< 2 Beresosɛm 9 >

1 Bere a Seba hemmea tee Salomo nka no, ɔbaa Yerusalem sɛ ɔde nsɛm a anoyi yɛ den rebɛsɔ no ahwɛ. Ɔne nʼasomfo bebree, yoma pii a wɔahyehyɛ nnuhuam, sikakɔkɔɔ bebree ne mpempranne wɔ wɔn so na ɛbae.
ಶೆಬಾದ ರಾಣಿಯು ಸೊಲೊಮೋನನ ಕೀರ್ತಿಯನ್ನು ಕೇಳಿ, ಅವನನ್ನು ಒಗಟುಗಳಿಂದ ಪರೀಕ್ಷಿಸುವುದಕ್ಕಾಗಿ ಯೆರೂಸಲೇಮಿಗೆ ಬಂದಳು. ಆಕೆಯು ಸುಗಂಧದ್ರವ್ಯ, ಲೆಕ್ಕವಿಲ್ಲದಷ್ಟು ಬಂಗಾರ, ರತ್ನ ಇವುಗಳನ್ನು ಒಂಟೆಗಳ ಮೇಲೆ ಹೇರಿಸಿಕೊಂಡು ಮಹಾ ಪರಿವಾರದೊಡನೆ ಸೊಲೊಮೋನನ ಬಳಿಗೆ ಬಂದು ತನ್ನ ಮನಸ್ಸಿನಲ್ಲಿ ಗೊತ್ತು ಮಾಡಿಕೊಂಡಿದ್ದ ಎಲ್ಲಾ ವಿಷಯಗಳನ್ನು ಕುರಿತು ಅವನೊಡನೆ ಸಂಭಾಷಿಸಿದಳು.
2 Ohyiaa Salomo no, wodii biribiara a enti ɔbaa saa nsrahwɛ no ho nkɔmmɔ, maa Salomo yii ne nsɛmmisa nyinaa ano sɛnea ɛsɛ.
ಸೊಲೊಮೋನನು ಆಕೆಯ ಪ್ರಶ್ನೆಗಳಿಗೂ ಉತ್ತರಕೊಟ್ಟನು; ಅವುಗಳಲ್ಲಿ ಅವನಿಗೆ ತಿಳಿಯದಂಥದ್ದು ಒಂದೂ ಇರಲಿಲ್ಲವಾದುದ್ದರಿಂದ ಎಲ್ಲಾ ಪ್ರಶ್ನೆಗಳಿಗೆ ಉತ್ತರಕೊಟ್ಟನು.
3 Bere a Sebahemmea huu sɛnea Salomo adwene mu dɔ, ne ahemfi a wasi no,
ಶೆಬಾದ ರಾಣಿಯು, ಸೊಲೊಮೋನನ ಜ್ಞಾನ, ಅವನು ಕಟ್ಟಿಸಿದ ಅರಮನೆ,
4 ne ho dwiriw no. Ohuu nnuan a esisi ne didipon so no, sɛnea watoto nʼadwumayɛfo ne ntade fɛɛfɛ a wɔhyehyɛ, kuruwakurafo ne wɔn ntade yuu ne ɔhyew afɔre a Salomo abɔ wɔ Awurade Asɔredan mu no, ɛyɛɛ no nwonwa.
ಭೋಜನ ಪೀಠದ ಆಹಾರ, ಆ ಪೀಠದ ಸುತ್ತಲಿರುವ ಉದ್ಯೋಗಸ್ಥರ ಆಸನಗಳು, ಅವನ ಪರಿಚಾರಕರ ಸೇವಾಕ್ರಮ ಮತ್ತು ಅವರ ಉಡುಪುಗಳು, ಅವನ ಪಾನಸೇವಕರು, ಅವರ ಉಡುಪುಗಳು ಇವುಗಳನ್ನೂ, ಅರಸನು ಯೆಹೋವನ ಆಲಯದಲ್ಲಿ ಸಮರ್ಪಿಸುತ್ತಿದ್ದ ಸರ್ವಾಂಗ ಹೋಮಗಳನ್ನೂ ನೋಡಿದಾಗ ವಿಸ್ಮಿತಳಾಗಿ
5 Ofi ahodwiriw mu ka kyerɛɛ ɔhene no se, “Biribiara a metee wɔ me kurom a ɛfa nea woatumi ayɛ ne wo nyansa ho no yɛ nokware.
