< Josué 15 >
1 Ahora, la parte de la tierra marcada para los hijos de Judá por las familias, subía hasta el borde de Edom, hasta el desierto de Zin, al sur, hasta el punto más lejano, al sur.
೧ಎದೋಮ್ ಸೀಮೆಯೂ, ಚಿನ್ ಅರಣ್ಯದ ಮೇರೆಯಾಗಿರುವ ಕಾನಾನ ದೇಶದ ದಕ್ಷಿಣ ಭಾಗವು ಯೆಹೂದ ಕುಲದ ಗೋತ್ರಗಳಿಗೆ ಸ್ವತ್ತಾಗಿ ಸಿಕ್ಕಿತು.
2 Su límite sur era desde la parte más lejana del Mar Salado, desde el extremo mirando hacia el sur:
೨ಅದರ ದಕ್ಷಿಣದ ಮೇರೆಯು ಲವಣ ಸಮುದ್ರದ ತೆಂಕಣ ಕೊನೆಯಿಂದ
3 Desde allí va al sur de la pendiente hasta Acrabim, y luego a Zin, luego al sur después de Cades-barnea, y luego por Hezron y hasta Adar, girando en dirección a Carca.
೩ಅಕ್ರಬ್ಬೀಮ್ ಕಣಿವೆಯ ದಕ್ಷಿಣ ಮಾರ್ಗವಾಗಿ ಚಿನಿಗೆ ಹೋಗುತ್ತದೆ. ಅಲ್ಲಿಂದ ಕಾದೇಶ್ ಬರ್ನೇಯದ ದಕ್ಷಿಣ ಮಾರ್ಗವಾಗಿ ಹೆಚ್ರೋನಿಗೂ ಅಲ್ಲಿಂದ ಏರುತ್ತಾ ಅದ್ದಾರಿಗೂ ಹೋಗಿ ಕರ್ಕದ ಕಡೆಗೆ ತಿರುಗಿಕೊಳ್ಳುತ್ತದೆ ಅಚ್ಮೋನಿನ ಮೇಲೆ,
4 Luego a Azmon, que termina en la corriente de Egipto: y el final del límite está en el mar; Este será tu límite en el sur.
೪ಐಗುಪ್ತದ ಹಳ್ಳಕ್ಕೆ ಬಂದು ಸಮುದ್ರತೀರವನ್ನು ಸೇರುವುದು. ಇದು ಅದರ ತೆಂಕಣ ಮೇರೆ.
5 Y el límite este es el Mar Salado hasta el final de Jordania. Y el límite de la parte norte de la tierra es desde la entrada del mar al final de Jordania:
೫ಯೊರ್ದನ್ ನದಿಯ ಮುಖದ್ವಾರದಿಂದ ಲವಣ ಸಮುದ್ರವೆಲ್ಲಾ, ಅದರ ಪೂರ್ವದಿಕ್ಕಿನ ಮೇರೆ ಆಗಿದೆ. ಅದರ ಉತ್ತರ ದಿಕ್ಕಿನ ಮೇರೆಯು ಯೊರ್ದನ್ ನದಿಯು ಲವಣ ಸಮುದ್ರದಿಂದ ಕೂಡುವ ಸ್ಥಳದಿಂದ
6 Luego la línea sube hasta Bet-hogla, pasa el norte de Bet-arabá, y sube hasta la piedra de Bohán, el hijo de Reuben;
೬ಬೇತ್ ಹೊಗ್ಲಾ ಬೇತ್ ಆರಾಬದ ಉತ್ತರ ಪ್ರಾಂತ್ಯ ರೂಬೇನನ ಮಗನಾದ ಬೋಹನನ ಬಂಡೆ,
7 Luego la línea sube a Debir desde el valle de Acor, y por lo tanto hacia el norte, en dirección a Gilgal, que está enfrente de la pendiente hasta Adumim, en el lado sur del río, y la línea continúa a las aguas de En-semes, que terminan en En-rogel:
೭ಆಕೋರಿನ ಕಣಿವೆ ಇವುಗಳ ಮೇಲೆ ದೆಬೇರಿಗೆ ಹೋಗುತ್ತದೆ. ಅದು ಅಲ್ಲಿಂದ ಉತ್ತರಕ್ಕೆ ತಿರುಗಿಕೊಂಡು ಹಳ್ಳದ ದಕ್ಷಿಣದಲ್ಲಿರುವ ಅದುಮೀಮಿಗೆ ಹೋಗುವ ದಾರಿಯ ಎದುರಿನಲ್ಲಿರುವ ಗಿಲ್ಗಾಲ್ ಏನ್ ಷೆಮೆಷ್ ಅನ್ನಿಸಿಕೊಳ್ಳುವ ಬುಗ್ಗೆ ಏನ್ ರೋಗೆಲ್ ಇವುಗಳ ಮೇಲೆ
8 Luego la línea sube por el valle del hijo de Hinom nhacia el lado sur del Jebús (que es Jerusalén) luego hasta la cima de la montaña frente al valle de Hinnom al oeste, que es en el punto más lejano del valle de Refaim en el norte.
