< 1 Ahemfo 10 >
1 Ɛberɛ a Sebahemmaa tee Salomo edin a ahyeta na ɛhyɛ Awurade din animuonyam no, ɔde nsɛmmisa a anoyie yɛ den bɛsɔɔ Salomo hwɛeɛ.
೧ಯೆಹೋವನ ನಾಮಮಹತ್ತಿನಿಂದ ಸೊಲೊಮೋನನಿಗುಂಟಾದ ಕೀರ್ತಿಯನ್ನು ಕುರಿತು ಶೆಬೆದ ರಾಣಿಯು ಕೇಳಿ, ಅವನನ್ನು ಒಗಟುಗಳಿಂದ ಪರೀಕ್ಷಿಸುವುದಕ್ಕಾಗಿ ಬಂದಳು.
2 Ɔde nʼasomfoɔ a wɔdɔɔso yie kaa ne ho baa Yerusalem. Na nyoma a wɔsoso nnuhwam, sikakɔkɔɔ bebree ne aboɔdemmoɔ ka wɔn ho. Ɛberɛ a ɔhyiaa Salomo no, wɔdwennwenee nsɛm bebree a na ɛwɔ ɔhemmaa ani so no ho.
೨ಆಕೆಯು ಸುಗಂಧದ್ರವ್ಯ, ಅಪರಿಮಿತವಾದ ಬಂಗಾರ, ರತ್ನ ಇವುಗಳನ್ನು ಒಂಟೆಗಳ ಮೇಲೆ ಹೇರಿಸಿಕೊಂಡು, ಮಹಾಪರಿವಾರದೊಡನೆ ಯೆರೂಸಲೇಮಿಗೆ ಬಂದು ತನ್ನ ಮನಸ್ಸಿನಲ್ಲಿ ಗೊತ್ತುಮಾಡಿಕೊಂಡಿದ್ದ ಎಲ್ಲಾ ವಿಷಯಗಳನ್ನು ಕುರಿತು ಸೊಲೊಮೋನನೊಡನೆ ಸಂಭಾಷಿಸಿದಳು.
3 Wɔdii biribiara a enti ɔbaa saa nsrahwɛ no ho nkɔmmɔ, maa Salomo yii ne nsɛmmisa biara ano sɛdeɛ ɛsɛ.
೩ಸೊಲೊಮೋನನು ಆಕೆಯ ಎಲ್ಲಾ ಪ್ರಶ್ನೆಗಳಿಗೂ ಉತ್ತರಕೊಟ್ಟನು. ಅವುಗಳಲ್ಲಿ ಸೊಲೊಮೋನನಿಗೆ ತಿಳಿಯದಂಥದ್ದು ಒಂದೂ ಇರಲಿಲ್ಲವಾದುದರಿಂದ ಅವನು ಅವೆಲ್ಲವುಗಳಿಗೆ ಉತ್ತರಕೊಟ್ಟನು.
4 Seba Ɔhemmaa hunuu nyansa a Salomo wɔ ne ahemfie a wasi no,
೪ಶೆಬೆದ ರಾಣಿಯು ಸೊಲೊಮೋನನ ಎಲ್ಲಾ ಜ್ಞಾನ, ಅವನು ಕಟ್ಟಿಸಿದ ಅರಮನೆ,
5 ne ho dwirii no. Nnuane a ɔhunuu sɛ ɛsisi ne didipono so no yɛɛ no nwanwa. Sɛdeɛ na wahyehyɛ ne fie so ahwɛfoɔ no ne wɔn ntadeɛ papa bi a ɛhyehyɛ wɔn, ne sɛdeɛ nkuruwakurafoɔ ne wɔn ntadeɛ yuu ne ɔhyeɛ afɔdeɛ a Salomo bɔɔ no Awurade Asɔredan mu hɔ no yɛɛ no ahodwirie.
೫ಅವನ ಭೋಜನಪೀಠದ ಆಹಾರ, ಆ ಪೀಠದ ಸುತ್ತಲಿರುವ ಉದ್ಯೋಗಸ್ಥರ ಆಸನಗಳು, ಅವನ ಪರಿಚಾರಕರ ಸೇವಾಕ್ರಮ, ಅವರ ಉಡುಪುಗಳು, ಅವನ ಪಾನಕಗಳು ಇವುಗಳನ್ನೂ ಮತ್ತು ಅವನು ಯೆಹೋವನ ಆಲಯದಲ್ಲಿ ಸಮರ್ಪಿಸುತ್ತಿದ್ದ ಸರ್ವಾಂಗಹೋಮಗಳನ್ನೂ ನೋಡಿದಾಗ ವಿಸ್ಮಿತಳಾಗಿ ಹೋದಳು.
