< Nehemya 7 >

1 Surların onarımı bitip kapılar yerine takıldıktan sonra, kapı nöbetçileri, ezgiciler ve Levililer göreve atandı.
ಗೋಡೆಯನ್ನು ಕಟ್ಟಿ ಮುಗಿಸಿದ ನಂತರ ನಾನು ಬಾಗಿಲುಗಳನ್ನು ಇರಿಸಿದೆನು; ದ್ವಾರಪಾಲಕರನ್ನೂ, ಗಾಯಕರನ್ನೂ, ಲೇವಿಯರನ್ನೂ ನೇಮಿಸಲಾಯಿತು.
2 Kardeşim Hanani'yle kale komutanı Hananya'yı Yeruşalim'e yönetici atadım. Hananya güvenilir bir kişiydi. Çoğu insandan daha çok Tanrı'dan korkardı.
ಆನಂತರ ನನ್ನ ತಮ್ಮನಾದ ಹನಾನಿಗೂ, ಬಹಳ ನಂಬಿಗಸ್ತನೂ ದೇವರಲ್ಲಿ ವಿಶೇಷ ಭಯಭಕ್ತಿಯುಳ್ಳವನೂ, ಕೋಟೆಯ ಅಧಿಕಾರಿಯೂ ಆದ ಹನನ್ಯನಿಗೂ ಯೆರೂಸಲೇಮಿನ ಮೇಲ್ವಿಚಾರಣೆಯನ್ನು ಒಪ್ಪಿಸಿದೆನು.
3 Onlara, “Güneş ortalığı ısıtıncaya kadar Yeruşalim kapıları açılmasın” dedim, “Kapı nöbetçileri görev başındayken kapıları kapalı tutsunlar. Kapıları siz sürgüleyin ve Yeruşalim'de oturanlara nöbet görevi verin. Bazıları bu görevi yapsın, bazıları da evlerinin çevresinde nöbet tutsun.”
ನಾನು ಅವರಿಗೆ, “ಬಿಸಿಲೇರುವುದಕ್ಕಿಂತ ಮೊದಲು ಯೆರೂಸಲೇಮಿನ ಬಾಗಿಲುಗಳನ್ನು ತೆರೆಯಬಾರದು; ಕಾವಲುಗಾರರು ಇನ್ನೂ ಇರುವಾಗಲೇ ಬಾಗಿಲುಗಳನ್ನು ಮುಚ್ಚಿ ಭದ್ರಪಡಿಸಬೇಕು. ಇದಲ್ಲದೆ ಯೆರೂಸಲೇಮಿನ ನಿವಾಸಿಗಳೊಳಗೆ ಕಾವಲುಗಾರರನ್ನು ಗೊತ್ತುಮಾಡಿರಿ, ಅವರಲ್ಲಿ ಕೆಲವರು ತಮ್ಮ ಕಾವಲಿನ ಸ್ಥಳಗಳಲ್ಲಿಯೂ, ಇನ್ನು ಕೆಲವರನ್ನು ಅವರ ಮನೆಯ ಎದುರಿನಲ್ಲಿಯೂ ಕಾವಲಿರುವಂತೆ ನೇಮಿಸಬೇಕು” ಎಂದು ಆಜ್ಞಾಪಿಸಿದೆನು.
4 Yeruşalim geniş, büyük bir kentti, ama nüfusu azdı. İçindeki evler henüz onarılmamıştı.
ಪಟ್ಟಣವು ವಿಸ್ತಾರವಾಗಿದ್ದರೂ ಅದರೊಳಗೆ ಬಹಳ ಸ್ವಲ್ಪ ಜನರು ಮಾತ್ರ ಇದ್ದರು. ಮನೆಗಳನ್ನು ಇನ್ನೂ ಕಟ್ಟಿರಲಿಲ್ಲ.
