< Yeşu 19 >

1 İkinci kura Şimon'a, boy sayısına göre Şimonoğulları oymağına düştü. Onların payı Yahudaoğulları'na düşen payın sınırları içinde kalıyordu.
ಚೀಟು ಎರಡನೆಯ ಸಾರಿ ಸಿಮೆಯೋನನ ಕುಲದವರಿಗೆ ಬಿದ್ದಿತು. ಸಿಮೆಯೋನನ ಕುಲದ ಗೋತ್ರಗಳ ಸ್ವತ್ತು ಯೆಹೂದ ಕುಲದವರ ಸ್ವತ್ತಿನ ಮಧ್ಯದಲ್ಲಿತ್ತು.
2 Bu pay Beer-Şeva ya da Şeva, Molada,
ಅವರ ಊರುಗಳು ಯಾವುವೆಂದರೆ: ಬೇರ್ಷೆಬ, ಶೆಬ, ಮೋಲಾದಾ,
3 Hasar-Şual, Bala, Esem,
ಹಚರ್‌ ಷೂವಾಲ್, ಬಾಲಾ, ಎಚೆಮ್,
4 Eltolat, Betul, Horma,
ಎಲ್ತೋಲದ್, ಬೆತೂಲ್, ಹೊರ್ಮಾ,
5 Ziklak, Beytmarkavot, Hasar-Susa,
ಚಿಕ್ಲಗ್, ಬೇತ್‌ಮರ್ಕಾಬೋತ್, ಹಚರ್‌ಸೂಸಾ,
6 Beytlevaot ve Şaruhen'i içeriyordu. Köyleriyle birlikte toplam on üç kent.
ಬೇತ್‌ಲೆಬಾವೋತ್, ಶಾರೂಹೆನ್ ಎಂಬ ಹದಿಮೂರು ಪಟ್ಟಣಗಳು ಮತ್ತು ಅವುಗಳ ಗ್ರಾಮಗಳು.
7 Ayin, Rimmon, Eter ve Aşan; köyleriyle birlikte dört kent.
ಅಯಿನ್, ರಿಮ್ಮೋನ್, ಏತೆರ್, ಅಷಾನ್ ಎಂಬ ನಾಲ್ಕು ಪಟ್ಟಣಗಳು ಮತ್ತು ಅವುಗಳ ಗ್ರಾಮಗಳು.
8 Baalat-Beer, yani Negev'deki Rama'ya kadar uzanan bu kentlerin çevresindeki bütün köyler de Şimonoğulları'na aitti. Boy sayısına göre Şimonoğulları oymağının payı buydu.
ಅವುಗಳ ಸುತ್ತಣ ಪ್ರದೇಶದಲ್ಲಿ ರಾಮ ಎಂಬ ಬಾಲತ್ ಬೇರ್ ಎಂಬ ಊರಿನವರೆಗೂ ಇದ್ದ ಎಲ್ಲಾ ಗ್ರಾಮಗಳೂ ಆಗಿವೆ. ಬಾಲತ್ ಬೇರ್ ಎಂಬುದು ದಕ್ಷಿಣ ರಾಮ ಎನ್ನಿಸಿಕೊಳ್ಳುತ್ತದೆ. ಸಿಮೆಯೋನ್ ಕುಲದ ಗೋತ್ರಗಳಿಗೆ ಸಿಕ್ಕಿದ ಸ್ವತ್ತು ಇವೇ.
9 Şimonoğulları'na verilen pay Yahudaoğulları'nın payından alınmıştı. Çünkü Yahudaoğulları'nın payı ihtiyaçlarından fazlaydı. Böylece Şimonoğulları'nın payı Yahuda oymağının sınırları içinde kalıyordu.
ಸಿಮೆಯೋನ್ಯರ ಈ ಸ್ವತ್ತು ಯೆಹೂದ್ಯರ ಸ್ವತ್ತಿನ ಒಂದು ಭಾಗವಾಗಿತ್ತು. ಯೆಹೂದ್ಯರಿಗೆ ದೊರಕಿದ ಪ್ರದೇಶವು ಹೆಚ್ಚಾಗಿದ್ದುದರಿಂದ ಸಿಮೆಯೋನ್ಯರಿಗೂ ಅದರಲ್ಲೇ ಪಾಲು ಸಿಕ್ಕಿತು.
