< Yeremia 18 >

1 Yei ne Awurade asɛm a ɛbaa Yeremia nkyɛn.
ಯೆಹೋವನು ಯೆರೆಮೀಯನಿಗೆ,
2 “Kɔ ɔnwomfoɔ no efie, na ɛhɔ na mede mʼasɛm no bɛma wo.”
“ನೀನೆದ್ದು ಕುಂಬಾರನ ಮನೆಗೆ ಇಳಿದುಹೋಗು; ಅಲ್ಲೇ ನನ್ನ ನುಡಿಯನ್ನು ನಿನಗೆ ಕೇಳಮಾಡುವೆನು” ಎಂಬ ಮಾತನ್ನು ದಯಪಾಲಿಸಿದನು.
3 Ɛno enti, mekɔɔ ɔnwomfoɔ no efie na mehunuu no sɛ, ɔreyɛ adwuma wɔ ne ntwahodeɛ so.
ಆಗ ನಾನು ಕುಂಬಾರನ ಮನೆಗೆ ಇಳಿದು ಹೋದೆನು; ಇಗೋ, ಅವನು ಚಕ್ರದ ಮೇಲೆ ತನ್ನ ಕೆಲಸವನ್ನು ನಡೆಸುತ್ತಿದ್ದನು.
4 Nanso kukuo a na ɔde dɔteɛ no reyɛ ho adwuma no sɛeɛ wɔ ne nsa mu; ɛno enti ɔnwomfoɔ no yɛɛ kukuo foforɔ, sɛdeɛ ɛyɛ pa ara ma no.
ಆ ಕುಂಬಾರನು ಜೇಡಿಮಣ್ಣಿನಿಂದ ಮಾಡುತ್ತಿದ್ದ ಪಾತ್ರೆಯು ಅವನ ಕೈಯಲ್ಲಿ ಕೆಟ್ಟುಹೋಗಲು ಅವನು ಪುನಃ ತನಗೆ ಸರಿತೋಚಿದ ಹಾಗೆ ಅದನ್ನು ಹೊಸ ಪಾತ್ರೆಯನ್ನಾಗಿ ಮಾಡಿದನು.
5 Afei, Awurade asɛm baa me nkyɛn sɛ:
ಆಗ ಯೆಹೋವನು ನನಗೆ ಈ ಮಾತನ್ನು ಅನುಗ್ರಹಿಸಿದನು,
6 “Ao, Israel fiefoɔ, merentumi nyɛ mo sɛdeɛ ɔnwomfoɔ yi yɛ anaa?” Awurade na ɔseɛ. “Sɛdeɛ dɔteɛ teɛ wɔ ɔnwomfoɔ nsa mu no, saa ara na moteɛ wɔ me nsa mu, Ao Israel fiefoɔ.
“ಯೆಹೋವನು ಹೀಗೆನ್ನುತ್ತಾನೆ, ಇಸ್ರಾಯೇಲ್ ವಂಶದವರೇ, ಈ ಕುಂಬಾರನು ಮಾಡಿದಂತೆ ನಾನು ನಿಮ್ಮನ್ನು ಮಾಡಬಾರದೋ? ಇಸ್ರಾಯೇಲ್ ಮನೆತನದವರೇ, ಜೇಡಿಮಣ್ಣು ಕುಂಬಾರನ ಕೈಯಲ್ಲಿ ಹೇಗೋ, ಹಾಗೆಯೇ, ನೀವು ನನ್ನ ಕೈಯಲ್ಲಿದ್ದೀರಿ.
7 Sɛ ɛberɛ biara meka sɛ ɛsɛ sɛ wɔtutu ɔman bi anaa ahennie bi ase, dwerɛ wɔn, sɛe wɔn a,
ನಾನು ಒಂದು ವೇಳೆ ಒಂದು ಜನಾಂಗವನ್ನಾಗಲಿ ಅಥವಾ ರಾಜ್ಯವನ್ನಾಗಲಿ ಕಿತ್ತು, ಕೆಡವಿ ನಾಶಪಡಿಸಬೇಕೆಂದು ಅಪ್ಪಣೆಕೊಟ್ಟಾಗ,
8 na sɛ ɔman a mebɔɔ no kɔkɔ no sakra firi ne bɔne ho a, mɛsesa mʼadwene na meremfa amanehunu a mesusuiɛ sɛ me de bɛba wɔn so mma bio.
ನಾನು ದಂಡನೆಯನ್ನು ನಿರ್ಣಯಿಸಿದ ಆ ಜನಾಂಗದವರು ತಮ್ಮ ಕೆಟ್ಟತನದಿಂದ ತಿರುಗಿಕೊಂಡರೆ, ನಾನು ಮಾಡಬೇಕೆಂದಿದ್ದ ಕೇಡನ್ನು ಮನಮರುಗಿ ಮಾಡದಿರುವೆನು.