5 Tanrım soylarına göre halkın sayımı yapılabilsin diye soyluları, yetkilileri ve bütün halkı toplamamı istedi. Sürgünden ilk dönenlerin soy kütüğünü buldum. İçinde şunlar yazılıydı:
ಹೀಗಿರಲಾಗಿ ನಾನು ನನ್ನ ದೇವರ ಪ್ರೇರಣೆಯಿಂದ ಗಣ್ಯರನ್ನು, ಶ್ರೀಮಂತರನ್ನೂ, ಅಧಿಕಾರಿಗಳನ್ನೂ, ಸಾಧಾರಣ ಜನರನ್ನೂ ಜನಗಣತಿಗಾಗಿ ಸಭೆಸೇರಿಸಿದನು. ಆಗ ಯೆರೂಸಲೇಮಿಗೆ ಮೊದಲು ಬಂದವರ ಹೆಸರುಗಳ ಪಟ್ಟಿಯು ನನಗೆ ಸಿಕ್ಕಿತು. ಅದರಲ್ಲಿ ಬರೆದಿದ್ದೇನೆಂದರೆ,
6 Babil Kralı Nebukadnessar'ın sürgün ettiği insanlar yaşadıkları ilden Yeruşalim ve Yahuda'daki kendi kentlerine döndü.
ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನಿಂದ ಸೆರೆಯಾಗಿ ಒಯ್ಯಲ್ಪಟ್ಟವರು ಹಿಂತಿರುಗಿ ತಮ್ಮ ಸ್ವದೇಶವಾದ ಯೆಹೂದ ಪ್ರಾಂತ್ಯದ ಸ್ವಂತ ಪಟ್ಟಣಗಳಿಗೂ, ಯೆರೂಸಲೇಮಿಗೂ ಹಿಂತಿರುಗಿದರು.
7 Bunlar Zerubbabil, Yeşu, Nehemya, Azarya, Raamya, Nahamani, Mordekay, Bilşan, Misperet, Bigvay, Nehum ve Baana'nın önderliğinde geldiler. Sürgünden dönen İsrailliler'in sayıları şöyleydi:
ಅವರು ಜೆರುಬ್ಬಾಬೆಲ್, ಯೇಷೂವ, ನೆಹೆಮೀಯ. ಅಜರ್ಯ, ರಗಮ್ಯ, ನಹಮಾನೀ, ಮೊರ್ದೆಕೈ, ಬಿಲ್ಷಾನ್, ಮಿಸ್ಪೆರೆತ್, ಬಿಗ್ವೈ, ನೆಹೂಮ್, ಬಾಣ ಎಂಬ ನಾಯಕರೊಡನೆ ತಿರುಗಿ ಬಂದ ಇಸ್ರಾಯೇಲರು ಯಾರೆಂದರೆ:
8 Paroşoğulları: 2 172
ಪರೋಷಿನವರು - 2,172.
9 Şefatyaoğulları: 372
ಶೆಫಟ್ಯನ ಸಂತಾನದವರು - 372.
10 Arahoğulları: 652
೧೦ಆರಹನ ಸಂತಾನದವರು - 652.
11 Yeşu ve Yoav soyundan Pahat-Moavoğulları: 2 818
೧೧ಪಹತ್ ಮೋವಾಬಿನವರಾದ ಯೇಷೂವ ಮತ್ತು ಯೋವಾಬನ ಸಂತಾನದವರು - 2,818.
12 Elamoğulları: 1 254
೧೨ಏಲಾಮಿನ ಸಂತಾನದವರು - 1,254.
13 Zattuoğulları: 845
೧೩ಜತ್ತೂವಿನ ಸಂತಾನದವರು - 845.
14 Zakkayoğulları: 760
೧೪ಜಕ್ಕೈಯನ ಸಂತಾನದವರು - 760.
15 Binnuyoğulları: 648
೧೫ಬಿನ್ನೂಯನ ಸಂತಾನದವರು - 648.
16 Bevayoğulları: 628
೧೬ಬೇಬೈಯನ ಸಂತಾನದವರು - 628.
17 Azgatoğulları: 2 322
೧೭ಅಜ್ಗಾದಿನ ಸಂತಾನದವರು - 2,322.
18 Adonikamoğulları: 667
೧೮ಅದೋನೀಕಾಮಿನ ಸಂತಾನದವರು - 667.
19 Bigvayoğulları: 2067
೧೯ಬಿಗ್ವೈಯನ ಸಂತಾನದವರು - 2,067.
20 Adinoğulları: 655
೨೦ಆದೀನನ ಸಂತಾನದವರು - 655.
