< 1 Mose 7 >
1 Afei, Awurade ka kyerɛɛ Noa se, “Wo ne wo fifo nyinaa nkɔ Adaka no mu, efisɛ asase so nnipa nyinaa mu no, wo na mahu sɛ woyɛ ɔtreneeni.
೧ಆಗ ಯೆಹೋವನು ನೋಹನಿಗೆ, “ನೀನೂ ನಿನ್ನ ಮನೆಯವರೆಲ್ಲರೂ ನಾವೆಯಲ್ಲಿ ಸೇರಿರಿ; ಈಗಿರುವ ಮನುಷ್ಯ ಸಂತತಿಯಲ್ಲಿ ನೀನೊಬ್ಬನೇ ನನ್ನ ಮುಂದೆ ನೀತಿಯಿಂದ ನಡೆಯುವುದನ್ನು ನೋಡಿದ್ದೇನೆ.
2 Fa mmoa a wɔn ho tew biara, anini ason ne abere ason ka wo ho. Na fa mmoa biara a wɔn ho ntew nso abien, onini ne ɔbere.
೨ಎಲ್ಲಾ ಶುದ್ಧ ಪಶುಗಳಲ್ಲಿ ಏಳೇಳು ಗಂಡುಹೆಣ್ಣುಗಳನ್ನು ಶುದ್ಧವಲ್ಲದ ಪಶುಗಳಲ್ಲಿ ಎರಡೆರಡು ಗಂಡುಹೆಣ್ಣುಗಳನ್ನೂ ನಿನ್ನೊಂದಿಗೆ ತೆಗೆದುಕೊಳ್ಳಬೇಕು.
3 Na fa nnomaa biara anini ason ne abere, sɛnea ɛbɛyɛ a nsuyiri no akyi no, wɔn ase bɛfɛe.
೩ಪಕ್ಷಿಗಳಲ್ಲಿಯೂ ಏಳೇಳು ಗಂಡು ಹೆಣ್ಣುಗಳನ್ನು ತೆಗೆದುಕೊಳ್ಳಬೇಕು. ಹೀಗೆ ಆಯಾ ಜಾತಿಯನ್ನು ಭೂಮಿಯ ಮೇಲೆ ಉಳಿಸಿ ಕಾಪಾಡಬೇಕು.
4 Nnanson akyi no mɛma osu atɔ wɔ asase so awia ne anadwo adaduanan. Mɛpepa abɔde biara a nkwa wɔ mu a mabɔ afi asase so.”
೪ಏಳು ದಿನಗಳ ನಂತರ ನಾನು ಭೂಮಿಯ ಮೇಲೆ ನಲ್ವತ್ತು ದಿನ ಹಗಲಿರುಳು ಮಳೆಯನ್ನು ಸುರಿಸಿ, ನಾನು ಸೃಷ್ಟಿಮಾಡಿದ ಜೀವರಾಶಿಗಳನ್ನೆಲ್ಲಾ ಭೂಮಿಯ ಮೇಲಿನಿಂದ ನಾಶಮಾಡುತ್ತೇನೆ” ಎಂದು ಹೇಳಿದನು.
5 Noa dii nsɛm a Awurade ka kyerɛɛ no no nyinaa so.
೫ಯೆಹೋವನು ಆಜ್ಞಾಪಿಸಿದ್ದನ್ನೆಲ್ಲಾ ನೋಹನು ಮಾಡಿದನು.
6 Bere a nsuyiri baa asase so no, na Noa adi mfe ahansia.
೬ಭೂಮಿಯ ಮೇಲೆ ಜಲಪ್ರಳಯವುಂಟಾದಾಗ ನೋಹನು ಆರುನೂರು ವರ್ಷದವನಾಗಿದ್ದನು.
7 Noa ne ne mmabarima ne ne yere ne ne nsenom mmea kɔhyɛɛ adaka no mu sɛnea ɛbɛyɛ a nsuyiri no renka wɔn.
೭ಆಗ ನೋಹನು ಪ್ರಳಯದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಹೆಂಡತಿ, ಮಕ್ಕಳು, ಸೊಸೆಯರು ಸಹಿತವಾಗಿ ನಾವೆಯಲ್ಲಿ ಸೇರಿದನು.
