< Nyikrwkaatamnam 20 >
1 Vbvrikunamv nyidomooku tolo ngv nyidogindung ako idubv ngo kaato, ninyigv laaklo dootarkamanv ungrung gv chabi am okv ai rungnv jaako sogo bvngto. (Abyssos )
೧ಆಗ ಒಬ್ಬ ದೇವದೂತನು ಅಧೋಲೋಕದ ಬೀಗದ ಕೈಯನ್ನೂ ಮತ್ತು ದೊಡ್ಡ ಸರಪಣಿಯನ್ನೂ ಕೈಯಲ್ಲಿ ಹಿಡಿದುಕೊಂಡು ಪರಲೋಕದಿಂದ ಇಳಿದು ಬರುವುದನ್ನು ಕಂಡೆನು. (Abyssos )
2 Hv singchingpanv nga laatungto, kvvlo gv abuapa tabwgo—vv Uyudvbv, vmalo um Uyu vlaka mindu—okv hejar akin anying lokv jaako leela apv kunamgo.
೨ಅವನು ಪಿಶಾಚಿಯೂ ಸೈತಾನನೂ ಆಗಿರುವ ಪುರಾತನ ಸರ್ಪವೆಂಬ ಘಟಸರ್ಪವನ್ನು ಹಿಡಿದು ಸಾವಿರ ವರ್ಷ ಬಂಧನದಲ್ಲಿಟ್ಟನು.
3 Nyidogindung angv dootarkamanv ungrung lo orlwk tvla, um tala yitam pvto, okv siel tuprw pvvto, vkvlvgavbolo hejar akin anying ngv vngma dvdvlo gobv hv diringmooku dvdv nga kupma dubv vla. Hoogv kokwng loku ninyia dw achok gv lvgabv tulin jireku. (Abyssos )
೩ಆ ಸಾವಿರ ವರ್ಷ ಮುಗಿಯುವ ತನಕ ಸೈತಾನನು ಇನ್ನೂ ಜನಾಂಗಗಳನ್ನು ಮೋಸಗೊಳಿಸದಂತೆ ದೇವದೂತನು ಅವನನ್ನು ಅಧೋಲೋಕಕ್ಕೆ ತಳ್ಳಿ ಬಾಗಿಲು ಮುಚ್ಚಿ ಅದಕ್ಕೆ ಮುದ್ರೆಹಾಕಿದನು. ಆ ಸಾವಿರ ವರ್ಷಗಳಾದ ಮೇಲೆ ಅವನಿಗೆ ಸ್ವಲ್ಪಕಾಲ ಬಿಡುಗಡೆ ಆಗುವುದು. (Abyssos )
4 Vbvrikunamv kuring ngo dvbvdotumnvnv vdwa kaato, okv hoogv dotumnvnv lo doonv bunu vdwa jwngkadaka nvnv jwkrw am jito. Jisu gv kaatamnam jvjv okv Pwknvyarnv gv gaam am minggo karnam lvgabv pakikunam vdwgv yalu am ngo kaato. Bunu vdwv svnwng okv bunugv murti am kumajomadu, vmajvka bunugv dumpo lo okv bunugv laak lo svnwng gv muunam goka laarwk simato. Bunu turnam lo aadu kula okv hejar akin anying gv lvgabv dvbv bv ritola Jisu gv lvkobv rigv minggv riku.
೪ತರುವಾಯ ಸಿಂಹಾಸನಗಳನ್ನು ಕಂಡೆನು. ಅವುಗಳ ಮೇಲೆ ಕುಳಿತಿದ್ದವರಿಗೆ ನ್ಯಾಯ ತೀರಿಸುವ ಅಧಿಕಾರವು ಕೊಡಲ್ಪಟ್ಟಿತು. ಇದಲ್ಲದೆ ಯೇಸುವಿನ ಸಾಕ್ಷಿಯ ನಿಮಿತ್ತವಾಗಿಯೂ, ದೇವರ ವಾಕ್ಯದ ನಿಮಿತ್ತವಾಗಿಯೂ ಶಿರಚ್ಛೇದನಗೊಂಡವರ ಆತ್ಮಗಳನ್ನೂ ಮೃಗಕ್ಕೂ ಅದರ ವಿಗ್ರಹಕ್ಕೂ ಆರಾಧನೆ ಮಾಡದೇ ತಮ್ಮ ಹಣೆಯ ಮೇಲೆ ಮತ್ತು ಕೈಗಳ ಮೇಲೆ ಅದರ ಗುರುತು ಹಾಕಿಸಿಕೊಳ್ಳದವರನ್ನೂ ಕಂಡೆನು. ಅವರು ಪುನಃ ಜೀವಿತರಾಗಿ ಎದ್ದು ಸಾವಿರ ವರ್ಷ ಕ್ರಿಸ್ತನೊಂದಿಗೆ ಆಳಿದರು.
5 (Sinv Kvvgonv turkur madvnv vdwv hejar akin anying ngv vngma dvdvlo gobv turkur kumato.) Soogv si sinv vdwgv chaacho chochok ngv.
