< 1 యోహాను 5 >
1 ౧ యేసే క్రీస్తు అని నమ్మినవారంతా దేవుని ద్వారా పుట్టినవాళ్ళే. తండ్రిగా అయిన వాణ్ణి ప్రేమించిన వారంతా ఆయన ద్వారా పుట్టినవాణ్ణి కూడా ప్రేమిస్తారు.
ಯೇಸುವೇ ಕ್ರಿಸ್ತ ಎಂದು ನಂಬುವ ಪ್ರತಿಯೊಬ್ಬರೂ ದೇವರಿಂದ ಹುಟ್ಟಿದವರಾಗಿದ್ದಾರೆ. ತಂದೆಯನ್ನು ಪ್ರೀತಿಸುವ ಪ್ರತಿಯೊಬ್ಬರು ದೇವರಿಂದ ಹುಟ್ಟಿದವರನ್ನು ಸಹ ಪ್ರೀತಿಸುತ್ತಾರೆ.
2 ౨ మనం దేవుణ్ణి ప్రేమిస్తూ, ఆయన ఆజ్ఞలను పాటిస్తూ ఉంటే, దేవుని పిల్లలను ప్రేమిస్తున్నామని దాని వల్ల మనకు తెలుసు.
ನಾವು ದೇವರನ್ನು ಪ್ರೀತಿಸಿ, ಅವರ ಆಜ್ಞೆಗಳನ್ನು ಅನುಸರಿಸುವುದರಿಂದಲೇ ದೇವರ ಮಕ್ಕಳನ್ನು ಪ್ರೀತಿಸುತ್ತೇವೆಂಬುದನ್ನು ತಿಳಿದುಕೊಳ್ಳುತ್ತೇವೆ.
3 ౩ ఆయన ఆజ్ఞలను పాటిస్తే మనం దేవుణ్ణి ప్రేమించినట్టే. ఆయన ఆజ్ఞలు భారం కాదు.
ದೇವರ ಪ್ರೀತಿ ಏನೆಂದರೆ: ದೇವರ ಆಜ್ಞೆಗಳನ್ನು ಕೈಗೊಂಡು ನಡೆಯುವುದೇ. ಅವರ ಆಜ್ಞೆಗಳು ಕಠಿಣವಾದವುಗಳಲ್ಲ.
4 ౪ దేవుని ద్వారా పుట్టినవారు అందరూ లోకాన్ని జయిస్తారు. లోకాన్ని జయించింది మన విశ్వాసమే.
ದೇವರಿಂದ ಹುಟ್ಟಿರುವ ಪ್ರತಿಯೊಬ್ಬರು ಲೋಕವನ್ನು ಜಯಿಸುತ್ತಾರೆ. ಲೋಕವನ್ನು ಜಯಿಸುವಂಥದು ನಮ್ಮ ನಂಬಿಕೆಯೇ.
5 ౫ లోకాన్ని జయించేది ఎవరు? యేసు దేవుని కుమారుడు అని నమ్మినవాడే!
ಯೇಸುವು ದೇವಪುತ್ರ ಎಂದು ನಂಬಿದವರೇ ಹೊರತು ಲೋಕವನ್ನು ಜಯಿಸುವವರು ಯಾರು?
6 ౬ నీళ్ళ ద్వారా, రక్తం ద్వారా వచ్చినవాడు యేసు క్రీస్తే. ఆయన కేవలం నీటి ద్వారా మాత్రమే కాదు. నీళ్ళ ద్వారా, రక్తం ద్వారా కూడా వచ్చాడు. దేవుడు ఆత్మ రూపి గనక ఆత్మే ఇది సత్యమని సాక్షమిస్తున్నాడు.
ಕ್ರಿಸ್ತ ಯೇಸುವೇ ನೀರಿನಿಂದಲೂ ರಕ್ತದಿಂದಲೂ ಬಂದವರು. ನೀರಿನಿಂದ ಮಾತ್ರವಲ್ಲದೆ ನೀರಿನಿಂದಲೂ ರಕ್ತದಿಂದಲೂ ಬಂದರು, ಇದಕ್ಕೆ ಸಾಕ್ಷಿಕೊಡುವವರು ಪವಿತ್ರಾತ್ಮ ದೇವರೇ, ಏಕೆಂದರೆ ಪವಿತ್ರಾತ್ಮ ದೇವರು ಸತ್ಯವಾಗಿದ್ದಾರೆ.
