< 2 Mose 12 >
1 Ɛberɛ a na Mose ne Aaron da so wɔ Misraim asase so no, Awurade ka kyerɛɛ wɔn sɛ,
೧ಐಗುಪ್ತ ದೇಶದಲ್ಲಿ ಯೆಹೋವನು ಮೋಶೆ ಮತ್ತು ಆರೋನರ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,
2 “Ɛfiri ɛnnɛ rekorɔ, bosome yi bɛyɛ bosome a ɛdi ɛkan wɔ Yudafoɔ asranna so.
೨“ಎಲ್ಲಾ ತಿಂಗಳುಗಳಲ್ಲಿ ಇದೇ ನಿಮಗೆ ಮೊದಲ ತಿಂಗಳಾಗಿರಬೇಕು. ಇದೇ ನಿಮಗೆ ಪ್ರತಿ ವರ್ಷದ ಮೊದಲನೆಯ ತಿಂಗಳಾಗಿರುವುದು.
3 Ka kyerɛ Israelfoɔ nyinaa sɛ, saa bosome yi ɛda a ɛtɔ so edu no, ɛsɛ sɛ ɔbarima biara pɛ odwammaa baako de ma nʼabusua. Ɛsɛ sɛ efie biara nya odwammaa no baako.
೩ಇದರ ವಿಷಯದಲ್ಲಿ ನೀವು ಇಸ್ರಾಯೇಲರ ಸಮೂಹಕ್ಕೆಲ್ಲಾ ಹೀಗೆ ಅಪ್ಪಣೆಮಾಡಬೇಕು, ‘ಈ ತಿಂಗಳಿನ ಹತ್ತನೆಯ ದಿನದಲ್ಲಿ ನಿಮ್ಮ ನಿಮ್ಮ ಗೋತ್ರಗಳ ಪ್ರತಿಯೊಂದು ಮನೆಯವರು ಒಂದೊಂದು ಕುರಿಮರಿಯನ್ನಾಗಲಿ, ಆಡುಮರಿಯನ್ನಾಗಲಿ ತೆಗೆದುಕೊಳ್ಳಬೇಕು.
4 Sɛ abusua bi mu nnipa sua a wɔrentumi nwe odwammaa no a, wɔtumi ne abusua bi a ɛbɛn wɔn wɔ mpasua no so a wɔn nso sua kyɛ odwammaa no. Aboa no kyɛ wɔ saa ɛkwan no so no gyina abusua no kɛseɛ ne ɛnam dodoɔ a wɔbɛtumi awe so.
೪ಕುಟುಂಬವು ಚಿಕ್ಕದಾಗಿದ್ದರೆ, ಒಂದು ಕುರಿಮರಿಯನ್ನು ಪೂರ್ಣವಾಗಿ ತಿನ್ನುವುದಕ್ಕೆ ಆಗದೆ ಹೋದ ಪಕ್ಷಕ್ಕೆ ನೆರೆಮನೆಯ ಕುಟುಂಬದವರೊಂದಿಗೆ ಸೇರಿ, ಒಬ್ಬೊಬ್ಬನು ಎಷ್ಟೆಷ್ಟು ತಿನ್ನುವನೆಂದು ಗೊತ್ತುಮಾಡಿಕೊಂಡು ಜನಗಳ ಸಂಖ್ಯಾನುಸಾರ ಮರಿಗಳನ್ನು ತೆಗೆದುಕೊಳ್ಳಲಿ.
5 Ɛsɛ sɛ aboa no yɛ deɛ wadi afe. Ɛsɛ sɛ ɔyɛ odwan anaa abirekyie a ɔnnii dɛm.
೫ಆ ಮರಿಯು ಊನವಿಲ್ಲದ ಒಂದು ವರ್ಷದ ಗಂಡುಮರಿಯಾಗಿರಬೇಕು. ನೀವು ಕುರಿಗಳಿಂದಾಗಲಿ ಅಥವಾ ಆಡುಗಳಿಂದಾಗಲಿ ಅದನ್ನು ತೆಗೆದುಕೊಳ್ಳಬಹುದು.
6 Monhwɛ saa mmoa a moayiyi wɔn yi yie nkɔsi ɔbosome a ɛdii ɛkan no ɛda a ɛtɔ so dunan no anwummerɛ. Afei Israel asafo nyinaa nkunkum wɔn nnwammaa no dasuo mu.
೬ಈ ತಿಂಗಳಿನ ಹದಿನಾಲ್ಕನೆಯ ದಿನದವರೆಗೆ ಅವುಗಳನ್ನು ಇಟ್ಟುಕೊಂಡಿದ್ದು, ಆ ದಿನದ ಸಂಜೆ ವೇಳೆಯಲ್ಲಿ ಇಸ್ರಾಯೇಲರ ಸಮೂಹದವರೆಲ್ಲರೂ ಒಟ್ಟಿಗೆ ಸೇರಿ ಅವುಗಳನ್ನು ವಧಿಸಬೇಕು.
7 Wɔmfa wɔn mogya nsra efie biara aponnwa ho. Odwammaa a wɔbɛwe no wɔ fie hɔ no mogya na wɔmfa nyɛ saa ahyɛdeɛ yi.
೭ಅವರು ಅವುಗಳ ರಕ್ತದಲ್ಲಿ ಸ್ವಲ್ಪವನ್ನು ತೆಗೆದು ತಾವು ಆ ಭೋಜನವನ್ನು ಮಾಡುವ ಮನೆಬಾಗಿಲಿನ ಎರಡು ನಿಲುವುಪಟ್ಟಿಗಳಿಗೂ, ಮೇಲಿನ ಪಟ್ಟಿಗೂ ಹಚ್ಚಬೇಕು.
