< Apostlagärningarna 12 >
1 Vid den tiden lät konung Herodes gripa och misshandla några av dem som hörde till församlingen.
೧ಆ ಸಮಯದಲ್ಲೇ ಅರಸನಾದ ಹೆರೋದನು ಸಭೆಯವರಲ್ಲಿ ಕೆಲವರನ್ನು ಹಿಂಸೆಪಡಿಸುವುದಕ್ಕೆ ಕೈಹಾಕಿದನು.
2 Och Jakob, Johannes' broder, lät han avrätta med svärd.
೨ಯೋಹಾನನ ಅಣ್ಣನಾದ ಯಾಕೋಬನನ್ನು ಕತ್ತಿಯಿಂದ ಕೊಲ್ಲಿಸಿದನು.
3 När han såg att detta behagade judarna, fortsatte han och lät fasttaga också Petrus. Detta skedde under det osyrade brödets högtid.
೩ಇದು ಯೆಹೂದ್ಯರಿಗೆ ಮೆಚ್ಚಿಕೆಯಾಗಿದೆ ಎಂದು ತಿಳಿದು, ಅಷ್ಟಕ್ಕೆ ನಿಲ್ಲದೆ ಪೇತ್ರನನ್ನೂ ಬಂಧಿಸಿದನು. ಆ ಕಾಲದಲ್ಲಿ ಪಸ್ಕಹಬ್ಬ ಅಂದರೆ ಹುಳಿಯಿಲ್ಲದ ರೊಟ್ಟಿಯ ಹಬ್ಬ ನಡೆಯುತ್ತಿತ್ತು.
4 Och sedan han hade gripit honom, satte han honom i fängelse och uppdrog åt fyra vaktavdelningar krigsmän, vardera på fyra man, att bevaka honom; och hans avsikt var att efter påsken ställa honom fram inför folket.
೪ಅವನನ್ನು ಪಸ್ಕ ಹಬ್ಬವಾದ ಮೇಲೆ ಜನರ ಮುಂದೆ ತರಿಸಬೇಕೆಂಬ ಯೋಚನೆಯಿಂದ ಸೆರೆಯಲ್ಲಿ ಹಾಕಿಸಿ ಅವನನ್ನು ಕಾಯಲಿಕ್ಕೆ ನಾಲ್ಕು ನಾಲ್ಕು ಸಿಪಾಯಿಗಳಿದ್ದ ನಾಲ್ಕು ಗುಂಪುಗಳ ವಶಕ್ಕೆ ಕೊಟ್ಟನು.
5 Under tiden förvarades Petrus i fängelset, men församlingen bad enträget till Gud för honom.
೫ಪೇತ್ರನು ಸೆರೆಮನೆಯೊಳಗೆ ಕಾವಲಲ್ಲಿದ್ದಾಗ, ಸಭೆಯವರು ಅವನಿಗೋಸ್ಕರ ಆಸಕ್ತಿಯಿಂದ ದೇವರಿಗೆ ಪ್ರಾರ್ಥನೆ ಮಾಡುತ್ತಿದ್ದರು.
6 Natten före den dag då Herodes tänkte draga honom inför rätta låg Petrus och sov mellan två krigsmän, fängslad med två kedjor; och utanför dörren voro väktare utsatta till att bevaka fängelset.
೬ಹೆರೋದನು ಅವನನ್ನು ಜನರ ಮುಂದೆ ತರಿಸಬೇಕೆಂದಿದ್ದ ದಿನದ ಹಿಂದಿನ ರಾತ್ರಿಯಲ್ಲಿ, ಪೇತ್ರನು ಎರಡು ಸರಪಣಿಗಳಿಂದ ಕಟ್ಟಲ್ಪಟ್ಟವನಾಗಿ, ಇಬ್ಬರು ಸಿಪಾಯಿಗಳ ನಡುವೆ ನಿದ್ದೆಮಾಡುತ್ತಿದ್ದನು. ಕಾವಲುಗಾರರು ಬಾಗಿಲ ಮುಂದೆ ನಿಂತು ಸೆರೆಮನೆಯನ್ನು ಕಾಯುತ್ತಿದ್ದರು.
7 Då stod plötsligt en Herrens ängel där, och ett sken lyste i rummet. Och han stötte Petrus i sidan och väckte honom och sade: »Stå nu strax upp»; och kedjorna föllo ifrån hans händer.
