< Yosua 23 >
1 Mfeɛ bebree twaam a Awurade maa Israelfoɔ no ahotɔ a wɔn atamfoɔ no mu biara anha wɔn bio. Yosua a afei na wanyini yie no
೧ಯೆಹೋವನು ಸುತ್ತಮುತ್ತಲಿನ ಶತ್ರುಗಳನ್ನು ನಿರ್ಮೂಲಮಾಡಿ ಇಸ್ರಾಯೇಲ್ಯರಿಗೆ ವಿಶ್ರಾಂತಿ ಕೊಟ್ಟನು. ತರುವಾಯ ಬಹು ದಿನಗಳಾದ ಮೇಲೆ ಯೆಹೋಶುವನು ದಿನತುಂಬಿದ ಮುದುಕನಾದನು.
2 frɛɛ mpanimfoɔ, ntuanofoɔ, atemmufoɔ ne adwumayɛfoɔ a wɔwɔ Israel nyinaa. Ɔka kyerɛɛ wɔn sɛ, “Seesei, mabɔ akɔkoraa.
೨ಆತನು ಇಸ್ರಾಯೇಲ್ಯರ ಹಿರಿಯ ಪ್ರಭುಗಳು, ನ್ಯಾಯಾಧಿಪತಿಗಳು, ಅಧಿಕಾರಿಗಳು ಅಲ್ಲದೆ ಎಲ್ಲಾ ಇಸ್ರಾಯೇಲರ ಜನರನ್ನು ತನ್ನ ಬಳಿಗೆ ಕರಿಸಿ ಅವರಿಗೆ, “ನಾನು ದಿನತುಂಬಿದ ಮುದುಕನಾಗಿದ್ದೇನೆ.
3 Moahunu biribiara a Awurade, mo Onyankopɔn ayɛ ama mo me nkwa nna yi mu. Awurade, mo Onyankopɔn ako atia mo atamfoɔ.
೩ನಿಮ್ಮ ದೇವರಾದ ಯೆಹೋವನು ನಿಮಗೋಸ್ಕರ ಜನಾಂಗಗಳಿಗೆ ಮಾಡಿದೆಲ್ಲವನ್ನೂ ನೀವೆಲ್ಲರೂ ನೋಡಿದ್ದೀರಷ್ಟೇ. ಹೌದು, ನಿಮಗಾಗಿ ಯುದ್ಧ ಮಾಡಿದಾತನು ನಿಮ್ಮ ದೇವರಾದ ಯೆಹೋವನೇ.
4 Mede amanaman no nsase a yɛnnya nnii soɔ ne deɛ yɛadi soɔ ama mo sɛ mo agyapadeɛ, ɛfiri Asubɔnten Yordan kɔsi Ɛpo Kɛseɛ a ɛwɔ atɔeɛ fam no.
೪ನಾನು ಯೊರ್ದನಿನಿಂದ ಪಶ್ಚಿಮದ ಸಮುದ್ರದವರೆಗೂ ಇರುವ ಜನಾಂಗಗಳಲ್ಲಿ ಸತ್ತವರ ಮತ್ತು ಉಳಿದಿರುವವರ ದೇಶವನ್ನು ನಿಮಗೆ ಸ್ವತ್ತಾಗಿ ಕೊಟ್ಟಿದ್ದೇನೆ.
5 Saa asase yi bɛyɛ mo dea, ɛfiri sɛ, Awurade, mo Onyankopɔn bɛpamo nnipa a wɔtete so seesei no nyinaa. Mobɛsi wɔn anan mu atena hɔ, sɛdeɛ Awurade, mo Onyankopɔn hyɛɛ mo bɔ no.
೫ನಿಮ್ಮ ದೇವರಾದ ಯೆಹೋವನು ತಾನೇ ಅವರನ್ನು ನಿಮ್ಮ ಕಣ್ಣೆದುರಿನಲ್ಲಿ ಹೊರಡಿಸಿಬಿಡುವನು. ಆತನ ವಾಗ್ದಾನದಂತೆ ಅವರ ದೇಶವನ್ನು ನೀವು ಸ್ವಂತ ಮಾಡಿಕೊಳ್ಳುವಿರಿ.
6 “Enti, monyɛ den! Monhwɛ na monni nkyerɛkyerɛ a wɔatwerɛ wɔ Mose Mmara Nwoma no mu no so pɛpɛɛpɛ. Monntwe mo ho mfiri ho kwan biara so.
೬ಮೋಶೆಯ ಧರ್ಮಶಾಸ್ತ್ರವಿಧಿಗಳನ್ನೆಲ್ಲಾ ಸ್ಥಿರಚಿತ್ತದಿಂದ ಕೈಕೊಳ್ಳಿರಿ. ಅದನ್ನು ಬಿಟ್ಟು ಎಡಕ್ಕಾಗಲಿ ಬಲಕ್ಕಾಗಲಿ ತಿರುಗಬೇಡಿರಿ.
