< Çölde Sayim 34 >
1 RAB Musa'ya şöyle dedi:
೧ಯೆಹೋವನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,
2 “İsrailliler'e de ki, ‘Mülk olarak size düşecek Kenan ülkesine girince, sınırlarınız şöyle olacak:
೨“ನೀನು ಇಸ್ರಾಯೇಲರಿಗೆ ಹೀಗೆ ಆಜ್ಞಾಪಿಸಬೇಕು, ‘ಸಮಸ್ತ ಕಾನಾನ್ ದೇಶವೇ ನಿಮಗೆ ಸ್ವದೇಶವಾಗಿ ದೊರಕುವುದು.
3 “‘Güney sınırınız Zin Çölü'nden Edom sınırı boyunca uzanacak. Doğuda, güney sınırınız Lut Gölü'nün ucundan başlayacak,
೩ನೀವು ಅಲ್ಲಿ ಸೇರಿದಾಗ ಎದೋಮ್ಯರ ಗಡಿಗಳ ಬಳಿಯಲ್ಲಿರುವ ಚಿನ್ ಅರಣ್ಯವು ನಿಮ್ಮ ದಕ್ಷಿಣದ ಮೇರೆಯಾಗಿರಬೇಕು. ಆ ಮೇರೆಯ ಪೂರ್ವದಿಕ್ಕಿನಲ್ಲಿರುವ ಲವಣಸಮುದ್ರದ ಕೊನೆಯಿಂದ ಪ್ರಾರಂಭಿಸಬೇಕು.
4 Akrep Geçidi'nin güneyinden Zin'e geçip Kadeş-Barnea'nın güneyine dek uzanacak. Oradan Hasar-Addar'a ve Asmon'a,
೪ದಕ್ಷಿಣಕ್ಕೆ ತಿರುಗಿಕೊಂಡು ಅಕ್ರಬ್ಬೀಮ್ ಎಂಬ ಕಣಿವೆಯ ಮಾರ್ಗವಾಗಿ ಚಿನಿಗೆ ಬರಬೇಕು. ಅದರ ಮೂಲೆ ಕಾದೇಶ್ ಬರ್ನೇಯದ ದಕ್ಷಿಣದ ಕಡೆಯಲ್ಲಿರುವುದು. ಅಲ್ಲಿಂದ ಅದು ಹಚರದ್ದಾರಿಗೆ ಹೊರಟು ಅಚ್ಮೋನಿಗೆ ಹಾದು ಹೋಗಬೇಕು.
5 oradan da Mısır Vadisi'ne uzanarak Akdeniz'de son bulacak.
೫ಅಚ್ಮೋನಿನಿಂದ ಐಗುಪ್ತ ದೇಶದ ಹಳ್ಳಕ್ಕೆ ಬಂದು ಸಮುದ್ರದ ದಡದಲ್ಲಿ ಮುಗಿಯಬೇಕು.
6 “‘Batı sınırınız Akdeniz ve kıyısı olacak. Batıda sınırınız bu olacak.
೬ಪಶ್ಚಿಮ ದಿಕ್ಕಿನಲ್ಲಿ ಮಹಾಸಮುದ್ರದ ದಡವೇ ನಿಮ್ಮ ದೇಶದ ಮೇರೆಯಾಗಿರುವುದು.
7 “‘Kuzey sınırınız Akdeniz'den Hor Dağı'na dek uzanacak.
೭ಉತ್ತರ ದಿಕ್ಕಿನ ಮೇರೆಗಾಗಿ ನೀವು ಮಹಾಸಮುದ್ರದಿಂದ,
8 Hor Dağı'ndan Levo-Hamat'a, oradan Sedat'a,
೮ಹೋರ್ ಪರ್ವತದಿಂದ ಹಮಾತಿನವರೆಗೂ ಮತ್ತು ಅಲ್ಲಿಂದ ಚೆದಾದಿನ ಹತ್ತಿರಕ್ಕೆ ಇರುವುದು.
9 Zifron'a doğru uzanarak Hasar-Enan'da son bulacak. Kuzeyde sınırınız bu olacak.
೯ಆ ಮೇಲೆ ಅದು ಜಿಫ್ರೋನಿಗೆ ಹೋಗಿ ಹಚರೇನಾನಿನ ಬಳಿಯಲ್ಲಿ ಮುಗಿಯಬೇಕು. ಇದು ನಿಮ್ಮ ಉತ್ತರ ದಿಕ್ಕಿನ ಮೇರೆಯಾಗಿರುವುದು.
10 “‘Doğu sınırınız Hasar-Enan'dan Şefam'a dek uzanacak.
