< Adiyisɛm 18 >
1 Eyi akyi no, mihuu ɔbɔfo foforo sɛ ofi ɔsoro reba fam. Na ɔwɔ tumi kɛse na nʼanuonyam hyerɛn wɔ asase so nyinaa.
೧ಇದಾದ ನಂತರ ಮಹಾ ಅಧಿಕಾರವುಳ್ಳ ಮತ್ತೊಬ್ಬ ದೇವದೂತನು ಪರಲೋಕದಿಂದ ಇಳಿದುಬರುವುದನ್ನು ಕಂಡೆನು. ಅವನ ತೇಜಸ್ಸಿನ ಪ್ರಭಾವದಿಂದ ಭೂಮಿಯು ಪ್ರಕಾಶವಾಯಿತು.
2 Ɔteɛɛ mu denneennen se, “‘Wahwe ase! Babilonia Kokuroko ahwe ase!’ Adan ahonhommɔne tenabea ne ahonhom fi nyinaa ahintawee. Nnomaafi a wokyi wɔn nyinaa te ne mu.
೨ಅವನು ಬಲವಾದ ಧ್ವನಿಯಿಂದ ಕೂಗುತ್ತಾ “ಬಿದ್ದಳು, ಬಿದ್ದಳು, ಬಾಬೆಲ್ ಎಂಬ ಮಹಾನಗರಿಯು ಬಿದ್ದಳು! ಅವಳು ದೆವ್ವಗಳ ವಾಸಸ್ಥಾನವೂ, ಎಲ್ಲಾ ದುರಾತ್ಮಗಳಿಗೂ, ಅಶುದ್ಧವಾದ ಹಾಗೂ ಅಸಹ್ಯವಾದ ಸಕಲ ವಿಧವಾದ ಪಕ್ಷಿಗಳಿಗೂ ಗೂಡೂ ಆದಳು.
3 Ɔde ne nsa a ɛyɛ nʼaguamammɔ a ano yɛ den no maa nnipa nyinaa nomee. Asase so ahene ne no bɔɔ aguaman, na asase so adwumayɛfo nam nʼahonya mmoroso so nyaa wɔn ho.”
೩ಎಲ್ಲಾ ದೇಶಗಳವರೂ ಅವಳ ಜಾರತ್ವವೆಂಬ ಕ್ರೌರ್ಯದ ದ್ರಾಕ್ಷಾರಸವನ್ನು ಕುಡಿದರು. ಅವಳೊಂದಿಗೆ ಭೂಲೋಕದ ರಾಜರು ವ್ಯಭಿಚಾರ ಮಾಡಿದರು. ಅವಳ ಭೋಗವಿಲಾಸದಿಂದ ಭೂಲೋಕದ ವರ್ತಕರು ಐಶ್ವರ್ಯವಂತರಾದರು” ಎಂದು ಹೇಳಿದನು.
4 Afei metee sɛ nne foforo bi a efi ɔsoro reka se, “Mumfi, me nkurɔfo, na moamfa mo ho amfra bɔne a ɔyɛ no mu, na mo ne no ankyɛ nʼasotwe!
೪ಪರಲೋಕದಿಂದ ಹೇಳುವ ಮತ್ತೊಂದು ಧ್ವನಿಯನ್ನು ಕೇಳಿದೆನು, “ನನ್ನ ಜನರೇ, ಅವಳನ್ನು ಬಿಟ್ಟು ಬನ್ನಿರಿ, ಏಕೆಂದರೆ ಅವಳ ಪಾಪಗಳಲ್ಲಿ ನೀವೂ ಪಾಲುಗಾರರಾಗಬಾರದು. ಅವಳಿಗೆ ಆಗುವ ಉಪದ್ರವಗಳು ನಿಮ್ಮನ್ನು ಬಾಧಿಸಬಾರದು.
5 Efisɛ wɔahyehyɛ ne bɔne sɛ soro tenten, na Onyankopɔn akae nʼawudi no.
೫ಅವಳ ಪಾಪಗಳು ಒಂದಕ್ಕೊಂದು ಸೇರಿ ಆಕಾಶದ ಎತ್ತರಕ್ಕೆ ಬೆಳೆದಿವೆ. ದೇವರು ಅವಳ ದುಷ್ಟಕೃತ್ಯಗಳನ್ನು ಜ್ಞಾಪಿಸಿಕೊಂಡಿದ್ದಾನೆ.