ಅವನಿಗೆ, “ನಾನು ನನ್ನ ದೇಶದಲ್ಲಿ ನಿನ್ನ ಜ್ಞಾನವನ್ನೂ ಕೃತ್ಯಗಳನ್ನೂ ಕುರಿತು ಕೇಳಿದ್ದು ಸತ್ಯವಾಗಿದೆ.
6 Mannye anni kosii sɛ mʼankasa mebaa ha de mʼani kann abehu. Nokware, mante emu fa mpo. Wo nyansa no boro nea wɔka kyerɛɛ me no so koraa.
ನಾನಾಗಿ ಇಲ್ಲಿಗೆ ಬಂದು ಕಣ್ಣಾರೆ ನೋಡುವವರೆಗೆ ಜನರು ಹೇಳಿದ ಸುದ್ದಿಯನ್ನು ನಂಬಿರಲಿಲ್ಲ; ಈಗ ನೋಡಿದರೆ, ನಿನ್ನ ಜ್ಞಾನಾತಿಶಯವು ನಾನು ಕೇಳಿದ್ದಕ್ಕಿಂತ ಉನ್ನತವಾಗಿದೆ; ಜನರು ನಿನ್ನ ಜ್ಞಾನ ಮತ್ತು ಐಶ್ವರ್ಯದ ಬಗ್ಗೆ ಅರ್ಧವನ್ನಾದರೂ ನನಗೆ ಹೇಳಿರಲಿಲ್ಲ.
7 Migye di sɛ ɛsɛ sɛ wo nkurɔfo yi ani gye! Ɛyɛ adom ma wʼadwumayɛfo yi sɛ wotumi bɛn wo adekyee biara na wotie wo nyansasɛm.
ನಿನ್ನ ಪ್ರಜೆಗಳೂ, ಸದಾ ನಿನ್ನ ಮುಂದೆ ನಿಂತುಕೊಂಡು ನಿನ್ನ ಜ್ಞಾನವಾಕ್ಯಗಳನ್ನು ಕೇಳುವ ನಿನ್ನ ಸೇವಕರೂ ಧನ್ಯರು.
8 Awurade, wo Nyankopɔn yɛ ɔkɛse ampa. Nʼani gye wo ho nti, ɔde wo asi ahengua so sɛ di hene ma no. Efisɛ Onyankopɔn pɛ Israel asɛm dodo, na ɔpɛ sɛ saa ahenni yi tena afebɔɔ; wasi wo hene sɛnea wode nokware ne atɛntrenee bebu ɔman no.”
ನಿನ್ನನ್ನು ಮೆಚ್ಚಿ, ತನ್ನ ಸಿಂಹಾಸನದ ಮೇಲೆ ಕುಳ್ಳಿರಿಸಿದ ನಿನ್ನ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ; ನಿನ್ನ ದೇವರು ಇಸ್ರಾಯೇಲರನ್ನು ಪ್ರೀತಿಸಿ ಅವರನ್ನು ನಿರಂತರವಾಗಿ ಸ್ಥಿರಗೊಳಿಸಬೇಕೆಂದಿರುವುದರಿಂದ ಅವರ ನೀತಿನ್ಯಾಯಗಳನ್ನು ಸ್ಥಾಪಿಸುವುದಕ್ಕೋಸ್ಕರ ನಿನ್ನನ್ನೇ ಅರಸನ್ನಾಗಿ ನೇಮಿಸಿದ್ದಾನೆ” ಎಂದು ಹೇಳಿದಳು.
9 Afei, ɔmaa ɔhene no sikakɔkɔɔ akyɛde a ɛkari tɔn 4 ne nnuhuam pii ne aboɔden mpempranne. Seba hemmea nnuhuam a ɔde maa Salomo no so bi mmaa da.
ಆಕೆಯು ಅರಸನಿಗೆ ನೂರಿಪ್ಪತ್ತು ತಲಾಂತು ಬಂಗಾರವನ್ನೂ, ಅಪರಿಮಿತ ಸುಗಂಧ ದ್ರವ್ಯವನ್ನೂ, ಅಮೂಲ್ಯರತ್ನಗಳನ್ನೂ ಕೊಟ್ಟಳು. ಶೆಬಾದ ರಾಣಿಯು ಅರಸನಾದ ಸೊಲೊಮೋನನಿಗೆ ಕೊಟ್ಟ ಸುಗಂಧದ್ರವ್ಯಕ್ಕೆ ಸರಿಸಮಾನವಾದ ಸುಗಂಧದ್ರವ್ಯ ಮತ್ತೆ ಸಿಗಲೇ ಇಲ್ಲ.
