< 2 Berɛsosɛm 26 >
1 Yuda manfoɔ de Amasia babarima Usia a na wadi mfeɛ dunsia tenaa ahennwa so sɛ wɔn ɔhene foforɔ.
೧ಆನಂತರ ಎಲ್ಲಾ ಯೆಹೂದ್ಯರು ಅಮಚ್ಯನ ಮಗನಾದ ಉಜ್ಜೀಯನನ್ನು ಅರಸನ್ನನ್ನಾಗಿ ಮಾಡಿದರು. ಉಜ್ಜೀಯನು ಅರಸನಾದಾಗ ಹದಿನಾರು ವರ್ಷದವನಾಗಿದ್ದ.
2 Usia agya wuo akyi no, ɔsane kyekyeree Elot kuro no, na ɔdane maa Yuda.
೨ಇವನು ಏಲೋತ್ ಪಟ್ಟಣವನ್ನು ಪುನಃ ಯೆಹೂದ ರಾಜ್ಯಕ್ಕೆ ಸೇರಿಸಿಕೊಂಡು ಭದ್ರಪಡಿಸಿದನು.
3 Usia dii adeɛ no, na wadi mfirinhyia dunsia, na ɔdii ɔhene wɔ Yerusalem mfirinhyia aduonum mmienu. Ne maame a ɔfiri Yerusalem no din de Yeholia.
೩ಅವನು ಯೆರೂಸಲೇಮಿನಲ್ಲಿ ಐವತ್ತೆರಡು ವರ್ಷಗಳ ಕಾಲ ಆಳಿದನು. ಯೆರೂಸಲೇಮಿನವಳಾದ ಯೆಕೊಲ್ಯ ಎಂಬಾಕೆಯು ಅವನ ತಾಯಿ.
4 Na ɔtene wɔ Awurade ani so, sɛdeɛ nʼagya Amasia teɛ no.
೪ಅವನು ತನ್ನ ತಂದೆಯಾದ ಅಮಚ್ಯನಂತೆ ಯೆಹೋವನ ಚಿತ್ತಾನುಸಾರವಾಗಿ ನಡೆದನು.
5 Sakaria berɛ so no, Usia hwehwɛɛ Onyankopɔn akyiri ɛkwan, ɛfiri sɛ, ɔkaa Onyankopɔn suro ho nsɛm kyerɛɛ no. Na ɛsiane sɛ ɔhene no hwehwɛɛ Awurade akyiri kwan no enti, Onyankopɔn maa no nkɔsoɔ.
೫ದೈವಭಕ್ತಿಯನ್ನು ಬೋಧಿಸುತ್ತಿದ್ದ ಜೆಕರ್ಯನ ಜೀವಮಾನಕಾಲದಲ್ಲಿ ಅವನು ದೇವರನ್ನು ಅವಲಂಬಿಸಿಕೊಂಡಿದ್ದನು; ಹೀಗೆ ಅವನು ಯೆಹೋವನನ್ನು ಅವಲಂಬಿಸಿದ್ದ ಕಾಲದಲ್ಲೆಲ್ಲಾ ದೇವರಾದ ಯೆಹೋವನು ಅವನನ್ನು ಅಭಿವೃದ್ಧಿಗೆ ತಂದನು.
6 Ɔtuu Filistifoɔ so sa, na ɔbubuu Gat, Yabne ne Asdod afasuo. Na ɔkyekyeree nkuro afoforɔ wɔ Asdod fam ne mmeammea bi a ɛwɔ Filistia.
೬ಅವನು ಫಿಲಿಷ್ಟಿಯರ ಮೇಲೆ ಯುದ್ಧಕ್ಕಾಗಿ ಹೊರಟು ಗತ್ ಊರು, ಯಬ್ನೆ, ಅಷ್ಡೋದ್ ಎಂಬ ಪಟ್ಟಣಗಳ ಗೋಡೆಗಳನ್ನು ಕೆಡವಿಬಿಟ್ಟು ಅಷ್ಡೋದಿನ ಮತ್ತು ಫಿಲಿಷ್ಟಿಯರ ಪ್ರಾಂತ್ಯಗಳಲ್ಲಿ ಪಟ್ಟಣಗಳನ್ನು ಕಟ್ಟಿಸಿದನು.
7 Ɛnyɛ ɔko a ɔne Filistifoɔ koeɛ no mu nko ara na Onyankopɔn boaa no, na mmom ɔko a ɔne Arabfoɔ a wɔwɔ Gur Baal koeɛ ne Meunifoɔ ko mu nso, ɔboaa no.