21 Hizkiya soyundan Ateroğulları: 98
೨೧ಆಟೇರಿನವರಾದ ಹಿಜ್ಕೀಯನ ಸಂತಾನದವರು - 98.
22 Haşumoğulları: 328
೨೨ಹಾಷುಮಿನ ಸಂತಾನದವರು - 328.
23 Besayoğulları: 324
೨೩ಬೇಚೈಯನ ಸಂತಾನದವರು - 324.
24 Harifoğulları: 112
೨೪ಹಾರಿಫಿನ ಸಂತಾನದವರು - 112.
25 Givonlular: 95
೨೫ಗಿಬ್ಯೋನಿನ ಸಂತಾನದವರು - 95.
26 Beytlehemliler ve Netofalılar: 188
೨೬ಬೇತ್ಲೆಹೇಮ್ ಮತ್ತು ನೆಟೋಫ ಊರಿನವರು - 188.
27 Anatotlular: 128
೨೭ಅನಾತೋತ್ ಊರಿನವರು - 128.
28 Beytazmavetliler: 42
೨೮ಬೇತಜ್ಮಾವೇತಿನ ಊರಿನವರು - 42.
29 Kiryat-Yearimliler, Kefiralılar ve Beerotlular: 743
೨೯ಕಿರ್ಯತ್ಯಾರೀಮ್, ಕೆಫೀರಾ ಮತ್ತು ಬೇರೋತ್ ಊರಿನವರು - 743.
30 Ramalılar ve Gevalılar: 621
೩೦ರಾಮಾ ಮತ್ತು ಗೆಬ ಊರಿನವರು - 621.
31 Mikmaslılar: 122
೩೧ಮಿಕ್ಮಾಸಿನವರು - 122.
32 Beytel ve Ay kentlerinden olanlar: 123
೩೨ಬೇತೇಲ್ ಮತ್ತು ಆಯಿ ಎಂಬ ಊರಿನವರು - 123.
33 Öbür Nevo Kenti'nden olanlar: 52
೩೩ಎರಡನೆಯ ನೆಬೋವಿನವರು - 52.
34 Öbür Elam Kenti'nden olanlar: 1254
೩೪ಎರಡನೆಯ ಏಲಾಮಿನವರು - 1,254.
35 Harimliler: 320
೩೫ಹಾರಿಮನವರು - 320.
36 Erihalılar: 345
೩೬ಯೆರಿಕೋವಿನವರು - 347.
37 Lod, Hadit ve Ono kentlerinden olanlar: 721
೩೭ಲೋದ್, ಹಾದೀದ್, ಮತ್ತು ಓನೋ ಊರಿನವರು - 721.
38 Senaalılar: 3 930
೩೮ಸೆನಾಹನವರು - 3,930.
39 Kâhinler: Yeşu soyundan Yedayaoğulları: 973
೩೯ಯಾಜಕರಲ್ಲಿ - ಯೆದಾಯನ ಸಂತಾನದವರಾದ ಯೇಷೂವನ ಮನೆಯವರು - 973.
40 İmmeroğulları: 1 052
೪೦ಇಮ್ಮೇರನ ಸಂತಾನದವರು - 1,052.
41 Paşhuroğulları: 1 247
೪೧ಪಷ್ಹೂರನ ಸಂತಾನದವರು - 1,247.
42 Harimoğulları: 1017
೪೨ಹಾರಿಮನ ಸಂತಾನದವರು - 1,017
43 Levililer: Kadmiel ve Hodeva soyundan gelen Yeşuoğulları: 74
೪೩ಲೇವಿಯರಲ್ಲಿ - ಹೋದವ್ಯನ ಸಂತಾನದವರಾದ ಯೇಷೂವ, ಕದ್ಮೀಯೇಲ್ ಸಂತಾನದವರು - 74.
44 Ezgiciler: Asafoğulları: 148
೪೪ಗಾಯಕರಲ್ಲಿ; ಆಸಾಫನ ಸಂತಾನದರು - 148.
