< 1 Krönikeboken 22 >

1 Och David sade: Här skall Herrans Guds hus vara, och detta altaret till Israels bränneoffer.
ಆಗ ದಾವೀದನು, “ಇದೇ ದೇವರಾದ ಯೆಹೋವ ದೇವರ ಆಲಯ, ಮತ್ತು ಇದೇ ಇಸ್ರಾಯೇಲರ ದಹನಬಲಿಪೀಠ,” ಎಂದನು.
2 Och David lät församla de främlingar, som i Israels land voro, och beställde stenhuggare, till att hugga sten till Guds hus byggning.
ದಾವೀದನು ಇಸ್ರಾಯೇಲ್ ದೇಶದಲ್ಲಿರುವ ಪರದೇಶಸ್ಥರನ್ನು ಕೂಡಿಸಲು ಹೇಳಿ, ದೇವರ ಆಲಯವನ್ನು ಕಟ್ಟಿಸುವುದಕ್ಕೆ ಕೆತ್ತಿದ ಕಲ್ಲುಗಳನ್ನು ಕಡಿಯುವ ಹಾಗೆ ಕಲ್ಲುಕುಟಿಗರನ್ನು ನೇಮಿಸಿದನು.
3 Och David tillredde mycket jern till naglar åt dörrena i portomen, och hvad tillhopanaglas skulle; och så mycken koppar, att han icke stod till vägandes;
ದಾವೀದನು ಬಾಗಿಲುಗಳ ಕದಗಳನ್ನು ಜೋಡಿಸುವುದಕ್ಕೆ ಬೇಕಾದ ಮೊಳೆಗಳಿಗೋಸ್ಕರ ಬಹಳ ಕಬ್ಬಿಣವನ್ನೂ, ಲೆಕ್ಕವಿಲ್ಲದಷ್ಟು ಕಂಚನ್ನೂ ಸಿದ್ಧಮಾಡಿಸಿದನು.
4 Och cedreträ utan tal; förty de af Zidon och Tyro förde mycket cedreträ till David.
ಲೆಕ್ಕವಿಲ್ಲದಷ್ಟು ದೇವದಾರು ಮರಗಳನ್ನು ಸಿದ್ಧಮಾಡಿಸಿದನು. ಏಕೆಂದರೆ ಸೀದೋನ್ಯರೂ, ಟೈರಿನವರೂ ದಾವೀದನಿಗೆ ಹೆಚ್ಚಾಗಿ ದೇವದಾರು ಮರಗಳನ್ನು ತಂದರು.
5 Ty David tänkte: Min son Salomo är en ung pilt och späd; men huset, som Herranom byggas skall, måste vara stort, att dess namn och lof utgå må i all land derföre vill jag skaffa honom virke. Alltså skaffade David mycket virke, förr än han dödde.
ದಾವೀದನು, “ನನ್ನ ಮಗ ಸೊಲೊಮೋನನು ಎಳೆಯ ಪ್ರಾಯದವನಾಗಿದ್ದಾನೆ. ಯೆಹೋವ ದೇವರಿಗೆ ಕಟ್ಟಬೇಕಾದ ಆಲಯವು ಸಮಸ್ತ ದೇಶಗಳಲ್ಲಿ ಕೀರ್ತಿಯಲ್ಲಿಯೂ, ಸೌಂದರ್ಯದಲ್ಲಿಯೂ ಅಧಿಕ ಘನವುಳ್ಳದ್ದಾಗಿರಬೇಕು. ನಾನು ಅದಕ್ಕೋಸ್ಕರ ಈಗ ಸಿದ್ಧಮಾಡುವೆನು,” ಎಂದು ಹೇಳಿದನು. ಆದ್ದರಿಂದ ದಾವೀದನು ಸಾಯುವುದಕ್ಕಿಂತ ಮುಂಚೆ ಬಹಳವಾಗಿ ಸಿದ್ಧಮಾಡಿದನು.
