< 1 Tesalonikafoɔ 4 >
1 Anuanom, asɛm a ɛtwa toɔ ne sɛ, mosuaa kwan pa a ɛsɛ sɛ mofa so tena ase a ɛbɛsɔ Onyankopɔn ani. Na saa pɛpɛɛpɛ na morebɔ mo bra. Enti, yɛde yɛn Awurade Yesu din srɛ, hyɛ mo sɛ, monyɛ mma ɛmmoro deɛ moreyɛ seesei no so.
೧ಕಡೆಯದಾಗಿ, ಸಹೋದರರೇ, ನಾವು ಕರ್ತನಾದ ಯೇಸುವಿನ ಮುಖಾಂತರ ನಿಮಗೆ ಕೊಟ್ಟಿರುವ ಆಜ್ಞೆಗಳನ್ನು ತಿಳಿದಿದ್ದೀರಷ್ಟೆ.
2 Monim nkyerɛkyerɛ a ɛnam Awurade Yesu tumi enti, yɛtumi kyerɛkyerɛɛ mo.
೨ಅದುದರಿಂದ ನೀವು ಹೇಗೆ ನಡೆದು ದೇವರನ್ನು ಮೆಚ್ಚಿಸಬೇಕಾಗಿದೆಯೋ ಆ ಆಜ್ಞೆಗಳನ್ನು ನಮ್ಮಿಂದ ಕಲಿತುಕೊಂಡು ಅದರಂತೆ ನಡೆಯುತ್ತಲೇ ಇದ್ದಿರಿ. ನೀವು ಹಾಗೆಯೇ ಇನ್ನೂ ಹೆಚ್ಚಾಗಿ ನಡೆಯಬೇಕೆಂದು ನಿಮ್ಮನ್ನು ಯೇಸು ಕರ್ತನಲ್ಲಿ ಬೇಡಿಕೊಳ್ಳುತ್ತೇವೆ ಹಾಗೂ ಪ್ರಬೋಧಿಸುತ್ತೇವೆ.
3 Yei yɛ Onyankopɔn pɛ a ɔwɔ ma mo. Ɔpɛ sɛ moyɛ kronkron na motwe mo ho firi adwamammɔ ho.
೩ದೇವರ ಚಿತ್ತವೇನಂದರೆ ನೀವು ಶುದ್ಧರಾಗಬೇಕೆಂಬುದೇ. ಆದ್ದರಿಂದ ಹಾದರಕ್ಕೆ ದೂರವಾಗಿರಬೇಕು.
4 Ɛsɛ sɛ mosua sɛdeɛ mohyɛ mo ho so na obiara atumi ne ne yere atena kronnyɛ ne animuonyam so.
೪ದೇವರನ್ನರಿಯದ ಅನ್ಯಜನರಂತೆ ಕಾಮಾಭಿಲಾಷೆಗಳಿಗೆ ಒಳಗಾಗದೆ, ನಿಮ್ಮಲ್ಲಿ ಪ್ರತಿಯೊಬ್ಬನು ಪವಿತ್ರವಾದ ಮನಸ್ಸಿನಿಂದಲೂ ಘನತೆಯಿಂದಲೂ ಪತ್ನಿಯನ್ನು ಸಂಪಾದಿಸಿಕೊಳ್ಳಲು ತಿಳಿಯಬೇಕು.
5 Monntena ase akɔnnɔ anibereɛ so te sɛ wɔn a wɔnnim Onyankopɔn.
೫
6 Onyankopɔn akyiwadeɛ no bi nso ne sɛ, ɛnsɛ sɛ mo mu biara sisi ne yɔnko na ɔgye ne yere, ɛfiri sɛ, sɛ obi yɛ saa a, Onyankopɔn bɛtwe nʼaso dendeenden sɛdeɛ yɛadi ɛkan abɔ mo kɔkɔ no.
೬ಈ ವಿಷಯದಲ್ಲಿ ಯಾರೂ ತನ್ನ ಸಹೋದರನನ್ನು ವಂಚಿಸಿ ಕೇಡು ಮಾಡಬಾರದು. ನಾವು ಮೊದಲೇ ತಿಳಿಸಿ, ನಿಮಗೆ ಖಂಡಿತವಾಗಿ ಹೇಳಿದ ಪ್ರಕಾರ ಇವೆಲ್ಲವುಗಳ ವಿಷಯದಲ್ಲಿ ಕರ್ತನು ಪ್ರತಿಕಾರ ಮಾಡುವವನಾಗಿದ್ದಾನೆ.