೭ಫಿಲಿಷ್ಟಿಯರೊಡನೆ ಗೂರ್ ಬಾಳಿನಲ್ಲಿರುವ ಅರಬಿಯರೊಡನೆ ಹಾಗು ಮೆಗೂನ್ಯರೊಡನೆ ಯುದ್ಧ ಮಾಡಿದಾಗ ಯೆಹೋವನು ಅವನಿಗೆ ಸಹಾಯ ಮಾಡಿದನು.
8 Meunifoɔ no tuaa apeatoɔ maa no, na ne din hyeta kɔduruu Misraim, ɛfiri sɛ, na ɔwɔ tumi a ɛso.
೮ಅಮ್ಮೋನಿಯರೂ ಉಜ್ಜೀಯನಿಗೆ ಕಪ್ಪವನ್ನು ಕೊಡುತ್ತಿದ್ದರು. ಅವನು ಅಧಿಕಬಲವುಳ್ಳವನ್ನಾದುದರಿಂದ ಅವನ ಹೆಸರು ಐಗುಪ್ತದ ಮೇರೆಯವರೆಗೂ ಹಬ್ಬಿತು.
9 Usia sisii ɔwɛn abantenten wɔ Yerusalem wɔ Twɛtwɛwa Ɛpono ano, Bɔnhwa Ɛpono ano ne ɔfasuo no ntwea mu no so.
೯ಉಜ್ಜೀಯನು ಯೆರೂಸಲೇಮಿನಲ್ಲಿ ಮೂಲೆಬಾಗಿಲು, ತಗ್ಗಿನ ಬಾಗಿಲು, ಗೋಡೆ ತಿರುಗುವ ಭಾಗಗಳ ಮೇಲೆ ಗೋಪುರಗಳನ್ನು ಕಟ್ಟಿಸಿ ಭದ್ರಗೊಳಿಸಿದನು.
10 Ɔsane sisii abankɛseɛ wɔ ɛserɛ so, tutuu nsubura bebree, ɛfiri sɛ, na ɔyɛn mmoa pii wɔ Yuda bepɔ ase hɔ. Na ɔyɛ ɔbarima a nʼani gye kua ho. Na ɔwɔ adwumayɛfoɔ bebree a wɔhwɛ ne mfuo ne ne bobefuo a ɛwɔ mmepɔ no nsianeɛ mu ne bɔnhwa nsase bereɛ no so.
೧೦ಅವನಿಗೆ ಇಳಿಜಾರಿನ ಪ್ರದೇಶದಲ್ಲಿಯೂ, ತಪ್ಪಲ ಸೀಮೆಯಲ್ಲಿಯೂ ಅಲ್ಲದೆ ಅಡವಿಯಲ್ಲಿಯೂ ಪಶುಗಳ ದೊಡ್ಡ ಮಂದೆಗಳು ಇದ್ದವು. ಆದುದರಿಂದ ಆ ಅಡವಿಯಲ್ಲಿ ಗೋಪುರಗಳನ್ನು ಕಟ್ಟಿಸಿ ಅನೇಕ ಬಾವಿಗಳನ್ನು ತೋಡಿಸಿದನು. ಅವನಿಗೆ ವ್ಯವಸಾಯದಲ್ಲಿ ಬಹಳ ಅಭಿರುಚಿ ಇದ್ದುದರಿಂದ ಗುಡ್ಡ, ಫಲವತ್ತಾದ ಬಯಲು, ಇವುಗಳಲ್ಲಿ ಹೊಲ ಹಾಗು ದ್ರಾಕ್ಷಿ ತೋಟಗಳಲ್ಲಿ ಕೆಲಸಗಾರರನ್ನು ನೇಮಿಸಿದನು.
11 Na Usia wɔ asraafoɔ a wɔyɛ akofoɔ akɛseɛ a wɔwɔ akodie mu nteteeɛ. Na wɔyɛ akuakuo a wɔasiesie wɔn ho ama ɔko. Na Yeiel a ɔyɛ akodɔm no twerɛfoɔ ne ne ɔboafoɔ Maaseia na wɔboaboa akofoɔ kɛseɛ yi ano. Na wɔhyɛ Hanania a ɔyɛ ɔhene no mpanimfoɔ no mu baako ase.
