< 2 Samweli 3 >

1 Vita kati ya nyumba ya Sauli na nyumba ya Daudi vilidumu kwa muda mrefu. Daudi akaendelea kuwa imara zaidi na zaidi, wakati nyumba ya Sauli iliendelea kudhoofika zaidi na zaidi.
ಸೌಲನ ಕುಟುಂಬದವರಿಗೂ ದಾವೀದನ ಕುಟುಂಬದವರಿಗೂ ಬಹು ದಿವಸ ಯುದ್ಧವು ನಡೆಯಿತು. ದಾವೀದನು ಬಲಗೊಳ್ಳುತ್ತಾ ಬಂದನು. ಆದರೆ ಸೌಲನ ಕುಟುಂಬದವರು ಬಲಹೀನರಾಗುತ್ತಾ ಹೋದರು.
2 Wana walizaliwa kwa Daudi huko Hebroni: Mzaliwa wake wa kwanza alikuwa Amnoni mwana wa Ahinoamu wa Yezreeli;
ಹೆಬ್ರೋನಿನಲ್ಲಿ ದಾವೀದನಿಗೆ ಹುಟ್ಟಿದ ಪುತ್ರರು ಯಾರೆಂದರೆ: ಇಜ್ರೆಯೇಲ್ ಪಟ್ಟಣದ ಅಹೀನೋವಮಳ ಚೊಚ್ಚಲ ಮಗ ಅಮ್ನೋನನು;
3 mzaliwa wake wa pili alikuwa Danieli mwana wa Abigaili, mjane wa Nabali wa Karmeli; wa tatu, Absalomu mwana wa Maaka, binti Talmai mfalme wa Geshuri;
ಕರ್ಮೇಲ್ಯನಾದ ನಾಬಾಲನ ವಿಧವೆ ಅಬೀಗೈಲಳಿಂದ ಹುಟ್ಟಿದ ಅವನ ಎರಡನೆಯ ಮಗ ಕಿಲಾಬನೂ; ಗೆಷೂರಿನ ಅರಸನಾಗಿರುವ ತಲ್ಮಾಯನ ಮಗಳಾದ ಮಾಕಳಿಂದ ಹುಟ್ಟಿದ ಅವನ ಮೂರನೆಯ ಮಗ ಅಬ್ಷಾಲೋಮನು;
4 wa nne, Adoniya mwana wa Hagithi; wa tano, Shefatia mwana wa Abitali;
ಹಗ್ಗೀತಳಿಂದ ಹುಟ್ಟಿದ ನಾಲ್ಕನೆಯ ಮಗ ಅದೋನೀಯನು; ಅಬೀಟಾಲಳಿಂದ ಹುಟ್ಟಿದ ಐದನೆಯ ಮಗ ಶೆಫಟ್ಯನು;
5 wa sita, Ithreamu mwana wa Egla, mkewe Daudi. Hawa ndio waliozaliwa kwa Daudi huko Hebroni.
ದಾವೀದನ ಹೆಂಡತಿ ಎಗ್ಲಳಿಂದ ಹುಟ್ಟಿದ ಆರನೆಯ ಮಗ ಇತ್ರಾಮನು. ಇವರು ಹೆಬ್ರೋನಿನಲ್ಲಿ ದಾವೀದನಿಗೆ ಹುಟ್ಟಿದವರು.
6 Wakati wa vita kati ya nyumba ya Sauli na nyumba ya Daudi, Abneri alikuwa anajiimarisha katika nafasi yake kwenye nyumba ya Sauli.
ಸೌಲನ ಕುಟುಂಬಕ್ಕೂ ದಾವೀದನ ಕುಟುಂಬಕ್ಕೂ ಯುದ್ಧ ನಡೆಯುತ್ತಿರುವಾಗ, ಅಬ್ನೇರನು ಸೌಲನ ಕುಟುಂಬದಲ್ಲಿ ತನ್ನದೇ ಆದ ಸ್ಥಾನವನ್ನು ಬಲಪಡಿಸಿಕೊಂಡನು.
7 Basi Sauli alikuwa amekuwa na suria, jina lake Rispa binti wa Aiya. Naye Ish-Boshethi akamwambia Abneri, “Kwa nini umekutana kimwili na suria wa baba yangu?”