೮ಬೆನ್ ಹಿನ್ನೋಮ್ ಕಣಿವೆಗೆ ಹೋಗುತ್ತದೆ. ಅಲ್ಲಿಂದ ಅದು ಯೆರೂಸಲೇಮ್ ಪಟ್ಟಣವು ಕಟ್ಟಲ್ಪಟ್ಟಿರುವ ಯೆಬೂಸಿಯರ ಬೆಟ್ಟದ ದಕ್ಷಿಣ ಮಾರ್ಗವಾಗಿ ಹಿನ್ನೋಮ್ ಕಣಿವೆಯ ಪಶ್ಚಿಮದಲ್ಲಿರುವ ರೆಫಾಯೀಮ್ ಕಣಿವೆಯ ಉತ್ತರದಲ್ಲಿರುವ ಬೆಟ್ಟದ ತುದಿಗೆ ಹೋಗುತ್ತದೆ.
9 Y el límite está marcado desde la cima de la montaña hasta la fuente de las aguas de Neftoa, y hacia las ciudades del Monte Ephron, hasta Baalah (que es Quiriat-jearim)
೯ಅದು ಆ ಬೆಟ್ಟದ ತುದಿಯಿಂದ ಮುಂದೆ ನೆಫ್ತೋಹ ಬುಗ್ಗೆ, ಎಫ್ರೋನ್ ಬೆಟ್ಟದ ಪಟ್ಟಣಗಳು ಇವುಗಳ ಮೇಲೆ ಕಿರ್ಯತ್ಯಾರೀಮ್ ಎನ್ನಿಸಿಕೊಳ್ಳುವ ಬಾಲಾ ಎಂಬ ಊರಿಗೆ ಹೋಗುತ್ತದೆ.
10 Luego, girando hacia el oeste, la línea va desde Baalah hasta el Monte Seir, y continúa hasta el lado del Monte Jearim (que es Quesalon) en el norte, luego baja a Bet-semes y pasa Timna.
೧೦ಅಲ್ಲಿಂದ ಪಶ್ಚಿಮದಲ್ಲಿರುವ ಸೇಯೀರ್ ಬೆಟ್ಟದ ಕಡೆಗೆ ತಿರುಗಿಕೊಂಡು ಕೆಸಾಲೋನ್ ಎನ್ನಿಸಿಕೊಳ್ಳುವ ಯಾರೀಮ್ ಬೆಟ್ಟದ ಉತ್ತರಮಾರ್ಗವಾಗಿ ಇಳಿಯುತ್ತಾ ಬೇತ್ ಷೆಮೆಷಿಗೂ ಅಲ್ಲಿಂದ ತಿಮ್ನಾ ಊರಿಗೂ ಬಂದು
11 Y hacia el lado de Ecrón al norte, luego se marca hacia Sicron, y luego hacia el monte Baala, que termina en Jabneel; El final de la línea está en el mar.
೧೧ಮುಂದೆ ಉತ್ತರದಿಕ್ಕಿನಲ್ಲಿರುವ ಎಕ್ರೋನ್ ಗುಡ್ಡಕ್ಕೆ ಹೋಗಿ ಶಿಕ್ಕೆರೋನಿಗೆ ತಿರುಗಿಕೊಂಡು ಬಾಲಾ ಗುಡ್ಡದ ಮೇಲೆ ಯಬ್ನೇಲಿಗೆ ಹೋಗಿ ಸಮುದ್ರದಲ್ಲಿ ಮುಗಿಯುತ್ತದೆ.
12 Y el límite al oeste es el borde del Gran Mar. Esta es la línea que recorre la tierra marcada para los hijos de Judá, por sus familias.
