< Ɔsɛnkafo 7 >
1 Din pa yɛ sen aduhuam papa, na owuda yɛ sen awoda.
ಅಮೂಲ್ಯವಾದ ಸುಗಂಧ ತೈಲಕ್ಕಿಂತ ಒಳ್ಳೆಯ ಹೆಸರು ಉತ್ತಮ. ಒಬ್ಬನ ಜನ್ಮ ದಿನಕ್ಕಿಂತ ಮರಣದ ದಿನವೇ ಮೇಲು.
2 Eye sɛ obi bɛkɔ ayi ase sen sɛ ɔbɛkɔ aponto ase, efisɛ owu yɛ onipa biara nkrabea na ɛsɛ sɛ ateasefo hyɛ eyi nsow.
ಔತಣದ ಮನೆಗೆ ಹೋಗುವುದಕ್ಕಿಂತ, ಶೋಕದ ಮನೆಗೆ ಹೋಗುವುದು ಲೇಸು. ಏಕೆಂದರೆ ಎಲ್ಲಾ ಮನುಷ್ಯರ ಅಂತ್ಯವು ಸಾವಾಗಿದೆ. ಇದರಿಂದ ಜೀವಂತರು ಇದನ್ನು ತಮ್ಮ ಹೃದಯದಲ್ಲಿ ಸ್ಮರಿಸಿಕೊಳ್ಳುವರು.
3 Awerɛhow ye sen ɔserew, efisɛ anim a ayɛ mmɔbɔmmɔbɔ de koma mu nsiesie pa ba.
ನಗೆಗಿಂತ ದುಃಖವು ವಾಸಿ, ಏಕೆಂದರೆ ಮುಖದಲ್ಲಿ ದುಃಖ ಹೃದಯಕ್ಕೆ ಸುಖ.
4 Onyansafo koma wɔ ayi ase, nanso nkwaseafo koma wɔ ahosɛpɛwfo fi.
ಜ್ಞಾನಿಗಳ ಹೃದಯವು ಶೋಕದ ಮನೆಯಲ್ಲಿರುವುದು, ಆದರೆ ಮೂಢರ ಹೃದಯವು ಉಲ್ಲಾಸದ ಮನೆಯಲ್ಲಿರುವುದು.
5 Eye sɛ wobetie onyansafo animka sen sɛ wobetie nkwaseafo dwom.
ಮೂಢರ ಹಾಡನ್ನು ಕೇಳುವುದಕ್ಕಿಂತ, ಜ್ಞಾನಿಗಳ ಗದರಿಕೆಯನ್ನು ಕೇಳುವುದು ಲೇಸು.
6 Sɛnea nsɔe turuturuw wɔ ɔsɛn ase no saa ara na nkwaseafo serew te. Eyi nso yɛ ahuhude.
ಗಡಿಗೆಯ ಕೆಳಗೆ ಉರಿಯುವ ಮುಳ್ಳುಕಡ್ಡಿ ಚಟಚಟನೆಯ ಶಬ್ದ ಹೇಗೋ, ಮೂಢನ ನಗುವು ಹಾಗೆಯೇ ಇರುವುದು. ಇದು ಕೂಡ ವ್ಯರ್ಥವೇ.
7 Asisi ma onyansafo dan ɔkwasea, na kɛtɛasehyɛ sɛe koma.
ದಬ್ಬಾಳಿಕೆ ಜ್ಞಾನಿಯನ್ನು ಮೂರ್ಖನನ್ನಾಗಿ ಮಾಡುತ್ತದೆ. ಲಂಚವು ಹೃದಯವನ್ನು ಕೆಡಿಸುತ್ತದೆ.
8 Asɛm awiei ye sen ne mfiase, na ntoboase ye sen ahantan.
ಪ್ರಾರಂಭಕ್ಕಿಂತ ಅದರ ಅಂತ್ಯವೇ ಲೇಸು. ಗರ್ವಿಷ್ಠನಿಗಿಂತ ತಾಳ್ಮೆಯುಳ್ಳವನೇ ಉತ್ತಮ.
9 Mma wo koma nsɔre ntɛmntɛm, na abufuw da nkwaseafo srɛ so.
ನೀನು ಕೋಪಿಸಿಕೊಳ್ಳುವುದಕ್ಕೆ ಆತುರಪಡದಿರು, ಏಕೆಂದರೆ ಕೋಪವು ಮೂಢರ ಎದೆಯಲ್ಲಿ ನೆಲೆಗೊಳ್ಳುತ್ತದೆ.
