< Ɛster 3 >
1 Mmerɛ bi akyi, ɔhene Ahasweros pagyaa Agagni Hamedata babarima Haman diberɛ, yɛɛ no ɔsoafoɔ panin wɔ ahemman no mu ma ɔbɛyɛɛ ɔhene abadiakyire.
೧ಇದಾದನಂತರ ಅರಸನಾದ ಅಹಷ್ವೇರೋಷನು ಅಗಾಗನ ವಂಶದವನೂ ಹಮ್ಮೆದಾತನ ಮಗನೂ ಆದ ಹಾಮಾನನನ್ನು ಪದವಿಯಲ್ಲಿ ಹೆಚ್ಚಿಸಿ, ಅವನಿಗೆ ದೊಡ್ಡ ಅಧಿಕಾರವನ್ನು ಕೊಟ್ಟು, ತನ್ನ ಆಸ್ಥಾನದ ಎಲ್ಲಾ ಸರದಾರರಲ್ಲಿ ಅವನಿಗೆ ಪ್ರಥಮ ಸ್ಥಾನವನ್ನು ಅನುಗ್ರಹಿಸಿದನು.
2 Sɛ Haman retwam a, ɔhene mpanimfoɔ bɔ wɔn mu ase, de kyerɛ obuo ne anidie a wɔwɔ ma no, ɛfiri sɛ, saa na ɔhene ahyɛ. Nanso, Mordekai ammɔ ne mu ase da, na wankyerɛ obuo ne anidie nso da.
೨ರಾಜನ ಅರಮನೆಯಲ್ಲಿದ್ದ ಸೇವಕರೆಲ್ಲರೂ ಹಾಮಾನನಿಗೆ ಸಾಷ್ಟಾಂಗನಮಸ್ಕಾರ ಮಾಡುತ್ತಿದ್ದರು; ಆದರೆ ಮೊರ್ದೆಕೈಯು ಅವನಿಗೆ ಸಾಷ್ಟಾಂಗನಮಸ್ಕಾರ ಮಾಡುತ್ತಿರಲಿಲ್ಲ.
3 Ahemfie mpanimfoɔ a wɔwɔ ɔhene ɛpono ano no bisaa Mordekai sɛ, “Adɛn enti na worebu ɔhene ɔhyɛ nsɛm so?”
೩ಅರಮನೆಯ ದ್ವಾರಪಾಲಕರು ಮೊರ್ದೆಕೈಗೆ, “ನೀನು ರಾಜಾಜ್ಞೆಯನ್ನು ಮೀರುವುದೇಕೆ?” ಎಂದು ಪ್ರತಿದಿನ ಅವನನ್ನು ಎಚ್ಚರಿಸುತ್ತಿದ್ದರು.
4 Adeɛ akye a ade asa yi, wɔkasa kyerɛɛ no nanso ɔkɔɔ so buu ɔhyɛ nsɛm no so. Enti, wɔbɔɔ Haman amaneɛ hwɛɛ sɛ ɔbɛpene Mordekai suban no so anaa, ɛfiri sɛ, na Mordekai aka akyerɛ wɔn sɛ ɔyɛ Yudani.
೪ಮೊರ್ದೆಕೈಯು ತಾನು ಯೆಹೂದ್ಯನೆನ್ನುವ ಹೆಮ್ಮೆಯ ಹಾಗೂ ಮಾನವನಿಗೆ ಸಾಷ್ಟಾಂಗನಮಸ್ಕಾರ ಮಾಡುವುದಿಲ್ಲ ಎಂಬ ಅವನ ಹಟ ಸಾಗುವುದೇನೋ ನೋಡೋಣ ಎಂದುಕೊಂಡು ಅವರು ಅದನ್ನು ಹಾಮಾನನಿಗೆ ತಿಳಿಸಿದರು.
5 Ɛberɛ a Haman hunuu sɛ Mordekai nkoto no, anaa ɔnnkyerɛ no obuo ne anidie no, ne bo fuiɛ.
೫ಮೊರ್ದೆಕೈಯು ತನಗೆ ಸಾಷ್ಟಾಂಗನಮಸ್ಕಾರ ಮಾಡುತ್ತಿಲ್ಲವೆಂದು ತಿಳಿದ ಹಾಮಾನನು ಬಹಳ ಕೋಪಗೊಂಡನು.
