< Senesi 15 >
1 Pea hili ʻae ngaahi meʻa ni, naʻe haʻu ʻae folofola ʻa Sihova kia ʻEpalame ʻi he meʻa hā mai ʻo pehē, “ʻOua naʻa ke manavahē ʻEpalame: ko ho ungaʻanga au, mo ho totongi lahi ʻaupito.”
೧ಈ ಸಂಗತಿಗಳು ನಡೆದ ಮೇಲೆ ಅಬ್ರಾಮನಿಗೆ ದರ್ಶನದಲ್ಲಿ ಯೆಹೋವನ ವಾಕ್ಯವುಂಟಾಗಿ ಹೇಳಿದೇನೆಂದರೆ, “ಅಬ್ರಾಮನೇ, ಭಯಪಡಬೇಡ, ನಾನು ನಿನಗೆ ಗುರಾಣಿಯಾಗಿದ್ದೇನೆ ಮತ್ತು ನಿನಗೆ ಅತ್ಯಧಿಕ ಬಹುಮಾನವು ದೊರೆಯುವುದು.”
2 Pea pehēange ʻe ʻEpalame, “E Sihova ko e ʻOtua, ko e hā te ke foaki kiate au, he ʻoku ou masiva fānau, pea ko e tauhi ʻo hoku ʻapi, ko e ʻEliesa ni ʻo Tamasikusi?”
೨ಅದಕ್ಕೆ ಅಬ್ರಾಮನು, “ಕರ್ತನಾದ ಯೆಹೋವನೇ, ನನಗೆ ಏನು ಕೊಟ್ಟರೇನು? ನಾನು ಸಂತಾನವಿಲ್ಲದವನು. ಮತ್ತು ನನ್ನ ಆಸ್ತಿಯೆಲ್ಲಾ, ದಮಸ್ಕದವನಾದ ಎಲೀಯೆಜರನ ಪಾಲಾಗುತ್ತದೆಯಲ್ಲಾ?” ಎಂದನು.
3 Pea pehē ʻe ʻEpalame, “Vakai, naʻe ʻikai te ke foaki kiate au ha hako; pea vakai, ko e taha naʻe fānau ʻi hoku fale, ko hoku hoko ia.”
೩ಪುನಃ ಅಬ್ರಾಮನು ಹೇಳಿದ್ದೇನೆಂದರೆ, “ನೀನು ನನಗೆ ಸಂತಾನ ಕೊಡಲಿಲ್ಲವಾದ್ದರಿಂದ, ನೋಡು, ನನ್ನ ಮನೆಯಲ್ಲಿ ಹುಟ್ಟಿದವನೇ ನನಗೆ ಬಾಧ್ಯಸ್ಥನಾಗಬೇಕಾಯಿತು” ಎಂದು ಹೇಳಿದನು.
4 Pea ʻiloange, naʻe folofola mai ʻa Sihova kiate ia, ʻo pehē, “ʻOku ʻikai ko ho hoko ia: ka ko ia ʻe tupu mei ho fatu ʻoʻou ko ho hoko ia.”
೪ಯೆಹೋವನ ವಾಕ್ಯವು ಅವನ ಸಂಗಡ ಮಾತನಾಡಿ, “ಈ ಮನುಷ್ಯನು ನಿನಗೆ ಬಾಧ್ಯಸ್ಥನಾಗುವುದಿಲ್ಲ; ಆದರೆ ನಿನ್ನ ಹೊಟ್ಟೆಯಲ್ಲಿ ಹುಟ್ಟುವವನೇ ನಿನಗೆ ಬಾಧ್ಯಸ್ಥನಾಗುವನು” ಎಂದು ಹೇಳಿ ಅಬ್ರಾಮನನ್ನು ಹೊರಗೆ ಕರೆದುಕೊಂಡು ಬಂದು,
5 Pea ne taki atu ia kituaʻā, ʻo ne pehē, “Hanga hake ni ki he langi, ʻo lau ʻae ngaahi fetuʻu, ʻo kapau te ke faʻa lau ia; pea ne pehē kiate ia, E tatau mo ia ho hako.”
೫“ಆಕಾಶದ ಕಡೆಗೆ ನೋಡು, ನಕ್ಷತ್ರಗಳನ್ನು ಲೆಕ್ಕಿಸುವುದು ನಿನ್ನಿಂದಾದರೆ ಲೆಕ್ಕಿಸು.” ನಂತರ ಯೆಹೋವನು ಅಬ್ರಾಮನಿಗೆ, “ನಿನ್ನ ಸಂತಾನವು ನಕ್ಷತ್ರಗಳಷ್ಟಾಗುವುದು” ಎಂದು ಹೇಳಿದನು.
6 Pea naʻe tui ia kia Sihova; pea naʻe lau ia kiate ia, ko e māʻoniʻoni.
೬ಅಬ್ರಾಮನು ಯೆಹೋವನನ್ನು ನಂಬಿದನು; ಯೆಹೋವನು ಅವನ ನಂಬಿಕೆಯನ್ನು ಅವನ ಲೆಕ್ಕಕ್ಕೆ ನೀತಿಯೆಂದು ಪರಿಗಣಿಸಿದನು.
