< 2 Korintofoɔ 4 >

1 Onyankopɔn nam nʼadom so de saa asɛm yi abrɛ yɛn na ɛno enti, ɛmma yɛn akoma ntu.
ಆದ್ದರಿಂದ ದೇವರ ಕರುಣೆಯಿಂದ ಈ ಸೇವೆಯನ್ನು ಹೊಂದಿದವರಾದ ನಾವು ಧೈರ್ಯಗೆಟ್ಟು ಹಿಂಜರಿಯುವುದಿಲ್ಲ.
2 Yɛagyae kokoamsɛm ne aniwudeyɛ nyinaa. Yɛnnaadaa na yɛntwa Onyankopɔn asɛm no ho nkontompo. Yɛnnaadaa obi mma ɔnnye deɛ Atwerɛsɛm no nkaeɛ nni. Yɛgyae saa aniwudeɛ no nyinaa. Yɛgyina Onyankopɔn anim kasa enti yɛka nokorɛ ma wɔn a wɔnim yɛn no nyinaa gye di.
ನಾಚಿಕೆಪಡುವಂತಹ ಗುಪ್ತಕಾರ್ಯಗಳನ್ನು ಬಿಟ್ಟು ಕುತಂತ್ರದಲ್ಲಿ ನಡೆಯದೆ ದೇವರ ವಾಕ್ಯವನ್ನು ಬೆರಕೆ ಮಾಡದೆ, ಸತ್ಯವನ್ನು ಪ್ರಾಮಾಣಿಕವಾಗಿ ಬೋಧಿಸುತ್ತಾ ನಾವು ನೀತಿವಂತರೆಂದು ಪ್ರತಿ ಮನುಷ್ಯನ ಮನಸ್ಸಾಕ್ಷಿಯು ದೇವರ ಮುಂದೆ ಒಪ್ಪಬೇಕಾದ ರೀತಿಯಲ್ಲಿ ನಡೆಯುತ್ತೇವೆ.
3 Sɛ Asɛmpa a yɛka no yɛ ahintasɛm a, ɛyɛ ahintasɛm ma wɔn a wɔreyera.
ನಾವು ಸಾರುವ ಸುವಾರ್ತೆಯು ಕೆಲವರಿಗೆ ಮರೆಯಾಗಿರುವುದಾದರೆ ನಾಶಮಾರ್ಗದಲ್ಲಿರುವವರಿಗೇ ಅದು ಮರೆಯಾಗಿರುವುದು.
4 Wɔnnye nni, ɛfiri sɛ, ɔbonsam asɛe wɔn adwene. Ɔtwe wɔn firi hann a ɛto gu wɔn so no ho; hann a ɛfiri Asɛmpa no mu a ɛfa Kristo a ɔte sɛ Onyankopɔn animuonyam no ho no. (aiōn g165)
ಇವರಲ್ಲಿ ದೇವರ ಪ್ರತಿರೂಪವಾಗಿರುವ ಕ್ರಿಸ್ತನ ತೇಜಸ್ಸನ್ನು ತೋರಿಸುವ ಸುವಾರ್ತೆಯ ಬೆಳಕನ್ನು ನೋಡಬಾರದೆಂದು ಈ ಲೋಕದ ದೇವರು ನಂಬಿಕೆಯಿಲ್ಲದವರ ಮನಸ್ಸನ್ನು ಕುರುಡು ಮಾಡಿದ್ದಾನೆ. (aiōn g165)
5 Ɛnyɛ yɛn ankasa ho na yɛka asɛm no fa. Yɛka Yesu Kristo ho asɛm sɛ ɔno ne Awurade no na yɛn nso Yesu enti, yɛyɛ mo asomfoɔ.
ನಮ್ಮನ್ನೇ ನಾವು ಪ್ರಚಾರಮಾಡಿಕೊಳ್ಳದೆ ನಮ್ಮನ್ನು ಯೇಸುವಿನ ನಿಮಿತ್ತ ನಿಮ್ಮ ದಾಸರೆಂತಲೂ ಕ್ರಿಸ್ತೇಸುವನ್ನೇ ಕರ್ತನೆಂತಲೂ ಘೋಷಿಸುತ್ತೇವೆ.
6 Onyankopɔn a ɔkaa sɛ, “Hann mfiri esum mu nhyerɛn no” ɔno na wahyerɛn wɔ yɛn akoma mu, ama yɛanya Onyankopɔn animuonyam ho nimdeɛ wɔ Yesu Kristo mu.