10 Üçüncü kura boy sayısına göre Zevulunoğulları'na düştü. Topraklarının sınırı Sarit'e kadar uzanıyordu.
೧೦ಚೀಟು ಮೂರನೆಯ ಸಾರಿ ಜೆಬುಲೂನ್ಯರಿಗೆ ಬಿದ್ದಿತು. ಆ ಕುಲದ ಗೋತ್ರಗಳಿಗೆ ಸಿಕ್ಕಿದ ಸ್ವತ್ತಿನ ಮೇರೆಯು
11 Sınır batıda Marala'ya doğru çıkıyor, Dabbeşet'e erişip Yokneam karşısındaki vadiye uzanıyor,
೧೧ಸಾರೀದಿನಿಂದ ಪಶ್ಚಿಮ ದಿಕ್ಕಿನಲ್ಲಿರುವ ಮರ್ಗಲಾ, ದಬ್ಬೆಷೆತ್ ಇವುಗಳ ಮೇಲೆ ಯೊಕ್ನೆಯಾಮ್ ಊರಿನ ಈಚೆಯಲ್ಲಿರುವ ಹಳ್ಳಕ್ಕೆ ಹೋಗುತ್ತದೆ.
12 Sarit'ten doğuya, gün doğusuna, Kislot-Tavor sınırına dönüyor, oradan Daverat'a dayanıyor ve Yafia'ya çıkıyordu.
೧೨ಅದೇ ಸಾರೀದಿನಿಂದ ಅದು ಪೂರ್ವ ದಿಕ್ಕಿನಲ್ಲಿ ಕಿಸ್ಲೋತ್ ತಾಬೋರಿನ ಮೇರೆಗೆ ಹತ್ತಿ ದಾಬೆರತಿಗೆ ಹೋಗುತ್ತದೆ. ಅಲ್ಲಿಂದ ಏರುತ್ತಾ ಯಾಫೀಯಕ್ಕೆ ಹೋಗುತ್ತದೆ.
13 Buradan yine doğuya, Gat-Hefer ve Et-Kasin'e geçiyor, Rimmon'a uzanıyor, Nea'ya kıvrılıyordu.
೧೩ಅಲ್ಲಿಂದ ಮತ್ತು ಪೂರ್ವಕ್ಕೆ ಮುಂದುವರೆದು ಗತ್‌ಹೇಫೆರನ್ನು ಎತ್‌ಕಾಚೀನ ಇವುಗಳ ಮೇಲೆ ಹಾದು ನೇಯದ ಪಕ್ಕದಲ್ಲಿ ಇರುವ ರಿಮ್ಮೋನಿಗೆ ಹೋಗುತ್ತದೆ.
14 Kuzey sınırı buradan Hannaton'a dönüyor ve Yiftahel Vadisi'nde son buluyordu.
೧೪ಅಲ್ಲಿಂದ ಅದು ಉತ್ತರಕ್ಕೆ ತಿರುಗಿಕೊಂಡು ಹನ್ನಾತೋನಿನ ಮೇಲೆ ಇಪ್ತಹೇಲಿನ ಕಣಿವೆಗೆ ಹೋಗಿ ಅಲ್ಲಿ ಮುಕ್ತಾಯಗೊಳ್ಳುತ್ತದೆ.
15 Kattat, Nahalal, Şimron, Yidala ve Beytlehem; köyleriyle birlikte on iki kentti.
೧೫ಕಟ್ಟಾತ್, ನಹಲಾಲ್, ಶಿಮ್ರೋನ್, ಇದಲಾ, ಬೇತ್ಲೆಹೇಮ್ ಇವೇ ಮೊದಲಾದ ಹನ್ನೆರಡು ಪಟ್ಟಣಗಳು, ಅವುಗಳಿಗೆ ಸೇರಿದ ಗ್ರಾಮಗಳು.
16 Boy sayısına göre Zevulunoğulları'nın payı köyleriyle birlikte bu kentlerdi.
೧೬ಜೆಬುಲೂನಿನ ಕುಲದ ಗೋತ್ರಗಳಿಗೆ ಸ್ವತ್ತಾಗಿ ದೊರಕಿದವು.