ಸೌಲನಿಗೆ ಅಯ್ಯಾಹನ ಮಗಳಾದ ರಿಚ್ಪಳೆಂಬ ಹೆಸರುಳ್ಳ ಒಬ್ಬ ಉಪಪತ್ನಿ ಇದ್ದಳು. ಈಷ್ಬೋಶೆತನು ಅಬ್ನೇರನಿಗೆ, “ನೀನು ನನ್ನ ತಂದೆಯ ಉಪಪತ್ನಿಯ ಬಳಿಗೆ ಪ್ರವೇಶಿಸಿದ್ದೇಕೆ?” ಎಂದನು.
8 Abneri akakasirika sana kwa sababu ya kile Ish-Boshethi alichosema, naye akamjibu, “Je, mimi ni kichwa cha mbwa, kwa upande wa Yuda? Siku hii ya leo mimi ni mtiifu kwa nyumba ya baba yako Sauli, kwa jamaa yake na rafiki zake. Sijakukabidhi kwa Daudi, lakini bado unanilaumu kwa kosa la kuhusika na huyu mwanamke!
ಆಗ ಅಬ್ನೇರನು ಈಷ್ಬೋಶೆತನ ಮಾತುಗಳಿಗೆ ಬಹುಕೋಪಗೊಂಡು, “ನಾನು ನಿನ್ನನ್ನು ದಾವೀದನ ಕೈಯಲ್ಲಿ ಒಪ್ಪಿಸಿಕೊಡದೆ ಈ ದಿವಸದವರೆಗೂ ಯೆಹೂದವನ್ನು ವಿರೋಧಿಸಿ, ನಿನ್ನ ತಂದೆ ಸೌಲನ ಕುಟುಂಬಕ್ಕೂ ಅವನ ಸಹೋದರರಿಗೂ, ಸ್ನೇಹಿತರಿಗೂ ದಯೆ ತೋರಿಸಿದ ನನ್ನನ್ನು ನೀನು ಈ ಹೊತ್ತು ಈ ಸ್ತ್ರೀಗೋಸ್ಕರ ನನ್ನಲ್ಲಿ ತಪ್ಪು ಹಿಡಿಯುವುದಕ್ಕೆ ನಾನೇನು ಯೆಹೂದ ನಾಯಿಯ ತಲೆಯೋ?
9 Mungu na amshughulikie Abneri, tena kwa ukali, ikiwa sitafanya kwa ajili ya Daudi kile Bwana alichomwahidi kwa kiapo,
ನಾನು ಸೌಲನ ಕುಟುಂಬದಿಂದ ರಾಜ್ಯವನ್ನು ತಪ್ಪಿಸಿ, ಯೆಹೋವ ದೇವರು ದಾವೀದನಿಗೆ ಆಣೆ ಇಟ್ಟ ಪ್ರಕಾರವೇ,
10 na kuuhamisha ufalme kutoka kwenye nyumba ya Sauli na kuimarisha kiti cha ufalme cha Daudi juu ya Israeli na Yuda kuanzia Dani mpaka Beer-Sheba.”
ದಾವೀದನ ಸಿಂಹಾಸನವನ್ನು ದಾನಿನಿಂದ ಬೇರ್ಷೆಬದ ಮಟ್ಟಿಗೂ ಇರುವ ಇಸ್ರಾಯೇಲಿನ ಮೇಲೆಯೂ, ಯೆಹೂದದ ಮೇಲೆಯೂ ಸ್ಥಿರಪಡಿಸುವ ಹಾಗೆ ನಾನು ಮಾಡದೆ ಇದ್ದರೆ, ದೇವರು ಅಬ್ನೇರನಿಗೆ ಹೀಗೆಯೂ ಅಧಿಕವಾಗಿಯೂ ಮಾಡಲಿ,” ಎಂದನು.
11 Ish-Boshethi hakuthubutu kusema neno jingine kwa Abneri, kwa sababu alimwogopa Abneri.
ಈಷ್ಬೋಶೆತನು ಅಬ್ನೇರನಿಗೆ ಭಯಪಟ್ಟದ್ದರಿಂದ ಒಂದು ಮಾತಾದರೂ ಪ್ರತ್ಯುತ್ತರ ಹೇಳಲಾರದೆ ಇದ್ದನು.