೫ಸತ್ತವರಲ್ಲಿ ಉಳಿದವರು ಆ ಸಾವಿರ ವರ್ಷಗಳ ಮುಗಿಯುವವರೆಗೂ ಜೀವಿತರಾಗಿ ಏಳಲಿಲ್ಲ. ಇದೇ ಮೊದಲನೇಯ ಪುನರುತ್ಥಾನವು.
6 Sinv vdwgv turtuturke so yvvdw turkur minggv dunv vv mvngpu okv kairungbv boktalwknamv. Lvnyinvbv sinv vv bunua rigv lamare; Bunu Pwknvyarnv gvla okv Kristo gv nyibu gobv rireku, okv bunu ninyia lvkobv anying hejar akin lvgabv rigv minggvre.
೬ಮೊದಲನೇಯ ಪುನರುತ್ಥಾನದಲ್ಲಿ ಸೇರಿದವರು ಧನ್ಯರೂ ಮತ್ತು ಪರಿಶುದ್ಧರೂ ಆಗಿದ್ದಾರೆ. ಇಂಥವರ ಮೇಲೆ ಎರಡನೆಯ ಮರಣಕ್ಕೆ ಅಧಿಕಾರವಿಲ್ಲ. ಆದರೆ ಅವರು ದೇವರಿಗೂ ಕ್ರಿಸ್ತನಿಗೂ ಯಾಜಕರಾಗಿ ಕ್ರಿಸ್ತನೊಂದಿಗೆ ಆ ಸಾವಿರ ವರ್ಷ ಆಳುವರು.
7 Anying hejar akin gv kokwng lokuring, Uyudvbv nga patwk lokv tulin la rireku,
೭ಆ ಸಾವಿರ ವರ್ಷಗಳು ಮುಗಿದ ಮೇಲೆ ಸೈತಾನನಿಗೆ ಸೆರೆಯಿಂದ ಬಿಡುಗಡೆಯಾಗುವುದು.
8 okv hv sichingmooku gv diringmooku tloblobv doonv nga kuptv bv vngre, vv Gog okv magog nga mindunv. Uyudvbv ngv bunu vdwa yalung damisinam lvgabv laadam sire, vv bunu svmasa gv chokri kiilakumanam gv aingbv rire.
೮ಅವನು ಹೊರಗೆ ಬಂದು ಭೂಮಿಯ ನಾಲ್ಕು ದಿಕ್ಕುಗಳಲ್ಲಿರುವ ದೇಶಗಳನ್ನು ಮೋಸಗೊಳಿಸಿ, ಗೋಗ್ ಮತ್ತು ಮಾಗೋಗ್ ಎಂಬ ಜನಾಂಗಗಳನ್ನು ಮರುಳುಗೊಳಿಸಿ ಯುದ್ಧಕ್ಕೆ ಸೇರಿಸುವನು. ಅವರ ಸಂಖ್ಯೆಯು ಸಮುದ್ರದ ಮರಳಿನಷ್ಟಿರುವುದು.
9 Bunu sichingmooku mvnwng lo doosik kartoku okv Pwknvyarnv gv nyi vdwgv keem nga okv ninyigv paknam pamtv nga goyum toku. Vbvritola nyidomooku tolo gvngv vmv ngv oolula bunua guyuk toku.
೯ಅವರು ಭೂಮಿಯಲ್ಲೆಲ್ಲಾ ಹರಡಿಕೊಂಡು ದೇವಜನರ ಪಾಳೆಯಕ್ಕೂ ಆ ಪ್ರಿಯ ಪಟ್ಟಣಕ್ಕೂ ಮುತ್ತಿಗೆ ಹಾಕುವರು. ಆದರೆ ಪರಲೋಕದಿಂದ ಬೆಂಕಿ ಇಳಿದು ಬಂದು ಅವರನ್ನು ದಹಿಸಿಬಿಡುವುದು.
10 Vbvrikunamv oogv bunua kupnv, Uyudvbv um kvvlo gv svnwng okv mvvnv nyijwk am orlwk roku hoka orlwktoku, okv oogv orlwkku vv sulfur okv vmvgv svmasa ngv; okv bunu alu okv ayu bv hirukaya nga dvbvsingtambv paabvla riku ngv. (aiōn , Limnē Pyr )
೧೦ಇದಲ್ಲದೆ ಅವರನ್ನು ಮೋಸಗೊಳಿಸಿದ ಪಿಶಾಚನು ಬೆಂಕಿ ಗಂಧಕಗಳು ಉರಿಯುವ ಕೆರೆಯಲ್ಲಿ ದೊಬ್ಬಲ್ಪಟ್ಟನು. ಅಲ್ಲಿ ಮೃಗವೂ, ಸುಳ್ಳುಪ್ರವಾದಿಯೂ ಸಹ ಇದ್ದಾರೆ. ಅವರು ಹಗಲಿರುಳು ಯುಗಯುಗಾಂತರಗಳಲ್ಲಿಯೂ ಯಾತನೆ ಪಡುತ್ತಿರುವರು. (aiōn , Limnē Pyr )
11 Vbvrikunamv kairungnv yapungnv dvbvdotumnvnv ako okv vkvgv aolo doodunv um ngo kaato. Sichingmooku okv nyidomooku ngv ninyigv duku lokv Vjakgobv kiyu toku okv lvkodv kaapa kuma.
