< Yəhye 9 >
1 I'sa yəqqı'le k'ena əlyhəəmee, bı'rq'ı'ra yedike ıxhana insan qızaxxa.
೧ಯೇಸು ಹಾದು ಹೋಗುತ್ತಿದ್ದಾಗ, ಹುಟ್ಟು ಕುರುಡನಾಗಿದ್ದ ಒಬ್ಬ ಮನುಷ್ಯನನ್ನು ಕಂಡನು.
2 Telebabışe Mang'uke qiyghanan: – Mə'əllim, şavaane bınah hav'u, insan bı'rq'ı'ra yedike ıxha, vuceene, deşxhee dekkeeyiy yedeene?
೨ಆತನ ಶಿಷ್ಯರು, “ಗುರುವೇ, ಇವನು ಕುರುಡನಾಗಿ ಹುಟ್ಟಿರುವುದಕ್ಕೆ ಯಾರು ಪಾಪಮಾಡಿದರು? ಇವನೋ ಅಥವಾ ಇವನ ತಂದೆತಾಯಿಗಳೋ?” ಎಂದು ಆತನನ್ನು ಕೇಳಿದರು.
3 I'see alidghıniy qele: – Man, mang'uneyiy mang'une dekkıneyiy yedine bınahıl-alla deş məxüd ıxha. Allahın işbı mang'une ı'mree g'acecenva məxüd ıxha.
೩ಯೇಸು, “ಇವನಾಗಲಿ ಇವನ ತಂದೆತಾಯಿಗಳಾಗಲಿ ಪಾಪ ಮಾಡಲಿಲ್ಲ. ಆದರೆ ದೇವರ ಕ್ರಿಯೆಗಳು ಇವನಲ್ಲಿ ತೋರಿಬರುವುದಕ್ಕಾಗಿ ಹೀಗಾಯಿತು.
4 Yiğne yiğın şi, Zı G'axuvuyng'un işbı ha'as ıkkan. Xəm qooxhe, manke şavussecad vuççud ha'as əxə deş.
೪ನನ್ನನ್ನು ಕಳುಹಿಸಿದಾತನ ಕ್ರಿಯೆಗಳನ್ನು ನಾವು ಹಗಲಿರುವಾಗಲೇ ಮಾಡಬೇಕು. ರಾತ್ರಿ ಬರುತ್ತದೆ, ಅದು ಬಂದಾಗ ಯಾರೂ ಕೆಲಸ ಮಾಡಲಾರರು.
5 Zı dyunyel ıxhaylette, Zı dyunyeyn Nur vodun.
೫ನಾನು ಲೋಕದಲ್ಲಿರುವಾಗ ಲೋಕಕ್ಕೆ ಬೆಳಕಾಗಿದ್ದೇನೆ” ಎಂದನು.
6 Manva uvhuyle qiyğa, I'see ç'iyelqa tyu g'a'adaççe, tyuyuke bəttağ hı'ı, bı'rq'ı'ne insanne ulelqa qadağva.
೬ಆತನು ಹೀಗೆ ಹೇಳಿ ನೆಲದ ಮೇಲೆ ಉಗುಳಿ ಆ ಉಗುಳಿನಿಂದ ಕೆಸರು ಮಾಡಿ, ಆ ಕೆಸರನ್ನು ಕುರುಡನ ಕಣ್ಣುಗಳಿಗೆ ಹಚ್ಚಿದನು.
7 Qiyğa mang'uk'le eyhen: – Hark'ın, Şiloah eyhene hovuzee əyxre. (Şiloah «g'axuvuna» eyhen vodun.) Bı'rq'ı'nar hark'ın əyxərna. Ules işix qadı, mana yı'q'əlqa siyk'al.