6 Och han kallade sin son Salomo, och böd honom bygga Herrans Israels Guds hus;
ತನ್ನ ಮಗ ಸೊಲೊಮೋನನನ್ನು ಕಳುಹಿಸಿ, ಇಸ್ರಾಯೇಲಿನ ದೇವರಾದ ಯೆಹೋವ ದೇವರಿಗೆ ಆಲಯವನ್ನು ಕಟ್ಟಿಸಲು ಅವನಿಗೆ ಆಜ್ಞಾಪಿಸಿದನು.
7 Och sade till honom: Min son, jag hade i sinnet att bygga Herrans mins Guds Namne ett hus.
ದಾವೀದನು ಸೊಲೊಮೋನನಿಗೆ, “ನನ್ನ ಮಗನೇ, ನಾನು ನನ್ನ ದೇವರಾದ ಯೆಹೋವ ದೇವರ ಹೆಸರಿಗೋಸ್ಕರ ಆಲಯವನ್ನು ಕಟ್ಟಿಸಬೇಕೆಂಬುದು ನನ್ನ ಹೃದಯದಲ್ಲಿ ಇತ್ತು.
8 Men Herrans ord kom till mig, och sade: Du hafver mycket blod utgjutit, och fört stort örlig: derföre skall du icke bygga mino Namne hus, efter du så mycket blod utgjutit hafver för mig på jordena.
ಆದರೆ ಯೆಹೋವ ದೇವರಿಂದ ನನಗೆ ಉಂಟಾದ ವಾಕ್ಯವೇನೆಂದರೆ: ‘ನೀನು ಬಹು ರಕ್ತವನ್ನು ಚೆಲ್ಲಿದ್ದೀಯೆ; ಮಹಾ ಯುದ್ಧಗಳನ್ನು ಮಾಡಿದ್ದೀಯೆ; ನೀನು ನನ್ನ ಹೆಸರಿಗೆ ಮನೆಯನ್ನು ಕಟ್ಟಿಸಬೇಡ. ಏಕೆಂದರೆ ನೀನು ನನ್ನ ಸಮ್ಮುಖದಲ್ಲಿ ಭೂಮಿಯ ಮೇಲೆ ಬಹಳ ರಕ್ತವನ್ನು ಚೆಲ್ಲಿದಿ.
9 Si, din son, som dig skall född varda, han skall vara en rolig man; förty jag vill låta honom få ro för alla hans fiendar allt omkring. Han skall heta Salomo; ty jag skall gifva frid och rolighet öfver Israel uti hans lifsdagar.
ಶಾಂತಿ ಸಮಾಧಾನದ ಮನುಷ್ಯನಾಗಿರುವ ಒಬ್ಬ ಮಗನು ನಿನಗೆ ಹುಟ್ಟುವನು. ಸುತ್ತಲಿರುವ ಅವನ ಸಮಸ್ತ ಶತ್ರುಗಳಿಂದ ನಾನು ಅವನಿಗೆ ವಿಶ್ರಾಂತಿಯನ್ನು ಕೊಡುವೆನು. ಅವನಿಗೆ ಸೊಲೊಮೋನನೆಂಬ ಹೆಸರಿರುವುದು. ಅವನ ದಿವಸಗಳಲ್ಲಿ ನಾನು ಇಸ್ರಾಯೇಲಿಗೆ ಶಾಂತಿ ಸಮಾಧಾನವನ್ನೂ ಕೊಡುವೆನು.
10 Han skall bygga mino Namne ett hus; han skall vara min son, och jag skall vara hans fader, och jag skall stadfästa hans Konungsliga stol öfver Israel till evig tid.
ಅವನು ನನ್ನ ನಾಮಕ್ಕೆ ಆಲಯವನ್ನು ಕಟ್ಟಿಸುವನು. ಅವನು ನನ್ನ ಮಗನಾಗಿರುವನು. ನಾನು ಅವನಿಗೆ ತಂದೆಯಾಗಿರುವೆನು. ಇಸ್ರಾಯೇಲಿನ ಮೇಲೆ ಅವನ ರಾಜ್ಯದ ಸಿಂಹಾಸನವನ್ನು ಯುಗಯುಗಾಂತರಕ್ಕೂ ಸ್ಥಿರಪಡಿಸುವೆನು,’ ಎಂದು ಹೇಳಿದ್ದಾರೆ.