೧೧ಆ ಮೇಲೆ ಬೆಳ್ಳಗಿರುವ ಮಹಾ ಸಿಂಹಾಸನವನ್ನೂ ಅದರ ಮೇಲೆ ಕುಳಿತಿದ್ದಾತನನ್ನೂ ಕಂಡೆನು. ಆತನೆದುರಿನಿಂದ ಭೂಮ್ಯಾಕಾಶಗಳು ಓಡಿಹೋದವು, ಆದರೆ ಹೋಗುವುದಕ್ಕೆ ಅವುಗಳಿಗೆ ಸ್ಥಳವಿರಲಿಲ್ಲ.
12 Okv ngo sinv vdwaka kainv okv miang nvngaka dvbvdogingnvnv kaagia hoka dakdubv kaato. Kitap vdwa taakuk pvvto, okv kvvbi kitap goka taakuk pvvto, vv turnam gv kitapv. Sikunv vdwgv bunu ogugo ripvdw, kitap lo lvklwk kunam aingbv, um jwngkadaka toku.
೧೨ಇದಲ್ಲದೆ ಸತ್ತವರಾದ, ಶ್ರೇಷ್ಠರು ಮತ್ತು ಕನಿಷ್ಠರೆಲ್ಲರು ಸಿಂಹಾಸನದ ಮುಂದೆ ನಿಂತಿರುವುದನ್ನು ಕಂಡೆನು. ಆಗ ಪುಸ್ತಕಗಳು ತೆರೆಯಲ್ಪಟ್ಟವು. ಜೀವಬಾಧ್ಯರ ಪಟ್ಟಿ ಎಂಬ ಇನ್ನೊಂದು ಪುಸ್ತಕವು ತೆರೆಯಲ್ಪಟ್ಟಿತು. ಆ ಪುಸ್ತಕಗಳಲ್ಲಿ ಬರೆದಿರುವ ಪ್ರಕಾರ, ಅವರವರ ಕೃತ್ಯಗಳಿಗೆ ತಕ್ಕಂತೆ ಸತ್ತವರಿಗೆ ನ್ಯಾಯತೀರ್ಪಾಯಿತು.
13 Vbvrikunamv svmasa lo yvvbunudw silwk pvkunv ho vdwa isi ngv lvkodv tvvlin jitoku. Sinam okv sinv mvnwng gv nyiamookuv bunu vdwvka sinv dvdv nga jilin jitoku. Okv mvnwng ngv bunu ogugo ripvdw um vbvrinam lokv jwngkadaka toku. (Hadēs )
೧೩ಸಮುದ್ರವು ತನ್ನೊಳಗಿದ್ದ ಸತ್ತವರನ್ನು ಒಪ್ಪಿಸಿತು. ಮೃತ್ಯುವೂ ಪಾತಾಳವೂ ತಮ್ಮ ವಶದಲ್ಲಿದ್ದ ಸತ್ತವರನ್ನು ಒಪ್ಪಿಸಿದವು. ಅವರಲ್ಲಿ ಪ್ರತಿಯೊಬ್ಬನಿಗೆ ಅವನವನ ಕೃತ್ಯಗಳ ಪ್ರಕಾರ ನ್ಯಾಯತೀರ್ಪಾಯಿತು. (Hadēs )
14 Vbvrikunamv sinam okv sinv vdwgv mooku am vmvgv svmasa lo orlwk nyatoku. (Soogv vmvgv svmasa si situm lvnyinvnv vku.) (Hadēs , Limnē Pyr )
೧೪ಆ ಮೇಲೆ ಮೃತ್ಯುವೂ ಪಾತಾಳವೂ ಬೆಂಕಿಯ ಕೆರೆಗೆ ದೊಬ್ಬಲ್ಪಟ್ಟವು. ಆ ಬೆಂಕಿಯ ಕೆರೆಯೇ ಎರಡನೆಯ ಮರಣವು. (Hadēs , Limnē Pyr )
15 Soogv turnam gv kitap so yvvnyi amin lvklwk mapvdw bunu vdwa vmvgv svmasa lo orlwktoku. (Limnē Pyr )
೧೫ಯಾರ ಹೆಸರು ಜೀವಬಾಧ್ಯರ ಪುಸ್ತಕದಲ್ಲಿ ಬರೆದದ್ದಾಗಿ ಕಾಣಲಿಲ್ಲವೋ ಅವನು ಬೆಂಕಿಯ ಕೆರೆಗೆ ದೊಬ್ಬಲ್ಪಟ್ಟನು. (Limnē Pyr )