8 Anadwo, obiara bɛwe aboa no a wɔatoto no nam no bi. Wɔmfa burodo a ɛnkaeɛ ne awɔnwono nni.
೮ಆ ರಾತ್ರಿಯಲ್ಲಿಯೇ ಆ ಮಾಂಸವನ್ನು ಭೋಜನಮಾಡಬೇಕು. ಅದನ್ನು ಬೆಂಕಿಯಲ್ಲಿ ಸುಟ್ಟು ಹುಳಿಯಿಲ್ಲದ ರೊಟ್ಟಿಗಳ ಮತ್ತು ಕಹಿಯಾದ ಸೊಪ್ಪಿನ ಪಲ್ಯಗಳ ಸಂಗಡ ಊಟಮಾಡಬೇಕು.
9 Wɔnnnoa ɛnam no na wɔnnwe no mono nso, na mmom, wɔntoto aboa mu no nyinaa, a ne ti ne nan ne nʼayamdeɛ nyinaa ka ho.
೯ಅದನ್ನು ಹಸಿಯಾಗಿಯೂ ನೀರಿನಲ್ಲಿ ಬೇಯಿಸಿಯೂ ತಿನ್ನಕೂಡದು. ಅದರ ತಲೆ, ತೊಡೆ, ಹೊಟ್ಟೆ, ಇವುಗಳ ಸಹಿತವಾಗಿ ಬೆಂಕಿಯಲ್ಲೇ ಸುಟ್ಟು ತಿನ್ನಬೇಕು.
10 Sɛ moantumi anwe ne nyinaa anadwo no a, deɛ ɛbɛka no, sɛ adeɛ kye so a, monnwe na mmom monhye no.
೧೦ಮರುದಿನದ ಬೆಳಗಿನವರೆಗೆ ಅದರಲ್ಲಿ ಸ್ವಲ್ಪವನ್ನಾದರೂ ಉಳಿಸಕೂಡದು, ಬೆಳಗಿನವರೆಗೆ ಉಳಿದದ್ದನ್ನು ಬೆಂಕಿಯಿಂದ ಸುಟ್ಟುಬಿಡಬೇಕು.
11 Sɛdeɛ monwe ɛnam no nie: monwe wɔ ɛberɛ a mo ntadeɛ a mode tu ɛkwan hyehyɛ mo. Monsiesie mo ho mma ɛkwan tenten twa. Monhyɛ mo asopatere na momfa mo mpoma nkurakura. Monwe no ɔherɛ so. Saa adeyɛ yi, wɔbɛfrɛ no Awurade Twam Afahyɛ.
೧೧ಆ ಭೋಜನವನ್ನು ಮಾಡಬೇಕಾದ ಕ್ರಮ ಹೇಗೆಂದರೆ: ನೀವು ನಡುವನ್ನು ಕಟ್ಟಿಕೊಂಡು, ಕೆರವನ್ನು ಮೆಟ್ಟಿಕೊಂಡು, ಕೋಲುಹಿಡಿದು, ತ್ವರೆಯಾಗಿ ಮಾಡಬೇಕು. ಇದು ಯೆಹೋವನಿಗೆ ಆಚರಿಸತಕ್ಕ ಪಸ್ಕಹಬ್ಬವು.
12 “Na mɛtwam afa Misraim asase so anadwo yi na mmammarima a wɔyɛ mmakan ne mmoa mmakan a wɔwɔ Misraim asase so nyinaa, mɛkum wɔn, na mabu anyame a wɔwɔ Misraim nyinaa atɛn, ɛfiri sɛ, mene Awurade!
೧೨ಆ ರಾತ್ರಿ ನಾನು ಐಗುಪ್ತದೇಶದ ಮೇಲೆ ಹಾದುಹೋಗಿ ಮನುಷ್ಯರಲ್ಲಾಗಲಿ, ಪಶುಗಳಲ್ಲಾಗಲಿ, ಚೊಚ್ಚಲಾಗಿರುವುದನ್ನೆಲ್ಲಾ ಸಂಹರಿಸುವೆನು. ಐಗುಪ್ತ ದೇಶದ ಸಮಸ್ತ ದೇವತೆಗಳಿಗೂ ನ್ಯಾಯತೀರಿಸುವೆನು. ನಾನೇ ಯೆಹೋವನು.
13 Mogya a mode bɛyɛ aponnwa no ho no bɛyɛ agyinahyɛdeɛ enti, sɛ mehunu mogya no a, mɛtwam akɔ, na sɛ merekum Misraim mmakan a, merenkum mo deɛ bi.
೧೩ಆದರೆ ನೀವು ಇರುವ ಎಲ್ಲಾ ಮನೆಗಳ ಬಾಗಿಲಿಗೆ ಹಚ್ಚಿರುವ ರಕ್ತವು ನಿಮಗೆ ಗುರುತಾಗಿರುವುದು. ಆ ರಕ್ತವನ್ನು ನಾನು ನೋಡುವಾಗ ನಿಮಗೆ ಯಾವ ನಷ್ಟವನ್ನೂ ಮಾಡದೇ ಮುಂದಕ್ಕೆ ದಾಟಿಹೋಗುವೆನು. ನಾನು ಐಗುಪ್ತ್ಯದವರನ್ನು ಸಂಹರಿಸುವಾಗ ನಿಮಗೆ ಯಾವ ಹಾನಿಯೂ ಉಂಟಾಗುವುದಿಲ್ಲ.