11 Så varder nu, min son, Herren med dig blifvandes, och du skall blifva lyckosam, att du må bygga Herranom dinom Gud ett hus, såsom han om dig sagt hafver.
“ನನ್ನ ಮಗನೇ, ಯೆಹೋವ ದೇವರು ನಿನ್ನನ್ನು ಕುರಿತು ಹೇಳಿದ ಪ್ರಕಾರ, ನೀನು ಕೃತಾರ್ಥನಾಗಿ, ನೀನು ನಿನ್ನ ದೇವರಾದ ಯೆಹೋವ ದೇವರ ಆಲಯವನ್ನು ಕಟ್ಟಿಸುವಂತೆ ಅವರು ನಿನ್ನ ಸಂಗಡ ಇರಲಿ.
12 Och Herren varder dig gifvandes klokhet och förstånd, och skall befalla dig Israel, att du skall hålla Herrans dins Guds lag.
ನೀನು ನಿನ್ನ ದೇವರಾದ ಯೆಹೋವ ದೇವರ ನಿಯಮವನ್ನು ಕೈಗೊಳ್ಳುವಂತೆ ದೇವರು ನಿನಗೆ ಬುದ್ಧಿಯನ್ನೂ, ಗ್ರಹಿಕೆಯನ್ನೂ ಕೊಟ್ಟು ಇಸ್ರಾಯೇಲನ್ನು ಕುರಿತು ನಿನಗೆ ಆಜ್ಞಾಪಿಸಲಿ.
13 Men då varder du lyckosam, när du håller dig, att du gör efter de seder och rätter, som Herren Mose budit hafver till Israel. Var tröst och vid godt mod, frukta dig intet, och gif dig intet.
ಯೆಹೋವ ದೇವರು ಇಸ್ರಾಯೇಲನ್ನು ಕುರಿತು ಮೋಶೆಗೆ ಆಜ್ಞಾಪಿಸಿದ ನ್ಯಾಯವಿಧಿಗಳನ್ನು ಕೈಗೊಳ್ಳಲು ನೀನು ಜಾಗ್ರತೆಯಾಗಿರು. ಆಗ ಸಫಲನಾಗುವಿ. ಬಲವಾಗಿರು, ದೃಢವಾಗಿರು. ಭಯಪಡಬೇಡ, ಹೆದರಬೇಡ.
14 Si, jag hafver i minom fattigdom förskaffat till Herrans hus hundradetusend centener guld och tusende resor tusende centener silfver; dertill koppar och jern utan tal, ty det är fast mycket. Hafver jag också beställt timber och stenar, det kan du ännu föröka.
“ಇಗೋ, ಕಷ್ಟಪಟ್ಟು ನಾನು ಯೆಹೋವ ದೇವರ ಆಲಯಕ್ಕೋಸ್ಕರ ಮೂರು ಸಾವಿರದ ನಾನೂರ ಎಪ್ಪತ್ತು ಮೆಟ್ರಿಕ್ ಟನ್ ಬಂಗಾರವನ್ನೂ, ಮೂವತ್ತ ನಾಲ್ಕು ಸಾವಿರದ ಐನೂರು ಮೆಟ್ರಿಕ್ ಟನ್ ಬೆಳ್ಳಿಯನ್ನೂ, ಲೆಕ್ಕವಿಲ್ಲದಷ್ಟು ಕಂಚನ್ನೂ, ಕಬ್ಬಿಣವನ್ನೂ ಮರಗಳನ್ನೂ, ಕಲ್ಲುಗಳನ್ನೂ ಸಿದ್ಧಮಾಡಿದ್ದೇನೆ. ನೀನು ಅವುಗಳಿಗೆ ಸೇರಿಸಬಹುದು.
15 Så hafver du många arbetare, stenhuggare och timbermän till sten och trä, och allahanda kloka på allahanda verk;
ಇದಲ್ಲದೆ ನಿನ್ನ ಬಳಿಯಲ್ಲಿ ಕೆಲಸದವರೂ, ಕಲ್ಲು ಕೆಲಸದವರೂ, ಕಲ್ಲುಕುಟಿಗರೂ, ಬಡಗಿಯವರೂ, ಸಮಸ್ತ ವಿವಿಧ ಕೆಲಸದ ಪ್ರವೀಣರೂ ಅನೇಕ ಮಂದಿ ಇದ್ದಾರೆ.