7 Monhwɛ yie sɛ mo ne nnipa foforɔ a wɔda so te asase no so no nnya ayɔnkofa biara. Mpo, mommmɔ wɔn anyame din na moabɔ wɔn din aka ntam anaasɛ moasom wɔn.
೭ಉಳಿದಿರುವ ಈ ಅನ್ಯಜನಾಂಗಗಳ ಜೊತೆಯಲ್ಲಿ ಇಜ್ಜೋಡಾಗಬೇಡಿರಿ. ಅವರ ದೇವತೆಗಳ ಹೆಸರನ್ನು ಹೇಳಿ ಆರಾಧಿಸಲೂ ಬಾರದು ಪ್ರಮಾಣಮಾಡಲೂ ಬಾರದು. ಅವುಗಳಿಗೆ ಅಡ್ಡ ಬಿದ್ದು ಸೇವಿಸಲೂ ಬಾರದು.
8 Na monni Awurade, mo Onyankopɔn no nokorɛ sɛdeɛ moayɛ abɛsi ɛnnɛ yi.
೮ಈವರೆಗೆ ಹೇಗೊ ಹಾಗೆಯೇ ಇನ್ನು ಮುಂದೆಯೂ ನಿಮ್ಮ ದೇವರಾದ ಯೆಹೋವನನ್ನೇ ಆತುಕೊಂಡಿರಿ.
9 “Ɛfiri sɛ, Awurade apamo amanaman akɛseɛ a wɔyɛ dene ama mo, enti obiara nni hɔ a watumi adi mo so nkonim.
೯ಯೆಹೋವನು ಮಹಾಪರಾಕ್ರಮಿಗಳಾದ ಜನಾಂಗಗಳನ್ನು ನಿಮ್ಮೆದುರಿನಿಂದ ಓಡಿಸಿಬಿಟ್ಟಿದ್ದಾನೆ. ನಿಮ್ಮ ಮುಂದೆ ಈವರೆಗೂ ಒಬ್ಬನೂ ತಲೆಯೆತ್ತಿ ನಿಲ್ಲಲಿಲ್ಲವಲ್ಲಾ.
10 Mo mu biara bɛtumi atu atamfoɔ apem agu, ɛfiri sɛ, Awurade, mo Onyankopɔn ko ma mo sɛdeɛ wahyɛ bɔ no.
೧೦ನಿಮ್ಮ ದೇವರಾದ ಯೆಹೋವನು ತನ್ನ ವಾಗ್ದಾನದಂತೆ ನಿಮಗೋಸ್ಕರ ಯುದ್ಧ ಮಾಡಿದ್ದರಿಂದ ನಿಮ್ಮಲ್ಲಿ ಒಬ್ಬನು ಸಾವಿರ ಜನರನ್ನು ಓಡಿಸುವುದಕ್ಕೆ ಶಕ್ತನಾದನು.
11 Enti, monhwɛ yie na monnɔ Awurade, mo Onyankopɔn no.
೧೧ಹೀಗಿರುವುದರಿಂದ ನಿಮ್ಮ ನಿಮ್ಮ ಮನಸ್ಸುಗಳನ್ನು ಬಹು ಜಾಗರೂಕತೆಯಿಂದ ಕಾಪಾಡಿಕೊಂಡು ನಿಮ್ಮ ದೇವರಾದ ಯೆಹೋವನನ್ನೇ ಪ್ರೀತಿಸಿರಿ.
12 “Nanso sɛ motwe mo ho firi ne ho, na mone saa amanaman yi nkaeɛfoɔ a wɔwɔ mo mu yi di awadeɛ a,
೧೨ನೀವು ದೇವರಿಗೆ ವಿಮುಖರಾಗಿ ನಿಮ್ಮ ಮಧ್ಯದಲ್ಲಿ ಉಳಿದಿರುವ ಈ ಜನಾಂಗಗಳೊಡನೆ ಸೇರಿಕೊಂಡು ಅವರೊಂದಿಗೆ ಗಂಡು ಹೆಣ್ಣು ಕೊಟ್ಟು ತಂದು ಸಂಬಂಧವನ್ನಿಟ್ಟುಕೊಂಡರೆ,
13 ɛnneɛ akyinnyeɛ biara nni ho sɛ Awurade, mo Onyankopɔn rempamo wɔn mfiri mo asase so. Mmom, wɔbɛyɛ afidie ama mo, ɔyea wɔ mo mfe mu ne kasɛɛ a ɛhyɛ mo aniwa mu, na wɔbɛtɔre mo ase afiri asase pa yi a Awurade, mo Onyankopɔn de ama mo yi so.