10 Bere a Huram hyɛn mufo ne Salomo nkurɔfo de sikakɔkɔɔ fi Ofir bae no, wɔde ɔbako nnua pa bebree ne mpempranne kaa ho bae.
೧೦ಹೂರಾಮನ ಮತ್ತು ಸೊಲೊಮೋನನ ಆಳುಗಳು ಓಫೀರ್ ದೇಶದ ಬಂಗಾರವನ್ನಲ್ಲದೆ ಸುಗಂಧದ ಮರಗಳ ಅಮೂಲ್ಯರತ್ನಗಳನ್ನೂ ತಂದರು.
11 Ɔhene no de ɔbako nnua no yɛɛ Awurade Asɔredan ne ahemfi no atrapoe. Ɔde bi nso yɛɛ asankuten ne mmɛnta maa nnwom ho nimdefo no. Na saa nnwontode no so bi mmaa da wɔ Yuda.
೧೧ಅರಸನು ಸುಗಂಧದ ಮರದಿಂದ ಯೆಹೋವನ ದೇವಾಲಯವನ್ನು ಹಾಗೂ ಅರಮನೆಗಳಿಗೆ ಸೋಪಾನಗಳನ್ನೂ, ಸಂಗೀತಗಾರರಿಗಾಗಿ ಕಿನ್ನರಿಗಳನ್ನೂ, ಸ್ವರಮಂಡಲಗಳನ್ನೂ ಮಾಡಿಸಿದನು. ಇಂಥ ಗಂಧದ ಮರವು ಹಿಂದೆಂದೂ ಯೆಹೂದ ದೇಶದಲ್ಲಿ ಕಂಡಿರಲಿಲ್ಲ.
12 Biribiara a Seba hemmea bisaa ɔhene Salomo no, ɔde maa no. Na ɛyɛ akyɛde a ɛsom bo pa ara, na ɛboro nea ɔhemmea de brɛɛ no no so. Afei, ɔhemmea no ne nʼasomfo no san kɔɔ wɔn ankasa asase so.
೧೨ಅರಸನಾದ ಸೊಲೊಮೋನನು ಶೆಬಾದ ರಾಣಿಯಿಂದ ತನಗೆ ದೊರಕಿದ ಬಹುಮಾನಕ್ಕೆ ಪ್ರತಿಯಾಗಿ, ಆಕೆಗೆ ತಾನು ಕೊಟ್ಟು ವಸ್ತುಗಳನ್ನಲ್ಲದೆ, ಆಕೆಯು ಕೇಳಿದವುಗಳನ್ನೆಲ್ಲಾ ಕೊಟ್ಟುಬಿಟ್ಟನು. ಅನಂತರ ಆಕೆಯು ತನ್ನ ಪರಿವಾರದವರೊಡನೆ ಸ್ವದೇಶಕ್ಕೆ ಹೊರಟುಹೋದಳು.
13 Afe biara, na sikakɔkɔɔ a ɛba Salomo nsam no yɛ tɔn aduonu anum.
೧೩ಸೊಲೊಮೋನನಿಗೆ ಪ್ರತಿ ವರ್ಷ ಆರು ನೂರಅರವತ್ತಾರು ತಲಾಂತು ಬಂಗಾರವು ದೊರಕುತ್ತಿತ್ತು.
14 Na sika a onya fi aguadifo nkyɛn no nka eyi ho. Na Arabia ahemfo nyinaa ne amradofo a wɔwɔ asase no so nyinaa brɛ Salomo sikakɔkɔɔ ne dwetɛ.
೧೪ಇದಲ್ಲದೆ ದೇಶಾಂತರದಲ್ಲಿ ವ್ಯಾಪಾರಮಾಡುತ್ತಿದ್ದ ವ್ಯಾಪಾರಿಗಳೂ, ವರ್ತಕರೂ, ಅರಬಸ್ಥಾನದ ಅರಸರೂ, ದೇಶಾಧಿಪತಿಗಳೂ ಅರಸನಾದ ಸೊಲೊಮೋನನಿಗೆ ಬೆಳ್ಳಿ ಮತ್ತು ಬಂಗಾರವನ್ನು ತರುತ್ತಿದ್ದರು.
15 Ɔhene Salomo ma wɔde sikakɔkɔɔ a wɔaboro yɛɛ akyɛm akɛse ahannu a emu biara sikakɔkɔɔ a ɛwɔ mu no mu duru yɛ kilogram ason.