೭ಫಕ್ಕನೆ ಕರ್ತನ ದೂತನು ಪೇತ್ರನೆದುರಿಗೆ ನಿಂತನು; ಅವನಿದ್ದ ಕೋಣೆಯಲ್ಲಿ ಬೆಳಕು ಹೊಳೆಯಿತು. ಅವನು ಪೇತ್ರನ ಪಕ್ಕೆಯನ್ನು ತಟ್ಟಿ ಎಬ್ಬಿಸಿ; “ತಟ್ಟನೆ ಏಳು” ಅಂದನು. ಆಗಲೇ ಅವನ ಕೈಗಳಿಗೆ ಹಾಕಿದ್ದ ಸರಪಣಿಗಳು ಕಳಚಿಬಿದ್ದವು.
8 Ängeln sade ytterligare till honom: »Omgjorda dig, och tag på dig dina sandaler.» Och han gjorde så. därefter sade ängeln till honom: »Tag din mantel på dig och följ mig.»
೮ಆ ದೂತನು ಅವನಿಗೆ; “ನಡುಕಟ್ಟಿಕೊಂಡು, ನಿನ್ನ ಕೆರಗಳನ್ನು ಮೆಟ್ಟಿಕೋ” ಎಂದು ಹೇಳಲು, ಅವನು ಹಾಗೆಯೇ ಮಾಡಿದನು. “ನಿನ್ನ ಮೇಲಂಗಿಯನ್ನು ಹಾಕಿಕೊಂಡು ನನ್ನ ಹಿಂದೆ ಬಾ” ಅಂದನು.
9 Och Petrus gick ut och följde honom; men han förstod icke att det som skedde genom ängeln var något verkligt, utan trodde att det var en syn han såg.
೯ಅವನು ಹೊರಗೆ ಬಂದು ಆ ದೂತನ ಹಿಂದೆಯೇ ಹೋಗುತ್ತಾ, ದೂತನ ಮೂಲಕವಾಗಿ ನಡೆದ ಸಂಗತಿ ನಿಜವಾದದ್ದೆಂದು ತಿಳಿಯದೆ ತಾನು ನೋಡಿದ್ದು ಕನಸು ಎಂದು ತಿಳಿದನು.
10 När de så hade gått genom första och andra vakten, kommo de till järnporten som ledde ut till staden. Den öppnade sig för dem av sig själv, och de trädde ut och gingo en gata fram; och i detsamma försvann ängeln ifrån honom.
೧೦ಅವರು ಮೊದಲನೆಯ ಮತ್ತು ಎರಡನೆಯ ಕಾವಲುಗಳನ್ನು ದಾಟಿ, ಪಟ್ಟಣಕ್ಕೆ ಹೋಗುವ ಕಬ್ಬಿಣದ ಬಾಗಿಲಿಗೆ ಬಂದಾಗ ಅದು ತನ್ನಷ್ಟಕ್ಕೆ ತಾನೇ ಅವರಿಗೆ ತೆರೆಯಿತು; ಅವರು ಹೊರಗೆ ಬಂದು ಒಂದು ಬೀದಿಯನ್ನು ದಾಟಿದರು; ಕೂಡಲೇ ಆ ದೂತನು ಅವನನ್ನು ಬಿಟ್ಟು ಹೋದನು.
11 När sedan Petrus kom till sig igen, sade han: »Nu vet jag och är förvissad om att Herren har utsänt sin ängel och räddat mig ur Herodes' hand och undan allt det som det judiska folket hade väntat sig.»
೧೧ಆಗ ಪೇತ್ರನು ಎಚ್ಚರಗೊಂಡು; “ಕರ್ತನು ತನ್ನ ದೂತನನ್ನು ಕಳುಹಿಸಿ ಹೆರೋದನ ಕೈಯಿಂದಲೂ, ಯೆಹೂದ್ಯಜನರು ನನಗೆ ಮಾಡಬೇಕೆಂದಿದ್ದ ಕೇಡಿನಿಂದಲೂ, ನನ್ನನ್ನು ಬಿಡಿಸಿದನೆಂದು ನನಗೀಗ ನಿಜವಾಗಿ ತಿಳಿಯಿತು” ಎಂದು ಅಂದುಕೊಂಡನು.
12 När han alltså hade förstått huru det var, gick han till det hus där Maria bodde, hon som var moder till den Johannes som ock kallades Markus; där voro ganska många församlade och bådo.
೧೨ಆತನು ಇದನ್ನು ತಿಳಿದುಕೊಂಡ ತರುವಾಯ, ಅವನು ಮಾರ್ಕನೆನಿಸಿಕೊಳ್ಳುವ ಯೋಹಾನನ ತಾಯಿಯಾದ ಮರಿಯಳ ಮನೆಗೆ ಬಂದನು. ಅಲ್ಲಿ ಅನೇಕರು ಕೂಡಿಬಂದು ಪ್ರಾರ್ಥನೆಮಾಡುತ್ತಿದ್ದರು.