7 Pea naʻa ne pehē kiate ia, “Ko au ko Sihova, naʻaku ʻomi koe mei Ua, ʻi Kalitia, ke foaki kiate koe ʻae fonua ni, ke ke maʻu moʻou.”
೭ನಂತರ ಆತನು ಅಬ್ರಾಮನಿಗೆ, “ಈ ದೇಶವನ್ನು ನಿನಗೆ ಬಾಧ್ಯಸ್ಥವಾಗಿ ಕೊಡುವುದಕ್ಕೋಸ್ಕರ ನಿನ್ನನ್ನು ಊರ್ ಎಂಬ ಕಲ್ದೀಯರ ಪಟ್ಟಣದಿಂದ ಬರಮಾಡಿದ ಯೆಹೋವನು ನಾನೇ” ಎಂದು ಹೇಳಿದನು.
8 Pea ne pehē ʻe ia, “E Sihova ko e ʻOtua, te u ʻilo ʻi he ha te u maʻu ia?
೮“ಕರ್ತನಾದ ಯೆಹೋವನೇ, ನಾನು ಇದನ್ನು ಬಾಧ್ಯವಾಗಿ ಹೊಂದುವೆನೆಂದು ತಿಳಿದುಕೊಳ್ಳುವುದು ಹೇಗೆ?” ಎಂದು ಕೇಳಿದನು.
9 Pea ne pehē kiate ia, “Toʻo mai maʻaku ʻae pulu fefine mui ʻoku tolu taʻu hono motuʻa, mo e kosi fefine ʻoku tolu taʻu hono motuʻa, mo e sipitangata ʻoku tolu taʻu hono motuʻa, mo e kulukulu mo e lupe mui.”
೯ಅದಕ್ಕೆ ಆತನು ಯೆಹೋವನಿಗೆ, “ನೀನು ಮೂರು ವರ್ಷದ ಮಣಕ, ಒಂದು ಆಡು, ಒಂದು ಟಗರು, ಒಂದು ಬೆಳವಕ್ಕಿ, ಒಂದು ಪಾರಿವಾಳದ ಮರಿಯನ್ನೂ ತೆಗೆದುಕೊಂಡು ಬಾ” ಎಂದನು.
10 Pea ne toʻo ʻae ngaahi meʻa ni kotoa pē, ʻo ne fahiua ʻakinautolu, ʻo tuku fakaholo ʻae ngaahi konga kotoa pē, ka naʻe ʻikai te ne fahiʻi ʻae fanga manupuna.
೧೦ಅವನು ಇವುಗಳನ್ನೆಲ್ಲಾ ತೆಗೆದುಕೊಂಡು ಬಂದು ಮೃಗಗಳನ್ನು ಎರಡಾಗಿ ಸೀಳಿ, ಒಂದು ತುಂಡನ್ನು ಇನ್ನೊಂದರ ಎದುರಾಗಿ ಇಟ್ಟನು; ಪಕ್ಷಿಗಳನ್ನು ಮಾತ್ರ ಸೀಳಲಿಲ್ಲ.
11 Pea ʻi he lolofa mai ʻae fanga manupuna ki he ngaahi ʻangaʻanga, naʻe fakahēhē ia ʻe ʻEpalame.
೧೧ಆ ಪಶುಗಳ ಮೇಲೆ ಹದ್ದುಗಳು ಎರಗಲು ಅಬ್ರಾಮನು ಅವುಗಳನ್ನು ಓಡಿಸಿಬಿಟ್ಟನು.
12 Pea ʻi he kamata tō ʻae laʻā, naʻe hoko ʻae mohe maʻu kia ʻEpalame: pea vakai naʻe tō kiate ia ʻae fuʻu manavahē ʻoe fakapoʻuli lahi.
೧೨ಹೊತ್ತು ಮುಣುಗುತ್ತಿರುವಾಗ ಅಬ್ರಾಮನಿಗೆ ಗಾಢನಿದ್ರೆ ಹತ್ತಿತು; ಕಾರ್ಗತ್ತಲು ಅವನ ಮೇಲೆ ಕವಿಯಿತು; ಅವನು ಮಹಾಭೀತಿಯಿಂದ ಭಯಭ್ರಾಂತನಾದನು.
13 Pea naʻe pehē kia ʻEpalame, “Ke ke ʻilo pau eni, ʻe nofo ʻāunofo ho hako ʻi ha fonua ʻoku ʻikai ʻonautolu, pea te nau tauhi ʻakinautolu; pea te nau fakamamahi ʻakinautolu ʻi he taʻu ʻe fāngeau.
೧೩ಆಗ ಯೆಹೋವನು ಅಬ್ರಾಮನಿಗೆ, “ನೀನು ಚೆನ್ನಾಗಿ ತಿಳಿಯತಕ್ಕದ್ದೇನೆಂದರೆ, ನಿನ್ನ ಸಂತತಿಯವರು ಅನ್ಯದೇಶದಲ್ಲಿ ಪ್ರವಾಸಿಯಾಗಿ ವಾಸವಾಗಿದ್ದು ಆ ದೇಶದವರಿಗೆ ದಾಸರಾಗುವರು. ನಾನೂರು ವರ್ಷ ಆ ದೇಶದವರಿಂದ ಬಾಧೆಪಡುವರು.