17 Dördüncü kura İssakar'a, boy sayısına göre İssakaroğulları'na düştü.
೧೭ಚೀಟು ನಾಲ್ಕನೆಯ ಸಾರಿ ಇಸ್ಸಾಕಾರ್ ಕುಲದವರಿಗೆ ಬಿದ್ದಿತು. ಅವರ ಗೋತ್ರಗಳಿಗೆ ಸಿಕ್ಕಿದ ಪಟ್ಟಣಗಳು ಯಾವುವೆಂದರೆ:
18 Yizreel, Kesullot, Şunem,
೧೮ಇಜ್ರೇಲ್, ಕೆಸುಲ್ಲೋತ್, ಶೂನೇಮ್,
19 Hafarayim, Şion, Anaharat,
೧೯ಹಫಾರಯಿಮ್, ಶೀಯೋನ್, ಅನಾಹರತ್,
20 Rabbit, Kişyon, Eves,
೨೦ರಬ್ಬೀತ್, ಕಿಷ್ಯೋನ್, ಎಬೆಜ್,
21 Remet, Eyn-Gannim, Eyn-Hadda ve Beytpasses bu sınırların içinde kalıyordu.
೨೧ರೆಮೆತ್, ಏಂಗನ್ನೀಮ್, ಏನ್‌ಹದ್ದಾ, ಬೇತ್ ಪಚ್ಚೇಚ್ ಇವುಗಳೇ.
22 Sınır Tavor, Şahasima ve Beytşemeş boyunca uzanarak Şeria Irmağı'nda son buluyordu. Köyleriyle birlikte on altı kentti.
೨೨ತಾಬೋರ್, ಶಹಚೀಮಾ, ಬೇತ್‌ಷೆಮೆಷ್‌ ಎಂಬ ಊರುಗಳು ಅದರ ಮೇರೆಯೊಳಗಿದ್ದವು. ಮೇರೆಯು ಯೊರ್ದನ್ ನದಿಯ ತೀರದಲ್ಲಿ ಕೊನೆಗೊಳ್ಳುತ್ತದೆ. ಒಟ್ಟಾರೆ ಹದಿನಾರು ಪಟ್ಟಣಗಳು ಮತ್ತು ಅವುಗಳ ಗ್ರಾಮಗಳು,
23 Boy sayısına göre İssakaroğulları oymağının payı köyleriyle birlikte bu kentlerdi.
೨೩ಇಸ್ಸಾಕಾರನ ಕುಲದ ಗೋತ್ರಗಳಿಗೆ ಸಿಕ್ಕಿದವು.
24 Beşinci kura boy sayısına göre Aşeroğulları oymağına düştü.
೨೪ಚೀಟು ಐದನೆಯ ಸಾರಿ ಆಶೇರ್ ಕುಲದವರಿಗೆ ಬಿದ್ದಿತು. ಅವರ ಗೋತ್ರಗಳಿಗೆ ಸಿಕ್ಕಿದ ಊರುಗಳು ಯಾವುವೆಂದರೆ: -
25 Sınırları içindeki kentler Helkat, Hali, Beten, Akşaf,
೨೫ಹೆಲ್ಕತ್, ಹಲೀ, ಬೆಟೆನ್, ಅಕ್ಷಾಫ್,
26 Allammelek, Amat ve Mişal'dı. Sınır batıda Karmel ve Şihor-Livnat'a erişiyordu.
೨೬ಅಲಮ್ಮೆಲೆಕ್, ಅಮಾದ್, ಮಿಷಾಲ್ ಇವುಗಳೇ. ಇವರ ದೇಶದ ಮೇರೆಯು ಪಶ್ಚಿಮದಲ್ಲಿ ಕರ್ಮೆಲ್ ಬೆಟ್ಟಕ್ಕೂ, ಶೀಹೋರ್ ಲಿಬ್ನತ್ ಎಂಬ ಹಳ್ಳಕ್ಕೂ ತಾಕಿ ಅಲ್ಲಿಂದ ಪೂರ್ವಕ್ಕೆ ತಿರುಗಿ,
27 Buradan doğuya, Beytdagon'a dönüyor, Zevulun sınırı ve Yiftahel Vadisi boyunca uzanarak kuzeyde Beytemek ve Neiel'e ulaşıyordu. Kavul'un kuzeyinden,
೨೭ಬೇತ್‌ದಾಗೋನಿಗೆ ಹೋಗುತ್ತದೆ. ಅಲ್ಲಿಂದ ಜೆಬುಲೂನ್ಯರ ಮೇರೆಗೂ ಇಪ್ತಹೇಲಿನ ಕಣಿವೆಯ ಉತ್ತರ ದಿಕ್ಕಿನ ಮೂಲೆಗೂ ಹೊಂದಿಕೊಂಡು ಬೇತೇಮೇಕ ನೆಗೀಯೇಲ್ ಇವುಗಳ ಮೇಲೆ ಉತ್ತರಕ್ಕೆ ಮುಂದುವರೆದು