೭ಆತನು ಅವನಿಗೆ, “ನೀನು ಹೋಗಿ ಸಿಲೋವ (ಸಿಲೋವ ಎಂದರೆ ‘ಕಳುಹಿಸಲ್ಪಟ್ಟವನು’ ಎಂದರ್ಥ) ಕೊಳದಲ್ಲಿ ತೊಳೆದುಕೋ” ಎಂದನು. ಅವನು ಹೋಗಿ ತೊಳೆದುಕೊಂಡು ದೃಷ್ಟಿಯುಳ್ಳವನಾಗಿ ಬಂದನು.
8 Delesınbışeyiy, mana kar sa'ana xhinne ats'anbışe eyhen: – Mana şenke gyu'ur kar sa'ana dişee?
೮ಆಗ ನೆರೆಹೊರೆಯವರು ಅವನು ಮೊದಲು ಭಿಕ್ಷುಕನಾಗಿದ್ದಾಗ ಅವನನ್ನು ನೋಡಿದ್ದವರೂ, “ಭಿಕ್ಷೆಬೇಡುತ್ತಾ ಕುಳಿತುಕೊಂಡಿದ್ದವನು ಇವನೇ ಅಲ್ಲವೇ?” ಎಂದು ವಿಚಾರಿಸಿದರು.
9 Sabaranbışe «Mana vor», mansanbışe «De'eş, mang'uk akarırva» eyhe. Vuceeme «Zı vornava» eyhe.
೯ಕೆಲವರು, “ಹೌದು ಇವನೇ” ಎಂದರು. ಇನ್ನೂ ಕೆಲವರು, “ಅವನಲ್ಲ ಆದರೆ ಅವನ ಹಾಗೆ ಇದ್ದಾನೆ” ಎಂದರು. ಆದರೆ ಅವನಾದರೋ, “ನಾನೇ ಅವನು” ಎಂದು ಹೇಳಿದನು.
10 Manbışee qiyghan: – Nəxüdne yiğne ules işix qadı?
೧೦ಆಗ ಅವರು “ಹಾಗಾದರೆ ನಿನ್ನ ಕಣ್ಣು ಹೇಗೆ ತೆರೆದವು?” ಎಂದು ಅವನನ್ನು ಕೇಳಿದ್ದಕ್ಕೆ,
11 Mang'vee eyhen: – I'sava eyhene sang'vee bəttağ hı'ı, yizde ulelqa qadğu, qiyğar zak'le «Şiloah eyhene hovuzeeqa hak'ne, əyxreva» uvhu. Zınar hark'ın əyxı'rna, ulesıd işiğ qadı.
೧೧ಅವನು, “ಯೇಸು ಎಂಬ ಹೆಸರುಳ್ಳ ಮನುಷ್ಯನು ಮಣ್ಣಿನಲ್ಲಿ ಕೆಸರು ಮಾಡಿ ನನ್ನ ಕಣ್ಣಿಗೆ ಹಚ್ಚಿ ನನಗೆ, ‘ಸಿಲೋವ ಕೊಳಕ್ಕೆ ಹೋಗಿ ತೊಳೆದುಕೋ’ ಎಂದು ಹೇಳಿದನು. ಅದರಂತೆ ನಾನು ಹೋಗಿ ತೊಳೆದುಕೊಂಡೆನು. ಆಗ ನನಗೆ ದೃಷ್ಟಿ ಬಂತು” ಎಂದನು.
12 Manke manbışe «I'sa nyaane vorva?» qiyghan. Mang'veeme «Ats'a deşva» eyhe.
೧೨ಅವರು, “ಆತನು ಎಲ್ಲಿದ್ದಾನೆ?” ಎಂದು ಅವನನ್ನು ಕೇಳಿದ್ದಕ್ಕೆ, ಅವನು “ನನಗೆ ಗೊತ್ತಿಲ್ಲ” ಎಂದನು.
13 İnsanaaşe uleppı yug qıxhana fariseyaaşine k'anyaqa arayle.