45 Tapınak kapı nöbetçileri: Şallumoğulları, Ateroğulları, Talmonoğulları, Akkuvoğulları, Hatitaoğulları, Şovayoğulları: 138
೪೫ದ್ವಾರಪಾಲಕರಲ್ಲಿ; ಶಲ್ಲೂಮ್, ಆಟೇರ್, ಟಲ್ಮೋನ್, ಅಕ್ಕೂಬ್, ಹಟೀಟಾ, ಶೋಬೈ ಇವರ ಸಂತಾನದವರು ಒಟ್ಟು - 138.
46 Tapınak görevlileri: Sihaoğulları, Hasufaoğulları, Tabbaotoğulları,
೪೬ದೇವಾಲಯದ ಸೇವಕರಲ್ಲಿ; ಜೀಹ, ಹಸೂಫ, ಟಬ್ಬಾವೋತ್ ಸಂತಾನದರು,
47 Kerosoğulları, Siaoğulları, Padonoğulları,
೪೭ಕೇರೋಸ್, ಸೀಯ, ಪಾದೋನ್ ಸಂತಾನದರು,
48 Levanaoğulları, Hagavaoğulları, Şalmayoğulları,
೪೮ಲೆಬಾನ, ಹಗಾಬ, ಸಲ್ಮೈ ಸಂತಾನದರು,
49 Hananoğulları, Giddeloğulları, Gaharoğulları,
೪೯ಹಾನಾನ್, ಗಿದ್ದೇಲ್, ಗಹರ್ ಸಂತಾನದರು,
50 Reayaoğulları, Resinoğulları, Nekodaoğulları,
೫೦ರೆವಾಯ, ರೆಚೀನ್, ನೆಕೋದ ಸಂತಾನದರು,
51 Gazzamoğulları, Uzzaoğulları, Paseahoğulları,
೫೧ಗಜ್ಜಾಮ್, ಉಜ್ಜ, ಪಾಸೇಹ ಸಂತಾನದವರು,
52 Besayoğulları, Meunimoğulları, Nefişesimoğulları,
೫೨ಬೇಸೈ, ಮೆಯನೀಮ್, ನೆಫೀಷೆಸೀಮ್ ಸಂತಾನದವರು,
53 Bakbukoğulları, Hakufaoğulları, Harhuroğulları,
೫೩ಬಕ್ಬೂಕ್, ಹಕ್ಕೂಫ, ಹರ್ಹೂರ್ ಸಂತಾನದವರು,
54 Baslitoğulları, Mehidaoğulları, Harşaoğulları,
೫೪ಬಚ್ಲೂತ್, ಮೆಹೀದ, ಹರ್ಷ ಸಂತಾನದವರು
55 Barkosoğulları, Siseraoğulları, Temahoğulları,
೫೫ಬರ್ಕೋಸ್, ಸೀಸೆರ, ತೆಮಹ ಸಂತಾನದವರು,
56 Nesiahoğulları, Hatifaoğulları.
೫೬ನೆಚೀಹ, ಹಟೀಫ ಸಂತಾನದವರು.
57 Süleyman'ın kullarının soyu: Sotayoğulları, Soferetoğulları, Peridaoğulları,
೫೭ಸೊಲೊಮೋನನ ಸೇವಕರಲ್ಲಿ - ಸೋಟೈ, ಸೋಫೆರೆತ್, ಪೆರೀದನ ಸಂತಾನದವರು,
58 Yalaoğulları, Darkonoğulları, Giddeloğulları,
೫೮ಯಾಲ, ದರ್ಕೋನ್, ಗಿದ್ದೇಲ್ ಸಂತಾನದವರು,
59 Şefatyaoğulları, Hattiloğulları, Pokeret-Hassevayimoğulları, Amonoğulları.
೫೯ಶೆಫಟ್ಯ, ಹಟ್ಟೀಲ್, ಪೋಕೆರೆತ್ ಹಚ್ಚೆಬಾಯೀಮ್, ಆಮೋನ್ ಸಂತಾನದವರು.
60 Tapınak görevlileriyle Süleyman'ın kullarının soyundan olanlar: 392
೬೦ಎಲ್ಲಾ ದೇವಾಲಯದ ಸೇವಕರೂ ಸೊಲೊಮೋನನ ಸೇವಕರು ಒಟ್ಟು 392 ಮಂದಿ.