೧೩ನಿಮ್ಮ ದೇವರಾದ ಯೆಹೋವನು ಅವರನ್ನು ನಿಮ್ಮ ಎದುರಿನಿಂದ ಹೊರಡಿಸುವುದೇ ಇಲ್ಲವೆಂದು ತಿಳಿದುಕೊಳ್ಳಿರಿ. ಅವರೇ ನಿಮಗೆ ಉರುಲೂ ಬೋನೂ ಆಗಿರುವರು. ಅವರು ಪಕ್ಕೆಗೆ ಹೊಡೆಯುವ ಕೊರಡೆಯಂತೆಯೂ ಕಣ್ಣಿಗೆ ಚುಚ್ಚುವ ಮುಳ್ಳಿನಂತೆಯೂ ಇರುವರು. ಕಡೆಯಲ್ಲಿ ನಿಮ್ಮ ದೇವರಾದ ಯೆಹೋವನು ನಿಮಗೆ ಕೊಟ್ಟ ಈ ಉತ್ತಮ ದೇಶದಲ್ಲಿ ನೀವು ಇಲ್ಲದಂತಾಗುವಿರಿ.
14 “Ɛrenkyɛre biara mɛwu, sɛdeɛ obiara korɔ no. Mo akoma mu no monim sɛ ɛbɔ biara a Awurade, mo Onyankopɔn hyɛeɛ no aba mu. Bɔhyɛ no mu biara nni hɔ a amma mu!
೧೪ಭೂಲೋಕದವರೆಲ್ಲರೂ ಹೋಗುವ ಮಾರ್ಗವನ್ನು ನಾನು ಈಗ ಅನುಸರಿಸಬೇಕಾಗಿದೆ. ನಿಮ್ಮ ದೇವರಾದ ಯೆಹೋವನು ನಿಮ್ಮ ವಿಷಯದಲ್ಲಿ ನುಡಿದ ಆಶೀರ್ವಾದದ ವಚನಗಳಲ್ಲಿ ಒಂದೂ ವ್ಯರ್ಥವಾಗಲಿಲ್ಲ. ಎಲ್ಲವೂ ತಪ್ಪದೆ ನೆರವೇರಿದೆ ಎಂಬುದು ನಿಮಗೆ ಮನದಟ್ಟಾಗಿದೆಯಲ್ಲ.
15 Nanso, sɛdeɛ Awurade, mo Onyankopɔn de nnepa a ɔhyɛɛ ho bɔ maa mo no, saa ara na sɛ moannyɛ ɔsetie amma no a ɔde amanehunu bɛba mo so. Ɔbɛpra mo afiri saa asase pa a ɔde ama mo yi so.
೧೫ನಿಮ್ಮ ದೇವರಾದ ಯೆಹೋವನು ತನ್ನ ವಾಗ್ದಾನಕ್ಕನುಸಾರವಾಗಿ ಈಗ ನಿಮಗೆ ಎಲ್ಲಾ ತರದ ಮೇಲನ್ನು ಅನುಗ್ರಹಿಸಿದಂತೆಯೇ ನಿಮ್ಮ ಮೇಲೆ ಸಕಲ ವಿಧವಾದ ಕೇಡುಗಳನ್ನು ಬರಮಾಡಿ, ತಾನು ಕೊಟ್ಟಿರುವ ಈ ಉತ್ತಮ ದೇಶದಿಂದ ನಿಮ್ಮನ್ನು ತೆಗೆದು ನಾಶಮಾಡಿಬಿಡುವನು.
16 Sɛ mobu Awurade, mo Onyankopɔn apam no so na mosɔre anaa mosom anyame foforɔ a, nʼabufuo bɛhye mo na ɔbɛpra mo ntɛm so afiri asase pa a ɔde ama mo no so.”
೧೬ನಿಮ್ಮ ದೇವರಾದ ಯೆಹೋವನ ನಿಬಂಧನೆಯನ್ನು ಮೀರಿ ಅನ್ಯದೇವತೆಗಳಿಗೆ ಅಡ್ಡಬಿದ್ದು ಸೇವಿಸಿದರೆ ಯೆಹೋವನ ಕೋಪಾಗ್ನಿಯು ನಿಮ್ಮ ಮೇಲೆ ಉರಿಯುವುದು ಮತ್ತು ಆತನು ಕೊಟ್ಟ ಒಳ್ಳೆಯ ದೇಶದಿಂದ ನೀವು ತೆಗೆದುಹಾಕಲ್ಪಟ್ಟು ಬೇಗನೆ ನಾಶವಾದೀರಿ” ಎಂದನು.