6 Enti, Haman yɛɛ nʼadwene sɛ, ɔremfa ne nsa nka Mordekai nko ara. Esiane sɛ na wate sɛ Mordekai yɛ Yudani no enti, ɔyɛɛ nʼadwene sɛ ɔbɛtɔre Yudafoɔ a wɔwɔ Ahasweros ahemman mu no nyinaa ase.
೬ಅವನು ಮೊರ್ದೆಕೈಯೊಬ್ಬನ ಮೇಲೆಯೇ ಕೈಯೆತ್ತುವುದು ಸಾಲದೆಂದೆಣಿಸಿ, ಇವನು ಯೆಹೂದ ಜನಾಂಗದವನೆಂದು ಕೇಳಿದ ಮೇಲೆ ಅಹಷ್ವೇರೋಷನ ರಾಜ್ಯದಲ್ಲಿದ್ದ ಮೊರ್ದೆಕೈಯ ಬಂಧುಬಳಗದವರನ್ನು ಅಂದರೆ ಎಲ್ಲಾ ಯೆಹೂದ್ಯರನ್ನು ಸಂಹರಿಸಬೇಕೆಂದು ನಿರ್ಣಯಿಸಿಕೊಂಡನು.
7 Na ɔbosome Nisan (bɛyɛ Oforisuo) mu a ɛyɛ ɔhene Ahasweros adedie mfeɛ dumienu so no, wɔbɔɔ ntonto a wɔfrɛ no Pur de hwehwɛɛ ɛda pa ne bosome a ɛfata sɛ wɔdi dwuma no. Na da a wɔyiiɛ no yɛ Adar bosome (bɛyɛ Ɔbɛnem) da a ɛtɔ so nson a na ɛreyɛ akɔ ntontobɔ no akyi afe mu.
೭ಅರಸನಾದ ಅಹಷ್ವೇರೋಷನ ಆಳ್ವಿಕೆಯ ಹನ್ನೆರಡನೆಯ ತಿಂಗಳಾದ ಚೈತ್ರಮಾಸದಲ್ಲಿ ಹಾಮಾನನ ಮುಂದೆ ಶುಭ ಮಾಸವು ಮತ್ತು ಶುಭದಿನವು ಯಾವುದೆಂದು ತಿಳಿದುಕೊಳ್ಳುವುದಕ್ಕೆ “ಪೂರ್” ಅಂದರೆ ಚೀಟನ್ನು ಹಾಕಿದರು. ಚೀಟು ಹನ್ನೆರಡನೆಯ ತಿಂಗಳಾದ ಫಾಲ್ಗುಣಮಾಸದ ಹದಿಮೂರನೆಯ ದಿನಕ್ಕೆ ಬಿತ್ತು.
8 Na Haman kɔɔ ɔhene Ahasweros nkyɛn kɔka kyerɛɛ no sɛ, “Nnipa bi wɔ hɔ a wɔabɔ apete amantam a ɛwɔ wʼahemman yi nyinaa so. Wɔn mmara ne ɔman foforɔ biara deɛ bɔ abira, na mpo, wɔbu ɔhene mmara so. Ɛno enti, ɛnyɛ mma ɔhene sɛ ɔbɛhwɛ ama wɔatena ase.
೮ಹಾಮಾನನು ಅರಸನಾದ ಅಹಷ್ವೇರೋಷನಿಗೆ, “ನಿನ್ನ ರಾಜ್ಯದ ಎಲ್ಲಾ ಸಂಸ್ಥಾನಗಳಲ್ಲಿ ಒಂದು ಜನಾಂಗವಿರುತ್ತದೆ; ಅದು ಇತರ ಜನಾಂಗಗಳವರ ಮಧ್ಯದಲ್ಲಿ ಹರಡಿದ್ದರೂ ಎಲ್ಲರಿಂದ ಪ್ರತ್ಯೇಕವಾಗಿಯೇ ಇರುತ್ತದೆ. ಆ ಜನಾಂಗಗಳವರ ನಿಯಮಗಳು ಇತರ ಎಲ್ಲಾ ಜನಾಂಗಗಳವರ ನಿಯಮಗಳಿಗಿಂತ ಭಿನ್ನವಾಗಿರುತ್ತವೆ. ಅರಸನ ನಿಯಮಗಳನ್ನಂತೂ ಅವರು ಅನುಸರಿಸುವುದೇ ಇಲ್ಲ, ಅರಸನು ಅವರನ್ನು ಸುಮ್ಮನೆ ಬಿಡುವುದು ಉಚಿತವಲ್ಲ.