10 Nka se, “Adɛn nti na tete nna no ye sen nnɛ mmere yi?” Onyansafo mmisa nsɛm sɛɛ.
“ಹಿಂದಿನ ಕಾಲ ಈಗಿನ ಕಾಲಕ್ಕಿಂತ ಮೇಲಾಗಿರುವುದಕ್ಕೆ ಕಾರಣ ಏನು?” ಎಂದು ನೀನು ಕೇಳಬೇಡ. ಇದು ಬುದ್ಧಿವಂತರು ಕೇಳುವ ಪ್ರಶ್ನೆಯಲ್ಲ.
11 Nimdeɛ, ɛyɛ ade pa sɛ agyapade ara pɛ, so wɔ mfaso ma wɔn a wohu owia.
ಜ್ಞಾನವು ಆಸ್ತಿಯ ಹಾಗೆ ಒಳ್ಳೆಯದು; ಅದರಿಂದ ಜೀವಂತರೆಲ್ಲರಿಗೂ ಲಾಭಕರ.
12 Sɛnea nimdeɛ yɛ bammɔ no, saa ara na sika nso te; nanso nhumu ho ade a eye ne sɛ: nea ɔwɔ nimdeɛ no bɔ ne nkwa ho ban.
ಧನವು ಹೇಗೋ ಹಾಗೆ ಜ್ಞಾನವು ಆಶ್ರಯ. ಆದರೆ ಜ್ಞಾನದ ಶ್ರೇಷ್ಠತೆ ಏನೆಂದರೆ, ಅದು ಜ್ಞಾನಿಗೆ ಜೀವದಾಯಕ.
13 Dwene nea Onyankopɔn ayɛ ho: Hena na obetumi ateɛ nea wɔama akyea?
ದೇವರ ಸೃಷ್ಟಿಕಾರ್ಯವನ್ನು ಯೋಚಿಸು: ದೇವರು ಮಾಡಿದ್ದನ್ನು, ಪುನಃ ಸರಿಪಡಿಸಲು ಯಾರಿಗೆ ಸಾಧ್ಯ?
14 Mmere pa mu, ma wʼani nnye; nanso mmere bɔne mu, hu sɛ Onyankopɔn na wayɛ ne nyinaa. Ɛno nti onipa rentumi nhu nea ɛbɛto no daakye.
ಸುಖ ದಿನದಲ್ಲಿ ಸಂತೋಷವಾಗಿರು. ಆದರೆ ದುಃಖ ದಿನದಲ್ಲಿ ಇದನ್ನು ಯೋಚಿಸು: ದೇವರು ಇವುಗಳನ್ನು ಒಂದರ ಮೇಲೊಂದನ್ನು ಬರಮಾಡುತ್ತಾರೆ. ಹೀಗೆ ಮನುಷ್ಯನು ತನ್ನ ಆಯುಸ್ಸನ್ನು ಕಳೆದ ಮೇಲೆ ಭವಿಷ್ಯವನ್ನು ಗ್ರಹಿಸಲಾರನು.
15 Me nkwanna a ɛyɛ ahuhude yi mu, mahu nneɛma abien: Ɔtreneeni a owu wɔ ne trenee mu, ne omumɔyɛfo a ɔtena ase kyɛ wɔ nʼamumɔyɛ mu.
ನನ್ನ ವ್ಯರ್ಥದ ದಿನಗಳಲ್ಲಿ ಇವೆರಡು ವಿಷಯಗಳನ್ನು ನೋಡಿದ್ದೇನೆ: ನೀತಿವಂತನು ತನ್ನ ನೀತಿಯಲ್ಲಿ ಗತಿಸಿಹೋಗುತ್ತಾನೆ. ದುಷ್ಟನು ತನ್ನ ದುಷ್ಟತನದಲ್ಲಿ, ಇಡೀ ಜೀವಮಾನವನ್ನು ಕಳೆಯುತ್ತಾನೆ.
16 Nyɛ wo ho ɔtreneeni ntra so, na nyɛ wo ho onyansafo mmoro so; adɛn nti na wosɛe wo ho?
ನೀನು ಅತಿಯಾಗಿ ನೀತಿವಂತನಾಗಿರಬೇಡ. ಅತಿಯಾಗಿ ನಿನ್ನನ್ನು ಜ್ಞಾನಿಯನ್ನಾಗಿಯೂ ಮಾಡಿಕೊಳ್ಳಬೇಡ. ನಿನ್ನನ್ನು ನೀನೇ ಏಕೆ ನಾಶಪಡಿಸಿಕೊಳ್ಳುವೆ?