ಯಾಕೆಂದರೆ “ಕತ್ತಲೆಯೊಳಗಿನಿಂದ ಬೆಳಕು ಪ್ರಕಾಶಿಸಲಿ” ಎಂದು ಹೇಳಿದ ದೇವರು ತಾನೇ ಯೇಸು ಕ್ರಿಸ್ತನ ಮುಖದಲ್ಲಿ ತೋರುವ ದೇವಮಹಿಮೆಯ ಜ್ಞಾನವೆಂಬ ಪ್ರಕಾಶವು ಅನೇಕರಿಗೆ ಉಂಟಾಗುವುದಕ್ಕಾಗಿ ನಮ್ಮ ಹೃದಯಗಳಲ್ಲಿ ಪ್ರಕಾಶಿಸಿದನು.
7 Yɛte sɛ nkukuo a wɔde agyapadeɛ asie mu. Tumi ankasa no firi Onyankopɔn na ɛmfiri yɛn.
ಮಣ್ಣಿನ ಮಡಿಕೆಯಂತಿರುವ ನಮ್ಮಲ್ಲಿ ಈ ನಿಕ್ಷೇಪವನ್ನು ಇಡಲ್ಪಟ್ಟಿರುವುದರಿಂದ ಇಂತಹ ಮಹಾಶಕ್ತಿಯು ದೇವರದೇ ಹೊರತು ನಮ್ಮೊಳಗಿಂದ ಬಂದದ್ದಲ್ಲವೆಂಬುದು ಸ್ಪಷ್ಟವಾಗಿದೆ.
8 Yɛtaa hunu amane, nanso wɔnnsɛee yɛn. Mpo sɛ yɛnnim deɛ ɛsɛ sɛ yɛyɛ a yɛmpa aba.
ಎಲ್ಲಾದರಲ್ಲಿಯೂ ನಮಗೆ ಇಕ್ಕಟ್ಟು ಇದ್ದರೂ ನಾವು ಸಂಕಟಪಡುವವರಲ್ಲ. ನಾವು ಗೊಂದಲಕ್ಕೀಡಾಗಿದ್ದರೂ ಹತಾಶರಾಗುವವರಲ್ಲ.
9 Amaneɛ mu, Onyankopɔn ka yɛn ho, na sɛ wɔbɔ yɛn hwe fam a yɛsɔre bio.
ಹಿಂಸೆಪಡುವವರಾಗಿದ್ದರೂ ಕೈಬಿಡಲ್ಪಟ್ಟವರಲ್ಲ. ಕೆಡವಲ್ಪಟ್ಟವರಾಗಿದ್ದರೂ ನಶಿಸಿಹೊಗುವವರಲ್ಲ.
10 Mmerɛ nyinaa yɛn onipadua no soa Yesu wu a ɔwuiɛ no sɛdeɛ ɛbɛyɛ a nʼabrabɔ bɛda adi wɔ yɛn mu.
೧೦ಯೇಸುವಿನ ಜೀವವು ನಮ್ಮ ದೇಹದಲ್ಲಿ ಉಂಟೆಂದು ಪ್ರಕಟಪಡಿಸುವುದಕ್ಕಾಗಿ ಯೇಸುವಿನ ಮರಣಾವಸ್ಥೆಯನ್ನು ನಾವು ಯಾವಾಗಲೂ ದೇಹದಲ್ಲಿ ಅನುಭವಿಸುವವರಾಗಿದ್ದೇವೆ.
11 Yɛn asetena mu nyinaa, Yesu enti, yɛte hɔ ma owuo sɛdeɛ ɛbɛyɛ a, nʼabrabɔ bɛda adi wɔ yɛn onipadua a ɛwu no mu.
೧೧ಯೇಸುವಿನ ಜೀವವು ನಮ್ಮ ಮರ್ತ್ಯ ಶರೀರದಲ್ಲಿ ಉಂಟೆಂದು ತೋರಿಬರುವುದಕ್ಕಾಗಿ ಬದುಕಿರುವ ನಾವು ಯೇಸುವಿನ ನಿಮಿತ್ತ ಯಾವಾಗಲೂ ಮರಣಕ್ಕೆ ಒಪ್ಪಿಸಲ್ಪಡುತ್ತಾ ಇದ್ದೇವೆ.
12 Yei kyerɛ sɛ owuo di ne dwuma wɔ yɛn mu ɛnna nkwa nso di ne dwuma wɔ mo mu.
೧೨ಹೀಗೆ ನಮ್ಮಲ್ಲಿ ಮರಣವು ನಿಮ್ಮಲ್ಲಿ ಜೀವವು ವ್ಯಾಪಿಸುತ್ತಿದೆ.
13 Atwerɛsɛm no ka sɛ, “Mekasaeɛ, ɛfiri sɛ, na megye di.” Saa honhom mu gyidie no ara so na ɛma yɛn nso yɛkasa, ɛfiri sɛ, yɛgye di.
