೧೯ಧರ್ಮಶಾಸ್ತ್ರವು ಯಾವುದನ್ನೂ ಪರಿಪೂರ್ಣ ಮಾಡುವುದಿಲ್ಲ. ಅದಕ್ಕೆ ಬದಲಾಗಿ ದೇವರ ಸಮೀಪಕ್ಕೆ ನಡೆಸಲ್ಪಡುವಂಥ ಉತ್ತಮವಾದ ಹೊಸ ನಿರೀಕ್ಷೆಯೊಂದು ಕೊಡಲ್ಪಟ್ಟಿದೆ.
20 Це сталося не без клятви. Інші стали священниками без клятви,
೨೦ಇದು ಪ್ರತಿಜ್ಞೆ ರಹಿತವಾದ್ದದು ಅಲ್ಲ. ಇದಲ್ಲದೆ ಲೇವಿಯರು ಪ್ರತಿಜ್ಞೆಯಿಲ್ಲದೆ ಯಾಜಕರಾದರು.
21 але Він – з клятвою через Того, Хто сказав Йому: «Поклявся Господь і не відмовиться: „Ти – Священник навіки за чином Мельхіседека“». (aiōn )
೨೧ಆತನಾದರೋ, ಪ್ರತಿಜ್ಞೆಯೊಡನೆ ಯಾಜಕನಾಗಿ ಮಾಡಲ್ಪಟ್ಟನು. ಆದರೆ ದೇವರು ಆತನಿಗೆ “‘ನೀನು ಸದಾಕಾಲವೂ ಯಾಜಕನಾಗಿದ್ದೀ’ ಎಂದು ನಾನು ಪ್ರಮಾಣಮಾಡಿ ನುಡಿದಿದ್ದೇನೆ ಮತ್ತು ತನ್ನ ಮನಸ್ಸನ್ನು ಬದಲಾಯಿಸುವುದಿಲ್ಲ” ಎಂಬುದಾಗಿ ಹೇಳಿದ್ದಾನೆ. (aiōn )
22 Тому Ісус і став запорукою кращого завіту.
೨೨ಯೇಸು ಪ್ರತಿಜ್ಞೆಯೊಡನೆಯೇ ಎಷ್ಟೋ ಶ್ರೇಷ್ಠವಾದ ಒಡಂಬಡಿಕೆಗೆ ಆಧಾರನಾದನು.
23 До того ж тих священників було багато, бо смерть заважала їм продовжувати своє [служіння, ]
೨೩ಲೇವಿಯರು ಶಾಶ್ವತವಾಗಿ ಉದ್ಯೋಗನಡಿಸುವುದಕ್ಕೆ ಮರಣವು ಅಡ್ಡಿಯಾಗಿರುವುದರಿಂದ ಅವರಲ್ಲಿ ಅನೇಕರು ಯಾಜಕರಾದರು.
24 але оскільки [Ісус] живе вічно, Він має незмінне священство. (aiōn )
೨೪ಆತನಾದರೋ ಸದಾಕಾಲ ಜೀವಿಸುವುದರಿಂದ ಆತನ ಯಾಜಕತ್ವವನ್ನು ಶಾಶ್ವತವಾದ್ದದು. (aiōn )
25 Тому Він цілком здатний спасти тих, хто через Нього приходить до Бога, бо Він вічно живий, щоб заступатися за них.
೨೫ಆದಕಾರಣ ಆತನು ತನ್ನ ಮೂಲಕ ದೇವರ ಬಳಿಗೆ ಬರುವವರನ್ನು ಸಂಪೂರ್ಣವಾಗಿ ರಕ್ಷಿಸುವುದಕ್ಕೆ ಶಕ್ತನಾಗಿದ್ದಾನೆ. ಯಾಕೆಂದರೆ ಅವರಿಗೋಸ್ಕರ ವಿಜ್ಞಾಪನೆ ಮಾಡುವುದಕ್ಕೆ ಯಾವಾಗಲೂ ಬದುಕುವವನಾಗಿದ್ದಾನೆ.
26 Саме такий Первосвященник нам потрібен: святий, бездоганний, чистий, відокремлений від грішників, піднесений над небом.
೨೬ಇಂಥವನೇ ನಮಗೆ ಬೇಕಾಗಿರುವ ಮಹಾಯಾಜಕನು, ಈತನು ಪರಿಶುದ್ಧನೂ, ನಿರ್ದೋಷಿಯೂ, ನಿಷ್ಕಳಂಕನೂ, ಪಾಪಿಗಳಲ್ಲಿ ಸೇರದೆ ಪ್ರತ್ಯೇಕವಾಗಿರುವವನು, ಆಕಾಶಮಂಡಲಗಳಿಗಿಂತ ಉನ್ನತದಲ್ಲಿರುವವನೂ ಆಗಿರುವನು.
27 На відміну від інших первосвященників, Йому не потрібно щодня приносити жертви, спершу за власні гріхи, а потім за гріхи людей. Він це зробив раз і назавжди, коли Сам Себе приніс у [жертву].
೨೭ಮೊದಲು ತಮ್ಮ ಪಾಪಪರಿಹಾರಕ್ಕಾಗಿ ಆ ಮೇಲೆ ಜನರ ಪಾಪಪರಿಹಾರಕ್ಕಾಗಿ ಯಜ್ಞ ಸಮರ್ಪಣೆಮಾಡುವ ಲೇವಿ ಮಹಾಯಾಜಕರಂತೆ ಈತನು ಪ್ರತಿದಿನವೂ ಯಜ್ಞಗಳನ್ನು ಸಮರ್ಪಿಸಬೇಕಾದ ಅವಶ್ಯವಿಲ್ಲ. ಏಕೆಂದರೆ ಈತನು ತನ್ನನ್ನು ತಾನೇ ಸಮರ್ಪಿಸಿಕೊಂಡು ಒಂದೇ ಸಾರಿ ಆ ಕೆಲಸವನ್ನು ಮಾಡಿ ಮುಗಿಸಿದನು.
28 Адже Закон призначає первосвященниками людей у всій їхній слабкості; однак клятва, яка прийшла після Закону, призначила [Первосвященником] Сина, досконалого навіки. (aiōn )
೨೮ಧರ್ಮಶಾಸ್ತ್ರವು ದುರ್ಬಲರಾದ ಮನುಷ್ಯರನ್ನು ಮಹಾಯಾಜಕರನ್ನಾಗಿ ನೇಮಕ ಮಾಡುತ್ತದೆ. ಆದರೆ ಧರ್ಮಶಾಸ್ತ್ರದ ತರುವಾಯ ಪ್ರತಿಜ್ಞೆಯೊಡನೆ ಬಂದ ವಾಕ್ಯವು ಸದಾಕಾಲಕ್ಕೂ ಸರ್ವಸಂಪೂರ್ಣನಾಗಿರುವ ಮಗನನ್ನೇ ಯಾಜಕನನ್ನಾಗಿ ನೇಮಕ ಮಾಡಿದೆ. (aiōn )