6 Ɔhemmaa no firii ahodwirie mu ka kyerɛɛ ɔhene no sɛ, “Nsɛm a metee wɔ me ɔman mu a ɛfa dwuma a woatumi adi ne wo nyansabunu ho no nyinaa yɛ nokorɛ!
೬ಅವಳು ಅರಸನಿಗೆ, “ನಾನು ನನ್ನ ದೇಶದಲ್ಲಿ ನಿನ್ನ ಜ್ಞಾನವನ್ನು, ಕೃತ್ಯಗಳನ್ನೂ ಕುರಿತು ಕೇಳಿದ್ದು ಸತ್ಯವಾಗಿದೆ.
7 Na mennye nni kɔsii sɛ mebɛduruu ha a mʼankasa mede mʼani abɛhunu yi. Nokorɛm, sɛɛ mannte asɛm no mu fa mpo. Wo nyansa ne wo nkɔsoɔ no boro deɛ wɔka kyerɛɛ me no so koraa.
೭ನಾನಾಗಿ ಇಲ್ಲಿಗೆ ಬಂದು ಕಣ್ಣಾರೆ ನೋಡುವುದಕ್ಕಿಂತ ಮೊದಲು ಜನರು ಹೇಳಿದ ಸುದ್ದಿಯನ್ನು ನಂಬಿರಲಿಲ್ಲ. ಈಗ ಇಲ್ಲಿ ಬಂದು ನೋಡಿದರೆ ನಿನ್ನ ಜ್ಞಾನವೈಭವಗಳು ನಾನು ಕೇಳಿದ್ದಕ್ಕಿಂತ ಹೆಚ್ಚಾಗಿವೆ. ಜನರು ಇದರಲ್ಲಿ ಅರ್ಧವನ್ನಾದರೂ ಹೇಳಲಿಲ್ಲ.
8 Anigyeɛ bɛn na saa nnipa yi renya? Adom bɛn na wo mpanimfoɔ a wɔne wowɔ ha anɔpa ne awia tie wo renya mfiri wo nyansa yi mu?
೮ನಿನ್ನ ಪ್ರಜೆಗಳು ಸದಾ ನಿನ್ನ ಮುಂದೆ ನಿಂತುಕೊಂಡು ನಿನ್ನ ಜ್ಞಾನವಾಕ್ಯಗಳನ್ನು ಕೇಳುವ ನಿನ್ನ ಸೇವಕರು ಧನ್ಯರು.
9 Awurade, wo Onyankopɔn no yɛ kɛseɛ ampa. Nʼani gye wo ho, enti ɔde wo asi Israel ahennwa so. Ɛfiri sɛ, ɔdɔ a Awurade de dɔ Israel no yɛ ɔdɔ a ɛnsa da. Wasi wo ɔhene sɛ wode atɛntenenee ne teneneeyɛ bɛbu ɔman no.”
೯ನಿನ್ನನ್ನು ಮೆಚ್ಚಿ ಇಸ್ರಾಯೇಲ್ ಸಿಂಹಾಸನದ ಮೇಲೆ ಕುಳ್ಳಿರಿಸಿದ ನಿನ್ನ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ. ಆತನು ಇಸ್ರಾಯೇಲರನ್ನು ಸದಾ ಪ್ರೀತಿಸುವವನಾದುದರಿಂದ ಅವರ ನೀತಿನ್ಯಾಯಗಳನ್ನು ಸ್ಥಾಪಿಸುವುದಕ್ಕೋಸ್ಕರ ನಿನ್ನನ್ನೇ ಅರಸನನ್ನಾಗಿ ನೇಮಿಸಿದ್ದಾನೆ” ಎಂದು ಹೇಳಿದಳು.
10 Na ɔkyɛɛ ɔhene no sikakɔkɔɔ tɔno 4 ne fa, nnuhwan bebree ne aboɔdemmoɔ. Obiara ammfa nnuhwam dodoɔ saa ammɛkyɛ Salomo bio, sɛdeɛ Sebahemmaa de bɛkyɛɛ no no.