13 Då han nu klappade på portdörren, kom en tjänsteflicka, vid namn Rode, för att höra vem det var.
೧೩ಪೇತ್ರನು ಬಾಗಿಲಿನ ಕದವನ್ನು ತಟ್ಟಲು ರೋದೆ ಎಂಬ ಒಬ್ಬ ಕೆಲಸದವಳು ನೋಡುವುದಕ್ಕೆ ಬಂದಳು.
14 Och när hon kände igen Petrus' röst, öppnade hon i sin glädje icke porten, utan skyndade in och berättade att Petrus stod utanför porten.
೧೪ಅವಳು ಪೇತ್ರನ ಧ್ವನಿಯನ್ನು ಗುರುತುಹಿಡಿದು ಅತಿಯಾದ ಆನಂದದಿಂದ ಬಾಗಿಲನ್ನು ತೆರೆಯದೆ ಒಳಕ್ಕೆ ಓಡಿಹೋಗಿ; “ಪೇತ್ರನು ಬಾಗಿಲ ಮುಂದೆ ನಿಂತಿದ್ದಾನೆ” ಎಂದು ತಿಳಿಸಿದಳು. ಅವರು ಅವಳಿಗೆ; “ನಿನಗೆ ಹುಚ್ಚು ಹಿಡಿದದೆ” ಎಂದು ಹೇಳಿದರು.
15 Då sade de till henne: »Du är från dina sinnen.» Men hon bedyrade att det var såsom hon hade sagt. Då sade de: »Det är väl hans ängel.»
೧೫ಆದರೆ ಅವಳು ತಾನು ಹೇಳಿದಂತೆಯೇ ಅದೆ ಎಂದು ದೃಢವಾಗಿ ಹೇಳುತ್ತಾ ಇರಲು, ಅದಕ್ಕೆ ಅವರು; “ಅವನ ದೂತನಾಗಿರಬೇಕು” ಅಂದರು.
16 Men Petrus fortfor att klappa; och när de öppnade, sågo de med häpnad att det var han.
೧೬ಆದರೆ ಪೇತ್ರನು ಬಾಗಿಲು ತಟ್ಟುತ್ತಲೇ ಇರಲು, ಅವರು ಬಾಗಿಲನ್ನು ತೆರೆದು ಅವನನ್ನು ಕಂಡು ಬೆರಗಾದರು.
17 Och han gav tecken åt dem med handen att de skulle tiga, och förtäljde för dem huru Herren hade fört honom ut ur fängelset. Och han tillade: »Låten Jakob och de andra bröderna få veta detta.» Sedan gick han därifrån och begav sig till en annan ort.
೧೭ಅವನು ಸುಮ್ಮನಿರಿ ಎಂದು ಅವರಿಗೆ ಕೈಸನ್ನೆ ಮಾಡಿ ತನ್ನನ್ನು ಕರ್ತನು ಸೆರೆಮನೆಯೊಳಗಿಂದ ಹೊರಗೆ ಕರೆದುಕೊಂಡು ಬಂದ ರೀತಿಯನ್ನು ವಿವರಿಸಿ; “ಈ ಸಂಗತಿಗಳನ್ನು ಯಾಕೋಬನಿಗೂ, ಸಹೋದರರೆಲ್ಲರಿಗೂ ತಿಳಿಸಿರೆಂದು” ಹೇಳಿ ಬೇರೆ ಸ್ಥಳಕ್ಕೆ ಹೊರಟುಹೋದನು.
18 Men när det hade blivit dag, uppstod bland krigsmännen en ganska stor oro och undran över vad som hade blivit av Petrus.
೧೮ಬೆಳಗಾದ ಮೇಲೆ ಪೇತ್ರನು ಏನಾದನೆಂದು ಸಿಪಾಯಿಗಳಲ್ಲಿ ಬಹಳ ಕಳವಳ ಉಂಟಾಯಿತು.
19 När så Herodes ville hämta honom, men icke fann honom, anställde han rannsakning med väktarna och bjöd att de skulle föras bort till bestraffning. Därefter for han ned från Judeen till Cesarea och vistades sedan där.