14 “Yei yɛ ɛda a ɛsɛ sɛ mokaeɛ. Afe biara, ɛfiri awontoatoasoɔ kɔsi awontoatoasoɔ ɛsɛ sɛ mohyɛ ɛfa no sɛ afahyɛ sononko ma Awurade. Yei yɛ mmara a ɛbɛtena hɔ ɛda biara.
೧೪ಈ ದಿನವು ನಿಮಗೆ ಜ್ಞಾಪಕಾರ್ಥವಾಗಿರುವುದು. ಯೆಹೋವನ ಘನಕ್ಕಾಗಿ ಆ ಹಬ್ಬವನ್ನು ತಲತಲಾಂತರಕ್ಕೂ ಆಚರಿಸಬೇಕು. ಅದನ್ನು ಶಾಶ್ವತನಿಯಮವೆಂದು ಎಂದೆಂದಿಗೂ ಆಚರಿಸಬೇಕು.
15 Nnanson no mu, monni burodo a wɔmfaa mmɔreka mfraeɛ nko ara. Afahyɛ no ɛda a ɛdi ɛkan no, monyiyi mmɔreka biara mfiri mo afie mu. Obiara a saa ɛberɛ yi mu ɔbɛbu saa afahyɛ yi mmara yi so no, wɔbɛtwa no asuo afiri Israelman mu.
೧೫“‘ಏಳು ದಿನಗಳವರೆಗೆ ನೀವು ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು. ಮೊದಲನೆಯ ದಿನದಲ್ಲಿಯೇ ಹುಳಿಹಿಟ್ಟನ್ನು ನಿಮ್ಮ ಮನೆಯೊಳಗಿಂದ ತೆಗೆದುಬಿಡಬೇಕು. ಏಕೆಂದರೆ ಮೊದಲನೆಯ ದಿನದಿಂದ ಏಳನೆಯ ದಿನದವರೆಗೆ ಹುಳಿರೊಟ್ಟಿಯನ್ನು ತಿನ್ನುವವನು ಇಸ್ರಾಯೇಲಿನೊಳಗಿಂದ ತೆಗೆದುಹಾಕಲ್ಪಡಬೇಕು.
16 Afahyɛ no ɛda a ɛdi ɛkan ne ne nnanson soɔ no, nnipa no nyinaa bɛdi ɛda no sɛ ɛda a wɔayi asi hɔ ama nhyiamu kronkron. Na nna no mu, aduanenoa akyiri no, obiara nnyɛ adwuma foforɔ biara.
೧೬ಮೊದಲನೆಯ ದಿನದಲ್ಲಿ ಪರಿಶುದ್ಧ ದೇವಾರಾಧನೆಗಾಗಿ ಸಭೆ ಸೇರಬೇಕು. ಏಳನೆಯ ದಿನದಲ್ಲಿಯೂ ದೇವಾರಾಧನೆಗಾಗಿ ಸಭೆ ಸೇರಬೇಕು. ಈ ಎರಡು ದಿನಗಳಲ್ಲಿ ಯಾವ ಕೆಲಸವನ್ನು ಮಾಡಕೂಡದು. ಊಟಕ್ಕೆ ಬೇಕಾದದ್ದನ್ನು ಮಾತ್ರ ಮಾಡಬಹುದೇ ಹೊರತು ಬೇರೆ ಯಾವ ಕೆಲಸವನ್ನು ಮಾಡಬಾರದು.
17 “Sɛ modi Apiti Afahyɛ yi a, ɛbɛma mo akae daa sɛ, saa ɛda no na meyii mo firii Misraim asase so. Enti, ɛsɛ sɛ afe biara, modi saa dapɔnna yi firi awo ntoatoasoɔ so kɔsi awo ntoatoasoɔ so.
೧೭ನೀವು ಹುಳಿಯಿಲ್ಲದ ರೊಟ್ಟಿಯ ಹಬ್ಬವನ್ನು ಆಚರಿಸಬೇಕು. ಏಕೆಂದರೆ ಈ ದಿನದಲ್ಲಿಯೇ ನಾನು ನಿಮ್ಮ ಸೈನ್ಯಗಳನ್ನು ಐಗುಪ್ತ ದೇಶದೊಳಗಿಂದ ಹೊರಗೆ ಬರಮಾಡಿದ್ದರಿಂದ ನೀವೂ, ನಿಮ್ಮ ಸಂತತಿಯವರೂ ಈ ದಿನವನ್ನು ಆಚರಣೆಗೆ ತರಬೇಕು. ಇದು ಶಾಶ್ವತವಾದ ನಿಯಮವಾಗಿದೆ.
18 Ɔbosome a ɛdi ɛkan no ɛda a ɛtɔ so dunan no anwummerɛ kɔsi nʼadaduonu ɛda baako so no, burodo a mmɔreka mfra mu nko ara na monni.