12 Ndipo Abneri akatuma wajumbe kwa niaba yake kwa Daudi, kumwambia, “Nchi hii ni ya nani? Fanya mapatano na mimi, nami nitakusaidia kuiweka Israeli yote juu yako.”
ಆಗ ಅಬ್ನೇರನು ತನ್ನ ಪರವಾಗಿ ದಾವೀದನ ಬಳಿಗೆ ತನ್ನ ದೂತರನ್ನು ಕಳುಹಿಸಿ, “ದೇಶವು ಯಾರದು? ಇದಲ್ಲದೆ ನೀನು ನನ್ನ ಸಂಗಡ ಒಡಂಬಡಿಕೆಯನ್ನು ಮಾಡು. ಆಗ ಇಗೋ, ಇಸ್ರಾಯೇಲರನ್ನೆಲ್ಲಾ ನಿನ್ನ ಬಳಿಗೆ ಬರಮಾಡುವ ಹಾಗೆ ನನ್ನ ಕೈ ನಿನ್ನ ಸಂಗಡ ಇರುವುದೆಂದು ಹೇಳಿರಿ,” ಎಂದನು.
13 Daudi akasema, “Vyema, nitafanya mapatano nawe. Lakini nahitaji jambo moja kwako: Usije mbele yangu mpaka umemleta Mikali binti Sauli wakati utakapokuja kuniona.”
ಅದಕ್ಕೆ ದಾವೀದನು, “ಒಳ್ಳೆಯದು, ನಾನು ನಿನ್ನ ಸಂಗಡ ಒಡಂಬಡಿಕೆಯನ್ನು ಮಾಡುವೆನು. ಆದರೆ ನಾನು ನಿನ್ನಲ್ಲಿ ಒಂದನ್ನು ಕೇಳುತ್ತೇನೆ.” ಏನೆಂದರೆ, “ನೀನು ನನ್ನನ್ನು ನೋಡುವುದಕ್ಕೆ ಬರುವಾಗ, ಸೌಲನ ಮಗಳಾದ ಮೀಕಲಳನ್ನು ನೀನು ಕರೆದುಕೊಂಡು ಬಾರದೆ ಹೋದರೆ, ನೀನು ನನ್ನ ಮುಖವನ್ನು ಕಾಣಬಾರದು,” ಎಂದನು.
14 Kisha Daudi akapeleka wajumbe kwa Ish-Boshethi mwana wa Sauli, kudai, “Nipe Mikali mke wangu, ambaye nilimposa mwenyewe kwa mahari ya magovi 100 ya Wafilisti.”
ದಾವೀದನು ಸೌಲನ ಮಗ ಈಷ್ಬೋಶೆತನ ಬಳಿಗೆ ದೂತರನ್ನು ಕಳುಹಿಸಿ, “ಫಿಲಿಷ್ಟಿಯರ ನೂರು ಮುಂದೊಗಲುಗಳಿಂದ ನನಗೆ ನೇಮಕ ಮಾಡಿಕೊಂಡ ನನ್ನ ಹೆಂಡತಿಯಾದ ಮೀಕಲಳನ್ನು ನನಗೆ ಒಪ್ಪಿಸು,” ಎಂದನು.
15 Kwa hiyo Ish-Boshethi akatoa amri kwamba Mikali achukuliwe kutoka kwa Paltieli mumewe, mwana wa Laishi.
ಆಗ ಈಷ್ಬೋಶೆತನು ಸೇವಕರನ್ನು ಕಳುಹಿಸಿ, ಲಯಿಷನ ಮಗನಾಗಿರುವ ಅವಳ ಗಂಡ ಪಲ್ಟೀಯೇಲನಿಂದ ಅವಳನ್ನು ಕರೆಯಿಸಿಕೊಂಡನು.
16 Hata hivyo, mumewe alikwenda pamoja naye, akilia nyuma ya mkewe njia yote hadi Bahurimu. Ndipo Abneri akamwambia Paltieli, “Rudi nyumbani!” Kwa hiyo akarudi.