7 Onyankopɔn amfrɛ yɛn sɛ yɛmmɛbɔ adwaman, na mmom, ɔfrɛɛ yɛn sɛ yɛntena ase ahoteɛ mu.
೭ದೇವರು ನಮ್ಮನ್ನು ಅಶುದ್ಧತೆಗೆ ಕರೆಯದೆ ಶುದ್ಧರಾಗಿರುವುದಕ್ಕೆ ಕರೆದನು.
8 Ɛno enti, obiara a ɔbɛpo nkyerɛkyerɛ no ntia onipa, na mmom, ɔtia Onyankopɔn a ɔma mo Honhom Kronkron no.
೮ಹೀಗಿರಲು ಈ ಮಾತನ್ನು ತಿರಸ್ಕರಿಸುವವನು ಮನುಷ್ಯರನ್ನು ಮಾತ್ರವಲ್ಲದೆ, ನಿಮಗೆ ಪವಿತ್ರಾತ್ಮವರವನ್ನು ದಯಪಾಲಿಸುವ ದೇವರನ್ನೂ ತಿರಸ್ಕರಿಸುವವನಾಗಿದ್ದಾನೆ.
9 Ɛho nhia sɛ mɛtwerɛ mo afa ɔdɔ a ɛsɛ sɛ modɔ mo nuanom asuafoɔ no ho. Onyankopɔn akyerɛ mo ankasa ɛkwan a ɛsɛ sɛ mofa so dodɔ mo ho mo ho.
೯ಸಹೋದರ ಸ್ನೇಹದ ವಿಷಯದಲ್ಲಿ ನಿಮಗೆ ಬರೆಯುವ ಅವಶ್ಯಕತೆಯಿಲ್ಲ, ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ಉಪದೇಶವನ್ನು ನೀವೇ ದೇವರಿಂದ ಹೊಂದಿದವರಾಗಿದ್ದೀರಿ.
10 Na moada saa ɔdɔ no adi pɛpɛɛpɛ akyerɛ anuanom a wɔwɔ Makedonia no nyinaa. Nanso, anuanom, yɛsrɛ mo sɛ monkɔ so nnodɔ mo ho mo ho mma ɛmmoro saa.
೧೦ಮಕೆದೋನ್ಯದಲ್ಲಿ ವಾಸಿಸುವ ಎಲ್ಲ ಸಹೋದರರನ್ನೂ ಪ್ರೀತಿಸುತ್ತಿರುವುದೇನೋ ನಿಜವೇ. ಆದರೂ ಸಹೋದರರೇ, ನೀವು ಪ್ರೀತಿಯಲ್ಲಿ ಇನ್ನೂ ಹೆಚ್ಚುತ್ತಾ ಬರಬೇಕೆಂದು ನಿಮ್ಮನ್ನು ಉತ್ತೇಜಿಸುತ್ತೇವೆ.
11 Momma ɛnyɛ mo botaeɛ sɛ mobɛtena ase dinn na moahwɛ so adi mo dwuma de abɔ mo ho akɔnhoma sɛdeɛ yɛaka akyerɛ mo dada no.
೧೧ಇದಲ್ಲದೆ ನಾವು ನಿಮಗೆ ಆಜ್ಞೆ ಕೊಟ್ಟಿರುವ ಪ್ರಕಾರ ನೀವು ಮತ್ತೊಬ್ಬರ ವಿಷಯದಲ್ಲಿ ತಲೆಹಾಕದೆ ಸುಮ್ಮಗಿದ್ದು, ಸ್ವಂತ ಕಾರ್ಯಗಳನ್ನೇ ನೋಡಿಕೊಳ್ಳುತ್ತಾ, ಕೈಯಾರೆ ಕೆಲಸಮಾಡಿ ದುಡಿಯಿರಿ.
12 Sɛ moyɛ saa a, ɛbɛma wɔn a wɔnyɛ asuafoɔ no afɛre mo na moremmisa deɛ ɛhia mo nso mfiri obiara nkyɛn.
೧೨ಹೀಗಿದ್ದರೆ ನೀವು ಹೊರಗಿನವರ ದೃಷ್ಟಿಯಲ್ಲಿ ಸಜ್ಜನರಾಗಿರುವುದೇ ಅಲ್ಲದೆ ನಿಮಗೆ ಯಾವುದಕ್ಕೂ ಕೊರತೆಯಿರುವುದಿಲ್ಲ.