೧೩ಜನರು ಮೊದಲು ಆ ಕುರುಡನಾಗಿದ್ದವನನ್ನು ಫರಿಸಾಯರ ಬಳಿಗೆ ಕರೆದುಕೊಂಡು ಬಂದರು.
14 I'see bəttağ hı'ı ulelqa qadğuyn yiğ Şabbatın yiğ ıxha.
೧೪ಯೇಸು ಕೆಸರು ಮಾಡಿ ಅವನಿಗೆ ದೃಷ್ಟಿ ಕೊಟ್ಟ ದಿನವು ಸಬ್ಬತ್ ದಿನವಾಗಿತ್ತು.
15 Fariseyaaşe mane insanıke nəxüdiy ules işiğ qadıva meed qiyghan. Mane insaneeyid manbışik'le eyhen: – Mang'vee yizde ulelqa bəttağ qadğu, qiyğa zı əyxı'r ules işix qadı.
೧೫ಆದಕಾರಣ ಆ ಫರಿಸಾಯರು ಸಹ ಅವನನ್ನು ವಿಚಾರಿಸಿ ನಿನಗೆ ಹೇಗೆ ದೃಷ್ಟಿ ಬಂದಿತು ಎಂದು ಪುನಃ ಕೇಳಿದರು. ಅವನು ಅವರಿಗೆ, “ಅವನು ಕೆಸರನ್ನು ನನ್ನ ಕಣ್ಣಿನ ಮೇಲೆ ಇಟ್ಟನು, ನಾನು ತೊಳೆದುಕೊಂಡೆನು, ನನಗೆ ದೃಷ್ಟಿ ಬಂದಿತು” ಎಂದು ಉತ್ತರಕೊಟ್ಟನು.
16 Manke fariseyaaşine sabarabışe eyhen: – İna Allahıke deşur qarı, Şabbatne yiğıl hidya'asınbı vod ha'a. Mebınbışe eyhen: – Bınahnang'usse məxdın əlaamatbı nəxüd hagvas əxəyee? Manbı məxüb cuvabılqa abayle.
೧೬ಫರಿಸಾಯರಲ್ಲಿ ಕೆಲವರು, “ಈ ಮನುಷ್ಯನು ದೇವರಿಂದ ಬಂದವನಲ್ಲ, ಏಕೆಂದರೆ ಆತನು ಸಬ್ಬತ್ ದಿನವನ್ನು ಆಚರಿಸುವುದಿಲ್ಲ” ಎಂದರು. ಇನ್ನು ಕೆಲವರು, “ಇಂಥಾ ಮಹತ್ಕಾರ್ಯಗಳನ್ನು ಮಾಡುವುದು ಪಾಪಿಯಾದ ಮನುಷ್ಯನಿಂದ ಹೇಗಾದೀತು?” ಎಂದರು. ಹೀಗೆ ಅವರಲ್ಲಿ ಭೇದವುಂಟಾಯಿತು.
17 Manke manbışe meed yug qıxhayng'uke qiyghanan: – Vasse Mang'une hək'ee hucoo eyhes əxəyee? Mang'vee dişde yiğın uleppı qı'ı. Mang'vee alidghıniy qele: – Mana peyğambar vor.
೧೭ಹೀಗಿರಲಾಗಿ ಅವರು ಪುನಃ ಆ ಕುರುಡನನ್ನು, “ಆತನು ನಿನಗೆ ದೃಷ್ಟಿ ಕೊಟ್ಟದ್ದರಿಂದ ನೀನು ಆತನ ವಿಷಯವಾಗಿ ಏನು ಹೇಳುತ್ತೀ?” ಎಂದು ಕೇಳಿದಾಗ, ಅವನು “ಆತನು ಒಬ್ಬ ಪ್ರವಾದಿ” ಎಂದು ಉತ್ತರಕೊಟ್ಟನು.
18 Yahudeeşin ç'ak'ınbı mana bı'rq'ı'ra ıxha qiyğa uleppı qeetxhalqa hayeebaxhe deş. Mançil-alla manbışe mang'un dekkiy-yed qoot'al.