೧೦ಆಕೆಯು ಅರಸನಿಗೆ ನೂರಿಪ್ಪತ್ತು ತಲಾಂತು ಬಂಗಾರವನ್ನೂ, ಅಪರಿಮಿತ ಸುಗಂಧದ್ರವ್ಯವನ್ನೂ ಮತ್ತು ರತ್ನಗಳನ್ನೂ ಕೊಟ್ಟಳು. ಶೆಬೆದ ರಾಣಿಯು ಅರಸನಾದ ಸೊಲೊಮೋನನಿಗೆ ಕೊಟ್ಟಷ್ಟು ಸುಗಂಧದ್ರವ್ಯವನ್ನು ಅವನಿಗೆ ಪುನಃ ಯಾರು ಕೊಡಲಿಲ್ಲ. ಬರಲೇ ಇಲ್ಲ.
11 Nanso, ɛberɛ a Huram ahyɛn no firi Ofir de sikakɔkɔɔ baeɛ no, na samfona nnua bebree ne aboɔdemmoɔ ka ho.
೧೧ಹೀರಾಮನ ಹಡಗುಗಳು ಓಫೀರ್ ದೇಶದಿಂದ ಬಂಗಾರದ ಹೊರತಾಗಿ ಸುಗಂಧದ ಮರವನ್ನೂ ಮತ್ತು ರತ್ನಗಳನ್ನೂ ರಾಶಿ ರಾಶಿಯಾಗಿ ತಂದವು.
12 Ɔhene de samfona nnua no yɛɛ aforoeɛ wɔ Awurade Asɔredan ne ahemfie no mu, ɛnna ɔde bi yɛɛ asankuo ne mmɛnta maa nnwomsiaafoɔ. Ɛbɛsi saa ɛberɛ no ne saa ɛberɛ no akyi, na obiara mfaa samfona nnua a ɛyɛ fɛ saa nkɔɔ hɔ da.
೧೨ಅರಸನು ಸುಗಂಧದ ಮರದಿಂದ ಯೆಹೋವನ ಆಲಯ ಮತ್ತು ಅರಮನೆ ಇವುಗಳಿಗೆ ಸ್ತಂಭಗಳನ್ನು, ಗಾಯಕರಿಗೋಸ್ಕರ ಕಿನ್ನರಿಗಳನ್ನೂ, ಸ್ವರಮಂಡಲಗಳನ್ನೂ ಮಾಡಿಸಿದನು. ಆಗ ಬಂದಷ್ಟು ಸುಗಂಧದ ಮರವು ಇಂದಿನ ವರೆಗೂ ಆ ದೇಶಕ್ಕೆ ಬರಲಿಲ್ಲ ಮತ್ತು ಕಾಣಲಿಲ್ಲ.
13 Biribiara a Sebahemmaa bisaa ɔhene Salomo no, ɔde maa no kaa deɛ amanneɛ enti, ɔnam ayamyɛ so de maa no no ho. Ɛno akyi, Sebahemmaa ne nʼasomfoɔ no sane kɔɔ wɔn kurom.
೧೩ಅರಸನಾದ ಸೊಲೊಮೋನನು ಶೆಬೆದ ರಾಣಿಗೆ ತಾನಾಗಿ ರಾಜಮರ್ಯಾದೆಯಿಂದ ಕೊಟ್ಟ ವಸ್ತುಗಳಲ್ಲದೆ ಆಕೆಯು ಕೇಳಿದವುಗಳೆಲ್ಲವನ್ನು ಕೊಟ್ಟುಬಿಟ್ಟನು. ಅನಂತರ ಆಕೆಯು ತನ್ನ ಪರಿವಾರದೊಡನೆ ಸ್ವದೇಶಕ್ಕೆ ಹೊರಟುಹೋದಳು.
14 Afe biara, na Salomo nya sikakɔkɔɔ bɛyɛ tɔno 25.
೧೪ಸೊಲೊಮೋನನಿಗೆ ಒಂದು ವರ್ಷದಲ್ಲಿ ಆರುನೂರ ಅರುವತ್ತಾರು ತಲಾಂತು ಬಂಗಾರ ದೊರಕುತ್ತಿತ್ತು.