೧೫ಅರಸನಾದ ಸೊಲೊಮೋನನು ಬಂಗಾರದ ತಗಡಿನಿಂದ ಇನ್ನೂರು ಗುರಾಣಿಗಳನ್ನು ಮಾಡಿಸಿದನು; ಪ್ರತಿಯೊಂದು ಗುರಾಣಿಗೆ ಆರುನೂರು ತೊಲಾ ಬಂಗಾರವು ಹಿಡಿಸುತ್ತಿತ್ತು.
16 Ɔsan yɛɛ sikakɔkɔɔ nkatabo nketewa ahaasa a wɔde asae aboro a na sikakɔkɔɔ a wɔde yɛɛ emu biara no mu duru bɛyɛ kilogram abiɛsa ne fa. Ɔhene no kɔkoraa saa nkatabo no wɔ Lebanon Kwae Ahemfi mu.
೧೬ಇದಲ್ಲದೆ ಅವನು ಬಂಗಾರದ ತಗಡಿನಿಂದ ಮುನ್ನೂರು ಖೇಡ್ಯಗಳನ್ನು ಮಾಡಿಸಿದನು; ಪ್ರತಿಯೊಂದು ಖೇಡ್ಯಕ್ಕೆ ಮುನ್ನೂರು ತೊಲಾ ಬಂಗಾರ ಬೇಕಾಗುತ್ತಿತ್ತು. ಅರಸನು ಇವುಗಳನ್ನು ಲೆಬನೋನಿನ ತೋಪು ಎನಿಸಿಕೊಳ್ಳುವ ಮಂದಿರದಲ್ಲಿರಿಸಿದನು.
17 Afei, ɔhene no de asonse yɛɛ ahengua kɛse bi, na ɔde sikakɔkɔɔ ankasa guu ho.
೧೭ಇದಲ್ಲದೆ ಅರಸನು ದೊಡ್ಡದಾದ ಒಂದು ದಂತ ಸಿಂಹಾಸನವನ್ನು ಮಾಡಿಸಿ ಅದನ್ನು ಚೊಕ್ಕ ಬಂಗಾರದ ತಗಡಿನಿಂದ ಹೊದಿಸಿದನು.
18 Na ahengua no wɔ atrapoe asia a wɔde sikakɔkɔɔ ntiasode afam ho. Ahengua no wɔ nsa wɔ benkum. Ne nifa na gyata sɛso nso gyinagyina afa ne fa wɔ ahengua no ho.
೧೮ಅದಕ್ಕೆ ಹೊಂದಿಕೆಯಾದ ಆರು ಮೆಟ್ಟಲುಗಳೂ, ಬಂಗಾರದ ಸಿಂಹಾಸನವೂ, ಒಂದು ಪಾದಪೀಠವು ಇದ್ದವು; ಆಸನಕ್ಕೆ ಎರಡು ಕೈಗಳೂ ಅವುಗಳ ಹತ್ತಿರ ಎರಡು ಸಿಂಹಗಳೂ ಇದ್ದವು.
19 Salomo san yɛɛ gyata sɛso dumien a ɔbaako biara gyina atrapoe ntiaso asia no mu biara benkum ne nifa. Ahengua biara nni wiase a wobetumi de atoto Salomo de no ho.
೧೯ಆರು ಮೆಟ್ಟಿಲುಗಳ ಎರಡು ಕಡೆಗಳಲ್ಲಿಯೂ ಒಟ್ಟು ಹನ್ನೆರಡು ಸಿಂಹಗಳು ನಿಂತಿದ್ದವು. ಇಂಥ ಸಿಂಹಾಸನವು ಬೇರೆ ಯಾವ ರಾಜ್ಯದಲ್ಲಿಯೂ ಇರಲಿಲ್ಲ.
20 Ɔhene Salomo nkuruwa nyinaa, sikakɔkɔɔ na wɔde yɛe. Saa ara na nneɛma ahorow a ɛwɔ Lebanon Kwae Ahemfi mu no nso te. Wɔamfa dwetɛ anyɛ, efisɛ Salomo bere so no, na wobu dwetɛ ade teta bi.