೧೨ಮಹಾಸಾಗರದ ತೀರವೇ ಪಶ್ಚಿಮ ಮೇರೆಯು. ಯೆಹೂದಾ ಗೋತ್ರಗಳ ದೇಶದ ಸುತ್ತಣ ಮೇರೆಗಳು ಇವೇ.
13 Y a Caleb, hijo de Jefone, entregó una parte de entre los hijos de Judá, tal como el Señor le había dado órdenes a Josué, es decir, Quiriat-arba, llamada así por Arba, el padre de Anac, que es Hebrón.
೧೩ಯೆಹೋಶುವನು ಯೆಹೋವನ ಅಪ್ಪಣೆಯಂತೆ ಯೆಫುನ್ನೆಯ ಮಗನಾದ ಕಾಲೇಬನಿಗೆ ಯೆಹೂದ ಕುಲದವರ ಮಧ್ಯದಲ್ಲಿಯೇ ಅನಾಕನ ತಂದೆಯಾದ ಅರ್ಬನ ಪಟ್ಟಣವಾಗಿದ್ದ ಹೆಬ್ರೋನನ್ನು ಕೊಟ್ಟನು.
14 Y los tres hijos de Anac, Sesai, Ahimán y Talmai, los hijos de Anac, fueron expulsados de allí por Caleb.
೧೪ಕಾಲೇಬನು ಶೇಷೈ, ಅಹೀಮನ್, ತಲ್ಮೈ ಎಂಬ ಅನಾಕನ ಮೂರು ಮಂದಿ ಮಕ್ಕಳನ್ನು ಅಲ್ಲಿಂದ ಓಡಿಸಿಬಿಟ್ಟನು.
15 Desde allí se enfrentó a la gente de Debir: (ahora el nombre de Debir era Quiriat-sefer).
೧೫ಆನಂತರ ಅವನು ಹೊರಟು ಕಿರ್ಯತಸೇಫೆರ್ ಎನ್ನಿಸಿಕೊಳ್ಳುತ್ತಿದ್ದ ದೆಬೀರಿನ ನಿವಾಸಿಗಳೊಡನೆ ಯುದ್ಧ ಮಾಡಿದನು.
16 Y Caleb dijo: Daré a Acsa, mi hija, como esposa al hombre que vence a Quiriat-sefer y la conquiste.
೧೬ಅವನು “ಕಿರ್ಯತಸೇಫೆರನ್ನು ಹಿಡಿದುಕೊಳ್ಳವವನಿಗೆ ನನ್ನ ಮಗಳಾದ ಅಕ್ಷಾ ಎಂಬಾಕೆಯನ್ನು ಮದುವೆ ಮಾಡಿಕೊಡುತ್ತೇನೆ” ಎಂದನು.
17 Otoniel, el hijo de Cenaz, el hermano de Caleb, la conquistó: y le dio a su hija Acsa por su esposa.
೧೭ಕೆನಜನ ಮಗನೂ ಕಾಲೇಬನ ತಮ್ಮನೂ ಆದ ಒತ್ನೀಯೇಲನು ಅದನ್ನು ವಶಪಡಿಸಿಕೊಂಡನು. ಅವನಿಗೆ ಕಾಲೇಬನ ಮಗಳಾದ ಅಕ್ಷಾಳನ್ನು ಮದುವೆಮಾಡಿಕೊಟ್ಟನು.
18 Cuando ella se acercó a él, él le hizo pensar en la idea de pedirle a su padre un campo: y ella se bajó de su asno; y Caleb le dijo: ¿Qué deseas?
೧೮ಆಕೆಯು ತನ್ನ ತಂದೆಯ ಮನೆ ಸೇರಿದಾಗ, ತನ್ನ ತಂದೆಯ ಹತ್ತಿರ ಭೂಮಿಯನ್ನು ಕೇಳಬೇಕೆಂದು ಗಂಡನನ್ನು ಪ್ರೇರೇಪಿಸಿ ತಾನು ಕತ್ತೆಯ ಮೇಲಿಂದ ಇಳಿದಳು ಕಾಲೇಬನು, “ನಿನಗೇನು ಬೇಕು” ಎಂದು ಆಕೆಯನ್ನು ಕೇಳಲು
19 Y ella dijo: Dame una bendición; Porque me has puesto en tierra seca del sur, ahora dame manantiales de agua. Así que él le dio los manantiales de arriba y los manantiales de abajo.