೧೯ಹೆರೋದನು ಅವನನ್ನು ಹುಡುಕಿಸಿ ಅವನು ಸಿಕ್ಕಲಿಲ್ಲವಾದ್ದರಿಂದ, ಕಾವಲುಗಾರರನ್ನು ವಿಚಾರಣೆಮಾಡಿ, ಅವರಿಗೆ ಮರಣದಂಡನೆಯನ್ನು ವಿಧಿಸಿದನು. ಬಳಿಕ ಹೆರೋದನು ಯೂದಾಯದಿಂದ ಕೈಸರೈಗೆ ಹೋಗಿ ಅಲ್ಲಿ ಕೆಲವು ಕಾಲ ಇದ್ದನು.
20 Men han hade fattat stor ovilja mot tyrierna och sidonierna. Dessa infunno sig nu gemensamt hos honom; och sedan de hade fått Blastus, konungens kammarherre, på sin sida, bådo de om fred, ty deras land hade sin näring av konungens.
೨೦ಆ ಕಾಲದಲ್ಲಿ ತೂರ್ ಮತ್ತು ಸೀದೋನ್ ಪಟ್ಟಣಗಳ ನಿವಾಸಿಗಳು ತಮ್ಮ ಮೇಲೆ ಹೆರೋದನು ಬಹಳವಾಗಿ ಕೋಪಿಸಿಕೊಂಡಿರುವುದನ್ನು ನೋಡಿ ಒಮ್ಮನಸ್ಸಿನಿಂದ ಅವನ ಸನ್ನಿಧಿಗೆ ಬಂದು ಅರಸನ ಅಂತಃಪುರದ ಮೇಲಣ ಅಧಿಕಾರಿಯಾದ ಬ್ಲಾಸ್ತನನ್ನು ಒಲಿಸಿಕೊಂಡು ಸಮಾಧಾನವಾಗಿರಬೇಕೆಂದು ಅರಸನನ್ನು ಬೇಡಿಕೊಂಡರು. ಏಕೆಂದರೆ ಅರಸನ ಸೀಮೆಯಿಂದಲೇ ಅವರ ಸೀಮೆಗೆ ದವಸಧಾನ್ಯ ಬರುತ್ತಿತ್ತು.
21 På utsatt dag klädde sig då Herodes i konungslig skrud och satte sig på tronen och höll ett tal till dem.
೨೧ಗೊತ್ತುಮಾಡಿದ ಒಂದು ದಿನದಲ್ಲಿ ಹೆರೋದನು ರಾಜವಸ್ತ್ರವನ್ನು ಧರಿಸಿಕೊಂಡು ಸಿಂಹಾಸನದ ಮೇಲೆ ಕುಳಿತು ಅವರಿಗೆ ಉಪನ್ಯಾಸ ಮಾಡಿದನು.
22 Då ropade folket: »En guds röst är detta, och icke en människas.»
೨೨ಕೂಡಿದ್ದ ಜನರು; “ಇದು ಮನುಷ್ಯನ ಧ್ವನಿಯಲ್ಲ, ದೇವರ ಧ್ವನಿಯೇ” ಎಂದು ಆರ್ಭಟಿಸಿದರು.
23 Men i detsamma slog honom en Herrens ängel, därför att han icke gav Gud äran. Och han föll i en sjukdom som bestod däri att han uppfrättes av maskar, och så gav han upp andan.
೨೩ಆ ಘನತೆಯನ್ನು ಅವನು ದೇವರಿಗೆ ಸಲ್ಲಿಸದೆ, ಹೋದುದರಿಂದ ಕರ್ತನ ದೂತನು ಆ ಕ್ಷಣದಲ್ಲೇ ಅವನನ್ನು ಬಡಿದನು; ಅವನು ಹುಳಬಿದ್ದು ಸತ್ತನು.
24 Men Guds ord hade framgång och utbredde sig.
೨೪ಆದರೆ ದೇವರ ವಾಕ್ಯವು ಹಬ್ಬಿ ಹೆಚ್ಚುತ್ತಾ ಬಂದಿತು.
25 Och sedan Barnabas och Saulus hade fullgjort sitt uppdrag i Jerusalem och avlämnat understödet, vände de tillbaka och togo då med sig Johannes, som ock kallades Markus.
೨೫ಬಾರ್ನಬನು ಮತ್ತು ಸೌಲನು ಮಾಡಬೇಕಾದ ಧರ್ಮ ಕಾರ್ಯವನ್ನು ಮುಗಿಸಿ ಮಾರ್ಕನೆನಿಸಿಕೊಳ್ಳುವ ಯೋಹಾನನನ್ನು ಕರೆದುಕೊಂಡು ಯೆರೂಸಲೇಮಿನಿಂದ ಹಿಂತಿರುಗಿ ಬಂದರು.