೧೮ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನದ ಸಾಯಂಕಾಲ ಮೊದಲುಗೊಂಡು ಅದೇ ತಿಂಗಳಿನ ಇಪ್ಪತ್ತೊಂದನೆಯ ದಿನದ ಸಾಯಂಕಾಲದವರೆಗೆ ನೀವು ಹುಳಿಯಿಲ್ಲದ ರೊಟ್ಟಿಗಳನ್ನೇ ತಿನ್ನಬೇಕು.
19 Saa nnanson no mu, ɛnsɛ sɛ wɔhunu mmɔreka kakra bi koraa wɔ mo afie mu. Enti, obiara a ɔbɛdi aduane a mmɔreka wɔ mu no, wɔbɛyi no afiri Israel asafo kuo no mu. Saa mmara yi ka amamfrafoɔ a wɔne mo te ne wɔn a wɔwoo wɔn wɔ asase yi so nyinaa.
೧೯ಆ ಏಳು ದಿನಗಳವರೆಗೆ ನಿಮ್ಮ ಮನೆಗಳಲ್ಲಿ ಹುಳಿಹಿಟ್ಟು ಇರಬಾರದು. ಹುಳಿ ಬೆರಸಿದ್ದನ್ನು ಯಾರು ತಿನ್ನುವರೋ ಅವನು ಪರದೇಶದವನಾಗಲಿ, ಸ್ವದೇಶದವನಾಗಲಿ ಇಸ್ರಾಯೇಲ ಸಮೂಹದೊಳಗಿಂದ ತೆಗೆದುಹಾಕಲ್ಪಡಬೇಕು.
20 Mesane meti mu bio sɛ, saa nna no mu monnni biribiara a wɔde mmɔreka afra mu; monni burodo a mmɔreka mfra mu.”
೨೦ನೀವು ನಿಮ್ಮ ಮನೆಗಳಲ್ಲಿ ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕೇ ಹೊರತು, ಹುಳಿಕಲಸಿದ ಯಾವುದನ್ನೂ ತಿನ್ನಕೂಡದು’” ಎಂದು ಆಜ್ಞಾಪಿಸಿದನು.
21 Afei, Mose frɛɛ Israel mpanimfoɔ nyinaa ka kyerɛɛ wɔn sɛ, “Monkɔkyekyere odwammaa anaa abirekyie ba mma abusua biara, na monkum no sɛ Twam Afahyɛ aboa.
೨೧ಆಗ ಮೋಶೆಯು ಇಸ್ರಾಯೇಲರ ಹಿರಿಯರೆಲ್ಲರನ್ನೂ ಕರೆಯಿಸಿ ಅವರಿಗೆ, “ನೀವು, ನಿಮ್ಮ ನಿಮ್ಮ ಕುಟುಂಬಗಳಿಗೋಸ್ಕರ ಮಂದೆಯಿಂದ ಮರಿಗಳನ್ನು ಆರಿಸಿಕೊಂಡು ಪಸ್ಕಹಬ್ಬಕ್ಕೆ ಕೊಯ್ಯಿರಿ.
22 Montwa odwan no mogya ngu kyɛnsee bi mu. Momfa hisope mmɔ mogya no mu na momfa mpete aponnwatifi ne aponnwa mmienu a aka no ho sɛdeɛ mogya no bɛda ho. Mowie a, mo mu biara mmfiri nkɔ abɔntene saa anadwo no.
೨೨ಹಿಸ್ಸೋಪ್ ಗಿಡದ ಕಟ್ಟನ್ನು ತೆಗೆದುಕೊಂಡು ಬೋಗುಣಿಯಲ್ಲಿರುವ ರಕ್ತದಲ್ಲಿ ಅದನ್ನು ಅದ್ದಿ ಬಾಗಿಲಿನ ಮೇಲಿನ ಅಡ್ಡಪಟ್ಟಿಗೂ, ಅದರ ಪಕ್ಕದಲ್ಲಿರುವ ಎರಡು ನಿಲುವುಪಟ್ಟಿಗಳಿಗೂ ಹಚ್ಚಬೇಕು. ತರುವಾಯ ನಿಮ್ಮಲ್ಲಿ ಒಬ್ಬರೂ ಬೆಳಗಾಗುವವರೆಗೆ ಮನೆಯ ಬಾಗಿಲನ್ನು ಬಿಟ್ಟು ಹೊರಗೆ ಹೋಗಬಾರದು.
23 Awurade bɛtwam afa asase yi so akunkum Misraimfoɔ. Na sɛ ɔhunu sɛ mogya wɔ aponnwatifi no ne aponnwa mmienu no ho a, ɔbɛtwa saa efie no ho akɔ a ɔremma ɔsɛefoɔ no nwura hɔ nkunkum mo mmakan.
೨೩ಯೆಹೋವನು ಐಗುಪ್ತ್ಯರನ್ನು ಹತಮಾಡುವುದಕ್ಕೆ ದೇಶದ ನಡುವೆ ಹಾದುಹೋಗುವನು. ಆಗ ನಿಮ್ಮ ನಿಮ್ಮ ಮನೆಬಾಗಿಲಿನ ಮೇಲಣ ಪಟ್ಟಿಯಲ್ಲಿಯೂ, ಎರಡು ನಿಲುವು ಪಟ್ಟಿಗಳಲ್ಲಿಯೂ ಆ ರಕ್ತವನ್ನು ಕಂಡು ಮುಂದಕ್ಕೆ ದಾಟಿ ಹೋಗುವನು. ನಿಮ್ಮ ಪ್ರಾಣ ತೆಗೆಯುವುದಕ್ಕೆ ಸಂಹಾರಕನು ನಿಮ್ಮ ಮನೆಗಳಲ್ಲಿ ಬರುವುದೇ ಇಲ್ಲ.