೧೮ಆದರೆ ದೃಷ್ಟಿ ಹೊಂದಿದವನ ವಿಷಯವಾಗಿ ಆ ಯೆಹೂದ್ಯರು; ಅವನ ತಂದೆತಾಯಿಗಳನ್ನು ಕರೆದು ವಿಚಾರಿಸುವವರೆಗೂ, ಅವನು ಹುಟ್ಟು ಕುರುಡನಾಗಿದ್ದು, ಈಗ ದೃಷ್ಟಿ ಹೊಂದಿದ್ದಾನೆಂಬುದನ್ನು ನಂಬಲಿಲ್ಲ.
19 Mang'une dekkıkeyiy-yedike qiyghanan: – Şos bı'rq'ı'ra ıxhana dix inane vor? Nəxüdne mang'uk'le həşde g'ece?
೧೯ಅವರು “ಕುರುಡನಾಗಿ ಹುಟ್ಟಿದನೆಂದು ನೀವು ಹೇಳುವ ನಿಮ್ಮ ಮಗನು ಇವನೋ? ಹಾಗಾದರೆ ಈಗ ಇವನಿಗೆ ಹೇಗೆ ದೃಷ್ಟಿ ಬಂದಿತು?” ಎಂದು ಅವರನ್ನು ಕೇಳಿದರು.
20 Dekkeeyiy-yedee eyhen: – Şak'le ats'an mana yişda dix vor, vucur bı'rq'ı'ra yedike ıxha.
೨೦ಅವನ ತಂದೆ ತಾಯಿಗಳು, “ಇವನು ನಮ್ಮ ಮಗನೆಂದೂ ಕುರುಡನಾಗಿ ಹುಟ್ಟಿದನೆಂದೂ ಬಲ್ಲೆವು.
21 Həşde nəxüdme mang'uk'le g'ece, şavaame mang'un uleppı qı'ı, şak'le ats'a deş, cuke qiyghne. Mana həşde xər qıxha, cul-allan cuvab cusse qeles əxəsın.
೨೧ಈಗ ಇವನು ನೋಡುವುದು ಹೇಗೆಂದು ನಮಗೆ ಗೊತ್ತಿಲ್ಲ. ಯಾರು ಇವನ ಕಣ್ಣುಗಳನ್ನು ತೆರೆದರೋ ನಮಗೆ ಗೊತ್ತಿಲ್ಲ, ಇವನನ್ನೇ ಕೇಳಿರಿ. ಇವನು ಪ್ರಾಯದವನಾಗಿದ್ದಾನಲ್ಲಾ, ಇವನೇ ತನ್ನ ವಿಷಯವಾಗಿ ಹೇಳುವನು” ಎಂದು ಉತ್ತರಕೊಟ್ಟರು.
22 Mang'une dekkeeyiy yedee Yahudeeşine ç'ak'ınbışile qəvəyq'ənva məxüd uvhu. Yahudeeşine ç'ak'ınbışe I'sa Masixhva gardanaqa alyaat'uyn gırgınbı sinagogeençe g'e'epşesınbıva q'arar huvu vuxha.
೨೨ಅವನ ತಂದೆ ತಾಯಿಗಳು ಯೆಹೂದ್ಯರಿಗೆ ಭಯಪಟ್ಟದ್ದರಿಂದ ಹೀಗೆ ಹೇಳಿದರು. ಏಕೆಂದರೆ ಯಾರಾದರೂ ಯೇಸುವನ್ನು ಕ್ರಿಸ್ತನೆಂದು ಒಪ್ಪಿಕೊಂಡರೆ ಅವನನ್ನು ಸಭಾಮಂದಿರದಿಂದ ಬಹಿಷ್ಕರಿಸಬೇಕೆಂದು ಯೆಹೂದ್ಯರು ಆಗಲೇ ತೀರ್ಮಾನಿಸಿಕೊಂಡಿದ್ದರು.