೨೦ಅರಸನಾದ ಸೊಲೊಮೋನನ ಎಲ್ಲಾ ಪಾನಪಾತ್ರೆಗಳು ಬಂಗಾರದವುಗಳಾಗಿದ್ದವು. ಲೆಬನೋನಿನ ತೋಪು ಎನಿಸಿಕೊಳ್ಳುವ ಮಂದಿರದ ಎಲ್ಲಾ ಸಾಮಾನುಗಳು ಚೊಕ್ಕ ಬಂಗಾರದವುಗಳು. ಸೊಲೊಮೋನನ ಕಾಲದಲ್ಲಿ ಬೆಳ್ಳಿಗೆ ಬೆಲೆಯೇ ಇರಲಿಲ್ಲ.
21 Na ɔhene no wɔ aguadi ahyɛn a emu adwumayɛfo yɛ Huram asomfo. Mfe abiɛsa biara, ahyɛn no ba a, wɔde sikakɔkɔɔ, dwetɛ, asonse, nsoroboa ne asibe brɛ ɔhene no.
೨೧ಅರಸನ ಹಡುಗುಗಳು ಹೂರಾಮನ ನಾವಿಕರ ಜೊತೆಯಲ್ಲಿ ತಾರ್ಷೀಷಿಗೆ ಹೋಗಿ ಮೂರು ವರ್ಷಕ್ಕೊಮ್ಮೆ ಬಂಗಾರ, ಬೆಳ್ಳಿ, ದಂತ, ವಾನರ, ನವಿಲು ಇವುಗಳನ್ನು ತರುತ್ತಿದ್ದವು.
22 Enti ɔhene Salomo bɛyɛɛ ɔdefo ne onyansafo sen ɔhene biara wɔ asase so nyinaa.
೨೨ಈ ಪ್ರಕಾರ ಅರಸನಾದ ಸೊಲೊಮೋನನು ಐಶ್ವರ್ಯದಲ್ಲಿಯೂ ಜ್ಞಾನದಲ್ಲಿಯೂ ಭೂಲೋಕದ ಎಲ್ಲಾ ಅರಸರಿಗಿಂತ ಮಿಗಿಲಾಗಿದ್ದನು.
23 Ahemfo fifi aman nyinaa so bɛsraa no, tiee ne nyansasɛm a Onyankopɔn de adom no no bi.
೨೩ಭೂರಾಜರೆಲ್ಲರೂ, ದೇವರು ಅವನಿಗೆ ಅನುಗ್ರಹಿಸಿದ ಜ್ಞಾನವಾಕ್ಯಗಳನ್ನು ಕೇಳುವುದಕ್ಕಾಗಿ ಸೊಲೊಮೋನ ದರ್ಶನಕ್ಕೆ ಬರುತ್ತಿದ್ದರು.
24 Afe biara, obiara a ɔbɛba abɛsra no no, ɔbrɛ no akyɛde te sɛ dwetɛ, sikakɔkɔɔ, ntade, akode, nnuhuam, apɔnkɔ ne funumpɔnkɔ.
೨೪ಅವರೆಲ್ಲರೂ ಅವನಿಗೆ ವರ್ಷ ವರ್ಷವೂ ಬೆಳ್ಳಿ ಬಂಗಾರದ ಸಾಮಾನು, ಉಡುಪು, ಯುದ್ಧಸಲಕರಣಿಗಳು, ಶಸ್ತಾಸ್ತ್ರಗಳು, ಸುಗಂಧದ್ರವ್ಯ, ಕುದುರೆ, ಹೇಸರಗತ್ತೆ ಇವುಗಳನ್ನು ಕಾಣಿಕೆಯಾಗಿ ಕೊಡುತ್ತಿದ್ದರು.
25 Na Salomo wɔ apɔnkɔdan mpem anan a ne nteaseɛnam apɔnkɔ da mu ne apɔnkɔ mpem dumien. Ɔde mu fa kɛse no kɔɔ nkurow a ne nteaseɛnam wɔ mu, na ɔmaa bi nso bɛn no wɔ Yerusalem.
೨೫ಸೊಲೊಮೋನನು ಅಶ್ವಸಹಿತವಾದ ರಥಗಳು ನಾಲ್ಕು ಸಾವಿರ ಹಾಗೂ ರಾಹುತರು ಹನ್ನೆರಡು ಸಾವಿರ. ಇವುಗಳನ್ನು ಯೆರೂಸಲೇಮಿನಲ್ಲಿ ತನ್ನ ಬಳಿಯಲ್ಲಿಯೂ ರಥಗಳಿಗಾಗಿ ನೇಮಿಸಿದ್ದ ಪಟ್ಟಣಗಳಲ್ಲೂ ಇರಿಸಿದ್ದನು.