24 “Na monkae sɛ yei yɛ mmara a ɛwɔ hɔ daa ma mo ne mo asefoɔ.
೨೪ಇದು ನಿಮಗೂ, ನಿಮ್ಮ ಸಂತತಿಯವರಿಗೂ ಶಾಶ್ವತವಾದ ನಿಯಮವೆಂದು ಆಚರಿಸಬೇಕು.
25 Na sɛ moba asase a Awurade de bɛma mo sɛdeɛ ɔhyɛɛ mo ho bɔ no so a, mobɛkɔ so adi afahyɛ no.
೨೫ಯೆಹೋವನು ತನ್ನ ಮಾತಿನ ಮೇರೆಗೆ ನಿಮಗೆ ಕೊಡುವ ದೇಶಕ್ಕೆ ನೀವು ಬಂದಾಗ, ಈ ಆಚರಣೆಯನ್ನು ಕೈಕೊಳ್ಳಬೇಕು.
26 Na sɛ mo mma bisa mo sɛ, ‘Yeinom nyinaa ase ne sɛn; saa afahyɛ yi fa ɛdeɛn ho a,
೨೬ಮುಂದೆ ನಿಮ್ಮ ಮಕ್ಕಳು, ‘ನೀವು ನಡೆಸುವ ಈ ಆಚರಣೆ ಏನು?’ ಎಂದು ನಿಮ್ಮನ್ನು ಕೇಳುವಾಗ,
27 mobɛbua wɔn sɛ, ɛyɛ Twam Afahyɛ afɔdeɛ ma Awurade. Ɔtwaa Israelfoɔ afie ho wɔ Misraim. Ɛwom sɛ ɔkunkumm Misraimfoɔ deɛ, nanso ɔgyaa yɛn mmusua.’” Ɛberɛ a Mose kasa wieeɛ no, nnipa no nyinaa koto sɔreeɛ.
೨೭ನೀವು ಅವರಿಗೆ, ‘ಯೆಹೋವನು ಐಗುಪ್ತ್ಯರನ್ನು ಸಂಹರಿಸಿದಾಗ ಐಗುಪ್ತ ದೇಶದಲ್ಲಿದ್ದ ಇಸ್ರಾಯೇಲರ ಮನೆಗಳಲ್ಲಿ ಪ್ರವೇಶಿಸದೆ ಮುಂದಕ್ಕೆ ದಾಟಿ ನಮ್ಮ ಮನೆಯವರನ್ನು ಉಳಿಸಿದ್ದರಿಂದ ನಾವು ಯೆಹೋವನ ಪಸ್ಕವೆಂಬ ಈ ಆಚರಣೆಯನ್ನು ನಡೆಸಲೇಬೇಕು ಎಂದು ಹೇಳಬೇಕು’” ಎಂದನು. ಆಗ ಜನರು ತಲೆಬಾಗಿ ಯೆಹೋವನಿಗೆ ನಮಸ್ಕರಿಸಿದರು.
28 Na Israelfoɔ no dii Mose ne Aaron ahyɛdeɛ no so.
೨೮ಇಸ್ರಾಯೇಲರು ಅಲ್ಲಿಂದ ಹೊರಟು ಯೆಹೋವನು ಮೋಶೆ ಆರೋನರಿಗೆ ಆಜ್ಞಾಪಿಸಿದ ಪ್ರಕಾರವೇ ಮಾಡಿದರು.
29 Ɛda no ara anadwo dasuo mu Awurade kunkumm mmarimaa a wɔyɛ abakan a wɔwɔ Misraim asase so nyinaa, ɛfiri Farao babarima panin so kɔsi odeduani babarima panin ne anantwie nso mmakan nyinaa.
೨೯ಮಧ್ಯರಾತ್ರಿಯಲ್ಲಿ ಯೆಹೋವನು ಸಿಂಹಾಸನದಲ್ಲಿರುವ ಫರೋಹನ ಚೊಚ್ಚಲು ಮಗನು ಮೊದಲುಗೊಂಡು ಸೆರೆಯಲ್ಲಿದ್ದ ಸೆರೆಯವನ ಚೊಚ್ಚಲು ಮಗನವರೆಗೂ, ಐಗುಪ್ತ ದೇಶದಲ್ಲಿದ್ದ ಎಲ್ಲಾ ಚೊಚ್ಚಲು ಮಕ್ಕಳನ್ನೂ ಸಂಹಾರ ಮಾಡಿದನು. ಪಶುಗಳ ಚೊಚ್ಚಲು ಮರಿಗಳನ್ನೂ ಸಂಹಾರಮಾಡಿದನು.
30 Afei, Farao ne ne mpanimfoɔ ne nnipa a wɔwɔ Misraim nyinaa sɔree anadwo no. Misraiman no nyinaa twaa agyaadwoɔ, ɛfiri sɛ, efie biara nni hɔ a onipa anwu wɔ mu.