15 Adwadeɛ a na ɔnya firi adwadifoɔ, Arabia ahemfo ne asase no so amradofoɔ no nkyɛn nka ho.
೧೫ಅದರ ಜೊತೆಗೆ ದೇಶಾಂತರ ವ್ಯಾಪಾರಿಗಳೂ, ವರ್ತಕರೂ, ಅರಬಿಯ ಅರಸರೂ, ಪ್ರದೇಶಾಧಿಪತಿಗಳೂ ಸಹ ಸೊಲೊಮೋನನಿಗೆ ಬೆಳ್ಳಿ ಬಂಗಾರವನ್ನು ಕೊಡುತ್ತಿದ್ದರು.
16 Ɔhene Salomo maa wɔde sikakɔkɔɔ a wɔaboro, yɛɛ akyɛm akɛseɛ ahanu a emu biara sikakɔkɔɔ a ɛwɔ mu no mu duru yɛ kilogram nson.
೧೬ಅರಸನಾದ ಸೊಲೊಮೋನನು ಬಂಗಾರದ ತಗಡಿನಿಂದ ಇನ್ನೂರು ಗುರಾಣಿಗಳನ್ನು ಮಾಡಿಸಿದನು. ಪ್ರತಿಯೊಂದು ಗುರಾಣಿಗೆ ಆರುನೂರು ತೊಲಾ ಬಂಗಾರ ಹಿಡಿಯಿತು.
17 Ɔsane yɛɛ sikakɔkɔɔ akokyɛm nketewa ahasa a wɔde hamre boroeɛ a na sikakɔkɔɔ a wɔde yɛɛ emu biara no mu duru bɛyɛ kilogram mmiɛnsa ne fa. Ɔhene no kɔkoraa saa akokyɛm yi wɔ Lebanon Kwaeɛ Ahemfie mu.
೧೭ಇದಲ್ಲದೆ ಅವನು ಬಂಗಾರದ ತಗಡಿನಿಂದ ಮುನ್ನೂರು ಖೇಡ್ಯಗಳನ್ನು ಮಾಡಿಸಿದನು. ಪ್ರತಿಯೊಂದು ಖೇಡ್ಯಕ್ಕೆ ನೂರೈವತ್ತು ತೊಲಾ ಬಂಗಾರ ಹಿಡಿಯಿತು. ಅವನು ಇವುಗಳನ್ನು ಲೆಬನೋನಿನ ತೋಪು ಎನ್ನಿಸಿಕೊಳ್ಳುವ ಮಂದಿರದಲ್ಲಿ ಇರಿಸಿದನು.
18 Na ɔhene no de asonse yɛɛ ahennwa kɛseɛ bi, na ɔde sikakɔkɔɔ amapa huraa ho.
೧೮ಇದಲ್ಲದೆ ಅರಸನು ದೊಡ್ಡದಾದ ಒಂದು ದಂತ ಸಿಂಹಾಸನವನ್ನು ಮಾಡಿಸಿ ಅದಕ್ಕೆ ಚೊಕ್ಕ ಬಂಗಾರದ ತಗಡನ್ನು ಹೊದಿಸಿದನು
19 Na ahennwa no wɔ atwedeɛ ntiasoɔ nsia na nʼakyi yɛ kurukuruwa. Ahennwa no wɔ nsa wɔ benkum ne nifa, na wɔayɛ agyata sɛso mmienu asisi hɔ.
೧೯ಅದಕ್ಕೆ ಆರು ಮೆಟ್ಟಲುಗಳಿದ್ದವು. ಅದರ ಹಿಂಭಾಗದ ತುದಿಯು ಚಕ್ರಾಕಾರವಾಗಿತ್ತು. ಆಸನಕ್ಕೆ ಎರಡು ಕೈಗಳು, ಅವುಗಳ ಹತ್ತಿರ ಎರಡು ಸಿಂಹಗಳು ಇದ್ದವು.
20 Salomo sane yɛɛ agyata sɛso dumienu a ɔbaako biara gyina atwedeɛ ntiasoɔ nsia no mu biara benkum ne nifa. Ahennwa biara nni ewiase a wɔbɛtumi de atoto Salomo deɛ no ho.
೨೦ಆರು ಮೆಟ್ಟಲುಗಳ ಎರಡು ಕಡೆಗಳಲ್ಲೂ ಒಟ್ಟು ಹನ್ನೆರಡು ಸಿಂಹಗಳು ನಿಂತಿದ್ದವು. ಇಂಥ ಸಿಂಹಾಸನವು ಬೇರೆ ಯಾವ ರಾಜ್ಯದಲ್ಲಿಯೂ ಇರಲಿಲ್ಲ.