9 Na sɛ mmerɛ foforɔ bi meka sɛ, ɛsɛ sɛ wɔkyekyere ɔman anaa ahennie bi gye no si hɔ,
ನಾನು ಒಂದು ವೇಳೆ ಒಂದು ಜನಾಂಗವನ್ನಾಗಲಿ ಅಥವಾ ರಾಜ್ಯವನ್ನಾಗಲಿ ನೆಟ್ಟು ಕಟ್ಟಬೇಕೆಂದು ಅಪ್ಪಣೆಕೊಟ್ಟಾಗ,
10 na sɛ ɔyɛ bɔne wɔ mʼani so na wanyɛ ɔsetie amma me a, ɛnneɛ mesane adwene papa a mepɛɛ sɛ meyɛ noɔ no ho.
೧೦ಅದು ನನ್ನ ಮಾತನ್ನು ಕೇಳದೆ, ನನ್ನ ದೃಷ್ಟಿಯಲ್ಲಿ ಕೆಟ್ಟತನವನ್ನು ಮಾಡಿದರೆ ನಾನು ಮನಸ್ಸನ್ನು ಬದಲಾಯಿಸಿಕೊಂಡು ಅದಕ್ಕೆ ಮಾಡಬೇಕೆಂದಿದ್ದ ಮೇಲನ್ನು ಮಾಡದೆ ಇರುವೆನು.
11 “Na afei ka kyerɛ Yudafoɔ ne wɔn a wɔtete Yerusalem sɛ, ‘Yei ne deɛ Awurade seɛ: Hwɛ! Mede amanehunu reba mo so, na mereyɛ nhyehyɛeɛ a ɛtia mo. Ɛno enti mo mu biara nnane mfiri nʼakwammɔne so na monsiesie mo akwan ne mo nneyɛɛ.’
೧೧ಈಗ ನೀನು ಯೆಹೂದ್ಯರಿಗೂ ಯೆರೂಸಲೇಮಿನವರಿಗೂ ಯೆಹೋವನು ಹೀಗೆನ್ನುತ್ತಾನೆ, ‘ಆಹಾ, ನಾನು ನಿಮ್ಮ ವಿರುದ್ಧವಾಗಿ ಯೋಚಿಸಿ, ಕೇಡನ್ನು ಕಲ್ಪಿಸುತ್ತಿದ್ದೇನೆ; ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ತನ್ನ ದುರ್ಮಾರ್ಗದಿಂದ ಹಿಂದಿರುಗಲಿ, ನಡತೆಯನ್ನೂ ಕೃತ್ಯಗಳನ್ನೂ ಸರಿಪಡಿಸಿಕೊಳ್ಳಲಿ’ ಎಂಬ ಮಾತನ್ನು ಹೇಳು.
12 Nanso wɔbɛbua sɛ, ‘Ɛho nni mfasoɔ. Yɛbɛkɔ so adi yɛn ara yɛn nhyehyɛeɛ so; yɛn mu biara bɛyɛ asoɔden a ɛfiri nʼakoma bɔne mu.’”
೧೨ಅವರೋ, ‘ಏನೂ ನಿರೀಕ್ಷೆಯಿಲ್ಲ; ನಮ್ಮ ಆಲೋಚನೆಗಳಿಗೆ ತಕ್ಕಂತೆ ನಡೆಯುವೆವು, ನಮ್ಮಲ್ಲಿ ಪ್ರತಿಯೊಬ್ಬರೂ ನಮ್ಮ ನಮ್ಮ ದುಷ್ಟ ಹೃದಯದ ಹಾಗೆ ಮಾಡುವೆವು’ ಎಂದು ಹೇಳುತ್ತಾರೆ.”
13 Ɛno enti deɛ Awurade seɛ nie, “Mommisa wɔ amanaman no mu sɛ, hwan na wate biribi sɛi pɛn? Ɔbaabunu Israel ayɛ adeɛ bi a ɛyɛ hu yie.
೧೩ಹೀಗಿರಲು ಯೆಹೋವನು ಹೀಗೆನ್ನುತ್ತಾನೆ, “ಜನಾಂಗಗಳಲ್ಲಿ ವಿಚಾರಿಸಿರಿ, ಇಂಥಾ ಸುದ್ದಿಯನ್ನು ಯಾರು ಕೇಳಿದ್ದಾರೆ? ಇಸ್ರಾಯೇಲೆಂಬ ಯುವತಿಯು ಕೇವಲ ಅಸಹ್ಯಕಾರ್ಯವನ್ನು ಮಾಡಿದ್ದಾಳೆ.
14 Sukyerɛmma a ɛwɔ Lebanon nane firi nsaneɛ mu abotan no so anaa? Nsuo wiridudu a nʼatifi wɔ akyirikyiri gyae sene anaa?