9 Sɛ ɛbɛtumi a, Ɔhene kɛseɛ, hyɛ mmara na wɔntɔre wɔn ase, na mɛma aban amammufoɔ dwetɛ tɔno 375, na wɔde agu adehyeɛ fotoɔ no mu.”
೯ಅರಸನ ಚಿತ್ತವಾದರೆ ಅವರನ್ನು ಸಂಹರಿಸಬೇಕು ಎಂಬ ಆಜ್ಞೆಯು ಹೊರಡಲಿ; ಹಾಗೆ ಮಾಡಿದರೆ ನಾನು ರಾಜಭಂಡಾರಕ್ಕಾಗಿ ಹತ್ತು ಸಾವಿರ ತಲಾಂತು ಬೆಳ್ಳಿಯನ್ನು ತೂಕ ಮಾಡಿ ಉದ್ಯೋಗಸ್ಥರ ಕೈಗೆ ಒಪ್ಪಿಸುವೆನು” ಎಂದು ಹೇಳಿದನು.
10 Ɔhene no penee so, worɔɔ ne pɛtea de maa Agagni Hamedata babarima Haman a ɔyɛ Yudafoɔ ɔtamfoɔ no de sii asɛm no so dua.
೧೦ಆಗ ಅರಸನು ತನ್ನ ಕೈಯಲ್ಲಿದ್ದ ಮುದ್ರೆಯುಂಗುರವನ್ನು ತೆಗೆದು ಅಗಾಗನ ವಂಶದವನೂ ಹಮ್ಮೆದಾತನ ಮಗನೂ ಯೆಹೂದ್ಯರ ದ್ವೇಷಿಯೂ ಆದ ಹಾಮಾನನಿಗೆ ಒಪ್ಪಿಸಿದನು.
11 Ɔhene no ka kyerɛɛ Haman sɛ, “Ma sika no ntena hɔ, nanso wo ne nnipa no nni no sɛdeɛ wopɛ no biara.”
೧೧ಅರಸನು ಹಾಮಾನನಿಗೆ ಕೊಟ್ಟು, “ಆ ಬೆಳ್ಳಿ ನಿನ್ನಲ್ಲೇ ಇರಲಿ; ನೀನು ಆ ಜನರನ್ನು ಏನು ಬೇಕಾದರೂ ಮಾಡಬಹುದು” ಎಂದು ಹೇಳಿದನು.
12 Nisan bosome (bɛyɛ Oforisuo) da a ɛtɔ so dunson no, Haman frɛɛ ɔhene atwerɛfoɔ ma ɔkaa deɛ ɔpɛ sɛ ɔtwerɛ de kɔma mmapɔmma, amantam amradofoɔ a wɔwɔ mmea nyinaa, adwumayɛfoɔ a wɔwɔ amantam no mu, ma wɔtwerɛɛ no wɔ wɔn ankasa kasa mu. Ɔhene Ahasweros na wɔde ne din hyɛɛ nkrataa no ase, na wɔde ne kawa no sosɔɔ ano,
೧೨ಮೊದಲನೆಯ ತಿಂಗಳಿನ ಹದಿಮೂರನೆಯ ದಿನದಲ್ಲಿ ರಾಜಲೇಖಕರು ಕೂಡಿ ಬರಬೇಕು ಎಂದು ಅಪ್ಪಣೆಯಾಯಿತು. ಅವರು ಹಾಮಾನನ ಆಜ್ಞಾನುಸಾರ ಉಪರಾಜರಿಗೂ, ಆಯಾ ಸಂಸ್ಥಾನಗಳ ಅಧಿಕಾರಿಗಳಿಗೂ, ಆಯಾ ಜನಾಂಗಗಳ ಅಧಿಪತಿಗಳಿಗೂ ಪತ್ರಗಳನ್ನು ಬರೆದರು. ಆಯಾ ಸಂಸ್ಥಾನಗಳ ಬರಹದಲ್ಲಿಯೂ ಆಯಾ ಜನಾಂಗಗಳ ಭಾಷೆಯಲ್ಲಿಯೂ ಇದ್ದ ಆ ಪತ್ರಗಳು ಅರಸನಾದ ಅಹಷ್ವೇರೋಷನ ಹೆಸರಿನಲ್ಲೇ ಲಿಖಿತವಾಗಿದ್ದವು; ಅವುಗಳಿಗೆ ರಾಜಮುದ್ರೆಯನ್ನು ಹಾಕಲಾಗಿತ್ತು.