23 Mançil-allad mane insanne dekkeeyiy yedee «Mana xər qıxha, cuke qiyghneva» eyhe.
೨೩“ಇವನು ಪ್ರಾಯದವನು ಇವನನ್ನೇ ಕೇಳಿರಿ” ಎಂದು ಅವನ ತಂದೆತಾಯಿಗಳು ಹೇಳಿದ್ದಕ್ಕೆ ಇದೇ ಕಾರಣ.
24 Fariseyaaşe uleppı qıxhana insan q'ör'es qort'ul, eyhen: – Qotkuyn eyhesva Allahılqa k'ın g'aysre. Şak'le Mang'uqa bınah vuxhay ats'an.
೨೪ಆದಕಾರಣ ಅವರು ಕುರುಡನಾಗಿದ್ದ ಆ ಮನುಷ್ಯನನ್ನು ಎರಡನೆಯ ಸಾರಿ ಕರೆದು, “ನೀನು ದೇವರಿಗೆ ಗೌರವವನ್ನು ಸಲ್ಲಿಸು; ಈ ಮನುಷ್ಯನು ಪಾಪಿಷ್ಠನೆಂದು ನಾವು ಬಲ್ಲೆವು” ಎಂದರು.
25 Mang'vee alidghıniy qele: – Zak'le Mang'uqa bınah vuxhay-devxhay ats'a deş. Zak'le sa kar ats'a: zı şenke bı'rq'ı'raniy vor, həşdeme zak'le g'ecen.
೨೫ಅದಕ್ಕೆ ಅವನು, “ಆತನು ಪಾಪಿಷ್ಠನೋ ಏನೋ ನನಗೆ ಗೊತ್ತಿಲ್ಲ, ಒಂದು ಮಾತ್ರ ಬಲ್ಲೆನು ನಾನು ಕುರುಡನಾಗಿದ್ದೆನು; ಈಗ ನಾನು ನೋಡುತ್ತಿದ್ದೇನೆ” ಎಂದನು.
26 Fariseyaaşe meed mang'uke qiyghanan: – Mang'vee vak hucoona hı'ı? Uleppı nəxüdne qı'ı?
೨೬ಅವರು ಅವನನ್ನು, “ಆತನು ನಿನಗೆ ಏನು ಮಾಡಿದನು? ನಿನ್ನ ಕಣ್ಣುಗಳನ್ನು ಹೇಗೆ ತೆರೆದನು?” ಎಂದು ಕೇಳಿದ್ದಕ್ಕೆ,
27 Mang'vee alidghıniy qele: – Həşde xhinne dişde şok'le uvhu, şume k'ırı alixhxhı deş. Nya'a şos mançil q'öd'es k'ırı alixhxhes ıkkan? Şosubne deşxhene Mang'un telebabı vuxhes vukkan?
೨೭ಅವನು, “ನಿಮಗೆ ಆಗಲೇ ಹೇಳಿದೆನಲ್ಲಾ, ನೀವು ಕೇಳಲಿಲ್ಲ! ನೀವು ಯಾಕೆ ಪುನಃ ಪುನಃ ಕೇಳುತ್ತಿದ್ದೀರಿ? ನೀವು ಸಹ ಆತನ ಶಿಷ್ಯರಾಗುವುದಕ್ಕೆ ಬಯಸುತ್ತಿದ್ದೀರೋ?” ಎಂದನು.
28 Mang'uqa hokiybı hı'ı, eyhen: – Mang'una teleba ğu vorna, şi Mısayn telebabı vobınbı.
೨೮ಅದಕ್ಕೆ ಅವರು ಅವನನ್ನು ನಿಂದಿಸಿ, “ನೀನು ಆತನ ಶಿಷ್ಯನು. ಆದರೆ ನಾವು ಮೋಶೆಯ ಶಿಷ್ಯರು.