೧೧ಇದಲ್ಲದೆ, ಉಜ್ಜೀಯನಿಗೆ ಯುದ್ಧಕ್ಕೋಸ್ಕರ ಸೈನ್ಯವೂ ಇತ್ತು. ಲೇಖಕನಾದ ಯೆಗೀಯೇಲ್, ಅಧಿಕಾರಿಯಾದ ಮಾಸೇಯ ಇವರು ಹಾಕಿಕೊಟ್ಟ ಪಟ್ಟಿಯಕ್ರಮ ಪ್ರಕಾರ ಅರಸನ ಸರದಾರರಲ್ಲಿ ಒಬ್ಬನಾದ ಹನನ್ಯನ ಆಜ್ಞಾನುಸಾರವಾಗಿ. ಆಯಾ ಗುಂಪುಗಳು ಯುದ್ಧಕ್ಕೆ ಹೊರಡುತ್ತಿದ್ದವು.
12 Mmusua ntuanofoɔ mpenu ahansia na na wɔma saa akofoɔ abenfoɔ yi akwankyerɛ.
೧೨ಯುದ್ಧವೀರರೂ ಎಲ್ಲಾ ಗೋತ್ರಪ್ರಧಾನರ ಸಂಖ್ಯೆಯು ಎರಡು ಸಾವಿರದ ಆರು ನೂರು.
13 Na akodɔm no dodoɔ yɛ ɔpehasa ne nson ne ahanum a wɔn nyinaa nim de. Na wɔada wɔn ho so sɛ wɔbɛboa ɔhene no ako atia ɔtamfoɔ biara.
೧೩ಇವರ ಕೈಕೆಳಗಿದ್ದ ಭಟರ ಸಂಖ್ಯೆಯು ಮೂರು ಲಕ್ಷದ ಏಳು ಸಾವಿರದ ಐನೂರು; ಇವರು ಅರಸನ ಸೇವೆಯಲ್ಲಿದ್ದು ಅವನ ವೈರಿಗಳಿಗೆ ವಿರುದ್ಧವಾಗಿ ಪರಾಕ್ರಮದಿಂದ ಯುದ್ಧಮಾಡುತ್ತಿದ್ದರು.
14 Usia maa akodɔm no nyinaa akokyɛm, mpea, nnadeɛ kyɛ, nkataboɔ, bɛmma ne ahwimmoɔ aboɔ.
೧೪ಉಜ್ಜೀಯನು ಈ ಎಲ್ಲಾ ಸೈನ್ಯದವರಿಗೆ ಬೇಕಾದ ಗುರಾಣಿ, ಬರ್ಜಿ, ಶಿರಸ್ತ್ರಾಣ, ಕವಚ, ಬಿಲ್ಲು, ಕವಣೆಯಕಲ್ಲು ಇವುಗಳನ್ನು ಒದಗಿಸಿ ಕೊಟ್ಟನು.
15 Afei, abenfoɔ bi yɛɛ mfidie de sisii Yerusalem afasuo no so a ɛto agyan ne aboɔ firi abantenten no so ne ɔfasuo twɛtwɛwa so. Nʼanimuonyam hyetaeɛ, ɛfiri sɛ, Awurade boaa no yie kɔsii sɛ ɔnyaa tumi kɛseɛ.
೧೫ಇದಲ್ಲದೆ, ಅವನು ಬಾಣಗಳನ್ನೂ, ದೊಡ್ಡ ಕಲ್ಲುಗಳನ್ನು ಬಳಸುವುದಕ್ಕಾಗಿ, ತಜ್ಞರ ಆಜ್ಞೆಯ ಮೇರೆಗೆ ಯಂತ್ರಗಳನ್ನೂ ಮಾಡಿಸಿ, ಅವುಗಳನ್ನು ಯೆರೂಸಲೇಮಿನ ಗೋಪುರಗಳ ಮೇಲೆಯೂ, ಕೋಟೆಕೊತ್ತಲಗಳನ್ನು ಮೇಲೆಯೂ ಇಡಿಸಿದ್ದನು. ಅವನು ಬಲಿಷ್ಠನಾಗುವ ಹಾಗೆ ದೇವರ ಅತಿಶಯವಾದ ಸಹಾಯವು ಆಶ್ಚರ್ಯವಾದ ರೀತಿಯಲ್ಲಿ ಅವನಿಗೆ ದೊರೆಯುತ್ತಿದ್ದುದರಿಂದ; ಅವನ ಕೀರ್ತಿಯೂ ಬಹು ದೂರದ ಮೇರೆಯವರೆಗೂ ಹಬ್ಬಿತು.