6 Sɛnea ɔyɛɛ mo no, monyɛ no saa pɛpɛɛpɛ; nea ɔyɛɛ mo biara no, muntua ne so ka mprenu. Nsa a ɔde maa mo no, monhyɛ no nea ano yɛ den mmɔho abien.
೬ಇತರರಿಗೆ ಅವಳು ಕೊಟ್ಟಿದ್ದಕ್ಕೆ ಸರಿಯಾಗಿ ಅವಳಿಗೆ ಹಿಂದಕ್ಕೆ ಕೊಡಿರಿ. ಅವಳ ಕೃತ್ಯಗಳಿಗೆ ಪ್ರತಿಯಾಗಿ ಅವಳಿಗೆ ಎರಡರಷ್ಟು ಕೊಡಿರಿ. ಅವಳು ಕಲಸಿಕೊಟ್ಟ ಪಾತ್ರೆಯಲ್ಲಿ ಅವಳಿಗೆ ಎರಡರಷ್ಟು ಕಲಸಿ ಕೊಡಿರಿ.
7 Momma nʼayayade ne nʼawerɛhow nnɔɔso sɛ anuonyam ne ahonya a ɔpɛ maa ne ho no. Efisɛ daa ɔka se, ‘Mete ha sɛ ɔhemmea; menyɛ okunafo, na me werɛ renhow da!’
೭ಅವಳು ಎಷ್ಟರ ಮಟ್ಟಿಗೆ ತನ್ನನ್ನು ಘನಪಡಿಸಿಕೊಂಡು ಸುಖಭೋಗವನ್ನು ಅನುಭವಿಸಿದಳೋ ಅದಕ್ಕೆ ತಕ್ಕಂತೆ ನೀವು ಅವಳಿಗೆ ಯಾತನೆಯನ್ನೂ ದುಃಖವನ್ನೂ ಕೊಡಿರಿ, ಏಕೆಂದರೆ ಅವಳು ತನ್ನ ಹೃದಯದಲ್ಲಿ, ‘ನಾನು ರಾಣಿಯಾಗಿ ಕುಳಿತುಕೊಂಡಿದ್ದೇನೆ, ನಾನು ವಿಧವೆಯಲ್ಲ, ದುಃಖವನ್ನು ಎಂದೆಂದಿಗೂ ಕಾಣುವುದೇ ಇಲ್ಲ’ ಎಂದು ಹೇಳಿಕೊಂಡಿದ್ದಾಳೆ.
8 Eyi nti, nʼamanehunu a ɛyɛ ɔyare, awerɛhow ne ɔkɔm bɛba ne so da bi. Na wɔde ogya ahyew no, efisɛ Awurade Nyankopɔn a obu no atɛn no yɛ ɔkɛse.
೮ಆದ್ದರಿಂದ ಉಪದ್ರವಗಳು ಮರಣ, ಗೋಳಾಟ ಮತ್ತು ಕ್ಷಾಮಗಳು ಒಂದೇ ದಿನದಲ್ಲಿ ಅವಳಿಗೆ ಸಂಭವಿಸುವವು. ಅವಳಿಗೆ ತೀರ್ಪುಕೊಡುವ ಕರ್ತನಾದ ದೇವರು ಶಕ್ತನಾಗಿರುವುದರಿಂದ ಅವಳು ಬೆಂಕಿಯಿಂದ ನಾಶವಾಗುವಳು.
9 “Sɛ asase so ahene a wɔne no bɔɔ aguaman, dii dɛ no hu hye a wɔrehyew no no wusiw a, wobesu atwa agyaadwo.
೯“ಅವಳೊಂದಿಗೆ ಜಾರತ್ವಮಾಡಿ ಭೋಗಿಗಳಾದ ಭೂರಾಜರು ಅವಳ ದಹನದಿಂದೇರುವ ಹೊಗೆಯನ್ನು ನೋಡಿ ಭಯಪಟ್ಟು ಅವಳಿಗಾಗಿ ದೂರದಲ್ಲಿ ನಿಂತು ಅಳುತ್ತಾ ಗೋಳಾಡುತ್ತಾ, ‘ಅಯ್ಯೋ ಅಯ್ಯೋ ಮಹಾ ನಗರವಾದ ಬಾಬೆಲ್ ಪಟ್ಟಣವೇ, ಬಲಿಷ್ಠವಾದ ಬಾಬೆಲ್ ನಗರಿಯೇ ನಿನಗೆ ವಿಧಿಸಲ್ಪಟ್ಟ ದಂಡನೆಯು ಒಂದೇ ತಾಸಿನಲ್ಲಿ ಬಂದಿತಲ್ಲಾ’ ಎಂದು ಶೋಕಿಸುವರು.