೧೯ಆಕೆಯು “ನನಗೊಂದು ಕೊಡುಗೆ ಬೇಕು. ನನ್ನನ್ನು ದಕ್ಷಿಣ ದೇಶದ ಬೆಂಗಾಡಿಗೆ (ಬರಡು ಭೂಮಿ) ಕೊಟ್ಟುಬಿಟ್ಟೆಯಲ್ಲಾ? ಬುಗ್ಗೆಗಳಿರುವ ಸ್ಥಳವನ್ನು ನನಗೆ ಕೊಡು” ಎಂದಳು. ಆಗ ಅವನು ಆಕೆಗೆ ಮೇಲಣ ಮತ್ತು ಕೆಳಗಣ ಬುಗ್ಗೆಗಳನ್ನು ಕೊಟ್ಟನು.
20 Esta es la herencia de la tribu de Judá, por sus familias.
೨೦ಯೆಹೂದದ ಕುಲಗೋತ್ರಗಳಿಗೆ ಸಿಕ್ಕಿದ ಸ್ವತ್ತಿನ ವಿವರ:
21 Los pueblos más lejanos de la tribu de Judá en dirección a los límites de Edom, al sur, fueron Cabseel, Edar y Jagur;
೨೧ಎದೋಮ್ ಪ್ರಾಂತ್ಯದ ಮೇರೆಯಾಗಿರುವ ದಕ್ಷಿಣ ಭಾಗದಲ್ಲಿ ಕಬ್ಜೇಲ್, ಏದೆರ್, ಯಾಗೂರ್,
೨೩ಕೆದೆಷ್, ಹಾಚೋರ್, ಇತ್ನಾನ್,
೨೪ಜೀಫ್, ಟೆಲೆಮ್, ಬೆಯಾಲೋತ್,
25 Hazor-hadata, Queriot, hezron (que es Hazor);
೨೫ಹಾಚೋರ್ ಹದತ್ತಾ, ಹಾಚೋರ್ ಎಂಬ ಕಿರ್ಯೋತ್, ಹೆಚ್ರೋನ್, ಹಾಚೋರ್,
27 Hazar-gada, Hesmon, Bet-pelet;
೨೭ಹಚರ್ ಗದ್ದಾ, ಹೆಷ್ಮೋನ್, ಬೇತ್ಪೆಲೆಟ್,
28 Hazar-sual, Beer-seba, Bizotia;
೨೮ಹಚರ್ ಷೂವಾಲ್, ಬೇರ್ಷೆಬ, ಬಿಜ್ಯೋತ್ಯಾ,
30 Eltolad, Quesil, y Horma;
೩೦ಎಲ್ಟೋಲದ್, ಕೆಸೀಲ್, ಹೊರ್ಮಾ,
31 Siclag, Madmana, Sansana;
೩೧ಚಿಕ್ಲಗ್, ಮದ್ಮನ್ನಾ, ಸನ್ಸನ್ನಾ,
32 Lebaot, Silhim, En-Rimon; Todos los pueblos son veintinueve, con sus aldeas.
೩೨ಲೆಬಾವೋತ್, ಶಿಲ್ಹೀಮ್, ಅಯಿನ್, ರಿಮ್ಮೋನ್ ಎಂಬ ಇಪ್ಪತ್ತೊಂಬತ್ತು ಪಟ್ಟಣಗಳು ಮತ್ತು ಅವುಗಳಿಗೆ ಸೇರಿದ ಗ್ರಾಮಗಳು,
33 En las tierras bajas, Estaol, Zora y Asena;
೩೩ಇಳಿಜಾರು ಪ್ರದೇಶದಲ್ಲಿ ಎಷ್ಟಾವೋಲ್, ಚೊರ್ಗಾ, ಅಶ್ನಾ
34 Zanoa, En-ganim, Tapua, Enam;
೩೪ಜನೋಹ, ಏಂಗನ್ನೀಮ್,
35 Jarmut, y Adulam, Soco y Azeca;
೩೫ತಪ್ಪೂಹ, ಏನಾಮ್, ಯರ್ಮೂತ್,
36 Saaraim, Aditaim, Gedera, y Gederotaim; Catorce pueblos con sus aldeas.
೩೬ಅದುಲ್ಲಾಮ್, ಸೋಕೋ, ಅಜೇಕಾ, ಶಾರಯಿಮ್, ಅದೀತಯಿಮ್, ಗೆದೇರಾ, ಗೆದೆರೋತಯಿಮ್ ಎಂಬ ಹದಿನಾಲ್ಕು ಪಟ್ಟಣಗಳು ಮತ್ತು ಅವುಗಳಿಗೆ ಸೇರಿದ ಗ್ರಾಮಗಳು.