೧೩“ನಾನು ನಂಬಿದೆನು. ಆದ್ದರಿಂದ ಮಾತನಾಡಿದೆನು.” ಎಂಬ ಶಾಸ್ತ್ರೋಕ್ತಿಯಲ್ಲಿ ಕಾಣುವಹಾಗೆ ನಂಬಿಕೆಯ ಅದೇ ಆತ್ಮನು ನಮ್ಮಲ್ಲಿರುವುದರಿಂದ ನಾವು ನಂಬಿದವರಾಗಿ ಮಾತನಾಡುತ್ತೇವೆ.
14 Yɛnim sɛ Onyankopɔn a ɔmaa Awurade Yesu sɔre firii awufoɔ mu no bɛma yɛne Yesu asɔre na ɔde yɛn abɛka mo ho wɔ nʼanim.
೧೪ಕರ್ತನಾದ ಯೇಸುವನ್ನು ಎಬ್ಬಿಸಿದಾತನು ನಮ್ಮನ್ನು ಸಹ ಯೇಸುವಿನೊಂದಿಗೆ ಎಬ್ಬಿಸಿ ನಿಮ್ಮ ಜೊತೆಯಲ್ಲಿ ತನ್ನ ಮುಂದೆ ನಿಲ್ಲಿಸುವನೆಂದು ತಿಳಿದವರಾಗಿದ್ದೇವೆ.
15 Mo enti na yeinom bɛba mu; na sɛdeɛ Onyankopɔn adom no reduru nnipa bebree nkyɛn no, saa ara nso na wɔbɛbɔ mpaeɛ ada Onyankopɔn ase de ahyɛ no animuonyam.
೧೫ಆ ಬಾಧೆಗಳೆಲ್ಲಾ ನಿಮ್ಮ ಹಿತಕ್ಕಾಗಿಯೇ ನಮಗೆ ಸಂಭವಿಸುತ್ತವೆ. ಅವುಗಳಲ್ಲಿ ಅಧಿಕವಾಗಿ ದೊರಕುವ ದೈವಕೃಪೆಯು ಬಹು ಜನರೊಳಗೆ ಕೃತಜ್ಞತೆಯನ್ನು ಹುಟ್ಟಿಸುವುದರಿಂದ ದೇವರ ಮಹಿಮೆಗೆ ಅಧಿಕವಾದ ಸ್ತುತಿ ಸ್ತೋತ್ರಗಳು ಉಂಟಾಗುವುದು.
16 Esiane yei enti, yɛn bo ntu. Ɛwom sɛ yɛn onipadua no reporɔ nkakrankakra deɛ, nanso yɛn honhom no deɛ, ɛsesa yɛ foforɔ da biara da.
೧೬ಆದ್ದರಿಂದ ನಾವು ಧೈರ್ಯಗೆಡುವುದಿಲ್ಲ. ನಮ್ಮ ದೇಹವು ನಾಶವಾಗುತ್ತಾ ಇದ್ದರೂ ನಮ್ಮ ಅಂತರಂಗವು ದಿನೇ ದಿನೇ ಹೊಸದಾಗುತ್ತಾ ಬರುತ್ತದೆ.
17 Na saa ɔhaw kakra a yɛfa mu no de animuonyam a ɛnni awieeɛ a ɛboro saa ɔhaw no so no bɛbrɛ yɛn. (aiōnios g166)
೧೭ಹೇಗೆಂದರೆ ಕ್ಷಣಮಾತ್ರವಿರುವ ನಮ್ಮ ಈ ಸ್ವಲ್ಪ ಸಂಕಟವು ಅತ್ಯಂತಾಧಿಕವಾಗಿ ಪ್ರತಿಫಲವನ್ನು ಉಂಟುಮಾಡಿ ನಮಗೆ ನಿರಂತರವಾಗಿರುವ ಅತಿಶ್ರೇಷ್ಟ ತೇಜಸ್ಸನ್ನು ದೊರಕಿಸುತ್ತದೆ. (aiōnios g166)
18 Yɛmfa yɛn adwene nkɔ nneɛma a yɛhunu so, na mmom, nneɛma a yɛnhunu so na yɛde yɛn adwene kɔ. Deɛ wɔtumi hunu no ntena hɔ nkyɛ, nanso deɛ yɛntumi nhunu no tena hɔ daa. (aiōnios g166)
೧೮ನಾವು ಕಾಣುವಂಥದ್ದನ್ನು ಲಕ್ಷಿಸದೇ ಕಾಣದಿರುವಂಥದ್ದನ್ನು ಲಕ್ಷಿಸುವವರಾಗಿದ್ದೇವೆ. ಕಾಣುವಂಥದ್ದು ಸ್ವಲ್ಪ ಕಾಲ ಮಾತ್ರ ಇರುವುದು ಕಾಣದಿರುವಂಥದ್ದು ಸದಾಕಾಲವೂ ಇರುವುದು. (aiōnios g166)

< 2 Korintofoɔ 4 >