10 Nʼamanehunu no hu a ɛyɛ nti, wobegyina akyiri asu se, “‘Due! Due, Ao, kuropɔn, Ao Babilonia, kuropɔn a ɛwɔ tumi! Wʼatemmu aba dɔnhwerew baako pɛ mu.’
೧೦
11 “Aguadifo a wɔwɔ asase so nso su no, efisɛ obiara ntɔ wɔn nneɛma bio.
೧೧“ಇದಲ್ಲದೆ ಭೂಮಿಯ ವರ್ತಕರು ಅವಳಿಗಾಗಿ ದುಃಖಿಸಿ ಗೋಳಾಡುತ್ತಾ,
12 Obiara ntɔ sikakɔkɔɔ ne dwetɛ, aboɔden abo ne nhene pa, nwera pa ne ɔtamkɔkɔɔ ne sirikyi ne tamkɔkɔɔ, ne nnua a ɛyɛ huam nyinaa ne asonse adwinne nyinaa, adwinne a wɔde nnua a ne bo yɛ den ayɛ, asanka ne dade ne abohemaa,
೧೨ಚಿನ್ನ, ಬೆಳ್ಳಿ, ರತ್ನ, ಮುತ್ತು, ನಯವಾದ ನಾರುಮಡಿ, ಧೂಮ್ರವರ್ಣದ ವಸ್ತ್ರ, ರೇಷ್ಮೆ, ಕಡುಗೆಂಪು ಉಡುಪು ಸಕಲ ವಿಧವಾದ ಮರಮುಟ್ಟು ಮತ್ತು ದಂತದ ಸಾಮಾನುಗಳು, ಬೆಲೆಬಾಳುವ ಮರ, ತಾಮ್ರ, ಕಬ್ಬಿಣ, ಚಂದ್ರಕಾಂತ ಶಿಲೆ. ಸುಗಂಧ ಸರಕುಗಳಾದ
13 ne pɛprɛ ne mmorɔngo, nnuhuam ne kurobow, huamfufu ne nsa ne ngo, asikresiam muhumuhu ne awi, nyɛmmoa ne nguan ne apɔnkɔ ne nteaseɛnam ne nkoa ne nnipa akra.
೧೩ಲವಂಗ, ಚಕ್ಕೆ, ಧೂಪ, ರಕ್ತಬೋಳ, ಸುಗಂಧತೈಲ, ದ್ರಾಕ್ಷಾರಸ, ಎಣ್ಣೆ, ನಯವಾದ ಹಿಟ್ಟು, ಗೋದಿ, ದನ, ಕುರಿ, ಕುದುರೆ, ರಥ, ಗುಲಾಮರು, ಮನುಷ್ಯಪ್ರಾಣಗಳು ಇವೇ ಮೊದಲಾದ ನಮ್ಮ ಸರಕುಗಳನ್ನು ಕೊಂಡುಕೊಳ್ಳುವವರು ಯಾರೂ ಇಲ್ಲವಲ್ಲಾ ಎಂದು ಗೋಳಾಡುವರು.
14 “Aguadifo no bɛka se, ‘Nneɛma pa a wopere hwehwɛe no nyinaa ayera, na wʼahonya ne wʼanuonyam no kɔ, na wo nsa renka bio.’
೧೪‘ನೀನು ಬಯಸಿದ ನಿನ್ನ ಫಲಗಳು ನಿನ್ನನ್ನು ಬಿಟ್ಟು ಹೋದವು. ನಿನ್ನ ಎಲ್ಲಾ ವೈಭವವು ಹಾಗೂ ಶೋಭಾಯಮಾನವಾದ ಸೊಗಸುಗಳೆಲ್ಲ ನಿನ್ನಿಂದ ನಾಶವಾದವು. ಅವು ಇನ್ನು ಮೇಲೆ ನಿನಗೆ ಸಿಕ್ಕುವುದೇ ಇಲ್ಲ.’
15 Aguadifo a wonyaa wɔn ho wɔ kurow no mu no begyina akyirikyiri efisɛ wosuro amane a ɔrehu no. Wobesu na wɔatwa agyaadwo,
೧೫ಆ ಸರಕುಗಳನ್ನು ಮಾರಿ ಅವಳಿಂದ ಐಶ್ವರ್ಯವಂತರಾದ ವರ್ತಕರು ದೂರದಲ್ಲಿ ನಿಂತು ಅವಳ ಯಾತನೆಯ ದೆಸೆಯಿಂದ ಭಯಪಟ್ಟು ದುಃಖಿಸಿ ಗೋಳಾಡುತ್ತಾ,
16 na wɔaka se: “‘Due! Due, Ao, kuropɔn a ofura nwera pa ne tamkɔkɔɔ na sika ne aboɔdenmmo a nhene pa bobɔ mu.