7 ౭ సాక్ష్యం ఇచ్చే వారు ముగ్గురున్నారు.
ಇದಲ್ಲದೆ ಸಾಕ್ಷಿಕೊಡುವವರು ಮೂವರಿದ್ದಾರೆ.
8 ౮ ఆత్మ, నీళ్ళు, రక్తం-ఈ మూడూ ఒకే సాక్ష్యం చెబుతున్నాయి.
ಆತ್ಮ, ಜಲ, ರಕ್ತ ಎಂಬ ಮೂರು ಸಾಕ್ಷಿಗಳು ಇವೆ. ಇವು ಕೊಡುವ ಸಾಕ್ಷಿ ಒಂದೇ ಆಗಿರುತ್ತದೆ.
9 ౯ మనుషుల సాక్ష్యం మనం స్వీకరిస్తాం. కాని దేవుని సాక్ష్యం అంతకన్నా గొప్పది. దేవుని సాక్ష్యం ఆయన కుమారుణ్ణి గూర్చినదే.
ನಾವು ಮನುಷ್ಯರ ಸಾಕ್ಷಿಯನ್ನು ತೆಗೆದುಕೊಳ್ಳುವುದಾದರೆ ದೇವರ ಸಾಕ್ಷಿಯು ಅದಕ್ಕಿಂತ ದೊಡ್ಡದಾಗಿದೆಯಲ್ಲಾ. ಏಕೆಂದರೆ ತಮ್ಮ ಪುತ್ರ ಆಗಿರುವ ಕ್ರಿಸ್ತ ಯೇಸುವಿನ ವಿಷಯದಲ್ಲಿ ದೇವರು ಕೊಟ್ಟ ಸಾಕ್ಷಿಯು ಇದೇ ಆಗಿದೆ.
10 ౧౦ దేవుని కుమారుని పట్ల విశ్వాసం ఉంచిన వారిలోనే సాక్ష్యం ఉంటుంది. దేవుణ్ణి నమ్మని వ్యక్తి దేవుణ్ణి అబద్ధికుడుగా చేసినట్టే. ఎందుకంటే దేవుడు తన కుమారుని విషయం చెప్పిన సాక్ష్యం ఆ వ్యక్తి నమ్మలేదు.
ದೇವಪುತ್ರ ಕ್ರಿಸ್ತ ಯೇಸುವಿನಲ್ಲಿ ನಂಬಿಕೆ ಇಟ್ಟವರು ಆ ಸಾಕ್ಷಿಯನ್ನು ಸ್ವೀಕರಿಸುತ್ತಾರೆ. ದೇವರನ್ನು ನಂಬದವರು ದೇವರನ್ನು ಸುಳ್ಳುಗಾರನನ್ನಾಗಿ ಮಾಡಿದ್ದಾರೆ. ಹೇಗೆಂದರೆ ದೇವರು ತಮ್ಮ ಪುತ್ರ ಆಗಿರುವ ಕ್ರಿಸ್ತ ಯೇಸುವಿನ ವಿಷಯವಾಗಿ ಕೊಟ್ಟ ಸಾಕ್ಷಿಯಲ್ಲಿ ಅಂಥವರು ನಂಬಿಕೆಯಿಡಲಿಲ್ಲ.
11 ౧౧ ఆ సాక్ష్యం ఇదే, దేవుడు మనకు శాశ్వత జీవం ఇచ్చాడు. ఈ జీవం తన కుమారుడిలో ఉంది. (aiōnios )
ಆ ಸಾಕ್ಷಿ ಯಾವುದೆಂದರೆ: ದೇವರು ನಮಗೆ ನಿತ್ಯಜೀವವನ್ನು ಅನುಗ್ರಹಿಸಿದ್ದಾರೆ. ಈ ಜೀವವು ದೇವರ ಪುತ್ರ ಕ್ರಿಸ್ತ ಯೇಸುವಿನಲ್ಲಿ ಇದೆ ಎಂಬುದೇ. (aiōnios )
12 ౧౨ కుమారుడు ఉన్నవాడికి జీవం ఉంది. దేవుని కుమారుడు లేని వాడికి జీవం లేదు.