29 Şak'le Allah Mısayka yuşan hı'ı ıxhay ats'an, İname nençe qariy ats'a deş.
೨೯ಮೋಶೆಯ ಸಂಗಡ ದೇವರು ಮಾತನಾಡಿದನೆಂದು ನಾವು ಬಲ್ಲೆವು, ಆದರೆ ಈತನು ಎಲ್ಲಿಯವನೋ ನಮಗೆ ತಿಳಿಯದು” ಎಂದರು.
30 Mane insanee manbışik'le eyhen: – Ghalybı aaqı ilyaakasın karıd, şok'le Mana nençe ıxhay ats'a deş, Mang'veeme yizın uleppı qı'iynbı.
೩೦ಅದಕ್ಕೆ ಆ ಮನುಷ್ಯನು, “ಆತನು ನನ್ನ ಕಣ್ಣುಗಳನ್ನು ತೆರೆದರೂ ಆತನು ಎಲ್ಲಿಯವನೆಂದು ನಿಮಗೆ ತಿಳಿಯದೆ ಇರುವುದು ಆಶ್ಚರ್ಯವಲ್ಲವೇ!
31 Şak'le ats'an Allahee bınahnanbışil k'ırı iliyxhe deş. Mang'vee Cus ı'bəədat ha'ang'uliy Cus ıkkanan ha'ang'ul k'ırı iliyxhe.
೩೧ಪಾಪಿಷ್ಠರ ಪ್ರಾರ್ಥನೆಯನ್ನು ದೇವರು ಕೇಳುವುದಿಲ್ಲ, ಆದರೆ ಯಾರು ಭಕ್ತರಾಗಿದ್ದು ಆತನ ಚಿತ್ತದಂತೆ ನಡೆಯುತ್ತಾರೋ ಅವರ ಪ್ರಾರ್ಥನೆಯನ್ನು ಕೇಳುತ್ತಾನೆಂದು ಬಲ್ಲೆವು.
32 Yedike bı'rq'ı'ra ıxhayng'un şavaame uleppı qı'ıva, şak'le mısacad g'ayxhiyn deş. (aiōn )
೩೨ಹುಟ್ಟು ಕುರುಡನಾಗಿದ್ದ ಒಬ್ಬ ಮನುಷ್ಯನ ಕಣ್ಣುಗಳನ್ನು ಯಾವನಾದರೂ ತೆರೆದಿದ್ದನ್ನು ಲೋಕಾದಿಯಿಂದ ಒಬ್ಬನಾದರೂ ಕೇಳಲಿಲ್ಲ. (aiōn )
33 Mana Allahıke qarı dexhaynxhiy, Mang'usse vuççud ha'as əxəs deşdiy.
೩೩ಈತನು ದೇವರಿಂದ ಬಂದವನಲ್ಲದಿದ್ದರೆ ಏನೂ ಮಾಡಲಾರದೆ ಇರುತ್ತಿದ್ದನು” ಎಂದನು.
34 Manbışe mane insanıs alidghıniy qele: – Q'omançe-k'anyaqqamee bınahbışin gyatsts'ı ğu yedike ıxha. Həşde ğune şas xət qa'a? Manıd uvhu, mana mançe g'e'eşşena.
೩೪ಈ ಮಾತಿಗೆ ಅವರು, “ನೀನು ಕೇವಲ ಪಾಪದಲ್ಲಿ ಹುಟ್ಟಿದವನು, ನೀನು ನಮಗೆ ಉಪದೇಶಮಾಡುತ್ತಿಯೋ?” ಎಂದು ಹೇಳಿ ಅವನನ್ನು ಹೊರಗೆ ಹಾಕಿದರು.