28 Evron, Rehov, Hammon ve Kana'ya geçerek Büyük Sayda'ya kadar çıkıyordu.
೨೮ಕಾಬೂಲ್, ಎಬ್ರೋನ್, ರೆಹೋಬ್, ಹಮ್ಮೋನ್, ಕಾನಾ ಇವುಗಳ ಮೇಲೆ ಚೀದೋನ್ ಎಂಬ ಮಹಾನಗರಕ್ಕೆ ಹೋಗುತ್ತದೆ.
29 Buradan Rama'ya dönüyor, sonra surlarla çevrili Sur Kenti'ne uzanıyor, Hosa'ya dönerek Akziv yöresinde, Akdeniz'de son buluyordu.
೨೯ಅಲ್ಲಿಂದ ಅದು ತಿರುಗಿಕೊಂಡು ರಾಮ, ತೂರ್ ಕೋಟೆ, ಹೋಸಾ ಇವುಗಳ ಮೇಲೆ ಅಕ್ಜೀಬ್ ಪ್ರಾಂತ್ಯಕ್ಕೆ ಹೋಗಿ ಸಮುದ್ರ ತೀರದಲ್ಲಿ ಕೊನೆಗೊಳ್ಳುತ್ತದೆ.
30 Umma, Afek ve Rehov; köyleriyle birlikte yirmi iki kent,
೩೦ಉಮ್ಮಾ, ಅಫೇಕ್‌, ರೆಹೋಬ್ ಇವೇ ಮೊದಲಾದ ಇಪ್ಪತ್ತೆರಡು ಪಟ್ಟಣಗಳು ಮತ್ತು ಅವುಗಳ ಗ್ರಾಮಗಳು.
31 boy sayısına göre Aşeroğulları oymağına verilen payın içinde kalıyordu.
೩೧ಅಶೇರನ ಕುಲದ ಗೋತ್ರಗಳ ಸ್ವತ್ತಾಗಿವೆ.
32 Altıncı kura Naftali'ye, boy sayısına göre Naftalioğulları'na düştü.
೩೨ಚೀಟು ಆರನೆಯ ಸಾರಿ ನಫ್ತಾಲಿಯ ಕುಲದವರಿಗೆ ಬಿದ್ದಿತು. ಆ ಕುಲದ ಗೋತ್ರಗಳಿಗೆ ಸಿಕ್ಕಿದ ಸ್ವತ್ತಿನ ಮೇರೆಯು
33 Sınırları Helef ve Saanannim'deki büyük meşe ağacından başlayarak Adami-Nekev ve Yavneel üzerinden Lakkum'a uzanıyor, Şeria Irmağı'nda son buluyordu.
೩೩ಚಾನನ್ನೀಮಿನಲ್ಲಿರುವ ಹೆಲೇಫಿನ ಅಲ್ಲೋನ ಮರದಿಂದ ಆದಾಮಿನೆಕೆಬ್, ಯಬ್ನೆಯೇಲ್, ಇವುಗಳ ಮೇಲೆ ಲಕ್ಕೂಮಿಗೆ ಹೋಗಿ ಯೊರ್ದನ್ ನದಿಯ ತೀರದಲ್ಲಿ ಮುಕ್ತಾಯಗೊಳ್ಳುತ್ತದೆ.
34 Sınır buradan batıya yöneliyor, Aznot-Tavor'dan geçerek Hukok'a erişiyordu. Güneyde Zevulun toprakları, batıda Aşer toprakları, doğuda ise Şeria Irmağı vardı.
೩೪ಇದಲ್ಲದೆ ಮೇರೆಯು ತಿರುಗಿ ಅದೇ ಸ್ಥಳದಿಂದ ಅಜ್ನೊತ್-ತಾಬೋರಿನ ಮೇಲೆ ಹುಕ್ಕೋಕಿಗೆ ಹೋಗುತ್ತದೆ, ದಕ್ಷಿಣದಲ್ಲಿ ಜೆಬುಲೂನ್ಯರ ಮೇರೆಗೂ, ಪಶ್ಚಿಮದಲ್ಲಿ ಆಶೇರರ ಮತ್ತು ಯೆಹೂದ್ಯರ ಮೇರೆಗೂ ಪೂರ್ವದಲ್ಲಿ ಯೊರ್ದನ್ ಹೊಳೆಗೂ ಹೊಂದಿಕೊಂಡಿರುತ್ತದೆ.