೧೦ಪೂರ್ವದಿಕ್ಕಿನ ಮೇರೆಗಾಗಿ ಹಚರೇನಾನಿನಿಂದ ಶೆಫಾಮಿಗೆ ಗುರುತು ಹಾಕಬೇಕು.
11 Sınırınız Şefam'dan Ayin'in doğusundaki Rivla'ya dek inecek. Oradan Kinneret Gölü'nün doğu kıyısındaki yamaçlara dek uzanacak.
೧೧ಶೆಫಾಮಿನಿಂದ ಅಯಿನಿನ ಪೂರ್ವದಲ್ಲಿರುವ ರಿಬ್ಲಕ್ಕೆ ಬರಬೇಕು. ತರುವಾಯ ಅದು ಗಟ್ಟಾ ಇಳಿದು ಕಿನ್ನೆರೆತ್ ಸಮುದ್ರದ ಪೂರ್ವದಲ್ಲಿರುವ ಬೆಟ್ಟಗಳಿಗೆ ಹೋಗಬೇಕು.
12 Oradan Şeria Irmağı boyunca uzanacak ve Lut Gölü'nde son bulacak. “‘Her yandan ülkenizin sınırları bu olacaktır.’”
೧೨ಅಲ್ಲಿಂದ ಅದು ಯೊರ್ದನ್ ನದಿಗೆ ಇಳಿದು ಅದನ್ನು ಅನುಸರಿಸಿ ಲವಣಸಮುದ್ರದ ಬಳಿಯಲ್ಲಿ ಮುಗಿಯಬೇಕು. ಇವೇ ನಿಮ್ಮ ದೇಶದ ಮೇರೆಗಳು’” ಎಂದನು.
13 Musa İsrailliler'e, “Miras olarak kurayla paylaştıracağınız ülke budur” dedi, “RAB'bin buyruğu uyarınca ülke dokuz oymakla bir yarım oymak arasında paylaştırılacak.
೧೩ಅದಕ್ಕನುಸಾರವಾಗಿ ಮೋಶೆಯು ಇಸ್ರಾಯೇಲರಿಗೆ, “ನೀವು ಚೀಟುಹಾಕಿ ಹಂಚಿಕೊಳ್ಳಬೇಕೆಂದು ಯೆಹೋವನು ಆಜ್ಞಾಪಿಸಿದ ದೇಶವು ಇದೇ. ಒಂಭತ್ತುವರೆ ಕುಲದವರಿಗೆ ಇದನ್ನು ಹಂಚಿಕೊಡಬೇಕು.
14 Çünkü Ruben oymağına bağlı ailelerle Gad oymağına bağlı aileler ve Manaşşe oymağının öbür yarısı mülklerini aldılar.
೧೪ರೂಬೇನ್ಯರ ಮಕ್ಕಳ ಗೋತ್ರವೂ, ಗಾದ್ಯರ ಮಕ್ಕಳ ಗೋತ್ರವೂ, ಮನಸ್ಸೆ ಕುಲದವರಲ್ಲಿ ಅರ್ಧಗೋತ್ರವೂ ತಮ್ಮ ಪೂರ್ವಿಕರ ಗೋತ್ರಗಳ ಪ್ರಕಾರವಾಗಿ ತಮ್ಮ ಸ್ವತ್ತನ್ನು ಹೊಂದಿದ್ದಾರೆ.
15 Bu iki oymakla yarım oymak mülklerini Eriha'nın karşısındaki Şeria Irmağı'nın doğusunda aldılar.”
೧೫ಎರಡುವರೆ ಗೋತ್ರಗಳು ತಮ್ಮ ಸ್ವತ್ತನ್ನು ಯೊರ್ದನ್ ನದಿಯ ಆಚೆ ಯೆರಿಕೋ ಪಟ್ಟಣದ ಪೂರ್ವದಿಕ್ಕಿನಲ್ಲಿ ಪಡೆದುಕೊಂಡಿದ್ದಾರೆ.”
16 RAB Musa'ya şöyle dedi:
೧೬ಯೆಹೋವನು ಮೋಶೆಯ ಸಂಗಡ ಮಾತನಾಡಿ ಆಜ್ಞಾಪಿಸಿದ್ದೇನೆಂದರೆ,
17 “Ülkeyi mülk olarak aranızda paylaştıracak adamlar şunlardır: Kâhin Elazar ve Nun oğlu Yeşu.