16 På guld, silfver, koppar och jern utan tal. Så statt nu upp, och beställ det; Herren skall vara med dig.
ಚಿನ್ನ, ಬೆಳ್ಳಿ, ಕಂಚು, ಕಬ್ಬಿಣ, ಮುಂತಾದವುಗಳಲ್ಲಿ ನಿಪುಣರು ಲೆಕ್ಕವಿಲ್ಲದಷ್ಟು ಇದ್ದಾರೆ. ಎದ್ದು ಕೆಲಸ ಮಾಡು, ಯೆಹೋವ ದೇವರು ನಿನ್ನ ಸಂಗಡ ಇರಲಿ,” ಎಂದನು.
17 Och David böd allom öfverstom i Israel, att de skulle hjelpa hans son Salomo:
ಇದಲ್ಲದೆ, ದಾವೀದನು ತನ್ನ ಮಗ ಸೊಲೊಮೋನನಿಗೆ ಸಹಾಯಮಾಡಲು ಇಸ್ರಾಯೇಲಿನ ಪ್ರಧಾನರಿಗೆ ಆಜ್ಞಾಪಿಸಿ ಹೇಳಿದ್ದೇನೆಂದರೆ,
18 Är icke Herren edar Gud med eder, och hafver gifvit eder rolighet allt omkring? Ty han hafver gifvit landsens inbyggare uti edra händer, och landet är undergifvet vordet för Herranom, och för hans folk.
“ನಮ್ಮ ದೇವರಾದ ಯೆಹೋವ ದೇವರು ನಿಮ್ಮ ಸಂಗಡ ಇದ್ದಾರೆ, ಅಲ್ಲವೇ? ಎಲ್ಲಾ ಕಡೆಗಳಲ್ಲಿ ನಿಮಗೆ ವಿಶ್ರಾಂತಿ ಕೊಟ್ಟಿದ್ದಾರೆ, ಅಲ್ಲವೇ? ನಿಶ್ಚಯವಾಗಿ ಅವರು ದೇಶ ನಿವಾಸಿಗಳನ್ನು ನನ್ನ ಕೈಯಲ್ಲಿ ಒಪ್ಪಿಸಿದ್ದರಿಂದ, ದೇಶವು ಯೆಹೋವ ದೇವರ ಮುಂದೆಯೂ, ಅವರ ಜನರ ಮುಂದೆಯೂ ಸ್ವಾಧೀನವಾಯಿತು.
19 Så gifver nu edor hjerta och edra själar, till att söka Herran edar Gud; och står upp, och bygger Herranom Gudi en helgedom, att man må bära Herrans förbunds ark och de heliga Guds kärilen in uti huset, som Herrans Namne skall bygdt varda.
ನಿಮ್ಮ ದೇವರಾದ ಯೆಹೋವ ದೇವರನ್ನು ಹುಡುಕಲು ನಿಮ್ಮ ಹೃದಯವನ್ನೂ, ನಿಮ್ಮ ಪ್ರಾಣವನ್ನೂ ಒಪ್ಪಿಸಿ, ಯೆಹೋವ ದೇವರ ಒಡಂಬಡಿಕೆಯ ಮಂಜೂಷದ ದೇವರ ಪರಿಶುದ್ಧ ಪಾತ್ರೆಗಳನ್ನು ಯೆಹೋವ ದೇವರ ನಾಮಕ್ಕಾಗಿ ಕಟ್ಟಲಾಗುವ ಆಲಯದೊಳಗೆ ತರುವ ಹಾಗೆ, ಎದ್ದು ಯೆಹೋವ ದೇವರಾದ ದೇವರಿಗೆ ಪರಿಶುದ್ಧ ಸ್ಥಳವನ್ನು ಕಟ್ಟಿಸಿರಿ,” ಎಂದನು.

< 1 Krönikeboken 22 >