16 Nanso, ɔnyaa tumi kɛseɛ no, ɔyɛɛ ahantan a ɛnam so maa ɔhwee ase. Ɔyɛɛ bɔne tiaa Awurade ne Onyankopɔn, ɛfiri sɛ ɔkɔɔ Awurade Asɔredan kronkronbea hɔ, kɔhyee nnuhwam wɔ afɔrebukyia no so.
೧೬ಆದರೆ ಅವನು ಬಲಿಷ್ಠನಾದ ಮೇಲೆ ಅವನ ಅವನತಿಗಾಗಿ ಗರ್ವಿಷ್ಠನಾಗಿ ಭ್ರಷ್ಟನಾದನು; ತನ್ನ ದೇವರಾದ ಯೆಹೋವನಿಗೆ ದ್ರೋಹಿಯಾಗಿ ಧೂಪವೇದಿಯ ಮೇಲೆ ತಾನೇ ಧೂಪ ಹಾಕಬೇಕೆಂದು ಯೆಹೋವನ ಆಲಯದೊಳಗೆ ಪ್ರವೇಶಿಸಿದನು.
17 Ɔsɔfopanin Asaria ne Awurade asɔfoɔ foforɔ aduɔwɔtwe, akokoɔdurufoɔ kɔhwehwɛɛ no.
೧೭ಆಗ ಮಹಾಯಾಜಕನಾದ ಅಜರ್ಯನೂ ಹಾಗು ಧೈರ್ಯಶಾಲಿಗಳಾದ ಯೆಹೋವನ ಎಂಭತ್ತು ಮಂದಿ ಇತರ ಯಾಜಕರೂ ಅರಸನಾದ ಉಜ್ಜೀಯನ ಹಿಂದೆಯೇ ಹೋಗಿ
18 Wɔka sii ɔhene Usia anim sɛ, “Ɛnyɛ wo Usia na ɛsɛ sɛ wohye nnuhwam ma Awurade. Ɛyɛ asɔfoɔ nko ara, Aaron mmammarima a, wɔayi wɔn asi hɔ ama saa dwumadie no nko ara adwuma. Firi kronkronbea ha kɔ, ɛfiri sɛ, woayɛ bɔne. Onyankopɔn renhyɛ wo animuonyam wɔ yei ho.”
೧೮ಅರಸನ ಎದುರಿಗೆ ನಿಂತು ಅವನಿಗೆ, “ಉಜ್ಜೀಯನೇ, ಯೆಹೋವನಿಗೋಸ್ಕರ ಧೂಪ ಹಾಕುವುದು ನಿನ್ನ ಕೆಲಸವಲ್ಲ; ಅದಕ್ಕೋಸ್ಕರ ಆರೋನನ ಸಂತಾನದವರಾದ ಯಾಜಕರು ಪ್ರತಿಷ್ಠಿತರಾಗಿದ್ದಾರೆ. ಪವಿತ್ರಾಲಯವನ್ನು ಬಿಟ್ಟುಹೋಗು; ನೀನು ಮಾಡುತ್ತಿರುವುದು ದ್ರೋಹ. ಇದಕ್ಕೆ ದೇವರಾದ ಯೆಹೋವನಿಂದ ನಿನಗೆ ಗೌರವ ದೊರಕಲಾರದು” ಎಂದರು.
19 Usia bo fuu yie, na wamfa nnuhwamhyeɛ kuruwa a na ɛkura no no ansi fam. Ɔne asɔfoɔ no gyina nnuhwam afɔrebukyia no anim wɔ Awurade Asɔredan no mu no, prɛko pɛ, kwata totɔɔ ne moma so.
೧೯ಆಗ ಧೂಪ ಹಾಕಬೇಕೆಂದು ಕೈಯಲ್ಲಿ ಧೂಪಾರತಿಯನ್ನು ಹಿಡಿದುಕೊಂಡಿದ್ದ ಉಜ್ಜೀಯನು ಕೋಪಗೊಂಡನು. ಅವನು ಯೆಹೋವನ ಆಲಯದ ಧೂಪವೇದಿಯ ಬಳಿಯಲ್ಲಿ ನಿಂತು, ಯಾಜಕರೊಡನೆ ಸಿಟ್ಟಿನಿಂದ ಮಾತನಾಡುತ್ತಿರುವಾಗಲೆ ಯಾಜಕರ ಸಮಕ್ಷಮದಲ್ಲೇ, ಅವನ ಹಣೆಯ ಮೇಲೆ ಕುಷ್ಠವು ಕಾಣಿಸಿಕೊಂಡಿತು.