ಅವಳ ಗಂಡನು ಅವಳ ಸಂಗಡ ಬಹುರೀಮಿನವರೆಗೂ ಅಳುತ್ತಾ ಅವಳ ಹಿಂದೆ ಹೋದನು. ಆಗ ಅಬ್ನೇರನು ಅವನಿಗೆ, “ತಿರುಗಿ ಹೋಗು ಹಿಂದಿರುಗು,” ಎಂದನು. ಅವನು ತಿರುಗಿಹೋದನು.
17 Abneri akafanya shauri pamoja na wazee wa Israeli, akasema, “Muda mrefu mmetaka kumfanya Daudi mfalme wenu.
ಅಬ್ನೇರನು ಇಸ್ರಾಯೇಲಿನ ಹಿರಿಯರ ಸಂಗಡ ಮಾತನಾಡಿ, “ದಾವೀದನು ನಿಮ್ಮ ಮೇಲೆ ಅರಸನಾಗಿರುವುದಕ್ಕೆ ನೀವು ಹುಡುಕುತ್ತಿದ್ದೀರಿ.
18 Sasa fanyeni hivyo! Kwa maana Bwana alimwahidi Daudi akisema, ‘Kwa kupitia Daudi mtumishi wangu nitawaokoa watu wangu Israeli kutoka mikononi mwa Wafilisti na kutoka mikononi mwa adui zako wote.’”
ಆದರೆ ಈಗ ಅದನ್ನು ಮಾಡಿರಿ. ಏಕೆಂದರೆ, ‘ನಾನು ನನ್ನ ದಾಸನಾದ ದಾವೀದನ ಕೈಯಿಂದ ಜನರಾದ ಇಸ್ರಾಯೇಲರನ್ನು ಫಿಲಿಷ್ಟಿಯರ ಕೈಯಿಂದಲೂ, ಅವರ ಸಮಸ್ತ ಶತ್ರುಗಳ ಕೈಯಿಂದಲೂ ತಪ್ಪಿಸಿ ರಕ್ಷಿಸುವೆನು,’ ಎಂದು ಯೆಹೋವ ದೇವರು ದಾವೀದನ ವಿಷಯದಲ್ಲಿ ಹೇಳಿದ್ದಾರೆ,” ಎಂದನು.
19 Pia Abneri mwenyewe akazungumza na kabila la Benyamini. Kisha akaenda mpaka Hebroni kumwambia Daudi kila kitu ambacho Israeli na nyumba yote ya Benyamini walichotaka kufanya.
ಇದಲ್ಲದೆ ಅಬ್ನೇರನು ಬೆನ್ಯಾಮೀನ್ಯರ ಸಂಗಡ ಮಾತನಾಡಿದನು. ಅಬ್ನೇರನು ಇಸ್ರಾಯೇಲರ ದೃಷ್ಟಿಗೂ ಬೆನ್ಯಾಮೀನನ ಮನೆಯವರೆಲ್ಲರ ದೃಷ್ಟಿಗೂ ಒಳ್ಳೆಯದಾಗಿ ತೋರಿದ್ದನ್ನೆಲ್ಲಾ ದಾವೀದನಿಗೆ ತಿಳಿಸುವುದಕ್ಕೆ ಹೆಬ್ರೋನಿಗೆ ಹೋದನು.
20 Wakati Abneri aliyekuwa na watu ishirini pamoja naye, alipokuja kwa Daudi huko Hebroni, Daudi akamwandalia karamu pamoja na watu wake.
ಹೀಗೆಯೇ ಅಬ್ನೇರನು ತನ್ನ ಸಂಗಡ ಇಪ್ಪತ್ತು ಜನರನ್ನು ಕರೆದುಕೊಂಡು, ಹೆಬ್ರೋನಿನಲ್ಲಿರುವ ದಾವೀದನ ಬಳಿಗೆ ಬಂದನು. ದಾವೀದನು ಅಬ್ನೇರನಿಗೂ, ಅವನ ಸಂಗಡ ಬಂದ ಜನರಿಗೂ ಔತಣ ಮಾಡಿಸಿದನು.
21 Ndipo Abneri akamwambia Daudi, “Niache niende mara moja nikakusanye Israeli yote kwa ajili ya mfalme bwana wangu, ili waweze kufanya mapatano na wewe, ili kwamba uweze kutawala juu ya yote yale ambayo moyo wako unaonea shauku.” Basi Daudi akamuaga Abneri, naye akaenda kwa amani.