35 Surlu kentler şunlardı: Siddim, Ser, Hammat, Rakkat, Kinneret,
೩೫ಚಿದ್ದೀಮ್, ಚೇರ್, ಹಮ್ಮತ್, ರಕ್ಕತ್, ಕಿನ್ನೆರೆತ್,
36 Adama, Rama, Hasor,
೩೬ಆದಾಮಾ, ರಾಮಾ, ಹಾಚೋರ್,
37 Kedeş, Edrei, Eyn-Hasor,
೩೭ಕೆದೆಷ್ ಎದ್ರೈ, ಏನ್ ಹಾಚೋರ್,
38 Yiron, Migdal-El, Horem, Beytanat, Beytşemeş; köyleriyle birlikte toplam on dokuz kent.
೩೮ಇರೋನ್, ಮಿಗ್ದಲೇಲ್, ಹೊರೇಮ್, ಬೇತ್ ಷೆಮೆಷ್, ಬೆತನಾತ್ ಇವೇ ಮೊದಲಾದ ಹತ್ತೊಂಬತ್ತು ಕೋಟೆಕೊತ್ತಲುಗಳುಳ್ಳ ಪಟ್ಟಣಗಳು ಮತ್ತು ಅವುಗಳ ಗ್ರಾಮಗಳು,
39 Boy sayısına göre Naftalioğulları oymağının payı köyleriyle birlikte bu kentlerdi.
೩೯ನಫ್ತಾಲಿ ಕುಲದ ಗೋತ್ರಗಳಿಗೆ ಸಿಕ್ಕಿದ ಸ್ವತ್ತಾಗಿದೆ.
40 Yedinci kura boy sayısına göre Danoğulları oymağına düştü.
೪೦ಚೀಟು ಏಳನೆಯ ಸಾರಿ ದಾನನ ಕುಲದವರಿಗೆ ಬಿದ್ದಿತು. ಅವರ ಗೋತ್ರಗಳಿಗೆ ಸ್ವತ್ತಾಗಿ ದೊರಕಿದ ಊರುಗಳು ಯಾವುವೆಂದರೆ:
41 Mülklerinin sınırı içinde kalan kentler şunlardı: Sora, Eştaol, İr-Şemeş,
೪೧ಚೊರ್ಗಾ, ಎಷ್ಟಾವೋಲ್, ಈರ್ಷೆಮೆಷ್,
42 Şaalabbin, Ayalon, Yitla,
೪೨ಶಾಲಬ್ಬೀನ್, ಅಯ್ಯಾಲೋನ್, ಇತ್ಲಾ,
43 Elon, Timna, Ekron,
೪೩ಏಲೋನ್, ತಿಮ್ನಾ ಎಕ್ರೋನ್,
44 Elteke, Gibbeton, Baalat,
೪೪ಎಲ್ತೆಕೇ, ಗಿಬ್ಬೆತೋನ್, ಬಾಲತ್,
45 Yehut, Bene-Berak, Gat-Rimmon,
೪೫ಯೆಹುದ್, ಬೆನೇಬೆರಕ್, ಗತ್ ರಿಮ್ಮೋನ್,
46 Me-Yarkon ve Yafa'nın karşısındaki topraklarla birlikte Rakkon.
೪೬ಮೇಯರ್ಕೋನ್, ರಕ್ಕೋನ್ ಇವೇ. ಯೊಪ್ಪಕ್ಕೆ ಹೊಂದಿರುವ ಪ್ರದೇಶವೂ ಇವರಿಗೇ ದೊರಕಿತು.
47 Topraklarını yitiren Danoğulları gidip Leşem'e saldırdılar. Kenti alıp halkını kılıçtan geçirdikten sonra tümüyle işgal ederek oraya yerleştiler. Ataları Dan'ın anısına buraya Dan adını verdiler.