26 Odii hene bunkam faa ahemfo nyinaa so, fi Asubɔnten Eufrate ano de kosi Filistifo asase ne Misraim hye so.
೨೬ಅವನು ಯೂಫ್ರೆಟಿಸ್ ನದಿ ಮೊದಲುಗೊಂಡು ಫಿಲಿಷ್ಟಿಯರ ಮತ್ತು ಐಗುಪ್ತ್ಯರ ದೇಶಗಳವರೆಗೂ ಇರುವ ಎಲ್ಲಾ ರಾಜರನ್ನು ಆಳುತ್ತಿದ್ದನು.
27 Ɔhene no maa dwetɛ buu so ma ɛyɛɛ sɛ abo wɔ Yerusalem. Sida nnua nso, onya ma ebuu ne so te sɛ ankye nnua a enyin wɔ Yuda mmepɔw ase no.
೨೭ಅರಸನ ಕಾಲದಲ್ಲಿ ಯೆರೂಸಲೇಮಿನಲ್ಲಿ ಬೆಳ್ಳಿಯು ಕಲ್ಲಿನ ಹಾಗೆಯೂ, ದೇವದಾರು ಮರಗಳು ಇಳಿಜಾರು ಪ್ರದೇಶದಲ್ಲಿ ಬೆಳೆಯುವ ಅತ್ತಿ ಮರಗಳಂತೆ ಹೇರಳವಾಗಿದ್ದವು.
28 Na wɔtɔ Salomo apɔnkɔ fi Misraim ne aman ahorow bebree so.
೨೮ಸೊಲೊಮೋನನಿಗೋಸ್ಕರ ಐಗುಪ್ತ್ಯದಿಂದಲೂ ಹಾಗೂ ಬೇರೆ ದೇಶಗಳಿಂದಲೂ ಕುದುರೆಗಳನ್ನು ತರುತ್ತಿದ್ದರು.
29 Salomo ahenni ho nsɛm nkae, fi mfiase kosi awiei no, wɔankyerɛw angu odiyifo Natan nhoma, Ahiya a ofi Silon adiyisɛm ne nhumuni Ido anisoadehu a ɛfa Nebat babarima Yeroboam ho no mu ana?
೨೯ಸೊಲೊಮೋನನ ಉಳಿದ ಪೂರ್ವೋತ್ತರ ಚರಿತ್ರೆಯನ್ನು, ಪ್ರವಾದಿಯಾದ ನಾತಾನನ ಚರಿತ್ರೆ, ಶೀಲೋವಿನವನಾದ ಅಹೀಯನ ಪ್ರವಾದನೆಯ ಗ್ರಂಥ, ಹಾಗೂ ದಿವ್ಯದಾರ್ಶಿಕನಾದ ಇದ್ದೋವನು ನೆಬಾಟನ ಮಗನಾದ ಯಾರೊಬ್ಬಾಮನನ್ನು ಕುರಿತು ನುಡಿದ ದರ್ಶನೋಕ್ತಿ ಎಂಬ ಗ್ರಂಥಗಳಲ್ಲಿ ಬರೆದಿರುತ್ತದೆ.
30 Salomo tenaa Yerusalem dii Israel nyinaa so hene mfirihyia aduanan.
೩೦ಸೊಲೊಮೋನನು ಯೆರೂಸಲೇಮಿನಲ್ಲಿ ಇದ್ದುಕೊಂಡು ಎಲ್ಲಾ ಇಸ್ರಾಯೇಲರನ್ನು ನಲ್ವತ್ತು ವರ್ಷ ಆಳಿದನು.
31 Owui no, wosiee no wɔ nʼagya Dawid kurom. Ne babarima Rehoboam na odii nʼade sɛ ɔhene.
೩೧ಆನಂತರ ಸೊಲೊಮೋನನು ತನ್ನ ಪೂರ್ವಿಕರ ಬಳಿಗೆ ಸೇರಿದನು, ಅವನ ಶವವನ್ನು ಅವನ ತಂದೆಯಾದ ದಾವೀದನ ಪಟ್ಟಣದಲ್ಲಿ ಸಮಾಧಿಮಾಡಿದರು; ಅವನಿಗೆ ಬದಲಾಗಿ ಅವನ ಮಗನಾದ ರೆಹಬ್ಬಾಮನು ಅರಸನಾದನು.

< 2 Beresosɛm 9 >