35 Mana insan g'aqa g'e'eşşuynçina ats'axhxha, I'see mana t'abal hı'ı eyhen: – Ğu İnsanne Duxalqa inyam ha'anne?
೩೫ಅವನನ್ನು ಹೊರಗೆ ಹಾಕಿದರೆಂದು ಯೇಸು ಕೇಳಿ ಅವನನ್ನು ಕಂಡುಕೊಂಡು, “ನೀನುಮನುಷ್ಯಕುಮಾರನನ್ನು ನಂಬುತ್ತೀಯೋ?” ಎಂದು ಕೇಳಿದನು.
36 Mang'vee qiyghanan: – Xərna, Mana vuşune vor, Mang'ulqa inyam ha'as?
೩೬ಅದಕ್ಕೆ ಅವನು, “ಕರ್ತನೇ ಆ ಮನುಷ್ಯಕುಮಾರನು ಯಾರು? ನನಗೆ ತಿಳಿಸು, ನಾನು ಆತನಲ್ಲಿ ನಂಬಿಕೆ ಇಡುತ್ತೇನೆ” ಎಂದಾಗ,
37 I'see mang'uk'le eyhen: – Həşde vak'le g'ecena, vaka yuşan ha'ana Mana vor.
೩೭ಯೇಸು, “ನೀನು ಅವನನ್ನು ನೋಡಿದ್ದೀ ಮತ್ತು ನಿನ್ನ ಸಂಗಡ ಮಾತನಾಡುತ್ತಿರುವ ನಾನೇ ಆತನು” ಎಂದು ಹೇಳಿದಾಗ,
38 Mang'veeyid «Yizda Xərna, inyam ha'anva» uvhu, I'sayne ögil k'yoyzarna.
೩೮ಅವನು, “ಕರ್ತನೇ, ನಾನು ನಂಬುತ್ತೇನೆ” ಎಂದು ಹೇಳಿ ಆತನಿಗೆ ಅಡ್ಡಬಿದ್ದನು.
39 I'see eyhen: – Muhaakima ha'asva Zı ine dyunyelqa qarı, hasre g'ıdecenbışik'le g'acecen, g'ecenbıb bı'rq' qeepxhecen.
೩೯ಆಗ ಯೇಸುವು, “ನಾನು ನ್ಯಾಯತೀರ್ಪಿಗಾಗಿ ಈ ಲೋಕಕ್ಕೆ ಬಂದಿದ್ದೇನೆ. ಆ ತೀರ್ಪು ಏನೆಂದರೆ ಕುರುಡರು ನೋಡುವರು, ದೃಷ್ಟಿ ಇರುವವರು ಕುರುಡರಾಗುವರು” ಎಂದನು.
40 Mang'une k'ane ulyobzurne fariseyaaşik'le Mang'vee eyhenbı g'ayxhı, Mang'uke qiyghanan: – Deşxheene, şinabne bı'rq'ı'ba?
೪೦ಇದನ್ನು ಆತನೊಂದಿಗಿದ್ದ ಫರಿಸಾಯರಲ್ಲಿ ಕೆಲವರು ಕೇಳಿ, “ನಾವು ಸಹ ಕುರುಡರೇನು?” ಎಂದು ಕೇಳಿದಾಗ,
41 I'see manbışik'le eyhen: – Bı'rq'ı'ba vuxhaynxhiy, şoqa bınahıb vuxhes deşdiy. Şu «G'eceva» eyheva, vuşda bınah şolycab aaxva.
೪೧ಯೇಸು ಅವರಿಗೆ, “ನೀವು ಕುರುಡರಾಗಿದ್ದರೆ ನಿಮಗೆ ಪಾಪವು ಇರುತ್ತಿರಲಿಲ್ಲ. ಆದರೆ ‘ನಿಮಗೆ ಕಣ್ಣುಕಾಣುತ್ತವೆ’ ಎಂದು ನೀವು ಹೇಳುವುದರಿಂದ ನಿಮ್ಮ ಪಾಪ ನಿಮಗೆ ಉಳಿದಿದೆ” ಎಂದನು.