ಆಗ ಅಬ್ನೇರನು ದಾವೀದನಿಗೆ, “ಸಮಸ್ತ ಇಸ್ರಾಯೇಲರು ನಿನ್ನ ಸಂಗಡ ಒಡಂಬಡಿಕೆಯನ್ನು ಮಾಡುವ ಹಾಗೆಯೂ, ನಿನ್ನ ಪ್ರಾಣವು ಇಚ್ಛೈಸುವ ಹಾಗೆ ಎಲ್ಲರ ಮೇಲೆ ಆಳುವ ಹಾಗೆಯೂ ನಾನು ಎದ್ದು ಹೋಗಿ, ಸಮಸ್ತ ಇಸ್ರಾಯೇಲರನ್ನು ಅರಸನಾದ ನನ್ನ ಒಡೆಯನ ಬಳಿಗೆ ಕೂಡಿಸಿಕೊಂಡು ಬರುವೆನು,” ಎಂದನು. ದಾವೀದನು ಅಬ್ನೇರನಿಗೆ ಅಪ್ಪಣೆ ಕೊಟ್ಟದ್ದರಿಂದ ಅವನು ಸಮಾಧಾನವಾಗಿ ಹೋದನು.
22 Wakati huo huo, watu wa Daudi na Yoabu walirudi kutoka kwenye kushambulia, nao wakarudi na nyara nyingi mno. Lakini Abneri hakuwa tena pamoja na Daudi huko Hebroni, kwa sababu Daudi alikuwa amemruhusu aende zake, naye akaenda kwa amani.
ಆಗ ದಾವೀದನ ಸೇವಕರೂ ಯೋವಾಬನೂ ಒಂದು ಸೈನ್ಯದಿಂದ ದೊಡ್ಡ ಕೊಳ್ಳೆಯನ್ನು ತೆಗೆದುಕೊಂಡು ಬಂದರು. ಆಗ ಅಬ್ನೇರನು ಹೆಬ್ರೋನಿನಲ್ಲಿ ದಾವೀದನ ಸಂಗಡ ಇರಲಿಲ್ಲ. ಏಕೆಂದರೆ ಅವನು ಅಬ್ನೇರನನ್ನು ಕಳುಹಿಸಿಬಿಟ್ಟದ್ದರಿಂದ, ಅವನು ಸಮಾಧಾನವಾಗಿ ಹೋದನು.
23 Yoabu na askari wote aliokuwa nao walipowasili, aliambiwa kwamba Abneri mwana wa Neri alikuwa amekuja kwa mfalme na kwamba mfalme alikuwa amemruhusu aende zake, na kwamba alikwisha ondoka kwa amani.
ಯೋವಾಬನೂ ಅವನ ಸಂಗಡ ಇದ್ದ ಸೈನ್ಯವೂ ಬಂದಾಗ ಅಲ್ಲಿದ್ದವರು ಯೋವಾಬನಿಗೆ, “ನೇರನ ಮಗ ಅಬ್ನೇರನು ಅರಸನ ಬಳಿಗೆ ಬಂದನು. ದಾವೀದನು ಅವನನ್ನು ಕಳುಹಿಸಿಬಿಟ್ಟದ್ದರಿಂದ ಸಮಾಧಾನವಾಗಿ ಹೋಗಿದ್ದಾನೆ,” ಎಂದರು.
24 Basi Yoabu alikwenda kwa mfalme na kumwambia, “Ni nini hiki ulichofanya? Tazama, Abneri alikuja kwako. Kwa nini ukamwacha aende? Sasa amekwenda!
ಆಗ ಯೋವಾಬನು ಅರಸನ ಬಳಿಗೆ ಬಂದು, “ಏನು ಮಾಡಿದೆ? ಅಬ್ನೇರನು ನಿನ್ನ ಬಳಿಗೆ ಬಂದನು. ಅವನು ಹೋಗಿ ಬಿಡುವ ಹಾಗೆ ನೀನು ಅವನನ್ನು ಕಳುಹಿಸಿಬಿಟ್ಟದ್ದು ಏಕೆ?