8 Mmoa a wɔn ho tew ne wɔn a wɔn ho ntew, nnomaa ne mmoa a wɔwea fam,
೮ದೇವರು ನೋಹನಿಗೆ ಅಪ್ಪಣೆಕೊಟ್ಟಂತೆ ಶುದ್ಧ, ಅಶುದ್ಧ, ಪಶು ಪಕ್ಷಿಗಳಲ್ಲಿಯೂ ಕ್ರಿಮಿಕೀಟಗಳಲ್ಲಿಯೂ
9 abien abien a wɔyɛ anini ne abere kɔkaa Noa ho wɔ adaka no mu, sɛnea Onyankopɔn ka kyerɛɛ Noa sɛ ɔnyɛ no.
೯ಗಂಡು ಹೆಣ್ಣುಗಳು ಜೋಡಿ ಜೋಡಿಯಾಗಿ ಬಂದು ದೇವರ ಅಪ್ಪಣೆಯಂತೆ ನೋಹನ ನಾವೆಯಲ್ಲಿ ಸೇರಿದವು.
10 Na nnanson no akyi no, nsuyiri no fii ase.
೧೦ಆ ಏಳು ದಿನಗಳಾದ ನಂತರ ಜಲಪ್ರಳಯವು ಭೂಮಿ ಮೇಲೆ ಬಂತು.
11 Noa dii mfe ahansia no mu no, ɔsram a ɛto so abien no da a ɛto so dunson no, nsuti a ɛwɔ asase mu no nyinaa bobɔe, na ɔsoro mfɛnsere nso buebuei.
೧೧ನೋಹನ ಜೀವಮಾನದ ಆರುನೂರು ವರ್ಷದ ಎರಡನೆಯ ತಿಂಗಳಿನ ಹದಿನೇಳನೆಯ ದಿನದಲ್ಲಿ ಭೂಮಿಯ ಕೆಳಗಿರುವ ಸಾಗರದ ಒರತೆಗಳು ತೆರೆದುಕೊಂಡವು; ಆಕಾಶದ ತೂಬುಗಳೂ ತೆರೆದವು.
12 Osu tɔɔ wɔ asase so awia ne anadwo adaduanan.
೧೨ನಲ್ವತ್ತು ದಿನ ಹಗಲಿರುಳು ಭೂಮಿಯ ಮೇಲೆ ಬಿರುಮಳೆ ಸುರಿಯಿತು.
13 Saa da no ara, Noa ne ne mmabarima Sem, Ham ne Yafet ne ne yere ne ne mmabarima baasa no yerenom kɔhyɛɛ adaka no mu.
೧೩ಆ ದಿನದಲ್ಲಿ ನೋಹನೂ ಶೇಮ್, ಹಾಮ್, ಯೆಫೆತರೆಂಬ ಅವನ ಮಕ್ಕಳು, ಅವನ ಹೆಂಡತಿಯೂ ಮೂರು ಮಂದಿ ಸೊಸೆಯರೂ ನಾವೆಯಲ್ಲಿ ಸೇರಿದರು.
14 Na wuram mmoa ahorow ne nyɛmmoa ahorow ne aboa biara a ɔnam asase so ne anomaa biara ne abɔde biara a ɛwɔ ntaban ka wɔn ho wɔ Adaka no mu.
೧೪ಎಲ್ಲಾ ಪ್ರಾಣಿಗಳಲ್ಲಿ ಅಂದರೆ ಸಕಲ ಜಾತಿಯ ಮೃಗ, ಪಶು, ಕ್ರಿಮಿಕೀಟಗಳಲ್ಲಿಯೂ ಪಕ್ಷಿ ಮೊದಲಾದ ರೆಕ್ಕೆಯಿರುವ ಎಲ್ಲಾ ಜೀವಿಗಳಲ್ಲಿಯೂ
15 Abɔde biara a nkwa wɔ wɔn mu abien abien baa Noa nkyɛn bewuraa Adaka no mu.
೧೫ಎರಡೆರಡು ತಮ್ಮ ತಮ್ಮ ಜಾತಿಗನುಸಾರವಾಗಿ ನೋಹನ ಬಳಿಗೆ ಬಂದು ನಾವೆಯಲ್ಲಿ ಸೇರಿದವು.
16 Mmoa a wowuraa mu no nyinaa, na wɔyɛ anini ne abere, sɛnea Onyankopɔn ka kyerɛɛ Noa no. Afei, Awurade kaa Noa hyɛɛ adaka no mu, too no mu.
೧೬ದೇವರು ನೋಹನಿಗೆ ಅಪ್ಪಣೆ ಕೊಟ್ಟಂತೆ ಎಲ್ಲಾ ಪ್ರಾಣಿಗಳಲ್ಲಿ ಒಂದು ಗಂಡು ಒಂದು ಹೆಣ್ಣು ಈ ಮೇರೆಗೆ ಸೇರಿದವು. ಯೆಹೋವನು ನೋಹನನ್ನು ಒಳಗೆ ಇಟ್ಟು ಬಾಗಿಲನ್ನು ಮುಚ್ಚಿದನು.