೧೭“ದೇಶವನ್ನು ನಿಮಗೆ ಹಂಚಬೇಕಾದ ಜನರ ಹೆಸರುಗಳು ಯಾವುವೆಂದರೆ: ಮಹಾಯಾಜಕನಾದ ಎಲ್ಲಾಜಾರನು ಮತ್ತು ನೂನನ ಮಗನಾದ ಯೆಹೋಶುವನೂ.
18 Ülkeyi mülk olarak paylaştırmaları için her oymaktan birer önder görevlendirin.
೧೮ಒಂದೊಂದು ಕುಲದಿಂದ ನೇಮಿಸಲ್ಪಟ್ಟ ಒಬ್ಬ ಕುಲಾಧಿಪತಿಯೂ ಇವರೇ. ಇವರು ಕಾನಾನ್ ದೇಶದಲ್ಲಿ ತಮ್ಮ ತಮ್ಮ ಸ್ವತ್ತುಗಳನ್ನು ಹಂಚಿಕೊಡಬೇಕು.
19 Şu adamları görevlendireceksiniz: “Yahuda oymağından Yefunne oğlu Kalev,
೧೯ನೀವು ಆಯಾ ಕುಲಗಳಿಂದ ನೇಮಿಸಬೇಕಾದವರು ಯಾರೆಂದರೆ: ಯೆಹೂದ ಕುಲದಿಂದ ಯೆಫುನ್ನೆಯ ಮಗನಾದ ಕಾಲೇಬ್,
20 Şimon oymağından Ammihut oğlu Şemuel,
೨೦ಸಿಮೆಯೋನ್ ಕುಲದಿಂದ ಅಮ್ಮಿಹೂದನ ಮಗ ಶೆಮೂವೇಲ್,
21 Benyamin oymağından Kislon oğlu Elidat,
೨೧ಬೆನ್ಯಾಮೀನ್ ಕುಲದಿಂದ ಕಿಸ್ಲೋನನ ಮಗ ಎಲೀದಾದ್,
22 Dan oymağından Yogli oğlu önder Bukki,
೨೨ದಾನ್ ಕುಲದಿಂದ ಯೊಗ್ಲೀಯ ಮಗ ಬುಕ್ಕೀ ಕುಲಾಧಿಪತಿ,
23 Yusufoğulları'ndan: Manaşşe oymağından Efot oğlu önder Hanniel,
೨೩ಯೋಸೇಫನ ವಂಶದವರಲ್ಲಿ: ಮನಸ್ಸೆ ಕುಲದಿಂದ ಏಫೋದನ ಮಗ ಹನ್ನೀಯೇಲ್ ಕುಲಾಧಿಪತಿ,
24 Efrayim oymağından Şiftan oğlu önder Kemuel,
೨೪ಎಫ್ರಾಯೀಮ್ ಕುಲದಿಂದ ಶಿಫ್ಟಾನನ ಮಗ ಕೆಮೂವೇಲ್ ಕುಲಾಧಿಪತಿ,
25 Zevulun oymağından Parnak oğlu önder Elisafan,
೨೫ಜೆಬುಲೂನ್ ಕುಲದಿಂದ ಪರ್ನಾಕನ ಮಗ ಎಲೀಚಾಫಾನ್ ಕುಲಾಧಿಪತಿ,
26 İssakar oymağından Azzan oğlu önder Paltiel,
೨೬ಇಸ್ಸಾಕಾರ್ ಕುಲದಿಂದ ಅಜ್ಜಾನನ ಮಗ ಪಲ್ಟೀಯೇಲ್ ಕುಲಾಧಿಪತಿ,
27 Aşer oymağından Şelomi oğlu önder Ahihut,
೨೭ಆಶೇರ್ ಕುಲದಿಂದ ಶೆಲೋಮಮೀಯ ಮಗ ಅಹೀಹೂದ್ ಕುಲಾಧಿಪತಿ,
28 Naftali oymağından Ammihut oğlu önder Pedahel.”
೨೮ನಫ್ತಾಲಿ ಕುಲದಿಂದ ಅಮ್ಮಿಹೂದನ ಮಗ ಪೆದಹೇಲ್ ಕುಲಾಧಿಪತಿ ಇವರೇ.”
29 Kenan ülkesinde İsrailliler'e mülkü paylaştırmaları için RAB'bin görevlendirdiği adamlar bunlardı.
೨೯ಕಾನಾನ್ ದೇಶದಲ್ಲಿ ಇಸ್ರಾಯೇಲರಿಗೆ ಅವರವರ ಸ್ವತ್ತುಗಳನ್ನು ಹಂಚಿಕೊಡುವುದಕ್ಕೆ ಯೆಹೋವನು ಇವರನ್ನೆಲ್ಲಾ ನೇಮಿಸಿದನು.