೩೦ಆ ರಾತ್ರಿಯಲ್ಲಿ ಫರೋಹನೂ, ಅವನ ಪರಿವಾರದವರೂ, ಐಗುಪ್ತ್ಯರೆಲ್ಲರೂ ಎದ್ದು ನೋಡಲಾಗಿ ಸಾವಿಲ್ಲದ ಮನೆ ಒಂದೂ ಇರಲಿಲ್ಲ. ಐಗುಪ್ತ ದೇಶದಲ್ಲಿ ದೊಡ್ಡ ಗೋಳಾಟವಾಯಿತು.
31 Enti, Farao frɛɛ Mose ne Aaron anadwo no ka kyerɛɛ wɔn sɛ, “Mesrɛ mo, mo nyinaa montu mfiri ha. Monkɔsom Awurade sɛdeɛ mokaeɛ no.
೩೧ಫರೋಹನು ಆ ರಾತ್ರಿಯಲ್ಲೇ ಮೋಶೆ ಮತ್ತು ಆರೋನರನ್ನು ಕರೆಯಿಸಿ ಅವರಿಗೆ, “ನೀವು ಎದ್ದು ನನ್ನ ಜನರ ಮಧ್ಯದಿಂದ ಹೊರಟುಹೋಗಿರಿ. ನೀವು ಕೇಳಿಕೊಂಡ ಮೇರೆಗೆ ಯೆಹೋವನನ್ನು ಆರಾಧಿಸುವುದಕ್ಕೆ ನೀವು ಮತ್ತು ಇಸ್ರಾಯೇಲರು ಹೊರಟುಹೋಗಿರಿ.
32 Momfa mo nnwan ne mo anantwie na monkɔ. Nanso monhyira me ansa na moakɔ.”
೩೨ನೀವು ಕೇಳಿಕೊಂಡಂತೆ ನಿಮ್ಮ ಕುರಿದನಗಳ ಹಿಂಡುಗಳನ್ನು ತೆಗೆದುಕೊಂಡು ಹೋಗಿರಿ. ಅದಲ್ಲದೆ ನನ್ನನ್ನೂ ಸಹ ಆಶೀರ್ವದಿಸಿರಿ” ಎಂದನು.
33 Misraimfoɔ no nyinaa ani beree Israelfoɔ no so pampam wɔn sɛ wɔmfiri asase no so ntɛm, ɛfiri sɛ, wɔkaa sɛ, “Yɛbɛwuwu.”
೩೩ಐಗುಪ್ತರು, “ನಾವೆಲ್ಲರು ಸಾಯುತ್ತೇವೆ” ಎಂದುಕೊಂಡು ಇಸ್ರಾಯೇಲರನ್ನು ತಮ್ಮ ದೇಶದಿಂದ ಬೇಗನೇ ಕಳುಹಿಸಿಬಿಡುವುದಕ್ಕೆ ಅಪೇಕ್ಷೆಪಟ್ಟು ಅವರನ್ನು ಬಲವಂತಮಾಡಿದರು.
34 Israelfoɔ no faa wɔn mmɔre a wɔafɔtɔ a mmɔreka mfra mu, na wɔde wɔn ntadeɛ kyekyeree wɔn mmɔrefɔtɔ nnaka de sisii wɔn mmati so.
೩೪ಆದುದರಿಂದ ಜನರು ಹಿಟ್ಟಿಗೆ ಹುಳಿಹಾಕುವುದಕ್ಕಿಂತ ಮೊದಲೇ ನಾದುವ ಪಾತ್ರೆಗಳ ಸಂಗಡ ಕಣಕದ ಮುದ್ದೆಯನ್ನು ಬಟ್ಟೆಯಲ್ಲಿ ಗಂಟುಕಟ್ಟಿ ಹೆಗಲಿನ ಮೇಲೆ ಹಾಕಿಕೊಂಡು ಹೊರಟುಹೋದರು.
35 Na Israelfoɔ no asrɛsrɛ dwetɛ ne sikakɔkɔɔ adwinneɛ ne ntadeɛ afiri Misraimfoɔ no nkyɛn sɛdeɛ Mose kaa sɛ wɔnyɛ no.
೩೫ಇಸ್ರಾಯೇಲರು ಮೋಶೆಯ ಮಾತಿನ ಮೇರೆಗೆ ಐಗುಪ್ತ್ಯರಿಂದ ಬೆಳ್ಳಿ ಬಂಗಾರದ ಒಡವೆಗಳನ್ನು, ಬಟ್ಟೆಗಳನ್ನು ಕೇಳಿ ಪಡೆದುಕೊಂಡರು.
36 Awurade maa Misraimfoɔ no hunuu Israelfoɔ no mmɔbɔ enti wɔmaa wɔn wɔn abisadeɛ nyinaa. Ɛnam saa yɛ so maa Israelfoɔ no twee Misraimfoɔ ahonyadeɛ nyinaa kɔeɛ.
೩೬ಯೆಹೋವನು ಅವರ ಮೇಲೆ ಐಗುಪ್ತ್ಯರಲ್ಲಿ ದಯೆಯನ್ನು ಹುಟ್ಟಿಸಿದ್ದರಿಂದ ಅವರು ಕೇಳಿಕೊಂಡದ್ದೆಲ್ಲವನ್ನು ಐಗುಪ್ತರು ಕೊಟ್ಟರು. ಹೀಗೆ ಇಸ್ರಾಯೇಲರು ಐಗುಪ್ತ್ಯರ ಸೊತ್ತನ್ನು ಸುಲಿದುಕೊಂಡರು.