21 Ɔhene Salomo nkuruwa nyinaa, sikakɔkɔɔ amapa na wɔde yɛeɛ. Saa ara na nneɛma ahodoɔ a ɛwɔ Lebanon Kwaeɛ Ahemfie mu no nso teɛ. Wɔamfa dwetɛ anyɛ, ɛfiri sɛ, Salomo berɛ so no, na wɔbu dwetɛ ade teta bi.
೨೧ಅರಸನಾದ ಸೊಲೊಮೋನನ ಪಾನಪಾತ್ರೆಗಳು, ಲೆಬನೋನಿನ ತೋಪು ಎನಿಸಿಕೊಳ್ಳುವ ಮಂದಿರದಲ್ಲಿದ್ದ ಎಲ್ಲಾ ಪಾನಪಾತ್ರೆಗಳು ಬಂಗಾರದವುಗಳು. ಸೊಲೊಮೋನನ ಕಾಲದಲ್ಲಿ ಬೆಳ್ಳಿಗೆ ಬೆಲೆ ಇರಲಿಲ್ಲವಾದುದರಿಂದ ಅವನಲ್ಲಿ ಬೆಳ್ಳಿಯ ಸಾಮಾನು ಒಂದಾದರೂ ಕಾಣಿಸಲಿಲ್ಲ.
22 Na ɔhene no wɔ ɛpo so adwadihyɛn bebree a ɛne Huram deɛ no yɛ adwuma bɔ mu. Mfeɛ mmiɛnsa biara, ahyɛn no ba prɛko a sikakɔkɔɔ, dwetɛ, asonse, nkaatia, nkontromfi ne kohaa ahyehyɛ wɔn ma.
೨೨ಹೀರಾಮನ ನಾವೆಗಳ ಜೊತೆಯಲ್ಲಿ ಸೊಲೊಮೋನನ ತಾರ್ಷೀಷ್ ಹಡಗುಗಳು ಹೋಗಿ ಮೂರು ವರ್ಷಕ್ಕೊಮ್ಮೆ ಬಂಗಾರ, ಬೆಳ್ಳಿ, ದಂತ, ವಾನರಗಳನ್ನು ಮತ್ತು ನವಿಲುಗಳನ್ನೂ ತರುತ್ತಿದ್ದವು.
23 Enti, ɔhene Salomo bɛyɛɛ ɔdefoɔ ne onyansafoɔ sene ɔhene biara wɔ asase so nyinaa.
೨೩ಈ ಪ್ರಕಾರ ಅರಸನಾದ ಸೊಲೊಮೋನನು ಐಶ್ವರ್ಯದಲ್ಲಿಯೂ, ಜ್ಞಾನದಲ್ಲಿಯೂ ಭೂಲೋಕದ ಎಲ್ಲಾ ಅರಸರಿಗಿಂತ ಮಿಗಿಲಾಗಿದ್ದನು.
24 Ahemfo fifiri aman nyinaa so bɛsraa no, tiee ne nyansasɛm a Onyankopɔn de adom no no bi.
೨೪ಭೂಲೋಕದವರೆಲ್ಲರೂ ದೇವರು ಅವನಿಗೆ ಅನುಗ್ರಹಿಸಿದ ಜ್ಞಾನವಾಕ್ಯಗಳನ್ನು ಕೇಳುವುದಕ್ಕೋಸ್ಕರ ಅವನ ದರ್ಶನಕ್ಕೆ ಬಂದರು.
25 Afe biara mu, obiara a ɔbɛba abɛsra no no brɛ no akyɛdeɛ te sɛ dwetɛ, sikakɔkɔɔ, ntadeɛ, akodeɛ, nnuhwam, apɔnkɔ ne mfunumpɔnkɔ.
೨೫ಅವರೆಲ್ಲರೂ ಅವನಿಗೆ ವರ್ಷ ವರ್ಷ ಬೆಳ್ಳಿಬಂಗಾರದ ಸಾಮಾನು, ಉಡುಪು, ಯುದ್ಧಕ್ಕೆ ಬೇಕಾದ ಆಯುಧಗಳು, ಸುಗಂಧದ್ರವ್ಯ, ಕುದುರೆ ಮತ್ತು ಹೇಸರಗತ್ತೆ ಇವುಗಳನ್ನು ಕಾಣಿಕೆಯಾಗಿ ಕೊಡುತ್ತಿದ್ದರು.