13 na wɔde somaa abɔfoɔ maa wɔde kokɔɔ amantam a ɛwɔ ahemman no mu nyinaa. Nkrataa no hyɛɛ mmara sɛ, ɛsɛ sɛ wɔkunkum Yudafoɔ nyinaa, mmɔfra ne mpanin, a mmaa ne mmɔfra ka ho, tɔre wɔn ase ɛda koro. Wɔhyɛɛ sɛ, saa asɛm yi nsi wɔ Adar bosome (bɛyɛ Ɔbɛnem) da a ɛtɔ so nson, a ɛyɛ afe akyi a wɔhyɛɛ mmara no. Yudafoɔ agyapadeɛ no, wɔde bɛma wɔn akumfoɔ.
೧೩ಪತ್ರಗಳು ಅಂಚೆಯವರ ಮುಖಾಂತರ ಎಲ್ಲಾ ರಾಜಸಂಸ್ಥಾನಗಳಿಗೆ ಕಳುಹಿಸಲ್ಪಟ್ಟವು. ಅವುಗಳಲ್ಲಿ, “ಒಂದೇ ದಿನದಲ್ಲಿ ಅಂದರೆ ಹನ್ನೆರಡನೆಯ ತಿಂಗಳಾದ ಫಾಲ್ಗುಣಮಾಸದ ಹದಿಮೂರನೆಯ ದಿನದಲ್ಲಿ ಹುಡುಗರು, ಹಿರಿಯರು, ಹೆಂಗಸರು, ಮಕ್ಕಳು ಎಂದು ನೋಡದೆ ಎಲ್ಲಾ ಯೆಹೂದ್ಯರನ್ನು ಕೊಲ್ಲಿರಿ, ಸಂಹರಿಸಿರಿ, ನಿರ್ನಾಮಗೊಳಿಸಿರಿ. ಅವರ ಸೊತ್ತನ್ನು ಸೂರೆಮಾಡಿರಿ” ಎಂದೂ ಬರೆದಿತ್ತು.
14 Wɔde mmara no sɛso bi bɛkokɔ amantam no nyinaa so, na wɔbɛma ɔmanfoɔ nyinaa nso ate mu nsɛm, sɛdeɛ wɔbɛtumi adi dwuma no wɔ ɛda a wɔahyɛ no so.
೧೪ಅದು ಮಾತ್ರವಲ್ಲದೆ, “ಈ ಪತ್ರದ ಒಂದೊಂದು ಪ್ರತಿಯು ಪ್ರತಿಯೊಂದು ಸಂಸ್ಥಾನದಲ್ಲಿ ರಾಜವಿಧಿಯೆಂದು ಹೊರಡಿಸಿ ಎಲ್ಲರೂ ಆ ದಿನದಲ್ಲಿ ಸಿದ್ಧರಾಗಿರುವ ಹಾಗೆ ಎಲ್ಲಾ ಜನರಿಗೆ ತಿಳಿಯುವಂತೆ ಪ್ರಕಟಿಸಬೇಕು” ಎಂದು ಬರೆಯಲಾಗಿತ್ತು.
15 Ɔhene no hyɛ maa wɔde mmara no somaa abɔfoɔ a wɔn ho yɛ herɛ na wɔbɔɔ no dawuro wɔ Susa aban no mu. Afei, ɔhene no ne Haman tenaa ase nomm nsã; nanso Susa kuropɔn no mu yɛɛ basabasa.
೧೫ಈ ನಿರ್ಣಯವು ಶೂಷನ್ ಅರಮನೆಯಲ್ಲಿ ಪ್ರಕಟವಾದ ಕೂಡಲೇ ಅಂಚೆಯವರು ರಾಜಾಜ್ಞೆಯ ಮೇರೆಗೆ ಶೀಘ್ರವಾಗಿ ಹೊರಟರು. ಅರಸನಾದರೋ ಹಾಮಾನನನೊಡನೆ ಮದ್ಯಪಾನ ಮಾಡುವುದಕ್ಕೆ ಕುಳಿತುಕೊಂಡನು. ಅತ್ತ ಶೂಷನ್ ಪಟ್ಟಣದಲ್ಲಿ ತಳಮಳ ಉಂಟಾಯಿತು.