61 Tel-Melah, Tel-Harşa, Keruv, Addon ve İmmer'den dönen, ancak hangi aileden olduklarını ve soylarının İsrail'den geldiğini kanıtlayamayanlar şunlardır:
೬೧ತೇಲ್ಮೆಲಹ, ತೇಲ್ಹರ್ಷ, ಕೆರೂಬ್, ಆದ್ದೋನ್ ಮತ್ತು ಇಮ್ಮೇರ್, ಎಂಬ ಊರುಗಳಿಂದ ಬಂದವರಾಗಿ ತಮ್ಮ ಗೋತ್ರಗಳ ವಂಶಾವಳಿಗಳನ್ನು ತೋರಿಸಿ ತಾವು ಇಸ್ರಾಯೇಲರೆಂಬುದನ್ನು ಸ್ಥಾಪಿಸಲಾರದವರಾದ,
62 Delayaoğulları, Toviyaoğulları, Nekodaoğulları: 642
೬೨ದೆಲಾಯ, ಟೋಬೀಯ, ನೆಕೋದ ಇವರ ಸಂತಾನದವರು - 642.
63 Kâhinlerin soyundan: Hovayaoğulları, Hakkosoğulları ve Gilatlı Barzillay'ın kızlarından biriyle evlenip kayınbabasının adını alan Barzillay'ın oğulları.
೬೩ಯಾಜಕರಲ್ಲಿ: ಹೋಬಾಯ, ಹಕ್ಕೋಚ್, ಬರ್ಜಿಲ್ಲೈ ಇವರ ಸಂತಾನದವರು ತಮ್ಮ ವಂಶಾವಳಿಯ ದಾಖಲೆ ತೋರಿಸಲಾರದೆ ಹೋದರು. ಬರ್ಜಿಲ್ಲೈ ಎಂಬುವನು ಗಿಲ್ಯಾದ್ಯನಾದ ಬರ್ಜಿಲ್ಲೈಯ ಹೆಣ್ಣುಮಕ್ಕಳಲ್ಲಿ ಒಬ್ಬಾಕೆಯನ್ನು ಮದುವೆ ಮಾಡಿಕೊಂಡು ಅವನ ಹೆಸರನ್ನು ಇಟ್ಟುಕೊಂಡಿದ್ದನು.
64 Bunlar soy kütüklerini aradılar. Ama yazılı bir kayıt bulamayınca, kâhinlik görevi ellerinden alındı.
೬೪ಇವರು ತಮ್ಮ ವಂಶಾವಳಿ ಪತ್ರಗಳನ್ನು ಹುಡುಕಿದರೂ ಅವು ಸಿಕ್ಕದ ಕಾರಣ ಅವರನ್ನು ಅಶುದ್ಧರೆಂದು ಯಾಜಕೋದ್ಯೋಗದಿಂದ ತಳ್ಳಲ್ಪಟ್ಟರು.
65 Vali, Urim ile Tummim'i kullanan bir kâhin çıkıncaya dek en kutsal yiyeceklerden yememelerini buyurdu.
೬೫ಊರೀಮ್ ಮತ್ತು ತುಮ್ಮೀಮುಗಳ ಮೂಲಕ ದೈವನಿರ್ಣಯವನ್ನು ತಿಳಿಸಬಲ್ಲವನಾದ ಯಾಜಕನು ಬರುವ ತನಕ ಇವರು ಮಹಾಪರಿಶುದ್ಧ ಪದಾರ್ಥಗಳನ್ನು ಭೋಜನ ಮಾಡಬಾರದೆಂಬುದಾಗಿ ದೇಶಾಧಿಪತಿಯು ಆಜ್ಞಾಪಿಸಿದನು.
66 Bütün halk toplam 42 360 kişiydi.
೬೬ಸರ್ವಸಮೂಹದವರ ಒಟ್ಟು ಸಂಖ್ಯೆಯು ನಲ್ವತ್ತೆರಡು ಸಾವಿರದ ಮುನ್ನೂರ ಅರವತ್ತಾಗಿತ್ತು.