25 Wajua Abneri mwana wa Neri alikuja kukudanganya na kuchunguza nyendo zako na kupata kila kitu unachokifanya.”
ನೇರನ ಮಗ ಅಬ್ನೇರನನ್ನು ನೀನು ಅರಿತಿದ್ದಿಯಲ್ಲಾ. ನಿಶ್ಚಯವಾಗಿ ಅವನು ನಿನ್ನನ್ನು ಮೋಸಗೊಳಿಸಲು ನಿನ್ನ ಆಗಮನ, ನಿರ್ಗಮನಗಳನ್ನು ತಿಳಿದುಕೊಳ್ಳುವುದಕ್ಕೂ, ನೀನು ಮಾಡುವುದನ್ನೆಲ್ಲಾ ಕಂಡುಹಿಡಿಯುವುದಕ್ಕೂ ಬಂದಿದ್ದನು,” ಎಂದನು.
26 Ndipo Yoabu akamwacha Daudi na kutuma wajumbe wamfuate Abneri, nao wakamrudisha kutoka kisima cha Sira. Lakini Daudi hakufahamu jambo hili.
ಯೋವಾಬನು ದಾವೀದನನ್ನು ಬಿಟ್ಟು ಹೊರಟುಬಂದಾಗ, ಅವನು ಅಬ್ನೇರನ ಹಿಂದೆ ದೂತರನ್ನು ಕಳುಹಿಸಿದನು. ಅವರು ಅವನನ್ನು ಸಿರಾ ಎಂಬ ಬಾವಿಯಿಂದ ತಿರುಗಿ ಕರೆದುಕೊಂಡು ಬಂದರು. ಆದರೆ ದಾವೀದನಿಗೆ ಅದು ತಿಳಿಯದೆ ಇತ್ತು.
27 Basi Abneri aliporudi Hebroni, Yoabu akamchukua kando ndani ya lango, kama vile kuzungumza naye faraghani. Ili kulipiza kisasi damu ya nduguye Asaheli, Yoabu akamchoma mkuki tumboni palepale, naye akafa.
ಅಬ್ನೇರನು ಹೆಬ್ರೋನಿಗೆ ತಿರುಗಿ ಬಂದ ತರುವಾಯ ಯೋವಾಬನ ಬಾಗಿಲಲ್ಲಿ ಅವನ ಸಂಗಡ ಸಮಾಧಾನವಾಗಿ ಮಾತನಾಡಿ, ಅವನನ್ನು ಒಂದು ಕಡೆ ಕರೆದುಕೊಂಡು ಹೋಗಿ, ತನ್ನ ತಮ್ಮ ಅಸಾಯೇಲನ ರಕ್ತಾಪರಾಧದ ನಿಮಿತ್ತ ಅಲ್ಲಿ ಅವನ ಹೊಟ್ಟೆಯಲ್ಲಿ ಇರಿದು ಕೊಂದುಹಾಕಿದನು.
28 Baadaye, Daudi aliposikia kuhusu jambo hili, akasema, “Mimi na ufalme wangu kamwe hatuna hatia mbele za Bwana kuhusu damu ya Abneri mwana wa Neri.
ದಾವೀದನು ಅದನ್ನು ಕೇಳಿದಾಗ, “ನೇರನ ಮಗನಾದ ಅಬ್ನೇರನ ರಕ್ತಾಪರಾಧಕ್ಕೆ ನಾನೂ ನನ್ನ ರಾಜ್ಯವೂ ಎಂದೆಂದಿಗೂ ಯೆಹೋವ ದೇವರ ಮುಂದೆ ನಿರಪರಾಧಿಯಾಗಿದ್ದೇವೆ.
29 Damu yake na iwe juu ya kichwa cha Yoabu na juu ya nyumba yote ya baba yake! Kamwe asikosekane yeyote katika nyumba ya Yoabu mwenye kidonda chenye usaha, au ukoma au mwenye kuegemea fimbo au aangukaye kwa upanga au kupungukiwa na chakula.”