ಯಾರು ಪುತ್ರ ಆಗಿರುವ ಕ್ರಿಸ್ತ ಯೇಸುವನ್ನು ಹೊಂದಿದ್ದಾರೊ ಅವರಿಗೆ ಜೀವವಿದೆ. ಯಾರಲ್ಲಿ ದೇವರ ಪುತ್ರ ಆಗಿರುವ ಕ್ರಿಸ್ತ ಯೇಸು ಇರುವುದಿಲ್ಲವೋ ಅಂಥವರಿಗೆ ಜೀವವಿಲ್ಲ.
13 ౧౩ దేవుని కుమారుని నామంలో విశ్వాసం ఉంచిన మీకు శాశ్వత జీవం ఉందని మీరు తెలుసుకోడానికి ఈ సంగతులు మీకు రాస్తున్నాను. (aiōnios )
ದೇವಪುತ್ರ ಆಗಿರುವವರ ಹೆಸರಿನಲ್ಲಿ ನಂಬಿಕೆಯಿಡುವ ನಿಮಗೆ ನಿತ್ಯಜೀವವು ಉಂಟೆಂದು ನೀವು ತಿಳಿಯುವ ಹಾಗೆ ನಾನು ನಿಮಗೆ ಇವುಗಳನ್ನು ಬರೆದಿದ್ದೇನೆ. (aiōnios )
14 ౧౪ ఆయన దగ్గర మనకున్న ధైర్యం ఇదే, ఆయన చిత్తానికి అనుగుణంగా మనం ఏది అడిగినా, ఆయన మన విన్నపం వింటాడు.
ದೇವರ ಚಿತ್ತಾನುಸಾರವಾಗಿ ನಾವು ಏನಾದರೂ ಬೇಡಿಕೊಂಡರೆ, ದೇವರು ಕೇಳುತ್ತಾರೆ. ಇದೇ ದೇವರಲ್ಲಿ ನಮಗಿರುವ ನಿಶ್ಚಯ.
15 ౧౫ మనం అడిగిన విషయాలన్నీ ఆయన వింటాడని తెలిస్తే, మనం అడిగినవి మనకు కలిగాయని మనకు తెలుసు.
ನಾವು ಏನು ಬೇಡಿಕೊಂಡರೂ ದೇವರು ನಮ್ಮ ವಿಜ್ಞಾಪನೆಯನ್ನು ಕೇಳುತ್ತಾರೆ ಎಂದು ತಿಳಿದಿದ್ದರೆ, ನಾವು ಬೇಡಿದವುಗಳು ನಮಗೆ ದೊರೆಯುತ್ತವೆ ಎಂಬ ದೃಢನಿಶ್ಚಯ ನಮಗಿದೆ.
16 ౧౬ తన సోదరుడు, మరణం కలిగించని పాపం చెయ్యడం ఎవరైనా చూస్తే, చూసినవాడు ఆ సోదరుని కోసం ప్రార్థించాలి. అతణ్ణి బట్టి మరణం కలిగించని పాపం చేసిన వాడికి దేవుడు జీవం ఇస్తాడు. మరణం కలిగించే పాపం ఉంది. దాని విషయంలో అతడు ప్రార్థించాలని నేను చెప్పను.
ಮರಣಕರವಲ್ಲದ ಪಾಪವನ್ನು ಮಾಡುವ ಸಹೋದರ ಅಥವಾ ಸಹೋದರಿಯನ್ನು ಯಾರಾದರೂ ಕಂಡರೆ, ಆ ಸಹೋದರ ಅಥವಾ ಸಹೋದರಿಯರಿಗಾಗಿ ದೇವರಲ್ಲಿ ಬೇಡಿಕೊಳ್ಳಿರಿ. ದೇವರು ಅವರಿಗೆ ಜೀವವನ್ನು ದಯಪಾಲಿಸುವರು. ಮರಣಕರವಲ್ಲದ ಪಾಪವನ್ನು ಕುರಿತೇ ಈ ಮಾತನ್ನು ಹೇಳುತ್ತಿದ್ದೇನೆ. ಆದರೆ ಮರಣಕರವಾದ ಪಾಪವೂ ಉಂಟು. ಈ ಮರಣಕರವಾದ ಪಾಪದ ವಿಷಯವಾಗಿ ಬೇಡಿಕೊಳ್ಳಬೇಕೆಂದು ನಾನು ಹೇಳುತ್ತಿಲ್ಲ.