20 Ɛberɛ a Asaria ne asɔfoɔ a aka no hunuu kwata no, wɔpiapiaa no firii hɔ. Na ɔhene no ankasa pɛɛ sɛ ɔfiri hɔ ntɛm, ɛfiri sɛ, Awurade na wabɔ no.
೨೦ಮಹಾಯಾಜಕನಾದ ಅಜರ್ಯನೂ ಎಲ್ಲಾ ಯಾಜಕರೂ ಅವನನ್ನು ದೃಷ್ಟಿಸಿ ನೋಡಿದಾಗ, ಅವನ ಹಣೆಯಲ್ಲಿ ಕುಷ್ಠವು ಕಂಡುಬಂದ ಕಾರಣ, ಅವನನ್ನು ಶೀಘ್ರವಾಗಿ ಅಲ್ಲಿಂದ ಹೊರಡಿಸಿದರು. ಯೆಹೋವನು ತನ್ನನ್ನು ಬಾಧಿಸಿದ್ದಾನೆಂದು ಅವನಿಗೆ ತಿಳಿಯಿತು. ಅವನೂ ಶೀಘ್ರವಾಗಿ ಹೊರಗೆ ಹೋಗಲು ಆತುರಪಟ್ಟನು.
21 Enti, kwata yɛɛ ɔhene Usia kɔsii sɛ ɔwuiɛ. Wɔpamoo no firii nnipa mu maa ɔno nko ara tenaeɛ a wankɔ Awurade Asɔredan mu. Wɔde ne babarima Yotam tenaa ahemfie hɔ ma ɔdii nnipa a wɔwɔ asase no so so.
೨೧ಉಜ್ಜೀಯನು ಜೀವದಿಂದಿರುವ ವರೆಗೂ ಕುಷ್ಠರೋಗಿಯಾಗಿದ್ದು, ಯೆಹೋವನ ಆಲಯಕ್ಕೆ ಬಾರದಂತೆ ಬಹಿಷ್ಕೃತನಾದನು. ಅವನು ಕುಷ್ಠದ ದೆಸೆಯಿಂದ ಪ್ರತ್ಯೇಕವಾದ ಮನೆಯಲ್ಲಿ ವಾಸಮಾಡಬೇಕಾಯಿತು. ರಾಜಗೃಹಾದಿಪತ್ಯವನ್ನೂ ಮತ್ತು ಪ್ರಜಾಪಾಲನೆಯನ್ನೂ ಅವನ ಮಗನಾದ ಯೋತಾಮನು ನೋಡಿಕೊಳ್ಳುತ್ತಿದ್ದನು.
22 Amos babarima Yesaia atwerɛ Usia ahennie ho nsɛm nkaeɛ firi ahyɛaseɛ kɔsi awieeɛ ato hɔ.
೨೨ಉಜ್ಜೀಯನ ಉಳಿದ ಪೂರ್ವೋತ್ತರ ಚರಿತ್ರೆಯನ್ನು ಆಮೋಚನ ಮಗನಾದ ಯೆಶಾಯನೆಂಬ ಪ್ರವಾದಿಯು ಬರೆದಿದ್ದಾನೆ.
23 Usia wuiɛ, na ɛsiane sɛ kwata yɛɛ no enti, wɔsiee no bɛn ahemfo amusieeɛ. Na ne babarima Yotam na ɔdii nʼadeɛ sɛ ɔhene.
೨೩ಉಜ್ಜೀಯನು ತನ್ನ ಪೂರ್ವಿಕರ ಬಳಿಗೆ ಸೇರಲು ಅವನ ಶವವನ್ನು ಕುಷ್ಠ ರೋಗಿಯದೆಂದು ಬಗೆದು, ರಾಜ ಕುಟುಂಬದ ಸ್ಮಶಾನವಿದ್ದ ಹೊಲದಲ್ಲಿ ಸಮಾಧಿ ಮಾಡಿದರು. ಅವನಿಗೆ ಬದಲಾಗಿ ಅವನ ಮಗನಾದ ಯೋತಾಮನು ಅರಸನಾದನು.