ಅದು ಯೋವಾಬನ ತಲೆಯ ಮೇಲೆಯೂ, ಅವನ ತಂದೆಯ ಮನೆತನದವರ ಮೇಲೆಯೂ ನಿಂತಿರಲಿ. ಯೋವಾಬನ ಮನೆಯಲ್ಲಿ ರಕ್ತಸ್ರಾವ ರೋಗದವರೂ, ಕುಷ್ಠರೋಗಿಯೂ, ಕೋಲು ಹಿಡಿದು ನಡೆಯುವವನೂ, ಖಡ್ಗದಿಂದ ಬೀಳುವವನೂ, ಆಹಾರದ ಕೊರತೆಯುಳ್ಳವನಾಗಿಯೂ ಇದ್ದೇ ಇರಲಿ,” ಎಂದನು.
30 (Yoabu na Abishai ndugu yake walimuua Abneri kwa sababu alikuwa amemuua Asaheli ndugu yao katika vita huko Gibeoni.)
ಹೀಗೆ ಯೋವಾಬ ಮತ್ತು ಅಬೀಷೈ ಅಬ್ನೇರನನ್ನು ಕೊಂದುಹಾಕಿದರು. ಏಕೆಂದರೆ ಅಬ್ನೇರನು ಅವನ ಸಹೋದರ ಅಸಾಯೇಲನನ್ನು ಗಿಬ್ಯೋನಿನ ಯುದ್ಧದಲ್ಲಿ ಕೊಂದುಹಾಕಿದ್ದನು.
31 Kisha Daudi akamwambia Yoabu na watu wote aliokuwa pamoja nao, “Rarueni nguo zenu na mvae nguo za gunia na mtembee mkiomboleza mbele ya Abneri.” Mfalme Daudi mwenyewe akatembea nyuma ya jeneza.
ದಾವೀದನು ಯೋವಾಬನಿಗೂ, ಅವನ ಸಂಗಡವಿದ್ದ ಸಮಸ್ತ ಜನರಿಗೂ, “ನೀವು ನಿಮ್ಮ ವಸ್ತ್ರಗಳನ್ನು ಹರಿದುಕೊಂಡು, ಗೋಣಿತಟ್ಟುಗಳನ್ನು ಉಟ್ಟುಕೊಂಡು, ಅಬ್ನೇರನ ಮುಂದೆ ಗೋಳಾಡಿರಿ,” ಎಂದನು. ಅರಸನಾದ ದಾವೀದನು ತಾನೇ ಅವನ ಶವದ ಪೆಟ್ಟಿಗೆಯ ಹಿಂದೆ ಹೋದನು.
32 Wakamzika Abneri huko Hebroni, naye mfalme akalia kwa sauti kwenye kaburi la Abneri. Pia watu wote wakalia.
ಅವರು ಅಬ್ನೇರನನ್ನು ಹೆಬ್ರೋನಿನಲ್ಲಿ ಹೂಳಿಟ್ಟರು. ಆಗ ಅರಸನು ತನ್ನ ಧ್ವನಿಯನ್ನೆತ್ತಿ ಅಬ್ನೇರನ ಸಮಾಧಿಯ ಬಳಿಯಲ್ಲಿ ಅತ್ತನು; ಜನರೆಲ್ಲರು ಅತ್ತರು.
33 Mfalme akaimba ombolezo hili kwa ajili ya Abneri: “Je, ilipasa Abneri afe kama afavyo mpumbavu?
ಅರಸನು ಅಬ್ನೇರನಿಗೋಸ್ಕರ ಗೋಳಾಡಿ ಹೀಗೆ ಹಾಡಿದನು: “ಬುದ್ಧಿಹೀನನು ಸತ್ತ ಹಾಗೆಯೇ, ಅಬ್ನೇರನು ಸತ್ತನೋ?
34 Mikono yako haikufungwa, miguu yako haikufungwa pingu. Ulianguka kama yeye aangukaye mbele ya watu waovu.” Nao watu wote wakamlilia tena.
ನಿನ್ನ ಕೈಗಳು ಕಟ್ಟಿರಲಿಲ್ಲ. ನಿನ್ನ ಕಾಲಿಗೆ ಬೇಡಿ ಹಾಕಿರಲಿಲ್ಲ. ಒಬ್ಬನು ದುಷ್ಟರ ಮುಂದೆ ಬೀಳುವ ಹಾಗೆಯೇ ನೀನು ಬಿದ್ದು ಹೋದೆ.” ಆಗ ಜನರೆಲ್ಲರು ತಿರುಗಿ ಅವನಿಗೋಸ್ಕರ ಅತ್ತರು.