14 Pea ko e puleʻanga ko ia te nau ngāue ki ai, te u fakamaauʻi foki: pea hili ia te nau haʻu mei ai mo e koloa lahi.
೧೪ಅವರನ್ನು ದಾಸರನ್ನಾಗಿ ಮಾಡಿಸಿಕೊಂಡ ಜನಾಂಗವನ್ನು ನಾನು ದಂಡಿಸಿದ ನಂತರ ಅವರು ಬಹಳ ಸಂಪತ್ತುಳ್ಳವರಾಗಿ ಆ ದೇಶದಿಂದ ಬಿಡುಗಡೆಯಾಗಿ ಹೊರಟು ಬರುವರು.
15 Pea te ke ʻalu koe ki hoʻo ngaahi tamai ʻi he fiemālie: ʻe pekia koe ʻoka ke ka motuʻa lelei.
೧೫ನೀನಂತೂ ಸಮಾಧಾನದೊಡನೆ ಪೂರ್ವಿಕರ ಬಳಿಗೆ ಸೇರುವಿ, ಬಹಳ ವೃದ್ಧನಾಗಿ ಉತ್ತರಕ್ರಿಯೆಯನ್ನು ಹೊಂದುವಿ.
16 Pea ʻi hono fā ʻoe toʻutangata te nau toe haʻu ki heni; he ʻoku teʻeki ai fonu ʻae angahala ʻae kakai ʻAmoli.”
೧೬ನಿನ್ನ ಸಂತತಿಯ ನಾಲ್ಕನೆಯ ತಲೆಮಾರಿನವರು ಇಲ್ಲಿಗೆ ತಿರುಗಿ ಬರುವರು, ಅಮೋರಿಯರ ಅಪರಾಧವು ಇನ್ನೂ ಪೂರ್ಣಸ್ಥಿತಿಗೆ ಬರಲಿಲ್ಲ” ಎಂದು ಹೇಳಿದನು.
17 Pea ʻi he tō ʻae laʻā pea poʻuli, vakai, naʻe ʻi ai ʻae afi kakaha kuo kohu, mo e maama ulo naʻe ʻalu ʻi he vahaʻa ʻoe ngaahi konga [manu].
೧೭ಹೊತ್ತು ಮುಳುಗಿ ಕಾರ್ಗತ್ತಲಾದಾಗ, ಇಗೋ, ಹೊಗೆ ಹಾಯುವ ಒಲೆಯೂ ಉರಿಯುವ ದೀಪವೂ ಕಾಣಿಸಿ ಆ ತುಂಡುಗಳ ಮಧ್ಯದಲ್ಲಿ ಹಾದು ಹೋದವು.
18 ʻI he ʻaho ko ia naʻe fai ʻe Sihova ʻae fuakava mo ʻEpalame, ʻo pehē, “Kuo u tuku ki ho hako ʻae fonua ni, mei he vaitafe ʻo ʻIsipite ʻo aʻu ki he vaitafe lahi, ʻaia ko e ʻIufaletesi.
೧೮ಆ ದಿನದಲ್ಲಿ ಯೆಹೋವನು ಅಬ್ರಾಮನ ಸಂಗಡ ಒಡಂಬಡಿಕೆ ಮಾಡಿಕೊಂಡು, “ಐಗುಪ್ತ ದೇಶದ ನದಿಯಿಂದ ಯೂಫ್ರೆಟಿಸ್ ಮಹಾ ನದಿಯವರೆಗೂ ಇರುವ ಈ ದೇಶವನ್ನೆಲ್ಲಾ ನಿನ್ನ ಸಂತತಿಯವರಿಗೆ ಕೊಟ್ಟಿದ್ದೇನೆ.
19 Ko e kakai Kena, mo e kakai Kenisai mo e kakai Katimona.
೧೯ಕೇನಿಯರೂ, ಕೆನಿಜೀಯರೂ, ಕದ್ಮೋನಿಯರೂ,
20 Mo e kakai Heti, mo e kakai Pelisi, mo e kakai Lifeime,
೨೦ಹಿತ್ತಿಯರೂ, ಪೆರಿಜೀಯರೂ, ರೆಫಾಯರೂ,
21 Mo e kakai ʻAmoli, mo e kakai Kēnani, mo e kakai Kilikesa, mo e kakai Sepusi.”
೨೧ಅಮೋರಿಯರೂ, ಕಾನಾನ್ಯರೂ, ಗಿರ್ಗಾಷಿಯರೂ, ಯೆಬೂಸಿಯರೂ ವಾಸವಾಗಿರುವ ದೇಶವನ್ನು ನಾನು ನಿನ್ನ ಸಂತತಿಗೆ ಕೊಟ್ಟಿದ್ದೇನೆ,” ಎಂದು ವಾಗ್ದಾನ ಮಾಡಿದನು.