17 Nsuyiri no toaa so adaduanan wɔ asase so. Ɛmaa Adaka no so maa ɛtɛn nsu no ani.
೧೭ಜಲಪ್ರಳಯವು ನಲ್ವತ್ತು ದಿನ ಭೂಮಿಯ ಮೇಲೆ ಬಂದು ನೀರು ಹೆಚ್ಚುತ್ತಾ ನಾವೆಯನ್ನು ಮೇಲಕ್ಕೆ ಎತ್ತಲು ಅದು ನೀರಿನ ಮೇಲೆ ತೇಲಾಡಿತು.
18 Nsu no kɔɔ so yirii tɛnn wɔ asase so, maa Adaka no tɛn nsu no ani.
೧೮ನೀರು ಪ್ರಬಲವಾಗಿ ಭೂಮಿಯ ಮೇಲೆ ಹೆಚ್ಚಲು ನಾವೆಯು ಅದರ ಮೇಲೆ ಚಲಿಸಿತು.
19 Nsu no yirii tɛnn wɔ asase so ara kosii sɛ ɛkataa mmepɔw atenten akɛse a ɛwɔ asase so nyinaa so.
೧೯ನೀರು ಭೂಮಿಯ ಮೇಲೆ ಅತ್ಯಧಿಕವಾಗಿ ಪ್ರಬಲವಾಗಿದ್ದರಿಂದ ಆಕಾಶಮಂಡಲದ ಕೆಳಗಿರುವ ಎಲ್ಲಾ ದೊಡ್ಡ ಬೆಟ್ಟಗಳೂ ಮುಚ್ಚಿಹೋದವು.
20 Nsu no yirii ara kosii sɛ ɛkataa mmepɔw no so boroo so anammɔn aduonu.
೨೦ನೀರು ಆ ಬೆಟ್ಟಗಳಿಂತಲೂ ಹದಿನೈದು ಮೊಳ ಮೇಲಕ್ಕೆ ಹೆಚ್ಚಲು ಅವುಗಳು ಸಂಪೂರ್ಣ ಮುಚ್ಚಿಹೋದುದರಿಂದ,
21 Abɔde biara a nkwa wɔ mu a ɛnam asase so te sɛ nnomaa, wuram mmoa a wɔwea asase so ne adesamma ase hyewee.
೨೧ಪಶು, ಪಕ್ಷಿ, ಮೃಗ, ಕ್ರಿಮಿಕೀಟಗಳು ಮನುಷ್ಯರ ಸಹಿತವಾಗಿ ಭೂಮಿಯ ಮೇಲೆ ಚಲಿಸುವ ಸಕಲ ಭೂಜಂತುಗಳೆಲ್ಲವೂ ನಾಶವಾದವು.
22 Biribiara a ɛte asase ani no nso ase hyewee.
೨೨ಮೂಗಿನಿಂದ ಉಸಿರಾಡುವ ಭೂಜಂತುಗಳೆಲ್ಲವೂ ಸತ್ತವು.
23 Wɔpepaa biribiara a nkwa wɔ mu a ɛte asase so no. Nnipa ne mmoa ne abɔde a wɔnam asase so ne wim nnomaa nyinaa nso wɔpepaa wɔn fii asase so. Ɛkaa Noa ne wɔn a na wɔka ne ho wɔ adaka no mu no nko ara.
೨೩ಮನುಷ್ಯ ಮೊದಲುಗೊಂಡು ಪಶು, ಪಕ್ಷಿ, ಕ್ರಿಮಿಕೀಟಗಳ ವರೆಗೂ ಭೂಮಿಯ ಮೇಲಿದ್ದದ್ದೆಲ್ಲಾ ನಾಶವಾಯಿತು; ನೋಹನೂ ಅವನೊಂದಿಗೆ ನಾವೆಯಲ್ಲಿದ್ದ ಜೀವಿಗಳೂ ಮಾತ್ರ ಉಳಿದುಕೊಂಡವು.
24 Nsuyiri no toaa so wɔ asase so nnafua ɔha aduonum.
೨೪ಪ್ರಳಯದ ನೀರು ಭೂಮಿಯ ಮೇಲೆ ನೂರೈವತ್ತು ದಿನ ಪ್ರಬಲವಾಗಿ ನಿಂತಿತು.