35 Kisha watu wote wakaja kumsihi Daudi ale chochote kulipokuwa kungali bado mchana; lakini Daudi akaapa, akisema, “Mungu na anishughulikie, tena kwa ukali, kama nikionja mkate au kitu kingine chochote kabla ya jua kutua!”
ಇನ್ನೂ ಹೊತ್ತಿರುವಾಗಲೇ ಜನರೆಲ್ಲರು ಬಂದು ಊಟಮಾಡು ಎಂದು ದಾವೀದನಿಗೆ ಹೇಳಿದರು. ಅದಕ್ಕೆ ದಾವೀದನು, “ಸೂರ್ಯನು ಅಸ್ತಮಿಸುವುದಕ್ಕಿಂತ ಮುಂಚೆ ನಾನು ರೊಟ್ಟಿಯನ್ನಾಗಲಿ, ಬೇರೆ ಯಾವ ಆಹಾರವನ್ನಾಗಲಿ ರುಚಿ ನೋಡಿದರೆ, ದೇವರು ನನಗೆ ಬೇಕಾದದ್ದನ್ನು ಮಾಡಲಿ, ಅಧಿಕವಾಗಿಯೂ ಮಾಡಲಿ,” ಎಂದು ಆಣೆ ಇಟ್ಟುಕೊಂಡನು.
36 Watu wote wakaona hilo nao ikawapendeza; naam, kila kitu mfalme alichofanya kiliwapendeza.
ಜನರೆಲ್ಲರು ಅದನ್ನು ತಿಳಿದುಕೊಂಡಾಗ, ಅವರೆಲ್ಲರಿಗೆ ಮೆಚ್ಚಿಗೆಯಾಯಿತು. ಹಾಗೆಯೇ ಅರಸನು ಏನೇನು ಮಾಡಿದನೋ, ಅದು ಜನರಿಗೆ ಮೆಚ್ಚಿಗೆಯಾಗಿತ್ತು.
37 Kwa hiyo siku ile watu wote na Israeli yote wakajua kwamba mfalme hakushiriki katika mauaji ya Abneri mwana wa Neri.
ಏಕೆಂದರೆ ನೇರನ ಮಗ ಅಬ್ನೇರನನ್ನು ಕೊಂದುಹಾಕಿದ್ದು ಅರಸನಿಂದ ಆದದ್ದಲ್ಲವೆಂದು ಸಮಸ್ತ ಜನರೂ, ಸಮಸ್ತ ಇಸ್ರಾಯೇಲರೂ ಆ ದಿವಸದಲ್ಲಿ ತಿಳಿದುಕೊಂಡರು.
38 Kisha mfalme akawaambia watu wake, “Je, hamfahamu kwamba mkuu na mtu mashuhuri ameanguka katika Israeli leo?
ಇದಲ್ಲದೆ ಅರಸನು ತನ್ನ ಸೇವಕರಿಗೆ, “ಇಸ್ರಾಯೇಲಿನಲ್ಲಿ ಈ ಹೊತ್ತು ಪ್ರಧಾನನೂ ದೊಡ್ಡವನೂ ಬಿದ್ದಿದ್ದಾನೆಂದು ಗೊತ್ತಿಲ್ಲವೋ?
39 Nami leo ingawa ni mfalme mpakwa mafuta, mimi ni dhaifu, nao hawa wana wa Seruya wananizidi nguvu. Bwana na amlipize mtenda maovu sawasawa na matendo yake maovu!”
ನಾನು ಅರಸನಾಗಿ ಅಭಿಷೇಕ ಹೊಂದಿದ್ದರೂ ಇಂದಿಗೆ ದುರ್ಬಲನಾಗಿದ್ದೇನೆ. ಚೆರೂಯಳ ಪುತ್ರರಾದ ಇವರು ನನ್ನ ಹತೋಟಿಗೆ ಬಾರದವರು. ಕೆಟ್ಟತನ ಮಾಡುವವನಿಗೆ ಯೆಹೋವ ದೇವರು ಅವನ ಕೆಟ್ಟತನಕ್ಕೆ ಸರಿಯಾಗಿ ಪ್ರತಿಫಲ ಕೊಡುವರು,” ಎಂದನು.

< 2 Samweli 3 >