37 Zenan, Haadasa, Migdal-gad;
೩೭ಚೆನಾನ್, ಹದಾಷಾ, ಮಿಗ್ದಲ್ಗಾದ್,
38 Dilean, Mizpa, Jocteel;
೩೮ದಿಲಾನ್, ಮಿಚ್ಪೆ, ಯೊಕ್ತೇಲ್,
39 Laquis, Boscat, Eglon;
೩೯ಲಾಕೀಷ್, ಬೊಚ್ಕತ್, ಎಗ್ಲೋನ್,
40 Cabon, Lahmam, Quitlis;
೪೦ಕಬ್ಬೋನ್, ಲಹ್ಮಾಸ್, ಕಿತ್ಲೀಷ್, ಗೆದೇರೋತ್, ಬೇತ್‌ದಾಗೋನ್, ನಾಮಾ,
41 Gederot, Bet-dagon, Naama, Maceda; Dieciséis pueblos con sus aldeas.
೪೧ಮಕ್ಕೇದಾ, ಎಂಬ ಹದಿನಾರು ಪಟ್ಟಣಗಳೂ, ಅವುಗಳ ಗ್ರಾಮಗಳು.
44 Keila, Aczib, y Maresa; Nueve poblados con sus aldeas.
೪೪ಅಶ್ನಾ, ನೆಚೀಬ್, ಕೆಯೀಲಾ, ಅಕ್ಜೀಬ್, ಮಾರೇಷಾ, ಎಂಬ ಒಂಭತ್ತು ಪಟ್ಟಣಗಳೂ ಮತ್ತು ಅವುಗಳಿಗೆ ಸೇರಿದ ಗ್ರಾಮಗಳು.
45 Ecrón, con sus pueblos y aldeas;
೪೫ಎಕ್ರೋನ್ ಸಂಸ್ಥಾನವೂ ಅದಕ್ಕೆ ಸೇರಿದ ಗ್ರಾಮ ಪಟ್ಟಣಗಳು.
46 De Ecrón al mar, todos los pueblos al lado de Asdod, con sus lugares sus aldeas.
೪೬ಎಕ್ರೋನಿನಿಂದ ಸಮುದ್ರದವರೆಗೆ ಅಷ್ಡೋದಿನ ಬಳಿಯಲ್ಲಿರುವ ಸಮಸ್ತ ಗ್ರಾಮಗಳು;
47 Asdod, con sus pueblos y aldeas; Gaza, con sus pueblos y aldeas, a la corriente de Egipto, con el Gran Mar como límite.
೪೭ಮತ್ತು ಅಷ್ಡೋದ್ ಸಂಸ್ಥಾನ ಮತ್ತು ಅದರ ಗ್ರಾಮ ಪಟ್ಟಣಗಳು; ಗಾಜಾ ಸಂಸ್ಥಾನ ಹಾಗೂ ಐಗುಪ್ತ ನದಿಯ ಹತ್ತಿರದಲ್ಲಿ ಮತ್ತು ಮಹಾಸಾಗರದ ತೀರದಲ್ಲಿ ಇರುವ ಅದರ ಎಲ್ಲಾ ಗ್ರಾಮ, ಪಟ್ಟಣಗಳು.
48 Y en la región montañosa, Samir, Jatir y Soco;
೪೮ಬೆಟ್ಟದ ಮೇಲಿನ ಪ್ರದೇಶದಲ್ಲಿರುವ ಶಾಮೀರ್, ಯತ್ತೀರ್, ಸೋಕೋ,
49 Dana, Quiriat-Sana (que es Debir);
೪೯ದನ್ನಾ, ದೆಬೀರ್, ಎಂಬ ಕಿರ್ಯತ್ ಸನ್ನಾ,
50 Anab, y Estemoa, y Anim;
೫೦ಅನಾಬ್, ಎಷ್ಟೆಮೋ, ಅನೀಮ್,
51 Gosen, Holon, Gilo; Once ciudades con sus aldeas.
೫೧ಗೋಷೆನ್, ಹೋಲೋನ್, ಗಿಲೋ ಎಂಬ ಹನ್ನೊಂದು ಪಟ್ಟಣಗಳು ಮತ್ತು ಅವುಗಳಿಗೆ ಸೇರಿದ ಗ್ರಾಮಗಳು.