13 Anuanom, yɛpɛ sɛ yɛka nokorɛ a ɛfa wɔn a wɔawuwu no ho kyerɛ mo sɛdeɛ ɛbɛyɛ a, morenni ho awerɛhoɔ te sɛ wɔn a wɔnni anidasoɔ no.
೧೩ಸಹೋದರರೇ, ನಿದ್ರೆಹೋಗುವವರ ಗತಿ ಏನೆಂದು ನೀವು ತಿಳಿಯದೆ ಇದ್ದು, ನಿರೀಕ್ಷೆಯಿಲ್ಲದವರಾಗಿರುವ ಇತರರಂತೆ ದುಃಖಿಸಬಾರದು ಎಂಬುದೇ ನಮ್ಮ ಬಯಕೆ.
14 Yɛgye di sɛ Yesu wuiɛ, na ɔsɔree bio. Enti sɛ Onyankopɔn de Yesu ba bio a, ɔde wɔn a wɔnyaa ne mu gyidie ansa na wɔrewuo no bɛka ne ho aba.
೧೪ಯೇಸು ಸತ್ತು ಜೀವಿತನಾಗಿ ಎದ್ದನೆಂದು ನಾವು ನಂಬುತ್ತೇವೆ ಹಾಗೆಯೇ ಯೇಸುವಿನಲ್ಲಿದ್ದು ನಿದ್ರೆಹೋದವರನ್ನು ಸಹ ದೇವರು ಆತನೊಡನೆ ಎಬ್ಬಿಸಿ ಕರೆದುಕೊಂಡು ಬರುವನೆಂದು ನಂಬಬೇಕಲ್ಲವೇ.
15 Awurade nkyerɛkyerɛ a yɛreka akyerɛ mo no ne sɛ, ɛda a Awurade bɛba no, yɛn a yɛte ase yi renni awufoɔ no anim ɛkan.
೧೫ನಾವು ಕರ್ತನ ಮಾತಿನ ಆಧಾರದ ಮೇಲೆ ನಿಮಗೆ ಹೇಳುವುದೇನಂದರೆ, ಕರ್ತನು ಪುನರಾಗಮಿಸುವವರೆಗೆ ಜೀವದಿಂದುಳಿದಿರುವ ನಾವು ಮರಣ ಹೊಂದಿದವರಿಗಿಂತ ಮುಂದಾಗುವುದಿಲ್ಲ.
16 Awurade no ankasa de ɔhyɛ a ano yɛ den, ɔbɔfoɔ panin nteamu ne Onyankopɔn totorobɛnto nnyegyeeɛ firi ɔsoro bɛba fam. Wɔn a wɔawuwu wɔ Kristo mu no bɛsɔre kane,
೧೬ಯಾಕೆಂದರೆ ಕರ್ತನು ತಾನೇ ಆಜ್ಞಾಘೋಷದೊಡನೆಯೂ, ಪ್ರಧಾನದೂತನ ಶಬ್ದದೊಡನೆಯೂ, ದೇವರ ತುತ್ತೂರಿ ಧ್ವನಿಯೊಡನೆಯೂ ಆಕಾಶದಿಂದ ಇಳಿದುಬರುವನು. ಆಗ ಕ್ರಿಸ್ತನಲ್ಲಿ ಸತ್ತವರು ಮೊದಲು ಎದ್ದು ಬರುವರು.
17 na wɔaboaboa yɛn a yɛte ase ɛberɛ no ne wɔn a wɔasɔre no ano wɔ omununkum mu ahyia Awurade wɔ ewiem. Na saa na yɛne Awurade bɛtena daa.
೧೭ಆ ಮೇಲೆ ಜೀವದಿಂದುಳಿದಿರುವ ನಾವು ಅಂತರಿಕ್ಷದಲ್ಲಿ ಕರ್ತನನ್ನು ಎದುರುಗೊಳ್ಳುವುದಕ್ಕಾಗಿ ಅವರೊಂದಿಗೆ ಮೇಘಗಳಲ್ಲಿ ಫಕ್ಕನೆ ಒಯ್ಯಲ್ಪಡುವೆವು. ಹೀಗಾಗಿ ನಾವು ಸದಾಕಾಲವೂ ಕರ್ತನ ಜೊತೆಯಲ್ಲಿರುವೆವು.
18 Enti, momfa saa asɛm yi nkyekyere obiara werɛ.
೧೮ಆದಕಾರಣ ಈ ಮಾತುಗಳಿಂದ ಒಬ್ಬರನ್ನೊಬ್ಬರು ಸಂತೈಸಿಕೊಳ್ಳಿರಿ.