17 ౧౭ సమస్త దుర్నీతీ పాపమే. కాని మరణం కలిగించని పాపం కూడా ఉంది.
ಅನೀತಿಯೆಲ್ಲವೂ ಪಾಪವಾಗಿದೆ. ಆದರೂ ಮರಣಕರವಲ್ಲದ ಪಾಪವುಂಟು.
18 ౧౮ దేవుని ద్వారా పుట్టినవాడు పాపం చెయ్యడు. దేవుని ద్వారా పుట్టిన వాణ్ణి దేవుడు పాపం నుండి కాపాడుతాడు. దుష్టుడు ముట్టకుండా ఉంచుతాడు.
ದೇವರಿಂದ ಹುಟ್ಟಿರುವವರು ಪಾಪದಲ್ಲಿ ಮುಂದುವರೆಯುವುದಿಲ್ಲವೆಂಬುದು ನಮಗೆ ಗೊತ್ತದೆ. ದೇವರಿಂದ ಹುಟ್ಟಿದವರನ್ನು ದೇವಪುತ್ರ ಆಗಿರುವ ಕ್ರಿಸ್ತ ಯೇಸುವು ಅಂಥವರನ್ನು ಕಾಪಾಡುವರು, ಕೆಡುಕನು ಅಂಥವರನ್ನು ಮುಟ್ಟುವುದಿಲ್ಲ.
19 ౧౯ మనం దేవుని సంబంధులం అని మనకు తెలుసు. లోకమంతా దుష్టుని ఆధీనంలో ఉంది.
ನಾವು ದೇವರ ಮಕ್ಕಳೆಂದೂ ಲೋಕವೆಲ್ಲವು ಕೆಡುಕನ ನಿಯಂತ್ರಣದಲ್ಲಿ ಇದೆ ಎಂದೂ ನಮಗೆ ಗೊತ್ತಿದೆ.
20 ౨౦ దేవుని కుమారుడు వచ్చి మనకు అవగాహన ఇచ్చాడు. నిజమైన దేవుడెవరో అర్థం అయ్యేలా చేశాడు. మనం ఆ నిజ దేవునిలో, ఆయన కుమారుడు యేసు క్రీస్తులో ఉన్నాం. ఈయనే నిజమైన దేవుడూ శాశ్వత జీవం కూడా. (aiōnios )
ದೇವರ ಪುತ್ರ ಆಗಿರುವ ಕ್ರಿಸ್ತ ಯೇಸುವು ಬಂದು, ಸತ್ಯವಾಗಿರುವ ದೇವರನ್ನು ನಾವು ಅರಿತುಕೊಳ್ಳುವ ಹಾಗೆ ಅವರು ನಮಗೆ ತಿಳುವಳಿಕೆಯನ್ನು ಕೊಟ್ಟಿದ್ದಾರೆಂದೂ ನಾವು ಸತ್ಯವಾಗಿರುವ ದೇವರಲ್ಲಿ ಅವರ ಪುತ್ರ ಆಗಿರುವ ಕ್ರಿಸ್ತ ಯೇಸುವಿನಲ್ಲಿ ಇರುವವರಾಗಿದ್ದೇವೆ ಎಂದೂ ನಮಗೆ ಗೊತ್ತಿದೆ. ಈ ಕ್ರಿಸ್ತ ಯೇಸುವೇ ಸತ್ಯ ದೇವರೂ ನಿತ್ಯಜೀವವೂ ಆಗಿದ್ದಾರೆ. (aiōnios )
21 ౨౧ పిల్లలూ, విగ్రహాలకు దూరంగా ఉండండి.
ಪ್ರಿಯ ಮಕ್ಕಳೇ, ವಿಗ್ರಹಗಳಿಗೆ ದೂರವಾಗಿರುವಂತೆ ನಿಮ್ಮನ್ನು ಕಾಪಾಡಿಕೊಳ್ಳಿರಿ.