26 Salomo nyaa nteaseɛnam ne apɔnkɔ bebree. Na ɔwɔ nteaseɛnam apem ahanan ne apɔnkɔ ɔpedumienu. Ɔde emu fa kɛseɛ guguu nteaseɛnam nkuropɔn no so ɛnna ɔmaa ebi nso kaa Yerusalem.
೨೬ಸೊಲೊಮೋನನು ರಥಗಳನ್ನೂ ಮತ್ತು ರಾಹುತರನ್ನೂ ಸಂಗ್ರಹಿಸಿದನು. ಅವನ ರಥಗಳು ಸಾವಿರದ ನಾನೂರು. ರಾಹುತರು ಹನ್ನೆರಡು ಸಾವಿರ. ಇವುಗಳಲ್ಲಿ ಕೆಲವನ್ನು ಯೆರೂಸಲೇಮಿನಲ್ಲಿ ತನ್ನ ಬಳಿಯಲ್ಲಿಯೂ, ಉಳಿದವುಗಳನ್ನು ರಥಗಳಿಗೋಸ್ಕರ ನೇಮಿಸಿದ ಪಟ್ಟಣಗಳಲ್ಲಿಯೂ ಇರಿಸಿದನು.
27 Ɔhene no maa dwetɛ buu te sɛ aboɔ wɔ Yerusalem. Na ntweneduro nnua a ɛsom bo no nso buu so sɛ akyee nnua a ɛfifiri wɔ mmepɔ ase wɔ Yuda asase so.
೨೭ಅವನ ಮುಖಾಂತರವಾಗಿ ಯೆರೂಸಲೇಮಿನಲ್ಲಿ ಬೆಳ್ಳಿಯು ಸಾಮಾನ್ಯ ಕಲ್ಲಿನ ಹಾಗೂ ದೇವದಾರುಮರಗಳು ಇಳಕಲಿನ ಪ್ರದೇಶದಲ್ಲಿ ಬೆಳೆಯುವ ಅತ್ತಿಮರಗಳ ಹಾಗೂ ಹೇರಳವಾಗಿ ದೊರೆಯುತ್ತಿತ್ತು.
28 Na wɔkra Salomo apɔnkɔ no firi Misraim ne Kilikia, ɛfiri sɛ, na ɔhene adwadifoɔ no nya no yie wɔ Kilikia.
೨೮ಅರಸನಾದ ಸೊಲೊಮೋನನ ಕುದುರೆಗಳು ಐಗುಪ್ತ ದೇಶದವುಗಳು. ಅವನ ವರ್ತಕರು ಅವುಗಳನ್ನು ಹಿಂಡುಗಟ್ಟಲೆ ಕೊಂಡುಕೊಂಡು ಬರುತ್ತಿದ್ದರು.
29 Saa ɛberɛ no, na wɔtumi tɔ Misraim nteaseɛnam a wɔde ba Yerusalem no nnwetɛbena kilogram nson, na apɔnkɔ nso, wɔtumi tɔ no nnwetɛbena kilogram mmienu. Wɔn nso kɔtontɔnn wɔn mu pii nso maa Hetifoɔ ne Aram ahemfo.
೨೯ಐಗುಪ್ತದೇಶದಿಂದ ರಥಗಳನ್ನೂ ಮತ್ತು ಕುದುರೆಗಳನ್ನೂ ತರಿಸಬೇಕಾದರೆ ಪ್ರತಿಯೊಂದು ರಥಕ್ಕೆ ಆರುನೂರು ರೂಪಾಯಿಗಳನ್ನೂ, ಕುದುರೆಗೆ ನೂರೈವತ್ತು ರೂಪಾಯಿಗಳನ್ನೂ ಕೊಡಬೇಕಾಗಿತ್ತು. ಅವು ಹಿತ್ತಿಯರ ಮತ್ತು ಅರಾಮ್ಯರ ಎಲ್ಲಾ ಅರಸರಿಗೆ ಇವರ ಮುಖಾಂತರವಾಗಿಯೇ ಮಾರಾಟವಾಗುತ್ತಿದ್ದವು.