೧೪ಲೆಬನೋನಿನ ಹಿಮವು ಅರಣ್ಯದ ಶಿಖರದಿಂದ ತಪ್ಪುವುದೇ? ದೂರದಿಂದ ಇಳಿದು ಹರಿಯುವ ತೊರೆಯ ನೀರು ಬತ್ತುವುದೇ?
15 Nanso, me nkurɔfoɔ werɛ afiri me. Wɔhye nnuhwam ma ahoni huhuo, a ɛma wɔn suntisunti wɔ wɔn akwan so ne tete atempɔn so. Wɔma wɔfa akwan nkyɛn ne akwan a wɔmmɔeɛ so.
೧೫ನನ್ನ ಜನರೋ ನನ್ನನ್ನು ಮರೆತು ವ್ಯರ್ಥ ವಿಗ್ರಹಗಳಿಗೆ ಧೂಪಹಾಕಿದ್ದಾರಲ್ಲಾ; ಅವು ಪುರಾತನ ಪದ್ಧತಿಯಾದ ಅವರ ಮಾರ್ಗಗಳಲ್ಲಿ ಅವರು ಮುಗ್ಗರಿಸುವಂತೆಯೂ, ಸರಿಯಲ್ಲದ ಸೀಳು ದಾರಿಗಳಲ್ಲಿ ಅಲೆಯುವಂತೆಯೂ ಮಾಡಿವೆ.
16 Wɔn asase bɛda mpan, na ayɛ adeɛ a wɔbɛbu no animtia daa; wɔn a wɔtwam hɔ no ho bɛdwiri wɔn na wɔbɛwosowoso wɔn ti.
೧೬ಆದಕಾರಣ ಬೆರಗಿನ ಸಿಳ್ಳಿಗೆ ಅವರ ದೇಶವು ನಿತ್ಯ ಗುರಿಯಾಗುವುದು; ಹಾದುಹೋಗುವವರೆಲ್ಲರೂ ಬೆರಗಾಗಿ ತಲೆದೂಗುವರು.
17 Mɛbɔ wɔn ahwete wɔ wɔn atamfoɔ anim te sɛ deɛ apueeɛ mframa yɛ no. Mɛdane mʼakyi akyerɛ wɔn, na ɛnyɛ mʼanim, wɔ wɔn amanehunu da no.”
೧೭ಶತ್ರುಗಳು ಮೇಲೆ ಬಿದ್ದಾಗ ನನ್ನ ಜನರನ್ನು ಮೂಡಣ ಗಾಳಿಯಿಂದಲೋ ಎಂಬಂತೆ ದಿಕ್ಕಾಪಾಲು ಮಾಡುವೆನು. ಅವರ ವಿಪತ್ತಿನ ದಿನದಲ್ಲಿ ಅವರ ಕಡೆಗೆ ಮುಖತಿರುಗಿಸದೆ ಬೆನ್ನು ಮಾಡುವೆನು.”
18 Wɔkaa sɛ, “Mommra mma yɛmfa adwene ntia Yeremia; yɛremma asɔfoɔ no anaa anyansafoɔ no anaa adiyifoɔ no nkyerɛkyerɛ no nyera. Mommra na yɛntu yɛn ano ngu ne so a yɛnntie deɛ ɔbɛka biara.”
೧೮ಆಗ ಅವರು, “ಯೆರೆಮೀಯನ ವಿರುದ್ಧವಾಗಿ ಒಳಸಂಚು ಮಾಡೋಣ ಬನ್ನಿರಿ; ಧರ್ಮೋಪದೇಶವು ಯಾಜಕನಿಂದ, ಮಂತ್ರಾಲೋಚನೆಯು ಜ್ಞಾನಿಯಿಂದ, ದೈವೋಕ್ತಿಯು ಪ್ರವಾದಿಯಿಂದ ಬಂದ ವಿಷಯ ಎಂದಿಗೂ ತಪ್ಪದು. ಬನ್ನಿರಿ, ಅವನನ್ನು ಬಾಯಿಂದ ಬಡಿಯೋಣ, ಅವನ ಯಾವ ಮಾತಿಗೂ ಕಿವಿಗೊಡದಿರುವ” ಎಂದುಕೊಂಡರು.
19 Yɛ aso ma me, Ao, Awurade; tie deɛ wɔn a wɔpam me tiri so reka!
೧೯ಯೆಹೋವನೇ, ನನ್ನ ಕಡೆಗೆ ಕಿವಿಗೊಡು, ನನ್ನೊಡನೆ ವ್ಯಾಜ್ಯವಾಡುವವರ ಮಾತನ್ನು ಕೇಳು.