37 Anadwo no ara, Israelfoɔ no siim firii Rameses kɔɔ Sukot. Na wɔn dodoɔ yɛ nnipa mpem ahansia a wɔnam fam, a mmaa ne mmɔfra de wɔankan wɔn anka ho.
೩೭ಇಸ್ರಾಯೇಲರು ರಾಮ್ಸೇಸ್ ಪಟ್ಟಣದಿಂದ ಹೊರಟು ಸುಕ್ಕೋತಿಗೆ ಬಂದರು. ಹೆಂಗಸರು ಮಕ್ಕಳು ಅಲ್ಲದೆ ಗಂಡಸರು ಮಾತ್ರ ಸುಮಾರು ಆರುಲಕ್ಷ ಮಂದಿ ಇದ್ದರು.
38 Nnipa ahodoɔ pii bi a wɔnyɛ Israelfoɔ kaa wɔn ho kɔeɛ. Wɔde wɔn nnwan ne wɔn anantwie nyinaa kaa wɔn ho.
೩೮ಅವರೊಂದಿಗೆ ಬಹು ಮಂದಿ ಅನ್ಯರೂ ಹೊರಟುಬಂದಿದ್ದರು. ಕುರಿದನಗಳ ಹಿಂಡೂ ಪಶುಗಳೂ ಅವರ ಸಂಗಡ ಹೊರಟುಹೋದವು.
39 Wɔduruu baabi a wɔpɛ sɛ wɔdidi no, wɔde mmɔre a wɔamfa mmɔreka amfra a wɔde kɔeɛ no bi too burodo diiɛ. Na mmɔreka nni mu, ɛfiri sɛ, Misraimfoɔ no pamoo wɔn. Ɛno enti wɔannya mu ɛkwan anyɛ aduane a wɔbɛdi wɔ ɛkwan so.
೩೯ಅವರು ಐಗುಪ್ತ ದೇಶದಿಂದ ತಂದ ನಾದಿದ ಹಿಟ್ಟಿನಿಂದ ಹುಳಿಯಿಲ್ಲದ ರೊಟ್ಟಿಗಳನ್ನು ಮಾಡಿಕೊಂಡರು. ಅವರು ಐಗುಪ್ತ ದೇಶದಿಂದ ಹೊರಡಿಸಲ್ಪಟ್ಟು ಸ್ವಲ್ಪವಾದರೂ ಸಮಯ ಸಿಕ್ಕದೆ ಹೋದದರಿಂದ ಕಣಕದಲ್ಲಿ ಹುಳಿಯನ್ನು ಕಲಸಿರಲಿಲ್ಲ ಮತ್ತು ಬೇರೆ ಯಾವ ಆಹಾರವನ್ನೂ ಸಿದ್ಧಪಡಿಸಿಕೊಂಡಿರಲಿಲ್ಲ.
40 Israelfoɔ no tenaa Misraim mfeɛ ahanan ne aduasa.
೪೦ಇಸ್ರಾಯೇಲರು ಐಗುಪ್ತ ದೇಶದಲ್ಲಿ ಸುಮಾರು ನಾನೂರಮೂವತ್ತು ವರ್ಷ ವಾಸವಾಗಿದ್ದರು.
41 Na ɛda a wɔdii mfeɛ ahanan ne aduasa no pɛ na Awurade nkurɔfoɔ nyinaa firii asase no so.
೪೧ನಾನೂರಮೂವತ್ತು ವರ್ಷಗಳು ಕಳೆದನಂತರ ಅದೇ ದಿನದಲ್ಲಿಯೇ ಯೆಹೋವನ ಸೈನ್ಯಗಳೆಲ್ಲಾ ಐಗುಪ್ತ ದೇಶವನ್ನು ಬಿಟ್ಟು ಹೊರಟುಹೋದವು.
42 Saa anadwo no ne ɛberɛ a Awurade yi too hɔ de gyee ne nkurɔfoɔ firii Misraim asase so. Enti, saa anadwo korɔ no ara na Israelfoɔ no yi de too hɔ sɛ ɛda a Onyankopɔn gyee wɔn no afirinhyia ɛda.
೪೨ಯೆಹೋವನು ಆ ರಾತ್ರಿಯಲ್ಲಿಯೇ ಅವರನ್ನು ಐಗುಪ್ತ ದೇಶದಿಂದ ಹೊರಗೆ ಬರಮಾಡಿದ್ದರಿಂದ ಅವರು ಈ ರಾತ್ರಿಯಲ್ಲಿ ಆತನ ಘನಕ್ಕಾಗಿ ಜಾಗರಣೆಯನ್ನು ಮಾಡಿದರು. ಇಸ್ರಾಯೇಲರೆಲ್ಲರೂ ತಲತಲಾಂತರಕ್ಕೂ ಯೆಹೋವನಿಗೆ ಜಾಗರಣೆಯನ್ನು ಆಚರಿಸಬೇಕಾದ ರಾತ್ರಿಯು ಇದೇ ಆಗಿದೆ.
43 Afei, Awurade ka kyerɛɛ Mose ne Aaron sɛ, “Twam Afahyɛ no ho mmara ni: “Ahɔhoɔ biara nnwe odwammaa no ɛnam no bi.
೪೩ಯೆಹೋವನು ಮೋಶೆ ಮತ್ತು ಆರೋನರಿಗೆ ಹೇಳಿದ್ದೇನೆಂದರೆ, “ಪಸ್ಕವನ್ನು ಆಚರಿಸಬೇಕಾದ ಕ್ರಮ ಹೇಗೆಂದರೆ, ಅನ್ಯನೊಬ್ಬನೂ ಅದರಲ್ಲಿ ಭೋಜನ ಮಾಡಬಾರದು.