17 Nyɛ omumɔyɛfo ntra so, na nyɛ ɔkwasea nso, adɛn nti na ɛsɛ sɛ wuwu ansa na wo bere aso.
ನೀನು ದುಷ್ಟತನದಲ್ಲಿ ಸಾಗಬೇಡ, ಮೂರ್ಖತನದಲ್ಲಿಯೂ ಮುಂದುವರಿಯಬೇಡ. ನಿನ್ನ ಸಮಯಕ್ಕಿಂತ ಮೊದಲು ನೀನು ಏಕೆ ಸಾಯುವೆ?
18 Eye sɛ wubeso baako no mu den nanso nnyaa nea aka no mu. Onipa a osuro Onyankopɔn no besiw nneyɛe mmoroso nyinaa ano.
ನೀನು ಇವುಗಳನ್ನು ಗ್ರಹಿಸಿಕೊಳ್ಳುವುದು ಒಳ್ಳೆಯದು. ಹೌದು, ಇವುಗಳನ್ನು ಮರೆಯಬೇಡ. ಏಕೆಂದರೆ ದೇವರಿಗೆ ಭಯಪಡುವವನು ಇವೆಲ್ಲವುಗಳಿಂದ ಪಾರಾಗುವನು.
19 Nimdeɛ ma onyansafo baako tumi bebree sen kuropɔn mu asodifo du.
ಪಟ್ಟಣದ ಹತ್ತು ಮಂದಿ ಅಧಿಕಾರಿಗಳ ಸ್ಥಿರತೆಗಿಂತ, ಜ್ಞಾನವು ಜ್ಞಾನಿಯನ್ನು ಹೆಚ್ಚಾಗಿ ಸ್ಥಿರಪಡಿಸುತ್ತದೆ.
20 Onipa treneeni biara nni asase so a ɔyɛ papa na ɔnyɛ bɔne da.
ಪಾಪಮಾಡದೆ ಒಳ್ಳೆಯದನ್ನೇ ನಡೆಸುವ ನೀತಿವಂತನು, ಭೂಮಿಯ ಮೇಲೆ ಒಬ್ಬನೂ ಇಲ್ಲ.
21 Mfa nea nnipa ka nyinaa nyɛ asɛm, anyɛ saa a wobɛte sɛ wo somfo redome wo,
ಜನರು ಆಡಿದ ಎಲ್ಲಾ ಮಾತುಗಳನ್ನು ನೀನು ಲಕ್ಷಿಸಬೇಡ, ನಿನ್ನ ಕೆಲಸದವರೂ ನಿನ್ನನ್ನು ಶಪಿಸಬಹುದು.
22 na wunim wɔ wo koma sɛ wo nso woadome nkurɔfo mpɛn bebree.
ನೀನು ಸಹ ಅನೇಕ ವೇಳೆ ಇತರರನ್ನು ಶಪಿಸಿದ್ದೀ, ಇದು ನಿನ್ನ ಹೃದಯಕ್ಕೆ ತಿಳಿದಿದೆ.
23 Mede nimdeɛ asɔ eyinom nyinaa ahwɛ, na mekae se, “Masi mʼadwene pi sɛ mɛyɛ onyansafo” nanso na eyi boro me so.
ಇದೆಲ್ಲವನ್ನು ನಾನು ಜ್ಞಾನದಿಂದ ಪರೀಕ್ಷಿಸಿದ್ದೇನೆ, “ನಾನು ಜ್ಞಾನಿಯಾಗಿರಲು ತೀರ್ಮಾನಿಸುತ್ತೇನೆ,” ಎಂದುಕೊಂಡೆನು. ಆದರೆ ಅದು ನನ್ನಿಂದ ದೂರವಾಯಿತು.
24 Sɛnea nimdeɛ te biara, ɛwɔ akyiri na emu dɔ, hena na obetumi ahwehwɛ ahu?
ದೂರದಲ್ಲಿರುವುದನ್ನೂ, ಅಗಾಧದಲ್ಲಿರುವುದನ್ನೂ ಯಾರು ಕಂಡುಕೊಂಡಾರು?