67 Ayrıca 7 337 erkek ve kadın köle, kadınlı erkekli 245 ezgici, 736 at, 245 katır, 435 deve, 6 720 eşek vardı.
೬೭ಈ ಸಂಖ್ಯೆಯಲ್ಲಿ ಲೆಕ್ಕಿಸಲ್ಪಡದ ಅವರ ಸೇವಕ ಸೇವಕಿಯರು ಏಳು ಸಾವಿರದ ಮುನ್ನೂರ ಮೂವತ್ತೇಳು ಮಂದಿ. ಅವರ ಗಾಯಕರೂ ಗಾಯಕಿಯರೂ ಇನ್ನೂರ ನಲ್ವತ್ತೈದು ಮಂದಿ.
೬೮ಅವರಿಗೆ ಏಳು ನೂರ ಮೂವತ್ತಾರು ಕುದುರೆಗಳೂ, ಇನ್ನೂರ ನಲ್ವತ್ತೈದು ಹೇಸರಗತ್ತೆಗಳೂ,
೬೯ನಾನೂರ ಮೂವತ್ತೈದು ಒಂಟೆಗಳೂ ಆರು ಸಾವಿರದ ಏಳುನೂರಿಪ್ಪತ್ತು ಕತ್ತೆಗಳೂ ಇದ್ದವು.
70 Bazı aile başları onarım işi için bağışta bulundu: Vali hazineye 1 000 darik altın, 50 çanak, 530 kâhin mintanı bağışladı.
೭೦ಗೋತ್ರಪ್ರಧಾನರಲ್ಲಿ ಕೆಲವರು ಕೆಲಸಕಾರ್ಯಗಳಿಗಾಗಿ ಧನ ಸಹಾಯ ಮಾಡಿದರು. ತಿರ್ಷಾತಾ ಅನ್ನಿಸಿಕೊಳ್ಳುವ ದೇಶಾಧಿಪತಿಯು ಭಂಡಾರಕ್ಕೆ ಕೊಟ್ಟದ್ದು ಸಾವಿರ ಬಂಗಾರದ ನಾಣ್ಯಗಳು, ಐವತ್ತು ಬೋಗುಣಿಗಳು, ಐನೂರಮೂವತ್ತು ಯಾಜಕವಸ್ತ್ರಗಳು.
71 Bazı aile başları da iş için hazineye 20 000 darik altın, 2 200 mina gümüş verdiler.
೭೧ಬೇರೆ ಕೆಲವು ಮಂದಿ ಗೋತ್ರಪ್ರಧಾನರು ಕಟ್ಟಡದ ಭಂಡಾರಕ್ಕೆ ಕೊಟ್ಟದ್ದು - ಇಪ್ಪತ್ತು ಸಾವಿರ ಬಂಗಾರದ ನಾಣ್ಯಗಳು, ಒಂದು ಲಕ್ಷದ ಹತ್ತು ಸಾವಿರ ತೊಲಾ ಬೆಳ್ಳಿ;
72 Halkın geri kalanı ise, toplam 20 000 darik altın, 2 000 mina gümüş ve 67 kâhin mintanı verdi.
೭೨ಉಳಿದ ಜನರು ಕೊಟ್ಟದ್ದು ಇಪ್ಪತ್ತು ಸಾವಿರ ಬಂಗಾರದ ನಾಣ್ಯಗಳು, ಒಂದು ಲಕ್ಷ ತೊಲಾ ಬೆಳ್ಳಿ, ಅರುವತ್ತೇಳು ಯಾಜಕವಸ್ತ್ರಗಳನ್ನು ನೀಡಿದರು.
73 Kâhinler, Levililer, tapınak görevlileri ve kapı nöbetçileri, ezgiciler, sıradan insanlar ve bütün İsrailliler kentlerine yerleştiler.
೭೩ಹೀಗೆ ಯಾಜಕರು, ಲೇವಿಯರು, ದ್ವಾರಪಾಲಕರು, ಗಾಯಕರು, ಸಾಧಾರಣ ಜನರು ಸೇರಿದವರು, ದೇವಾಲಯದ ಸೇವಕರು ಅಂತೂ ಇಸ್ರಾಯೇಲರೆಲ್ಲರೂ ತಮ್ಮ ತಮ್ಮ ಪಟ್ಟಣಗಳಲ್ಲಿ ವಾಸ ಮಾಡತೊಡಗಿದರು.

< Nehemya 7 >