೪೭ದಾನ್ ಕುಲದವರು ತಮ್ಮ ಪ್ರಾಂತ್ಯವನ್ನು ವಿಸ್ತರಿಸುವುದಕ್ಕಾಗಿ ಹೊರಟು ಲೆಷೆಮಿನವರೊಡನೆ ಯುದ್ಧಮಾಡಿ ಜಯಿಸಿ ಆ ಜನರನ್ನು ಕತ್ತಿಯಿಂದ ಸಂಹರಿಸಿ ಪಟ್ಟಣವನ್ನು ಸ್ವಾಧೀನ ಮಾಡಿಕೊಂಡು ಅದರಲ್ಲಿ ವಾಸಿಸಿದರು. ಅದಕ್ಕೆ ತಮ್ಮ ಮೂಲಪುರುಷನ ಹೆಸರಾದ ದಾನ್ ಎಂಬ ಹೆಸರಿಟ್ಟರು.
48 Boy sayısına göre Danoğulları oymağının payı köyleriyle birlikte bu kentlerdi.
೪೮ದಾನ್ ಕುಲದ ಗೋತ್ರಗಳಿಗೆ ಸಿಕ್ಕಿದ ಸ್ವತ್ತು ಅದರಲ್ಲಿದ್ದ ಗ್ರಾಮ ಮತ್ತು ನಗರಗಳು ಇವೇ.
49 İsrailliler bölgelere göre toprakları bölüştürme işini bitirdikten sonra, kendi topraklarından Nun oğlu Yeşu'ya pay verdiler.
೪೯ಇಸ್ರಾಯೇಲ್ಯರು ದೇಶವನ್ನು ಮೇರೆಗಳ ಪ್ರಕಾರ ತಮ್ಮೊಳಗೆ ಹಂಚಿಕೊಂಡ ಮೇಲೆ ನೂನನ ಮಗನಾದ ಯೆಹೋಶುವನಿಗೂ ತಮ್ಮದರಲ್ಲಿ ಪಾಲು ಕೊಟ್ಟರು.
50 RAB'bin buyruğu uyarınca, ona istediği kenti, Efrayim'in dağlık bölgesindeki Timnat-Serah'ı verdiler. Yeşu kenti onarıp oraya yerleşti.
೫೦ಅವನು ತನಗೋಸ್ಕರ ಎಫ್ರಾಯೀಮ್ ಪರ್ವತ ಪ್ರದೇಶದಲ್ಲಿರುವ ತಿಮ್ನತ್ ಸೆರಹ ಎಂಬ ಪಟ್ಟಣವನ್ನು ಕೇಳಿಕೊಳ್ಳಲು ಅವರು ಯೆಹೋವನ ಆಜ್ಞೆಯಂತೆ ಅದನ್ನು ಅವನಿಗೆ ಕೊಟ್ಟು ಬಿಟ್ಟರು. ಅವನು ಅದನ್ನು ಹೊಸದಾಗಿ ಕಟ್ಟಿಕೊಂಡು ಅದರಲ್ಲೇ ವಾಸವಾಗಿದ್ದನು.
51 Kâhin Elazar, Nun oğlu Yeşu ve İsrail oymaklarının boy başları tarafından Şilo'da RAB'bin önünde, Buluşma Çadırı'nın kapısında kura ile pay olarak bölüştürülen topraklar bunlardı. Böylece ülkeyi bölüştürme işini tamamladılar.
೫೧ಯಾಜಕನಾದ ಎಲಿಯಾಜರನೂ, ನೂನನ ಮಗ ಯೆಹೋಶುವನೂ, ಇಸ್ರಾಯೇಲ್ಯರ ಕುಲಮುಖ್ಯಸ್ಥರೂ ಸೇರಿ ಇಸ್ರಾಯೇಲ್ಯರಿಗೆ ಶೀಲೋವಿನಲ್ಲಿದ್ದ ದೇವದರ್ಶನ ಗುಡಾರದ ಬಾಗಿಲಲ್ಲಿ ಯೆಹೋವನ ಸನ್ನಿಧಿಯಲ್ಲೇ ಚೀಟು ಹಾಕಿ ಹಂಚಿಕೊಟ್ಟ ಪ್ರಾಂತ್ಯಗಳು ಇವೇ. ಹೀಗೆ ದೇಶ ವಿಭಜನೆಯ ಕಾರ್ಯವು ಪೂರ್ಣಗೊಂಡಿತು.

< Yeşu 19 >