44 Nanso, ɔsomfoɔ biara a wɔtee sika tɔɔ no no, sɛ wɔatwa no twetia deɛ a, ɔtumi we bi.
೪೪ಆದರೆ ನೀವು ಕ್ರಯಕ್ಕೆ ತೆಗೆದುಕೊಂಡ ಪ್ರತಿಯೊಬ್ಬ ಗುಲಾಮನು ಸುನ್ನತಿ ಮಾಡಿಸಿಕೊಂಡ ನಂತರ ಅದನ್ನು ತಿನ್ನಬಹುದು.
45 Ɔpaani anaa ɔhɔhoɔ biara nnwe bi.
೪೫ಪರದೇಶದವರೂ, ಕೂಲಿಯವರೂ ಅದನ್ನು ತಿನ್ನಬಾರದು.
46 “Ɛsɛ sɛ wɔwe Twam Afahyɛ aboa biara wɔ efie baako mu. Ɛsɛ sɛ wɔwe ɛnam no wɔ fie. Ɛnsɛ sɛ wɔwe ɛnam no fa biara wɔ abɔntene. Ɛnsɛ sɛ mobɔ dompe mu.
೪೬ಅವರವರ ಮನೆಯಲ್ಲಿಯೇ ಅದನ್ನು ಊಟಮಾಡಬೇಕು. ಅದರಲ್ಲಿ ಸ್ವಲ್ಪ ಮಾಂಸವನ್ನಾದರೂ ಮನೆಯಿಂದ ಹೊರಗೆ ತೆಗೆದುಕೊಂಡು ಹೋಗಬಾರದು. ಆ ಪಶುವಿನ ಒಂದು ಎಲುಬನ್ನಾದರೂ ಮುರಿಯಬಾರದು.
47 Ɛsɛ sɛ Israelfoɔ nyinaa di saa nkaeɛda yi berɛ korɔ mu.
೪೭ಇಸ್ರಾಯೇಲರ ಸಮೂಹದವರೆಲ್ಲರೂ ಈ ಹಬ್ಬವನ್ನು ಆಚರಿಸಬೇಕು.
48 “Ahɔhoɔ a mo ne wɔn te no nso, sɛ wɔpɛ sɛ wɔdi Twam Afahyɛ no bi a, ɛsɛ sɛ mmarima a wɔwɔ wɔn mu no nyinaa twa twetia ansa na wɔaba ne mo abɛdi. Na sɛ ɛyɛ saa a, wɔbɛyɛ deɛ wɔwoo wɔn too mu mu.
೪೮ನಿಮ್ಮ ಬಳಿಯಲ್ಲಿ ವಾಸವಾಗಿರುವ ಪರದೇಶದವನು ಯೆಹೋವನಿಗೆ ಈ ಪಸ್ಕಹಬ್ಬವನ್ನು ಆಚರಿಸಬೇಕೆಂದು ಅಪೇಕ್ಷಿಸಿದರೆ ಅವನೂ, ಅವನಿಗೆ ಸೇರಿರುವ ಗಂಡಸರೆಲ್ಲರೂ ಸುನ್ನತಿಮಾಡಿಸಿಕೊಳ್ಳಬೇಕು. ತರುವಾಯ ಅವನು ಈ ಹಬ್ಬವನ್ನು ಆಚರಿಸುವುದಕ್ಕೆ ಸಮೀಪ ಬರಲಿ. ಅಂಥವನು ಸ್ವದೇಶದವನಂತೆಯೇ ಇರುವನು. ಆದರೆ ಸುನ್ನತಿಮಾಡಿಸಿಕೊಳ್ಳದವನು ಆ ಭೋಜನವನ್ನು ತಿನ್ನಬಾರದು.
49 Saa mmara yi ka Israelfoɔ ne ahɔhoɔ a wɔne mo te no nso.”
೪೯ಸ್ವದೇಶದವನಿಗೂ, ನಿಮ್ಮಲ್ಲಿ ವಾಸವಾಗಿರುವ ಪರದೇಶದವನಿಗೂ ಒಂದೇ ನಿಯಮವಿರಬೇಕು” ಎಂದನು.
50 Enti, Israelfoɔ no nyinaa dii Awurade mmara no so sɛdeɛ ɔhyɛɛ Mose ne Aaron no.
೫೦ಯೆಹೋವನು ಮೋಶೆ ಮತ್ತು ಆರೋನರಿಗೆ ಆಜ್ಞಾಪಿಸಿದ ಪ್ರಕಾರ ಇಸ್ರಾಯೇಲರೆಲ್ಲರೂ ಮಾಡಿದರು.
51 Ɛda no ara na Awurade yii Israelfoɔ no firii Misraim asase so.
೫೧ಅದೇ ದಿನದಲ್ಲಿ ಯೆಹೋವನು ಇಸ್ರಾಯೇಲರನ್ನು ಅವರವರ ಸೈನ್ಯಗಳ ಪ್ರಕಾರವಾಗಿ ಐಗುಪ್ತ ದೇಶದಿಂದ ಹೊರಗೆ ತಂದನು.