20 Ɛsɛ sɛ wɔde bɔne tua papa so ka anaa? Nanso wɔatu amena ama me. Kae sɛ megyinaa wʼanim na mekasa maa wɔn sɛdeɛ wobɛyi wʼabufuhyeɛ afiri wɔn so.
೨೦ಒಳ್ಳೆಯದನ್ನು ಮಾಡಿದ್ದಕ್ಕೆ ಕೇಡಿನ ಪ್ರತಿಫಲ ಅಗತ್ಯವೇ? ನನ್ನ ಪ್ರಾಣವನ್ನು ಹಿಡಿಯಬೇಕೆಂದು ಗುಂಡಿಯನ್ನು ತೋಡಿದ್ದಾರಲ್ಲಾ. ಅವರ ಮೇಲಣ ನಿನ್ನ ರೋಷವನ್ನು ತಪ್ಪಿಸಲು ನಾನು ನಿನ್ನ ಮುಂದೆ ನಿಂತುಕೊಂಡು ಅವರ ಹಿತಕ್ಕಾಗಿ ವಿಜ್ಞಾಪಿಸಿಕೊಂಡದ್ದನ್ನು ನೆನಪಿಗೆ ತಂದುಕೋ.
21 Ɛno enti, ma ɛkɔm nne wɔn mma; yi wɔn ma akofena. Ma wɔn yerenom nyɛ abonini ne akunafoɔ; ma wɔnkunkum wɔn mmarima na wɔmfa akofena nkunkum wɔn mmeranteɛ wɔ ɔko mu.
೨೧ಆದಕಾರಣ ಅವರ ಮಕ್ಕಳನ್ನು ಕ್ಷಾಮಕ್ಕೆ ಗುರಿಮಾಡಿ, ಕತ್ತಿಯ ಬಾಯಿಗೆ ಒಪ್ಪಿಸು; ಅವರ ಹೆಂಡತಿಯರು ಮಕ್ಕಳ್ಳಿಲ್ಲದವರಾಗಿಯೂ, ವಿಧವೆಯರಾಗಿಯೂ ಇರಲಿ; ಮೃತ್ಯುವು ಅವರ ಗಂಡಂದಿರನ್ನು ಸಂಹರಿಸಲಿ. ಯುದ್ಧದಲ್ಲಿ ಖಡ್ಗವು ಅವರ ಯುವಕರನ್ನು ವಧಿಸಲಿ.
22 Ma wɔnte osu wɔ wɔn afie mu ɛberɛ a atamfoɔ atu wɔn so sa mpofirim, ɛfiri sɛ, wɔatu amena ama me, na wɔasumsum me nan mfidie.
೨೨ಸುಲಿಗೆಯವರ ಗುಂಪನ್ನು ಫಕ್ಕನೆ ಅವರ ಮೇಲೆ ಬೀಳಮಾಡು, ಅವರ ಮನೆಗಳೊಳಗಿಂದ ಅರಚಾಟವು ಕೇಳಿಸಲಿ. ಅವರು ನನ್ನನ್ನು ಹಿಡಿಯಲಿಕ್ಕೆ ಗುಂಡಿಯನ್ನು ತೋಡಿ, ನನ್ನ ಕಾಲುಗಳಿಗೆ ಪಾಶಗಳನ್ನು ಗುಪ್ತವಾಗಿ ಒಡ್ಡಿದ್ದಾರೆ.
23 Nanso wonim Ao, Awurade, ɛpɔ a wɔabɔ nyinaa sɛ wɔbɛkum me. Mfa wɔn nsɛmmɔne nkyɛ wɔn, na nyi wʼani mfiri wɔn bɔne so. Ma wɔnni nkoguo wɔ wʼanim; na wo ne wɔn nni wɔ wʼabofuo mu.
೨೩ಯೆಹೋವನೇ, ನನ್ನನ್ನು ಕೊಲ್ಲಬೇಕೆಂದು ಅವರು ಮಾಡಿಕೊಂಡಿರುವ ಆಲೋಚನೆಯನ್ನೆಲ್ಲಾ ನೀನೇ ಬಲ್ಲೆ. ಅವರ ಅಪರಾಧವನ್ನು ಕ್ಷಮಿಸಬೇಡ, ಅವರ ಪಾಪವನ್ನು ಅಳಿಸದಿರು, ಅದು ನಿನ್ನ ಕಣ್ಣೆದುರಿಗಿರಲಿ. ಅವರು ನಿನ್ನ ಮುಂದೆ ಕೆಡವಲ್ಪಡಲಿ; ನಿನ್ನ ಕೋಪವನ್ನು ವ್ಯಕ್ತಪಡಿಸುವಾಗ ಅವರಿಗೆ ತಕ್ಕದ್ದನ್ನು ಮಾಡು.

< Yeremia 18 >