53 Janum, y Bet-tapua, Afeca;
೫೩ಯಾನೂಮ್, ಬೇತ್ ತಪ್ಪೂಹ, ಅಫೇಕಾ,
54 Humta, Quiriat-arba (que es Hebrón), y Sior; Nueve poblados con sus aldeas.
೫೪ಹುಮ್ಟಾ, ಹೆಬ್ರೋನೆಂಬ ಕಿರ್ಯತ್‌ಅರ್ಬ, ಚೀಯೋರ್ ಎಂಬ ಒಂಭತ್ತು ಪಟ್ಟಣಗಳೂ ಮತ್ತು ಅವುಗಳ ಗ್ರಾಮಗಳು.
55 Maon, Carmel, Zif, Juta;
೫೫ಮಾವೋನ್,
56 Jezreel, Jocdeam, Zanoa;
೫೬ಕರ್ಮೆಲ್, ಜೀಫ್, ಯುಟ್ಟಾ,
57 Cain, Gabaa y Timna; Diez pueblos con sus aldeas.
೫೭ಇಜ್ರೇಲ್, ಯೊಗ್ದೆಯಾಮ್, ಜನೋಹ, ಕಯಿನ್, ಗಿಬೆಯಾ, ತಿಮ್ನಾ ಎಂಬ ಹತ್ತು ಪಟ್ಟಣಗಳು ಮತ್ತು ಅವುಗಳ ಗ್ರಾಮಗಳು.
58 Halhul, Bet-sur y Gedor;
೫೮ಹಲ್ಹೂಲ್, ಬೇತ್‌ಚೂರ್, ಗೆದೋರ್,
59 Maarat, y Beth-anot, y Eltecon; Seis pueblos con sus aldeas.
೫೯ಮಾರಾತ್, ಬೇತನೋತ್, ಎಲ್ಟೆಕೋನ್ ಎಂಬ ಆರು ಪಟ್ಟಣಗಳು ಮತ್ತು ಅವುಗಳಿಗೆ ಸೇರಿದ ಗ್ರಾಮಗಳು.
60 Quiriat-baal (que es Quiriat-jearim), y Raba; Dos pueblos con sus aldeas.
೬೦ಕಿರ್ಯಾತ್ಯಾರೀಮ್ ಅನಿಸಿಕೊಳ್ಳುವ ಕಿರ್ಯಾತ್ ಬಾಳ್, ರಬ್ಬಾ ಎಂಬ ಎರಡು ಪಟ್ಟಣಗಳು ಮತ್ತು ಅವುಗಳು ಗ್ರಾಮಗಳು.
61 En el desierto, Bet-araba, Midin y Secaca;
೬೧ಅರಣ್ಯದಲ್ಲಿರುವ ಬೇತ್ ಆರಾಬಾ, ಮಿದ್ದೀನ್, ಸೆಕಾಕಾ,
62 Nibsan, y el pueblo de la Sal, y En-gadi; Seis pueblos con sus aldeas.
೬೨ನಿಬ್ಷಾನ್, ಉಪ್ಪಿನ ಪಟ್ಟಣವು, ಏಂಗೆದೀ ಎಂಬ ಆರು ಪಟ್ಟಣಗಳು, ಅವುಗಳ ಗ್ರಾಮಗಳು.
63 Y en cuanto a los jebuseos que viven en Jerusalén, los hijos de Judá no pudieron hacerlos salir; pero los jebuseos viven con los hijos de Judá en Jerusalén hasta el día de hoy.
೬೩ಯೆರೂಸಲೇಮಿನಲ್ಲಿ ವಾಸವಾಗಿದ್ದ ಯೆಬೂಸಿಯರನ್ನು ಹೊರಡಿಸಲು ಯೆಹೂದ ಕುಲದವರಿಂದ ಆಗದೆ ಹೋಯಿತು. ಆದುದರಿಂದ ಅವರು ಇಂದಿನವರೆಗೂ ಯೆಹೂದ ಕುಲದವರೊಡನೆ ಯೆರೂಸಲೇಮಿನಲ್ಲೇ ವಾಸವಾಗಿದ್ದಾರೆ.