೧೬‘ಅಯ್ಯೋ ಅಯ್ಯೋ ನಯವಾದ ನಾರುಮಡಿಯನ್ನೂ, ಧೂಮ್ರವರ್ಣದ ವಸ್ತ್ರಗಳನ್ನೂ, ಕಡುಗೆಂಪು ಉಡುಪನ್ನೂ ಧರಿಸಿಕೊಂಡು, ಚಿನ್ನ, ರತ್ನ, ಮುತ್ತು ಇವುಗಳಿಂದ ತನ್ನನ್ನು ಅಲಂಕರಿಸಿಕೊಂಡಿದ್ದ ಈ ಮಹಾಪಟ್ಟಣಕ್ಕೆ ಎಂಥ ದುರ್ಗತಿ ಸಂಭವಿಸಿತು.’
17 Dɔnhwerew pɛ, na saa ahonya dodow yi asɛe.’ “Hyɛn mu sahene ne hyɛn no mu nnipa, mu adwumayɛfo ne wɔn a wɔka ho a wonya wɔn anoduan fi hyɛn adwumayɛ mu no nyinaa gyinaa akyirikyiri.
೧೭ಅಷ್ಟು ಐಶ್ವರ್ಯವು ಒಂದೇ ಗಳಿಗೆಯಲ್ಲಿ ನಾಶವಾಯಿತಲ್ಲಾ ಎಂದು ಪರಿತಪಿಸುವರು. ಇದಲ್ಲದೆ ಹಡಗುಗಳ ಯಜಮಾನರೂ, ಪಯಣಿಗರೂ, ನಾವಿಕರೂ ಸಮುದ್ರದಿಂದ ತಮ್ಮ ಜೀವನವನ್ನುಮಾಡುತ್ತಿದ್ದವರೆಲ್ಲರೂ ದೂರದಲ್ಲಿ ನಿಂತು,
18 Wosui wɔ bere a wohuu ogya a ɛrehyew no wusiw no, wɔteɛɛ mu kae se ‘Kuropɔn biara a ne kɛse te sɛɛ mmaa da.’”
೧೮ಅವಳ ದಹನದ ಹೊಗೆಯನ್ನು ನೋಡಿ ‘ಈ ಮಹಾ ಪಟ್ಟಣಕ್ಕೆ ಸಮಾನವಾದದ್ದು ಯಾವುದು?’ ಎಂದು ಮೊರೆಯಿಡುವರು.
19 Wɔbɛtow mfutuma agu wɔn atifi na wɔasu, atwa agyaadwo se, “‘Due! Due, wo kuropɔn, wo a wɔn a wɔwɔ ahyɛn wɔ wo mu no nam wʼahonya so yɛɛ adefo. Na dɔnhwerew baako pɛ mu, woahwere biribiara!’
೧೯ಅನಂತರ ಅವರು ತಮ್ಮ ತಲೆಗಳ ಮೇಲೆ ಮಣ್ಣನ್ನು ಸುರಿದುಕೊಂಡು, ‘ಅಯ್ಯೋ ಅಯ್ಯೋ ಸಮುದ್ರದ ಮೇಲೆ ಹಡಗುಗಳನ್ನು ಹೊಂದಿದವರೆಲ್ಲರೂ ಅವಳ ಅಮೂಲ್ಯ ದ್ರವ್ಯಗಳಿಂದಲೇ ಐಶ್ವರ್ಯವಂತರಾದರಲ್ಲಾ, ಇವಳು ಒಂದೇ ಗಳಿಗೆಯಲ್ಲಿ ಹಾಳಾದಳಲ್ಲಾ’” ಎಂದು ಗೋಳಾಡುತ್ತಾ ದುಃಖಿಸುವರು.
20 “Momma mo ani nnye wɔ ne ho, mo ɔsorofo! Momma mo ani nnye, Onyankopɔn nnipa! Momma mo ani nnye, asomafo ne adiyifo! Efisɛ Onyankopɔn abu no atɛn.”