25 Afei meyɛɛ mʼadwene sɛ mɛte ase, ayɛ nhwehwɛmu na mapɛɛpɛɛ nimdeɛ ne sɛnea nneɛma nhyehyɛe te na mate amumɔyɛ mu agyimisɛm ase, ne nkwaseasɛm mu adammɔsɛm nso.
ಜ್ಞಾನದ ಮೂಲ ತತ್ವವನ್ನೂ, ದುಷ್ಟತನದ ಮೂಢತನವನ್ನೂ, ಮೂಢತ್ವದ ಹುಚ್ಚುತನವನ್ನೂ ಪರೀಕ್ಷಿಸಿ ತಿಳಿದುಕೊಳ್ಳುವಂತೆ ಮನಸ್ಸುಮಾಡಿದೆನು.
26 Mahu nea ɛyɛ nwene sen owu; ɔbea a ɔyɛ afiri; ne koma yɛ nnaadaa na ne nsa yɛ mpokyerɛ. Onipa a ɔsɔ Onyankopɔn ani no renkɔ ne ho nanso ɔbɔnefo de ɔbɛtɔ nʼafiri mu.
ಕೆಟ್ಟ ಹೆಂಗಸಿನ ಹೃದಯವು ಬೋನೂ ಬಲೆಯೂ ಆಗಿರುತ್ತದೆ. ಅವಳ ಕೈ ಸಂಕೋಲೆ ಆಗಿರುತ್ತದೆ. ಇದು ಮರಣಕ್ಕಿಂತಲೂ ಕಠೋರವಾದದ್ದು ಎಂದು ನಾನು ಕಂಡಿದ್ದೇನೆ. ದೇವರನ್ನು ಮೆಚ್ಚಿಸುವವನು, ಅವಳಿಂದ ತಪ್ಪಿಸಿಕೊಳ್ಳುವನು. ಆದರೆ ಪಾಪಿಯು ಅವಳ ಕೈಗೆ ಸಿಕ್ಕಿಬೀಳುವನು.
27 Ɔsɛnkafo no se, “Hwɛ eyi ne nea mahwehwɛ ahu: “Mekekaa nneɛma bobɔɔ so pɛɛ sɛ mihu sɛnea nneɛma nhyehyɛe te,
“ನೋಡು, ನಾನಿದನ್ನು ಹುಡುಕಿ ಕಂಡುಕೊಂಡಿದ್ದೇನೆ,” ಎಂದು ಪ್ರಸಂಗಿಯು ಹೇಳುತ್ತಿದ್ದಾನೆ: ನಾನು ಒಂದರ ನಂತರ ಮತ್ತೊಂದನ್ನು ಕೂಡಿಸಿ, ಸಂಶೋಧನೆಗಳನ್ನು ನಡೆಸಿದೆ;
28 mereyɛ nhwehwɛmu, na minhu hwee no, mihuu ɔbarima treneeni baako wɔ mmarima apem mu, nanso manhu ɔbea treneeni biara wɔ wɔn mu.
ನಾನು ಹುಡುಕಿ ನೋಡಿದರೂ ನನಗೆ ಇದುವರೆಗೆ ಉತ್ತರ ಸಿಕ್ಕಲಿಲ್ಲ. ನಾನು ಸಾವಿರ ಪುರುಷರಲ್ಲಿ ಒಬ್ಬ ಸತ್ಯವಂತನನ್ನು ಕಂಡೆನು. ಆದರೆ ಸಾವಿರ ಸ್ತ್ರೀಯರಲ್ಲಿ ಒಬ್ಬ ಸತ್ಯವಂತಳನ್ನು ಕಂಡುಕೊಳ್ಳಲಿಲ್ಲ.
29 Eyi nko ara na mahu: Onyankopɔn yɛɛ adesamma atreneefo, nanso nnipa adan wɔn ho hwehwɛ nhyehyɛe foforo.”
ಇದನ್ನು ಮಾತ್ರ ನಾನು ಕಂಡುಕೊಂಡಿದ್ದೇನೆ: ದೇವರು ಮನುಷ್ಯರನ್ನು ಸತ್ಯವಂತರನ್ನಾಗಿ ಸೃಷ್ಟಿಸಿದರು. ಮನುಷ್ಯರಾದರೋ ಅನೇಕ ಸ್ವಾರ್ಥ ಯೋಜನೆಗಳನ್ನು ಮಾಡಿಕೊಂಡಿದ್ದಾರೆ.