೨೦ಪರಲೋಕವೇ, ದೇವಜನರೇ, ಅಪೊಸ್ತಲರೇ, ಪ್ರವಾದಿಗಳೇ ಅವಳ ನಿಮಿತ್ತ ಜಯಘೋಷಮಾಡಿರಿ. ಏಕೆಂದರೆ ಇವಳು ನಿಮಗೆ ಮಾಡಿದ ಅನ್ಯಾಯಕ್ಕೆ ಸರಿಯಾಗಿ ದೇವರು ಇವಳಿಗೆ ಪ್ರತಿದಂಡನೆಯನ್ನು ಮಾಡಿದ್ದಾನೆ.
21 Afei, ɔbɔfo hoɔdenfo bi faa ɔbo a ne kɛse bɛyɛ sɛ awiyammo tow kyenee po mu kae se, “Saa ahoɔden yi ara na wɔde bɛtow Babilonia kuropɔn no akyene, a wɔrenhu no bio.
೨೧ಆಗ ಬಲಿಷ್ಠನಾದ ಒಬ್ಬ ದೇವದೂತನು ದೊಡ್ಡ ಬೀಸುವ ಕಲ್ಲಿನಂತಿರುವ ಒಂದು ಕಲ್ಲನ್ನು ತೆಗೆದುಕೊಂಡು ಸಮುದ್ರದೊಳಗೆ ಬಿಸಾಡಿ, “ಮಹಾಪಟ್ಟಣವಾದ ಬಾಬೆಲನ್ನು ಹೀಗೆ ಹಿಂಸಾಚಾರದಿಂದ ಬಿಸಾಡುವನು. ಅದು ಇನ್ನೆಂದಿಗೂ ಕಾಣಿಸುವುದಿಲ್ಲ.
22 Wɔrente sankubɔfo ne nnwontofo, atɛntɛbɛnhyɛnfo ne torobɛntohyɛnfo nka wɔ mu bio. Wɔrenhu odwumfo biara wɔ wo mu bio. Na wɔrente owiyamfo biara nka wɔ wo mu bio.
೨೨ಬಾಬೆಲೇ ನಿನ್ನಲ್ಲಿ ವೀಣೆಗಾರರೂ, ವಾದ್ಯಗಾರರೂ, ಕೊಳಲು ಊದುವವರೂ, ತುತ್ತೂರಿಯವರೂ ಮೊದಲಾದವರ ಧ್ವನಿಯೂ ಇನ್ನೆಂದಿಗೂ ಕೇಳಿಸುವುದಿಲ್ಲ. ಯಾವುದೇ ವಿಧವಾದ ಕಸಬುಗಾರನೂ ನಿನ್ನಲ್ಲಿ ಇನ್ನೆಂದಿಗೂ ಕಾಣ ಸಿಕ್ಕುವುದಿಲ್ಲ. ಬೀಸುವ ಕಲ್ಲಿನ ಶಬ್ದವು ನಿನ್ನಲ್ಲಿ ಇನ್ನೆಂದಿಗೂ ಕೇಳಿಸದು.
23 Kanea hann renhyerɛn wɔ wo mu bio. Wɔrente ayeforokunu ne ayeforo nne wɔ wo mu bio. Wʼaguadifo yɛ wiase mu nnipa atitiriw. Na wɔde wo ntafowayi adaadaa aman nyinaa.
೨೩ದೀಪದ ಬೆಳಕು ನಿನ್ನಲ್ಲಿ ಇನ್ನೆಂದಿಗೂ ಪ್ರಕಾಶಿಸದು. ವಧೂವರರ ಸ್ವರವು ನಿನ್ನಲ್ಲಿ ಇನ್ನೆಂದಿಗೂ ಕೇಳಿಬರದು. ನಿನ್ನ ವರ್ತಕರು ಭೂಮಿಯ ಮೇಲೆ ಪ್ರಭುಗಳಾಗಿದ್ದರಲ್ಲವೇ. ನಿನ್ನ ಮಾಟದ ಶಕ್ತಿಯಿಂದ ಎಲ್ಲಾ ದೇಶದವರು ವಂಚಿಸಲ್ಪಟ್ಟರು.
24 Ne mu na wohuu adiyifo ne ahotefo ne wɔn a wokum wɔn wɔ asase so no nyinaa mogya.”
೨೪“ಪ್ರವಾದಿಗಳ, ದೇವಜನರ ರಕ್ತವು ಮತ್ತು ಭೂಮಿಯ ಮೇಲೆ ಕೊಲ್ಲಲ್ಪಟ್ಟವರೆಲ್ಲರ ರಕ್ತವೂ ಅವಳಲ್ಲಿಯೇ ಸಿಕ್ಕಿತಲ್ಲಾ” ಎಂದು ಹೇಳಿದನು.